< ಮೀಕನು 5 >

1 ಬೇತ್ಲೆಹೇಮಿನಿಂದ ಒಬ್ಬ ಅಧಿಪತಿಯು ಸೈನ್ಯಗಳ ಪಟ್ಟಣವೇ, ಗುಂಪುಗಳಾಗಿ ಕೂಡಿಕೊಳ್ಳಿರಿ. ನಮ್ಮ ಮೇಲೆ ಮುತ್ತಿಗೆ ಹಾಕಿದ್ದಾರೆ. ಇಸ್ರಾಯೇಲಿನ ಅಧಿಪತಿಯನ್ನು ಕೋಲಿನಿಂದ ಕೆನ್ನೆಯ ಮೇಲೆ ಹೊಡೆಯುತ್ತಾರೆ.
עַתָּה֙ תִּתְגֹּדְדִ֣י בַת־גְּד֔וּד מָצֹ֖ור שָׂ֣ם עָלֵ֑ינוּ בַּשֵּׁ֙בֶט֙ יַכּ֣וּ עַֽל־הַלְּחִ֔י אֵ֖ת שֹׁפֵ֥ט יִשְׂרָאֵֽל׃ ס
2 ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗೋತ್ರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು. ಆತನ ಮೂಲವು ಪೂರ್ವದಿಂದಲೂ ಅನಾದಿ ಕಾಲದಿಂದಲೂ ಆದದ್ದು.
וְאַתָּ֞ה בֵּֽית־לֶ֣חֶם אֶפְרָ֗תָה צָעִיר֙ לִֽהְיֹות֙ בְּאַלְפֵ֣י יְהוּדָ֔ה מִמְּךָ֙ לִ֣י יֵצֵ֔א לִֽהְיֹ֥ות מֹושֵׁ֖ל בְּיִשְׂרָאֵ֑ל וּמֹוצָאֹתָ֥יו מִקֶּ֖דֶם מִימֵ֥י עֹולָֽם׃
3 ಆದ್ದರಿಂದ ಹೆರುವವಳು ಒಬ್ಬ ಮಗನನ್ನು ಹೆರುವ ಕಾಲದವರೆಗೂ ಇಸ್ರಾಯೇಲನ್ನು ಕೈಬಿಡಲಾಗುವುದು. ಆಗ ಅವನ ಸಹೋದರರಲ್ಲಿ ಉಳಿದವರು ಇಸ್ರಾಯೇಲರ ಬಳಿಗೆ ಹಿಂದಿರುಗುವರು.
לָכֵ֣ן יִתְּנֵ֔ם עַד־עֵ֥ת יֹולֵדָ֖ה יָלָ֑דָה וְיֶ֣תֶר אֶחָ֔יו יְשׁוּב֖וּן עַל־בְּנֵ֥י יִשְׂרָאֵֽל׃
4 ಆತನು ಯೆಹೋವ ದೇವರ ಬಲದಲ್ಲಿಯೂ ತನ್ನ ದೇವರಾದ ಯೆಹೋವ ದೇವರ ಹೆಸರಿನ ಘನತೆಯಲ್ಲಿಯೂ ನಿಂತುಕೊಂಡು ತನ್ನ ಮಂದೆಯನ್ನು ಮೇಯಿಸುವನು. ಅವರು ನೆಲೆಯಾಗಿರುವರು, ಆತನ ಘನತೆಯು ಭೂಮಿಯ ಅಂತ್ಯಗಳ ಮಟ್ಟಿಗೂ ತಲುಪುವುದು.
וְעָמַ֗ד וְרָעָה֙ בְּעֹ֣ז יְהוָ֔ה בִּגְאֹ֕ון שֵׁ֖ם יְהוָ֣ה אֱלֹהָ֑יו וְיָשָׁ֕בוּ כִּֽי־עַתָּ֥ה יִגְדַּ֖ל עַד־אַפְסֵי־אָֽרֶץ׃
5 ಆತನೇ ಅವರ ಸಮಾಧಾನವಾಗಿರುವನು. ಅಸ್ಸೀರಿಯದವನು ನಮ್ಮ ನಾಡಿಗೆ ಮುತ್ತಿಗೆ ಹಾಕುವಾಗ ನಮ್ಮ ಕೋಟೆಗಳ ಮೂಲಕ ಸೈನ್ಯವಾಗಿ ಹೋಗುವಾಗ ನಾವು ಅವನಿಗೆ ವಿರೋಧವಾಗಿ ಏಳು ಕುರುಬರನ್ನೂ ಎಂಟು ಸೇನಾಪತಿಗಳನ್ನೂ ಎಬ್ಬಿಸುವೆವು.
וְהָיָ֥ה זֶ֖ה שָׁלֹ֑ום אַשּׁ֣וּר ׀ כִּֽי־יָבֹ֣וא בְאַרְצֵ֗נוּ וְכִ֤י יִדְרֹךְ֙ בְּאַרְמְנֹתֵ֔ינוּ וַהֲקֵמֹ֤נוּ עָלָיו֙ שִׁבְעָ֣ה רֹעִ֔ים וּשְׁמֹנָ֖ה נְסִיכֵ֥י אָדָֽם׃
6 ಅವರು ಅಸ್ಸೀರಿಯ ದೇಶವನ್ನು ಖಡ್ಗದಿಂದಲೂ ನಿಮ್ರೋದನ ದೇಶವನ್ನು ಹಿಡಿದ ಖಡ್ಗದಿಂದಲೂ ಆಳುವರು. ಅಸ್ಸೀರಿಯವು ನಮ್ಮ ದೇಶದಲ್ಲಿ ಬಂದು ನಮ್ಮ ಪ್ರದೇಶವನ್ನು ಮುತ್ತಿಗೆ ಹಾಕಿ ಪ್ರಾಂತಗಳಲ್ಲಿ ನಡೆಯುವಾಗ ಆತನು ನಮ್ಮನ್ನು ತಪ್ಪಿಸುವನು.
וְרָע֞וּ אֶת־אֶ֤רֶץ אַשּׁוּר֙ בַּחֶ֔רֶב וְאֶת־אֶ֥רֶץ נִמְרֹ֖ד בִּפְתָחֶ֑יהָ וְהִצִּיל֙ מֵֽאַשּׁ֔וּר כִּֽי־יָבֹ֣וא בְאַרְצֵ֔נוּ וְכִ֥י יִדְרֹ֖ךְ בִּגְבוּלֵֽנוּ׃ ס
7 ಇದಲ್ಲದೆ ಯಾಕೋಬನ ಶೇಷವು ಅನೇಕ ಜನಾಂಗಳ ಮಧ್ಯದಲ್ಲಿ ಯೆಹೋವ ದೇವರಿಂದ ಬಂದ ಮಂಜಿನ ಹಾಗೆಯೂ ಹುಲ್ಲಿನ ಮೇಲೆ ಜಡಿಮಳೆಯ ಹಾಗೆಯೂ ಇರುವುದು. ಅದು ಮನುಷ್ಯರಿಗೋಸ್ಕರ ಆತುಕೊಳ್ಳುವುದಿಲ್ಲ, ಮನುಷ್ಯ ಮಕ್ಕಳಿಗಾಗಿ ಕಾದುಕೊಳ್ಳುವುದಿಲ್ಲ.
וְהָיָ֣ה ׀ שְׁאֵרִ֣ית יַעֲקֹ֗ב בְּקֶ֙רֶב֙ עַמִּ֣ים רַבִּ֔ים כְּטַל֙ מֵאֵ֣ת יְהוָ֔ה כִּרְבִיבִ֖ים עֲלֵי־עֵ֑שֶׂב אֲשֶׁ֤ר לֹֽא־יְקַוֶּה֙ לְאִ֔ישׁ וְלֹ֥א יְיַחֵ֖ל לִבְנֵ֥י אָדָֽם׃
8 ಯಾಕೋಬನ ಜನಶೇಷವು ದೇಶದೇಶಗಳೊಳಗೆ ಅನೇಕ ಜನಾಂಗಗಳ ಮಧ್ಯದಲ್ಲಿ, ಅಡವಿಯ ಮೃಗಗಳಲ್ಲಿ ಸಿಂಹದಂತೆಯೂ ಕುರಿಮಂದೆಗಳಲ್ಲಿ ಪ್ರಾಯದ ಸಿಂಹದಂತೆಯೂ ಇರುವುದು. ಅದು ಹಾದುಹೋದರೆ ಇಳಿದುಬಿಟ್ಟು ಹರಿದುಬಿಡುತ್ತದೆ, ಯಾರೂ ಬಿಡಿಸಲಾರರು,
וְהָיָה֩ שְׁאֵרִ֨ית יַעֲקֹ֜ב בַּגֹּויִ֗ם בְּקֶ֙רֶב֙ עַמִּ֣ים רַבִּ֔ים כְּאַרְיֵה֙ בְּבַהֲמֹ֣ות יַ֔עַר כִּכְפִ֖יר בְּעֶדְרֵי־צֹ֑אן אֲשֶׁ֧ר אִם עָבַ֛ר וְרָמַ֥ס וְטָרַ֖ף וְאֵ֥ין מַצִּֽיל׃
9 ನಿನ್ನ ಕೈ ನಿನ್ನ ವೈರಿಗಳೆಲ್ಲರ ಮೇಲೆ ಉನ್ನತವಾಗಿರುವುದು. ನಿನ್ನ ಶತ್ರುಗಳೆಲ್ಲರು ನಾಶಹೊಂದುವರು.
תָּרֹ֥ם יָדְךָ֖ עַל־צָרֶ֑יךָ וְכָל־אֹיְבֶ֖יךָ יִכָּרֵֽתוּ׃ פ
10 ಯೆಹೋವ ದೇವರು ಹೀಗೆ ಘೋಷಿಸುತ್ತಾರೆ: “ಆ ದಿವಸದಲ್ಲಿ, ನಾನು ನಿನ್ನ ಮಧ್ಯದೊಳಗಿರುವ ನಿನ್ನ ಕುದುರೆಗಳನ್ನು ಕಡಿದುಬಿಟ್ಟು ನಿನ್ನ ರಥಗಳನ್ನು ನಾಶಮಾಡುವೆನು.
וְהָיָ֤ה בַיֹּום־הַהוּא֙ נְאֻם־יְהוָ֔ה וְהִכְרַתִּ֥י סוּסֶ֖יךָ מִקִּרְבֶּ֑ךָ וְהַאֲבַדְתִּ֖י מַרְכְּבֹתֶֽיךָ׃
11 ನಿನ್ನ ದೇಶದ ಪಟ್ಟಣಗಳನ್ನು ನಾಶಮಾಡಿಬಿಟ್ಟು ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು.
וְהִכְרַתִּ֖י עָרֵ֣י אַרְצֶ֑ךָ וְהָרַסְתִּ֖י כָּל־מִבְצָרֶֽיךָ׃
12 ನಿನ್ನ ಮಂತ್ರತಂತ್ರವನ್ನು ನಾಶಮಾಡುವೆನು; ಕಣಿ ಹೇಳುವವರು ನಿನಗೆ ಇನ್ನು ಇರುವುದಿಲ್ಲ.
וְהִכְרַתִּ֥י כְשָׁפִ֖ים מִיָּדֶ֑ךָ וּֽמְעֹונְנִ֖ים לֹ֥א יִֽהְיוּ־לָֽךְ׃
13 ನಿನ್ನ ಕೆತ್ತಿದ ವಿಗ್ರಹಗಳನ್ನೂ ನಿಂತಿರುವ ನಿನ್ನ ಪ್ರತಿಮೆಗಳನ್ನೂ ಸಹ ನಿನ್ನ ಮಧ್ಯದೊಳಗಿಂದ ಕಡಿದುಬಿಡುವೆನು. ಇನ್ನು ನಿನ್ನ ಸ್ವಂತ ಕೈಗಳು ರೂಪಿಸಿದ್ದನ್ನು ನೀನು ಆರಾಧಿಸದಂತೆ ಮಾಡುವೆನು.
וְהִכְרַתִּ֧י פְסִילֶ֛יךָ וּמַצֵּבֹותֶ֖יךָ מִקִּרְבֶּ֑ךָ וְלֹֽא־תִשְׁתַּחֲוֶ֥ה עֹ֖וד לְמַעֲשֵׂ֥ה יָדֶֽיךָ׃
14 ನಿನ್ನ ಅಶೇರ ಸ್ತಂಭಗಳನ್ನು ನಿನ್ನ ಮಧ್ಯದೊಳಗಿಂದ ಕಿತ್ತುಹಾಕಿ ನಿನ್ನ ಪಟ್ಟಣಗಳನ್ನು ನಾಶಮಾಡುವೆನು.
וְנָתַשְׁתִּ֥י אֲשֵׁירֶ֖יךָ מִקִּרְבֶּ֑ךָ וְהִשְׁמַדְתִּ֖י עָרֶֽיךָ׃
15 ನನಗೆ ಕಿವಿಗೊಡದೆ ಇದ್ದ ಜನಾಂಗಗಳಿಗೆ ಕೋಪದಿಂದಲೂ ಉಗ್ರದಿಂದಲೂ ಮುಯ್ಯಿಗೆ ಮುಯ್ಯಿತೀರಿಸುವೆನು.”
וְעָשִׂ֜יתִי בְּאַ֧ף וּבְחֵמָ֛ה נָקָ֖ם אֶת־הַגֹּויִ֑ם אֲשֶׁ֖ר לֹ֥א שָׁמֵֽעוּ׃ ס

< ಮೀಕನು 5 >