< ಮತ್ತಾಯನು 20 >
1 “ಪರಲೋಕ ರಾಜ್ಯವನ್ನು ತನ್ನ ದ್ರಾಕ್ಷಿಯ ತೋಟಕ್ಕೆ ಕೂಲಿಯಾಳುಗಳನ್ನು ಕರೆಯುವುದಕ್ಕಾಗಿ ಬೆಳಿಗ್ಗೆ ಹೊರಟ ಒಬ್ಬ ಯಜಮಾನನಿಗೆ ಹೋಲಿಸಲಾಗಿದೆ.
Бо Царство Небесне подібне одно́му госпо́дареві, що вдо́світа вийшов згодити робітників у свій виноградник.
2 ಅವನು ದಿನಕ್ಕೆ ಒಂದು ಬೆಳ್ಳಿನಾಣ್ಯ ಕೂಲಿಯಾಳುಗಳೊಂದಿಗೆ ಒಪ್ಪಂದ ಮಾಡಿಕೊಂಡು ತನ್ನ ದ್ರಾಕ್ಷಿಯ ತೋಟಕ್ಕೆ ಅವರನ್ನು ಕಳುಹಿಸಿಕೊಟ್ಟನು.
Згодившися ж він із робі́тниками по дина́рію за день, послав їх до свого виноградника.
3 “ಅವನು ಸುಮಾರು ಒಂಬತ್ತು ಗಂಟೆಗೆ ಹೊರಗೆ ಹೋಗಿ ಇನ್ನು ಕೆಲವರು ಸಂತೆಯ ಸ್ಥಳದಲ್ಲಿ ಕೆಲಸವಿಲ್ಲದೆ ನಿಂತಿರುವುದನ್ನು ಕಂಡು,
А вийшовши коло години десь третьої, побачив він інших, що стояли без праці на ринку,
4 ಅವರಿಗೆ, ‘ನೀವು ಸಹ ದ್ರಾಕ್ಷಿಯ ತೋಟಕ್ಕೆ ಹೋಗಿರಿ; ಸರಿಯಾದ ಕೂಲಿಯನ್ನು ನಾನು ನಿಮಗೆ ಕೊಡುತ್ತೇನೆ,’ ಎಂದು ಹೇಳಿದನು.
та й каже до них: „Ідіть і ви до мого виноградника, і що́ буде належати, дам вам“.
5 ಆಗ ಅವರು ಹೊರಟು ಹೋದರು. “ಅವನು ಸುಮಾರು ಹನ್ನೆರಡು ಗಂಟೆಗೂ ಅನಂತರ ಮೂರು ಗಂಟೆಗೂ ತಿರುಗಿ ಹೋಗಿ ಹಾಗೆಯೇ ಮಾಡಿದನು.
Вони ж відійшли. І вийшов він знов о годині десь шостій й дев'ятій, і те саме зробив.
6 ತರುವಾಯ ಸುಮಾರು ಐದು ಗಂಟೆಗೆ ಅವನು ಹೊರಗೆ ಹೋಗಿ ಬೇರೆ ಕೆಲವರು ಕೆಲಸವಿಲ್ಲದೆ ನಿಂತಿರುವುದನ್ನು ಕಂಡು, ‘ನೀವು ದಿನವೆಲ್ಲಾ ಇಲ್ಲಿ ಕೆಲಸವಿಲ್ಲದೆ ನಿಂತಿರುವುದೇಕೆ?’ ಎಂದು ಕೇಳಿದನು.
А вийшовши коло години одина́дцятої, знайшов інших, що стояли без праці, та й каже до них: „Чого тут стоїте́ цілий день безробітні?“
7 “ಅವರು, ‘ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ,’ ಎಂದರು. “ಆಗ ಅವನು, ‘ನೀವು ಸಹ ದ್ರಾಕ್ಷಿಯ ತೋಟಕ್ಕೆ ಹೋಗಿರಿ,’ ಎಂದು ಹೇಳಿದನು.
Вони кажуть до нього: „Бо ніхто не найняв нас“. Відказує їм: „Ідіть і ви в виноградник“.
8 “ಸಂಜೆಯಾದಾಗ, ದ್ರಾಕ್ಷಿಯ ತೋಟದ ಯಜಮಾನನು ತನ್ನ ಮೇಸ್ತ್ರಿಗೆ, ‘ಕೂಲಿಯಾಳುಗಳನ್ನು ಕರೆದು, ಕೊನೆಯವನಿಂದ ಪ್ರಾರಂಭಿಸಿ ಮೊದಲನೆಯವನವರೆಗೆ ಕೂಲಿಯನ್ನು ಕೊಡು,’ ಎಂದು ಹೇಳಿದನು.
Коли ж вечір настав, то говорить тоді до свого управителя пан виноградника: „Поклич робі́тників, і дай їм заплату, почавши з останніх до перших“.
9 “ಆಗ ಐದು ಗಂಟೆಗೆ ಕರೆದವರು ಬಂದಾಗ ಪ್ರತಿಯೊಬ್ಬನಿಗೂ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.
І прийшли ті, що з години одинадцятої, і взяли по дина́рію.
10 ಆಗ ಮೊದಲು ಬಂದವರು, ತಮಗೆ ಹೆಚ್ಚು ದೊರೆಯುವುದೆಂದು ನೆನಸಿದರು. ಆದರೆ ಅವರಲ್ಲಿ ಪ್ರತಿಯೊಬ್ಬನಿಗೂ ಅದೇ ರೀತಿಯಲ್ಲಿ ಒಂದೊಂದೇ ಬೆಳ್ಳಿನಾಣ್ಯ ಸಿಕ್ಕಿತು.
Коли ж прийшли перші, то ду́мали, що вони візьмуть більше. Та й вони по динару взяли́.
11 ಅವರು ಅದನ್ನು ತೆಗೆದುಕೊಂಡಾಗ, ಯಜಮಾನನ ವಿರೋಧವಾಗಿ ಗೊಣುಗುಟ್ಟುತ್ತಾ,
А взявши, вони почали́ наріка́ти на господаря,
12 ‘ಕಡೆಯವರಾದ ಇವರು ಒಂದೇ ತಾಸು ಕೆಲಸಮಾಡಿದ್ದಾರೆ, ಆದರೆ ದಿನವೆಲ್ಲಾ ಬಿಸಿಲಿನಲ್ಲಿ ಭಾರ ಹೊತ್ತು ಕೆಲಸಮಾಡಿದ ನಮ್ಮನ್ನು ನೀನು ಇವರಿಗೆ ಸಮಮಾಡಿದ್ದಿ,’ ಎಂದರು.
кажучи: „Ці останні годину одну працювали, а ти прирівняв їх до нас, що витерпіли тягар дня та спеко́ту“.
13 “ಆದರೆ ಯಜಮಾನನು ಅವರಲ್ಲಿ ಒಬ್ಬನಿಗೆ ಉತ್ತರವಾಗಿ, ‘ಸ್ನೇಹಿತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ. ಒಂದು ಬೆಳ್ಳಿ ನಾಣ್ಯಕ್ಕೆ ನೀನು ನನ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಿಲ್ಲವೇ?
А він відповів і сказав до одно́го із них: „Не кривджу я, друже, тебе, — хіба не за динарія згодився зо мною?
14 ನಿನ್ನ ಕೂಲಿ ತೆಗೆದುಕೊಂಡು ಹೋಗು. ನಿನಗೆ ನಾನು ಕೊಟ್ಟಂತೆಯೇ ಈ ಕಡೆಯವನಿಗೂ ಕೊಡುವುದು ನನ್ನ ಇಷ್ಟ.
Візьми ти своє та й іди. Але я хочу дати й цьому́ ось останньому, як і тобі.
15 ನನ್ನದನ್ನು ನನ್ನ ಇಷ್ಟಬಂದಂತೆ ಕೊಡುವುದಕ್ಕೆ ನನಗೆ ಹಕ್ಕಿಲ್ಲವೇ? ನಾನು ಔದಾರ್ಯವುಳ್ಳವನಾದ್ದರಿಂದ, ನಿನಗೆ ಹೊಟ್ಟೆಯುರಿಯೋ?’ ಎಂದನು.
Чи ж не вільно мені зо своїм, що я хо́чу, зробити? Хіба око твоє за́здре від того, що я добрий?“
16 “ಹೀಗೆ ಕಡೆಯವರು ಮೊದಲನೆಯವರಾಗುವರು, ಮೊದಲನೆಯವರು ಕಡೆಯವರಾಗುವರು,” ಎಂದು ಹೇಳಿದರು.
Отак будуть останні першими, а перші — останніми!“
17 ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ಹನ್ನೆರಡು ಮಂದಿ ಶಿಷ್ಯರನ್ನು ದಾರಿಯಲ್ಲಿ ಪ್ರತ್ಯೇಕವಾಗಿ ಕರೆದು ಅವರಿಗೆ,
Побажавши ж піти до Єрусалиму, Ісус взяв осібно Дванадцятьо́х, і на дорозі їм сповістив:
18 “ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ಮನುಷ್ಯಪುತ್ರನಾದ ನನ್ನನ್ನು ಮುಖ್ಯಯಾಜಕರ ಮತ್ತು ನಿಯಮ ಬೋಧಕರ ಕೈಗೆ ಒಪ್ಪಿಸಿಕೊಡುವರು. ಅವರು ನನಗೆ ಮರಣದಂಡನೆಯನ್ನು ವಿಧಿಸುವರು.
„Оце в Єрусалим ми йдемо́, — і первосвященикам і книжникам ви́даний буде Син Лю́дський, — і засудять на смерть Його.
19 ಇದಲ್ಲದೆ ನನ್ನನ್ನು ಹಾಸ್ಯಮಾಡುವುದಕ್ಕೂ ಕೊರಡೆಗಳಿಂದ ಹೊಡೆಯುವುದಕ್ಕೂ ಶಿಲುಬೆಗೆ ಹಾಕುವುದಕ್ಕೂ ಯೆಹೂದ್ಯರಲ್ಲದವರ ಕೈಗೆ ಒಪ್ಪಿಸಿಕೊಡುವರು. ನಾನಾದರೋ ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರುವೆನು,” ಎಂದು ಹೇಳಿದರು.
І поганам Його вони видадуть — на нару́гу та на катува́ння, і на розп'яття́, — але третього дня Він воскресне!“
20 ಜೆಬೆದಾಯನ ಮಕ್ಕಳ ತಾಯಿ ತನ್ನ ಪುತ್ರರ ಸಮೇತ ಯೇಸುವಿನ ಬಳಿಗೆ ಬಂದು, ಅವರ ಮುಂದೆ ಮೊಣಕಾಲೂರಿ ಬೇಡಿಕೊಂಡಳು.
Тоді приступила до Нього мати синів Зеведеєвих, і вклонилась, і просила від Нього чогось.
21 ಯೇಸು, “ನಿನ್ನ ಬೇಡಿಕೆ ಏನು?” ಎಂದು ಕೇಳಿದರು. “ನಿಮ್ಮ ರಾಜ್ಯದಲ್ಲಿ ಈ ನನ್ನ ಇಬ್ಬರು ಪುತ್ರರಲ್ಲಿ ಒಬ್ಬನು ನಿಮ್ಮ ಬಲಗಡೆಯಲ್ಲೂ ಇನ್ನೊಬ್ಬನು ನಿಮ್ಮ ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ಅನುಗ್ರಹಿಸಬೇಕು,” ಎಂದು ಬೇಡಿಕೊಂಡಳು.
А Він їй сказав: „Чого хочеш?“Вона каже Йому́: „Скажи, щоб оби́два сини мої ці сіли в Царстві Твоїм — право́руч один, і ліво́руч від Тебе один“.
22 ಯೇಸು ಉತ್ತರವಾಗಿ, “ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಲಿರುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದಾದೀತೇ?” ಎಂದು ಕೇಳಿದರು. ಅವರು, “ಹೌದು, ನಮ್ಮಿಂದಾಗುವುದು,” ಎಂದು ಹೇಳಿದರು.
А Ісус відповів і сказав: „Не знаєте, чого просите. Чи ж можете ви пити чашу, що Я її питиму (або христи́тися хрищенням, що я ним хрищу́ся )?“„Вони кажуть Йому: „Можемо“.
23 ಅದಕ್ಕೆ ಯೇಸು, “ನನ್ನ ಪಾತ್ರೆಯಿಂದ ನೀವು ಕುಡಿಯುವಿರಿ, ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವಂತೆ ಅನುಗ್ರಹಿಸುವುದು ನನ್ನದಲ್ಲ, ನನ್ನ ತಂದೆಯಿಂದ ಅದು ಯಾರಿಗೋಸ್ಕರ ಸಿದ್ಧವಾಗಿದೆಯೋ ಅವರಿಗೇ ಕೊಡಲಾಗುವುದು,” ಎಂದು ಹೇಳಿದರು.
Він говорить до них: „Ви питимете Мою чашу (і бу́дете христитися хрищенням, що Я ним хрищуся). А сидіти право́руч Мене та ліво́руч — не Моє це давати, а кому від Мого Отця те вгото́вано“.
24 ಬೇರೆ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ, ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು.
Як почули це де́сятеро, стали гніватися на обох тих братів.
25 ಆದರೆ ಯೇಸು ಶಿಷ್ಯರನ್ನು ತಮ್ಮ ಹತ್ತಿರಕ್ಕೆ ಕರೆದು, “ಯೆಹೂದ್ಯರಲ್ಲದವರ ಅಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದೊರೆತನ ಮಾಡುತ್ತಾರೆಂದೂ ಉನ್ನತ ಅಧಿಕಾರಿಗಳು ಅವರ ಮೇಲೆ ಅಧಿಕಾರವನ್ನು ನಡೆಸುತ್ತಾರೆಂದೂ ನಿಮಗೆ ತಿಳಿದಿದೆ.
А Ісус їх покликав і промовив: „Ви знаєте, що князі наро́дів панують над ними, а вельможі їх тиснуть.
26 ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಿರಲಿ.
Не так буде між вами, але́ хто великим із вас хоче бути, — хай буде слугою він вам.
27 ನಿಮ್ಮಲ್ಲಿ ಯಾವನಾದರೂ ಪ್ರಮುಖನಾಗಬೇಕೆಂದಿದ್ದರೆ, ಅವನು ನಿಮ್ಮ ಆಳಾಗಿರಲಿ.
А хто з вас бути першим бажає, — нехай буде він вам за раба.
28 ಮನುಷ್ಯಪುತ್ರನಾದ ನಾನು ಸಹ ಸೇವೆಮಾಡಿಸಿಕೊಳ್ಳುವುದಕ್ಕಾಗಿ ಅಲ್ಲ, ಸೇವೆಮಾಡುವುದಕ್ಕಾಗಿಯೂ ಅನೇಕರಿಗಾಗಿ ನನ್ನ ಪ್ರಾಣವನ್ನೇ ಈಡಾಗಿ ಕೊಡುವುದಕ್ಕಾಗಿಯೂ ಬಂದಿದ್ದೇನೆ,” ಎಂದು ಹೇಳಿದರು.
Так само й Син Лю́дський прийшов не на те, щоб служили Йому, а щоб послужити, і душу Свою дати на викуп за багатьох!
29 ಯೇಸು ಮತ್ತು ಅವರ ಶಿಷ್ಯರು ಯೆರಿಕೋವಿನಿಂದ ಹೊರಟು ಹೋಗುತ್ತಿರುವಾಗ, ಜನರು ದೊಡ್ಡ ಸಮೂಹವಾಗಿ ಯೇಸುವನ್ನು ಹಿಂಬಾಲಿಸಿದರು.
Як вони ж з Єрихо́ну вихо́дили, за Ним ішов на́товп великий.
30 ದಾರಿಯ ಮಗ್ಗುಲಲ್ಲಿ ಕೂತಿದ್ದ ಇಬ್ಬರು ಕುರುಡರು ಯೇಸು ಹಾದು ಹೋಗುತ್ತಿದ್ದಾರೆಂದು ಕೇಳಿ, “ಕರ್ತನೇ, ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು!” ಎಂದು ಕೂಗಿ ಹೇಳಿದರು.
І ось двоє сліпих, що сиділи при дорозі, почувши, що переходить Ісус, стали кричати, благаючи: „Змилуйсь над нами, Господи, Сину Давидів!“
31 ಅವರು ಸುಮ್ಮನಿರುವಂತೆ ಜನರ ಸಮೂಹವು ಅವರನ್ನು ಗದರಿಸಿತು. ಆದರೂ ಅವರು, “ಕರ್ತನೇ, ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು!” ಎಂದು ಇನ್ನೂ ಗಟ್ಟಿಯಾಗಿ ಕೂಗಿಕೊಂಡರು.
Наро́д же сварився на них, щоб мовчали, вони ж іще більше кричали, благаючи: „Змилуйсь над нами, Господи, Сину Давидів!“
32 ಆಗ ಯೇಸು ನಿಂತು, ಅವರನ್ನು ಕರೆದು, “ನಾನು ನಿಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೀರಿ?” ಎಂದು ಕೇಳಿದರು.
Ісус же спинився, — покликав їх та й сказав: „Що́ хочете, щоб Я вам зробив?“
33 ಅವರು ಯೇಸುವಿಗೆ, “ಕರ್ತದೇವರೇ, ನಮಗೆ ಕಣ್ಣು ಕಾಣುವಂತೆ ಮಾಡು,” ಎಂದರು.
Вони Йому кажуть: „Господи, — нехай нам розкриються очі!“
34 ಯೇಸು ಅವರ ಮೇಲೆ ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದರು. ಕೂಡಲೇ ಅವರ ಕಣ್ಣುಗಳು ದೃಷ್ಟಿಯನ್ನು ಪಡೆದವು. ಅವರೂ ಯೇಸುವನ್ನು ಹಿಂಬಾಲಿಸಿದರು.
І змилосе́рдивсь Ісус, доторкнувся до їхніх оче́й, — і зараз прозріли їм очі, і вони подалися за Ним.