< ಮತ್ತಾಯನು 11 >
1 ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರಿಗೆ ಆದೇಶ ಕೊಟ್ಟಾದ ಮೇಲೆ, ಗಲಿಲಾಯ ಪ್ರದೇಶದ ಪಟ್ಟಣಗಳಲ್ಲಿ ಬೋಧಿಸುವುದಕ್ಕೂ ಶುಭವರ್ತಮಾನವನ್ನು ಸಾರುವುದಕ್ಕೂ ಅಲ್ಲಿಂದ ಹೊರಟು ಹೋದರು.
১ইত্থং যীশুঃ স্ৱদ্ৱাদশশিষ্যাণামাজ্ঞাপনং সমাপ্য পুৰে পুৰ উপদেষ্টুং সুসংৱাদং প্ৰচাৰযিতুং তৎস্থানাৎ প্ৰতস্থে|
2 ಆಗ ಸೆರೆಮನೆಯಲ್ಲಿ ಯೋಹಾನನು ಕ್ರಿಸ್ತನ ಕಾರ್ಯಗಳನ್ನು ಕೇಳಿ, ತನ್ನ ಶಿಷ್ಯರನ್ನು ಕಳುಹಿಸಿ ಯೇಸುವಿಗೆ,
২অনন্তৰং যোহন্ কাৰাযাং তিষ্ঠন্ খ্ৰিষ্টস্য কৰ্ম্মণাং ৱাৰ্ত্তং প্ৰাপ্য যস্যাগমনৱাৰ্ত্তাসীৎ সএৱ কিং ৎৱং? ৱা ৱযমন্যম্ অপেক্ষিষ্যামহে?
3 “ಬರಬೇಕಾದ ಮೆಸ್ಸೀಯ ನೀನೋ ಇಲ್ಲವೇ ನಾವು ಇನ್ನೊಬ್ಬನಿಗಾಗಿ ಎದುರು ನೋಡಬೇಕೋ?” ಎಂದು ವಿಚಾರಿಸಿದನು.
৩এতৎ প্ৰষ্টুং নিজৌ দ্ৱৌ শিষ্যৌ প্ৰাহিণোৎ|
4 ಯೇಸು, “ನೀವು ಕೇಳುವುದನ್ನೂ ಕಾಣುವುದನ್ನೂ ಯೋಹಾನನಿಗೆ ಹೋಗಿ ತಿಳಿಸಿರಿ;
৪যীশুঃ প্ৰত্যৱোচৎ, অন্ধা নেত্ৰাণি লভন্তে, খঞ্চা গচ্ছন্তি, কুষ্ঠিনঃ স্ৱস্থা ভৱন্তি, বধিৰাঃ শৃণ্ৱন্তি, মৃতা জীৱন্ত উত্তিষ্ঠন্তি, দৰিদ্ৰাণাং সমীপে সুসংৱাদঃ প্ৰচাৰ্য্যত,
5 ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಮರಣಹೊಂದಿದವರು ಜೀವ ಪಡೆಯುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲಾಗುತ್ತದೆ.
৫এতানি যদ্যদ্ যুৱাং শৃণুথঃ পশ্যথশ্চ গৎৱা তদ্ৱাৰ্ত্তাং যোহনং গদতং|
6 ನನ್ನ ವಿಷಯದಲ್ಲಿ ವಿಶ್ವಾಸ ಕಳೆದುಕೊಳ್ಳದವನೇ ಧನ್ಯನು,” ಎಂದರು.
৬যস্যাহং ন ৱিঘ্নীভৱামি, সএৱ ধন্যঃ|
7 ಅವರು ಹೊರಟು ಹೋಗುತ್ತಿದ್ದಾಗ, ಯೇಸು ಯೋಹಾನನ ಕುರಿತಾಗಿ ಜನಸಮೂಹಕ್ಕೆ, “ನೀವು ಯಾವುದನ್ನು ಕಾಣುವುದಕ್ಕಾಗಿ ಅರಣ್ಯಕ್ಕೆ ಹೋದಿರಿ? ಗಾಳಿಗೆ ಓಲಾಡುವ ದಂಟನ್ನೋ?
৭অনন্তৰং তযোঃ প্ৰস্থিতযো ৰ্যীশু ৰ্যোহনম্ উদ্দিশ্য জনান্ জগাদ, যূযং কিং দ্ৰষ্টুং ৱহিৰ্মধ্যেপ্ৰান্তৰম্ অগচ্ছত? কিং ৱাতেন কম্পিতং নলং?
8 ಇಲ್ಲವಾದರೆ, ನೀವು ಏನನ್ನು ಕಾಣುವುದಕ್ಕಾಗಿ ಹೋದಿರಿ? ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ನಯವಾದ ಉಡುಪನ್ನು ಧರಿಸುವವರು ರಾಜರ ಅರಮನೆಗಳಲ್ಲಿ ಇರುತ್ತಾರೆ.
৮ৱা কিং ৱীক্ষিতুং ৱহিৰ্গতৱন্তঃ? কিং পৰিহিতসূক্ষ্মৱসনং মনুজমেকং? পশ্যত, যে সূক্ষ্মৱসনানি পৰিদধতি, তে ৰাজধান্যাং তিষ্ঠন্তি|
9 ಆದರೆ ಏನು ಕಾಣುವುದಕ್ಕಾಗಿ ಹೋದಿರಿ? ಒಬ್ಬ ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದಿರಿ, ಎಂದು ನಾನು ನಿಮಗೆ ಹೇಳುತ್ತೇನೆ.
৯তৰ্হি যূযং কিং দ্ৰষ্টুং বহিৰগমত, কিমেকং ভৱিষ্যদ্ৱাদিনং? তদেৱ সত্যং| যুষ্মানহং ৱদামি, স ভৱিষ্যদ্ৱাদিনোপি মহান্;
10 ಯೋಹಾನನ ಕುರಿತು ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: “‘ಇಗೋ, ನಿನ್ನ ದಾರಿಯನ್ನು ನಿನ್ನ ಮುಂದೆ ಸಿದ್ಧಮಾಡುವಂತೆ ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ.’
১০যতঃ, পশ্য স্ৱকীযদূতোযং ৎৱদগ্ৰে প্ৰেষ্যতে মযা| স গৎৱা তৱ পন্থানং স্মযক্ পৰিষ্কৰিষ্যতি|| এতদ্ৱচনং যমধি লিখিতমাস্তে সোঽযং যোহন্|
11 ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಸ್ತ್ರೀಯರಲ್ಲಿ ಹುಟ್ಟಿದವರಲ್ಲಿ ಸ್ನಾನಿಕ ಯೋಹಾನನಿಗಿಂತ ದೊಡ್ಡವನು ಹುಟ್ಟಲಿಲ್ಲ; ಆದರೂ ಪರಲೋಕ ರಾಜ್ಯದಲ್ಲಿರುವ ಅತ್ಯಂತ ಚಿಕ್ಕವನು ಅವನಿಗಿಂತಲೂ ದೊಡ್ಡವನಾಗಿದ್ದಾನೆ.
১১অপৰং যুষ্মানহং তথ্যং ব্ৰৱীমি, মজ্জযিতু ৰ্যোহনঃ শ্ৰেষ্ঠঃ কোপি নাৰীতো নাজাযত; তথাপি স্ৱৰ্গৰাজ্যমধ্যে সৰ্ৱ্ৱেভ্যো যঃ ক্ষুদ্ৰঃ স যোহনঃ শ্ৰেষ্ঠঃ|
12 ಸ್ನಾನಿಕನಾದ ಯೋಹಾನನ ದಿನಗಳಿಂದ ಇದುವರೆಗೆ, ಪರಲೋಕ ರಾಜ್ಯವು ಬಲಾತ್ಕಾರಕ್ಕೆ ಒಳಗಾಗಿದೆ, ಬಲಾತ್ಕಾರಿಗಳು ಅದನ್ನು ಬಲವಂತವಾಗಿ ತೆಗೆದುಕೊಳ್ಳುತ್ತಾರೆ.
১২অপৰঞ্চ আ যোহনোঽদ্য যাৱৎ স্ৱৰ্গৰাজ্যং বলাদাক্ৰান্তং ভৱতি আক্ৰমিনশ্চ জনা বলেন তদধিকুৰ্ৱ্ৱন্তি|
13 ಯೋಹಾನನ ಕಾಲದ ತನಕ ಮೋಶೆಯ ನಿಯಮ ಹಾಗು ಎಲ್ಲ ಪ್ರವಾದಿಗಳು ದೇವರ ರಾಜ್ಯವನ್ನು ಕುರಿತು ಪ್ರವಾದನೆ ಮಾಡಿದರು.
১৩যতো যোহনং যাৱৎ সৰ্ৱ্ৱভৱিষ্যদ্ৱাদিভি ৰ্ৱ্যৱস্থযা চ উপদেশঃ প্ৰাকাশ্যত|
14 ನೀವು ಇದನ್ನು ಸ್ವೀಕರಿಸುವುದಕ್ಕೆ ಮನಸ್ಸಿದ್ದರೆ, ಬರತಕ್ಕ ಎಲೀಯನು ಈ ಯೋಹಾನನೇ.
১৪যদি যূযমিদং ৱাক্যং গ্ৰহীতুং শক্নুথ, তৰ্হি শ্ৰেযঃ, যস্যাগমনস্য ৱচনমাস্তে সোঽযম্ এলিযঃ|
15 ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ.
১৫যস্য শ্ৰোতুং কৰ্ণৌ স্তঃ স শৃণোতু|
16 “ಆದರೆ ಈ ಸಂತತಿಯನ್ನು ನಾನು ಯಾವುದಕ್ಕೆ ಹೋಲಿಸಲಿ? ಮಕ್ಕಳು ಪೇಟೆಗಳಲ್ಲಿ ಕೂತುಕೊಂಡು ಇತರರನ್ನು ಕರೆಯುತ್ತಾ:
১৬এতে ৱিদ্যমানজনাঃ কৈ ৰ্মযোপমীযন্তে? যে বালকা হট্ট উপৱিশ্য স্ৱং স্ৱং বন্ধুমাহূয ৱদন্তি,
17 “‘ನಾವು ನಿಮಗಾಗಿ ಕೊಳಲೂದಿದೆವು, ನೀವು ಕುಣಿಯಲಿಲ್ಲ; ನಾವು ಶೋಕಗೀತೆ ಹಾಡಿದೆವು, ನೀವು ಗೋಳಾಡಲಿಲ್ಲ,’ ಎಂದು ಹೇಳುವವರಿಗೆ ಇದು ಹೋಲಿಕೆಯಾಗಿದೆ.
১৭ৱযং যুষ্মাকং সমীপে ৱংশীৰৱাদযাম, কিন্তু যূযং নানৃত্যত; যুষ্মাকং সমীপে চ ৱযমৰোদিম, কিন্তু যূযং ন ৱ্যলপত, তাদৃশৈ ৰ্বালকৈস্ত উপমাযিষ্যন্তে|
18 “ಏಕೆಂದರೆ ಯೋಹಾನನು ಅನ್ನಪಾನಗಳನ್ನು ತೆಗೆದುಕೊಳ್ಳಲಿಲ್ಲ. ಅದಕ್ಕೆ ಅವರು, ‘ಅವನಿಗೆ ದೆವ್ವ ಹಿಡಿದಿದೆ,’ ಎಂದರು.
১৮যতো যোহন্ আগত্য ন ভুক্তৱান্ ন পীতৱাংশ্চ, তেন লোকা ৱদন্তি, স ভূতগ্ৰস্ত ইতি|
19 ಮನುಷ್ಯಪುತ್ರನಾದ ನಾನು ಅನ್ನಪಾನ ಸೇವಿಸುವವನಾಗಿ ಬಂದೆನು. ಅದಕ್ಕೆ ಅವರು, ‘ಇಗೋ, ಹೊಟ್ಟೆಬಾಕನು, ಕುಡುಕನು, ಸುಂಕದವರ ಮತ್ತು ಪಾಪಿಗಳ ಸ್ನೇಹಿತನು,’ ಎಂದು ಹೇಳುತ್ತಾರೆ. ಆದರೆ ಜ್ಞಾನವು ತನ್ನ ಕೃತ್ಯಗಳಿಂದಲೇ ಸಮರ್ಥಿಸಲಾಗುತ್ತದೆ,” ಎಂದು ಹೇಳಿದರು.
১৯মনুজসুত আগত্য ভুক্তৱান্ পীতৱাংশ্চ, তেন লোকা ৱদন্তি, পশ্যত এষ ভোক্তা মদ্যপাতা চণ্ডালপাপিনাং বন্ধশ্চ, কিন্তু জ্ঞানিনো জ্ঞানৱ্যৱহাৰং নিৰ্দোষং জানন্তি|
20 ತರುವಾಯ ತಮ್ಮ ಹೆಚ್ಚಾದ ಮಹತ್ಕಾರ್ಯಗಳು ನಡೆದ ಪಟ್ಟಣಗಳು, ದೇವರ ಕಡೆಗೆ ತಿರುಗಿಕೊಳ್ಳದೆ ಇದ್ದುದರಿಂದ ಯೇಸು ಅವುಗಳನ್ನು ಗದರಿಸತೊಡಗಿ,
২০স যত্ৰ যত্ৰ পুৰে বহ্ৱাশ্চৰ্য্যং কৰ্ম্ম কৃতৱান্, তন্নিৱাসিনাং মনঃপৰাৱৃত্ত্যভাৱাৎ তানি নগৰাণি প্ৰতি হন্তেত্যুক্তা কথিতৱান্,
21 “ಖೊರಾಜಿನೇ, ನಿನಗೆ ಕಷ್ಟ! ಬೇತ್ಸಾಯಿದವೇ, ನಿನಗೆ ಕಷ್ಟ! ಏಕೆಂದರೆ ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ಟೈರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ, ಅಲ್ಲಿಯವರು ಬಹಳ ಕಾಲದ ಹಿಂದೆಯೇ, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡು ದೇವರ ಕಡೆ ತಿರುಗಿಕೊಳ್ಳುತ್ತಿದ್ದರು.
২১হা কোৰাসীন্, হা বৈৎসৈদে, যুষ্মন্মধ্যে যদ্যদাশ্চৰ্য্যং কৰ্ম্ম কৃতং যদি তৎ সোৰসীদোন্নগৰ অকাৰিষ্যত, তৰ্হি পূৰ্ৱ্ৱমেৱ তন্নিৱাসিনঃ শাণৱসনে ভস্মনি চোপৱিশন্তো মনাংসি পৰাৱৰ্ত্তিষ্যন্ত|
22 ಆದರೂ ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ಟೈರ್ ಮತ್ತು ಸೀದೋನ್ ಪಟ್ಟಣಗಳ ಗತಿಯು ಹೆಚ್ಚು ತಾಳಬಹುದಾಗಿರುವುದು.
২২তস্মাদহং যুষ্মান্ ৱদামি, ৱিচাৰদিনে যুষ্মাকং দশাতঃ সোৰসীদোনো ৰ্দশা সহ্যতৰা ভৱিষ্যতি|
23 ಕಪೆರ್ನೌಮೇ, ನೀನು ಪರಲೋಕಕ್ಕೆ ಹೋಗುವೆ ಎಂದು ನೆನೆಸುತ್ತೀಯೋ? ಇಲ್ಲ, ನೀನು ಪಾತಾಳಕ್ಕೆ ಇಳಿಯುವೆ. ಏಕೆಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ, ಅದು ಇಂದಿನವರೆಗೂ ಉಳಿಯುತ್ತಿತ್ತು. (Hadēs )
২৩অপৰঞ্চ বত কফৰ্নাহূম্, ৎৱং স্ৱৰ্গং যাৱদুন্নতোসি, কিন্তু নৰকে নিক্ষেপ্স্যসে, যস্মাৎ ৎৱযি যান্যাশ্চৰ্য্যাণি কৰ্ম্মণ্যকাৰিষত, যদি তানি সিদোম্নগৰ অকাৰিষ্যন্ত, তৰ্হি তদদ্য যাৱদস্থাস্যৎ| (Hadēs )
24 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ಸೊದೋಮ್ ಪಟ್ಟಣದ ಗತಿಯು ಹೆಚ್ಚು ತಾಳಬಹುದಾಗಿರುವುದು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
২৪কিন্ত্ৱহং যুষ্মান্ ৱদামি, ৱিচাৰদিনে তৱ দণ্ডতঃ সিদোমো দণ্ডো সহ্যতৰো ভৱিষ্যতি|
25 ಆ ಸಮಯದಲ್ಲಿ ಯೇಸು, “ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀವು ಈ ವಿಷಯಗಳನ್ನು ಜ್ಞಾನಿಗಳಿಂದಲೂ ಬುದ್ಧಿವಂತರಿಂದಲೂ ಮರೆಮಾಡಿ, ಶಿಶುಗಳಿಗೆ ಪ್ರಕಟ ಮಾಡಿರುವುದರಿಂದ ನಾನು ನಿಮ್ಮನ್ನು ಕೊಂಡಾಡುತ್ತೇನೆ.
২৫এতস্মিন্নেৱ সমযে যীশুঃ পুনৰুৱাচ, হে স্ৱৰ্গপৃথিৱ্যোৰেকাধিপতে পিতস্ত্ৱং জ্ঞানৱতো ৱিদুষশ্চ লোকান্ প্ৰত্যেতানি ন প্ৰকাশ্য বালকান্ প্ৰতি প্ৰকাশিতৱান্, ইতি হেতোস্ত্ৱাং ধন্যং ৱদামি|
26 ಹೌದು ತಂದೆಯೇ, ಹೀಗೆ ಮಾಡುವುದು ನಿಮ್ಮ ದೃಷ್ಟಿಗೆ ಒಳ್ಳೆಯದಾಗಿ ತೋಚಿತು.
২৬হে পিতঃ, ইত্থং ভৱেৎ যত ইদং ৎৱদৃষ্টাৱুত্তমং|
27 “ನನ್ನ ತಂದೆ ಎಲ್ಲವನ್ನೂ ನನಗೆ ಒಪ್ಪಿಸಿದ್ದಾರೆ. ತಂದೆಯ ಹೊರತು ಬೇರೆ ಯಾರೂ ಪುತ್ರನನ್ನು ಅರಿಯರು ಮತ್ತು ಪುತ್ರನು ಯಾರಿಗೆ ತಂದೆಯನ್ನು ಪ್ರಕಟಪಡಿಸಲು ಇಷ್ಟಪಡುತ್ತಾನೋ ಅವರೇ ಹೊರತು ಯಾರೂ ತಂದೆಯನ್ನು ಅರಿಯರು.
২৭পিত্ৰা মযি সৰ্ৱ্ৱাণি সমৰ্পিতানি, পিতৰং ৱিনা কোপি পুত্ৰং ন জানাতি, যান্ প্ৰতি পুত্ৰেণ পিতা প্ৰকাশ্যতে তান্ ৱিনা পুত্ৰাদ্ অন্যঃ কোপি পিতৰং ন জানাতি|
28 “ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು.
২৮হে পৰিশ্ৰান্তা ভাৰাক্ৰান্তাশ্চ লোকা যূযং মৎসন্নিধিম্ আগচ্ছত, অহং যুষ্মান্ ৱিশ্ৰমযিষ্যামি|
29 ನಾನು ಸಾತ್ವಿಕನೂ ದೀನ ಹೃದಯದವನೂ ಆಗಿರುವುದರಿಂದ ನೀವು ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತುಕೊಳ್ಳಿರಿ. ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.
২৯অহং ক্ষমণশীলো নম্ৰমনাশ্চ, তস্মাৎ মম যুগং স্ৱেষামুপৰি ধাৰযত মত্তঃ শিক্ষধ্ৱঞ্চ, তেন যূযং স্ৱে স্ৱে মনসি ৱিশ্ৰামং লপ্স্যধ্বে|
30 ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ,” ಎಂದು ಹೇಳಿದರು.
৩০যতো মম যুগম্ অনাযাসং মম ভাৰশ্চ লঘুঃ|