< ಮತ್ತಾಯನು 26 >
1 ಯೇಸು ಈ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ ತಮ್ಮ ಶಿಷ್ಯರಿಗೆ,
मंग येशुनी ह्या सर्वा गोष्टी शिकाडानं संपाडानंतर आपला शिष्यसले सांगं,
2 “ಎರಡು ದಿವಸಗಳಾದ ಮೇಲೆ ಪಸ್ಕಹಬ್ಬ ಇರುವುದೆಂದು ನೀವು ಬಲ್ಲಿರಿ. ಆಗ ಮನುಷ್ಯಪುತ್ರನಾದ ನನ್ನನ್ನು ಶಿಲುಬೆಗೆ ಹಾಕಲು ಹಿಡಿದುಕೊಡುವರು,” ಎಂದರು.
तुमले माहित शे की, दोन दिन नंतर वल्हांडण सण शे अनी मनुष्यना पोऱ्याले क्रुसखांबवर खियाकरता धरी देतीन.
3 ಆಗ ಮುಖ್ಯಯಾಜಕರೂ ಜನರ ಹಿರಿಯರೂ ಒಟ್ಟಾಗಿ ಸೇರಿ, ಕಾಯಫನೆಂಬ ಮಹಾಯಾಜಕನ ಅರಮನೆಗೆ ಬಂದು
तवय कैफा नावना प्रमुख याजकना वाडामा मुख्य याजक अनं वडील लोके गोया व्हयनात,
4 ತಾವು ಕುಯುಕ್ತಿಯಿಂದ ಯೇಸುವನ್ನು ಹಿಡಿದು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.
अनी येशुले गुपचुप धरीन मारी टाकानी योजना त्यासनी बनाडी.
5 ಆದರೆ ಅವರು, “ಜನರಲ್ಲಿ ಗದ್ದಲವಾದೀತು, ಹಬ್ಬದಲ್ಲಿ ಬೇಡ,” ಎಂದರು.
“लोकसमा दंगल व्हवाले नको म्हणीन हाई सणना दिनमा नही करानं, अस त्यासनी सांगं.”
6 ಯೇಸು ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿದ್ದರು.
जवय येशु बेथानी गावले जो पहिले कोडरोगी व्हता त्या शिमोनना घर व्हता.
7 ಯೇಸು ಅಲ್ಲಿ ಊಟಕ್ಕೆ ಕುಳಿತಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಸುಗಂಧ ತೈಲದ ಭರಣಿಯೊಂದಿಗೆ ಯೇಸುವಿನ ಬಳಿಗೆ ಬಂದು, ಅದನ್ನು ಅವರ ತಲೆಯ ಮೇಲೆ ಸುರಿದಳು.
मंग तो जेवाले बठेल व्हता तवय एक बाई महागडं सुगंधी तेल संगमरवरना भांडामा लई वनी अनी तिनी ते भांडं फोडीन तेल त्याना डोकावर वती दिधं.
8 ಯೇಸುವಿನ ಶಿಷ್ಯರು ಇದನ್ನು ಕಂಡು ಕೋಪಗೊಂಡು, “ಏಕೆ ಈ ವ್ಯರ್ಥ ಖರ್ಚು?
हाई दखीन त्याना शिष्य संतापिन बोलनात, हाई का बर नासाडं?
9 ಈ ತೈಲವನ್ನು ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ?” ಎಂದರು.
हाई “ईकीन बराच पैसा भेटतात अनी त्या गरीबसले देता येतात!”
10 ಯೇಸು ಅದನ್ನು ತಿಳಿದವರಾಗಿ ಅವರಿಗೆ, “ನೀವು ಏಕೆ ಈ ಸ್ತ್ರೀಗೆ ತೊಂದರೆಪಡಿಸುತ್ತೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ.
येशुने हाई दखीन त्यासले सांगं, हाई बाईले का बर त्रास देतस? तिनी तर मनाकरता चांगल कार्य करेल शे.
11 ಬಡವರು ಯಾವಾಗಲೂ ನಿಮ್ಮ ಸಂಗಡ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಸಂಗಡ ಇರುವುದಿಲ್ಲ.
गरीब कायमना तुमना जोडे शेतस, पण मी कायमना तुमना जोडे शे अस नही.
12 ಈಕೆ ಈ ತೈಲವನ್ನು ನನ್ನ ದೇಹದ ಮೇಲೆ ಸುರಿದದ್ದರಿಂದ, ನನ್ನ ಶವಸಂಸ್ಕಾರಕ್ಕೆ ಸಿದ್ಧಮಾಡಿದ್ದಾಳೆ.
तिनी मना शरिरवर सुगंधी तेल वतीन मना उत्तरकार्यनी तयारी पहिलेच करी दिधी.
13 ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಲೋಕದಾದ್ಯಂತ ಎಲ್ಲೆಲ್ಲಿ ಸುವಾರ್ತೆಯು ಸಾರಲಾಗುವದೋ, ಅಲ್ಲೆಲ್ಲಾ ಈ ಸ್ತ್ರೀಯು ಮಾಡಿದ್ದನ್ನು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳಲಾಗುವುದು,” ಎಂದರು.
मी तुमले सत्य सांगस की, सर्व जगमा जठे जठे सुवार्ता सांगतीन, तठे तठे तिनी जे सत्कर्म करेल शे त्यानी आठवण करतीन.
14 ಆಗ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದ ಇಸ್ಕರಿಯೋತ ಎಂಬುವನು ಮುಖ್ಯಯಾಜಕರ ಬಳಿಗೆ ಹೋಗಿ,
मंग बारा शिष्यसमधला एक यहूदा इस्कर्योत मुख्य याजकसकडे गया.
15 “ನಾನು ಆತನನ್ನು ನಿಮಗೆ ಒಪ್ಪಿಸಿಕೊಟ್ಟರೆ ನೀವು ನನಗೆ ಏನು ಕೊಡುತ್ತೀರಿ?” ಎಂದನು. ಆಗ ಅವರು ಅವನಿಗೆ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಎಣಿಸಿ ಕೊಟ್ಟರು.
अनी त्यानी सांगं, मी येशुले धरीन तुमले सोपी दिसु तर माले काय दिशात? मंग त्यासनी त्याले तिस रूपया दिधात.
16 ಅಂದಿನಿಂದ ಯೂದನು ಯೇಸುವನ್ನು ಹಿಡಿದುಕೊಡುವುದಕ್ಕೆ ಸಂದರ್ಭವನ್ನು ಕಾಯುತ್ತಿದ್ದನು.
तवयपाईन यहूदा त्याले कसं धरी देवाणी यानी संधी दखु लागना.
17 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀವು ಪಸ್ಕದ ಊಟ ಮಾಡಲು ನಾವು ನಿಮಗಾಗಿ ಎಲ್ಲಿ ಸಿದ್ಧಮಾಡಬೇಕೆಂದು ಬಯಸುತ್ತೀರಿ?” ಎಂದು ಕೇಳಿದರು.
नंतर बेखमीर भाकरीना सणना पहिला दिन शिष्य येशुकडे ईसन बोलणात, आपलाकरता वल्हांडण सणना जेवणनी तयारी आम्हीन कोठे करानी अशी तुमनी ईच्छा शे?
18 ಅದಕ್ಕೆ ಯೇಸು, “ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ, ‘ನನ್ನ ಸಮಯವು ಸಮೀಪವಾಗಿದೆ. ನನ್ನ ಶಿಷ್ಯರ ಜೊತೆಗೆ ನಿನ್ನ ಮನೆಯಲ್ಲಿ ಪಸ್ಕವನ್ನು ಆಚರಿಸುತ್ತೇನೆಂದು ಬೋಧಕರು ಕೇಳುತ್ತಾರೆ’ ಎಂಬುದಾಗಿ ಅವನಿಗೆ ಹೇಳಿರಿ,” ಎಂದರು.
त्यानी सांगं, नगरमा एक माणुसकडे जाईन त्याले सांगा की, गुरू म्हणस, मनी येळ जोडे येल शे; माले मना शिष्यसनासंगे तुना आठे वल्हांडण सण कराना शे.
19 ಯೇಸು ಅವರಿಗೆ ಆಜ್ಞಾಪಿಸಿದಂತೆ ಶಿಷ್ಯರು ಪಸ್ಕವನ್ನು ಸಿದ್ಧಮಾಡಿದರು.
मंग येशुनी सांगेल प्रमाणे शिष्यसनी जाईन वल्हांडणना जेवणनी तयारी करी.
20 ಸಂಜೆಯಾದಾಗ, ಯೇಸು ಹನ್ನೆರಡು ಮಂದಿ ಶಿಷ್ಯರೊಂದಿಗೆ ಊಟಕ್ಕೆ ಕುಳಿತುಕೊಂಡರು.
संध्याकाय व्हयनी तवय तो बारा शिष्यससंगे जेवणले बठना.
21 ಅವರು ಊಟಮಾಡುತ್ತಿದ್ದಾಗ ಯೇಸು, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಮಾಡುವನು,” ಎಂದರು.
जवय त्या जेवण करी राहींतात तवय येशुनी सांगं, मी तुमले सत्य सांगस, तुमनामधला एकजण माले धरी दि.
22 ಆಗ ಅವರು ದುಃಖಪಟ್ಟು, “ಕರ್ತನೇ, ಅವನು ನಾನಲ್ಲವಲ್ಲಾ?” ಎಂದು ಅವರಲ್ಲಿ ಪ್ರತಿಯೊಬ್ಬರೂ ಯೇಸುವನ್ನು ಕೇಳಲಾರಂಭಿಸಿದರು.
तवय त्या भलताच नाराज व्हयनात अनी त्या एक एक करीसन त्याले ईचारू लागनात, “प्रभुजी, मी शे, का तो?”
23 ಅದಕ್ಕೆ ಯೇಸು ಉತ್ತರವಾಗಿ, “ನನ್ನ ಸಂಗಡ ಪಾತ್ರೆಯಲ್ಲಿ ಕೈ ಅದ್ದಿದವನೇ ನನಗೆ ದ್ರೋಹ ಮಾಡುವನು.
येशुनी उत्तर दिधं, ज्यानी मनासंगे ताटमा हात टाकेल शे, तोच माले धरी दि.
24 ಮನುಷ್ಯಪುತ್ರನಾದ ನನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತೇನೆ. ಆದರೆ ಮನುಷ್ಯಪುತ್ರನಾದ ನನಗೆ ಯಾವನು ದ್ರೋಹಬಗೆಯುತ್ತಾನೋ ಆ ಮನುಷ್ಯನಿಗೆ ಕಷ್ಟ! ಆ ಮನುಷ್ಯನು ಹುಟ್ಟದೆ ಹೋಗಿದ್ದರೆ ಅವನಿಗೆ ಎಷ್ಟೋ ಒಳ್ಳೆಯದಾಗುತ್ತಿತ್ತು,” ಎಂದರು.
मनुष्यना पोऱ्याबद्दल जस लिखेल शे तसा तो जाई खरा, पण जो मनुष्यना पोऱ्याले धरी दि, त्या माणुसना धिक्कार असो, तो माणुस जन्मले नही येता तर ते त्याले चांगलं व्हतं!
25 ಆಗ ಯೇಸುವನ್ನು ಹಿಡಿದುಕೊಡಬೇಕೆಂದಿದ್ದ ಯೂದನು, “ಗುರುವೇ, ಅವನು ನಾನಲ್ಲವಲ್ಲಾ?” ಎಂದನು. “ನೀನೇ ಹೇಳಿದ್ದೀ,” ಎಂದು ಯೇಸು ಉತ್ತರಕೊಟ್ಟರು.
तवय त्याले धरी देणारा यहुदानी त्याले ईचारं, “गुरजी” मी शे का तो? येशुनी त्याले उत्तर दिधं, तु म्हणस तसच.
26 ಅವರು ಊಟಮಾಡುತ್ತಿರುವಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದನ್ನು ಆಶೀರ್ವದಿಸಿ, ಮುರಿದು ತಮ್ಮ ಶಿಷ್ಯರಿಗೆ ಕೊಟ್ಟು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ,” ಎಂದರು.
मंग त्या जेवण करी राहींतात तवय येशुनी भाकर लिधी अनं उपकार मानीन तोडी अनी शिष्यसले दिसन सांगं, “हाई ल्या अनी खा, हाई मनं शरीर शे,”
27 ಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತುತಿ ಮಾಡಿ ಅವರಿಗೆ ಕೊಟ್ಟು, “ನೀವೆಲ್ಲರೂ ಇದರಲ್ಲಿರುವುದನ್ನು ಕುಡಿಯಿರಿ.
अनी त्यानी प्याला लिधा अनी उपकार मानीन त्यासले दिसन सांगं, “तुम्हीन सर्वा यानामातीन प्या,”
28 ಇದು ಬಹುಜನರ ಪಾಪಗಳ ಪರಿಹಾರಕ್ಕೋಸ್ಕರ ಸುರಿಸಲಾಗುವ ಹೊಸ ಒಡಂಬಡಿಕೆಯ ನನ್ನ ರಕ್ತ.
हाई मना “करारनं रक्त, शे. पापसनी क्षमा व्हवाकरता सर्वासना करता वताई जाई राहिना शे.
29 ನಾನು ನಿಮಗೆ ಹೇಳುವುದೇನೆಂದರೆ, ಇಂದಿನಿಂದ ನನ್ನ ತಂದೆಯ ರಾಜ್ಯದಲ್ಲಿ ನಿಮ್ಮೊಂದಿಗೆ ಹೊಸದಾಗಿ ಕುಡಿಯುವ ಆ ದಿನದವರೆಗೆ ನಾನು ಈ ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲ,” ಎಂದರು.
मी तुमले सत्य सांगस की, मी तोपावत द्राक्षवेलना रस पेवाव नही जोपावत मना पित्याना राज्यमा नवा द्राक्षरस पितस नही.”
30 ಬಳಿಕ ಅವರೆಲ್ಲರು ಒಂದು ಕೀರ್ತನೆ ಹಾಡಿ ಓಲಿವ್ ಗುಡ್ಡಕ್ಕೆ ಹೊರಟು ಹೋದರು.
मंग देवनं गानं म्हणीसन त्या जैतुनना डोंगरकडे निंघी गया.
31 ಆಗ ಯೇಸು ಅವರಿಗೆ, “ನೀವೆಲ್ಲರೂ ಈ ರಾತ್ರಿ ನನ್ನನ್ನು ಬಿಟ್ಟು ಓಡಿಹೋಗುವಿರಿ. ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: “‘ಏಕೆಂದರೆ ನಾನು ಕುರುಬನನ್ನು ಹೊಡೆಯುವೆನು, ಮಂದೆಯ ಕುರಿಗಳು ಚದರಿಹೋಗುವುವು,’
मंग येशु त्यासले बोलना, “तुम्हीन रातले सर्वा माले सोडीन पळी जाशात, कारण शास्त्र अस सांगस की, ‘देव मेंढपायले मारी टाकी अनी कळपमाधला मेंढरसनी दाणादाण व्हई जाई.’
32 ಆದರೆ ನಾನು ಎದ್ದ ಮೇಲೆ, ನಿಮಗಿಂತ ಮುಂದಾಗಿ ಗಲಿಲಾಯಕ್ಕೆ ಹೋಗುವೆನು,” ಎಂದು ಹೇಳಿದರು.
पण मी जिवत व्हवानंतर तुमना पहिले गालीलमा जासु.”
33 ಆಗ ಪೇತ್ರನು ಯೇಸುವಿಗೆ, “ಎಲ್ಲರೂ ನಿಮ್ಮನ್ನು ಬಿಟ್ಟು ಹೋದರೂ ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ,” ಎಂದನು.
पेत्र येशुले बोलना, “सर्वा तुले सोडीन पळतीन पण मी तुले सोडीन पळाव नही!”
34 ಯೇಸು ಅವನಿಗೆ, “ಈ ರಾತ್ರಿಯಲ್ಲಿ ಹುಂಜ ಕೂಗುವುದಕ್ಕಿಂತ ಮುಂಚೆ, ನೀನು ಮೂರು ಸಾರಿ ನನ್ನನ್ನು ನಿರಾಕರಿಸುವೆ ಎಂದು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
येशु बोलना, “मी तुले सत्य सांगस की, आज रातले कोंबडा कोकावाना पहिले तु माले तिनदाव नाकारशी.”
35 ಅದಕ್ಕೆ ಪೇತ್ರನು ಯೇಸುವಿಗೆ, “ನಾನು ನಿಮ್ಮೊಂದಿಗೆ ಸಾಯಬೇಕಾದರೂ ನಿಮ್ಮನ್ನು ನಿರಾಕರಿಸುವುದೇ ಇಲ್ಲ,” ಎಂದನು. ಅದರಂತೆಯೇ ಉಳಿದ ಶಿಷ್ಯರೆಲ್ಲರೂ ಹೇಳಿದರು.
पेत्र त्याले बोलना, “तुनासंगे माले मरणं पडनं तरी मी तुमले नाकारावुच नही!” अनी बाकीना शिष्यसनी पण तसच सांगं.
36 ತರುವಾಯ ಯೇಸು ತಮ್ಮ ಶಿಷ್ಯರ ಸಂಗಡ ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದು ಅವರಿಗೆ, “ನಾನು ಅಲ್ಲಿಗೆ ಹೋಗಿ ಪ್ರಾರ್ಥಿಸುವವರೆಗೆ ನೀವು ಇಲ್ಲೇ ಕುಳಿತುಕೊಳ್ಳಿರಿ,” ಎಂದರು.
नंतर येशु त्याना शिष्यससंगे गेथशेमाने नावना बगीच्यामा वना, “मी पुढे जाईन प्रार्थना करस तोपावत तुम्हीन आठे बठा.”
37 ಯೇಸು ತಮ್ಮ ಜೊತೆಯಲ್ಲಿ ಪೇತ್ರನನ್ನೂ ಜೆಬೆದಾಯನ ಇಬ್ಬರು ಪುತ್ರರನ್ನೂ ಕರೆದುಕೊಂಡು ಹೋಗಿ, ದುಃಖಿಸುವುದಕ್ಕೂ ಬಹು ವ್ಯಥೆಪಡುವುದಕ್ಕೂ ಆರಂಭಿಸಿದರು.
मंग त्यानी पेत्र अनं जब्दीना दोन्ही पोऱ्या यासले संगे लिधं अनं तो खुपच खिन्न अनं कष्टी व्हवाले लागना.
38 ಯೇಸು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ತೀವ್ರವಾದ ದುಃಖಕ್ಕೆ ಒಳಗಾಗಿದೆ. ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರಿ,” ಎಂದರು.
तवय तो त्यासले बोलना, “मना जीव” मरणप्राय, खुपच खिन्न व्हई जायेल शे, तुम्हीन आठेच थांबा अनी मनासंगे जागा ऱ्हा.
39 ಆಮೇಲೆ ಯೇಸು ಸ್ವಲ್ಪ ಮುಂದಕ್ಕೆ ಹೋಗಿ, ಬೋರಲು ಬಿದ್ದು ಪ್ರಾರ್ಥಿಸುತ್ತಾ, “ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ. ಆದರೂ ನನ್ನ ಚಿತ್ತದಂತಲ್ಲ, ನಿನ್ನ ಚಿತ್ತದಂತೆಯೇ ಆಗಲಿ,” ಎಂದರು.
मंग तो थोडा पुढे जावानंतर पालथा पडिन अशी प्रार्थना कराले लागना की, “हे मना पिता व्हई तर हाऊ दुःखनां प्याला मनावरतीन टळी जावो! तरी मना ईच्छाप्रमाणे नको तर तुनी ईच्छाप्रमाणे व्हऊ दे.”
40 ತರುವಾಯ ಯೇಸು ಬಂದು, ಶಿಷ್ಯರು ನಿದ್ರೆ ಮಾಡುವುದನ್ನು ಕಂಡು ಪೇತ್ರನಿಗೆ, “ಏನು, ನೀವು ಒಂದು ಗಳಿಗೆಯಾದರೂ ನನ್ನೊಡನೆ ಎಚ್ಚರವಾಗಿರಲಾರಿರಾ?
मंग तो शिष्यसना जोडे वना अनी त्या झोपेल शेतस हाई दखीन पेत्रले बोलना, काय! एक तास बी तुमनाघाई जागं ऱ्हावायनं नही का?
41 ನೀವು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ. ಆತ್ಮವು ಸಿದ್ಧವಾಗಿದೆ, ಆದರೆ ಶರೀರವು ಬಲಹೀನವಾಗಿದೆ,” ಎಂದು ಹೇಳಿದರು.
तुम्हीन परिक्षामा पडाले नको म्हणीन जागा ऱ्हा अनी प्रार्थना करा; आत्मा तयार शे खरं पण शरीर अशक्त शे.
42 ಯೇಸು ಎರಡನೆಯ ಸಾರಿ ಹೋಗಿ, ಪ್ರಾರ್ಥಿಸುತ್ತಾ, “ನನ್ನ ತಂದೆಯೇ ನಾನು ಕುಡಿಯದ ಹೊರತು ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಕೂಡದಾಗಿದ್ದರೆ, ನಿನ್ನ ಚಿತ್ತವೇ ಆಗಲಿ,” ಎಂದರು.
परत दुसरी दाव जाईसन येशुनी हाई प्रार्थना करी की, “हे मना पिता, जर हाऊ प्याला मी पेवाशिवाय टळाव नही तर तुनी ईच्छाप्रमाणे व्हऊ दे.”
43 ಯೇಸು ಹಿಂತಿರುಗಿದಾಗ, ಅವರು ತಿರುಗಿ ನಿದ್ರೆ ಮಾಡುವುದನ್ನು ಕಂಡರು. ಅವರ ಕಣ್ಣುಗಳು ಭಾರವಾಗಿದ್ದವು.
मंग त्यानी परत ईसन त्यासले झोपेल दखं; कारण झोपमुये त्यासना डोया जड व्हयेल व्हतात.
44 ಯೇಸು ಅವರನ್ನು ಬಿಟ್ಟು ಹೊರಟುಹೋಗಿ ಮೂರನೆಯ ಸಾರಿ ಅದೇ ಮಾತುಗಳನ್ನು ಪುನಃ ಹೇಳಿ ಪ್ರಾರ್ಥಿಸಿದರು.
परत तो त्यासले सोडीन गया अनी परत त्यानी तिसरांदाव त्याच शब्दसमा प्रार्थना करी.
45 ತರುವಾಯ ಯೇಸು ತಮ್ಮ ಶಿಷ್ಯರ ಬಳಿಗೆ ಬಂದು ಅವರಿಗೆ, “ಇನ್ನೂ ವಿಶ್ರಮಿಸುತ್ತಿದ್ದೀರಾ? ಇಗೋ, ಮನುಷ್ಯಪುತ್ರನಾದ ನಾನು ಪಾಪಿಗಳ ಕೈವಶವಾಗುವ ಸಮಯವು ಸಮೀಪಿಸಿದೆ.
परत तो शिष्यसकडे ईसन बोलना, काय तुम्हीन अजुन आरामशीर झोपी राहिनात? दखा! येळ जवळ येल शे, मनुष्यना पोऱ्या पापी लोकसना हातमा देवाई जाई राहिना.
46 ಏಳಿರಿ ಹೋಗೋಣ. ಇಗೋ, ನನಗೆ ದ್ರೋಹಬಗೆಯುವವನು ಸಮೀಪದಲ್ಲಿ ಇದ್ದಾನೆ,” ಎಂದು ಹೇಳಿದರು.
ऊठा, चला. दखा, माले धरी देणारा जोडे येल शे.
47 ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಬಂದನು. ಮುಖ್ಯಯಾಜಕರ ಮತ್ತು ಜನರ ಹಿರಿಯರ ಕಡೆಯಿಂದ ಬಂದಿದ್ದ ಜನರ ದೊಡ್ಡ ಸಮೂಹವು ಖಡ್ಗ ದೊಣ್ಣೆಗಳನ್ನು ಹಿಡಿದುಕೊಂಡು ಅವನೊಂದಿಗಿತ್ತು.
येशु बोली राहींता इतलामा बारा शिष्यसपैकी एक म्हणजे यहूदा तठे वना, त्यानाबरोबर मुख्य याजक, शास्त्री अनी वडील लोकसना माणसे तलवारी अनी टिपरा लई वनात.
48 ಯೇಸುವಿಗೆ ದ್ರೋಹಮಾಡುವುದಕ್ಕಿದ್ದವನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಆತನೇ ಯೇಸು; ಆತನನ್ನು ಹಿಡಿಯಿರಿ,” ಎಂದು ಗುರುತು ಹೇಳಿಕೊಟ್ಟಿದ್ದನು.
त्याले धरी देणारानी एक इशारा देयल व्हता तो असा की; “मी ज्यानं चुंबन लिसु तोच तो शे. त्याले धरा!”
49 ಯೂದನು ಬಂದ ಕೂಡಲೇ ನೇರವಾಗಿ ಯೇಸುವಿನ ಕಡೆಗೆ ಹೋಗಿ, “ಗುರುವೇ, ನಮಸ್ಕಾರ,” ಎಂದು ಹೇಳಿ ಅವರಿಗೆ ಮುದ್ದಿಟ್ಟನು.
मंग त्यानी लगेच येशुजोडे ईसन, गुरजी, नमस्कार बोलीन त्याना चुंबन लिधात.
50 ಅದಕ್ಕೆ ಯೇಸು ಅವನಿಗೆ, “ಸ್ನೇಹಿತನೇ, ನೀನು ಮಾಡಲು ಬಂದ ಕೆಲಸವನ್ನು ಮುಗಿಸು,” ಎಂದು ಹೇಳಿದರು. ಕೂಡಲೇ ಆ ಜನರು ಮುಂದೆ ಬಂದು, ಯೇಸುವನ್ನು ಹಿಡಿದು ಬಂಧಿಸಿದರು.
येशु त्याले बोलना, “दोस्त! ज्या कामकरता तु येल शे ते कर” तवय त्यासनी जोडे ईसन येशुले धरं अनी अटक करी.
51 ಆಗ, ಯೇಸುವಿನ ಸಂಗಡ ಇದ್ದವರಲ್ಲಿ ಒಬ್ಬನು ಕೈಚಾಚಿ ತನ್ನ ಖಡ್ಗವನ್ನು ಹಿರಿದು, ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕಡಿದುಹಾಕಿದನು.
मंग दखा, येशुनासंगे ज्या व्हतात त्यासनामातीन एकनी तलवार काढी अनी महायाजकना दासवर चालाडी अनं त्याना कान कापी टाका.
52 ಆಗ ಯೇಸು ಅವನಿಗೆ, “ನಿನ್ನ ಖಡ್ಗವನ್ನು ತಿರುಗಿ ಅದರ ಒರೆಯಲ್ಲಿ ಹಾಕು. ಖಡ್ಗವನ್ನು ಹಿಡಿದವರೆಲ್ಲರೂ ಖಡ್ಗದಿಂದ ನಾಶವಾಗುವರು.
तवय येशु त्याले बोलना “तुनी तलवार परत जागावर ठेव,” कारण “तलवार चालाडणारा सर्वजण तलवारघाईच नाश पावतीन.”
53 ನಾನು ಈಗ ನನ್ನ ತಂದೆಗೆ ಕೇಳಿಕೊಂಡರೆ ಅವರು ಈಗಲೇ ಹನ್ನೆರಡು ದಳಗಳಿಗಿಂತ ಹೆಚ್ಚಾದ ದೂತರನ್ನು ನನಗೆ ಕೊಡಲಾರರೆಂದು ನೀನು ನೆನಸುತ್ತೀಯಾ?
तुले अस वाटस का की, माले मना पिताजोडे मांगता येस नही, आत्तेना आत्तेच तो मनाकरता देवदूतसना बारा सैन्यपेक्षा जास्त धाडु नही शकस?
54 ಹಾಗಾದರೆ ಇವುಗಳು ಹೀಗೆಯೇ ಆಗಬೇಕೆಂಬ ಪವಿತ್ರ ವೇದದ ವಾಕ್ಯಗಳು ನೆರವೇರುವುದು ಹೇಗೆ?” ಎಂದರು.
मंग शास्त्रना शास्त्रलेख कशा पुर्ण व्हई की, हाई व्हणं आवश्यकच शे?
55 ಅದೇ ಗಳಿಗೆಯಲ್ಲಿ ಯೇಸು ಜನಸಮೂಹಕ್ಕೆ, “ಒಬ್ಬ ಕಳ್ಳನನ್ನು ಹಿಡಿಯುವುದಕ್ಕೆ ಬರುವಂತೆ ಖಡ್ಗಗಳೊಂದಿಗೆ ದೊಣ್ಣೆಗಳೊಂದಿಗೆ ನನ್ನನ್ನು ಹಿಡಿಯುವುದಕ್ಕಾಗಿ ಬಂದಿರಾ? ನಾನು ದಿನಾಲು ನಿಮ್ಮ ಸಂಗಡ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ, ನೀವು ನನ್ನನ್ನು ಹಿಡಿಯಲಿಲ್ಲ.
तवय येशु लोकसनी गर्दीले बोलना, “जस एखादा नियम तोडणाराले धराकरता तलवार अनी टिपरा लई जातस तसा तुम्हीन माले धराले येल शेतस का? मी रोज मंदिरमा बशीन शिकाडी राहिंतु तरी तुम्हीन माले धरं नही.
56 ಆದರೆ ಪವಿತ್ರ ವೇದದ ಪ್ರವಾದನೆಗಳು ನೆರವೇರುವಂತೆ ಇದೆಲ್ಲಾ ಆಯಿತು,” ಎಂದು ಹೇಳಿದರು. ಆಗ ಶಿಷ್ಯರೆಲ್ಲರೂ ಯೇಸುವನ್ನು ಬಿಟ್ಟು ಓಡಿಹೋದರು.
पण संदेष्टासना लेख पुर्ण व्हवाले पाहिजे म्हणीन हाई व्हयनं.” इतलामा सर्व शिष्य त्याले सोडीन पळी गयात.
57 ಯೇಸುವನ್ನು ಹಿಡಿದಿದ್ದವರು ಅವರನ್ನು ಮಹಾಯಾಜಕನಾದ ಕಾಯಫನ ಬಳಿಗೆ ತೆಗೆದುಕೊಂಡು ಹೋದರು. ಅಲ್ಲಿ ನಿಯಮ ಬೋಧಕರೂ ಹಿರಿಯರೂ ಕೂಡಿ ಬಂದಿದ್ದರು.
मंग येशुले धरणारासनी त्याले कैफा नावना मुख्य याजक याना घर लई गयात, तठे शास्त्री अनं वडील लोक जमेल व्हतात.
58 ಆದರೆ ಪೇತ್ರನು ಮಹಾಯಾಜಕನ ಅರಮನೆಗೆ ದೂರದಿಂದಲೇ ಯೇಸುವನ್ನು ಹಿಂಬಾಲಿಸಿ, ಒಳಗೆ ಹೋಗಿ ಅಂತ್ಯವೇನಾಗುವುದೆಂದು ನೋಡಲು ಸೇವಕರೊಂದಿಗೆ ಕುಳಿತುಕೊಂಡನು.
पेत्र दुरतीन त्याना मांगेमांगे मुख्य याजकना वाडापावत गया अनं मझार जाईन त्याना शेवट काय व्हस हाई दखासाठे पहारेकरीसमा बसना.
59 ಆಗ ಮುಖ್ಯಯಾಜಕರೂ ಆಲೋಚನಾ ಸಭೆಯವರೆಲ್ಲರೂ ಯೇಸುವಿಗೆ ವಿರೋಧವಾಗಿ ಯೇಸುವನ್ನು ಕೊಲ್ಲಿಸಬೇಕೆಂದು ಸುಳ್ಳುಸಾಕ್ಷಿಗಾಗಿ ಹುಡುಕಿದರು.
मुख्य याजक अनं सर्व न्यायसभा यासनी येशुले मारी टाकना उद्देशतीन त्यानविरूध्द खोटा आरोप शोधी राहींतात;
60 ಬಹುಮಂದಿ ಸುಳ್ಳುಸಾಕ್ಷಿಗಳು ಬಂದರೂ ಅವರಿಗೆ ಸರಿಯಾದ ಸಾಕ್ಷ್ಯವು ದೊರೆಯಲಿಲ್ಲ. ಕಡೆಯಲ್ಲಿ ಇಬ್ಬರು ಸುಳ್ಳುಸಾಕ್ಷಿಗಳು ಬಂದು,
अनी बराच खोटा आरोप करनारा वनात पण त्यामा त्यासले काहीच भेटनं नही, तरी शेवट दोनजण ईसन बोलणात की,
61 “ನಾನು ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟಬಲ್ಲೆನೆಂದು ಈತನು ಹೇಳಿದನು,” ಎಂದರು.
“देवनं मंदिर तोडीन ते तिन दिनमा बांधाले मी समर्थ शे अस हाऊ बोलना.”
62 ಮಹಾಯಾಜಕನು ಎದ್ದು ಯೇಸುವಿಗೆ, “ನೀನು ಏನೂ ಉತ್ತರ ಕೊಡುವುದಿಲ್ಲವೋ? ಇವರು ನಿನಗೆ ವಿರೋಧವಾಗಿ ಸಾಕ್ಷಿ ಹೇಳುವುದು ಏನು?” ಎಂದು ಕೇಳಿದನು.
तवय मुख्य याजक ऊठीसन येशुले बोलना, “तु काहीच उत्तर देत नही का?” या तुनाविरूध्द कितला आरोप करी राहिनात,
63 ಆದರೆ ಯೇಸು ಸುಮ್ಮನಿದ್ದರು. ಆಗ ಮಹಾಯಾಜಕನು ಉತ್ತರವಾಗಿ ಯೇಸುವಿಗೆ, “ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ನಮಗೆ ಇದನ್ನು ಹೇಳು: ನೀನು ದೇವಪುತ್ರನಾದ ಕ್ರಿಸ್ತನೋ?” ಎಂದನು.
पण येशु गप्पच राहिना. यावरतीन मुख्य याजकनी त्याले सांगं, “मी तुले जिवत देवनी शप्पथ घालिन विचारस की; जर तु देवना पोऱ्या ख्रिस्त शे तर तसं आमले सांगं.”
64 ಅದಕ್ಕೆ ಯೇಸು ಅವನಿಗೆ, “ನೀನೇ ಹೇಳಿದ್ದೀ; ಆದರೂ ಇನ್ನು ಮೇಲೆ ಮನುಷ್ಯಪುತ್ರನಾದ ನಾನು ಸರ್ವಶಕ್ತರ ಬಲಗಡೆಯಲ್ಲಿ ಕುಳಿತಿರುವುದನ್ನೂ ಆಕಾಶದ ಮೇಘಗಳ ಮೇಲೆ ಬರುವುದನ್ನೂ ನೀವು ಕಾಣುವಿರಿ ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
येशु त्याले बोलना, “तु सांगस तसच आखो. मी तुमले सांगस; यापुढे तुम्हीन फक्त मनुष्यना पोऱ्याले सर्व समर्थना उजवीकडे बठेल अनं स्वर्गना ढगसवर येतांना दखशात!”
65 ಆಗ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಈತನು ದೇವದೂಷಣೆ ಮಾಡಿದ್ದಾನೆ. ನಮಗೆ ಇನ್ನು ಹೆಚ್ಚಿನ ಸಾಕ್ಷಿಗಳು ಏತಕ್ಕೆ? ನೋಡಿ, ಈಗ ಈತನ ದೇವದೂಷಣೆಯನ್ನು ನೀವೇ ಕೇಳಿದ್ದೀರಲ್ಲಾ
तवय मुख्य याजकनी आपला कपडा फाडिसन सांगं, हाऊ देवनी निंदा करी राहिना, आते आमले आखो साक्षीदारसनी काय गरज! तुम्हीन हाई निंदा ऐकेल शे!
66 ನಿಮಗೆ ಹೇಗೆ ತೋರುತ್ತದೆ?” ಎಂದು ಕೇಳಿದ್ದಕ್ಕೆ ಅವರು ಉತ್ತರವಾಗಿ, “ಈತನು ಮರಣಕ್ಕೆ ಪಾತ್ರನು,” ಎಂದರು.
तुमले काय वाटस? त्यासनी उत्तर दिधं, “हाऊ मृत्यूदंडना योग्य शे.”
67 ಆಮೇಲೆ ಅವರು ಯೇಸುವಿನ ಮುಖದ ಮೇಲೆ ಉಗುಳಿ ಅವರನ್ನು ಗುದ್ದಿದರು. ಬೇರೆ ಕೆಲವರು ಅವರ ಕೆನ್ನೆಗೆ ಹೊಡೆದು,
तवय त्या त्याना तोंडवर थुंकनात; अनं त्यासनी त्याले बुक्क्या माऱ्यात अनी बाकिनासनी त्याले थापड्या मारीन सांगं
68 “ಕ್ರಿಸ್ತನೇ, ನಿನ್ನನ್ನು ಹೊಡೆದವರು ಯಾರು? ನಮಗೆ ಪ್ರವಾದನೆ ಹೇಳು,” ಎಂದರು.
अरे ख्रिस्त! “भविष्यवाणी करीसन सांगं तुले कोणी मारं!”
69 ಆಗ ಪೇತ್ರನು ಹೊರಾಂಗಣದಲ್ಲಿ ಕುಳಿತಿರಲು, ಒಬ್ಬ ದಾಸಿಯು ಅವನ ಬಳಿಗೆ ಬಂದು, “ನೀನೂ ಗಲಿಲಾಯದ ಯೇಸುವಿನೊಂದಿಗೆ ಇದ್ದವನು,” ಎಂದಳು.
इकडे पेत्र वाडामा बाहेर बठेल व्हता; तवय मुख्य याजकनी एक दासी त्यानाकडे ईसन बोलनी, “तु पण गालीलकर येशुसंगे व्हता.”
70 ಆದರೆ ಅವನು ಎಲ್ಲರ ಮುಂದೆ, “ನೀನು ಏನು ಹೇಳುತ್ತೀಯೋ ನನಗೆ ತಿಳಿಯದು,” ಎಂದು ನಿರಾಕರಿಸಿದನು.
तो सर्वासना समोर नकारीन बोलना. “तु काय सांगी राहीनी, माले माहीत नही”
71 ಅವನು ಮುಖ್ಯ ದ್ವಾರದೊಳಗೆ ಹೋದಾಗ, ಮತ್ತೊಬ್ಬ ಹುಡುಗಿಯು ಅವನನ್ನು ನೋಡಿ ಅಲ್ಲಿದ್ದವರಿಗೆ, “ಇವನು ಸಹ ನಜರೇತಿನ ಯೇಸುವಿನೊಂದಿಗೆ ಇದ್ದವನು,” ಎಂದಳು.
मंग तो बाहेर वट्टावर गया तवय आखो एक दासी त्याले दखीन तठे ज्या उभा व्हतात त्यासले बोलनी, “हाऊ पण नासरी येशु बरोबर व्हता.”
72 ಆಗ ಅವನು ಆಣೆ ಮಾಡಿ, “ನಾನು ಆ ಮನುಷ್ಯನನ್ನು ಅರಿಯೆನು,” ಎಂದು ತಿರುಗಿ ನಿರಾಕರಿಸಿದನು.
परत “तो शपथ लिसन बोलना मी त्या माणुसले वळखत नही!”
73 ಸ್ವಲ್ಪ ಸಮಯವಾದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನಿಗೆ, “ನಿಶ್ಚಯವಾಗಿಯೂ ನೀನು ಸಹ ಅವರಲ್ಲಿ ಒಬ್ಬನು. ನಿಜವಾಗಿಯೂ ನಿನ್ನ ಭಾಷೆಯು ನಿನ್ನನ್ನು ತೋರಿಸಿಕೊಡುತ್ತದೆ,” ಎಂದರು.
नंतर थोडा येळतीन तठे उभा राहणारासनी जोडे ईसन पेत्रले सांगं, खरच तु पण त्यानामाधलाच शे, कारण तुना बोलावरतीन तु कोण शे हाई समजी राहिनं.
74 ಅದಕ್ಕೆ ಅವನು, “ಆ ಮನುಷ್ಯನನ್ನು ನಾನು ಅರಿಯೆನು,” ಎಂದು ಶಪಿಸಿಕೊಳ್ಳುವುದಕ್ಕೂ ಆಣೆಯಿಟ್ಟುಕೊಳ್ಳುವುದಕ್ಕೂ ಪ್ರಾರಂಭಿಸಿದನು. ಕೂಡಲೇ ಹುಂಜ ಕೂಗಿತು.
मंग पेत्र बोलणा, “जर मी खोटं बोली ऱ्हायनु तर, देव माले मारी टाको! अशा शपथा वाहीन बोलु लागणा, हाऊ ज्या माणुसबद्दल तुम्हीन बोली राहिनात त्याले मी वळखत नही!” इतलामा कोंबडा कोकायना,
75 ಆಗ ಪೇತ್ರನು, “ಹುಂಜ ಕೂಗುವುದಕ್ಕಿಂತ ಮುಂಚಿತವಾಗಿ ನೀನು ಮೂರು ಸಾರಿ ನನ್ನನ್ನು ನಿರಾಕರಿಸುವೆ,” ಎಂದು ಯೇಸು ತನಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಂಡು ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.
तवय “कोंबडा कोकावाना पहीले तु माले तीनदाव नाकारशी” असा ज्या शब्द येशुनी पेत्रले सांगेल व्हतात त्या त्याले आठवणात अनी तो बाहेर जाईसन हंबरडा फोडीन रडाले लागना.