< ಮಾರ್ಕನು 12 >

1 ಯೇಸು ಸಾಮ್ಯಗಳಿಂದ ಮಾತನಾಡಲು ಪ್ರಾರಂಭಿಸಿದರು: “ಒಬ್ಬಾನೊಬ್ಬ ಮನುಷ್ಯನು ಒಂದು ದ್ರಾಕ್ಷಿಯ ತೋಟವನ್ನು ಮಾಡಿ ಸುತ್ತಲೂ ಬೇಲಿ ಹಾಕಿದನು. ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಅಗೆದು ಕಾವಲುಗೋಪುರವನ್ನು ಕಟ್ಟಿ ರೈತರಿಗೆ ವಹಿಸಿಬಿಟ್ಟು ದೂರದೇಶಕ್ಕೆ ಹೊರಟುಹೋದನು.
Ipo uYesu ahanda abhamanyizye huvhi fwani. Ayanga, “Umuntu atotile hugunda amizabibu, azyunguzwa ulubhaga, ahadiba ilina ilwa khandile ahamwele. Ahazenga ahantu atali bada yipo apanjizywa ugunda ugwimizabibu ashula isafali iya hutali.
2 ಫಲದ ಕಾಲ ಬಂದಾಗ ಅವನು ದ್ರಾಕ್ಷಿತೋಟದ ಫಲವನ್ನು ರೈತರಿಂದ ಪಡೆಯುವುದಕ್ಕಾಗಿ ಅವರ ಬಳಿಗೆ ಒಬ್ಬ ಸೇವಕನನ್ನು ಕಳುಹಿಸಿದನು.
Uwakati pawahafika hatu ma utumishi walimi imizabibu aposhele afume wabhene vimo ivimadudu gahugunda igimizabibu.
3 ಆದರೆ ಅವರು ಅವನನ್ನು ಹಿಡಿದು ಹೊಡೆದು, ಬರಿಗೈಯಲ್ಲಿ ಕಳುಹಿಸಿಬಿಟ್ಟರು.
Lelo bhakata, bhakhoma nahanyizywa bila haiduhahutde.
4 ಯಜಮಾನನು ಪುನಃ ಮತ್ತೊಬ್ಬ ಸೇವಕನನ್ನು ಅವರ ಬಳಿಗೆ ಕಳುಹಿಸಿದಾಗ ಅವರು ಅವನ ತಲೆಯನ್ನು ಗಾಯಗೊಳಿಸಿ ಅವಮಾನ ಮಾಡಿ ಕಳುಹಿಸಿಬಿಟ್ಟರು.
Atuma utumishi uwinji bhavhahwalazywa mwitwe na hubhombele amambo agisoni.
5 ಯಜಮಾನನು ಮತ್ತೊಬ್ಬ ಸೇವಕನನ್ನು ಕಳುಹಿಸಿದಾಗ ಅವರು ಅವನನ್ನು ಕೊಂದುಹಾಕಿದರು. ಯಜಮಾನನು ಬೇರೆ ಕೆಲವರನ್ನು ಕಳುಹಿಸಿದಾಗ ಅವರಲ್ಲಿ ಕೆಲವರನ್ನು ಹೊಡೆದರು, ಕೆಲವರನ್ನು ಕೊಂದುಹಾಕಿದರು.
Bado atuma uwinji, unuuwinji bha goga bhahabhombela abhinji amambo kama gigo, bhakoma bhamo bhabha goga.
6 “ಕಡೆಯದಾಗಿ ತನಗೆ ಪ್ರಿಯನಾಗಿದ್ದ ಒಬ್ಬನೇ ಮಗನಿದ್ದನು. ‘ಅವರು ನನ್ನ ಮಗನಿಗಾದರೂ ಮರ್ಯಾದೆ ಕೊಡುವರು,’ ಎಂದು ಭಾವಿಸಿ, ಅವನನ್ನು ಅವರ ಬಳಿಗೆ ಕಳುಹಿಸಿದನು.
Alisile umuntu umozaidi uwahutume, umwana uyangenwe. Wope aliwamwisho uwatumilwe wabhene. Ayanga, “Bhaza huheshimuu mwana wane”.
7 “ಆದರೆ ಆ ರೈತರು, ‘ಇವನೇ ಬಾಧ್ಯಸ್ಥನು, ಬನ್ನಿರಿ, ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು,’ ಎಂದು ತಮ್ಮ ತಮ್ಮಲ್ಲಿ ಮಾತನಾಡಿಕೊಂಡರು.
Lelo apangaji bhayanga na bhene kwa bhene, “Unu yuyo uwaliyhi. Izaji, natugoje, uhu ulithi uzabhewetu.”
8 ಅವರು ಅವನನ್ನು ಹಿಡಿದು ಕೊಂದುಹಾಕಿ ದ್ರಾಕ್ಷಿತೋಟದ ಹೊರಗೆ ಬಿಸಾಡಿದರು.
Bhahavhamila, bhahagoga nahutaje huzi iyigunda gwa mizabibu.
9 “ಹಾಗಾದರೆ ದ್ರಾಕ್ಷಿತೋಟದ ಯಜಮಾನನು ಅವರಿಗೆ ಏನು ಮಾಡುವನು? ಅವನು ಬಂದು ಆ ರೈತರನ್ನು ಸಂಹರಿಸಿ ದ್ರಾಕ್ಷಿಯ ತೋಟವನ್ನು ಬೇರೆಯವರಿಗೆ ಕೊಡುವನು.
Isho, Lelo ayibhomba bhuli utawala uwi gunda ili mizabibu? Ayinza na vhangamizywe abhalinza amizabibu na aipela abhanji ishamba ili mizabibu wa bhantu abhanji.
10 ಈ ಪವಿತ್ರ ವಾಕ್ಯವನ್ನು ನೀವು ಓದಲಿಲ್ಲವೋ: “‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
Hapete amanyile isimbo ili? “Iwe ilwa zenji bhalikhanile, lihabha liwe lwa nshinje.
11 ಇದು ಕರ್ತನಿಂದಲೇ ಆಯಿತು. ಇದು ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿದೆ,’” ಎಂದು ಹೇಳಿದರು.
Ili lihafuma wa Bwana, na liswizywa pamaso gityu.”
12 ಆಗ ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೂ ತಮ್ಮ ವಿರೋಧವಾಗಿಯೇ ಈ ಸಾಮ್ಯವನ್ನು ಹೇಳಿದರೆಂದು ತಿಳಿದು ಯೇಸುವನ್ನು ಹಿಡಿಯುವುದಕ್ಕೆ ಸಂದರ್ಭ ನೋಡಿದರು. ಆದರೆ ಅವರು ಜನರಿಗೆ ಹೆದರಿ, ಯೇಸುವನ್ನು ಬಿಟ್ಟು ಹೊರಟು ಹೋದರು.
Bhahanza hukhate uYesu, Lelo bha hogopa umbungano. Pipo vhaminye huje bhayanjile ishifwano zaidi yao. Isho bhahaleha wabho.
13 ಆಮೇಲೆ ಅವರು ಯೇಸುವನ್ನು ಅವರ ಮಾತುಗಳಲ್ಲಿ ಹಿಡಿಯಬೇಕೆಂದು ಫರಿಸಾಯರಲ್ಲಿಯೂ ಹೆರೋದ್ಯರಲ್ಲಿಯೂ ಕೆಲವರನ್ನು ಅವರ ಬಳಿಗೆ ಕಳುಹಿಸಿದರು.
Pipo bhahatuma bhamo na mahelodia wa mwene ili huteje hunongwa.
14 ಅವರು ಬಂದು ಯೇಸುವಿಗೆ, “ಬೋಧಕರೇ, ನೀವು ಸತ್ಯವಂತರು ಮತ್ತು ಯಾವ ಮನುಷ್ಯನನ್ನೂ ಲಕ್ಷಿಸದವರೂ ನೀವು ಮನುಷ್ಯರ ಮುಖದಾಕ್ಷಿಣ್ಯ ಮಾಡದೆ ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುತ್ತೀರಿ ಎಂದೂ ನಾವು ಬಲ್ಲೆವು. ಕೈಸರನಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ ಇಲ್ಲವೋ?
Pabhahafiha, bhahabhula, “Huje Mwalimo, tuminye huje haga usaga inzibho zhwazyunti haga ubhonesya apendelele pahati iya bhantu. Umanyizwa idala ilwa Ngulubhi pamwana lyoli. Lelo haki afumwe ikodi wakali sali au haa?
15 ನಾವು ಕೊಡಬೇಕೋ? ಕೊಡಬಾರದೋ?” ಎಂದು ಕೇಳಿದರು. ಆದರೆ ಯೇಸು ಅವರ ಕಪಟವನ್ನು ತಿಳಿದು ಅವರಿಗೆ, “ನೀವು ನನ್ನನ್ನೇಕೆ ಪರೀಕ್ಷಿಸುತ್ತೀರಿ? ಒಂದು ಬೆಳ್ಳಿ ನಾಣ್ಯವನ್ನು ತಂದು ನನಗೆ ತೋರಿಸಿರಿ,” ಎಂದು ಹೇಳಿದರು.
Lelo uYesu amenye aje bhalyeula na abhabhula, “Yenu munjela? Mbheli ihela injenye.”
16 ಅವರು ಅದನ್ನು ತಂದಾಗ ಯೇಸು ಅವರಿಗೆ, “ಇದರ ಮುಖ ಮುದ್ರೆಯು ಮತ್ತು ಮೆಲ್ಬರಹವು ಯಾರದು?” ಎಂದು ಕೇಳಿದ್ದಕ್ಕೆ ಅವರು, “ಕೈಸರನದು,” ಎಂದು ಉತ್ತರಕೊಟ್ಟರು.
Nabhayileta imo wa Yesu, Abhabhula, “Isura yana nu asimbo agagaliipa gananu? Bhayanga, “Ya Kaisari.”
17 ಆಗ ಯೇಸು ಉತ್ತರವಾಗಿ ಅವರಿಗೆ, “ಕೈಸರನಿಗೆ ಸಲ್ಲತಕ್ಕದ್ದನ್ನು ಕೈಸರನಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದು ಹೇಳಿದರು. ಇದಕ್ಕೆ ಅವರು ಯೇಸುವಿನ ವಿಷಯವಾಗಿ ಆಶ್ಚರ್ಯಪಟ್ಟರು.
U Yesu abhabhula, “Panji u Kaisari ivintu ivha Kaisari vavha Ngulubhi panji Ungulubhi.” Bhahaswiga.
18 ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಯೇಸುವಿನ ಬಳಿಗೆ ಬಂದು,
Ipo Amasadukayo, abhayanga nahumo azywoshe, bhahabhalila. Bhabhuzya, bhahaga,
19 “ಬೋಧಕರೇ, ‘ಒಬ್ಬ ಮನುಷ್ಯನ ಸಹೋದರನು ಮಕ್ಕಳಿಲ್ಲದೆ ವಿಧವೆಯನ್ನು ಬಿಟ್ಟು ಸತ್ತರೆ, ಅವನ ಸಹೋದರನು ಅವನ ಹೆಂಡತಿಯನ್ನು ತೆಗೆದುಕೊಂಡು ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕು’ ಎಂದು ಮೋಶೆಯು ನಮಗೆ ಬರೆದಿರುತ್ತಾನಷ್ಟೆ.
“Mwalimo, uMose atusimbile huje, 'Gashele uholo uwa muntu khafwile aleshile ushi khosi yakwe, lelo haga aleshile umwana, mutu ayimwenga ushi uwaholo, nawipatile abhana kwajili yaholo wakwe.'
20 ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಯಾಗಿ ಸಂತಾನವಿಲ್ಲದೆ ಮೃತಪಟ್ಟನು.
Wali na holo saba, uwa wandilo ahamwega ula ushi afwa, haga ahaleha abhana.
21 ಎರಡನೆಯವನೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತನಾದನು. ಅದರಂತೆಯೇ ಮೂರನೆಯವನೂ ಆದನು.
Antele wope uwabhili amwega wope afwa, aleha abhana. Uwatatu wope shisho.
22 ಹೀಗೆ ಏಳುಮಂದಿಯೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದವರಾಗಿ ಮೃತರಾದರು. ಕೊನೆಯಲ್ಲಿ ಆ ಸ್ತ್ರೀಯೂ ಸಹ ಮರಣಹೊಂದಿದಳು.
Nawa saba afwa bila aleshe abhana. Hu mwisho wakwe wope ushi ahafwa.
23 ಹಾಗಾದರೆ, ಪುನರುತ್ಥಾನದಲ್ಲಿ ಅವರು ಜೀವಂತವಾಗಿ ಎದ್ದಾಗ ಅವರಲ್ಲಿ ಆಕೆಯು ಯಾರ ಪತ್ನಿಯಾಗಿರುವಳು? ಏಕೆಂದರೆ ಏಳುಮಂದಿಯೂ ಅವಳನ್ನು ಮದುವೆ ಮಾಡಿಕೊಂಡಿದ್ದರಲ್ಲಾ,” ಎಂದು ಪ್ರಶ್ನಿಸಿದರು.
Uwakati uzyushe, pabhaizyuha nandtele, Ishi ayibhawananu? Maana bhala aholo bhunthi saba bhundthi bhali bhalume bhakwe.”
24 ಅದಕ್ಕೆ ಯೇಸು, “ನೀವು ಪವಿತ್ರ ವೇದವನ್ನಾಗಲಿ ದೇವರ ಶಕ್ತಿಯನ್ನಾಗಲಿ ಅರ್ಥ ಮಾಡಿಕೊಳ್ಳದೆ ತಪ್ಪುತ್ತಿದ್ದಿರಲ್ಲವೇ?
U Yesu abhabhula, Lelo! Ili sagalila huje mukhopilwe, pipo samuminye amasimbo wala ikhone ilwa Ngulubhi?”
25 ಅವರು ಸತ್ತವರೊಳಗಿಂದ ಜೀವಂತವಾಗಿ ಎದ್ದ ಮೇಲೆ, ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ.
Uwakati uwazyushe uwafume bhabhafile, haga bhayenga wala awinjile mundowa ila bhaibha na sha awandumi ahumwanya.
26 ಸತ್ತವರು ಎದ್ದು ಬರುವುದರ ವಿಷಯವಾಗಿ, ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ’ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಹೇಗೆ ಮಾತನಾಡಿದರೆಂದು ಮೋಶೆಯ ಗ್ರಂಥದಲ್ಲಿ ನೀವು ಓದಲಿಲ್ಲವೋ?
Lelo, ahusu abhafwe abhaizyuha, Lelo! Samwamanyila afume mushitabu isha Mose, ihabali ziha poli, shila Ungulubhi isha yanga abhula, 'Ani ni Ngulubhi uwa Ibulahimu, nani Ngulubhi Isaka, nani Ngulubhi uwa Yakobo?'
27 ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ, ಆದ್ದರಿಂದ ಈ ವಿಷಯದಲ್ಲಿ ನೀವು ಬಹಳವಾಗಿ ತಪ್ಪುಮಾಡುತ್ತೀರಿ,” ಎಂದು ಹೇಳಿದರು.
Umwene sa Ngulubhi uwa bhafwa, ila wali bhumi. Lili wazi atejile.”
28 ನಿಯಮ ಬೋಧಕರಲ್ಲಿ ಒಬ್ಬನು ಬಂದು ಅವರು ಕೂಡಿಕೊಂಡು ತರ್ಕಿಸುತ್ತಿರುವುದನ್ನು ಕೇಳಿ ಯೇಸು ಅವರಿಗೆ ಸರಿಯಾಗಿ ಉತ್ತರವನ್ನು ಕೊಟ್ಟನೆಂದು ತಿಳಿದು ಅವರಿಗೆ, “ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು ಯಾವುದು?” ಎಂದು ಕೇಳಿದನು.
uwa bhawasimbi ahenza ahuvha izyabhayangaga inongwa zyabho; alola huje uYesu abhajibule shinza. Ahabhuzya, “Lelo! amuli ishi ili mana ishilizywe zyunti?”
29 ಯೇಸು ಉತ್ತರವಾಗಿ ಅವನಿಗೆ, “ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು, ‘ಇಸ್ರಾಯೇಲೇ, ಕೇಳು: ನಮ್ಮ ದೇವರಾದ ಕರ್ತ ಒಬ್ಬರೇ ಕರ್ತನಾಗಿದ್ದಾರೆ.
U Yesu ahajibula, “Ilimana yayini, “Uvha Israeli, U Bwana Ungulubhi uwetu, Bwana umo.
30 ನೀನು ನಿನ್ನ ದೇವರನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಮನಸ್ಸಿನಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು?’
Ilazimiha hugane uBwana Ungulubhi uwaho, hunwoyo hwaho gwundti, huroho yaho yundti hunjele zyaho zyundti nawikhone lwaho lyundti.'
31 ‘ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು,’ ಎಂಬುದು ಅದರಂತೆಯೇ ಇರುವ ಎರಡನೆಯ ಆಜ್ಞೆಯಾಗಿದೆ. ಇವುಗಳಿಗಿಂತ ಹೆಚ್ಚಿನ ಆಜ್ಞೆಯು ಮತ್ತೊಂದಿಲ್ಲ,” ಎಂದು ಹೇಳಿದರು.
Iamuli iyabhili yayini, 'Iwanziwa ugane upalamani waho nishi amuli iyinje ingosi zaidi yizi.”
32 ಅದಕ್ಕೆ ಆ ನಿಯಮ ಬೋಧಕನು ಯೇಸುವಿಗೆ, “ಬೋಧಕರೇ, ಚೆನ್ನಾಗಿ ಹೇಳಿದಿರಿ. ನೀವು ಹೇಳಿದ್ದು ಸತ್ಯವೇ; ಏಕೆಂದರೆ ದೇವರು ಒಬ್ಬರೇ, ಅವರ ಹೊರತು ಬೇರೊಬ್ಬರು ಇಲ್ಲ.
Usimbi ayanga, “Shinza Mwalimo! Uyanjile lyoli huje Ungulubhi aliumo na huje numo, uwinji zaidi yamwene.
33 ಅವರನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ಪ್ರೀತಿಸಿ, ತನ್ನ ನೆರೆಯವನನ್ನು ತನ್ನಂತೆಯೇ ಪ್ರೀತಿಸುವುದು ಎಲ್ಲಾ ದಹನಬಲಿಗಳಿಗಿಂತಲೂ ಯಜ್ಞಗಳಿಗಿಂತಲೂ ಹೆಚ್ಚಿನದಾಗಿದೆ,” ಎಂದನು.
Ugane umwene humwoyo gwundti, nahugane upalamani nishi puwiga ne wewe, nimuhimu mno kuliko uvifumwa nadhahibu izya lungulizye.”
34 ಅವನು ವಿವೇಕದಿಂದ ಉತ್ತರ ಕೊಟ್ಟದ್ದನ್ನು ಯೇಸು ಕಂಡು ಅವನಿಗೆ, “ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ,” ಎಂದರು. ಅಂದಿನಿಂದ ಯೇಸುವನ್ನು ಪ್ರಶ್ನೆಮಾಡುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.
Ulya Yesu pala pahalola ahafumwa ijibu ilinza, ayanga, “Awe haga ulihutali nu tawala uwa Ngulubhi.” Pipo numo hata umo uwa ajela hubhuzwe uYesu amaswali gagundti.
35 ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ, “ಕ್ರಿಸ್ತನು ದಾವೀದನ ಪುತ್ರನು ಎಂದು ನಿಯಮ ಬೋಧಕರು ಹೇಳುತ್ತಿರುವುದು ಹೇಗೆ?
U Yesu ahajibu, lula uli amanyizya mushi vhanza ayanga, “Lelo! Asimbi bhayigabhuli huje uYesu Kilisiti ni mwana wa Daudi?
36 ದಾವೀದನು ತಾನೇ ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದ್ದೇನೆಂದರೆ: “‘ಕರ್ತದೇವರು ನನ್ನ ಕರ್ತದೇವರಿಗೆ ಹೇಳಿದ್ದಾರೆ: “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದದಡಿಯಲ್ಲಿ ಹಾಕುವವರೆಗೆ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು.”’
Daudi yuyo katika Roho Uuzelu, ayanjile, 'Bwana' ayanjile Bwana wane, khala kati yikho gwani hukhono ugwishulume pakaimbabhombe alugo pansi iyi magagagaho.'
37 ಆದ್ದರಿಂದ ದಾವೀದನು ತಾನೇ ಅವರನ್ನು, ‘ನನ್ನ ಕರ್ತದೇವರೇ’ ಎಂದು ಕರೆಯುವಾಗ, ಆತನು ದಾವೀದನ ಪುತ್ರನಾಗುವುದು ಹೇಗೆ?” ಎಂದು ಕೇಳಿದರು. ಜನಸಮೂಹವು ಸಂತೋಷದಿಂದ ಯೇಸುವಿನ ಮಾತುಗಳನ್ನು ಆಲಿಸುತ್ತಿತ್ತು.
U Daudi ahukuga Kilisiti, 'Bwana' Lelo! mwana wa Daudi nishi uli pugaishi gosi shimojile?”
38 ಯೇಸು ಬೋಧನೆಮಾಡುತ್ತಾ, “ನಿಯಮ ಬೋಧಕರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಅವರು ನಿಲುವಂಗಿಯನ್ನು ತೊಟ್ಟುಕೊಂಡು ತಿರುಗಾಡುವುದಕ್ಕೆ ಬಯಸುವವರೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ
Amanyizywe wakwe uYesu ayanga, “Muwiyenyeje nasimbi abhasugwa ajende ni kazu intali nalamuwe musokoni
39 ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಇಷ್ಟಪಡುತ್ತಾರೆ.
na khale humatengo aga gosi umwaputile namu shikulukulu humaeneo agashigosi.
40 ಇವರು ವಿಧವೆಯರ ಮನೆಗಳನ್ನು ದೋಚಿ ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ, ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು,” ಎಂದರು.
Natena bhalwa nyumba inzwainzwafwile bhala bha amaombi amatali sana abhantu khabha bhenyaje. Ibha abhantu bhaipaulozi uwa uli gosi.”
41 ಯೇಸು ಕಾಣಿಕೆ ಪೆಟ್ಟಿಗೆಯ ಎದುರಾಗಿ ಕುಳಿತುಕೊಂಡು ಜನರು ಹೇಗೆ ಅದರಲ್ಲಿ ಹಣ ಹಾಕುತ್ತಿದ್ದಾರೆಂಬುದನ್ನು ಗಮನಿಸುತ್ತಿದ್ದರು. ಅನೇಕ ಐಶ್ವರ್ಯವಂತರು ಹೆಚ್ಚು ಹಣ ಹಾಕಿದರು.
Pala uYesu akhala panzi apalamane ni phogoso isadaka muhati inyi shi bhaza. Ali abhenya abhenya abhandtu abhafumiga panyanga indalama muphogoso. Abhandtu abhinji atajili bhahabhehanyishe huwinji uwindalama.
42 ಆದರೆ ಒಬ್ಬ ಬಡ ವಿಧವೆಯು ಬಂದು ಎರಡು ಚಿಕ್ಕ ನಾಣ್ಯಗಳನ್ನು ಹಾಕಿದಳು.
Ushi ufwile umaskini ahenza naponye ivipande vibhili thamani yasenti.
43 ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ, “ಈ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದವರೆಲ್ಲರಿಗಿಂತ ಈ ಬಡ ವಿಧವೆಯು ಹೆಚ್ಚಾಗಿ ಹಾಕಿದ್ದಾಳೆ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
Ipo abhakuga asundwa wakwe na bhabhule, “Amini imbabhula, ushi unu ufwile afumizwe agosi zaidi ya bhundti bhala amalizizizye apanye mpongoso iyisa ndaka.
44 ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು. ಆದರೆ ಈಕೆಯು ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಎಂದರೆ, ತನ್ನ ಜೀವನಕ್ಕೆ ಆಧಾರವಾಗಿದ್ದುದನ್ನು ಹಾಕಿದ್ದಾಳೆ,” ಎಂದರು.
Kwani bhundthi bhaponyizye elingananje huwinji uwivhi pato vhavho. Lelo ushiuda ufwile unu, afume humasikini wakwe, afumwa idalama yundti amabyo iziwanga.”

< ಮಾರ್ಕನು 12 >