< ಮತ್ತಾಯನು 12 >
1 ಯೇಸು ಒಂದು ಸಬ್ಬತ್ ದಿನ ಪೈರಿನ ಹೊಲವನ್ನು ಹಾದುಹೋಗುತ್ತಿದ್ದಾಗ, ಅವರ ಶಿಷ್ಯರು ಹಸಿದಿದ್ದರಿಂದ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು.
Того ча́су Ісус перехо́див лана́ми в суботу. А у́чні Його зголодніли були, і стали зривати колосся та їсти.
2 ಫರಿಸಾಯರು ಅದನ್ನು ಕಂಡು ಯೇಸುವಿಗೆ, “ಇಗೋ, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಯಮಕ್ಕೆ ವಿರುದ್ಧವಾಗಿರುವದನ್ನು ಮಾಡುತ್ತಿದ್ದಾರೆ,” ಎಂದರು.
Побачили ж це фарисеї, та й кажуть Йому: „Он учні Твої роблять те, чого не годиться робити в суботу“.
3 ಅದಕ್ಕೆ ಯೇಸು ಅವರಿಗೆ, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಅವನು ಏನು ಮಾಡಿದನೆಂದು ನೀವು ಓದಲಿಲ್ಲವೇ?
А Він відповів їм: „Чи ж ви не читали, що́ зробив був Давид, коли сам зголоднів і ті, хто був із ним?
4 ಅವನು ದೇವರ ಆಲಯದೊಳಗೆ ಹೋಗಿ, ಯಾಜಕರ ಹೊರತು ತಾನಾಗಲಿ ತನ್ನ ಸಂಗಡಿಗರಾಗಲಿ, ತಿನ್ನುವುದಕ್ಕೆ ಧರ್ಮಸಮ್ಮತವಲ್ಲದ ನೈವೇದ್ಯದ ರೊಟ್ಟಿಯನ್ನು ತಿನ್ನಲಿಲ್ಲವೇ?
Як він увійшов до Божого дому, і спожив хліби́ показні́, яких їсти не можна було ні йому, ані тим, хто був із ним, а тільки самим священикам?
5 ಇದಲ್ಲದೆ ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನವನ್ನು ಉಲ್ಲಂಘಿಸಿದರೂ ನಿರ್ದೋಷಿಗಳಾಗಿದ್ದಾರೆಂದು ನೀವು ನಿಯಮದಲ್ಲಿ ಓದಲಿಲ್ಲವೇ?
Або ви не читали в Зако́ні що в суботу священики пору́шують суботу у храмі, — і невинні вони?
6 ದೇವಾಲಯಕ್ಕಿಂತಲೂ ದೊಡ್ಡವನು ಇಲ್ಲಿದ್ದಾನೆ ಎಂದು ನಾನು ನಿಮಗೆ ಹೇಳುತ್ತೇನೆ.
А Я вам кажу́, що тут Більший, як храм!
7 ಆದರೆ, ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬುದರ ಅರ್ಥವನ್ನು ನೀವು ತಿಳಿದಿದ್ದರೆ, ನಿರಪರಾಧಿಗಳನ್ನು ಖಂಡಿಸುತ್ತಿರಲಿಲ್ಲ.
Коли б знали ви, що́ то є: „Милости хо́чу, а не жертви“, то ви не судили б невинних.
8 ಏಕೆಂದರೆ ಮನುಷ್ಯಪುತ್ರನಾದ ನಾನು ಸಬ್ಬತ್ ದಿನಕ್ಕೆ ಒಡೆಯನಾಗಿದ್ದೇನೆ,” ಎಂದು ಹೇಳಿದರು.
Бо Син Лю́дський Госпо́дь і суботі“!
9 ಯೇಸು ಅಲ್ಲಿಂದ ಹೊರಟು ಅವರ ಸಭಾಮಂದಿರದೊಳಕ್ಕೆ ಹೋದರು.
І, вийшовши звідти, прибув Він до їхньої синагоги.
10 ಅಲ್ಲಿ ಕೈ ಬತ್ತಿದ ಒಬ್ಬ ಮನುಷ್ಯನಿದ್ದನು. ಆಗ ಫರಿಸಾಯರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು ಆತನಿಗೆ, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ನ್ಯಾಯಸಮ್ಮತವೋ?” ಎಂದು ಕೇಳಿದರು.
І ото, був там чоловік, що мав суху руку. І, щоб обвини́ти Ісуса, запитали Його: „Чи вздоровляти годи́ться в суботу?“
11 ಅದಕ್ಕೆ ಯೇಸು ಅವರಿಗೆ, “ನಿಮ್ಮಲ್ಲಿ ಯಾವನಿಗಾದರೂ ಒಂದು ಕುರಿಯಿರಲಾಗಿ ಅದು ಸಬ್ಬತ್ ದಿನದಲ್ಲಿ ಕುಣಿಯೊಳಗೆ ಬಿದ್ದರೆ, ಅವನು ಅದನ್ನು ಮೇಲಕ್ಕೆ ಎತ್ತದೆ ಇರುವನೇ?
А Він їм сказав: „Чи зна́йде́ться між вами люди́на, яка, одну мавши вівцю́, не пі́де по неї, і не врятує її, як вона впаде в яму в суботу?
12 ಕುರಿಗಿಂತಲೂ ಒಬ್ಬ ಮನುಷ್ಯನು ಎಷ್ಟೋ ಮೌಲ್ಯವುಳ್ಳವನಾಗಿದ್ದಾನಲ್ಲವೇ? ಆದ್ದರಿಂದ ಸಬ್ಬತ್ ದಿನಗಳಲ್ಲಿ ಒಳ್ಳೆಯದನ್ನು ಮಾಡುವುದು ನ್ಯಾಯಸಮ್ಮತವಾಗಿದೆ!” ಎಂದು ಹೇಳಿದರು.
А скільки ж люди́на вартніша за тую овечку! Тому́ можна чинити добро й у суботу“!
13 ಆಗ ಯೇಸು ಆ ಮನುಷ್ಯನಿಗೆ, “ನಿನ್ನ ಕೈಚಾಚು” ಎಂದರು. ಅವನು ಕೈಚಾಚಿದಾಗ ಅದು ಸಂಪೂರ್ಣ ವಾಸಿಯಾಗಿ ಇನ್ನೊಂದು ಕೈಯಂತೆಯೇ ಆಯಿತು.
І каже тоді чоловікові: „Простягни свою руку!“Той простяг, — і стала здорова вона, як і друга.
14 ಆದರೆ ಫರಿಸಾಯರು ಹೊರಗೆ ಹೋಗಿ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಅವರ ವಿರೋಧವಾಗಿ ಆಲೋಚನೆಮಾಡಿದರು.
Фарисеї ж пішли, і зібрали нараду на Нього, — я́к би Його погубити?
15 ಆದರೆ ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದರು. ದೊಡ್ಡ ಜನರ ಗುಂಪು ಅವರನ್ನು ಹಿಂಬಾಲಿಸಿತು. ಯೇಸು ಅವರಲ್ಲಿ ಅಸ್ವಸ್ಥರಾದವರನ್ನು ಗುಣಪಡಿಸಿದರು.
А Ісус, розізнавши, пішов Собі звідти.
16 ಆದರೆ ಯೇಸು ತಾನು ಯಾರೆಂದು ಯಾರಿಗೂ ಪ್ರಕಟಿಸಬಾರದೆಂದು ಅವರನ್ನು ಎಚ್ಚರಿಸಿದರು.
А Він наказав їм суво́ро Його не виявляти,
17 ಹೀಗೆ ದೇವರು ಪ್ರವಾದಿಯಾದ ಯೆಶಾಯನ ಮುಖಾಂತರ ಹೇಳಿದ ಮಾತು ನೆರವೇರಿತು. ಅದೇನೆಂದರೆ:
щоб спра́вдилось те, що́ сказав був Ісая пророк, промовляючи:
18 “ಈತನು ನಾನು ಆರಿಸಿಕೊಂಡ ನನ್ನ ದಾಸನು, ಈ ನನ್ನ ಪ್ರಿಯನಲ್ಲಿ ನನ್ನ ಪ್ರಾಣವು ಸಂಪೂರ್ಣ ಮೆಚ್ಚಿದೆ. ನಾನು ಈತನ ಮೇಲೆ ನನ್ನ ಆತ್ಮವನ್ನು ಇರಿಸುವೆನು, ಈತನು ಜನಾಂಗಗಳಿಗೆ ನ್ಯಾಯವನ್ನು ಸಾರುವನು.
„Ото Мій Слуга, що Я вибрав Його, Мій Улю́блений, що Його полюбила душа Моя! Вкладу́ Свого Духа в Нього, — і Він суд проголо́сить поганам.
19 ಈತನು ಜಗಳವಾಡುವವನಲ್ಲ, ಕೂಗಾಡುವವನಲ್ಲ; ಬೀದಿಗಳಲ್ಲಿ ಈತನ ಸ್ವರವನ್ನು ಯಾರೂ ಕೇಳಿಸಿಕೊಳ್ಳುವುದೂ ಇಲ್ಲ.
Він не буде змагатися, ані кричати, і на вулицях чути не буде ніхто Його голосу.
20 ಈತನು ನ್ಯಾಯವನ್ನು ಜಯಕ್ಕೆ ನಡೆಸುವವರೆಗೆ, ಜಜ್ಜಿದ ದಂಟನ್ನು ಮುರಿಯುವವನಲ್ಲ, ಆರಿ ಹೋಗುತ್ತಿರುವ ಬತ್ತಿಯನ್ನು ನಂದಿಸುವವನೂ ಅಲ್ಲ.
Він очерети́ни надло́мленої не доло́мить, і ґнота́ догасаючого не пога́сить, поки не допровадить при́суду до перемоги.
21 ಈತನ ಹೆಸರಿನಲ್ಲಿಯೇ ಯೆಹೂದ್ಯರಲ್ಲದವರು ನಿರೀಕ್ಷೆ ಇಡುವರು.”
І погани наді́ятись будуть на Йме́ння Його“!
22 ಆಗ ಕೆಲವರು ದೆವ್ವಹಿಡಿದ ಕುರುಡನೂ ಮೂಕನೂ ಆಗಿದ್ದ ಒಬ್ಬನನ್ನು ಯೇಸುವಿನ ಬಳಿಗೆ ತಂದರು. ಅವರು ಅವನನ್ನು ಗುಣಪಡಿಸಿದ್ದರಿಂದ, ಕುರುಡನೂ ಮೂಕನೂ ಆಗಿದ್ದವನು ಮಾತನಾಡಿದನು ಮತ್ತು ದೃಷ್ಟಿ ಹೊಂದಿದನು.
Тоді привели́ до Ньо́го німого сліпця́, що був біснуватий, — і Він уздоро́вив його, так що німий став говорити та бачити.
23 ಆಗ ಜನರೆಲ್ಲರೂ ವಿಸ್ಮಯಗೊಂಡವರಾಗಿ, “ದಾವೀದನ ಪುತ್ರನು ಈತನೇ ಅಲ್ಲವೇ?” ಎಂದರು.
І дивувались усі люди й казали: „Чи ж не Син це Давидів?“
24 ಆದರೆ ಫರಿಸಾಯರು ಇದನ್ನು ಕೇಳಿದಾಗ, “ಈತನು ದೆವ್ವಗಳನ್ನು ಓಡಿಸುತ್ತಿರುವುದು ದೆವ್ವಗಳ ಅಧಿಪತಿಯಾದ ಬೆಲ್ಜೆಬೂಲನಿಂದಲೇ,” ಎಂದರು.
Фарисеї ж, почувши, сказали: „Він де́монів не виганяє інакше, тільки як Вельзеву́лом, князем де́монів“.
25 ಯೇಸು ಅವರ ಆಲೋಚನೆಗಳನ್ನು ತಿಳಿದು ಅವರಿಗೆ, “ತನಗೆ ವಿರೋಧವಾಗಿ ವಿಭಜಿಸಿಕೊಳ್ಳುವ ಪ್ರತಿಯೊಂದು ರಾಜ್ಯವು ನಾಶವಾಗುವುದು ಮತ್ತು ತನಗೆ ವಿರೋಧವಾಗಿ ವಿಭಾಗವಾಗಿರುವ ಪ್ರತಿಯೊಂದು ಪಟ್ಟಣವಾಗಲಿ ಮನೆಯಾಗಲಿ ನಿಲ್ಲುವುದಿಲ್ಲ.
А Він знав думки їхні, і промовив до них: „Кожне царство, поділене супроти себе, запусті́є. І кожне місто чи дім, поділені супроти себе, не втри́маються.
26 ಇದಲ್ಲದೆ ಸೈತಾನನು ಸೈತಾನನನ್ನು ಹೊರಗೆ ಓಡಿಸಿದರೆ, ಅವನು ತನಗೆ ವಿರೋಧವಾಗಿ ವಿಭಾಗವಾಗಿರುವನು. ಹಾಗಾದರೆ ಅವನ ರಾಜ್ಯವು ನಿಲ್ಲುವುದು ಹೇಗೆ?
І коли сатана́ сатану́ виганяє, то ділиться супроти себе; як же втри́мається царство його?
27 ಬೆಲ್ಜೆಬೂಲನಿಂದ ನಾನು ದೆವ್ವಗಳನ್ನು ಓಡಿಸುವುದಾದರೆ, ನಿಮ್ಮ ಜನರು ಯಾರಿಂದ ಅವುಗಳನ್ನು ಓಡಿಸುತ್ತಾರೆ? ಆದ್ದರಿಂದ, ನಿಮ್ಮವರೇ ನಿಮಗೆ ನ್ಯಾಯಾಧಿಪತಿಗಳಾಗಿರುವರು.
І коли Вельзевулом виганя́ю Я де́монів, то ким виганя́ють сини ваші? Тому́ вони стануть вам су́ддями.
28 ನಾನು ದೇವರ ಆತ್ಮನಿಂದ ದೆವ್ವಗಳನ್ನು ಓಡಿಸುವುದಾದರೆ ದೇವರ ರಾಜ್ಯವು ನಿಸ್ಸಂದೇಹವಾಗಿ ನಿಮ್ಮ ಬಳಿಗೆ ಬಂದಿದೆಯಲ್ಲಾ.
А коли ж Духом Божим виго́ню Я де́монів, то настало для вас Царство Боже.
29 “ಇದಲ್ಲದೆ, ಯಾವನಾದರೂ ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ, ಅವನ ಮನೆಯನ್ನು ಪ್ರವೇಶಿಸಿ ಅವನ ಸೊತ್ತನ್ನು ಸೂರೆ ಮಾಡಲಾದೀತೇ? ಕಟ್ಟಿದ ನಂತರ ಅವನ ಮನೆಯನ್ನು ಕೊಳ್ಳೆ ಹೊಡೆಯಬಹುದು.
Або я́к то хто може вде́ртися в дім дужого, та пограбувати добро́ його, якщо перше не зв'яже дужого? І аж тоді він госпо́ду його пограбує.
30 “ನನ್ನ ಪರವಾಗಿ ಇರದವನು ನನಗೆ ವಿರೋಧಿಯಾಗಿದ್ದಾನೆ, ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ.
Хто не зо Мною, той супроти Мене; і хто не збирає зо Мною, той розкида́є.
31 ಆದಕಾರಣ ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರು ಮಾಡುವ ಎಲ್ಲಾ ಪಾಪಕ್ಕೂ ದೂಷಣೆಗೂ ಕ್ಷಮಾಪಣೆಯಾಗುವುದು, ಆದರೆ ಪವಿತ್ರಾತ್ಮರಿಗೆ ವಿರೋಧವಾಗಿ ದೂಷಣೆ ಮಾಡಿದರೆ ಅದಕ್ಕೆ ಕ್ಷಮಾಪಣೆಯಿಲ್ಲ.
Тому́ то кажу́ вам: усякий гріх, навіть богозневага, про́ститься лю́дям, але богозневага на Духа не про́ститься!
32 ಯಾರಾದರೂ ಮನುಷ್ಯಪುತ್ರನಾದ ನನಗೆ ವಿರೋಧವಾಗಿ ಮಾತನಾಡುವ ಪ್ರತಿಯೊಬ್ಬರಿಗೂ ಕ್ಷಮಾಪಣೆಯಾಗುವುದು, ಆದರೆ ಪವಿತ್ರಾತ್ಮನಿಗೆ ವಿರೋಧವಾಗಿ ಮಾತನಾಡಿದರೆ, ಈ ಯುಗದಲ್ಲೇ ಆಗಲಿ ಬರುವ ಯುಗದಲ್ಲೇ ಆಗಲಿ ಅದಕ್ಕಾಗಿ ಅವರಿಗೆ ಕ್ಷಮೆ ದೊರಕುವುದಿಲ್ಲ. (aiōn )
І як скаже хто слово на Лю́дського Сина, то йому́ проститься те; а коли скаже проти Духа Святого, — не про́ститься того йому ані в цім віці, ані в майбу́тнім! (aiōn )
33 “ಮರವು ಒಳ್ಳೆಯದಾಗಿದ್ದರೆ, ಅದರ ಫಲವು ಒಳ್ಳೆಯದಾಗಿರುವುದು; ಮರವು ಕೆಟ್ಟದ್ದಾಗಿದ್ದರೆ, ಅದರ ಫಲವು ಕೆಟ್ಟದ್ದಾಗಿರುವುದು. ಏಕೆಂದರೆ ಮರವನ್ನು ಅದರ ಫಲದಿಂದಲೇ ಗುರುತಿಸಲಾಗುವುದು.
Або ви́ростіть дерево добре, то й плід його добрий, або ви́ростіть дерево зле, то й плід його злий. Пізнається бо дерево з пло́ду!
34 ಸರ್ಪಸಂತತಿಯವರೇ, ಕೆಟ್ಟವರಾಗಿರುವ ನೀವು ಒಳ್ಳೆಯದೇನನ್ನಾದರೂ ಮಾತನಾಡುವಿರೋ? ಹೃದಯದಲ್ಲಿ ತುಂಬಿರುವದನ್ನೇ ಅವನ ಬಾಯಿ ಮಾತನಾಡುತ್ತದೆ.
Ро́де змії́ний! Як ви можете мовити добре, бувши злі? Бо чим серце напо́внене, те говорять уста́.
35 ಒಳ್ಳೆಯವನು ಒಳ್ಳೆಯ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ.
Добра люди́на з доброго ска́рбу добре виносить, а лукава люди́на зо скарбу лихого виносить лихе́.
36 ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರು ಆಡುವ ಪ್ರತಿಯೊಂದು ವ್ಯರ್ಥ ಮಾತಿಗಾಗಿ ನ್ಯಾಯವಿಚಾರಣೆಯ ದಿನದಲ್ಲಿ ಅವರು ಲೆಕ್ಕಕೊಡಬೇಕು.
Кажу́ ж вам, що за кожне слово пусте, яке скажуть люди, дадуть вони відповідь судного дня!
37 ನೀನು ನಿನ್ನ ಮಾತುಗಳಿಂದಲೇ ನೀತಿವಂತನೆಂದು ನಿರ್ಣಯಿಸಲಾಗುವುದು ಮತ್ತು ನಿನ್ನ ಮಾತುಗಳಿಂದಲೇ ನೀನು ಅಪರಾಧಿಯೆಂದು ನಿರ್ಣಯಿಸಲಾಗುವುದು,” ಎಂದು ಹೇಳಿದರು.
Бо зо слів своїх будеш випра́вданий, і зо слів своїх будеш засу́джений“.
38 ಆಗ ನಿಯಮ ಬೋಧಕರೂ ಫರಿಸಾಯರೂ, “ಬೋಧಕರೇ, ನಿನ್ನಿಂದ ಒಂದು ಸೂಚಕಕಾರ್ಯವನ್ನು ಕಾಣಬೇಕೆಂದಿದ್ದೇವೆ,” ಎಂದು ಕೇಳಿದರು.
Тоді дехто із книжників та фарисеїв озвались до Нього й сказали: „Учителю, — хочемо побачити озна́ку від Те́бе“.
39 ಯೇಸು ಉತ್ತರವಾಗಿ ಅವರಿಗೆ, “ವ್ಯಭಿಚಾರದ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತದೆ. ಪ್ರವಾದಿ ಯೋನನ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಈ ಸಂತತಿಗೆ ಕೊಡಲಾಗುವುದಿಲ್ಲ.
А Ісус відповів їм: „Рід лукавий і перелю́бний шукає ознаки, — та ознаки йому не дадуть, окрім ознаки пророка Йо́ни.
40 ಯೋನನು ಮೂರು ಹಗಲು ಮತ್ತು ಮೂರು ರಾತ್ರಿ ದೊಡ್ಡ ಮೀನಿನ ಹೊಟ್ಟೆಯಲ್ಲಿ ಇದ್ದ ಹಾಗೆಯೇ ಮನುಷ್ಯಪುತ್ರನಾದ ನಾನು ಮೂರು ಹಗಲು ಮತ್ತು ಮೂರು ರಾತ್ರಿ ಭೂಗರ್ಭದಲ್ಲಿರುವೆನು.
Як Йо́на перебув у сере́дині китовій три дні і три ночі, так перебу́де три дні та три ночі й Син Лю́дський у серці землі.
41 ನಿನೆವೆ ಪಟ್ಟಣದವರು ನ್ಯಾಯತೀರ್ಪಿನಲ್ಲಿ ಈ ಸಂತತಿಗೆ ಎದುರಾಗಿ ಎದ್ದು ನಿಂತು ಇದನ್ನು ಅಪರಾಧ ಎಂದು ತೀರ್ಪುಮಾಡುವರು, ಏಕೆಂದರೆ ಯೋನನು ಸಾರಿದ್ದನ್ನು ಕೇಳಿ ಅವರು ದೇವರ ಕಡೆಗೆ ತಿರುಗಿಕೊಂಡರು; ಇಗೋ, ಇಲ್ಲಿ ಯೋನನಿಗಿಂತಲೂ ತುಂಬಾ ದೊಡ್ಡವನು ಇದ್ದಾನೆ.
Ніневі́тяни стануть на суд із цим родом, — і осудять його, вони бо покаялися через Йо́нину проповідь. А тут ото Більший, ніж Йо́на!
42 ನ್ಯಾಯತೀರ್ಪಿನಲ್ಲಿ ದಕ್ಷಿಣದ ರಾಣಿಯು ಈ ಸಂತತಿಗೆ ಎದುರಾಗಿ ಎದ್ದು ಇವರನ್ನು ಅಪರಾಧಿಗಳೆಂದು ತೀರ್ಪುಮಾಡುವಳು. ಏಕೆಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕಾಗಿ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತಲೂ ತುಂಬಾ ದೊಡ್ಡವನು ಇಲ್ಲಿದ್ದಾನೆ.
Цариця з пі́вдня на суд стане з родом оцим, — і засу́дить його, бо вона з кінця світу прийшла Соломонову мудрість послу́хати. А тут ото Більший, аніж Соломон!
43 “ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ಹುಡುಕಾಡಿದರೂ ಅದನ್ನು ಕಂಡುಕೊಳ್ಳದೆ, ಅದು,
А коли дух нечистий виходить із люди́ни, то блукає місцями безвідними, відпочинку шукаючи, та не знахо́дить.
44 ‘ನಾನು ಹೊರಟು ಬಂದ ನನ್ನ ಮನೆಗೆ ಹಿಂದಿರುಗುವೆನು,’ ಎಂದು ಹೇಳಿಕೊಂಡು ಬಂದು, ಆ ಮನೆಯು ಬರಿದಾಗಿಯೂ ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ.
Тоді він говорить: „Вернуся до дому свого́, звідки вийшов“. А як ве́рнеться він, то хату знахо́дить порожню, заметену й при́брану.
45 ಆಗ ಅದು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ಅಶುದ್ಧಾತ್ಮಗಳನ್ನು ತನ್ನೊಂದಿಗೆ ಕರೆದುಕೊಂಡು ಅವನ ಒಳಗೆ ಸೇರಿ ಅಲ್ಲಿ ವಾಸಮಾಡುವವು. ಹೀಗೆ ಆ ಮನುಷ್ಯನ ಕಡೆಯ ಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು. ಅದರಂತೆಯೇ ಈ ದುಷ್ಟ ಸಂತತಿಗೂ ಆಗುವುದು,” ಎಂದು ಹೇಳಿದರು.
Тоді він іде, та й приводить сімох духів інших, лютіших за себе, — і входять вони та й живуть тут. І буде останнє люди́ні тій гірше за перше... Так буде й лукавому родові цьому́!“
46 ಯೇಸು ಇನ್ನೂ ಜನರ ಸಂಗಡ ಮಾತನಾಡುತ್ತಿದ್ದಾಗ, ಅವರ ತಾಯಿ ಮತ್ತು ಸಹೋದರರು ಅವರೊಂದಿಗೆ ಮಾತನಾಡಬೇಕೆಂದು ಅಪೇಕ್ಷಿಸಿ ಹೊರಗೆ ನಿಂತಿದ್ದರು.
Коли Він іще промовляв до наро́ду, аж ось мати й брати Його о́сторонь стали, бажаючи з Ним говорити.
47 ಆಗ ಒಬ್ಬನು ಯೇಸುವಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮ್ಮೊಂದಿಗೆ ಮಾತನಾಡಲು ಅಪೇಕ್ಷಿಸಿ ಹೊರಗೆ ನಿಂತಿದ್ದಾರೆ,” ಎಂದನು.
І сказав хтось Йому́: „Ото мати Твоя й Твої бра́ття стоять онде о́сторонь, і говорити з Тобою бажають“.
48 ಅದಕ್ಕೆ ಯೇಸು ತಮಗೆ ಹೇಳಿದವನಿಗೆ ಉತ್ತರವಾಗಿ, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಹೇಳಿ,
А Він відповів тому́, хто Йому говорив, і сказав: „Хто́ мати Моя? І хто́ браття Мої?“
49 ಶಿಷ್ಯರ ಕಡೆಗೆ ತಮ್ಮ ಕೈಚಾಚಿ, “ಇಗೋ, ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು.
І, показавши рукою Своєю на у́чнів Своїх, Він промовив: „Ото Моя мати та браття Мої!
50 ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ನನ್ನ ಸಹೋದರ, ಸಹೋದರಿ ಮತ್ತು ತಾಯಿ,” ಎಂದು ಹೇಳಿದರು.
Бо хто волю Мого Отця, що на небі, чини́тиме, той Мені брат, і сестра, і мати!“