< ಮತ್ತಾಯನು 13 >
1 ಅದೇ ದಿನದಲ್ಲಿ ಯೇಸು ಮನೆಯಿಂದ ಹೊರಟುಹೋಗಿ ಸರೋವರದ ಬಳಿಯಲ್ಲಿ ಕುಳಿತುಕೊಂಡರು.
An jenem Tage gieng Jesus von Hause weg und setzte sich am See nieder.
2 ಆಗ ಜನರ ದೊಡ್ಡ ಸಮೂಹವು ಯೇಸುವಿನ ಬಳಿಗೆ ಕೂಡಿಬಂದದ್ದರಿಂದ ಅವರು ದೋಣಿಯನ್ನು ಹತ್ತಿ ಕುಳಿತುಕೊಂಡರು, ಆ ಸಮೂಹದವರೆಲ್ಲಾ ದಡದ ಮೇಲೆ ನಿಂತಿದ್ದರು.
Und es sammelten sich bei ihm große Massen, so daß er ein Schiff bestieg und sich darein setzte, und die ganze Menge stand am Ufer.
3 ಆಗ ಯೇಸು ಅನೇಕ ವಿಷಯಗಳನ್ನು ಅವರಿಗೆ ಸಾಮ್ಯಗಳಲ್ಲಿ ಹೇಳಿದ್ದು: “ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು;
Und er redete zu ihnen vieles in Gleichnissen, und sprach: Siehe, es gieng der Sämann aus zu säen.
4 ಅವನು ಬಿತ್ತುತ್ತಿರುವಾಗ ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು, ಪಕ್ಷಿಗಳು ಬಂದು ಅವುಗಳನ್ನು ತಿಂದುಬಿಟ್ಟವು.
Und da er säte, fiel das eine an den Weg, und es kamen die Vögel und fraßen es auf.
5 ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ಸ್ಥಳಗಳಲ್ಲಿ ಬಿದ್ದವು. ಅಲ್ಲಿ ಆಳವಾದ ಮಣ್ಣಿಲ್ಲದ ಕಾರಣ ಅವು ಬೇಗನೆ ಮೊಳೆತವು.
Anderes aber fiel auf steiniges Land, wo es nicht viel Boden hatte, und schoß schnell auf, weil es nicht tief im Boden lag;
6 ಆದರೆ ಬಿಸಿಲೇರಿದಾಗ ಅವು ಬಾಡಿಹೋಗಿ, ಬೇರಿಲ್ಲದ ಕಾರಣ ಒಣಗಿಹೋದವು.
aber als die Sonne aufgieng, ward es versengt und verdorrte, weil es keine Wurzel hatte.
7 ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದವು, ಆ ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
Anderes aber fiel unter die Dornen, und die Dornen giengen auf und erstickten es.
8 ಆದರೆ ಕೆಲವು ಬೀಜಗಳು ಒಳ್ಳೆಯ ಭೂಮಿಯಲ್ಲಿ ಬಿದ್ದು, ಒಂದು ನೂರರಷ್ಟು ಮತ್ತೆ ಕೆಲವು ಅರವತ್ತರಷ್ಟು ಇನ್ನು ಕೆಲವು ಮೂವತ್ತರಷ್ಟು ಫಲಕೊಟ್ಟವು.
Anderes aber fiel auf das gute Land und brachte Frucht, das eine hundertfältig, das andere sechzig-, wieder anderes dreißigfältig.
9 ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ.”
Wer Ohren hat, der höre.
10 ತರುವಾಯ ಶಿಷ್ಯರು ಬಂದು ಯೇಸುವಿಗೆ, “ನೀವು ಸಾಮ್ಯಗಳಲ್ಲಿ ಅವರೊಡನೆ ಮಾತನಾಡುವುದೇಕೆ?” ಎಂದು ಕೇಳಿದರು.
Und die Jünger kamen herzu und sagten zu ihm: warum redest du zu ihnen mit Gleichnissen?
11 ಯೇಸು ಅದಕ್ಕೆ ಉತ್ತರವಾಗಿ ಹೇಳಿದ್ದು: “ಪರಲೋಕ ರಾಜ್ಯದ ರಹಸ್ಯಗಳನ್ನು ತಿಳಿದುಕೊಳ್ಳುವ ಜ್ಞಾನವು ನಿಮಗೆ ಕೊಡಲಾಗಿದೆ, ಆದರೆ ಅವರಿಗಲ್ಲ.
Er aber antwortete: weil es euch gegeben ist, zu erkennen die Geheimnisse des Reichs der Himmel, jenen aber nicht gegeben ist.
12 ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು, ಅವರಿಗೆ ಹೆಚ್ಚು ಸಮೃದ್ಧಿಯಾಗುವುದು. ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ತೆಗೆದುಕೊಳ್ಳಲಾಗುವುದು.”
Denn wer da hat, dem wird gegeben, ja überschwenglich gegeben werden; wer aber nicht hat, von dem wird auch genommen werden, das er hat.
13 ಆದ್ದರಿಂದ, ನಾನು ಅವರೊಡನೆ ಸಾಮ್ಯಗಳಲ್ಲಿ ಮಾತನಾಡುತ್ತೇನೆ: “ಏಕೆಂದರೆ ಅವರು ಕಣ್ಣಾರೆ ನೋಡಿದರೂ ಕಾಣುವುದಿಲ್ಲ; ಕೇಳಿದರೂ ತಿಳಿದುಕೊಳ್ಳುವುದಿಲ್ಲ; ಅವರು ಗ್ರಹಿಸುವುದೂ ಇಲ್ಲ.
Darum rede ich zu ihnen in Gleichnissen, weil sie sehen und doch nicht sehen, hören und doch nicht hören noch verstehen.
14 ಹೀಗೆ ಯೆಶಾಯನ ಪ್ರವಾದನೆಯು ಅವರಲ್ಲಿ ನೆರವೇರಿತು. ಅದೇನೆಂದರೆ, “‘ನೀವು ಕೇಳುತ್ತಲೇ ಇರುವಿರಿ, ಎಂದೆಂದೂ ಅರ್ಥಮಾಡಿಕೊಳ್ಳಲಾರಿರಿ; ನೀವು ಕಾಣುತ್ತಲೇ ಇರುವಿರಿ, ಎಂದೆಂದೂ ಅರಿತುಕೊಳ್ಳಲಾರಿರಿ.
Und es erfüllt sich für sie die Weissagung des Jesaias, die da lautet: Mit dem Gehör sollt ihr hören und nichts verstehen, und mit dem Gesicht sehen und nichts erblicken.
15 ಈ ಜನರ ಹೃದಯವು ಕಠೋರವಾಗಿದೆ; ಇವರ ಕಿವಿಗಳು ಕೇಳದ ಹಾಗೆ ಮಂದವಾಗಿವೆ, ಇವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ. ಇಲ್ಲವಾದರೆ ತಾವು ಕಣ್ಣಿನಿಂದ ಕಂಡು, ಕಿವಿಯಿಂದ ಕೇಳಿ. ತಮ್ಮ ಹೃದಯದಿಂದ ತಿಳಿದು, ನನ್ನ ಕಡೆಗೆ ತಿರುಗಿಕೊಂಡಿದ್ದರೆ, ನಾನು ಅವರನ್ನು ಸ್ವಸ್ಥಪಡಿಸುತ್ತಿದ್ದೆನು,’ ಎಂಬುದೇ.
Denn es ward das Herz dieses Volkes verstockt und sie sind schwerhörig geworden, und ihre Augen haben sie verschlossen, daß sie nicht sähen mit ihren Augen, und nicht hörten mit ihren Ohren noch verständen mit dem Herzen und umkehrten, und ich sie heilte.
16 ಆದರೆ ನಿಮ್ಮ ಕಣ್ಣುಗಳು ಕಾಣುವುದರಿಂದಲೂ ನಿಮ್ಮ ಕಿವಿಗಳು ಕೇಳುವುದರಿಂದಲೂ ನೀವು ಧನ್ಯರು.
Selig aber sind eure Augen, daß sie sehen, und eure Ohren, daß sie hören.
17 ನಾನು ಸತ್ಯವಾಗಿ ನಿಮಗೆ ಹೇಳುತ್ತೇನೆ, ಅನೇಕ ಪ್ರವಾದಿಗಳು ಮತ್ತು ನೀತಿವಂತರು ನೀವು ಕಾಣುವಂಥವುಗಳನ್ನು ಕಾಣಬೇಕೆಂದು ಅಪೇಕ್ಷಿಸಿದರೂ ಕಾಣಲಿಲ್ಲ ಮತ್ತು ನೀವು ಕೇಳುವಂಥವುಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಅವರು ಕೇಳಲಿಲ್ಲ.
Wahrlich, ich sage euch, viele Propheten und Gerechte begehrten zu sehen, was ihr sehet, und haben es nicht gesehen, und zu hören, was ihr höret, und haben es nicht gehört.
18 “ಆದ್ದರಿಂದ ಬಿತ್ತುವವನ ಸಾಮ್ಯದ ಅರ್ಥವನ್ನು ನೀವು ಕೇಳಿರಿ:
So höret ihr das Gleichnis des Sämanns.
19 ಯಾರಾದರೂ ಪರಲೋಕ ರಾಜ್ಯದ ವಾಕ್ಯವನ್ನು ಕೇಳಿ ಗ್ರಹಿಸದೆ ಇರುವಾಗ, ಕೆಡುಕನು ಬಂದು ಅವರ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದುಹಾಕುತ್ತಾನೆ, ಇದೇ ದಾರಿಯ ಪಕ್ಕದಲ್ಲಿ ಬಿತ್ತಲಾಗಿರುವ ಬೀಜವಾಗಿರುವದು.
Wo überall einer das Wort vom Reiche hört und nicht versteht, da kommt der Böse und nimmt weg, was in sein Herz gestreut ist. Das ist der, bei welchem es an den Weg gesät ward.
20 ಕಲ್ಲು ನೆಲದ ಮೇಲೆ ಬಿತ್ತಲಾಗಿರುವ ಬೀಜವಾಗಿರುವವರು, ವಾಕ್ಯವನ್ನು ಕೇಳಿದ ಕೂಡಲೇ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ.
Was aber auf das steinige Land gesät ward, das ist der, welcher das Wort hört und alsdann mit Freuden annimmt.
21 ಆದರೆ ಅವರಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇದ್ದು, ವಾಕ್ಯದ ನಿಮಿತ್ತವಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ, ಅವರು ಬೇಗನೆ ಬಿದ್ದು ಹೋಗುತ್ತಾರೆ.
Er hat aber keine Wurzel in sich, sondern er ist ein Kind des Augenblicks; kommt aber Drangsal oder Verfolgung um des Wortes willen, so nimmt er gleich Anstoß.
22 ಮುಳ್ಳುಗಿಡಗಳಲ್ಲಿ ಬಿತ್ತಲಾಗಿರುವ ಬೀಜವಾಗಿರುವವರು ವಾಕ್ಯವನ್ನು ಕೇಳುತ್ತಾರೆ, ಆದರೆ ಈ ಜೀವನದ ಚಿಂತೆಗಳೂ ಐಶ್ವರ್ಯದ ವ್ಯಾಮೋಹವೂ ವಾಕ್ಯವನ್ನು ಅಡಗಿಸುವುದರಿಂದ, ವಾಕ್ಯವು ಫಲವನ್ನು ಕೊಡುವುದಿಲ್ಲ. (aiōn )
Was aber unter die Dornen gesät ward, das ist der, welcher das Wort hört, und die Sorge der Welt und der Trug des Reichtums erstickt das Wort, und er bleibt ohne Frucht. (aiōn )
23 ಆದರೆ ಒಳ್ಳೆಯ ಭೂಮಿಯಲ್ಲಿ ಬಿತ್ತಲಾಗಿರುವ ಬೀಜವಾಗಿರುವವರು, ವಾಕ್ಯವನ್ನು ಕೇಳಿ ಅದನ್ನು ಗ್ರಹಿಸಿಕೊಳ್ಳುತ್ತಾರೆ. ಇವರು ಫಲ ಫಲಿಸುವವರಾಗಿ ನೂರರಷ್ಟು ಅರವತ್ತರಷ್ಟು ಮತ್ತು ಮೂವತ್ತರಷ್ಟು ಫಲವನ್ನು ಕೊಡುತ್ತಾರೆ.”
Was aber auf das gute Land gesät ist, das ist der, der das Wort hört und versteht, der dann Frucht bringt, und trägt der eine hundertfältig, der andere sechzig-, der andere dreißigfältig.
24 ಯೇಸು ಮತ್ತೊಂದು ಸಾಮ್ಯವನ್ನು ಹೇಳಿದರು: “ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ.
Ein anderes Gleichnis legte er ihnen vor also: Das Reich der Himmel gleicht einem Menschen, der guten Samen säte auf seinen Acker.
25 ಆದರೆ ಜನರು ನಿದ್ರಿಸುತ್ತಿರುವಾಗ, ಅವನ ವೈರಿಯು ಬಂದು ಗೋಧಿಯ ನಡುವೆ ಕಳೆಯನ್ನು ಬಿತ್ತಿ ಹೊರಟುಹೋದನು.
Während aber die Leute schliefen, kam sein Feind und säte Unkraut dazu, mitten unter den Weizen, und gieng davon.
26 ಗೋಧಿಯು ಮೊಳೆತು ಬೆಳೆಯುತ್ತಿರುವಾಗ, ಕಳೆ ಸಹ ಕಾಣಿಸಿಕೊಂಡಿತು.
Als aber die grüne Saat sproßte und Frucht trieb, da zeigte sich auch das Unkraut.
27 “ಮನೆಯ ಯಜಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ, ‘ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದೆಯಲ್ಲಾ? ಆದರೆ ಈ ಕಳೆಯು ಎಲ್ಲಿಂದ ಬಂತು?’ ಎಂದು ಕೇಳಿದರು.
Es kamen aber die Knechte des Hausherrn herzu und sagten ihm: Herr, hast du nicht guten Samen gesät auf deinen Acker? Woher hat er denn Unkraut?
28 “ಯಜಮಾನನು ಅವರಿಗೆ, ‘ವೈರಿಯು ಇದನ್ನು ಮಾಡಿದ್ದಾನೆ,’ ಎಂದನು. “ಆಗ ಸೇವಕರು ಅವನಿಗೆ, ‘ನಾವು ಹೋಗಿ ಅವುಗಳನ್ನು ಕಿತ್ತುಹಾಕೋಣವೇ?’ ಎಂದು ಕೇಳಿದರು.
Er aber sagte zu ihnen: ein Feind hat das gethan. Die Knechte aber sagen zu ihm, willst du nun, daß wir hingehen und es sammeln?
29 “ಆದರೆ ಯಜಮಾನನು, ‘ಬೇಡ, ನೀವು ಕಳೆಯನ್ನು ಕೀಳುವಾಗ, ಅವುಗಳೊಂದಿಗೆ ಗೋಧಿಯನ್ನೂ ಕಿತ್ತುಬಿಟ್ಟೀರಿ.
Er aber sagt: nein, damit ihr nicht beim Sammeln des Unkrauts mit demselben auch den Weizen herausreißet.
30 ಸುಗ್ಗಿಯ ಕಾಲದವರೆಗೆ ಎರಡೂ ಜೊತೆಯಲ್ಲಿ ಬೆಳೆಯಲಿ. ಸುಗ್ಗಿಯ ಕಾಲದಲ್ಲಿ ನಾನು ಕೊಯ್ಯುವವರಿಗೆ: ಮೊದಲು ಕಳೆಯನ್ನು ಕೂಡಿಸಿ ಅವುಗಳನ್ನು ಸುಡುವುದಕ್ಕೆ ಬೇರೆ ಕಟ್ಟಿಡಿರಿ, ಗೋಧಿಯನ್ನು ನನ್ನ ಕಣಜದಲ್ಲಿ ಕೂಡಿಸಿರಿ ಎಂದು ಹೇಳುವೆನು,’ ಅಂದನು.”
Lasset beides mit einandner wachsen bis zur Ernte, dann werde ich zur Zeit der Ernte zu den Schnittern sagen: sammelt zuerst das Unkraut und bindet es in Bündel, es zu verbrennen, den Weizen aber sammelt in meine Scheune.
31 ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದರು: “ಪರಲೋಕ ರಾಜ್ಯವು, ಒಬ್ಬ ಮನುಷ್ಯನು ಸಾಸಿವೆ ಕಾಳನ್ನು ತೆಗೆದುಕೊಂಡುಹೋಗಿ ತನ್ನ ಹೊಲದಲ್ಲಿ ಬಿತ್ತಿದ್ದಕ್ಕೆ ಹೋಲಿಕೆಯಾಗಿದೆ.
Ein anderes Gleichnis legte er ihnen vor also: Das Reich der Himmel ist gleich einem Senfkorn, das ein Mensch nahm und säte es auf seinen Acker.
32 ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದ್ದರೂ ಅದು ಬೆಳೆದಾಗ, ಎಲ್ಲಾ ಸಸ್ಯಗಳಿಗಿಂತಲೂ ದೊಡ್ಡದಾಗಿ ಮರವಾಯಿತು. ಹೀಗೆ ಆಕಾಶದ ಪಕ್ಷಿಗಳು ಬಂದು, ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸಮಾಡುತ್ತವೆ.”
Das ist der kleinste unter allen Samen, wenn es aber wächst, so ist es größer als die Kräuter und wird ein Baum, so daß die Vögel des Himmels kommen und nisten in seinen Zweigen.
33 ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದರು: “ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀಯು ತೆಗೆದುಕೊಂಡು ಹುಳಿಯಿಲ್ಲದ ಸುಮಾರು ಇಪ್ಪತ್ತೇಳು ಕಿಲೋಗ್ರಾಂ ಹಿಟ್ಟಿನಲ್ಲಿ ಕಲಸಿದಾಗ ಆ ಹಿಟ್ಟೆಲ್ಲಾ ಹುಳಿಯಾಯಿತು.”
Ein anderes Gleichnis sagte er zu ihnen: Das Reich der Himmel ist gleich einem Sauerteig, den eine Frau nahm und legte ihn ein in drei Sat Weizenmehl, bis es ganz durchsäuert ward.
34 ಯೇಸು ಇವೆಲ್ಲವನ್ನು ಜನಸಮೂಹದೊಂದಿಗೆ ಸಾಮ್ಯಗಳಲ್ಲಿಯೇ ಹೇಳಿದರು; ಸಾಮ್ಯವಿಲ್ಲದೆ ಯೇಸು ಅವರಿಗೆ ಏನೂ ಹೇಳುತ್ತಿರಲಿಲ್ಲ.
Dieses alles redete Jesus in Gleichnissen zu den Massen, und ohne Gleichnis redete er nichts zu ihnen,
35 ಹೀಗೆ ಒಬ್ಬ ಪ್ರವಾದಿಯ ಮೂಲಕ ಹೇಳಿದ ಮಾತು ನೆರವೇರಿತು: “ನಾನು ಸಾಮ್ಯಗಳನ್ನು ಹೇಳುವಂತೆ ನನ್ನ ಬಾಯಿ ತೆರೆಯುವೆನು. ನಾನು ಲೋಕ ಪ್ರಾರಂಭದಿಂದ ಮರೆಯಾದವುಗಳನ್ನು ಪ್ರಕಟಪಡಿಸುವೆನು.”
auf daß erfüllt würde, was da gesagt ist durch das Wort des Propheten Jesaias: Ich will aufthun mit Gleichnissen meinen Mund, ich will ausschütten, was verborgen ist von der Schöpfung her.
36 ತರುವಾಯ ಯೇಸು ಜನಸಮೂಹವನ್ನು ಕಳುಹಿಸಿಬಿಟ್ಟು ಮನೆಯೊಳಕ್ಕೆ ಹೋದರು. ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ಹೊಲದಲ್ಲಿರುವ ಕಳೆಯ ಸಾಮ್ಯವನ್ನು ನಮಗೆ ವಿವರಿಸಿರಿ,” ಎಂದರು.
Hierauf entließ er die Massen und gieng in das Haus. Und seine Jünger traten zu ihm und sagten: Deute uns das Gleichnis vom Unkraut des Ackers.
37 ಯೇಸು ಉತ್ತರವಾಗಿ ಅವರಿಗೆ, “ಒಳ್ಳೆಯ ಬೀಜ ಬಿತ್ತುವವನು ಮನುಷ್ಯಪುತ್ರನು.
Er aber antwortete: Der den guten Samen sät, ist der Sohn des Menschen.
38 ಹೊಲವು ಈ ಲೋಕ; ಒಳ್ಳೆಯ ಬೀಜವು ದೇವರ ರಾಜ್ಯದ ಮಕ್ಕಳು; ಕಳೆಯು ಕೆಡುಕನ ಮಕ್ಕಳಾಗಿದ್ದಾರೆ.
Der Acker aber ist die Welt; der gute Samen aber, das sind die Söhne des Reiches; das Unkraut aber sind die Söhne des Bösen.
39 ಅದನ್ನು ಬಿತ್ತಿದ ವೈರಿಯು ಸೈತಾನನೇ. ಸುಗ್ಗಿಯ ಕಾಲವು ಲೋಕಾಂತ್ಯವಾಗಿದೆ. ಕೊಯ್ಯುವವರು ದೇವದೂತರೇ. (aiōn )
Der Feind aber, der es gesät, ist der Teufel. Die Ernte aber ist das Ende der Welt, die Schnitter sind Engel. (aiōn )
40 “ಹೇಗೆ ಕಳೆಯನ್ನು ಕಿತ್ತು ಬೆಂಕಿಯಲ್ಲಿ ಸುಡುವರೋ, ಹಾಗೆಯೇ ಈ ಲೋಕಾಂತ್ಯದಲ್ಲಿ ಆಗುವುದು. (aiōn )
Wie nun das Unkraut gesammelt und im Feuer verbrannt wird, so wird es am Ende der Welt sein. (aiōn )
41 ಮನುಷ್ಯಪುತ್ರನು ತನ್ನ ದೂತರನ್ನು ಕಳುಹಿಸುವನು. ಅವರು ಪಾಪಕ್ಕೆ ಆತಂಕವಾದ ಎಲ್ಲವನ್ನೂ, ಕೇಡುಮಾಡುವ ಎಲ್ಲರನ್ನೂ ಆತನ ರಾಜ್ಯದೊಳಗಿಂದ ಕೂಡಿಸಿ,
Der Sohn des Menschen wird seine Engel ausschicken, und sie werden aus seinem Reiche zusammenlesen alle Aergernisse und die den Frevel thun,
42 ದೂತರು ಅವರನ್ನು ಅಗ್ನಿಕುಂಡದಲ್ಲಿ ಹಾಕುವರು. ಅಲ್ಲಿ ಗೋಳಾಟವೂ ಹಲ್ಲು ಕಡಿಯುವಿಕೆಯೂ ಇರುವವು.
und werden sie in den Feuerofen werfen, da wird sein Heulen und Zähneknirschen.
43 ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ.
Alsdann werden die Gerechten leuchten wie die Sonne in ihres Vaters Reich. Wer Ohren hat, der höre.
44 “ಪರಲೋಕ ರಾಜ್ಯವು ಹೊಲದಲ್ಲಿ ಹೂಳಿಟ್ಟ ನಿಕ್ಷೇಪಕ್ಕೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಮನುಷ್ಯನು ಕಂಡುಕೊಂಡು ಮುಚ್ಚಿಟ್ಟು, ಅದರ ಸಂತೋಷದ ನಿಮಿತ್ತ ಹೊರಟುಹೋಗಿ, ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಳ್ಳುತ್ತಾನೆ.
Das Reich der Himmel ist gleich einem Schatze, der auf einem Acker verborgen war, den fand ein Mensch und verbarg ihn, und vor Freude geht er hin und verkaufte alles was er hat und kauft den Acker.
45 “ಪರಲೋಕ ರಾಜ್ಯವು ಒಳ್ಳೆಯ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ.
Wiederum ist das Reich der Himmel gleich einem Handelsmann, der edle Perlen suchte.
46 ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು, ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಳ್ಳುತ್ತಾನೆ.
Da er aber eine kostbare Perle gefunden hatte, gieng er hin und verkaufte alles was er hatte und kaufte sie.
47 “ಪರಲೋಕ ರಾಜ್ಯವು, ಸರೋವರದಲ್ಲಿ ಬೀಸಲಾಗಿ ಎಲ್ಲಾ ತರವಾದ ಮೀನುಗಳನ್ನು ಕೂಡಿಸಿದ ಬಲೆಗೆ ಹೋಲಿಕೆಯಾಗಿದೆ.
Wiederum ist das Reich der Himmel gleich einem Netze, das in das Meer geworfen ward und allerhand aufnahm;
48 ಬಲೆ ತುಂಬಿದಾಗ, ಬೆಸ್ತರು ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯವುಗಳನ್ನು ಬುಟ್ಟಿಗಳಲ್ಲಿ ತುಂಬಿಸಿ, ಕೆಟ್ಟವುಗಳನ್ನು ಹೊರಗೆ ಬಿಸಾಡುತ್ತಾರೆ.
als es voll war, zogen sie es ans Ufer, setzten sich und lasen das Gute in Gefäße, das Faule aber warfen sie weg.
49 ಹಾಗೆಯೇ ಲೋಕಾಂತ್ಯದಲ್ಲಿ ಇರುವುದು. ದೇವದೂತರು ಹೊರಟುಬಂದು ನೀತಿವಂತರ ಮಧ್ಯದಿಂದ ಕೆಡುಕರನ್ನು ಪ್ರತ್ಯೇಕಿಸಿ, (aiōn )
So wird es sein am Ende der Welt; es werden die Engel ausgehen und die Bösen ausscheiden von den Gerechten, (aiōn )
50 ಅವರನ್ನು ಅಗ್ನಿಕುಂಡದಲ್ಲಿ ಹಾಕುವರು. ಅಲ್ಲಿ ಗೋಳಾಟವೂ ಹಲ್ಲು ಕಡಿಯುವಿಕೆಯೂ ಇರುವವು,” ಎಂದು ಹೇಳಿದರು.
und werden sie in den Feuerofen werfen, da wird sein Heulen und Zähneknirschen.
51 ಯೇಸು ಶಿಷ್ಯರಿಗೆ, “ಇವುಗಳನ್ನೆಲ್ಲಾ ನೀವು ಗ್ರಹಿಸಿದ್ದೀರಾ?” ಎಂದು ಕೇಳಿದರು. ಅದಕ್ಕೆ, ಅವರು ಯೇಸುವಿಗೆ, “ಹೌದು,” ಎಂದು ಹೇಳಿದರು.
Habt ihr das alles verstanden? Da sagen sie zu ihm: ja.
52 ಯೇಸು ಅವರಿಗೆ, “ಆದಕಾರಣ ಪರಲೋಕ ರಾಜ್ಯದ ಶಿಷ್ಯನಾಗಿರುವ ಪ್ರತಿಯೊಬ್ಬ ನಿಯಮ ಬೋಧಕನು, ತನ್ನ ಬೊಕ್ಕಸದೊಳಗಿಂದ ಹೊಸ ಮತ್ತು ಹಳೆಯ ವಸ್ತುಗಳನ್ನು ಹೊರಗೆ ತರುವ ಒಬ್ಬ ಮನೆ ಯಜಮಾನನಿಗೆ ಹೋಲಿಕೆಯಾಗಿದ್ದಾನೆ,” ಎಂದರು.
Er aber sagt zu ihnen: Darum gleicht jeder Schriftgelehrte, der geschult ist für das Reich der Himmel, einem Hausherrn, der aus seinem Schatze vorbringt neues und altes.
53 ಈ ಸಾಮ್ಯಗಳನ್ನು ಮುಗಿಸಿದ ತರುವಾಯ ಯೇಸು ಅಲ್ಲಿಂದ ಹೊರಟು ಹೋದರು.
Und es geschah, als Jesus diese Gleichnisse beendet hatte, brach er von dort auf.
54 ಯೇಸು ತಮ್ಮ ಸ್ವಂತ ಊರಿಗೆ ಬಂದು ಅವರ ಸಭಾಮಂದಿರದಲ್ಲಿ ಅವರಿಗೆ ಬೋಧನೆ ಮಾಡಲು ಪ್ರಾರಂಭಿಸಲು, ಅವರು ವಿಸ್ಮಯಗೊಂಡು, “ಈ ಜ್ಞಾನವೂ ಈ ಮಹತ್ಕಾರ್ಯಗಳೂ ಈತನಿಗೆ ಎಲ್ಲಿಂದ ಬಂದವು?
Und er kam in seine Vaterstadt und lehrte sie in ihrer Synagoge also, daß sie betroffen sprachen: woher hat der diese Weisheit und die Wunder?
55 ಈತನು ಬಡಗಿಯ ಪುತ್ರನಲ್ಲವೇ? ಮರಿಯಳೆಂಬುವಳು ಈತನ ತಾಯಿಯಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಎಂಬುವರು ಈತನ ತಮ್ಮಂದಿರಲ್ಲವೇ?
Ist das nicht des Zimmermanns Sohn? heißt seine Mutter nicht Mariam und seine Brüder Jakobus und Joseph und Simon und Judas?
56 ಈತನ ತಂಗಿಯರೆಲ್ಲರೂ ನಮ್ಮೊಂದಿಗೆ ಇದ್ದಾರಲ್ಲವೇ? ಹಾಗಾದರೆ, ಇವೆಲ್ಲವು ಈತನಿಗೆ ಎಲ್ಲಿಂದ ಬಂದವು?” ಎಂದು ಮಾತನಾಡಿಕೊಂಡರು.
und sind nicht seine Schwestern alle bei uns? Woher hat er nun das alles?
57 ಅವರು ಯೇಸುವನ್ನು ತಾತ್ಸಾರ ಮಾಡಿದರು. ಆದರೆ ಯೇಸು ಅವರಿಗೆ, “ಪ್ರವಾದಿಗೆ ತನ್ನ ಸ್ವಂತ ಊರಿನಲ್ಲಿ ಹಾಗೂ ತನ್ನ ಸ್ವಂತ ಮನೆಯಲ್ಲಿ ಮಾತ್ರ ಮರ್ಯಾದೆ ಇರುವುದಿಲ್ಲ,” ಎಂದರು.
Und sie nahmen Anstoß an ihm. Jesus aber sagte zu ihnen: ein Prophet ist nirgend unwert außer in seiner Vaterstadt und in seinem Hause.
58 ಯೇಸು ಅವರ ಅಪನಂಬಿಕೆಯ ದೆಸೆಯಿಂದ ಅಲ್ಲಿ ಬಹಳ ಮಹತ್ಕಾರ್ಯಗಳನ್ನು ಮಾಡಲಿಲ್ಲ.
Und er that nicht viele Wunder daselbst um ihres Unglaubens willen.