< ಅರಣ್ಯಕಾಂಡ 13 >
1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
त्यसपछि परमप्रभुले मोशालाई भन्नुभयो,
2 “ನಾನು ಇಸ್ರಾಯೇಲರಿಗೆ ಕೊಡುವ ಕಾನಾನ್ ದೇಶವನ್ನು ಪರೀಕ್ಷಿಸುವ ಹಾಗೆ ನೀನು ಜನರನ್ನು ಕಳುಹಿಸು. ಅವರವರ ಪಿತೃಗಳ ಗೋತ್ರದ ಪ್ರಕಾರ ಅವರೊಳಗೆ ಅಧಿಕಾರಿಯಾಗಿರುವ ಪ್ರತಿಯೊಬ್ಬನನ್ನು ಕಳುಹಿಸು,” ಎಂದರು.
“केही मानिसहरूलाई कनानको भूमिको जाँच गर्न पठा, जुन मैले इस्राएलका मानिसहरूलाई दिएको छु । तिनीहरूका पुर्खाका हरेक कुलबाट एक-एक जना पठा । ती हरेक तिनीहरूका अगुवा हुनुपर्छ ।”
3 ಆಗ ಮೋಶೆಯು ಯೆಹೋವ ದೇವರ ಆಜ್ಞೆಯಂತೆ ಪಾರಾನ್ ಮರುಭೂಮಿಯಿಂದ ಅವರನ್ನು ಕಳುಹಿಸಿದನು. ಅವರೆಲ್ಲರೂ ಇಸ್ರಾಯೇಲರ ಮುಖ್ಯಸ್ಥರಾಗಿದ್ದರು.
मोशाले तिनीहरूलाई पारानको मरुभूमिबाट पठाए, ताकि तिनीहरूले परमप्रभुको आज्ञा पालन गरून् । तिनीहरू सबै इस्राएलका मानिसहरूका अगुवाहरू थिए ।
4 ಅವರ ಹೆಸರುಗಳು ಯಾವುವೆಂದರೆ: ರೂಬೇನನ ಗೋತ್ರದ ಜಕ್ಕೂರನ ಮಗ ಶಮ್ಮೂವ,
तिनीहरूका नाउँ यिनै हुन्ः रूबेनको कुलबाट जक्कूरका छोरा शम्मूअ;
5 ಸಿಮೆಯೋನ್ ಗೋತ್ರದ ಹೋರಿಯನ ಮಗ ಶಾಫಾಟನು,
शिमियोनका कुलबाट होरीका छोरा शाफात;
6 ಯೆಹೂದ ಗೋತ್ರದ ಯೆಫುನ್ನೆಯ ಮಗ ಕಾಲೇಬನು,
यहूदाको कुलबाट यपुन्नेका छोरा कालेब;
7 ಇಸ್ಸಾಕಾರ್ ಗೋತ್ರದ ಯೋಸೇಫನ ಮಗ ಇಗಾಲ್,
इस्साखारको कुलबाट योसेफका छोरा यिगाल;
8 ಎಫ್ರಾಯೀಮ್ ಗೋತ್ರದ ನೂನನ ಮಗ ಹೋಶೇಯ,
एफ्राइमको कुलबाट, नूनका छोरा होशिया;
9 ಬೆನ್ಯಾಮೀನ್ ಗೋತ್ರದ ರಾಫೂವನ ಮಗ ಪಲ್ಟೀ,
बेन्यामीनको कुलबाट, रफूका छोरा पलती;
10 ಜೆಬುಲೂನ್ ಗೋತ್ರದ ಸೋದೀಯ ಮಗ ಗದ್ದೀಯೇಲ್,
जबूलूनको कुलबाट सोदीका छोरा गद्दीएल;
11 ಯೋಸೇಫನ ಗೋತ್ರ ಅಂದರೆ ಮನಸ್ಸೆ ಗೋತ್ರದ ಸೂಸೀಯ ಮಗ ಗದ್ದೀ,
योसेफको कुलबाट (अर्थात् मनेश्शेको कुलबाट) सूसीका छोरा गेद्दी;
12 ದಾನನ ಗೋತ್ರದ ಗೆಮಲ್ಲೀಯನ ಮಗ ಅಮ್ಮಿಯೇಲ್,
दानको कुलबाट गमल्लीका छोरा अम्मीएल;
13 ಆಶೇರ್ ಗೋತ್ರದ ಮೀಕಾಯೇಲನ ಮಗ ಸೆತೂರ್,
आशेरको कुलबाट मिखाएलका छोरा सतूर;
14 ನಫ್ತಾಲಿ ಗೋತ್ರದ ವಾಪೆಸೀಯನ ಮಗ ನಹಬೀ.
नप्तालीको कुलबाट वोफ्सीका छोरा नहबी
15 ಗಾದನ ಗೋತ್ರದ ಮಾಕೀಯನ ಮಗ ಗೆಯೂಯೇಲ್.
गादको कुलबाट माकीका छोरा गूएल ।
16 ದೇಶವನ್ನು ಸಂಚರಿಸಿ ನೋಡುವುದಕ್ಕಾಗಿ ಮೋಶೆ ಕಳುಹಿಸಿದ ಮನುಷ್ಯರ ಹೆಸರುಗಳು ಇವೇ. ಮೋಶೆ ನೂನನ ಮಗ ಹೋಶೇಯನಿಗೆ ಯೆಹೋಶುವ ಎಂದು ಹೆಸರಿಟ್ಟನು.
मोशाले भूमिको जाँच गर्न पठाएका मानिसहरूका नाउँ यिनै थिए । मोशाले नूनका छोरा होशियालाई यहोशू नाउँ राखे ।
17 ಮೋಶೆ ಕಾನಾನ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ನೆಗೆವ ಮಾರ್ಗವಾಗಿ ಮಲೆನಾಡಿಗೆ ಹತ್ತಿಹೋಗಿರಿ,
मोशाले तिनीहरूलाई कनानको भूमि जाँचबुझ गर्न पठाए । तिनले तिनीहरूलाई भने, “नेगेवबाट प्रवेश गर र पहाडी मुलुकतिर जाओ ।
18 ಆ ದೇಶವು ಎಂಥಾದ್ದೋ? ಅದರಲ್ಲಿ ವಾಸಿಸುವ ಜನರು ಬಲವುಳ್ಳವರೋ, ಬಲಹೀನರೋ? ಸ್ವಲ್ಪ ಜನರೋ, ಬಹಳ ಜನರೋ? ಎಂದೂ,
यो कस्तो छ भनी भूमिको जाँचबुझ गर ।
19 ಅವರು ವಾಸಿಸುವ ದೇಶವು ಎಂಥಾದ್ದೋ? ಅದು ಒಳ್ಳೆಯದಾಗಿದೆಯೋ, ಕೆಟ್ಟದ್ದಾಗಿದೆಯೋ? ಅವರು ವಾಸಿಸುವ ಪಟ್ಟಣಗಳು ಎಂಥವುಗಳೋ? ಅವರು ವಾಸಿಸುವುದು ಡೇರೆಗಳಲ್ಲಿಯೋ, ಬಲವಾದ ಕೋಟೆಗಳಲ್ಲಿಯೋ? ಎಂದೂ,
त्यहाँ बस्ने मानिसहरूलाई हेर, तिनीहरू बलिया वा कमजोर छन् वा तिनीहरू धेरै छन् वा थोरै छन् ।
20 ಆ ಭೂಮಿಯು ಎಂಥಾದ್ದೋ? ಸಾರವಾದದ್ದೋ? ನಿಸ್ಸಾರವಾದದ್ದೋ? ಮರಗಳುಳ್ಳದ್ದೋ? ಇಲ್ಲದಿರುವುದೋ? ಎಂದು ನೋಡಿರಿ. ನೀವು ಧೈರ್ಯವುಳ್ಳವರಾಗಿದ್ದು, ಆ ಭೂಮಿಯ ಫಲವನ್ನು ತರಬೇಕು,” ಎಂದನು. ಆ ಕಾಲವು ಪ್ರಥಮ ದ್ರಾಕ್ಷಿ ಹಣ್ಣುಗಳ ಕಾಲವಾಗಿತ್ತು.
तिनीहरू बसोबास गरेका भूमि कस्तो छ, हेर । यो असल वा खराब छ? सहरहरू कस्ता छन्? तिनीहरू छाउनी वा किल्ला भएको सहरहरूमा छन्? भूमि कस्तो छ । अन्न उमार्न असल छ वा छैन, रुखहरू छन् वा छैनन् । साहसी होओ र त्यो भूमिको उत्पादनको नमुना लिएर आओ ।” त्यस बेला पहिलो दाख पाक्ने समय थियो ।
21 ಆಗ ಅವರು ಏರಿಹೋಗಿ ಚಿನ್ ಎಂಬ ಮರುಭೂಮಿಯಿಂದ ಹಮಾತಿನ ಕಡೆಯಲ್ಲಿರುವ ರೆಹೋಬಿನವರೆಗೂ ದೇಶವನ್ನು ಸಂಚರಿಸಿ ನೋಡಿದರು.
यसैले ती मानिसहरू गए र जीनको मरुभूमिदेखि लेबो-हमात नजिकको रेहोबसम्मको भूमिको जाँचबुझ गरे ।
22 ಅವರು ನೆಗೆವನ್ನು ದಾಟಿ ಹೆಬ್ರೋನಿನವರೆಗೆ ಬಂದರು. ಅಲ್ಲಿ ಅನಾಕನ ಮಕ್ಕಳಾದ ಅಹೀಮನ್, ಶೇಷೈ, ತಲ್ಮೈ ಎಂಬ ಉನ್ನತರಾದ ಪುರುಷರು ಇದ್ದರು. ಹೆಬ್ರೋನ್ ಪಟ್ಟಣವು ಈಜಿಪ್ಟ್ ದೇಶದ ಚೋವನ್ ಪಟ್ಟಣಕ್ಕಿಂತ ಏಳು ವರ್ಷಗಳು ಮೊದಲು ನಿರ್ಮಿಸಲಾಗಿತ್ತು.
तिनीहरू नेगेवबाट उक्लेर हेब्रोनमा आइपुगे । त्यहाँ अनाकका सन्तानहरू अहीमान, शेशै र तल्मै थिए । होब्रोन मिश्रको सोअनभन्दा सात वर्ष पहिले निर्माण गरिएको थियो ।
23 ಅವರು ಎಷ್ಕೋಲ್ ಹಳ್ಳದವರೆಗೂ ಬಂದು, ಅಲ್ಲಿ ದ್ರಾಕ್ಷಿ ಹಣ್ಣುಗಳ ಗೊಂಚಲಿನ ಕೊಂಬೆಯನ್ನು ಕೊಯ್ದು, ಅದನ್ನು ಅಡ್ಡ ಕೋಲಿನ ಮೇಲೆ ಇಬ್ಬರಾಗಿ ಹೊತ್ತುಕೊಂಡು ಹೋದರು. ಇದಲ್ಲದೆ ದಾಳಿಂಬೆ, ಅಂಜೂರ ಹಣ್ಣುಗಳನ್ನು ತೆಗೆದುಕೊಂಡು ಹೋದರು.
जब तिनीहरू एश्कोलको बेँसीमा पुगे, तिनीहरूले दाखको झुप्पासहितको हाँगा काटे । तिनीहरूले यसलाई घोचामा राखेर दुई जनाले बोके । तिनीहरूले अनार र नेभारा पनि ल्याए ।
24 ಇಸ್ರಾಯೇಲರು ಅಲ್ಲಿ ದ್ರಾಕ್ಷಿ ಗೊಂಚಲನ್ನು ಕೊಯ್ದದ್ದರಿಂದ ಆ ಸ್ಥಳಕ್ಕೆ ಎಷ್ಕೋಲ್ ಹಳ್ಳವೆಂದು ಹೆಸರಿಟ್ಟರು.
इस्राएलका मानिसहरूले त्यहाँ दाखको झुप्पा काटेकाले त्यस ठाउँलाई एश्कोलको बेँसी नाउँ राखियो ।
25 ಅವರು ದೇಶವನ್ನು ಸಂಚರಿಸಿ ನೋಡಿ, ನಲವತ್ತು ದಿವಸಗಳಾದ ಮೇಲೆ ತಿರುಗಿ ಬಂದರು.
चालिस दिनपछि तिनीहरू भूमिको जाँचबुझ गरेर फर्के ।
26 ಅವರು ಹೋಗಿ ಮೋಶೆ ಆರೋನರ ಬಳಿಗೂ, ಇಸ್ರಾಯೇಲರ ಸಮಸ್ತ ಸಭೆಯ ಬಳಿಗೂ ಪಾರಾನ್ ಮರುಭೂಮಿಯಲ್ಲಿರುವ ಕಾದೇಶಿಗೂ ಬಂದು, ಅವರಿಗೂ, ಸಮಸ್ತ ಸಭೆಗೂ ವಿಷಯವನ್ನು ವಿವರಿಸಿ, ಆ ದೇಶದ ಫಲಗಳನ್ನು ಅವರಿಗೆ ತೋರಿಸಿದರು.
तिनीहरू मोशा, हारून र इस्राएलका सारा समुदायकहाँ पारानको मरुभूमिमा भएको कादेशमा फर्केर आए । तिनीहरूले तिनीहरूलाई र सारा समुदायलाई खबर ल्याए र भूमिको उत्पादन तिनीहरूलाई देखाए ।
27 ಅವರು ಮೋಶೆಗೆ, “ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು. ಅದು ನಿಜವಾಗಿಯೂ ಹಾಲೂ ಜೇನೂ ಹರಿಯುವ ದೇಶವೇ. ಅದರ ಫಲವು ಇವೇ.
तिनीहरूले मोशालाई भने, “तपाईंले पठाउनुभएको मुलुकमा हामी पुग्यौँ । यसमा साँच्चै दुध र मह बग्दोरहेछ । यसका केही उत्पादनहरू यहाँ छन् ।
28 ಆದರೆ ಆ ದೇಶದಲ್ಲಿ ವಾಸವಾಗಿರುವ ಜನರು ಬಲಿಷ್ಠರು. ಪಟ್ಟಣಗಳು ಭದ್ರವಾಗಿಯೂ, ಬಹಳ ದೊಡ್ಡದಾಗಿಯೂ ಇವೆ. ಅನಾಕನ ಮಕ್ಕಳನ್ನು ನಾವು ಅಲ್ಲಿ ಕಂಡೆವು.
तथापि, त्यहाँ बसोबास गर्ने मानिसहरू बलिया छन् । सहरमा किल्ला हालिएका छन् र ती धेरै ठुला छन् । हामीले अनाकका सन्तानहरूलाई पनि देख्यौँ ।
29 ಅಮಾಲೇಕ್ಯರು ದೇಶದ ನೆಗೆವನಲ್ಲಿ ವಾಸವಾಗಿದ್ದಾರೆ. ಹಿತ್ತಿಯರೂ ಯೆಬೂಸಿಯರೂ ಅಮೋರಿಯರೂ ಪರ್ವತಗಳಲ್ಲಿಯೂ; ಕಾನಾನ್ಯರು ಸಮುದ್ರದ ಬಳಿಯಲ್ಲಿಯೂ ಯೊರ್ದನಿನ ತೀರದಲ್ಲಿಯೂ ವಾಸವಾಗಿದ್ದಾರೆ,” ಎಂದರು.
नेगेवमा अमालेकीहरू बसोसबास गर्छन् । हित्ती, यबूसी, र एमोरी पहाडी मुलुकमा बस्छन् । कनानीहरू समुद्र किनारा र यर्दन नदीको तीरमा बस्छन् ।”
30 ನಂತರ ಕಾಲೇಬನು ಮೋಶೆಯ ಎದುರಿನಲ್ಲಿ ಜನರನ್ನು ಸುಮ್ಮನಿರಿಸಿ, “ನಾವು ತಕ್ಷಣವೇ ಏರಿಹೋಗಿ ಅದನ್ನು ಸ್ವಾಧೀನ ಮಾಡಿಕೊಳ್ಳೋಣ. ಏಕೆಂದರೆ ಅದನ್ನು ಜಯಿಸಲು ನಾವು ನಿಜವಾಗಿಯೂ ಶಕ್ತರಾಗಿದ್ದೇವೆ,” ಎಂದನು.
अनि यहोशूले मोशाको सामु मानिसहरूलाई चुपचाप बनाए र भने, “जाऔँ र भूमिलाई कब्जा गरौँ, किनभने हामीले यसलाई निश्चय पनि जित्नेछौँ ।
31 ಆದರೆ ಅವನ ಸಂಗಡ ಹೋದ ಜನರು, “ಆ ಜನರ ಬಳಿಗೆ ಹೋಗುವುದಕ್ಕೆ ನಮ್ಮಿಂದಾಗುವುದಿಲ್ಲ, ಅವರು ನಮಗಿಂತ ಬಲಿಷ್ಠರಾಗಿದ್ದಾರೆ,” ಎಂದರು.
तर तिनीसँग गएका अरू मानिसहरूले भने, “हामीले तिनीहरूलाई आक्रमण गर्न सक्दैनौँ, किनभने तिनीहरू हामीभन्दा बलिया छन् ।”
32 ಅವರು ಸಂಚರಿಸಿ ನೋಡಿದಂಥ ದೇಶದ ವಿಷಯವಾಗಿ ಇಸ್ರಾಯೇಲರಿಗೆ ಅಶುಭ ಸಮಾಚಾರವನ್ನು ಹೇಳುವವರಾಗಿ, “ನಾವು ಸಂಚರಿಸಿ ನೋಡಿ ಬಂದ ದೇಶವು ತನ್ನಲ್ಲಿ ವಾಸವಾಗಿರುವವರನ್ನೇ ತಿಂದುಬಿಡುವ ದೇಶವಾಗಿದೆ. ನಾವು ಅದರಲ್ಲಿ ನೋಡಿದ ಜನರೆಲ್ಲಾ ಮಹಾ ಶರೀರದ ಮನುಷ್ಯರು.
यसैले तिनीहरूले जाँचबुझ गरेका मुलुकबारे इस्राएलका मानिसहरू माझ निरुत्साहित पार्ने खबर फिँजाए । तिनीहरूले भने, “हामीले हेरेका मुलकले त आफ्नै बासिन्दाहरूलाई निल्दोरहेछ ।
33 ಅಲ್ಲಿ ನೆಫೀಲಿಯರನ್ನು ಅಂದರೆ ನೆಫೀಲಿಯ ವಂಶದವರಾದ ಮಹಾಶರೀರವುಳ್ಳ ಪುರುಷರನ್ನು ನೋಡಿದೆವು. ನಾವು ಅವರ ಮುಂದೆ ಮಿಡತೆಗಳ ಹಾಗೆ ಇದ್ದೆವು. ಅವರ ದೃಷ್ಟಿಗೂ ನಾವು ಹಾಗೆಯೇ ಕಾಣಿಸಿದೆವು,” ಎಂದರು.
हामीले त्यहाँ देखेका सबै मानिस अग्ला कदका छन् । हामीले त्यहाँ दैत्यहरू अर्थात् अनाकका सन्तानहरू देख्यौँ जो दैत्यहरूबाट आएका थिए । तिनीहरूसँग तुलना गर्दा हामी हाम्रो नजरमा फट्याङ्ग्राजस्ता थियौँ ।”