< ನಹೂಮನು 3 >

1 ರಕ್ತಮಯ ಪಟ್ಟಣಕ್ಕೆ ಕಷ್ಟ, ಅದೆಲ್ಲಾ ಸುಳ್ಳಿನಿಂದಲೂ, ಕಳ್ಳತನದಿಂದಲೂ ತುಂಬಿದೆ, ಕೊಳ್ಳೆಯನ್ನೂ ಬಿಡುವುದಿಲ್ಲ.
ה֖וֹי עִ֣יר דָּמִ֑ים כֻּלָּ֗הּ כַּ֤חַשׁ פֶּ֙רֶק֙ מְלֵאָ֔ה לֹ֥א יָמִ֖ישׁ טָֽרֶף׃
2 ಚಾವಟಿಗೆ, ಚಬುಕಿನ ಶಬ್ದವೂ, ಚಕ್ರಗಳ ಧಡಧಡನೆಯ ಶಬ್ದವೂ, ಕುದುರೆಗಳ ಕುಣಿದಾಟವೂ, ರಥಗಳ ಹಾರಾಟವೂ ಇದೆ.
ק֣וֹל שׁ֔וֹט וְק֖וֹל רַ֣עַשׁ אוֹפָ֑ן וְס֣וּס דֹּהֵ֔ר וּמֶרְכָּבָ֖ה מְרַקֵּדָֽה׃
3 ಸವಾರರು ಹತ್ತುತ್ತಾರೆ, ಈಟಿಗಳು ಥಳಥಳಿಸುತ್ತವೆ, ಖಡ್ಗಗಳು ಮಿಂಚುತ್ತವೆ, ಹತರಾದವರು ಬಹಳ; ಹೆಣಗಳ ರಾಶಿ; ಅಸಂಖ್ಯಾತ ಮೃತ ದೇಹಗಳು, ಶವಗಳ ಮೇಲೆ ತತ್ತರಿಸುತ್ತಿರುವ ಜನರು,
פָּרָ֣שׁ מַעֲלֶ֗ה וְלַ֤הַב חֶ֙רֶב֙ וּבְרַ֣ק חֲנִ֔ית וְרֹ֥ב חָלָ֖ל וְכֹ֣בֶד פָּ֑גֶר וְאֵ֥ין קֵ֙צֶה֙ לַגְּוִיָּ֔ה וְכָשְׁל֖וּ בִּגְוִיָּתָֽם׃
4 ಇದೆಲ್ಲವೂ ಆ ಒಬ್ಬ ವೇಶ್ಯೆಯ ಕಾಮತೃಷೆಯಿಂದಾಗಿ, ವೇಶ್ಯೆಯು ಲೆಕ್ಕವಿಲ್ಲದ ವೇಶ್ಯಾವಾಟಿಕೆಯ ಬಹಳ. ಅವಳು ತನ್ನ ಸೂಳೆತನಗಳಿಂದ ಜನಾಂಗಗಳನ್ನೂ, ತನ್ನ ಮಾಟಗಳಿಂದ ಗೋತ್ರಗಳನ್ನೂ ಗುಲಾಮರನ್ನಾಗಿ ಮಾಡಿಕೊಂಡಳಲ್ಲವೇ?
מֵרֹב֙ זְנוּנֵ֣י זוֹנָ֔ה ט֥וֹבַת חֵ֖ן בַּעֲלַ֣ת כְּשָׁפִ֑ים הַמֹּכֶ֤רֶת גּוֹיִם֙ בִּזְנוּנֶ֔יהָ וּמִשְׁפָּח֖וֹת בִּכְשָׁפֶֽיהָ׃
5 ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ. ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲಿಂದ ಎತ್ತಿ, ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ, ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ.
הִנְנִ֣י אֵלַ֗יִךְ נְאֻם֙ יְהוָ֣ה צְבָא֔וֹת וְגִלֵּיתִ֥י שׁוּלַ֖יִךְ עַל־פָּנָ֑יִךְ וְהַרְאֵיתִ֤י גוֹיִם֙ מַעְרֵ֔ךְ וּמַמְלָכ֖וֹת קְלוֹנֵֽךְ׃
6 ಅಸಹ್ಯವಾದವುಗಳನ್ನು ನಿನ್ನ ಮೇಲೆ ಹಾಕಿ, ನಿನ್ನನ್ನು ನೀಚಳನ್ನಾಗಿ ಮಾಡಿ, ನಿನ್ನನ್ನು ಪರಿಹಾಸ್ಯಕ್ಕೀಡುಮಾಡುವೆನು.
וְהִשְׁלַכְתִּ֥י עָלַ֛יִךְ שִׁקֻּצִ֖ים וְנִבַּלְתִּ֑יךְ וְשַׂמְתִּ֖יךְ כְּרֹֽאִי׃
7 ನಿನ್ನನ್ನು ನೋಡುವವರೆಲ್ಲರೂ ನಿನ್ನಿಂದ ಓಡಿಹೋಗಿ ಹೀಗೆ ಹೇಳುವರು, ‘ನಿನೆವೆ ಹಾಳಾಯಿತು, ಅದಕ್ಕೆ ಯಾರು ಚಿಂತೆಪಡುವರು?’ ನಿನ್ನನ್ನು ಆದರಿಸುವವರನ್ನು ನಾನು ಎಲ್ಲಿಂದ ಹುಡುಕಲಿ.”
וְהָיָ֤ה כָל־רֹאַ֙יִךְ֙ יִדּ֣וֹד מִמֵּ֔ךְ וְאָמַר֙ שָׁדְּדָ֣ה נִֽינְוֵ֔ה מִ֖י יָנ֣וּד לָ֑הּ מֵאַ֛יִן אֲבַקֵּ֥שׁ מְנַחֲמִ֖ים לָֽךְ׃
8 ನೈಲ್ ನದಿಯ ಬಳಿ ನೆಲೆಯಾಗಿದ್ದ ತೆಬೆಸ್ಸಿಗಿಂತ ನೀನು ಒಳ್ಳೆಯವಳೋ? ಅವಳ ಸುತ್ತಲೂ ನೀರಿತ್ತು. ನದಿ ಅವಳ ರಕ್ಷಣೆ, ನೀರು ಅವಳ ಗೋಡೆ.
הֲתֵֽיטְבִי֙ מִנֹּ֣א אָמ֔וֹן הַיֹּֽשְׁבָה֙ בַּיְאֹרִ֔ים מַ֖יִם סָבִ֣יב לָ֑הּ אֲשֶׁר־חֵ֣יל יָ֔ם מִיָּ֖ם חוֹמָתָֽהּ׃
9 ಕೂಷ್ ಮತ್ತು ಈಜಿಪ್ಟ್ ಅವಳ ಅಪಾರ ಬಲವಾಗಿದ್ದವು. ಪೂಟರೂ, ಲಿಬಿಯದವರೂ ಅವಳ ಸಹಾಯಕರಾಗಿದ್ದರು.
כּ֥וּשׁ עָצְמָ֛ה וּמִצְרַ֖יִם וְאֵ֣ין קֵ֑צֶה פּ֣וּט וְלוּבִ֔ים הָי֖וּ בְּעֶזְרָתֵֽךְ׃
10 ಆದರೆ ಅವಳು ಸೆರೆಯಾಗಿ ದೇಶಾಂತರಕ್ಕೆ ಹೋದಳು. ಅವಳ ಕೂಸುಗಳು ಸಹ ಎಲ್ಲಾ ಬೀದಿಗಳ ಮುಖ್ಯ ಸ್ಥಳಗಳಲ್ಲಿ ಅಪ್ಪಳಿಸಲಾಯಿತು. ಅವಳ ಪ್ರಧಾನರಿಗೋಸ್ಕರ ಚೀಟುಹಾಕಿದರು. ಅವಳ ಮಹನೀಯರೆಲ್ಲರನ್ನು ಸಂಕೋಲೆಗಳಿಂದ ಕಟ್ಟಿದರು.
גַּם־הִ֗יא לַגֹּלָה֙ הָלְכָ֣ה בַשֶּׁ֔בִי גַּ֧ם עֹלָלֶ֛יהָ יְרֻטְּשׁ֖וּ בְּרֹ֣אשׁ כָּל־חוּצ֑וֹת וְעַל־נִכְבַּדֶּ֙יהָ֙ יַדּ֣וּ גוֹרָ֔ל וְכָל־גְּדוֹלֶ֖יהָ רֻתְּק֥וּ בַזִּקִּֽים׃
11 ನೀನೂ ಸಹ ಅಮಲೇರಿ ಅಡಗಿಕೊಳ್ಳುವೆ; ನೀನೂ ಸಹ ಶತ್ರುವಿನ ನಿಮಿತ್ತ ಅಡಗಿಕೊಳ್ಳಲು ಆಶ್ರಯ ಸ್ಥಾನವನ್ನು ಹುಡುಕುವೆ.
גַּם־אַ֣תְּ תִּשְׁכְּרִ֔י תְּהִ֖י נַֽעֲלָמָ֑ה גַּם־אַ֛תְּ תְּבַקְשִׁ֥י מָע֖וֹז מֵאוֹיֵֽב׃
12 ನಿನ್ನ ಕೋಟೆಗಳೆಲ್ಲಾ ಮೊದಲನೆಯ ಮಾಗಿದ ಹಣ್ಣುಳ್ಳ ಅಂಜೂರದ ಗಿಡಗಳ ಹಾಗಿರುವುವು. ಅಲ್ಲಾಡಿಸಿದರೆ ಹಣ್ಣು ತಿನ್ನುವವನ ಬಾಯಿಗೆ ಬೀಳುವುದು.
כָּ֨ל־מִבְצָרַ֔יִךְ תְּאֵנִ֖ים עִם־בִּכּוּרִ֑ים אִם־יִנּ֕וֹעוּ וְנָפְל֖וּ עַל־פִּ֥י אוֹכֵֽל׃
13 ಇಗೋ, ನಿನ್ನ ಸೈನ್ಯಗಳನ್ನು ನೋಡು. ಅವರೆಲ್ಲರೂ ಮಹಿಳೆಯರೇ. ನಿನ್ನ ದೇಶದ ಬಾಗಿಲುಗಳು ನಿನ್ನ ಶತ್ರುಗಳಿಗೆ ವಿಶಾಲವಾಗಿ ತೆರೆದಿವೆ. ಬೆಂಕಿ ನಿನ್ನ ಅಗುಳಿಗಳನ್ನು ತಿಂದುಬಿಟ್ಟಿದೆ.
הִנֵּ֨ה עַמֵּ֤ךְ נָשִׁים֙ בְּקִרְבֵּ֔ךְ לְאֹ֣יְבַ֔יִךְ פָּת֥וֹחַ נִפְתְּח֖וּ שַׁעֲרֵ֣י אַרְצֵ֑ךְ אָכְלָ֥ה אֵ֖שׁ בְּרִיחָֽיִך׃
14 ಮುತ್ತಿಗೆಗೋಸ್ಕರ ನೀರನ್ನು ಸೇದು; ನಿನ್ನ ಬಲವಾದ ಕೋಟೆಗಳನ್ನು ಭದ್ರಮಾಡು; ಕೆಸರಿನಲ್ಲಿ ಸೇರು; ಮಣ್ಣನ್ನು ತುಳಿ; ಇಟ್ಟಿಗೆ ಅಚ್ಚನ್ನು ಹಿಡಿ.
מֵ֤י מָצוֹר֙ שַֽׁאֲבִי־לָ֔ךְ חַזְּקִ֖י מִבְצָרָ֑יִךְ בֹּ֧אִי בַטִּ֛יט וְרִמְסִ֥י בַחֹ֖מֶר הַחֲזִ֥יקִי מַלְבֵּֽן׃
15 ಅಲ್ಲೇ ಬೆಂಕಿ ನಿನ್ನನ್ನು ತಿನ್ನುವುದು; ಖಡ್ಗವು ನಿನ್ನನ್ನು ಕಡಿದುಬಿಡುವುದು; ಹುಲ್ಲು ಮೇಯುವ ಹುಳ ನಿನ್ನನ್ನು ತಿಂದುಬಿಡುವುದು; ಬಹುಮಂದಿಯಾಗು, ಮಿಡತೆಗಳಂತೆ ಬಹುಮಂದಿಯಾಗು, ಗುಂಪು ಮಿಡತೆಗಳಂತೆ
שָׁ֚ם תֹּאכְלֵ֣ךְ אֵ֔שׁ תַּכְרִיתֵ֣ךְ חֶ֔רֶב תֹּאכְלֵ֖ךְ כַּיָּ֑לֶק הִתְכַּבֵּ֣ד כַּיֶּ֔לֶק הִֽתְכַּבְּדִ֖י כָּאַרְבֶּֽה׃
16 ನಿನ್ನ ವರ್ತಕರನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಾಗಿ ಸಂಖ್ಯೆಯಲ್ಲಿ ಬೆಳೆಸಿದ್ದೀ. ಆದರೆ ಅವರು ಮಿಡತೆಗಳಂತೆ ದೇಶವನ್ನು ಸುಲಿದುಕೊಂಡು ಹಾರಿಹೋಗುವರು.
הִרְבֵּית֙ רֹֽכְלַ֔יִךְ מִכּוֹכְבֵ֖י הַשָּׁמָ֑יִם יֶ֥לֶק פָּשַׁ֖ט וַיָּעֹֽף׃
17 ನಿನ್ನ ಕಾವಲುಗಾರರು ಮಿಡತೆಗಳ ಹಾಗೆಯೂ, ನಿನ್ನ ಅಧಿಪತಿಗಳು ತಂಪಾದ ದಿವಸದಲ್ಲಿ ಬೇಲಿಗಳೊಳಗೆ ಇಳಿದುಕೊಳ್ಳುವ ದೊಡ್ಡ ಮಿಡತೆಗಳ ಹಾಗೆಯೂ ಇದ್ದಾರೆ. ಸೂರ್ಯೋದಯವಾಗುವಾಗ ಹಾರಿ ಹೋಗುತ್ತವೆ. ಆಗ ಅವು ಎಲ್ಲಿದ್ದಾವೆಂದು ಅವುಗಳ ಸ್ಥಳವು ತಿಳಿಯುವುದಿಲ್ಲ.
מִנְּזָרַ֙יִךְ֙ כָּֽאַרְבֶּ֔ה וְטַפְסְרַ֖יִךְ כְּג֣וֹב גֹּבָ֑י הַֽחוֹנִ֤ים בַּגְּדֵרוֹת֙ בְּי֣וֹם קָרָ֔ה שֶׁ֤מֶשׁ זָֽרְחָה֙ וְנוֹדַ֔ד וְלֹֽא־נוֹדַ֥ע מְקוֹמ֖וֹ אַיָּֽם׃
18 ಅಸ್ಸೀರಿಯದ ಅರಸನೇ, ನಿನ್ನ ಕುರುಬರು ತೂಕಡಿಸುತ್ತಾರೆ. ನಿನ್ನ ಪ್ರಧಾನರು ವಿಶ್ರಾಂತಿಗೈಯುತ್ತಿದ್ದಾರೆ. ಕೂಡಿಸುವವರು ಯಾರೂ ಇಲ್ಲದಂತೆ ನಿನ್ನ ಜನರೆಲ್ಲರೂ ಬೆಟ್ಟಗಳಲ್ಲಿ ಚದರಿಹೋಗಿದ್ದಾರೆ.
נָמ֤וּ רֹעֶ֙יךָ֙ מֶ֣לֶךְ אַשּׁ֔וּר יִשְׁכְּנ֖וּ אַדִּירֶ֑יךָ נָפֹ֧שׁוּ עַמְּךָ֛ עַל־הֶהָרִ֖ים וְאֵ֥ין מְקַבֵּֽץ׃
19 ನಿನ್ನ ಗಾಯಕ್ಕೆ ಮದ್ದಿಲ್ಲ, ನಿನ್ನ ಗಾಯ ಪ್ರಾಣನಾಶಕ. ನಿನ್ನ ಸುದ್ದಿಯನ್ನು ಕೇಳುವವರೆಲ್ಲರೂ ನಿನ್ನ ಪತನಕ್ಕಾಗಿ ಕೈ ತಟ್ಟುವರು. ಏಕೆಂದರೆ ನಿನ್ನ ಕೆಡುಕಿಗೆ ನಿತ್ಯವೂ ಗುರಿಯಾಗದವರು ಯಾರಿದ್ದಾರೆ?
אֵין־כֵּהָ֣ה לְשִׁבְרֶ֔ךָ נַחְלָ֖ה מַכָּתֶ֑ךָ כֹּ֣ל ׀ שֹׁמְעֵ֣י שִׁמְעֲךָ֗ תָּ֤קְעוּ כַף֙ עָלֶ֔יךָ כִּ֗י עַל־מִ֛י לֹֽא־עָבְרָ֥ה רָעָתְךָ֖ תָּמִֽיד׃

< ನಹೂಮನು 3 >