< ಮಾರ್ಕನು 8 >

1 ಆ ದಿವಸಗಳಲ್ಲಿ ದೊಡ್ಡ ಜನಸಮೂಹ ಕೂಡಿಬಂದಿತು. ಅವರಿಗೆ ಊಟಕ್ಕೆ ಏನೂ ಇಲ್ಲದ್ದರಿಂದ ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು,
О И веднага влезе в ладията с учениците Си и дойде в далманутанските предели.
2 “ನಾನು ಈ ಜನಸಮೂಹವನ್ನು ನೋಡಿ ಕನಿಕರಪಡುತ್ತೇನೆ. ಏಕೆಂದರೆ ಮೂರು ದಿನಗಳಿಂದ ಇವರು ನನ್ನೊಂದಿಗಿದ್ದಾರೆ. ಇವರಿಗೆ ಊಟಕ್ಕೆ ಏನೂ ಇಲ್ಲ.
Жално Ми е за народа, защото три дни вече седят при Мене, и нямат що да ядат;
3 ನಾನು ಇವರನ್ನು ಹಸಿವೆಯಿಂದ ತಮ್ಮ ಮನೆಗಳಿಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಹೋಗುವರು. ಇವರಲ್ಲಿ ಕೆಲವರು ದೂರದಿಂದ ಬಂದಿದ್ದಾರೆ,” ಎಂದರು.
и ако ги разпусна гладни по домовете им, ще им прималее по пътя; а някои от тях са дошли от далеч.
4 ಅದಕ್ಕೆ ಶಿಷ್ಯರು ಯೇಸುವಿಗೆ, “ಈ ನಿರ್ಜನ ಪ್ರದೇಶದಲ್ಲಿ ಈ ಜನರನ್ನು ತೃಪ್ತಿಪಡಿಸಲು ಸಾಕಷ್ಟು ರೊಟ್ಟಿಯನ್ನು ಎಲ್ಲಿಂದ ತರುವುದು?” ಎಂದರು.
И учениците Му отговориха: Отде ще може някой да насити тия с хляб тук в уединено място?
5 ಯೇಸು ಅವರಿಗೆ, “ನಿಮ್ಮ ಹತ್ತಿರ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದ್ದಕ್ಕೆ ಶಿಷ್ಯರು, “ಏಳು ರೊಟ್ಟಿಗಳಿವೆ,” ಎಂದರು.
И попита ги: Колко хляба имате? А те рекоха: Седем.
6 ಆಗ ಯೇಸು ಜನಸಮೂಹವು ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟು ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ಮುರಿದು ಜನಸಮೂಹಕ್ಕೆ ಹಂಚಲು ತಮ್ಮ ಶಿಷ್ಯರಿಗೆ ಕೊಟ್ಟರು. ಅವರು ಜನಸಮೂಹಕ್ಕೆ ಹಂಚಿದರು.
И заповяда на народа да насядат на земята; и като взе седемте хляба, благодари, разчупи и даваше на учениците Си за да ги сложат. И сложиха ги пред народа.
7 ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು. ಯೇಸು ಅವುಗಳನ್ನೂ ಆಶೀರ್ವದಿಸಿ ಅವರಿಗೆ ಹಂಚುವಂತೆ ಆಜ್ಞಾಪಿಸಿದರು.
Имаха и малко рибички; и като ги благослови, заповяда да ги сложат и тях.
8 ಜನರು ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಒಟ್ಟುಗೂಡಿಸಿದಾಗ ಏಳು ಬುಟ್ಟಿಗಳು ತುಂಬಿದವು.
И ядоха и се наситиха; и дигнаха останалите къшеи, седем кошници.
9 ಊಟಮಾಡಿದವರು ಸುಮಾರು ನಾಲ್ಕು ಸಾವಿರ ಮಂದಿ. ಯೇಸು ಅವರನ್ನು ಕಳುಹಿಸಿದ ನಂತರ,
А ония, които ядоха, бяха около четирихиляди души; и разпусна ги.
10 ತಮ್ಮ ಶಿಷ್ಯರೊಂದಿಗೆ ಒಂದು ದೋಣಿಯನ್ನು ಹತ್ತಿ ದಲ್ಮನೂಥ ಎಂಬ ಪ್ರದೇಶಕ್ಕೆ ಹೋದರು.
И веднага влезе в ладията с учениците Си и дойде в далманутанските предели.
11 ಫರಿಸಾಯರು ಬಂದು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಪರಲೋಕದಿಂದ ತಮಗೆ ಒಂದು ಸೂಚಕಕಾರ್ಯವನ್ನು ಮಾಡಬೇಕೆಂದು ಕೇಳಿ, ಅವರೊಂದಿಗೆ ತರ್ಕಿಸುವುದಕ್ಕೆ ಆರಂಭಿಸಿದರು.
И фарисеите излязоха и почнаха да се препират с Него; и като Го изпитваха, поискаха от Него знамение от небето.
12 ಯೇಸು ತಮ್ಮ ಆತ್ಮದಲ್ಲಿ ನೊಂದುಕೊಂಡು, “ಈ ಸಂತತಿಯು ಸೂಚಕಕಾರ್ಯವನ್ನು ಹುಡುಕುವುದು ಏಕೆ? ಈ ಸಂತತಿಗೆ ಯಾವ ಸೂಚಕಕಾರ್ಯವೂ ಕೊಡಲಾಗುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ,” ಎಂದರು.
А Той въздъхна дълбоко от сърце и рече: Защо тоя род иска знамение? Истина ви казвам: На тоя народ няма да се даде знамение.
13 ಯೇಸು ಅವರನ್ನು ಬಿಟ್ಟು ತಿರುಗಿ ದೋಣಿಯನ್ನು ಹತ್ತಿ ಆಚೆದಡಕ್ಕೆ ಹೊರಟು ಹೋದರು.
И остави ги, влезе пак в ладията, и мина на отвъдната страна.
14 ಶಿಷ್ಯರು ರೊಟ್ಟಿಬುತ್ತಿಯನ್ನು ತೆಗೆದುಕೊಳ್ಳುವುದಕ್ಕೆ ಮರೆತಿದ್ದರು. ಇದಲ್ಲದೆ ದೋಣಿಯಲ್ಲಿ ಅವರಿಗೆ ಒಂದೇ ಒಂದು ರೊಟ್ಟಿ ಇತ್ತು.
Но учениците Му забравиха да вземат хляб, и нямаха със себе си в ладията повече от един хляб.
15 ಯೇಸು ಅವರಿಗೆ, “ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿಯೂ ಹೆರೋದನ ವಿಷಯದಲ್ಲಿಯೂ ನೀವು ಎಚ್ಚರಿಕೆಯಿಂದಿರಿ,” ಎಂದು ಖಂಡಿತವಾಗಿ ಹೇಳಿದರು.
И Той им заръча, казвайки: Внимавайте, пазете се от кваса на фарисеите и от кваса на Ирода.
16 ಅವರು ತಮ್ಮೊಳಗೆ, “ನಮ್ಮಲ್ಲಿ ರೊಟ್ಟಿ ಇಲ್ಲದಿರುವುದರಿಂದಲೇ ಹೀಗೆ ಹೇಳುತ್ತಿರಬೇಕು,” ಎಂದು ಚರ್ಚಿಸಿಕೊಂಡರು.
И те разискваха помежду си, думайки: Това е защото нямаме хляб.
17 ಯೇಸು ಅವರು ಮಾತನಾಡಿದ್ದನ್ನು ತಿಳಿದುಕೊಂಡು ಅವರಿಗೆ, “ನಿಮ್ಮಲ್ಲಿ ರೊಟ್ಟಿ ಇಲ್ಲವೆಂದು ಏಕೆ ಚರ್ಚಿಸಿಕೊಳ್ಳುತ್ತೀರಿ? ನೀವು ಇನ್ನೂ ಕಾಣದೆಯೂ ತಿಳಿದುಕೊಳ್ಳದೆಯೂ ಇದ್ದೀರೋ? ನೀವು ನಿಮ್ಮ ಹೃದಯವನ್ನು ಇನ್ನೂ ಕಠಿಣ ಮಾಡಿಕೊಂಡಿದ್ದೀರೋ?
А Исус, като разбра това; рече им: Защо разисквате загдето нямате хляб? Още ли не разбирате, нито разумявате? Окаменено ли е сърцето ви?
18 ಕಣ್ಣುಗಳಿದ್ದೂ ನೀವು ಕಾಣುವುದಿಲ್ಲವೋ? ಕಿವಿಗಳಿದ್ದೂ ನೀವು ಕೇಳುವುದಿಲ್ಲವೋ?
Като имате очи, не виждате ли? И като имате уши, не чувате ли? И не помните ли?
19 ನಾನು ಆ ಐದು ರೊಟ್ಟಿಗಳನ್ನು ಐದು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಬುಟ್ಟಿಗಳ ತುಂಬ ರೊಟ್ಟಿಯ ತುಂಡುಗಳನ್ನು ಕೂಡಿಸಿದಿರಿ ಎಂದು ನಿಮಗೆ ನೆನಪಿಲ್ಲವೇ?” ಎಂದು ಕೇಳಲು ಅವರು ಯೇಸುವಿಗೆ, “ಹನ್ನೆರಡು ಬುಟ್ಟಿಗಳು,” ಎಂದರು.
Когато разчупих петте хляба на петте хиляди души, колко кошове пълни с къшеи дигнахте? Казват му: Дванадесет.
20 “ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಬುಟ್ಟಿಗಳ ತುಂಬ ತುಂಡುಗಳನ್ನು ಕೂಡಿಸಿದಿರಿ?” ಎಂದು ಕೇಳಲು ಅವರು, “ಏಳು ಬುಟ್ಟಿಗಳು,” ಎಂದರು.
И когато седемте - на четирите хиляди души, колко кошници, пълни с къшеи дигнахте? Казват Му: Седем.
21 ಯೇಸು ಅವರಿಗೆ, “ಹಾಗಾದರೆ ನೀವು ಇನ್ನೂ ಗ್ರಹಿಸದೆ ಇರುವುದು ಹೇಗೆ?” ಎಂದು ಕೇಳಿದರು.
И каза им: Не разбирате ли още?
22 ಯೇಸು ಬೇತ್ಸಾಯಿದಕ್ಕೆ ಬಂದಾಗ, ಕೆಲವರು ಒಬ್ಬ ಕುರುಡನನ್ನು ಯೇಸುವಿನ ಬಳಿಗೆ ತಂದು ಅವನನ್ನು ಮುಟ್ಟಬೇಕೆಂದು ಬೇಡಿಕೊಂಡರು.
Дохождат във Витсаида. И довеждат при Него един слепец и молят Му се да се докосне до него.
23 ಯೇಸು ಆ ಕುರುಡನ ಕೈಹಿಡಿದು ಊರ ಹೊರಗೆ ಕರೆದುಕೊಂಡು ಹೋಗಿ, ಅವನ ಕಣ್ಣುಗಳ ಮೇಲೆ ಉಗುಳಿ ಅವನ ಮೇಲೆ ತಮ್ಮ ಕೈಯಿಟ್ಟು, “ನಿನಗೆ ಏನಾದರೂ ಕಾಣುತ್ತದೋ?” ಎಂದು ಅವನನ್ನು ಕೇಳಿದರು.
И Той хвана слепеца за ръка, изведе го вън от селото, и, като плюна на очите му, положи на него ръце и го попита: Виждаш ли нещо?
24 ಅವನು ಮೇಲಕ್ಕೆ ನೋಡಿ, “ಮನುಷ್ಯರು ಮರಗಳ ಹಾಗೆ ಕಾಣುತ್ತಿದ್ದಾರೆ. ಆದರೂ ಅವರು ನಡೆದಾಡುವುದನ್ನು ನೋಡುತ್ತಿದ್ದೇನೆ,” ಎಂದನು.
И той, като подигна очи, каза: Виждам човеците; защото виждам неща като дървета, които ходят.
25 ತರುವಾಯ ಯೇಸು ತಿರುಗಿ ಅವನ ಕಣ್ಣುಗಳ ಮೇಲೆ ತಮ್ಮ ಕೈಗಳನ್ನಿಟ್ಟರು. ಆಗ ಅವನು ಗುಣಹೊಂದಿದವನಾಗಿ ಎಲ್ಲವನ್ನೂ ಬಹುಸ್ಪಷ್ಟವಾಗಿ ಕಂಡನು.
После пак положи ръце на очите му; и той втренчи очите си, оздравя, и виждаше всичко ясно.
26 ಯೇಸು ಅವನಿಗೆ, “ನೀನು ಊರೊಳಕ್ಕೆ ಹೋಗಬೇಡ,” ಎಂದು ಹೇಳಿ ಅವನನ್ನು ಮನೆಗೆ ಕಳುಹಿಸಿಬಿಟ್ಟರು.
И изпрати го у дома му, и каза: Не влизай в селото, [нито казвай това някому в селото].
27 ಯೇಸುವೂ ಅವರ ಶಿಷ್ಯರೂ ಕೈಸರೈಯ ಫಿಲಿಪ್ಪಿ ಊರುಗಳಿಗೆ ಹೋದರು. ಯೇಸು ದಾರಿಯಲ್ಲಿ ತಮ್ಮ ಶಿಷ್ಯರಿಗೆ, “ನಾನು ಯಾರೆಂದು ಜನರು ಹೇಳುತ್ತಾರೆ?” ಎಂದು ಕೇಳಿದರು.
И излезе Исус с учениците Си по селата на Кесария Филипова; и по пътя попита учениците Си, като им каза: Според както казват хората: Кой съм Аз?
28 ಅವರು, “ಕೆಲವರು ಸ್ನಾನಿಕನಾದ ಯೋಹಾನನು, ಮತ್ತೆ ಕೆಲವರು ಎಲೀಯನು, ಇನ್ನು ಕೆಲವರು ಪ್ರವಾದಿಗಳಲ್ಲಿ ಒಬ್ಬನು ಎನ್ನುತ್ತಾರೆ,” ಎಂದು ಹೇಳಿದರು.
А те в отговор Му казаха: Йоан Кръстител; други - Илия; а трети - един от пророците.
29 ಅದಕ್ಕೆ ಯೇಸು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಲು, ಪೇತ್ರನು ಯೇಸುವಿಗೆ, “ನೀನು ಕ್ರಿಸ್ತನೇ,” ಎಂದನು.
Тогава ги попита: Но според както вие казвате: Кой съм? Петър в отговор Му каза: Ти си Христос.
30 ತಮ್ಮ ವಿಷಯವಾಗಿ ಅವರು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಖಂಡಿತವಾಗಿ ಹೇಳಿದರು.
И заръча им никому да не казват за Него.
31 ಮನುಷ್ಯಪುತ್ರನಾದ ನಾನು ಅನೇಕ ಬಾಧೆಗಳನ್ನು ಅನುಭವಿಸಿ, ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ನಿಯಮ ಬೋಧಕರಿಂದಲೂ ತಿರಸ್ಕೃತನಾಗಿ ಕೊಲೆಗೆ ಗುರಿಯಾಗಿ ಮೂರು ದಿವಸಗಳಾದ ಮೇಲೆ ಜೀವಂತವಾಗಿ ಎದ್ದು ಬರುವುದು ಅವಶ್ಯ ಎಂದು ಅವರಿಗೆ ಬೋಧಿಸಲಾರಂಭಿಸಿದರು.
И почна да ги учи, как Човешкият Син трябва много да пострада, и да бъде отхвърлен от старейшините, главните свещеници, книжниците, и да бъде убит, и след три дни да възкръсне.
32 ಯೇಸು ಆ ಮಾತನ್ನು ಸ್ಪಷ್ಟವಾಗಿ ಹೇಳಿದ್ದರಿಂದ ಪೇತ್ರನು ಅವರನ್ನು ಪ್ರತ್ಯೇಕವಾಗಿ ಕರೆದು ಯೇಸುವನ್ನು ಗದರಿಸಲಾರಂಭಿಸಿದನು.
И явно говореше тая дума. А Петър го взе настрана и почна да Го мъмри.
33 ಆದರೆ ಯೇಸು ತಿರುಗಿ ತಮ್ಮ ಶಿಷ್ಯರ ಕಡೆಗೆ ನೋಡಿ ಪೇತ್ರನನ್ನು ಗದರಿಸಿ, “ಸೈತಾನನೇ, ನನ್ನಿಂದ ತೊಲಗಿಹೋಗು! ನಿನ್ನ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ,” ಎಂದು ಹೇಳಿದರು.
А Той, като се обърна и погледна учениците Си, смъмра Петра, като каза: Махни се, Сатано, и иди зад Мене, защото не мислиш за Божиите неща, но за човешките неща.
34 ಯೇಸು ಜನರನ್ನೂ ಶಿಷ್ಯರನ್ನೂ ತಮ್ಮ ಬಳಿಗೆ ಕರೆದು ಅವರಿಗೆ, “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವರು ತಮ್ಮನ್ನು ನಿರಾಕರಿಸಿ ತಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
И повика народа заедно с учениците Си и рече им: Ако иска някой да дойде след Мене, нека се отрече от себе си, и така нека Ме следва.
35 ತಮ್ಮ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವರು ಅದನ್ನು ಕಳೆದುಕೊಳ್ಳುವರು. ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಯಾರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವರೋ ಅವರು ಅದನ್ನು ಉಳಿಸಿಕೊಳ್ಳುವರು.
Защото който иска да спаси живота(Или душата; така и до края на главата.) си, ще го изгуби; а който изгуби живота си заради Мене и за благовестието, ще го спаси.
36 ಒಬ್ಬ ವ್ಯಕ್ತಿ ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತಮ್ಮ ಸ್ವಂತ ಆತ್ಮವನ್ನೇ ನಷ್ಟಪಡಿಸಿಕೊಂಡರೆ ಅವರಿಗೆ ಲಾಭವೇನು?
Понеже какво се ползува човек като спечели целия свят, а изгуби живота си?
37 ಇಲ್ಲವೆ ತಮ್ಮ ಆತ್ಮಕ್ಕೆ ಬದಲಾಗಿ ಏನು ಕೊಡುವರು?
Защото какво би дал човек в замяна на живота си?
38 ಯಾರಾದರೂ ವ್ಯಭಿಚಾರದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯವಾಗಿ ನಾಚಿಕೊಳ್ಳುವರೋ ಅವರ ವಿಷಯದಲ್ಲಿ ಮನುಷ್ಯಪುತ್ರನಾದ ನಾನು ಸಹ ನನ್ನ ತಂದೆಯ ಮಹಿಮೆಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿಕೊಳ್ಳುವೆನು,” ಎಂದು ಹೇಳಿದರು.
Защото ако се срамува някой поради Мене и поради думите Ми в тоя блуден и грешен род, то и Човешкият Син ще се срамува от него, когато дойде в славата на Отца Си със святите ангели.

< ಮಾರ್ಕನು 8 >