< ನೆಹೆಮೀಯನು 12 >

1 ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನ ಮತ್ತು ಯೇಷೂವನ ಸಂಗಡ ಹೋದ ಯಾಜಕರೂ ಲೇವಿಯರೂ ಯಾರೆಂದರೆ: ಸೆರಾಯ, ಯೆರೆಮೀಯ, ಎಜ್ರ,
וְאֵלֶּה הַכֹּהֲנִים וְהַלְוִיִּם אֲשֶׁר עָלוּ עִם־זְרֻבָּבֶל בֶּן־שְׁאַלְתִּיאֵל וְיֵשׁוּעַ שְׂרָיָה יִרְמְיָה עֶזְרָֽא׃
2 ಅಮರ್ಯ, ಮಲ್ಲೂಕ್, ಹಟ್ಟೂಷ್,
אֲמַרְיָה מַלּוּךְ חַטּֽוּשׁ׃
3 ಶೆಕನ್ಯ, ರೆಹೂಮ್, ಮೆರೇಮೋತ್,
שְׁכַנְיָה רְחֻם מְרֵמֹֽת׃
4 ಇದ್ದೋ, ಗಿನ್ನೆತೋನ್, ಅಬೀಯ,
עִדּוֹא גִנְּתוֹי אֲבִיָּֽה׃
5 ಮಿಯಾಮಿನ್, ಮಾದ್ಯ, ಬಿಲ್ಗ,
מִיָּמִין מַֽעַדְיָה בִּלְגָּֽה׃
6 ಶೆಮಾಯ, ಯೋಯಾರೀಬ್, ಯೆದಾಯ,
שְׁמַֽעְיָה וְיוֹיָרִיב יְדַֽעְיָֽה׃
7 ಸಲ್ಲೂ, ಆಮೋಕ್, ಹಿಲ್ಕೀಯ, ಯೆದಾಯ. ಇವರು ಯೇಷೂವನ ದಿವಸಗಳಲ್ಲಿ ಯಾಜಕರಲ್ಲಿಯೂ, ಅವರ ಸಂಗಡಿಗರಲ್ಲಿಯೂ ಮುಖ್ಯಸ್ಥರಾಗಿದ್ದರು.
סַלּוּ עָמוֹק חִלְקִיָּה יְדַֽעְיָה אֵלֶּה רָאשֵׁי הַכֹּהֲנִים וַאֲחֵיהֶם בִּימֵי יֵשֽׁוּעַ׃
8 ಲೇವಿಯರು ಯಾರೆಂದರೆ: ಯೇಷೂವ, ಬಿನ್ನೂಯ್, ಕದ್ಮಿಯೇಲ್, ಶೇರೇಬ್ಯ, ಯೆಹೂದ, ಕೃತಜ್ಞತೆಯ ಹಾಡುಗಳ ಜವಾಬ್ದಾರನಾಗಿದ್ದ ಮತ್ತನ್ಯನೂ, ಅವನ ಸಂಗಡಿಗರು.
וְהַלְוִיִּם יֵשׁוּעַ בִּנּוּי קַדְמִיאֵל שֵׁרֵבְיָה יְהוּדָה מַתַּנְיָה עַֽל־הֻיְּדוֹת הוּא וְאֶחָֽיו׃
9 ಇದಲ್ಲದೆ ಅವರ ಸಹೋದರರಾದ ಬಕ್ಬುಕ್ಯ, ಉನ್ನೀ ವರ್ಗಗಳಲ್ಲಿ ಅವರಿಗೆ ಎದುರುಗಡೆ ನಿಂತು ಹಾಡುತ್ತಿದ್ದರು.
וּבַקְבֻּֽקְיָה (וענו) [וְעֻנִּי] אֲחֵיהֶם לְנֶגְדָּם לְמִשְׁמָרֽוֹת׃
10 ಇದಲ್ಲದೆ ಯೇಷೂವನು ಯೋಯಾಕೀಮನ ತಂದೆ, ಯೋಯಾಕೀಮನು ಎಲ್ಯಷೀಬನನ್ನು ಪಡೆದನು; ಎಲ್ಯಾಷೀಬನು ಯೋಯಾದನನ್ನು ಪಡೆದನು;
וְיֵשׁוּעַ הוֹלִיד אֶת־יֽוֹיָקִים וְיֽוֹיָקִים הוֹלִיד אֶת־אֶלְיָשִׁיב וְאֶלְיָשִׁיב אֶת־יוֹיָדָֽע׃
11 ಯೋಯಾದಾವನು ಯೋನಾತಾನನನ್ನು ಪಡೆದನು; ಯೋನಾತಾನನು ಯದ್ದೂವನನ್ನು ಪಡೆದನು.
וְיוֹיָדָע הוֹלִיד אֶת־יוֹנָתָן וְיוֹנָתָן הוֹלִיד אֶת־יַדּֽוּעַ׃
12 ಯೋಯಾಕೀಮನ ಕಾಲದಲ್ಲಿ ಅವನ ಪಿತೃಗಳಲ್ಲಿ ಮುಖ್ಯಸ್ಥರಾಗಿದ್ದ ಯಾಜಕರು ಯಾರೆಂದರೆ: ಸೆರಾಯನ ವಂಶದವನಾದ ಮೆರಾಯನು, ಯೆರೆಮೀಯನ ವಂಶದವನಾದ ಹನನ್ಯಯನು,
וּבִימֵי יֽוֹיָקִים הָיוּ כֹהֲנִים רָאשֵׁי הָאָבוֹת לִשְׂרָיָה מְרָיָה לְיִרְמְיָה חֲנַנְיָֽה׃
13 ಎಜ್ರನ ವಂಶದವನಾದ ಮೆಷುಲ್ಲಾಮನು, ಅಮರ್ಯನ ವಂಶದವನಾದ ಯೆಹೋಹಾನಾನನು,
לְעֶזְרָא מְשֻׁלָּם לַאֲמַרְיָה יְהוֹחָנָֽן׃
14 ಮಲ್ಲೂಕಿಯ ವಂಶದವನಾದ ಯೋನಾತಾನನು, ಶೆಬನ್ಯನ ವಂಶದವನಾದ ಯೋಸೇಫನು,
(למלוכי) [לִמְלִיכוּ] יֽוֹנָתָן לִשְׁבַנְיָה יוֹסֵֽף׃
15 ಹಾರಿಮನ ವಂಶದವನಾದ ಅದ್ನನು, ಮೆರಾಯೋತನ ವಂಶದವನಾದ ಹೆಲ್ಕಾಯನು,
לְחָרִם עַדְנָא לִמְרָיוֹת חֶלְקָֽי׃
16 ಇದ್ದೋವಿನ ವಂಶದವನಾದ ಜೆಕರ್ಯನು, ಗಿನ್ನೆತೋನನ ವಂಶದವನಾದ ಮೆಷುಲ್ಲಾಮನು,
(לעדיא) [לְעִדּוֹא] זְכַרְיָה לְגִנְּתוֹן מְשֻׁלָּֽם׃
17 ಅಬೀಯನ ವಂಶದವನಾದ ಜಿಕ್ರಿಯು, ಮಿನ್ಯಾಮೀನನ, ಮೋವಾದ್ಯನ ವಂಶದವನಾದ ಪಿಲ್ಟೈ,
לַאֲבִיָּה זִכְרִי לְמִנְיָמִין לְמוֹעַדְיָה פִּלְטָֽי׃
18 ಬಿಲ್ಗನ ವಂಶದವನಾದ ಶಮ್ಮೂವನು, ಶೆಮಾಯನ ವಂಶದವನಾದ ಯೆಹೋನಾತಾನನು,
לְבִלְגָּה שַׁמּוּעַ לִֽשְׁמַעְיָה יְהוֹנָתָֽן׃
19 ಯೋಯಾರೀಬನ ವಂಶದವನಾದ ಮತ್ತೆನೈ, ಯೆದಾಯನ ವಂಶದವನಾದ ಉಜ್ಜೀ,
וּלְיוֹיָרִיב מַתְּנַי לִֽידַֽעְיָה עֻזִּֽי׃
20 ಸಲ್ಲೂ ವಂಶದವನಾದ ಕಲ್ಲಾಯನು, ಆಮೋಕನ ವಂಶದವನಾದ ಏಬೆರನು,
לְסַלַּי קַלָּי לְעָמוֹק עֵֽבֶר׃
21 ಹಿಲ್ಕೀಯನ ವಂಶದವನಾದ ಹಷಬ್ಯನು, ಯೆದಾಯನ ವಂಶದವನಾದ ನೆತನೆಯೇಲನು.
לְחִלְקִיָּה חֲשַׁבְיָה לִֽידַֽעְיָה נְתַנְאֵֽל׃
22 ಎಲ್ಯಾಷೀಬ್, ಯೋಯಾದ, ಯೋಹಾನಾನ್, ಯದ್ದೂವ, ಇವರ ದಿವಸಗಳಲ್ಲಿ ಲೇವಿಯರೂ, ಯಾಜಕರೂ, ಪಾರಸಿಯನಾದ ದಾರ್ಯಾವೆಷನ ಆಳಿಕೆಯವರೆಗೆ ಪಿತೃಗಳ ಮುಖ್ಯಸ್ಥರಾಗಿ ಬರೆಯಲಾಗಿದೆ.
הַלְוִיִּם בִּימֵי אֶלְיָשִׁיב יוֹיָדָע וְיוֹחָנָן וְיַדּוּעַ כְּתוּבִים רָאשֵׁי אָבוֹת וְהַכֹּהֲנִים עַל־מַלְכוּת דָּרְיָוֶשׁ הַפָּֽרְסִֽי׃
23 ಎಲ್ಯಾಷೀಬನ ಮಗನಾದ ಯೋಹಾನಾನನ ಕಾಲದವರೆಗೆ ಲೇವಿ ಎಂಬವನ ಪುತ್ರರಾದ ಪಿತೃಗಳ ಮುಖ್ಯಸ್ಥರು ಇತಿಹಾಸ ಗ್ರಂಥದಲ್ಲಿ ಬರೆದಿರುತ್ತದೆ.
בְּנֵי לֵוִי רָאשֵׁי הָֽאָבוֹת כְּתוּבִים עַל־סֵפֶר דִּבְרֵי הַיָּמִים וְעַד־יְמֵי יֽוֹחָנָן בֶּן־אֶלְיָשִֽׁיב׃
24 ಲೇವಿಯರ ಮುಖ್ಯಸ್ಥರಾದ ಹಷಬ್ಯನೂ, ಶೇರೇಬ್ಯನೂ; ಕದ್ಮಿಯೇಲನ ಮಗನಾದ ಯೇಷೂವನೂ, ಅವರಿಗೆ ಎದುರಾದ ತಂಡವಾಗಿ ನಿಂತ ಅವರ ಸಹೋದರರೂ, ದೇವರ ಮನುಷ್ಯನಾದ ದಾವೀದನ ಆಜ್ಞೆಯ ಪ್ರಕಾರ ಕೃತಜ್ಞತಾಸ್ತುತಿ ಮಾಡುವುದಕ್ಕೆ ವರ್ಗ ವರ್ಗಗಳಾಗಿದ್ದರು.
וְרָאשֵׁי הַלְוִיִּם חֲשַׁבְיָה שֵֽׁרֵבְיָה וְיֵשׁוּעַ בֶּן־קַדְמִיאֵל וַאֲחֵיהֶם לְנֶגְדָּם לְהַלֵּל לְהוֹדוֹת בְּמִצְוַת דָּוִיד אִישׁ־הָאֱלֹהִים מִשְׁמָר לְעֻמַּת מִשְׁמָֽר׃
25 ಮತ್ತನ್ಯನೂ, ಬಕ್ಬುಕ್ಯನೂ, ಓಬದ್ಯನೂ, ಮೆಷುಲ್ಲಾಮನೂ, ಟಲ್ಮೋನನೂ, ಅಕ್ಕೂಬನೂ ಬೊಕ್ಕಸಗಳ ಬಾಗಿಲುಗಳನ್ನು ಕಾಯುವವರಾಗಿದ್ದರು.
מַתַּנְיָה וּבַקְבֻּֽקְיָה עֹבַדְיָה מְשֻׁלָּם טַלְמוֹן עַקּוּב שֹׁמְרִים שֽׁוֹעֲרִים מִשְׁמָר בַּאֲסֻפֵּי הַשְּׁעָרִֽים׃
26 ಯೋಚಾದಾಕನ ಮಗ ಯೇಷೂವನ ಮಗ ಯೋಯಾಕೀಮನ ದಿವಸಗಳಲ್ಲಿಯೂ; ರಾಜ್ಯಪಾಲನಾದ ನೆಹೆಮೀಯನ ದಿವಸಗಳಲ್ಲಿಯೂ; ನಿಯಮಶಾಸ್ತ್ರಿಯೂ, ಯಾಜಕನೂ ಆದ ಎಜ್ರನ ದಿವಸಗಳಲ್ಲಿಯೂ ಇವರು ಇದ್ದರು.
אֵלֶּה בִּימֵי יוֹיָקִים בֶּן־יֵשׁוּעַ בֶּן־יוֹצָדָק וּבִימֵי נְחֶמְיָה הַפֶּחָה וְעֶזְרָא הַכֹּהֵן הַסּוֹפֵֽר׃
27 ಯೆರೂಸಲೇಮಿನ ಗೋಡೆಯನ್ನು ಪ್ರತಿಷ್ಠೆ ಮಾಡುವಾಗ ಸ್ತುತಿಗಳಿಂದಲೂ, ಹಾಡುವುದರಿಂದಲೂ, ತಾಳಗಳಿಂದಲೂ, ವೀಣೆಗಳಿಂದಲೂ, ಕಿನ್ನರಿಗಳಿಂದಲೂ ಪ್ರತಿಷ್ಠೆಯನ್ನು ಸಂತೋಷವಾಗಿ ಆಚರಿಸುವುದಕ್ಕೆ ಲೇವಿಯರನ್ನು ಯೆರೂಸಲೇಮಿಗೆ ಬರಮಾಡುವ ನಿಮಿತ್ತವಾಗಿ ಅವರನ್ನು ಅವರ ಸಮಸ್ತ ಸ್ಥಳಗಳಲ್ಲಿ ಹುಡುಕಿದರು.
וּבַחֲנֻכַּת חוֹמַת יְרוּשָׁלַ͏ִם בִּקְשׁוּ אֶת־הַלְוִיִּם מִכׇּל־מְקוֹמֹתָם לַהֲבִיאָם לִֽירוּשָׁלָ͏ִם לַעֲשֹׂת חֲנֻכָּה וְשִׂמְחָה וּבְתוֹדוֹת וּבְשִׁיר מְצִלְתַּיִם נְבָלִים וּבְכִנֹּרֽוֹת׃
28 ಹಾಡುಗಾರರ ಮಕ್ಕಳು ಯೆರೂಸಲೇಮಿನ ಸುತ್ತಲಿರುವ ಬಯಲಿನಿಂದಲೂ, ನೆಟೋಫಾತ್ಯರ ಗ್ರಾಮಗಳಿಂದಲೂ,
וַיֵּאָסְפוּ בְּנֵי הַמְשֹׁרְרִים וּמִן־הַכִּכָּר סְבִיבוֹת יְרוּשָׁלַ͏ִם וּמִן־חַצְרֵי נְטֹפָתִֽי׃
29 ಬೇತ್ ಗಿಲ್ಗಾಲ್ ಊರಿಂದಲೂ, ಗೆಬದ ಅಜ್ಮಾವೆತಿನ ಹೊಲಗಳಿಂದಲೂ ಕೂಡಿಕೊಂಡರು. ಹಾಡುಗಾರರು ತಮಗೋಸ್ಕರ ಯೆರೂಸಲೇಮಿನ ಸುತ್ತಲೂ ಗ್ರಾಮಗಳನ್ನು ಕಟ್ಟಿಸಿಕೊಂಡಿದ್ದರು.
וּמִבֵּית הַגִּלְגָּל וּמִשְּׂדוֹת גֶּבַע וְעַזְמָוֶת כִּי חֲצֵרִים בָּנוּ לָהֶם הַמְשֹׁרְרִים סְבִיבוֹת יְרוּשָׁלָֽ͏ִם׃
30 ಯಾಜಕರೂ, ಲೇವಿಯರೂ ತಮ್ಮನ್ನು ಶುದ್ಧ ಮಾಡಿಕೊಂಡು ಜನರನ್ನೂ, ಬಾಗಿಲುಗಳನ್ನೂ, ಗೋಡೆಯನ್ನೂ ಶುದ್ಧ ಮಾಡಿದರು.
וַיִּֽטַּהֲרוּ הַכֹּהֲנִים וְהַלְוִיִּם וַֽיְטַהֲרוּ אֶת־הָעָם וְאֶת־הַשְּׁעָרִים וְאֶת־הַחוֹמָֽה׃
31 ಆಗ ನಾನು ಯೆಹೂದದ ಪ್ರಧಾನರನ್ನು ಗೋಡೆಯ ಮೇಲೆ ಬರಮಾಡಿ, ಸ್ತುತಿಸಲು ಎರಡು ಗುಂಪುಗಳನ್ನು ನೇಮಿಸಿದೆನು. ಒಂದು ಗುಂಪಿನವರು ಗೋಡೆಯ ಮೇಲೆ ಬಲಗಡೆಯಿಂದ ತಿಪ್ಪೆ ಬಾಗಿಲ ಕಡೆಗೆ ಹೋದರು.
וָאַעֲלֶה אֶת־שָׂרֵי יְהוּדָה מֵעַל לַחוֹמָה וָאַעֲמִידָה שְׁתֵּי תוֹדֹת גְּדוֹלֹת וְתַהֲלֻכֹת לַיָּמִין מֵעַל לַחוֹמָה לְשַׁעַר הָאַשְׁפֹּֽת׃
32 ಅವರ ಹಿಂಭಾಗದಲ್ಲಿ ಹೋಷಾಯನೂ, ಯೆಹೂದದ ಪ್ರಧಾನರಲ್ಲಿ ಅರ್ಧ ಜನರೂ,
וַיֵּלֶךְ אַחֲרֵיהֶם הוֹשַׁעְיָה וַחֲצִי שָׂרֵי יְהוּדָֽה׃
33 ಅಜರ್ಯನೂ, ಎಜ್ರನೂ, ಮೆಷುಲ್ಲಾಮನೂ,
וַעֲזַרְיָה עֶזְרָא וּמְשֻׁלָּֽם׃
34 ಯೆಹೂದನೂ, ಬೆನ್ಯಾಮೀನನೂ, ಶೆಮಾಯನೂ, ಯೆರೆಮೀಯನೂ;
יְהוּדָה וּבִנְיָמִן וּֽשְׁמַֽעְיָה וְיִרְמְיָֽה׃
35 ತುತೂರಿಗಳನ್ನು ಹಿಡಿಯುವ ಯಾಜಕರ ಮಕ್ಕಳಲ್ಲಿ ಆಸಾಫನ ಮಗ ಜಕ್ಕೂರನ ಮಗ, ಮೀಕಾಯನ ಮಗ, ಮತ್ತನ್ಯನ ಮಗ, ಶೆಮಾಯನ ಮಗ, ಯೋನಾತಾನನ ಮಗ ಜೆಕರ್ಯನೂ,
וּמִבְּנֵי הַכֹּהֲנִים בַּחֲצֹצְרוֹת זְכַרְיָה בֶן־יֽוֹנָתָן בֶּן־שְׁמַֽעְיָה בֶּן־מַתַּנְיָה בֶּן־מִיכָיָה בֶּן־זַכּוּר בֶּן־אָסָֽף׃
36 ದೇವರ ಮನುಷ್ಯನಾದ ದಾವೀದನ ಗೀತವಾದ್ಯಗಳನ್ನು ಹಿಡಿಯುವ ಜೆಕರೀಯನ ಸಹೋದರರಾದ ಶೆಮಾಯ, ಅಜರಯೇಲ್, ಮಿಲಲೈ, ಗಿಲಲೈ, ಮಾಯೈ, ನೆತನೆಯೇಲ್, ಯೆಹೂದ, ಹನಾನೀ ಎಂಬವರು ನಡೆದರು; ನಿಯಮಶಾಸ್ತ್ರಿಯಾದ ಎಜ್ರನು ಇವರ ಮುಂದೆ ನಡೆದನು.
וְֽאֶחָיו שְֽׁמַעְיָה וַעֲזַרְאֵל מִֽלְלַי גִּֽלְלַי מָעַי נְתַנְאֵל וִֽיהוּדָה חֲנָנִי בִּכְלֵי־שִׁיר דָּוִיד אִישׁ הָאֱלֹהִים וְעֶזְרָא הַסּוֹפֵר לִפְנֵיהֶֽם׃
37 ತಮಗೆ ಎದುರಾದ ಬುಗ್ಗೆಯ ಬಾಗಿಲಿಗೆ ಬಂದಾಗ ಗೋಡೆಯಲ್ಲಿ ಎತ್ತರವಾದ ದಾವೀದನ ಪಟ್ಟಣದ ಮೆಟ್ಟಿಲುಗಳಿಂದ ದಾವೀದನ ಅರಮನೆಯ ಮೇಲೆ ಪೂರ್ವದ ಕಡೆಗಿರುವ ನೀರಿನ ಬಾಗಿಲಿಗೆ ಹೋದರು.
וְעַל שַׁעַר הָעַיִן וְנֶגְדָּם עָלוּ עַֽל־מַעֲלוֹת עִיר דָּוִיד בַּֽמַּעֲלֶה לַחוֹמָה מֵעַל לְבֵית דָּוִיד וְעַד שַׁעַר הַמַּיִם מִזְרָֽח׃
38 ಸ್ತುತಿಸುವ ಮತ್ತೊಂದು ಭಜನಾ ಮಂಡಳಿ ಅವರಿಗೆದುರಾಗಿ ನಡೆದರು. ನಾನು ಅವರ ಹಿಂದೆ ನಡೆದೆನು. ಗೋಡೆಯ ಮೇಲೆ ಇದ್ದ ಅರ್ಧ ಜನರು ಬುರುಜುಗಳ ಗೋಪುರದ ಆಚೆಯಿಂದ ನಡೆದು, ಅಗಲವಾದ ಗೋಡೆಯನ್ನು,
וְהַתּוֹדָה הַשֵּׁנִית הַהוֹלֶכֶת לְמוֹאל וַאֲנִי אַחֲרֶיהָ וַחֲצִי הָעָם מֵעַל לְהַחוֹמָה מֵעַל לְמִגְדַּל הַתַּנּוּרִים וְעַד הַחוֹמָה הָרְחָבָֽה׃
39 ಎಫ್ರಾಯೀಮ್ ಬಾಗಿಲ ಮೇಲೆಯೂ, ಯೆಷಾನಾ ಬಾಗಿಲ ಮೇಲೆಯೂ, ಮೀನು ಬಾಗಿಲ ಮೇಲೆಯೂ ಹಾದು, ಹನನೇಲ್ ಗೋಪುರವನ್ನೂ, ಶತ ಗೋಪುರವನ್ನೂ ದಾಟಿ, ಕುರಿ ಬಾಗಿಲವರೆಗೆ ಬಂದು ಸೆರೆಮನೆಯ ಬಾಗಿಲ ಬಳಿಯಲ್ಲಿ ನಿಂತರು.
וּמֵעַל לְשַֽׁעַר־אֶפְרַיִם וְעַל־שַׁעַר הַיְשָׁנָה וְעַל־שַׁעַר הַדָּגִים וּמִגְדַּל חֲנַנְאֵל וּמִגְדַּל הַמֵּאָה וְעַד שַׁעַר הַצֹּאן וְעָמְדוּ בְּשַׁעַר הַמַּטָּרָֽה׃
40 ಸ್ತುತಿ ಮಾಡುವ ಎರಡು ಗುಂಪುಗಳೂ, ನಾನೂ, ನನ್ನ ಸಂಗಡ ಇದ್ದ ಅರ್ಧಮಂದಿ ಅಧಿಕಾರಿಗಳೂ ದೇವರ ಆಲಯದಲ್ಲಿ ನಿಂತಿದ್ದೆವು.
וַֽתַּעֲמֹדְנָה שְׁתֵּי הַתּוֹדֹת בְּבֵית הָאֱלֹהִים וַאֲנִי וַחֲצִי הַסְּגָנִים עִמִּֽי׃
41 ಆಗ ಯಾಜಕರಾದ ಎಲ್ಯಾಕೀಮನೂ, ಮಾಸೇಯನೂ, ಮಿನ್ಯಾಮೀನನೂ, ಮೀಕಾಯನೂ, ಎಲ್ಯೋವೇನೈನೂ, ಜೆಕರ್ಯನೂ, ಹನನ್ಯನೂ, ತುತೂರಿಗಳನ್ನು ಹಿಡಿದುಕೊಂಡವರೂ;
וְהַכֹּהֲנִים אֶלְיָקִים מַעֲשֵׂיָה מִנְיָמִין מִיכָיָה אֶלְיוֹעֵינַי זְכַרְיָה חֲנַנְיָה בַּחֲצֹצְרֽוֹת׃
42 ಮಾಸೇಯನೂ, ಶೆಮಾಯನೂ, ಎಲಿಯಾಜರನೂ, ಉಜ್ಜೀಯೂ, ಯೆಹೋಹಾನಾನನೂ, ಮಲ್ಕೀಯನೂ, ಏಲಾಮನೂ, ಏಜೆರನೂ, ತಮ್ಮ ಮೇಲ್ವಿಚಾರಕನಾದ ಯೆಜ್ರಾಹ್ಯನ ಸಂಗಡ ಹಾಡುಗಾರರು ಗಟ್ಟಿಯಾಗಿ ಹಾಡಿದರು.
וּמַעֲשֵׂיָה וּֽשְׁמַֽעְיָה וְאֶלְעָזָר וְעֻזִּי וִֽיהוֹחָנָן וּמַלְכִּיָּה וְעֵילָם וָעָזֶר וַיַּשְׁמִיעוּ הַמְשֹׁרְרִים וְיִֽזְרַחְיָה הַפָּקִֽיד׃
43 ಆ ದಿವಸದಲ್ಲಿ ಮಹಾಬಲಿಗಳನ್ನು ಅರ್ಪಿಸಿ, ದೇವರು ಅವರನ್ನು ಮಹಾ ಸಂತೋಷದಿಂದ ಸಂತೋಷಿಸಲು ಮಾಡಿದ್ದರಿಂದ ಅವರು ಸಂತೋಷಪಟ್ಟರು. ಇದಲ್ಲದೆ ಅವರು ತಮ್ಮ ಮಡದಿಮಕ್ಕಳೂಡನೆ ಮಹೋತ್ಸವ ಮಾಡಿದರು. ಆದ್ದರಿಂದ ಯೆರೂಸಲೇಮಿನ ಸಂತೋಷ ಧ್ವನಿಯು ಬಹು ದೂರಕ್ಕೆ ಕೇಳಿಸಿತು.
וַיִּזְבְּחוּ בַיּוֹם־הַהוּא זְבָחִים גְּדוֹלִים וַיִּשְׂמָחוּ כִּי הָאֱלֹהִים שִׂמְּחָם שִׂמְחָה גְדוֹלָה וְגַם הַנָּשִׁים וְהַיְלָדִים שָׂמֵחוּ וַתִּשָּׁמַע שִׂמְחַת יְרוּשָׁלַ͏ִם מֵרָחֽוֹק׃
44 ಅದೇ ಕಾಲದಲ್ಲಿ ಯಾಜಕರಿಗೋಸ್ಕರವೂ, ಲೇವಿಯರಿಗೋಸ್ಕರವೂ ಮೋಶೆಯ ನಿಯಮದಲ್ಲಿ ನೇಮಕವಾದ ಪ್ರಕಾರ, ಪಟ್ಟಣಗಳ ಹೊಲಗಳಿಂದ ಬರಬೇಕಾದ ಪಾಲುಗಳನ್ನು ಕೂಡಿಸುವ ಹಾಗೆ, ಬೊಕ್ಕಸಗಳನ್ನೂ, ಕಾಣಿಕೆಗಳನ್ನೂ, ಪ್ರಥಮ ಫಲಗಳನ್ನೂ, ಹತ್ತನೆಯ ಪಾಲುಗಳನ್ನೂ ಇರಿಸುವ ಉಗ್ರಾಣಗಳ ಮೇಲೆ ಪಾರುಪತ್ಯಗಾರರನ್ನು ನೇಮಿಸಿದರು. ಏಕೆಂದರೆ ಸೇವೆಮಾಡುತ್ತಿದ್ದ ಯಾಜಕರನ್ನೂ, ಲೇವಿಯರನ್ನೂ ಕುರಿತು ಯೆಹೂದದವರು ಬಹು ಸಂತೋಷಪಟ್ಟರು.
וַיִּפָּקְדוּ בַיּוֹם הַהוּא אֲנָשִׁים עַל־הַנְּשָׁכוֹת לָאוֹצָרוֹת לַתְּרוּמוֹת לָרֵאשִׁית וְלַמַּֽעַשְׂרוֹת לִכְנוֹס בָּהֶם לִשְׂדֵי הֶעָרִים מְנָאוֹת הַתּוֹרָה לַכֹּהֲנִים וְלַלְוִיִּם כִּי שִׂמְחַת יְהוּדָה עַל־הַכֹּהֲנִים וְעַל־הַלְוִיִּם הָעֹמְדִֽים׃
45 ಇದಲ್ಲದೆ ದಾವೀದನೂ, ಅವನ ಮಗನಾದ ಸೊಲೊಮೋನನೂ ಕೊಟ್ಟ ಆಜ್ಞೆಯ ಪ್ರಕಾರ ಹಾಡುಗಾರರೂ, ದ್ವಾರಪಾಲಕರೂ ತಮ್ಮ ದೇವರ ಕಾವಲನ್ನೂ, ಶುದ್ಧೀಕರಣದ ಕಾವಲನ್ನೂ ಕಾಯುತ್ತಿದ್ದರು.
וַֽיִּשְׁמְרוּ מִשְׁמֶרֶת אֱלֹֽהֵיהֶם וּמִשְׁמֶרֶת הַֽטׇּהֳרָה וְהַמְשֹׁרְרִים וְהַשֹּׁעֲרִים כְּמִצְוַת דָּוִיד שְׁלֹמֹה בְנֽוֹ׃
46 ಏಕೆಂದರೆ ದಾವೀದನ ಮತ್ತು ಆಸಾಫನ ಕಾಲದಲ್ಲಿಯೇ ದೇವರಿಗೆ ಸ್ತೋತ್ರವನ್ನೂ, ಕೃತಜ್ಞತೆಯನ್ನೂ ಹಾಡತಕ್ಕ ಹಾಡುಗಾರರಲ್ಲಿ ಮುಖ್ಯಸ್ಥರಿದ್ದರು.
כִּֽי־בִימֵי דָוִיד וְאָסָף מִקֶּדֶם (ראש) [רָאשֵׁי] הַמְשֹׁרְרִים וְשִׁיר־תְּהִלָּה וְהֹדוֹת לֵֽאלֹהִֽים׃
47 ಆದ್ದರಿಂದ ಜೆರುಬ್ಬಾಬೆಲನ ದಿವಸಗಳಲ್ಲಿಯೂ, ನೆಹೆಮೀಯನ ದಿವಸಗಳಲ್ಲಿಯೂ ಇಸ್ರಾಯೇಲರೆಲ್ಲರು ಹಾಡುಗಾರರಿಗೂ, ದ್ವಾರಪಾಲಕರಿಗೂ, ನಿತ್ಯದ ಕಟ್ಟಳೆಯಾದ ಅವರವರ ಪಾಲನ್ನು ಕೊಟ್ಟರು. ಇದಲ್ಲದೆ ಅವರು ಇತರ ಲೇವಿಯರಿಗೆ ಭಾಗವನ್ನು ಪ್ರತ್ಯೇಕವಾಗಿಟ್ಟರು ಮತ್ತು ಲೇವಿಯರು ಆರೋನನ ವಂಶಸ್ಥರಿಗೆ ಭಾಗವನ್ನು ಪ್ರತ್ಯೇಕವಾಗಿಟ್ಟರು.
וְכׇל־יִשְׂרָאֵל בִּימֵי זְרֻבָּבֶל וּבִימֵי נְחֶמְיָה נֹתְנִים מְנָיוֹת הַמְשֹׁרְרִים וְהַשֹּׁעֲרִים דְּבַר־יוֹם בְּיוֹמוֹ וּמַקְדִּשִׁים לַלְוִיִּם וְהַלְוִיִּם מַקְדִּשִׁים לִבְנֵי אַהֲרֹֽן׃

< ನೆಹೆಮೀಯನು 12 >