< ಮಾರ್ಕನು 7 >

1 ಯೆರೂಸಲೇಮಿನಿಂದ ಫರಿಸಾಯರು ಮತ್ತು ಕೆಲವು ನಿಯಮ ಬೋಧಕರು ಯೇಸುವಿನ ಬಳಿಗೆ ಬಂದರು.
අනන්තරං යිරූශාලම ආගතාඃ ඵිරූශිනෝ(අ)ධ්‍යාපකාශ්ච යීශෝඃ සමීපම් ආගතාඃ|
2 ಆಗ ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ, ಅಂದರೆ ಆಚಾರ ಪದ್ಧತಿಯಂತೆ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಕಂಡರು.
තේ තස්‍ය කියතඃ ශිෂ්‍යාන් අශුචිකරෛරර්ථාද අප්‍රක්‍ෂාලිතහස්තෛ ර්භුඤ්ජතෝ දෘෂ්ට්වා තානදූෂයන්|
3 ಫರಿಸಾಯರು ಮತ್ತು ಎಲ್ಲಾ ಯೆಹೂದ್ಯರು ಆಚಾರ ಪದ್ಧತಿಯಂತೆ ತಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯದೆ ಊಟಮಾಡುವುದಿಲ್ಲ. ಹೀಗೆ ಅವರ ಪೂರ್ವಿಕರಿಂದ ಬಂದ ಸಂಪ್ರದಾಯವನ್ನು ಪಾಲಿಸುತ್ತಿದ್ದರು.
යතඃ ඵිරූශිනඃ සර්ව්වයිහූදීයාශ්ච ප්‍රාචාං පරම්පරාගතවාක්‍යං සම්මන්‍ය ප්‍රතලේන හස්තාන් අප්‍රක්‍ෂාල්‍ය න භුඤ්ජතේ|
4 ಪೇಟೆಗೆ ಹೋಗಿ ಬಂದರೆ ಅವರು ಸ್ನಾನ ಮಾಡದೆ ಊಟಮಾಡುತ್ತಿರಲಿಲ್ಲ. ಮಾತ್ರವಲ್ಲದೆ ಲೋಟ, ಚೆಂಬು ಮತ್ತು ತಪ್ಪಲೆಗಳನ್ನು ಬೆಳಗಿ ತೊಳೆಯುವುದು ಮುಂತಾದ ಅನೇಕ ಶುದ್ಧಾಚಾರಗಳನ್ನು ಅವರು ಪಾಲಿಸುತ್ತಿದ್ದರು.
ආපනාදාගත්‍ය මජ්ජනං විනා න ඛාදන්ති; තථා පානපාත්‍රාණාං ජලපාත්‍රාණාං පිත්තලපාත්‍රාණාම් ආසනානාඤ්ච ජලේ මජ්ජනම් ඉත්‍යාදයෝන්‍යේපි බහවස්තේෂාමාචාරාඃ සන්ති|
5 ಆದ್ದರಿಂದ ಫರಿಸಾಯರು ಮತ್ತು ನಿಯಮ ಬೋಧಕರು, “ನಿನ್ನ ಶಿಷ್ಯರು ಪೂರ್ವಿಕರ ಸಂಪ್ರದಾಯದ ಪ್ರಕಾರ ಏಕೆ ನಡೆಯುವುದಿಲ್ಲ? ಅವರು ಮೈಲಿಗೆಯಾದ ಕೈಗಳಿಂದ ಊಟಮಾಡುತ್ತಾರಲ್ಲಾ?” ಎಂದು ಯೇಸುವನ್ನು ಕೇಳಿದರು.
තේ ඵිරූශිනෝ(අ)ධ්‍යාපකාශ්ච යීශුං පප්‍රච්ඡුඃ, තව ශිෂ්‍යාඃ ප්‍රාචාං පරම්පරාගතවාක්‍යානුසාරේණ නාචරන්තෝ(අ)ප්‍රක්‍ෂාලිතකරෛඃ කුතෝ භුජංතේ?
6 ಅದಕ್ಕೆ ಯೇಸು, “ಕಪಟಿಗಳೇ, ಯೆಶಾಯನು ನಿಮ್ಮ ವಿಷಯವಾಗಿ ಸರಿಯಾಗಿ ಪ್ರವಾದಿಸಿದ್ದಾನೆ,” ಅವನು ಬರೆದಿರುವಂತೆ: “‘ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ. ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.
තතඃ ස ප්‍රත්‍යුවාච කපටිනෝ යුෂ්මාන් උද්දිශ්‍ය යිශයියභවිෂ්‍යද්වාදී යුක්තමවාදීත්| යථා ස්වකීයෛරධරෛරේතේ සම්මන්‍යනතේ සදෛව මාං| කින්තු මත්තෝ විප්‍රකර්ෂේ සන්ති තේෂාං මනාංසි ච|
7 ಮನುಷ್ಯರ ಆಜ್ಞೆಗಳನ್ನೇ ಉಪದೇಶಗಳನ್ನಾಗಿ ಬೋಧಿಸುವುದರಿಂದ ನನ್ನನ್ನು ವ್ಯರ್ಥವಾಗಿ ಆರಾಧಿಸುತ್ತಾರೆ.’
ශික්‍ෂයන්තෝ බිධීන් න්නාඥා භජන්තේ මාං මුධෛව තේ|
8 ನೀವು ದೇವರ ಆಜ್ಞೆಯನ್ನು ತೊರೆದು, ಮನುಷ್ಯರ ಸಂಪ್ರದಾಯಗಳನ್ನು ಹಿಡಿದುಕೊಂಡಿದ್ದೀರಿ,” ಎಂದರು.
යූයං ජලපාත්‍රපානපාත්‍රාදීනි මජ්ජයන්තෝ මනුජපරම්පරාගතවාක්‍යං රක්‍ෂථ කින්තු ඊශ්වරාඥාං ලංඝධ්වේ; අපරා ඊදෘශ්‍යෝනේකාඃ ක්‍රියා අපි කුරුධ්වේ|
9 ಯೇಸು ಇನ್ನೂ ಅವರಿಗೆ, “ನಿಮ್ಮ ಸಂಪ್ರದಾಯಗಳನ್ನು ಪಾಲಿಸುವುದಕ್ಕಾಗಿ ಬಹು ಜಾಣತನದಿಂದ ದೇವರ ಆಜ್ಞೆಯನ್ನು ನಿರ್ಲಕ್ಷಿಸುತ್ತೀರಿ.
අන්‍යඤ්චාකථයත් යූයං ස්වපරම්පරාගතවාක්‍යස්‍ය රක්‍ෂාර්ථං ස්පෂ්ටරූපේණ ඊශ්වරාඥාං ලෝපයථ|
10 ‘ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು,’ ಮತ್ತು ‘ತಂದೆತಾಯಿಗಳನ್ನು ದೂಷಿಸುವವನಿಗೆ ಮರಣದಂಡನೆ ಆಗಬೇಕು,’ ಎಂದು ಮೋಶೆ ಹೇಳಿದ್ದಾನೆ.
යතෝ මූසාද්වාරා ප්‍රෝක්තමස්ති ස්වපිතරෞ සම්මන්‍යධ්වං යස්තු මාතරං පිතරං වා දුර්ව්වාක්‍යං වක්ති ස නිතාන්තං හන්‍යතාං|
11 ಆದರೆ ನೀವು, ಯಾರಾದರೂ ತನ್ನ ತಂದೆಗೆ ಇಲ್ಲವೆ ತಾಯಿಗೆ, ನಾನು ನಿಮ್ಮ ಸಹಾಯಕ್ಕಾಗಿ ಇಟ್ಟಿದ್ದನ್ನು, ‘ದೇವರಿಗೆ ಕಾಣಿಕೆಯಾಗಿ ಕೊಟ್ಟಿದ್ದೇನೆ’ ಎಂದು ಹೇಳುವುದಾದರೆ,
කින්තු මදීයේන යේන ද්‍රව්‍යේණ තවෝපකාරෝභවත් තත් කර්බ්බාණමර්ථාද් ඊශ්වරාය නිවේදිතම් ඉදං වාක්‍යං යදි කෝපි පිතරං මාතරං වා වක්ති
12 ನೀವು ಅವನನ್ನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನು ಮಾಡುವುದಕ್ಕೂ ಅನುಮತಿಸುವುದಿಲ್ಲ.
තර්හි යූයං මාතුඃ පිතු ර්වෝපකාරං කර්ත්තාං තං වාරයථ|
13 ಹೀಗೆ ನೀವು ಮಾಡುತ್ತಾ ಬಂದಿರುವ ಸಂಪ್ರದಾಯಗಳ ಮೂಲಕ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ. ಇಂಥ ಕಾರ್ಯಗಳನ್ನು ಇನ್ನೂ ಎಷ್ಟೋ ಮಾಡುತ್ತೀರಿ,” ಎಂದು ಹೇಳಿದರು.
ඉත්ථං ස්වප්‍රචාරිතපරම්පරාගතවාක්‍යේන යූයම් ඊශ්වරාඥාං මුධා විධද්ව්වේ, ඊදෘශාන්‍යන්‍යාන්‍යනේකානි කර්ම්මාණි කුරුධ්වේ|
14 ಯೇಸು ಜನಸಮೂಹವನ್ನು ಪುನಃ ತಮ್ಮ ಬಳಿಗೆ ಕರೆದು, “ಎಲ್ಲರೂ ನನ್ನ ಮಾತುಗಳನ್ನು ಕೇಳಿರಿ, ಅರ್ಥಮಾಡಿಕೊಳ್ಳಿರಿ.
අථ ස ලෝකානාහූය බභාෂේ යූයං සර්ව්වේ මද්වාක්‍යං ශෘණුත බුධ්‍යධ්වඤ්ච|
15 ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಅಶುದ್ಧ ಮಾಡುವುದಿಲ್ಲ. ಆದರೆ ಮನುಷ್ಯನೊಳಗಿಂದ ಹೊರಗೆ ಬರುವಂಥದ್ದು ಅವನನ್ನು ಅಶುದ್ಧ ಮಾಡುತ್ತದೆ.
බාහ්‍යාදන්තරං ප්‍රවිශ්‍ය නරමමේධ්‍යං කර්ත්තාං ශක්නෝති ඊදෘශං කිමපි වස්තු නාස්ති, වරම් අන්තරාද් බහිර්ගතං යද්වස්තු තන්මනුජම් අමේධ්‍යං කරෝති|
16 ಯಾವನಿಗಾದರೂ ಕೇಳುವುದಕ್ಕೆ ಕಿವಿಯಿದ್ದರೆ ಕೇಳಲಿ,” ಎಂದು ಹೇಳಿದರು.
යස්‍ය ශ්‍රෝතුං ශ්‍රෝත්‍රේ ස්තඃ ස ශෘණෝතු|
17 ಆಮೇಲೆ ಯೇಸು ಜನರ ಗುಂಪನ್ನು ಬಿಟ್ಟು ಮನೆಯೊಳಗೆ ಪ್ರವೇಶಿಸಿದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, ಆ ಸಾಮ್ಯದ ವಿಷಯವಾಗಿ ಪ್ರಶ್ನಿಸಿದರು.
තතඃ ස ලෝකාන් හිත්වා ගෘහමධ්‍යං ප්‍රවිෂ්ටස්තදා ශිෂ්‍යාස්තදෘෂ්ටාන්තවාක්‍යාර්ථං පප්‍රච්ඡුඃ|
18 ಯೇಸು ಅವರಿಗೆ, “ನೀವೂ ಇಷ್ಟು ಬುದ್ಧಿಹೀನರೋ? ಹೊರಗಿನಿಂದ ಮನುಷ್ಯನೊಳಗೆ ಹೋಗುವಂಥದ್ದು ಅವನನ್ನು ಅಶುದ್ಧ ಮಾಡುವುದಿಲ್ಲವೆಂಬುದು ನಿಮಗೆ ತಿಳಿಯದೋ?
තස්මාත් ස තාන් ජගාද යූයමපි කිමේතාදෘගබෝධාඃ? කිමපි ද්‍රව්‍යං බාහ්‍යාදන්තරං ප්‍රවිශ්‍ය නරමමේධ්‍යං කර්ත්තාං න ශක්නෝති කථාමිමාං කිං න බුධ්‍යධ්වේ?
19 ಏಕೆಂದರೆ ಅದು ಅವನ ಹೃದಯದೊಳಗೆ ಹೋಗದೆ ಹೊಟ್ಟೆಯನ್ನು ಸೇರಿ ಬಳಿಕ ವಿಸರ್ಜಿತವಾಗುತ್ತದೆ. ಹೀಗೆ ಹೇಳುವುದರ ಮೂಲಕ ಎಲ್ಲಾ ಆಹಾರ ಪದಾರ್ಥಗಳು ಶುದ್ಧವಾಗಿವೆ,” ಎಂದು ಯೇಸು ಸೂಚಿಸಿದರು.
තත් තදන්තර්න ප්‍රවිශති කින්තු කුක්‍ෂිමධ්‍යං ප්‍රවිශති ශේෂේ සර්ව්වභුක්තවස්තුග්‍රාහිණි බහිර්දේශේ නිර‍්‍යාති|
20 ಯೇಸು ಮುಂದುವರಿದು, “ಆದರೆ ಮನುಷ್ಯನೊಳಗಿಂದ ಹೊರಡುವಂಥದ್ದು ಅವನನ್ನು ಅಶುದ್ಧ ಮಾಡುತ್ತವೆ.
අපරමප්‍යවාදීද් යන්නරාන්නිරේති තදේව නරමමේධ්‍යං කරෝති|
21 ಮನುಷ್ಯನ ಹೃದಯದೊಳಗಿಂದ ಜಾರತ್ವ, ಕಳ್ಳತನ, ಕೊಲೆ,
යතෝ(අ)න්තරාද් අර්ථාන් මානවානාං මනෝභ්‍යඃ කුචින්තා පරස්ත්‍රීවේශ්‍යාගමනං
22 ವ್ಯಭಿಚಾರ, ಲೋಭ, ದುಷ್ಟತ್ವ, ವಂಚನೆ, ಅಶ್ಲೀಲತೆ, ಅಸೂಯೆ, ನಿಂದೆ, ಗರ್ವ ಮತ್ತು ಮೂರ್ಖತನ ಮುಂತಾದ ದುರಾಲೋಚನೆಗಳು ಹೊರಡುತ್ತವೆ.
නරවධශ්චෞර‍්‍ය්‍යං ලෝභෝ දුෂ්ටතා ප්‍රවඤ්චනා කාමුකතා කුදෘෂ්ටිරීශ්වරනින්දා ගර්ව්වස්තම ඉත්‍යාදීනි නිර්ගච්ඡන්ති|
23 ಈ ಎಲ್ಲಾ ಕೇಡುಗಳು ಮನುಷ್ಯನ ಒಳಗಿಂದ ಹೊರಟು ಅವನನ್ನು ಅಶುದ್ಧ ಮಾಡುತ್ತವೆ,” ಎಂದರು.
ඒතානි සර්ව්වාණි දුරිතාන්‍යන්තරාදේත්‍ය නරමමේධ්‍යං කුර්ව්වන්ති|
24 ಯೇಸು ಆ ಸ್ಥಳವನ್ನು ಬಿಟ್ಟು ಟೈರ್ ಪಟ್ಟಣದ ಸಮೀಪವಿದ್ದ ಪ್ರದೇಶಕ್ಕೆ ಹೋದರು. ಯೇಸು ಒಂದು ಮನೆಯೊಳಗೆ ಹೋದಾಗ, ಅದು ಯಾರಿಗೂ ತಿಳಿಯಬಾರದೆಂದು ಬಯಸಿದರು. ಆದರೂ ಅವರು ಗುಟ್ಟಾಗಿರಲು ಸಾಧ್ಯವಾಗಲಿಲ್ಲ.
අථ ස උත්ථාය තත්ස්ථානාත් සෝරසීදෝන්පුරප්‍රදේශං ජගාම තත්‍ර කිමපි නිවේශනං ප්‍රවිශ්‍ය සර්ව්වෛරඥාතඃ ස්ථාතුං මතිඤ්චක්‍රේ කින්තු ගුප්තඃ ස්ථාතුං න ශශාක|
25 ಹೀಗೆ ಯೇಸುವಿನ ವಿಷಯ ತಿಳಿದ ಕೂಡಲೇ, ಅಶುದ್ಧಾತ್ಮಪೀಡಿತಳಾಗಿದ್ದ ಒಬ್ಬ ಚಿಕ್ಕ ಹುಡುಗಿಯ ತಾಯಿ ಬಂದು ಅವರ ಪಾದಕ್ಕೆ ಬಿದ್ದಳು.
යතඃ සුරඵෛනිකීදේශීයයූනානීවංශෝද්භවස්ත්‍රියාඃ කන්‍යා භූතග්‍රස්තාසීත්| සා ස්ත්‍රී තද්වාර්ත්තාං ප්‍රාප්‍ය තත්සමීපමාගත්‍ය තච්චරණයෝඃ පතිත්වා
26 ಆಕೆ, ಸಿರಿಯದ ಫೊಯಿನಿಕೆಯಲ್ಲಿ ಹುಟ್ಟಿದ ಗ್ರೀಕಳಾಗಿದ್ದಳು. ತನ್ನ ಮಗಳಿಗೆ ಹಿಡಿದಿದ್ದ ದೆವ್ವವನ್ನು ಓಡಿಸಬೇಕೆಂದು ಆಕೆ ಯೇಸುವನ್ನು ಬೇಡಿಕೊಂಡಳು.
ස්වකන්‍යාතෝ භූතං නිරාකර්ත්තාං තස්මින් විනයං කෘතවතී|
27 ಯೇಸು ಆಕೆಗೆ, “ಮೊದಲು ಮಕ್ಕಳು ತಮಗೆ ಬೇಕಾದದ್ದನ್ನು ತಿಂದು ತೃಪ್ತಿಗೊಳ್ಳಲಿ, ಏಕೆಂದರೆ ಮಕ್ಕಳು ತಿನ್ನುವ ರೊಟ್ಟಿಯನ್ನು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ,” ಎಂದರು.
කින්තු යීශුස්තාමවදත් ප්‍රථමං බාලකාස්තෘප්‍යන්තු යතෝ බාලකානාං ඛාද්‍යං ගෘහීත්වා කුක්කුරේභ්‍යෝ නික්‍ෂේපෝ(අ)නුචිතඃ|
28 ಅದಕ್ಕೆ ಆಕೆಯು ಯೇಸುವಿಗೆ, “ಹೌದು ಸ್ವಾಮೀ, ಆದರೆ ಮೇಜಿನ ಕೆಳಗಿರುವ ನಾಯಿಮರಿಗಳು ಮಕ್ಕಳ ಕೈಯಿಂದ ಕೆಳಗೆ ಬೀಳುವ ರೊಟ್ಟಿತುಂಡುಗಳನ್ನು ತಿನ್ನುತ್ತವಲ್ಲಾ?” ಎಂದು ಉತ್ತರಕೊಟ್ಟಳು.
තදා සා ස්ත්‍රී තමවාදීත් භෝඃ ප්‍රභෝ තත් සත්‍යං තථාපි මඤ්චාධඃස්ථාඃ කුක්කුරා බාලානාං කරපතිතානි ඛාද්‍යඛණ්ඩානි ඛාදන්ති|
29 ಆಗ ಯೇಸು ಆಕೆಗೆ, “ನೀನು ಕೊಟ್ಟಿರುವ ಈ ಉತ್ತರದ ನಿಮಿತ್ತ ಮನೆಗೆ ಹಿಂದಿರುಗು, ದೆವ್ವವು ನಿನ್ನ ಮಗಳನ್ನು ಬಿಟ್ಟುಹೋಗಿದೆ,” ಎಂದರು.
තතඃ සෝ(අ)කථයද් ඒතත්කථාහේතෝඃ සකුශලා යාහි තව කන්‍යාං ත්‍යක්ත්වා භූතෝ ගතඃ|
30 ಆಕೆ ಮನೆಗೆ ಹೋದಾಗ, ದೆವ್ವ ಅವಳ ಮಗಳನ್ನು ಬಿಟ್ಟುಹೋಗಿತ್ತು ಮತ್ತು ಮಗಳು ಹಾಸಿಗೆಯ ಮೇಲೆ ಮಲಗಿರುವುದನ್ನು ಕಂಡಳು.
අථ සා ස්ත්‍රී ගෘහං ගත්වා කන්‍යාං භූතත්‍යක්තාං ශය්‍යාස්ථිතාං දදර්ශ|
31 ಆಮೇಲೆ ಯೇಸು ಟೈರ್ ಪಟ್ಟಣದ ಸಮೀಪವಿದ್ದ ಪ್ರದೇಶದಿಂದ ಹೊರಟು ಸೀದೋನಿನ ಮಾರ್ಗವಾಗಿ ಗಲಿಲಾಯ ಸರೋವರ ತೀರವನ್ನು ಹಾದು ದೆಕಪೊಲಿ ಪ್ರದೇಶಕ್ಕೆ ಬಂದರು.
පුනශ්ච ස සෝරසීදෝන්පුරප්‍රදේශාත් ප්‍රස්ථාය දිකාපලිදේශස්‍ය ප්‍රාන්තරභාගේන ගාලීල්ජලධේඃ සමීපං ගතවාන්|
32 ಅಲ್ಲಿ ಕೆಲವರು ಮಾತನಾಡಲಾಗದ ಒಬ್ಬ ಕಿವುಡನನ್ನು ಕರೆದುಕೊಂಡು ಬಂದು ಅವನ ಮೇಲೆ ಕೈಯಿಡಬೇಕೆಂದು ಯೇಸುವನ್ನು ಬೇಡಿಕೊಂಡರು.
තදා ලෝකෛරේකං බධිරං කද්වදඤ්ච නරං තන්නිකටමානීය තස්‍ය ගාත්‍රේ හස්තමර්පයිතුං විනයඃ කෘතඃ|
33 ಯೇಸು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ತಮ್ಮ ಬೆರಳುಗಳನ್ನು ಅವನ ಕಿವಿಯೊಳಗಿಟ್ಟು ಅನಂತರ ಉಗುಳಿ, ಅವನ ನಾಲಿಗೆಯನ್ನು ಮುಟ್ಟಿದರು.
තතෝ යීශු ර්ලෝකාරණ්‍යාත් තං නිර්ජනමානීය තස්‍ය කර්ණයෝඞ්ගුලී ර්දදෞ නිෂ්ඨීවං දත්ත්වා ච තජ්ජිහ්වාං පස්පර්ශ|
34 ಯೇಸು ಸ್ವರ್ಗದ ಕಡೆಗೆ ನೋಡಿ, ದೀರ್ಘವಾಗಿ ನಿಟ್ಟುಸಿರುಬಿಟ್ಟು ಅವನಿಗೆ “ಎಪ್ಫಥಾ!” ಎಂದರು. “ತೆರೆಯಲಿ!” ಎಂಬುದು ಅದರ ಅರಮೀಯ ಅರ್ಥ.
අනන්තරං ස්වර්ගං නිරීක්‍ෂ්‍ය දීර්ඝං නිශ්වස්‍ය තමවදත් ඉතඵතඃ අර්ථාන් මුක්තෝ භූයාත්|
35 ಕೂಡಲೇ ಅವನ ಕಿವಿಗಳು ತೆರೆದವು; ಅವನ ನಾಲಿಗೆಯು ಸಡಿಲವಾಯಿತು. ಅವನು ಸ್ಪಷ್ಟವಾಗಿ ಮಾತನಾಡಲಾರಂಭಿಸಿದನು.
තතස්තත්ක්‍ෂණං තස්‍ය කර්ණෞ මුක්තෞ ජිහ්වායාශ්ච ජාඩ්‍යාපගමාත් ස සුස්පෂ්ටවාක්‍යමකථයත්|
36 ಯಾವ ಮನುಷ್ಯನಿಗೂ ಇದನ್ನು ಹೇಳಬಾರದೆಂದು ಯೇಸು ಅವರಿಗೆ ಖಂಡಿತವಾಗಿ ಹೇಳಿದರು. ಆದರೆ ಎಷ್ಟು ಖಂಡಿತವಾಗಿ ಹೇಳಿದರೂ ಅವರು ಅದನ್ನು ಮತ್ತಷ್ಟೂ ಹೆಚ್ಚಾಗಿ ಪ್ರಚಾರಮಾಡಿದರು.
අථ ස තාන් වාඪමිත්‍යාදිදේශ යූයමිමාං කථාං කස්මෛචිදපි මා කථයත, කින්තු ස යති න්‍යෂේධත් තේ තති බාහුල්‍යේන ප්‍රාචාරයන්;
37 ಜನರು ಅತ್ಯಂತ ಆಶ್ಚರ್ಯಪಟ್ಟು, “ಯೇಸು ಎಲ್ಲಾ ಕಾರ್ಯವನ್ನು ಚೆನ್ನಾಗಿ ಮಾಡುತ್ತಾರೆ. ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರೆ,” ಎಂದುಕೊಳ್ಳುತ್ತಿದ್ದರು.
තේ(අ)තිචමත්කෘත්‍ය පරස්පරං කථයාමාසුඃ ස බධිරාය ශ්‍රවණශක්තිං මූකාය ච කථනශක්තිං දත්ත්වා සර්ව්වං කර්ම්මෝත්තමරූපේණ චකාර|

< ಮಾರ್ಕನು 7 >