< ಮತ್ತಾಯನು 15 >

1 ಯೆರೂಸಲೇಮಿನಿಂದ ಫರಿಸಾಯರು ಮತ್ತು ನಿಯಮ ಬೋಧಕರು ಯೇಸುವಿನ ಬಳಿಗೆ ಬಂದು,
অপরং যিরূশালম্নগরীযাঃ কতিপযা অধ্যাপকাঃ ফিরূশিনশ্চ যীশোঃ সমীপমাগত্য কথযামাসুঃ,
2 “ನಿನ್ನ ಶಿಷ್ಯರು ಪೂರ್ವಿಕರ ಸಂಪ್ರದಾಯವನ್ನು ಏಕೆ ಮೀರುತ್ತಾರೆ? ಅವರು ಊಟಕ್ಕೆ ಮುಂಚೆ ತಮ್ಮ ಕೈಗಳನ್ನು ಏಕೆ ತೊಳೆದುಕೊಳ್ಳುವುದಿಲ್ಲ?” ಎಂದರು.
তৱ শিষ্যাঃ কিমর্থম্ অপ্রক্ষালিতকরৈ র্ভক্ষিৎৱা পরম্পরাগতং প্রাচীনানাং ৱ্যৱহারং লঙ্ৱন্তে?
3 ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ನೀವು ದೇವರ ಆಜ್ಞೆಯನ್ನು ಏಕೆ ಮೀರುತ್ತೀರಿ?
ততো যীশুঃ প্রত্যুৱাচ, যূযং পরম্পরাগতাচারেণ কুত ঈশ্ৱরাজ্ঞাং লঙ্ৱধ্ৱে|
4 ‘ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು,’ ಎಂದೂ ‘ತಂದೆತಾಯಿಗಳನ್ನು ದೂಷಿಸುವವನಿಗೆ ಮರಣದಂಡನೆ ಆಗಬೇಕು,’ ಎಂದು ದೇವರು ಹೇಳಿದ್ದಾರೆ.
ঈশ্ৱর ইত্যাজ্ঞাপযৎ, ৎৱং নিজপিতরৌ সংমন্যেথাঃ, যেন চ নিজপিতরৌ নিন্দ্যেতে, স নিশ্চিতং ম্রিযেত;
5 ಆದರೆ ನೀವು, ಯಾರಾದರೂ ತನ್ನ ತಂದೆಗೆ ಇಲ್ಲವೆ ತಾಯಿಗೆ, ನಾನು ನಿಮ್ಮ ಸಹಾಯಕ್ಕಾಗಿ ಇಟ್ಟಿದ್ದನ್ನು, ‘ದೇವರಿಗೆ ಕೊಟ್ಟಿದ್ದೇನೆ’ ಎಂದು ಹೇಳುವುದಾದರೆ,
কিন্তু যূযং ৱদথ, যঃ স্ৱজনকং স্ৱজননীং ৱা ৱাক্যমিদং ৱদতি, যুৱাং মত্তো যল্লভেথে, তৎ ন্যৱিদ্যত,
6 ‘ಅವನು ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಗೌರವಿಸಬೇಕಾಗಿಲ್ಲ’ ಎಂದು ಹೇಳುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ.
স নিজপিতরৌ পুন র্ন সংমংস্যতে| ইত্থং যূযং পরম্পরাগতেন স্ৱেষামাচারেণেশ্ৱরীযাজ্ঞাং লুম্পথ|
7 ಕಪಟಿಗಳೇ, ನಿಮ್ಮ ವಿಷಯವಾಗಿ ಯೆಶಾಯನು ಸರಿಯಾಗಿ ಪ್ರವಾದಿಸಿದ್ದಾನೆ:
রে কপটিনঃ সর্ৱ্ৱে যিশযিযো যুষ্মানধি ভৱিষ্যদ্ৱচনান্যেতানি সম্যগ্ উক্তৱান্|
8 “‘ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.
ৱদনৈ র্মনুজা এতে সমাযান্তি মদন্তিকং| তথাধরৈ র্মদীযঞ্চ মানং কুর্ৱ্ৱন্তি তে নরাঃ|
9 ಅವರು ಮನುಷ್ಯರ ಆಜ್ಞೆಗಳನ್ನು ಉಪದೇಶಗಳನ್ನಾಗಿ ಬೋಧಿಸುವುದರಿಂದ ನನ್ನನ್ನು ಆರಾಧಿಸುವುದು ವ್ಯರ್ಥ.’”
কিন্তু তেষাং মনো মত্তো ৱিদূরএৱ তিষ্ঠতি| শিক্ষযন্তো ৱিধীন্ ন্রাজ্ঞা ভজন্তে মাং মুধৈৱ তে|
10 ಯೇಸು ಜನಸಮೂಹವನ್ನು ಕರೆದು ಅವರಿಗೆ, “ಕೇಳಿ ತಿಳಿದುಕೊಳ್ಳಿರಿ.
১০ততো যীশু র্লোকান্ আহূয প্রোক্তৱান্, যূযং শ্রুৎৱা বুধ্যধ্বং|
11 ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಅಶುದ್ಧ ಮಾಡುವುದಿಲ್ಲ, ಆದರೆ ಬಾಯೊಳಗಿಂದ ಹೊರಗೆ ಬರುವಂಥದ್ದೇ ಮನುಷ್ಯನನ್ನು ಅಶುದ್ಧ ಮಾಡುತ್ತದೆ,” ಎಂದು ಹೇಳಿದರು.
১১যন্মুখং প্রৱিশতি, তৎ মনুজম্ অমেধ্যং ন করোতি, কিন্তু যদাস্যাৎ নির্গচ্ছতি, তদেৱ মানুষমমেধ্যী করোতী|
12 ತರುವಾಯ ಯೇಸುವಿನ ಶಿಷ್ಯರು ಬಂದು, “ಫರಿಸಾಯರು ನಿಮ್ಮ ಈ ಮಾತನ್ನು ಕೇಳಿ ಬೇಸರಗೊಂಡರೆಂದು ನಿಮಗೆ ತಿಳಿಯಿತೇ?” ಎಂದು ಕೇಳಿದರು.
১২তদানীং শিষ্যা আগত্য তস্মৈ কথযাঞ্চক্রুঃ, এতাং কথাং শ্রুৎৱা ফিরূশিনো ৱ্যরজ্যন্ত, তৎ কিং ভৱতা জ্ঞাযতে?
13 ಅದಕ್ಕೆ ಯೇಸು ಉತ್ತರವಾಗಿ ಅವರಿಗೆ, “ಪರಲೋಕದ ನನ್ನ ತಂದೆಯು ನೆಡದೆ ಇರುವ ಪ್ರತಿಯೊಂದು ಗಿಡವು ಬೇರುಸಹಿತವಾಗಿ ಕಿತ್ತುಹಾಕಲಾಗುವುದು.
১৩স প্রত্যৱদৎ, মম স্ৱর্গস্থঃ পিতা যং কঞ্চিদঙ্কুরং নারোপযৎ, স উৎপাৱ্দ্যতে|
14 ಅವರನ್ನು ಬಿಡಿರಿ, ಅವರು ಕುರುಡರಿಗೆ ದಾರಿತೋರಿಸುವ ಕುರುಡರು. ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಹಳ್ಳಕ್ಕೆ ಬೀಳುವರು,” ಎಂದು ಹೇಳಿದರು.
১৪তে তিষ্ঠন্তু, তে অন্ধমনুজানাম্ অন্ধমার্গদর্শকা এৱ; যদ্যন্ধোঽন্ধং পন্থানং দর্শযতি, তর্হ্যুভৌ গর্ত্তে পততঃ|
15 ಪೇತ್ರನು, “ಈ ಸಾಮ್ಯವನ್ನು ನಮಗೆ ವಿವರಿಸು,” ಎಂದನು.
১৫তদা পিতরস্তং প্রত্যৱদৎ, দৃষ্টান্তমিমমস্মান্ বোধযতু|
16 ಅದಕ್ಕೆ ಯೇಸು, “ನೀವು ಸಹ ಇನ್ನೂ ಬುದ್ಧಿಯಿಲ್ಲದವರಾಗಿದ್ದೀರಾ?” ಎಂದು ಕೇಳಿ,
১৬যীশুনা প্রোক্তং, যূযমদ্য যাৱৎ কিমবোধাঃ স্থ?
17 “ಬಾಯೊಳಕ್ಕೆ ಹೋಗಿ ಹೊಟ್ಟೆಯಲ್ಲಿ ಸೇರುವುದೆಲ್ಲವೂ ವಿಸರ್ಜಿತವಾಗುವುದೆಂದು ನೀವು ಇನ್ನೂ ಗ್ರಹಿಸಲಿಲ್ಲವೋ?
১৭কথামিমাং কিং ন বুধ্যধ্বে? যদাস্যং প্রেৱিশতি, তদ্ উদরে পতন্ বহির্নির্যাতি,
18 ಆದರೆ ಬಾಯೊಳಗಿಂದ ಹೊರಗೆ ಹೊರಡುವಂಥವು ಹೃದಯದೊಳಗಿಂದ ಬಂದು ಮನುಷ್ಯನನ್ನು ಅಶುದ್ಧ ಮಾಡುತ್ತವೆ.
১৮কিন্ত্ৱাস্যাদ্ যন্নির্যাতি, তদ্ অন্তঃকরণাৎ নির্যাতৎৱাৎ মনুজমমেধ্যং করোতি|
19 ಏಕೆಂದರೆ ಹೃದಯದೊಳಗಿಂದ ದುರಾಲೋಚನೆಗಳು, ಕೊಲೆ, ವ್ಯಭಿಚಾರ, ಅನೈತಿಕತೆ, ಕಳ್ಳತನ, ಸುಳ್ಳುಸಾಕ್ಷಿ, ದೂರು ಇವು ಹೊರ ಬರುತ್ತವೆ.
১৯যতোঽন্তঃকরণাৎ কুচিন্তা বধঃ পারদারিকতা ৱেশ্যাগমনং চৈর্য্যং মিথ্যাসাক্ষ্যম্ ঈশ্ৱরনিন্দা চৈতানি সর্ৱ্ৱাণি নির্য্যান্তি|
20 ಇವುಗಳೇ ಮನುಷ್ಯನನ್ನು ಅಶುದ್ಧ ಮಾಡುತ್ತವೆ; ಆದರೆ ಕೈತೊಳೆದುಕೊಳ್ಳದೆ ಊಟಮಾಡುವುದು ಮನುಷ್ಯನನ್ನು ಅಶುದ್ಧ ಮಾಡುವುದಿಲ್ಲ,” ಎಂದರು.
২০এতানি মনুষ্যমপৱিত্রী কুর্ৱ্ৱন্তি কিন্ত্ৱপ্রক্ষালিতকরেণ ভোজনং মনুজমমেধ্যং ন করোতি|
21 ಯೇಸು ಅಲ್ಲಿಂದ ಹೊರಟು ಟೈರ್ ಸೀದೋನ್ ಪ್ರದೇಶಕ್ಕೆ ಬಂದರು.
২১অনন্তরং যীশুস্তস্মাৎ স্থানাৎ প্রস্থায সোরসীদোন্নগরযোঃ সীমামুপতস্যৌ|
22 ಆಗ, ಕಾನಾನ್ಯ ಸ್ತ್ರೀಯೊಬ್ಬಳು ಬಂದು ಅವರಿಗೆ, “ಸ್ವಾಮೀ, ದಾವೀದನ ಪುತ್ರನೇ, ನನ್ನನ್ನು ಕರುಣಿಸು. ನನ್ನ ಮಗಳು ದೆವ್ವದ ಕಾಟದಿಂದ ಬಹಳವಾಗಿ ಸಂಕಟಪಡುತ್ತಿದ್ದಾಳೆ,” ಎಂದು ಕೂಗಿಕೊಂಡಳು.
২২তদা তৎসীমাতঃ কাচিৎ কিনানীযা যোষিদ্ আগত্য তমুচ্চৈরুৱাচ, হে প্রভো দাযূদঃ সন্তান, মমৈকা দুহিতাস্তে সা ভূতগ্রস্তা সতী মহাক্লেশং প্রাপ্নোতি মম দযস্ৱ|
23 ಆದರೆ ಯೇಸು ಆಕೆಗೆ ಉತ್ತರ ಕೊಡಲಿಲ್ಲ. ಆಗ ಶಿಷ್ಯರು ಯೇಸುವಿನ ಬಳಿ ಬಂದು, “ಆಕೆಯನ್ನು ಕಳುಹಿಸಿಬಿಡು, ಆಕೆಯು ನಮ್ಮ ಹಿಂದೆ ಕೂಗಿಕೊಂಡು ಬರುತ್ತಾಳೆ” ಎಂದು ಕೇಳಿಕೊಂಡರು.
২৩কিন্তু যীশুস্তাং কিমপি নোক্তৱান্, ততঃ শিষ্যা আগত্য তং নিৱেদযামাসুঃ, এষা যোষিদ্ অস্মাকং পশ্চাদ্ উচ্চৈরাহূযাগচ্ছতি, এনাং ৱিসৃজতু|
24 ಯೇಸು ಉತ್ತರವಾಗಿ, “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲಿನ ಮನೆತನದವರ ಬಳಿಗೆ ಮಾತ್ರ ನನ್ನನ್ನು ಕಳುಹಿಸಲಾಗಿದೆ,” ಎಂದರು.
২৪তদা স প্রত্যৱদৎ, ইস্রাযেল্গোত্রস্য হারিতমেষান্ ৱিনা কস্যাপ্যন্যস্য সমীপং নাহং প্রেষিতোস্মি|
25 ಆಕೆಯು ಬಂದು ಯೇಸುವಿನ ಮುಂದೆ ಮೊಣಕಾಲೂರಿ, “ಸ್ವಾಮೀ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡಳು.
২৫ততঃ সা নারীসমাগত্য তং প্রণম্য জগাদ, হে প্রভো মামুপকুরু|
26 ಆಗ ಯೇಸು, “ಮಕ್ಕಳು ತಿನ್ನುವ ರೊಟ್ಟಿಯನ್ನು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ,” ಎಂದು ಹೇಳಿದರು.
২৬স উক্তৱান্, বালকানাং ভক্ষ্যমাদায সারমেযেভ্যো দানং নোচিতং|
27 ಆಗ ಆಕೆಯು, “ಸ್ವಾಮೀ, ಅದು ನಿಜವೇ, ಆದರೂ ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿತುಂಡುಗಳನ್ನು ನಾಯಿಮರಿಗಳು ತಿನ್ನುತ್ತವಲ್ಲಾ,” ಎಂದಳು.
২৭তদা সা বভাষে, হে প্রভো, তৎ সত্যং, তথাপি প্রভো র্ভঞ্চাদ্ যদুচ্ছিষ্টং পততি, তৎ সারমেযাঃ খাদন্তি|
28 ಯೇಸು ಉತ್ತರವಾಗಿ ಆಕೆಗೆ, “ಅಮ್ಮಾ ನಿನ್ನ ನಂಬಿಕೆಯು ದೊಡ್ಡದು! ನೀನು ಇಷ್ಟಪಟ್ಟಂತೆಯೇ ನಿನಗಾಗಲಿ,” ಎಂದು ಹೇಳಿದರು. ಆಕೆಯ ಮಗಳು ಅದೇ ಗಳಿಗೆಯಲ್ಲಿ ಗುಣಹೊಂದಿದಳು.
২৮ততো যীশুঃ প্রত্যৱদৎ, হে যোষিৎ, তৱ ৱিশ্ৱাসো মহান্ তস্মাৎ তৱ মনোভিলষিতং সিদ্য্যতু, তেন তস্যাঃ কন্যা তস্মিন্নেৱ দণ্ডে নিরামযাভৱৎ|
29 ಯೇಸು ಅಲ್ಲಿಂದ ಹೊರಟು ಗಲಿಲಾಯ ಸರೋವರದ ಸಮೀಪಕ್ಕೆ ಬಂದು, ಬೆಟ್ಟವನ್ನು ಹತ್ತಿ ಅಲ್ಲಿ ಕುಳಿತುಕೊಂಡರು.
২৯অনন্তরং যীশস্তস্মাৎ স্থানাৎ প্রস্থায গালীল্সাগরস্য সন্নিধিমাগত্য ধরাধরমারুহ্য তত্রোপৱিৱেশ|
30 ಆಗ ಜನರ ದೊಡ್ಡ ಸಮೂಹಗಳು ಕುಂಟರನ್ನು, ಕುರುಡರನ್ನು, ಮೂಕರನ್ನು, ಊನವಾದವರನ್ನು ಮತ್ತು ಬೇರೆ ಅನೇಕ ರೋಗಿಗಳನ್ನು ತಮ್ಮೊಂದಿಗೆ ಕರೆದುಕೊಂಡು ಬಂದು ಯೇಸುವಿನ ಪಾದದ ಬಳಿಯಲ್ಲಿ ಬಿಟ್ಟರು. ಯೇಸು ಅವರನ್ನೆಲ್ಲಾ ಸ್ವಸ್ಥಪಡಿಸಿದರು.
৩০পশ্চাৎ জননিৱহো বহূন্ খঞ্চান্ধমূকশুষ্ককরমানুষান্ আদায যীশোঃ সমীপমাগত্য তচ্চরণান্তিকে স্থাপযামাসুঃ, ততঃ সা তান্ নিরামযান্ অকরোৎ|
31 ಮೂಕರು ಮಾತನಾಡುವುದನ್ನೂ ಊನವಾದವರು ಸ್ವಸ್ಥರಾಗಿರುವುದನ್ನೂ ಕುಂಟರು ನಡೆದಾಡುವುದನ್ನೂ ಕುರುಡರು ಕಾಣುವುದನ್ನೂ ಜನಸಮೂಹದವರು ಕಂಡು ಆಶ್ಚರ್ಯಪಟ್ಟರು. ಅವರು ಇಸ್ರಾಯೇಲಿನ ದೇವರನ್ನು ಕೊಂಡಾಡಿದರು.
৩১ইত্থং মূকা ৱাক্যং ৱদন্তি, শুষ্ককরাঃ স্ৱাস্থ্যমাযান্তি, পঙ্গৱো গচ্ছন্তি, অন্ধা ৱীক্ষন্তে, ইতি ৱিলোক্য লোকা ৱিস্মযং মন্যমানা ইস্রাযেল ঈশ্ৱরং ধন্যং বভাষিরে|
32 ಯೇಸು ತಮ್ಮ ಶಿಷ್ಯರನ್ನು ಕರೆದು, “ನಾನು ಈ ಜನಸಮೂಹವನ್ನು ನೋಡಿ ಕನಿಕರಪಡುತ್ತೇನೆ. ಮೂರು ದಿನಗಳಿಂದ ಇವರು ನನ್ನೊಂದಿಗಿದ್ದಾರೆ. ಇವರಿಗೆ ಊಟಕ್ಕೆ ಏನೂ ಇಲ್ಲ, ದಾರಿಯಲ್ಲಿ ಅವರು ಬಳಲಿ ಹೋಗುವರು. ಇವರನ್ನು ಉಪವಾಸವಾಗಿ ಕಳುಹಿಸುವುದಕ್ಕೆ ನನಗೆ ಮನಸ್ಸಿಲ್ಲ,” ಎಂದರು.
৩২তদানীং যীশুঃ স্ৱশিষ্যান্ আহূয গদিতৱান্, এতজ্জননিৱহেষু মম দযা জাযতে, এতে দিনত্রযং মযা সাকং সন্তি, এষাং ভক্ষ্যৱস্তু চ কঞ্চিদপি নাস্তি, তস্মাদহমেতানকৃতাহারান্ ন ৱিস্রক্ষ্যামি, তথাৎৱে ৱর্ত্মমধ্যে ক্লাম্যেষুঃ|
33 ಅದಕ್ಕೆ ಶಿಷ್ಯರು, “ಇಂಥಾ ದೊಡ್ಡ ಸಮೂಹವನ್ನು ತೃಪ್ತಿಪಡಿಸುವಂತೆ ಈ ನಿರ್ಜನ ಪ್ರದೇಶದಲ್ಲಿ ನಮಗೆ ಎಲ್ಲಿಂದ ರೊಟ್ಟಿ ಸಿಕ್ಕೀತು?” ಎಂದರು.
৩৩তদা শিষ্যা ঊচুঃ, এতস্মিন্ প্রান্তরমধ্য এতাৱতো মর্ত্যান্ তর্পযিতুং ৱযং কুত্র পূপান্ প্রাপ্স্যামঃ?
34 ಯೇಸು ಅವರಿಗೆ, “ನಿಮ್ಮ ಹತ್ತಿರ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದರು. ಶಿಷ್ಯರು, “ಏಳು ರೊಟ್ಟಿಗಳು ಮತ್ತು ಕೆಲವು ಸಣ್ಣ ಮೀನುಗಳಿವೆ,” ಎಂದರು.
৩৪যীশুরপৃচ্ছৎ, যুষ্মাকং নিকটে কতি পূপা আসতে? ত ঊচুঃ, সপ্তপূপা অল্পাঃ ক্ষুদ্রমীনাশ্চ সন্তি|
35 ಯೇಸು ಜನಸಮೂಹವು ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟರು.
৩৫তদানীং স লোকনিৱহং ভূমাৱুপৱেষ্টুম্ আদিশ্য
36 ಅನಂತರ ಯೇಸು ಆ ಏಳು ರೊಟ್ಟಿಗಳನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಮಾಡಿ, ಅವುಗಳನ್ನು ಮುರಿದು ತಮ್ಮ ಶಿಷ್ಯರಿಗೆ ಕೊಡಲು ಶಿಷ್ಯರು ಜನಸಮೂಹಕ್ಕೆ ಕೊಟ್ಟರು.
৩৬তান্ সপ্তপূপান্ মীনাংশ্চ গৃহ্লন্ ঈশ্ৱরীযগুণান্ অনূদ্য ভংক্ত্ৱা শিষ্যেভ্যো দদৌ, শিষ্যা লোকেভ্যো দদুঃ|
37 ಅವರೆಲ್ಲರೂ ಊಟಮಾಡಿ ತೃಪ್ತರಾದರು. ಅನಂತರ ಶಿಷ್ಯರು ಮಿಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಬುಟ್ಟಿಗಳು ತುಂಬಿದವು.
৩৭ততঃ সর্ৱ্ৱে ভুক্ত্ৱা তৃপ্তৱন্তঃ; তদৱশিষ্টভক্ষ্যেণ সপ্তডলকান্ পরিপূর্য্য সংজগৃহুঃ|
38 ಊಟಮಾಡಿದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ನಾಲ್ಕು ಸಾವಿರ ಗಂಡಸರಿದ್ದರು.
৩৮তে ভোক্তারো যোষিতো বালকাংশ্চ ৱিহায প্রাযেণ চতুঃসহস্রাণি পুরুষা আসন্|
39 ತರುವಾಯ ಯೇಸು ಜನಸಮೂಹವನ್ನು ಕಳುಹಿಸಿಬಿಟ್ಟು ದೋಣಿಯನ್ನು ಹತ್ತಿ ಮಗದಾನ್ ಊರಿಗೆ ಬಂದರು.
৩৯ততঃ পরং স জননিৱহং ৱিসৃজ্য তরিমারুহ্য মগ্দলাপ্রদেশং গতৱান্|

< ಮತ್ತಾಯನು 15 >