< ಅರಣ್ಯಕಾಂಡ 1 >
1 ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟ ನಂತರದ ಎರಡನೆಯ ವರ್ಷದ ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಯೆಹೋವ ದೇವರು ಸೀನಾಯಿ ಮರುಭೂಮಿಯಲ್ಲಿ ದೇವದರ್ಶನದ ಗುಡಾರದೊಳಗೆ ಮೋಶೆಯ ಸಂಗಡ ಹೀಗೆ ಮಾತನಾಡಿದರು:
၁ဣသရေလအမျိုးသားတို့သည်၊ အဲဂုတ္တုပြည်မှ ထွက်၍ ဒုတိယနှစ်၊ ဒုတိယလ၊ ပဌမနေ့၌သိနာတောတွင် ပရိသတ်စည်းဝေးရာ တဲတော်မှာ ထာဝရဘုရားသည် မောရှေအား မိန့်တော်မူသည်ကား၊
2 “ಇಸ್ರಾಯೇಲ್ ಜನಸಮೂಹದ ಗಂಡಸರನ್ನು ಗೋತ್ರ ಹಾಗೂ ಕುಟುಂಬಗಳಿಗೆ ಅನುಗುಣವಾಗಿ ಹೆಸರು ಹಿಡಿದು ಒಬ್ಬೊಬ್ಬರನ್ನಾಗಿ ಎಣಿಸಬೇಕು.
၂သင်နှင့် အာရုန်သည် ဣသရေလအမျိုးသား ပရိသတ်တို့တွင်၊ အသက်နှစ်ဆယ်လွန်၍၊
3 ಇಸ್ರಾಯೇಲರಲ್ಲಿ ಸೈನಿಕ ಸೇವೆ ಸಲ್ಲಿಸತಕ್ಕವರನ್ನು ಅಂದರೆ, ಇಪ್ಪತ್ತು ವರ್ಷಕ್ಕಿಂತಲೂ ಹೆಚ್ಚಾದ ವಯಸ್ಸುಳ್ಳ ಎಲ್ಲರನ್ನು ಸೈನ್ಯಸೈನ್ಯವಾಗಿ ನೀನು ಮತ್ತು ಆರೋನನು ಪಟ್ಟಿಮಾಡಬೇಕು.
၃စစ်တိုက်နိုင်သော ယောက်ျားအပေါင်းတို့ကို သူတို့အဆွေအမျိုး အသီးသီးအလိုက် စာရင်းယူလျက်၊ တပ်ခင်းကျင်း၍ ရေတွက်လော့။
4 ಪ್ರತಿಯೊಂದು ಗೋತ್ರದ ಒಬ್ಬೊಬ್ಬ ಮುಖ್ಯಸ್ಥನು ನಿಮಗೆ ಸಹಾಯಕನಾಗಿರಲಿ.
၄အမျိုးအနွယ်အသီးသီး တမျိုးတယောက်စီ မိမိတို့ အဆွေအမျိုး၌ သူကြီးဖြစ်သော လူတို့သည် သင်တို့နှင့်အတူကူညီ၍ အမှုကိုဆောင်ရကြမည်။
5 “ನಿಮಗೆ ಸಹಾಯ ಮಾಡಬೇಕಾದ ಪುರುಷರ ಹೆಸರುಗಳು: “ರೂಬೇನ್ ಗೋತ್ರದಿಂದ ಶೆದೇಯೂರನ ಮಗ ಎಲೀಚೂರ್,
၅သင်တို့နှင့်အတူကူညီ၍ အမှုကိုဆောင်ရသော သူဟူမူကား၊ ရုဗင်အမျိုး၊ ရှေဒုရသားဧလိဇုရ။
6 ಸಿಮೆಯೋನ್ ಗೋತ್ರದಿಂದ ಚುರೀಷದ್ದೈಯನ ಮಗ ಶೆಲುಮೀಯೇಲ್,
၆ရှိမောင်အမျိုး၊ ဇုရိရှဒ္ဒဲသားရှေလုမျေလ။
7 ಯೆಹೂದ ಗೋತ್ರದಿಂದ ಅಮ್ಮೀನಾದಾಬನ ಮಗ ನಹಶೋನ್,
၇ယုဒအမျိုး၊ အမိနဒပ်သားနာရှုန်။
8 ಇಸ್ಸಾಕರ್ ಗೋತ್ರದಿಂದ ಚೂವಾರನ ಮಗ ನೆತನೆಯೇಲ್,
၈ဣသခါအမျိုး ဇုအာသား နာသနေလ။
9 ಜೆಬುಲೂನ್ ಗೋತ್ರದಿಂದ ಹೇಲೋನನ ಮಗ ಎಲೀಯಾಬ್,
၉ဇာဗုလုန်အမျိုး၊ ဟေလုန်သားဧလျာဘ။
10 ಯೋಸೇಫನ ಗೋತ್ರದಲ್ಲಿ, ಎಫ್ರಾಯೀಮ್ನಿಂದ ಅಮ್ಮೀಹೂದನ ಮಗ ಎಲೀಷಾಮಾ, ಮನಸ್ಸೆ ಗೋತ್ರದಿಂದ ಪೆದಾಚೂರನ ಮಗನಾದ ಗಮಲಿಯೇಲ್,
၁၀ယောသပ်သားတွင်၊ ဧဖရိမ်အမျိုး အမိဟုဒ်သား ဧလိရှမာ၊ မနာရှေအမျိုး၊ ပေဒါဇုရသားဂါမလျလ။
11 ಬೆನ್ಯಾಮೀನ್ ಗೋತ್ರದಿಂದ ಗಿದ್ಯೋನಿನ ಮಗನಾದ ಅಬೀದಾನ,
၁၁ဗင်္ယာမိန်အမျိုး၊ ဂိဒေါနိ သားအဘိဒန်။
12 ದಾನ್ ಗೋತ್ರದಿಂದ ಅಮ್ಮೀಷದ್ದೈಯನ ಮಗ ಅಹೀಗೆಜೆರ್,
၁၂ဒန်အမျိုး၊ အမိရှဒဲသားအဟေဇာ။
13 ಆಶೇರ್ ಗೋತ್ರದಿಂದ ಒಕ್ರಾನನ ಮಗ ಪಗೀಯೇಲ್,
၁၃အာရှာအမျိုး၊ ဩကရန်သားပါဂျေလ။
14 ಗಾದ್ ಗೋತ್ರದಿಂದ ದೆವುಯೇಲನ ಮಗ ಎಲ್ಯಾಸಾಫ್,
၁၄ဂဒ်အမျိုး၊ ဒွေလသားဧလျာသပ်၊
15 ನಫ್ತಾಲಿ ಗೋತ್ರದಿಂದ ಏನಾನನ ಮಗ ಅಹೀರನು.”
၁၅နဿလိအမျိုး၊ ဧနန်သားအဟိရတည်း။
16 ಇವರು ಸರ್ವಸಮೂಹದೊಳಗಿಂದ ಆಯ್ದುಕೊಂಡು ನೇಮಕವಾದವರು. ಇವರು ತಮ್ಮ ಪುರಾತನ ಗೋತ್ರಗಳ ನಾಯಕರು. ಇವರು ಇಸ್ರಾಯೇಲಿನ ಗೋತ್ರಗಳ ಪ್ರಮುಖರು.
၁၆ဤသူတို့သည် ပရိသတ်တွင် ကျော်စောသော သူ၊ အဆွေအမျိုး သူကြီးမင်းဖြစ်၍ ဣသရေလအမျိုး၌ လူတထောင်စီအုပ်ရသောသူ ဖြစ်ကြသတည်း။
17 ಹೆಸರಿನಿಂದ ಸೂಚಿತರಾದ ಈ ಪುರುಷರನ್ನು ಮೋಶೆ ಮತ್ತು ಆರೋನನು ತಮ್ಮ ಜೊತೆ ತೆಗೆದುಕೊಂಡರು.
၁၇ထိုသို့နာမည်ဖြင့် ရွေးတော်မူသော ထိုသူတို့ကို၊ မောရှေနှင့် အာရုန်သည်ခေါ်၍၊
18 ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಮಸ್ತ ಪುರುಷರನ್ನೂ ಸಮೂಹದವರೆಲ್ಲರನ್ನೂ ಕೂಡಿಸಿದರು. ಜನರು ತಮ್ಮ ಗೋತ್ರ ಮತ್ತು ಕುಟುಂಬಗಳ ಅನುಸಾರವಾಗಿ ತಮ್ಮ ವಂಶಾವಳಿಯನ್ನು ನೊಂದಾಯಿಸಿದರು. ಹಾಗೂ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಾದ ವಯಸ್ಸಿನವರ ಹೆಸರುಗಳನ್ನು ಒಬ್ಬೊಬ್ಬರಾಗಿ ಪಟ್ಟಿಮಾಡಲಾಯಿತು.
၁၈ဒုတိယလ၊ ပဌမနေ့၌ ပရိသတ်အပေါင်းကို စည်းဝေးစေပြီးမှ၊ အဆွေအမျိုးစာရင်းကို ဘော်ပြ၍ အနှစ်နှစ်ဆယ်အလွန်သောသူတို့၏ နာမည်ပေါင်းကို မှတ်သဖြင့်၊
19 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ, ಮೋಶೆ ಸೀನಾಯಿ ಮರುಭೂಮಿಯಲ್ಲಿ ಜನಗಣತಿ ಮಾಡಿದನು.
၁၉ထာဝရဘုရားသည် မောရှေအား မှာထားတော် မူသည်အတိုင်း၊ သိနာတော၌ ဣသရေလအမျိုးသားတို့ ကို ရေတွက်လေ၏။
20 ಇಸ್ರಾಯೇಲಿನ ಚೊಚ್ಚಲ ಮಗ ರೂಬೇನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
၂၀ဣသရေလ၏သားဦး၊ ရုဗင်၏အမျိုးသားတို့တွင် အဆွေအမျိုး အသီးအသီးလိုက်၍ နာမည်များကို စာရင်း၌ မှတ်သားသည်အတိုင်း၊
21 ರೂಬೇನನ ಗೋತ್ರದಲ್ಲಿ ಎಣಿಕೆಯಾದವರು 46,500 ಜನರು.
၂၁အသက်နှစ်ဆယ်လွန်၍ စစ်တိုက်နိုင်သော ယောက်ျားပေါင်း လေးသောင်းခြောက်ထောင်ငါးရာ ရှိကြ၏။
22 ಸಿಮೆಯೋನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
၂၂ရှိမောင်အမျိုးသားတို့တွင် အဆွေအမျိုးအသီး အသီးလိုက်၍ နာမည်များကို စာရင်း၌ မှတ်သားသည် အတိုင်း၊
23 ಸಿಮೆಯೋನನ ಗೋತ್ರದಲ್ಲಿ ಎಣಿಕೆಯಾದವರು 59,300 ಜನರು.
၂၃အသက်နှစ်ဆယ်လွန်၍ စစ်တိုက်နိုင်သော ယောက်ျားပေါင်း ငါးသောင်းကိုးထောင်သုံးရာရှိကြ၏။
24 ಗಾದನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
၂၄ဂဒ်အမျိုးသားတို့တွင် အဆွေအမျိုးအသီးအသီး လိုက်၍ နာမည်များကို စာရင်း၌မှတ်သားသည်အတိုင်း၊
25 ಗಾದನ ಗೋತ್ರದಲ್ಲಿ ಎಣಿಕೆಯಾದವರು 45,650 ಜನರು.
၂၅အသက်နှစ်ဆယ်လွန်၍ စစ်တိုက်နိုင်သော ယောက်ျားပေါင်း လေးသောင်းငါးထောင်ခြောက်ရာ ငါးဆယ် ရှိကြ၏။
26 ಯೆಹೂದ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
၂၆ယုဒအမျိုးသားတို့တွင် အဆွေအမျိုးအသီးအသီးလိုက်၍ နာမည်များကို စာရင်း၌မှတ်သားသည် အတိုင်း၊
27 ಯೆಹೂದ ಗೋತ್ರದಲ್ಲಿ ಎಣಿಕೆಯಾದವರು 74,600 ಜನರು.
၂၇အသက်နှစ်ဆယ်လွန်၍ စစ်တိုက်နိုင်သောယောက်ျားပေါင်း ခုနစ်သောင်း၊ လေးထောင်ခြောက်ရာ ရှိကြ၏။
28 ಇಸ್ಸಾಕಾರನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
၂၈ဣသခါအမျိုးသားတို့တွင် အဆွေအမျိုးအသီး အသီးကိုလိုက်၍ နာမည်များကို စာရင်း၌ မှတ်သားသည် အတိုင်း၊
29 ಇಸ್ಸಾಕಾರನ ಗೋತ್ರದಲ್ಲಿ ಎಣಿಕೆಯಾದವರು 54,400 ಜನರು.
၂၉အသက်နှစ်ဆယ်လွန်၍ စစ်တိုက်နိုင်သော ယောက်ျားပေါင်း ငါးသောင်းလေးထောင်လေးရာ ရှိကြ ၏။
30 ಜೆಬುಲೂನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
၃၀ဇာဗုလုန်အမျိုးသားတို့တွင် အဆွေအမျိုးအသီး အသီးလိုက်၍ နာမည်များကို စာရင်း၌ မှတ်သားသည် အတိုင်း၊
31 ಜೆಬುಲೂನ್ ಗೋತ್ರದಲ್ಲಿ ಎಣಿಕೆಯಾದವರು 57,400 ಜನರು.
၃၁အသက်နှစ်ဆယ်လွန်၍ စစ်တိုက်နိုင်သော ယောက်ျားပေါင်း ငါးသောင်းနှစ်ထောင်လေးရာရှိကြ၏။
32 ಯೋಸೇಫನ ಮಕ್ಕಳಾದ ಎಫ್ರಾಯೀಮನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
၃၂ယောသပ်မှ ဆင်းသက်သော ဧဖရိမ်အမျိုးသား တို့တွင် အဆွေအမျိုးအသီးအသီးလိုက်၍ နာမည်များကို စာရင်း၌ မှတ်သားသည်အတိုင်း၊
33 ಎಫ್ರಾಯೀಮನ ಗೋತ್ರದಲ್ಲಿ ಎಣಿಕೆಯಾದವರು 40,500 ಜನರು.
၃၃အသက်နှစ်ဆယ်လွန်၍ စစ်တိုက်နိုင်သော ယောက်ျားပေါင်း လေးသောင်းငါးရာ ရှိကြ၏။
34 ಮನಸ್ಸೆಯ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
၃၄မနာရှေအမျိုးသားတို့တွင် အဆွေအမျိုးအသီး အသီးလိုက်၍ နာမည်များကို စာရင်း၌ မှတ်သားသည် အတိုင်း၊
35 ಮನಸ್ಸೆಯ ಗೋತ್ರದಲ್ಲಿ ಎಣಿಕೆಯಾದವರು 32,200 ಜನರು.
၃၅အသက်နှစ်ဆယ်လွန်၍ စစ်တိုက်နိုင်သော ယောက်ျားပေါင်း သုံးသောင်းနှစ်ထောင်နှစ်ရာ ရှိကြ၏။
36 ಬೆನ್ಯಾಮೀನ್ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
၃၆ဗင်္ယာမိန်အမျိုးသားတို့တွင် အဆွေအမျိုးအသီး သီးလိုက်၍ နာမည်များကို စာရင်း၌ မှတ်သားသည် အတိုင်း၊
37 ಬೆನ್ಯಾಮೀನನ ಗೋತ್ರದಲ್ಲಿ ಎಣಿಕೆಯಾದವರು 35,400 ಜನರು.
၃၇အသက်နှစ်ဆယ်လွန်၍ စစ်တိုက်နိုင်သော ယောက်ျားပေါင်း သုံးသောင်းငါးထောင်လေးရာ ရှိကြ၏။
38 ದಾನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
၃၈ဒန်အမျိုးသားတို့တွင် အဆွေအမျိုးအသီးအသီး လိုက်၍ နာမည်များကို စာရင်း၌ မှတ်သားသည်အတိုင်း၊
39 ದಾನನ ಗೋತ್ರದಲ್ಲಿ ಎಣಿಕೆಯಾದವರು 62,700 ಜನರು.
၃၉အသက်နှစ်ဆယ်လွန်၍ စစ်တိုက်နိုင်သော ယောက်ျားပေါင်း ခြောက်သောင်းနှစ်ထောင်ခုနစ်ရာ ရှိကြ၏။
40 ಆಶೇರನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
၄၀အာရှာအမျိုးသားတို့တွင် အဆွေအမျိုးအသီးအ သီးလိုက်၍ နာမည်များကို စာရင်း၌ မှတ်သားသည် အတိုင်း၊
41 ಆಶೇರನ ಗೋತ್ರದಲ್ಲಿ ಎಣಿಕೆಯಾದವರು 41,500 ಜನರು.
၄၁အသက်နှစ်ဆယ်လွန်၍ စစ်တိုက်နိုင်သော ယောက်ျားပေါင်း လေးသောင်းတထောင်ငါးရာ ရှိကြ၏။
42 ನಫ್ತಾಲಿಯ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
၄၂နဿလိအမျိုးသားတို့တွင် အဆွေအမျိုးအသီး အသီးလိုက်၍ နာမည်များကို စာရင်း၌ မှတ်သားသည် အတိုင်း၊
43 ನಫ್ತಾಲಿಯ ಗೋತ್ರದಲ್ಲಿ ಎಣಿಕೆಯಾದವರು 53,400 ಜನರು.
၄၃အသက်နှစ်ဆယ်လွန်၍ စစ်တိုက်နိုင်သော ယောက်ျားပေါင်း ငါးသောင်းသုံးထောင်လေးရာ ရှိကြ၏။
44 ಮೋಶೆ, ಆರೋನ್ ಮತ್ತು ಇಸ್ರಾಯೇಲಿನ ಹನ್ನೆರಡು ಗೋತ್ರಗಳ ನಾಯಕರು ಲೆಕ್ಕಮಾಡಿದ ಇಸ್ರಾಯೇಲರ ಜನರು ಇವರೇ. ಪ್ರತಿಯೊಬ್ಬರೂ ತಮ್ಮ ತಮ್ಮ ಕುಟುಂಬವನ್ನು ಪ್ರತಿನಿಧಿಸುತ್ತಿದ್ದರು.
၄၄ထိုသို့မောရှေနှင့် အာရုန်အစရှိသော ဣသရေ လအမျိုး၌ အဆွေအမျိုးသူကြီးဖြစ်သော မင်းဆယ်နှစ်ပါး တို့သည်
45 ಹೀಗೆ ಇಸ್ರಾಯೇಲರಲ್ಲಿ ಎಣಿಕೆಯಾದವರೆಲ್ಲರೂ ಅವರ ಕುಟುಂಬಗಳ ಪ್ರಕಾರ ಇಪ್ಪತ್ತು ವರ್ಷದವರೂ, ಅದಕ್ಕಿಂತ ಹೆಚ್ಚಾದ ಪ್ರಾಯವುಳ್ಳವರೂ, ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಶಕ್ತರಾದವರೂ ಆಗಿದ್ದರು.
၄၅ဣသရေလအမျိုးသားအပေါင်းတို့ကို အဆွေ အမျိုးအလိုက် ရေတွက်၍ စာရင်းယူသည်အတိုင်း၊
46 ಎಣಿಕೆಯಾದವರು ಒಟ್ಟು 6,03,550 ಮಂದಿಯಾಗಿದ್ದರು.
၄၆အသက်နှစ်ဆယ်လွန်၍ စစ်တိုက်နိုင်သော လူပေါင်းကား ခြောက်သိန်းသုံးထောင်ငါးရာ ငါးဆယ် ရှိသတည်း။
47 ಲೇವಿಯರ ತಂದೆಗಳ ಗೋತ್ರವನ್ನು ಇತರರೊಂದಿಗೆ ಎಣಿಸಲಿಲ್ಲ.
၄၇လေဝိသားတို့သည်၊ ဘိုးဘအမျိုးအလိုက် စာရင်း မဝင်ရသည် အမှုမှာ၊
48 ಇದಲ್ಲದೆ ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ:
၄၈ထာဝရဘုရားသည် မောရှေအား မိန့်တော်မူ သည်ကား
49 “ನೀವು ಲೇವಿಯ ಕುಲವನ್ನು ಎಣಿಸಬಾರದು ಅಥವಾ ಇತರ ಇಸ್ರಾಯೇಲರ ಜನಗಣತಿಯಲ್ಲಿ ಅವರನ್ನು ಸೇರಿಸಬಾರದು.
၄၉လေဝိသားတို့ကို၊ ဣသရေလအမျိုးသားတို့နှင့် ရောနှော၍ မရေတွက်ရ။ စာရင်းထဲ၌ မသွင်းရ။
50 ಆದರೆ ನೀನು ಸಾಕ್ಷಿಯ ಗುಡಾರವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಅದಕ್ಕೆ ಬೇಕಾದ ಎಲ್ಲವನ್ನೂ ನೋಡಿಕೊಳ್ಳಲು ಲೇವಿಯರನ್ನು ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಹೊತ್ತುಕೊಳ್ಳುವರು. ಅದರ ಸೇವೆಮಾಡಿ, ಗುಡಾರದ ಸುತ್ತುಮುತ್ತಲೂ ಇಳಿದುಕೊಳ್ಳಬೇಕು.
၅၀လေဝိသားတို့အား သက်သေခံချက် တဲတော်ကို ၎င်း၊ တဲတော်တန်ဆာ ရှိသမျှကို၎င်း၊ တဲတော်နှင့်ဆိုင်သမျှတို့ကို၎င်း အပ်၍၊ သူတို့သည် တဲတော်နှင် တဲတော်တန်သော အလုံးစုံကို ဆောင်ရွက်ကြရမည်။ တဲတော်မှုကိုလည်း ထမ်းရကြမည်။ တပ်ချသောအခါ တဲတော်ပတ်လည်၌ မိမိတို့နေရာချရကြမည်။
51 ದೇವದರ್ಶನ ಗುಡಾರವು ಹೊರಡುವಾಗ ಲೇವಿಯರು ಅದನ್ನು ತೆಗೆಯಲಿ. ಗುಡಾರವು ಇಳಿಯುವಾಗ ಲೇವಿಯರು ಅದನ್ನು ನಿಲ್ಲಿಸಲಿ. ಬೇರೆ ಯಾವನಾದರೂ ಸಮೀಪಿಸಿದರೆ ಅವನು ಸಾಯಬೇಕು.
၅၁တဲတော်ကို ယူသွားချိန် ရောက်သောအခါ၊ လေဝိသားတို့သည် ရုပ်သိမ်းရမည်။ နေရာချချိန်ရောက် သောအခါ ထူထောင်ပြန်ရမည်။ လေဝိအမျိုးသားမှတပါး အခြားသော အမျိုးသားသည် ချဉ်းကပ်လျှင်၊ အသေ သတ်ခြင်းကို ခံရမည်။
52 ಇಸ್ರಾಯೇಲರು ತಮ್ಮ ತಮ್ಮ ಸೈನ್ಯಗಳ ಪ್ರಕಾರ ಒಬ್ಬೊಬ್ಬನು ತನ್ನ ದಂಡಿನ ಧ್ವಜದ ಬಳಿ ಇಳಿದುಕೊಳ್ಳಬೇಕು.
၅၂ဣသရေလအမျိုးသားတို့သည် တပ်ချသော အခါ၊ အလုံးအရင်းတရှောက်လုံး၊ လူတိုင်း မိမိဆိုင်သော တပ်တွင် မိမိဆိုင်သော အလံနားမှာ မိမိတဲကို ဆောက်ရ မည်။
53 ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದುಕೊಳ್ಳಬೇಕು. ಹೀಗೆ ಇಸ್ರಾಯೇಲರ ಸಭೆಯ ಮೇಲೆ ನನ್ನ ಕೋಪಕ್ಕೆ ಆಸ್ಪದವಿರದು. ಲೇವಿಯರು ಸಭೆಯ ಗುಡಾರ ಕಾಯುವ ಜವಾಬ್ದಾರಿಕೆಯುಳ್ಳವರಾಗಿರಬೇಕು.”
၅၃ဣသရေလအမျိုးသားစည်းဝေးရာ၊ ပရိသတ် အပေါ်မှာ အမျက်တော်မသက်ရောက်စေခြင်းငှါ၊ လေဝိသားတို့သည် သက်သေခံချက် တဲတော်ပတ်လည်၌ နေရာချ၍ သက်သေခံချက်တဲတော်ကို စောင့်ရှောက်ရ မည်ဟု၊
54 ಇಸ್ರಾಯೇಲರು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನು ಮಾಡಿದರು.
၅၄မောရှေအား ထာဝရဘုရားမှာထားတော်မူ သည်အတိုင်း ဣသရေလာအမျိုးသားတို့သည် ပြုကြ၏။