< ಮತ್ತಾಯನು 1 >

1 ಕ್ರಿಸ್ತ ಯೇಸುವಿನ ವಂಶಾವಳಿಯ ದಾಖಲೆ. ಯೇಸು ದಾವೀದನ ವಂಶದವರು, ದಾವೀದನು ಅಬ್ರಹಾಮನ ವಂಶದವನು:
Книга родоводу Ісуса Христа, сина Давидового, сина Авраамового.
2 ಅಬ್ರಹಾಮನು ಇಸಾಕನ ತಂದೆ, ಇಸಾಕನು ಯಾಕೋಬನ ತಂದೆ, ಯಾಕೋಬನು ಯೂದ ಮತ್ತು ಅವನ ಅಣ್ಣ ತಮ್ಮಂದಿರ ತಂದೆ,
Авраам породив Ісаака; а Ісаак породив Якова; а Яков породив Юду та братів його;
3 ಯೂದನು ಪೆರೆಸ ಮತ್ತು ಜೆರಹನ ತಂದೆ, ತಾಮಾರಳು ಇವರ ತಾಯಿ, ಪೆರೆಸನು ಹೆಚ್ರೋನನ ತಂದೆ, ಹೆಚ್ರೋನನು ಅರಾಮನ ತಂದೆ,
а Юда породив Фареса та Зару від Тамари; а Фарес породив Єсрома; а Єсром породив Арама;
4 ಅರಾಮನು ಅಮ್ಮೀನಾದಾಬನ ತಂದೆ, ಅಮ್ಮೀನಾದಾಬನು ನಹಶೋನನ ತಂದೆ, ನಹಶೋನನು ಸಲ್ಮೋನನ ತಂದೆ,
а Арам породив Аминадава; а Амннадав породив Насона; а Насон погодив Салмона;
5 ಸಲ್ಮೋನನು ಬೋವಜನ ತಂದೆ, ಬೋವಜನ ತಾಯಿ ರಾಹಾಬಳು, ಬೋವಜನು ಓಬೇದನ ತಂದೆ, ಓಬೇದನ ತಾಯಿ ರೂತಳು, ಓಬೇದನು ಇಷಯನ ತಂದೆ,
а Салмон породив Вооза від Рахави; а Вооз породив Овида від Рути; а Овид породив Єссея;
6 ಇಷಯನು ರಾಜನಾದ ದಾವೀದನ ತಂದೆ. ದಾವೀದನು ಸೊಲೊಮೋನನ ತಂದೆ, ಇವನ ತಾಯಿ ಊರೀಯನ ಹೆಂಡತಿಯಾಗಿದ್ದವಳು,
а Єссей породив Давида царя; а Давид цар породив Соломона від Урієвої;
7 ಸೊಲೊಮೋನನು ರೆಹಬ್ಬಾಮನ ತಂದೆ, ರೆಹಬ್ಬಾಮನು ಅಬೀಯನ ತಂದೆ, ಅಬೀಯನು ಆಸನ ತಂದೆ,
а Соломон породив Ровоама; а Ровоам породив Авію; а Авія породив Асу;
8 ಆಸನು ಯೆಹೋಷಾಫಾಟನ ತಂದೆ, ಯೆಹೋಷಾಫಾಟನು ಯೆಹೋರಾಮನ ತಂದೆ, ಯೆಹೋರಾಮನು ಉಜ್ಜೀಯನ ತಂದೆ,
а Аса породив Йосафата; а Йосафат породив Йорама; а Йорам породив Озію;
9 ಉಜ್ಜೀಯನು ಯೋತಾಮನ ತಂದೆ, ಯೋತಾಮನು ಆಹಾಜನ ತಂದೆ, ಆಹಾಜನು ಹಿಜ್ಕೀಯನ ತಂದೆ,
а Озія породив Йоатама; а Йоатам породив Ахаза; а Ахаз породив Єзекію;
10 ಹಿಜ್ಕೀಯನು ಮನಸ್ಸೆಯ ತಂದೆ, ಮನಸ್ಸೆಯು ಆಮೋನನ ತಂದೆ, ಆಮೋನನು ಯೋಷೀಯನ ತಂದೆ,
а Єзекія породив Манассію, а Манассія породив Амона; а Амон породив Йосію;
11 ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು, ಈ ಸಮಯದಲ್ಲಿಯೇ ಯೆಹೂದ್ಯರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು.
а Йосія породив Єхонїю та братів його, під час переселення у Вавилон;
12 ಬಾಬಿಲೋನಿಗೆ ಸೆರೆಹೋದ ಮೇಲೆ: ಯೆಕೊನ್ಯನು ಶೆಯಲ್ತೀಯೇಲನನ್ನು ಪಡೆದನು, ಶೆಯಲ್ತೀಯೇಲನು ಜೆರುಬ್ಬಾಬೆಲನ ತಂದೆ,
а після того, як переселено їх у Вавидон, Єхонїя породив Салатиїла, а Салатиїл породив Зоровавеля;
13 ಜೆರುಬ್ಬಾಬೆಲನು ಅಬಿಹೂದನ ತಂದೆ, ಅಬಿಹೂದನು ಎಲಿಯಕೀಮನ ತಂದೆ, ಎಲಿಯಕೀಮನು ಅಜೋರನ ತಂದೆ,
а Заровавель породив Авіюда; а Авіюд породив Єліякима; а бліяким породив Азора;
14 ಅಜೋರನು ಸದೋಕನ ತಂದೆ, ಸದೋಕನು ಅಖೀಮನ ತಂದೆ, ಅಖೀಮನು ಎಲಿಹೂದನ ತಂದೆ,
а Азор породив Садока; а Садок породив Ахима; а Ахим породив Єліюда;
15 ಎಲಿಹೂದನು ಎಲಿಯಾಜರನ ತಂದೆ, ಎಲಿಯಾಜರನು ಮತ್ತಾನನ ತಂದೆ, ಮತ್ತಾನನು ಯಾಕೋಬನ ತಂದೆ,
а Єліюд породив Єліазара; а Єліазар породив Маттана; а Маттан породив Якова;
16 ಯಾಕೋಬನು ಯೋಸೇಫನ ತಂದೆ, ಯೋಸೇಫನು ಮರಿಯಳ ಪತಿ, ಮರಿಯಳು ಕ್ರಿಸ್ತ ಎಂದು ಕರೆಯಲಾದ, ಯೇಸುಸ್ವಾಮಿಯ ತಾಯಿ.
а Яков породив Йосифа, чоловіка Мариїного, що від неї родивсь Ісус, на прізвище Христос.
17 ಈ ರೀತಿಯಲ್ಲಿ ಅಬ್ರಹಾಮನಿಂದ ದಾವೀದನವರೆಗೆ ಹದಿನಾಲ್ಕು ತಲೆಮಾರುಗಳು, ದಾವೀದನಿಂದ ಬಾಬಿಲೋನಿಗೆ ಸೆರೆ ಹೋಗುವವರೆಗೆ ಹದಿನಾಲ್ಕು ತಲೆಮಾರುಗಳು, ಬಾಬಿಲೋನಿಗೆ ಸೆರೆಹೋದ ದಿನದಿಂದ ಕ್ರಿಸ್ತರವರೆಗೆ ಹದಿನಾಲ್ಕು ತಲೆಮಾರುಗಳು.
То всїх родів од Авраама до Давида чотирнайцять родів; а від Давида до переселення у Вавилон чотирнайцять родів; і від переселення у Вавилон до Христа чотирнайцять родів.
18 ಕ್ರಿಸ್ತ ಯೇಸುವಿನ ಜನನದ ವಿವರ: ಯೇಸುವಿನ ತಾಯಿ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಿದ್ದರು, ಆದರೆ ಅವರಿಬ್ಬರು ಕೂಡಿಬಾಳುವುದಕ್ಕಿಂತ ಮುಂಚೆಯೇ, ಮರಿಯಳು ಪವಿತ್ರಾತ್ಮರಿಂದ ಗರ್ಭಧರಿಸಿರುವುದು ತಿಳಿದುಬಂತು.
Різдво ж Ісуса Христа стало ся так. Скоро Його матїр Марию заручено Иосифові, перш ніж вони зійшли ся, постережено, що вона мала в утробі від сьвятого Духа.
19 ಯೋಸೇಫನು ನೀತಿವಂತನಾಗಿದ್ದರಿಂದ, ಆಕೆಯನ್ನು ಬಹಿರಂಗವಾಗಿ ಅವಮಾನ ಮಾಡುವುದಕ್ಕೆ ಮನಸ್ಸಿಲ್ಲದೆ, ಆಕೆಯನ್ನು ರಹಸ್ಯವಾಗಿ ಬಿಟ್ಟು ಬಿಡಬೇಕೆಂದಿದ್ದನು.
Йосиф же, чоловік її, будучи праведний, і не хотячи ославити її, хотїв був потай відпустити її.
20 ಅವನು ಹೀಗೆ ಯೋಚಿಸುತ್ತಿದ್ದಾಗ, ಕರ್ತನ ದೂತನು ಕನಸಿನಲ್ಲಿ ಅವನಿಗೆ ಪ್ರತ್ಯಕ್ಷನಾಗಿ, “ದಾವೀದನ ವಂಶದ ಯೋಸೇಫನೇ, ಮರಿಯಳನ್ನು ನಿನ್ನ ಹೆಂಡತಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭವತಿಯಾಗಿರುವುದು ಪವಿತ್ರಾತ್ಮರಿಂದಲೇ.
Та як він про се думав, аж ось явивсь йому вві снї ангел Господень, глаголючи: Йосифе, сину Давидів, не бій ся взяти до себе Марию, жінку твою; бо що в нїй зачалось, те від сьвятого Духа.
21 ಅವಳು ಒಬ್ಬ ಮಗನನ್ನು ಹೆರುವಳು, ನೀನು ಆತನಿಗೆ, ‘ಯೇಸು’ ಎಂದು ಹೆಸರಿಡಬೇಕು. ಏಕೆಂದರೆ ಅವರೇ ತಮ್ಮ ಜನರನ್ನು ಅವರ ಪಾಪಗಳಿಂದ ರಕ್ಷಿಸುವರು,” ಎಂದು ಹೇಳಿದನು.
І вродить вона сина, і даси йому імя Ісус; бо він спасе людей своїх од гріхів їх.
22 ದೇವರು ತಮ್ಮ ಪ್ರವಾದಿಯ ಮುಖಾಂತರ ಹೇಳಿದ ಈ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು:
Усе ж се стало ся, щоб справдилось, що промовив Господь через пророка, глаголючи:
23 “ಇಗೋ ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು, ಆ ಮಗುವಿಗೆ, ‘ಇಮ್ಮಾನುಯೇಲ್’ ಎಂದು ಹೆಸರಿಡುವರು.” ಈ ಹೆಸರಿನ ಅರ್ಥ, “ದೇವರು ನಮ್ಮ ಸಂಗಡ ಇದ್ದಾರೆ,” ಎಂಬುದು.
Ось дїва матиме в утробі, і вродить сина, і дадуть йому імя Емануіл, що перекладом є: З нами Бог.
24 ಯೋಸೇಫನು ನಿದ್ದೆಯಿಂದ ಎದ್ದ ಮೇಲೆ, ಕರ್ತನ ದೂತನು ಆಜ್ಞಾಪಿಸಿದಂತೆ ಮರಿಯಳನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿಕೊಂಡನು.
Прокинувшись тодї Йосиф од сна, зробив так, як ангел Господень повелїв йому, й узяв до себе жінку свою;
25 ಆದರೆ ಅವಳು ಮಗನನ್ನು ಹೆರುವತನಕ ಯೋಸೇಫನು ಆಕೆಯೊಂದಿಗೆ ದಾಂಪತ್ಯ ಜೀವನ ಮಾಡಲಿಲ್ಲ. ಯೋಸೇಫನು ಆ ಮಗುವಿಗೆ “ಯೇಸು” ಎಂದು ಹೆಸರಿಟ್ಟನು.
і не знав її, аж поки вона вродила сина свого перворідня, і дав йому імя Ісус.

< ಮತ್ತಾಯನು 1 >