< ನೆಹೆಮೀಯನು 2 >

1 ಅರಸನಾದ ಅರ್ತಷಸ್ತನ ಇಪ್ಪತ್ತನೆಯ ವರ್ಷದ, ನಿಸಾನ ತಿಂಗಳಲ್ಲಿ, ಅವನ ಮುಂದೆ ದ್ರಾಕ್ಷಾರಸವನ್ನು ತೆಗೆದುಕೊಂಡು ಅರಸನಿಗೆ ಕೊಟ್ಟೆನು. ನಾನು ಅವನ ಸಮ್ಮುಖದಲ್ಲಿ ಹಿಂದೆ ಎಂದೂ ದುಃಖಿತನಾಗಿದ್ದಿಲ್ಲ.
וַיְהִי ׀ בְּחֹדֶשׁ נִיסָן שְׁנַת עֶשְׂרִים לְאַרְתַּחְשַׁסְתְּא הַמֶּלֶךְ יַיִן לְפָנָיו וָאֶשָּׂא אֶת־הַיַּיִן וָאֶתְּנָה לַמֶּלֶךְ וְלֹא־הָיִיתִי רַע לְפָנָֽיו׃
2 ಆದಕಾರಣ ಅರಸನು ನನಗೆ, “ನಿನಗೆ ಕಾಯಿಲೆ ಇಲ್ಲದೆ ಇರುವಾಗ, ನಿನ್ನ ಮುಖವು ದುಃಖದಿಂದಿರುವುದೇನು? ನಿನಗೆ ರೋಗ ಏನೂ ಇಲ್ಲವಲ್ಲ? ಇದು ಮನೋವೇದನೆಯೇ ಹೊರತು ಬೇರೇನೂ ಅಲ್ಲ,” ಎಂದನು. ಆಗ ನಾನು ಬಹು ಭಯಪಟ್ಟು ಅರಸನಿಗೆ,
וַיֹּאמֶר לִי הַמֶּלֶךְ מַדּוּעַ ׀ פָּנֶיךָ רָעִים וְאַתָּה אֵֽינְךָ חוֹלֶה אֵין זֶה כִּי־אִם רֹעַֽ לֵב וָאִירָא הַרְבֵּה מְאֹֽד׃
3 “ಅರಸನು ಎಂದೆಂದಿಗೂ ಬಾಳಲಿ. ನನ್ನ ತಂದೆಗಳ ಸಮಾಧಿಗಳಿರುವ ಸ್ಥಳವಾದ ಆ ಪಟ್ಟಣವು ಹಾಳಾಗಿದ್ದು, ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿರುವಾಗ ನನ್ನ ಮುಖವು ದುಃಖವಿಲ್ಲದೆ ಇರಲು ಸಾಧ್ಯವೇ?” ಎಂದು ಹೇಳಿದೆನು.
וָאֹמַר לַמֶּלֶךְ הַמֶּלֶךְ לְעוֹלָם יִחְיֶה מַדּוּעַ לֹא־יֵרְעוּ פָנַי אֲשֶׁר הָעִיר בֵּית־קִבְרוֹת אֲבֹתַי חֲרֵבָה וּשְׁעָרֶיהָ אֻכְּלוּ בָאֵֽשׁ׃
4 ಅದಕ್ಕೆ ಅರಸನು ನನಗೆ, “ನಿನಗೆ ಬೇಕಾಗಿರುವುದೇನು?” ಎಂದನು. ಆಗ ನಾನು ಪರಲೋಕದ ದೇವರನ್ನು ಪ್ರಾರ್ಥಿಸಿ
וַיֹּאמֶר לִי הַמֶּלֶךְ עַל־מַה־זֶּה אַתָּה מְבַקֵּשׁ וָֽאֶתְפַּלֵּל אֶל־אֱלֹהֵי הַשָּׁמָֽיִם׃
5 ಅರಸನಿಗೆ, “ಅರಸನಿಗೆ ಮೆಚ್ಚಿಗೆಯಾದರೆ ಮತ್ತು ನಿಮ್ಮ ಸೇವಕನಿಗೆ ನಿಮ್ಮ ಮುಂದೆ ದಯೆ ದೊರಕಿದರೆ, ನನ್ನನ್ನು ನನ್ನ ತಂದೆಗಳ ಸಮಾಧಿಗಳಿರುವ ಪಟ್ಟಣವನ್ನು ಕಟ್ಟಿಸುವುದಕ್ಕಾಗಿ ಯೆಹೂದಕ್ಕೆ ನನ್ನನ್ನು ಕಳುಹಿಸಬೇಕು,” ಎಂದೆನು.
וָאֹמַר לַמֶּלֶךְ אִם־עַל־הַמֶּלֶךְ טוֹב וְאִם־יִיטַב עַבְדְּךָ לְפָנֶיךָ אֲשֶׁר תִּשְׁלָחֵנִי אֶל־יְהוּדָה אֶל־עִיר קִבְרוֹת אֲבֹתַי וְאֶבְנֶֽנָּה׃
6 ರಾಣಿಯು ಅವನ ಬಳಿಯಲ್ಲಿ ಕುಳಿತಿರುವಾಗ ಅರಸನು ನನಗೆ, “ನಿನ್ನ ಪ್ರಯಾಣ ಎಷ್ಟು ದಿವಸ? ನೀನು ತಿರುಗಿ ಯಾವಾಗ ಬರುತ್ತೀ?” ಎಂದನು. ನಾನು ಅರಸನಿಗೆ ಸಮಯ ಗೊತ್ತು ಮಾಡಿದೆನು. ಆಗ ಅರಸನು ನನ್ನನ್ನು ಕಳುಹಿಸಲು ಸಮ್ಮತಿಸಿದನು.
וַיֹּאמֶר לִי הַמֶּלֶךְ וְהַשֵּׁגַל ׀ יוֹשֶׁבֶת אֶצְלוֹ עַד־מָתַי יִהְיֶה מַֽהֲלָכְךָ וּמָתַי תָּשׁוּב וַיִּיטַב לִפְנֵֽי־הַמֶּלֶךְ וַיִּשְׁלָחֵנִי וָֽאֶתְּנָה לוֹ זְמָֽן׃
7 ತರುವಾಯ ನಾನು ಅರಸನಿಗೆ, “ಯೂಫ್ರೇಟೀಸ್ ನದಿ ಆಚೆಯ ರಾಜ್ಯಪಾಲರು ತಮ್ಮ ಪ್ರಾಂತಗಳಲ್ಲಿ ಹಾದು, ಯೆಹೂದದ ನಾಡಿಗೆ ಹೋಗುವುದಕ್ಕೆ ನನಗೆ ಅಪ್ಪಣೆ ಕೊಡಬೇಕಾಗುತ್ತದೆ.
וָאוֹמַר לַמֶּלֶךְ אִם־עַל־הַמֶּלֶךְ טוֹב אִגְּרוֹת יִתְּנוּ־לִי עַֽל־פַּחֲווֹת עֵבֶר הַנָּהָר אֲשֶׁר יַעֲבִירוּנִי עַד אֲשֶׁר־אָבוֹא אֶל־יְהוּדָֽה׃
8 ರಾಜವನಪಾಲಕನಾದ ಆಸಾಫನು, ದೇವಾಲಯದ ಕೋಟೆಯ ಬಾಗಿಲುಗಳನ್ನೂ, ಪಟ್ಟಣದ ಪೌಳಿಗೋಡೆಯನ್ನೂ, ನಾನು ಸೇರುವ ಮನೆಯನ್ನೂ, ಕಟ್ಟಲು ಬೇಕಾಗುವ ತೊಲೆಗಳಿಗಾಗಿ ಮರಗಳನ್ನೂ ಕೊಡಬೇಕಾಗುತ್ತದೆ. ಇದನ್ನೆಲ್ಲಾ ಕೊಡುವಂತೆ ರಾಜರು ನನ್ನ ಕೈಯಲ್ಲಿ ಪತ್ರಗಳನ್ನು ದಯಮಾಡಿ ನೀಡಬೇಕು,” ಎಂದು ಬಿನ್ನವಿಸಿದೆನು. ನನ್ನ ದೇವರ ಕೃಪಾಹಸ್ತ ನನ್ನ ಮೇಲೆ ಇದ್ದುದರಿಂದ, ರಾಜನು ಅವುಗಳನ್ನು ನನಗೆ ಕೊಟ್ಟನು.
וְאִגֶּרֶת אֶל־אָסָף שֹׁמֵר הַפַּרְדֵּס אֲשֶׁר לַמֶּלֶךְ אֲשֶׁר יִתֶּן־לִי עֵצִים לְקָרוֹת אֶת־שַׁעֲרֵי הַבִּירָה אֲשֶׁר־לַבַּיִת וּלְחוֹמַת הָעִיר וְלַבַּיִת אֲשֶׁר־אָבוֹא אֵלָיו וַיִּתֶּן־לִי הַמֶּלֶךְ כְּיַד־אֱלֹהַי הַטּוֹבָה עָלָֽי׃
9 ಆಗ ನಾನು ಯೂಫ್ರೇಟೀಸ್ ನದಿಯ ಆಚೆಯಲ್ಲಿರುವ ಅಧಿಪತಿಗಳ ಬಳಿಗೆ ಬಂದು, ಅರಸನ ಪತ್ರಗಳನ್ನು ಅವರಿಗೆ ಕೊಟ್ಟೆನು. ಅರಸನು ನನ್ನ ಸಂಗಡ ಸೈನ್ಯಾಧಿಪತಿಗಳನ್ನೂ, ಕುದುರೆ ಸವಾರರನ್ನೂ ಕಳುಹಿಸಿದನು.
וָֽאָבוֹא אֶֽל־פַּֽחֲווֹת עֵבֶר הַנָּהָר וָאֶתְּנָה לָהֶם אֵת אִגְּרוֹת הַמֶּלֶךְ וַיִּשְׁלַח עִמִּי הַמֶּלֶךְ שָׂרֵי חַיִל וּפָרָשִֽׁים׃
10 ಇಸ್ರಾಯೇಲರ ಹಿತಚಿಂತಕನು ಒಬ್ಬನು ಬಂದನೆಂಬ ಸಮಾಚಾರ ಹೋರೋನಿನ ಸನ್ಬಲ್ಲಟನಿಗೂ, ಅಮ್ಮೋನ್ ದೇಶದವನಾದ ಟೋಬೀಯ ಎಂಬ ಅಧಿಕಾರಿಗೂ ಮುಟ್ಟಿತು. ಅವರು ತುಂಬಾ ವಿಚಲಿತರಾದರು.
וַיִּשְׁמַע סַנְבַלַּט הַחֹרֹנִי וְטֽוֹבִיָּה הָעֶבֶד הָֽעַמֹּנִי וַיֵּרַע לָהֶם רָעָה גְדֹלָה אֲשֶׁר־בָּא אָדָם לְבַקֵּשׁ טוֹבָה לִבְנֵי יִשְׂרָאֵֽל׃
11 ನಾನು ಯೆರೂಸಲೇಮಿಗೆ ಬಂದು ಅಲ್ಲಿ ಮೂರು ದಿವಸ ಇದ್ದ ತರುವಾಯ, ನಾನೂ, ನನ್ನ ಸಂಗಡ ಇರುವ ಕೆಲವರೂ ರಾತ್ರಿಯಲ್ಲಿ ಎದ್ದೆವು.
וָאָבוֹא אֶל־יְרוּשָׁלָ͏ִם וָאֱהִי־שָׁם יָמִים שְׁלֹשָֽׁה׃
12 ಆದರೆ ಯೆರೂಸಲೇಮಿಗೋಸ್ಕರ ಮಾಡಲು ನನ್ನ ದೇವರು ನನ್ನ ಹೃದಯದಲ್ಲಿ ಇಟ್ಟಿದ್ದನ್ನು ಯಾರಿಗೂ ತಿಳಿಸಲಿಲ್ಲ. ನಾನು ಸವಾರಿಮಾಡುತ್ತಿದ್ದ ವಾಹನ ಪಶುವಿನ ಹೊರತು ಬೇರೆ ಪಶು ನನ್ನೊಂದಿಗಿರಲಿಲ್ಲ.
וָאָקוּם ׀ לַיְלָה אֲנִי וַאֲנָשִׁים ׀ מְעַט עִמִּי וְלֹא־הִגַּדְתִּי לְאָדָם מָה אֱלֹהַי נֹתֵן אֶל־לִבִּי לַעֲשׂוֹת לִירוּשָׁלָ͏ִם וּבְהֵמָה אֵין עִמִּי כִּי אִם־הַבְּהֵמָה אֲשֶׁר אֲנִי רֹכֵב בָּֽהּ׃
13 ನಾನು ರಾತ್ರಿಯಲ್ಲಿ ಕಣಿವೆಯ ಬಾಗಿಲಿಂದ ಹೊರಟು, ಸರ್ಪದ ಬಾವಿಯನ್ನು ದಾಟಿ, ತಿಪ್ಪೆ ದಿಬ್ಬೆಯ ಬಾಗಿಲಿಗೆ ಬಂದು, ಯೆರೂಸಲೇಮಿನ ಕೆಡವಿ ಹಾಕಲಾದ ಗೋಡೆಗಳನ್ನೂ, ಬೆಂಕಿಯಿಂದ ಸುಡಲಾದ ಅದರ ಬಾಗಿಲುಗಳನ್ನೂ ಚೆನ್ನಾಗಿ ಕಂಡೆನು.
וָאֵצְאָה בְשַֽׁעַר־הַגַּיְא לַיְלָה וְאֶל־פְּנֵי עֵין הַתַּנִּין וְאֶל־שַׁעַר הָאַשְׁפֹּת וָאֱהִי שֹׂבֵר בְּחוֹמֹת יְרוּשָׁלַ͏ִם אֲשֶׁר־[הֵם ׀ פְּרוּצִים] (המפרוצים) וּשְׁעָרֶיהָ אֻכְּלוּ בָאֵֽשׁ׃
14 ಅಲ್ಲಿಂದ ಬುಗ್ಗೆಬಾಗಿಲನ್ನು ಹಾದು, ಅರಸನ ಕೊಳಕ್ಕೆ ಹೋದೆನು. ನನ್ನ ವಾಹನ ಪಶುವಿಗೆ ಅಲ್ಲಿಂದ ಮುಂದೆ ಹೋಗುವುದಕ್ಕೆ ಮಾರ್ಗವಿಲ್ಲದ್ದರಿಂದ,
וָאֶֽעֱבֹר אֶל־שַׁעַר הָעַיִן וְאֶל־בְּרֵכַת הַמֶּלֶךְ וְאֵין־מָקוֹם לַבְּהֵמָה לַעֲבֹר תַּחְתָּֽי׃
15 ನಾನು ರಾತ್ರಿಯಲ್ಲಿ ಹಳ್ಳದ ಮಾರ್ಗದಿಂದ ಹತ್ತುತ್ತಾ ಗೋಡೆಯನ್ನು ಪರೀಕ್ಷಿಸಿದೆನು. ಆಮೇಲೆ ಪುನಃ ಕಣಿವೆಯ ಬಾಗಿಲಿನಿಂದ ಮನೆಗೆ ಬಂದೆನು.
וָאֱהִי עֹלֶה בַנַּחַל לַיְלָה וָאֱהִי שֹׂבֵר בַּחוֹמָה וָאָשׁוּב וָאָבוֹא בְּשַׁעַר הַגַּיְא וָאָשֽׁוּב׃
16 ನಾನು ಎಲ್ಲಿ ಹೋದೆನೆಂದೂ, ಏನು ಮಾಡಿದೆನೆಂದೂ ಅಧಿಕಾರಿಗಳು ತಿಳಿಯದೆ ಇದ್ದರು. ಅಲ್ಲಿಯವರೆಗೆ ನಾನು ಯೆಹೂದ್ಯರಿಗಾದರೂ, ಯಾಜಕರಿಗಾದರೂ, ಶ್ರೀಮಂತರಿಗಾದರೂ, ಅಧಿಕಾರಿಗಳಿಗಾದರೂ, ಕೆಲಸ ಮಾಡುವ ಇತರ ಜನರಿಗಾದರೂ ಗೊತ್ತಿರಲಿಲ್ಲ.
וְהַסְּגָנִים לֹא יָדְעוּ אָנָה הָלַכְתִּי וּמָה אֲנִי עֹשֶׂה וְלַיְּהוּדִים וְלַכֹּהֲנִים וְלַחֹרִים וְלַסְּגָנִים וּלְיֶתֶר עֹשֵׂה הַמְּלָאכָה עַד־כֵּן לֹא הִגַּֽדְתִּי׃
17 ಬಳಿಕ ನಾನು ಅವರಿಗೆ, “ನಮ್ಮ ದುರವಸ್ಥೆ ನಿಮ್ಮ ಕಣ್ಣ ಮುಂದಿರುತ್ತದಲ್ಲವೇ? ಯೆರೂಸಲೇಮ್ ಪಟ್ಟಣ ಹಾಳುಬಿದ್ದಿದೆ; ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ; ಬನ್ನಿ, ಯೆರೂಸಲೇಮಿನ ಗೋಡೆಯನ್ನು ಪುನಃ ಕಟ್ಟೋಣ. ಹೀಗೆ ಮಾಡಿದರೆ, ನಮ್ಮ ಮೇಲಿನ ನಿಂದೆ ನೀಗುವುದು,” ಎಂದು ಹೇಳಿದೆ.
וָאוֹמַר אֲלֵהֶם אַתֶּם רֹאִים הָרָעָה אֲשֶׁר אֲנַחְנוּ בָהּ אֲשֶׁר יְרוּשָׁלַ͏ִם חֲרֵבָה וּשְׁעָרֶיהָ נִצְּתוּ בָאֵשׁ לְכוּ וְנִבְנֶה אֶת־חוֹמַת יְרוּשָׁלַ͏ִם וְלֹא־נִהְיֶה עוֹד חֶרְפָּֽה׃
18 ಇದಲ್ಲದೆ, ನನ್ನ ದೇವರ ಕೃಪಾಹಸ್ತ ನನ್ನನ್ನು ಹೇಗೆ ನಡೆಸಿತೆಂಬುದನ್ನೂ, ರಾಜನು ನನಗೆ ಹೇಳಿದ್ದನ್ನೂ ಅವರಿಗೆ ವಿವರಿಸಿದೆ. ಆಗ ಅವರು, “ಬನ್ನಿ, ಪುನಃ ಕಟ್ಟೋಣ,” ಎಂದು ಹೇಳಿ, ಆ ಒಳ್ಳೆಯ ಕೆಲಸಕ್ಕೆ ಕೈಹಾಕಲು ಧೈರ್ಯಗೊಂಡರು.
וָאַגִּיד לָהֶם אֶת־יַד אֱלֹהַי אֲשֶׁר־הִיא טוֹבָה עָלַי וְאַף־דִּבְרֵי הַמֶּלֶךְ אֲשֶׁר אָֽמַר־לִי וַיֹּֽאמְרוּ נָקוּם וּבָנִינוּ וַיְחַזְּקוּ יְדֵיהֶם לַטּוֹבָֽה׃
19 ಆದರೆ ಹೋರೋನಿನವನಾದ ಸನ್ಬಲ್ಲಟನೂ, ಅಮ್ಮೋನ್ಯ ದಾಸನಾದ ಟೋಬೀಯನೂ, ಅರಬಿಯನಾದ ಗೆಷೆಮನೂ ಇದನ್ನು ಕೇಳಿದಾಗ, ಅವರು ನಮ್ಮನ್ನು ಗೇಲಿಮಾಡಿ ತಿರಸ್ಕರಿಸಿ, “ನೀವು ಮಾಡುವ ಈ ಕಾರ್ಯವೇನು? ನೀವು ಅರಸನಿಗೆ ವಿರೋಧವಾಗಿ ತಿರುಗಿಬೀಳುವಿರೋ?” ಎಂದರು.
וַיִּשְׁמַע סַנְבַלַּט הַחֹרֹנִי וְטֹבִיָּה ׀ הָעֶבֶד הָֽעַמּוֹנִי וְגֶשֶׁם הָֽעַרְבִי וַיַּלְעִגוּ לָנוּ וַיִּבְזוּ עָלֵינוּ וַיֹּאמְרוּ מָֽה־הַדָּבָר הַזֶּה אֲשֶׁר אַתֶּם עֹשִׂים הַעַל הַמֶּלֶךְ אַתֶּם מֹרְדִֽים׃
20 ಆಗ ನಾನು ಅವರಿಗೆ, “ಪರಲೋಕದ ದೇವರು ನಮಗೆ ಸಫಲತೆ ಅನುಗ್ರಹಿಸುವರು. ಅವರ ಸೇವಕರಾದ ನಾವು ಪುನಃ ಕಟ್ಟುವ ಕಾರ್ಯ ಪ್ರಾರಂಭಿಸುವೆವು. ಆದರೆ ನಿಮಗೆ ಯೆರೂಸಲೇಮಿನಲ್ಲಿ ಯಾವುದೇ ಪಾಲಾದರೂ ಹಕ್ಕಾದರೂ ಐತಿಹಾಸಿಕ ಬಾಧ್ಯತೆಯಾದರೂ ಇರುವುದಿಲ್ಲ,” ಎಂದು ಹೇಳಿದೆನು.
וָאָשִׁיב אוֹתָם דָּבָר וָאוֹמַר לָהֶם אֱלֹהֵי הַשָּׁמַיִם הוּא יַצְלִיחַֽ לָנוּ וַאֲנַחְנוּ עֲבָדָיו נָקוּם וּבָנִינוּ וְלָכֶם אֵֽין־חֵלֶק וּצְדָקָה וְזִכָּרוֹן בִּירוּשָׁלָֽ͏ִם׃

< ನೆಹೆಮೀಯನು 2 >