< ಮಾರ್ಕನು 11 >
1 ಅವರು ಯೆರೂಸಲೇಮಿಗೆ ಸಮೀಪಿಸಿ ಓಲಿವ್ ಗುಡ್ಡದ ಕಡೆಗೆ ಇರುವ ಬೇತ್ಫಗೆ ಮತ್ತು ಬೇಥಾನ್ಯಕ್ಕೂ ಬಂದಾಗ ಯೇಸು ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ,
Quando si avvicinarono a Gerusalemme, verso Bètfage e Betània, presso il monte degli Ulivi, mandò due dei suoi discepoli
2 “ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ. ನೀವು ಅದರೊಳಗೆ ಪ್ರವೇಶಿಸಿದ ಕೂಡಲೇ ಕಟ್ಟಿರುವ ಮತ್ತು ಯಾರೂ ಅದರ ಮೇಲೆ ಸವಾರಿ ಮಾಡದಿರುವ ಒಂದು ಕತ್ತೆಮರಿಯನ್ನು ಅಲ್ಲಿ ಕಾಣುವಿರಿ. ಅದನ್ನು ಬಿಚ್ಚಿ ಇಲ್ಲಿಗೆ ತೆಗೆದುಕೊಂಡು ಬನ್ನಿರಿ.
e disse loro: «Andate nel villaggio che vi sta di fronte, e subito entrando in esso troverete un asinello legato, sul quale nessuno è mai salito. Scioglietelo e conducetelo.
3 ಯಾವನಾದರೂ ನಿಮಗೆ, ‘ಏಕೆ ಹೀಗೆ ಮಾಡುತ್ತೀರಿ?’ ಎಂದು ಕೇಳಿದರೆ, ‘ಇದು ಕರ್ತದೇವರಿಗೆ ಅವಶ್ಯವಾಗಿದೆ, ಆತನು ಕೂಡಲೇ ಇದನ್ನು ಹಿಂದಕ್ಕೆ ಕಳುಹಿಸುವನು,’” ಎಂದು ಹೇಳಿರಿ ಎಂದರು.
E se qualcuno vi dirà: Perché fate questo?, rispondete: Il Signore ne ha bisogno, ma lo rimanderà qui subito».
4 ಆಗ ಅವರು ಹೊರಟುಹೋಗಿ ಬೀದಿಯಲ್ಲಿದ್ದ ಒಂದು ಮನೆಯ ಬಾಗಿಲಿನ ಹತ್ತಿರ ಕಟ್ಟಿದ್ದ ಕತ್ತೆಮರಿಯನ್ನು ಕಂಡರು. ಅವರು ಅದನ್ನು ಬಿಚ್ಚುತ್ತಿರುವಾಗ,
Andarono e trovarono un asinello legato vicino a una porta, fuori sulla strada, e lo sciolsero.
5 ಅಲ್ಲಿ ನಿಂತಿದ್ದ ಕೆಲವರು ಅವರಿಗೆ, “ಆ ಕತ್ತೆಮರಿಯನ್ನು ಏಕೆ ಬಿಚ್ಚುತ್ತೀರಿ?” ಎಂದು ಕೇಳಿದರು.
E alcuni dei presenti però dissero loro: «Che cosa fate, sciogliendo questo asinello?».
6 ಅದಕ್ಕೆ ಅವರು ಯೇಸು ತಮಗೆ ಹೇಳಿದ ಪ್ರಕಾರ ಉತ್ತರ ಕೊಡಲು, ಅವರು ಅದನ್ನು ತೆಗೆದುಕೊಂಡು ಹೋಗಲು ಬಿಟ್ಟರು.
Ed essi risposero come aveva detto loro il Signore. E li lasciarono fare.
7 ಶಿಷ್ಯರು ಕತ್ತೆಮರಿಯನ್ನು ಯೇಸುವಿನ ಬಳಿಗೆ ತಂದು ಅದರ ಮೇಲೆ ತಮ್ಮ ಬಟ್ಟೆಗಳನ್ನು ಹಾಕಿದಾಗ ಯೇಸು ಅದರ ಮೇಲೆ ಕುಳಿತುಕೊಂಡರು.
Essi condussero l'asinello da Gesù, e vi gettarono sopra i loro mantelli, ed egli vi montò sopra.
8 ಅನೇಕರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು. ಇತರರು ತೋಟಗಳಿಂದ ರೆಂಬೆಗಳನ್ನು ಕಡಿದು ದಾರಿಯಲ್ಲಿ ಹರಡಿದರು.
E molti stendevano i propri mantelli sulla strada e altri delle fronde, che avevano tagliate dai campi.
9 ಮುಂದೆಯೂ ಹಿಂದೆಯೂ ಹೋಗುತ್ತಿದ್ದವರು ಕೂಗುತ್ತಾ, “ಹೊಸನ್ನ!” “ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ!”
Osanna! Benedetto colui che viene nel nome del Signore! Quelli poi che andavano innanzi, e quelli che venivano dietro gridavano:
10 “ಬರಲಿರುವ ನಮ್ಮ ತಂದೆಯಾದ ದಾವೀದನ ರಾಜ್ಯವು ಆಶೀರ್ವಾದ ಹೊಂದಲಿ!” “ಉನ್ನತದಲ್ಲಿ ಹೊಸನ್ನ!” ಎಂದು ಹೇಳಿದರು.
Benedetto il regno che viene, del nostro padre Davide! Osanna nel più alto dei cieli!
11 ಯೇಸು ಯೆರೂಸಲೇಮಿಗೆ ಹೋಗಿ ದೇವಾಲಯವನ್ನು ಪ್ರವೇಶಿಸಿದಾಗ ಸುತ್ತಲಿದ್ದ ಎಲ್ಲವುಗಳನ್ನು ನೋಡಿದರು. ಆಗ ಸಂಜೆಯಾಗಿದ್ದುದರಿಂದ ಯೇಸು ಹನ್ನೆರಡು ಮಂದಿಯೊಂದಿಗೆ ಬೇಥಾನ್ಯಕ್ಕೆ ಹೋದರು.
Ed entrò a Gerusalemme, nel tempio. E dopo aver guardato ogni cosa attorno, essendo ormai l'ora tarda, uscì con i Dodici diretto a Betània.
12 ಮರುದಿನ ಅವರು ಬೇಥಾನ್ಯದಿಂದ ಬರುತ್ತಿರುವಾಗ ಯೇಸುವಿಗೆ ಹಸಿವಾಯಿತು.
La mattina seguente, mentre uscivano da Betània, ebbe fame.
13 ಯೇಸು ಎಲೆಗಳಿದ್ದ ಒಂದು ಅಂಜೂರದ ಮರವನ್ನು ದೂರದಿಂದ ಕಂಡು ಒಂದು ವೇಳೆ ಅದರಲ್ಲಿ ಹಣ್ಣು ಏನಾದರೂ ಸಿಕ್ಕೀತೆಂದುಕೊಂಡರು. ಆದರೆ ಯೇಸು ಅದರ ಹತ್ತಿರ ಬಂದಾಗ ಎಲೆಗಳನ್ನು ಹೊರತು ಮತ್ತೇನೂ ಕಾಣಲಿಲ್ಲ. ಅದು ಅಂಜೂರ ಫಲದ ಕಾಲವಾಗಿರಲಿಲ್ಲ.
E avendo visto di lontano un fico che aveva delle foglie, si avvicinò per vedere se mai vi trovasse qualche cosa; ma giuntovi sotto, non trovò altro che foglie. Non era infatti quella la stagione dei fichi.
14 ಯೇಸು ಅದಕ್ಕೆ, “ಇನ್ನೆಂದಿಗೂ ಯಾರೂ ನಿನ್ನಿಂದ ಹಣ್ಣನ್ನು ತಿನ್ನದಿರಲಿ,” ಎಂದರು. ಅದನ್ನು ಅವರ ಶಿಷ್ಯರು ಕೇಳಿಸಿಕೊಂಡರು. (aiōn )
E gli disse: «Nessuno possa mai più mangiare i tuoi frutti». E i discepoli l'udirono. (aiōn )
15 ತರುವಾಯ ಅವರು ಯೆರೂಸಲೇಮಿಗೆ ಬಂದರು. ಯೇಸು ದೇವಾಲಯದ ಅಂಗಳದೊಳಗೆ ಹೋಗಿ ಅಲ್ಲಿ ಮಾರುತ್ತಿದ್ದವರನ್ನೂ ಕೊಂಡುಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಲಾರಂಭಿಸಿ, ಹಣ ವಿನಿಮಯ ಮಾಡುತ್ತಿದ್ದವರ ಮೇಜುಗಳನ್ನೂ ಪಾರಿವಾಳ ಮಾರುವವರ ಆಸನಗಳನ್ನೂ ಕೆಡವಿಹಾಕಿದರು.
Andarono intanto a Gerusalemme. Ed entrato nel tempio, si mise a scacciare quelli che vendevano e comperavano nel tempio; rovesciò i tavoli dei cambiavalute e le sedie dei venditori di colombe
16 ಯಾರೂ ದೇವಾಲಯದ ಮಾರ್ಗವಾಗಿ ಯಾವುದನ್ನೂ ತೆಗೆದುಕೊಂಡು ಹೋಗದಂತೆ ತಡೆದರು.
e non permetteva che si portassero cose attraverso il tempio.
17 ಯೇಸು ಅವರಿಗೆ ಬೋಧಿಸುತ್ತಾ, “ನನ್ನ ಮನೆಯು ಎಲ್ಲಾ ಜನಾಂಗಗಳಿಗೂ ‘ಪ್ರಾರ್ಥನೆಯ ಮನೆ’ ಎಂದು ಕರೆಯಿಸಿಕೊಳ್ಳುವುದೆಂದು ಬರೆದಿದೆಯಲ್ಲವೇ? ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ,” ಎಂದು ಹೇಳಿದರು.
La mia casa sarà chiamata casa di preghiera per tutte le genti? una spelonca di ladri! ». Ed insegnava loro dicendo: «Non sta forse scritto:
18 ಮುಖ್ಯಯಾಜಕರೂ ನಿಯಮ ಬೋಧಕರೂ ಅದನ್ನು ಕೇಳಿ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸಿದರು. ಆದರೆ ಜನರೆಲ್ಲರೂ ಯೇಸುವಿನ ಬೋಧನೆಗೆ ಅತ್ಯಾಶ್ಚರ್ಯಪಟ್ಟದ್ದರಿಂದ ಅವರು ಯೇಸುವಿಗೆ ಭಯಪಟ್ಟರು.
L'udirono i sommi sacerdoti e gli scribi e cercavano il modo di farlo morire. Avevano infatti paura di lui, perché tutto il popolo era ammirato del suo insegnamento.
19 ಸಂಜೆಯಾದಾಗ ಯೇಸು ಮತ್ತು ಅವರ ಶಿಷ್ಯರು ಪಟ್ಟಣದ ಹೊರಗೆ ಹೋದರು.
Quando venne la sera uscirono dalla città.
20 ಬೆಳಿಗ್ಗೆ ಅವರು ಅದೇ ದಾರಿಯಲ್ಲಿ ಹೋಗುತ್ತಿದ್ದಾಗ ಆ ಅಂಜೂರ ಮರವು ಬೇರುಸಹಿತವಾಗಿ ಒಣಗಿರುವುದನ್ನು ಕಂಡರು.
La mattina seguente, passando, videro il fico seccato fin dalle radici.
21 ಆಗ ಪೇತ್ರನು ಜ್ಞಾಪಕಮಾಡಿಕೊಂಡು ಯೇಸುವಿಗೆ, “ಗುರುವೇ, ಇಗೋ! ನೀನು ಶಪಿಸಿದ ಅಂಜೂರದ ಮರವು ಒಣಗಿಹೋಗಿದೆ!” ಎಂದು ಹೇಳಿದನು.
Allora Pietro, ricordatosi, gli disse: «Maestro, guarda: il fico che hai maledetto si è seccato».
22 ಯೇಸು ಉತ್ತರವಾಗಿ ಅವರಿಗೆ ಹೇಳಿದ್ದೇನೆಂದರೆ, “ದೇವರ ನಂಬಿಕೆ ನಿಮಗಿರಲಿ.
Gesù allora disse loro: «Abbiate fede in Dio!
23 ಏಕೆಂದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಯಾರಾದರೂ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು,’ ಎಂದು ಹೇಳಿ ತಮ್ಮ ಹೃದಯದಲ್ಲಿ ಸಂಶಯಪಡದೆ ತಾವು ಹೇಳಿದಂತೆಯೇ ಆಗುವುದೆಂದು ನಂಬಿದರೆ ಅವರು ಹೇಳಿದಂತೆಯೇ ಅವರಿಗೆ ಆಗುವುದು.
In verità vi dico: chi dicesse a questo monte: Lèvati e gettati nel mare, senza dubitare in cuor suo ma credendo che quanto dice avverrà, ciò gli sarà accordato.
24 ಆದಕಾರಣ, ನೀವು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಎಲ್ಲವೂ ನಿಮಗೆ ಸಿಕ್ಕಿವೆಯೆಂದು ನಂಬಿರಿ. ಅವು ನಿಮಗೆ ಲಭಿಸುವವು.
Per questo vi dico: tutto quello che domandate nella preghiera, abbiate fede di averlo ottenuto e vi sarà accordato.
25 ನೀವು ನಿಂತುಕೊಂಡು ಪ್ರಾರ್ಥಿಸುವಾಗ ಯಾರಿಗಾದರೂ ವಿರೋಧವಾದದ್ದು ನಿಮ್ಮಲ್ಲಿದ್ದರೆ ಕ್ಷಮಿಸಿರಿ. ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ಸಹ ನಿಮ್ಮ ಅಪರಾಧಗಳನ್ನು ಕ್ಷಮಿಸುವರು.
Quando vi mettete a pregare, se avete qualcosa contro qualcuno, perdonate, perché anche il Padre vostro che è nei cieli perdoni a voi i vostri peccati».
26 ಆದರೆ ನೀವು ಕ್ಷಮಿಸದಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಪಾಪಗಳನ್ನು ಕ್ಷಮಿಸುವುದಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
27 ಯೇಸು ಮತ್ತು ಶಿಷ್ಯರು ಪುನಃ ಯೆರೂಸಲೇಮಿಗೆ ಬಂದರು. ಯೇಸು ದೇವಾಲಯದಲ್ಲಿ ತಿರುಗಾಡುತ್ತಿರುವಾಗ, ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೂ ಯೇಸುವಿನ ಬಳಿಗೆ ಬಂದು
Andarono di nuovo a Gerusalemme. E mentre egli si aggirava per il tempio, gli si avvicinarono i sommi sacerdoti, gli scribi e gli anziani e gli dissero:
28 ಯೇಸುವಿಗೆ, “ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಇವುಗಳನ್ನು ಮಾಡುವುದಕ್ಕೆ ನಿನಗೆ ಅಧಿಕಾರ ಕೊಟ್ಟವರು ಯಾರು?” ಎಂದು ಕೇಳಿದರು.
«Con quale autorità fai queste cose? O chi ti ha dato l'autorità di farlo?».
29 ಅದಕ್ಕೆ ಯೇಸು ಅವರಿಗೆ, “ನಾನು ಸಹ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರ ಹೇಳಿದರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ.
Ma Gesù disse loro: «Vi farò anch'io una domanda e, se mi risponderete, vi dirò con quale potere lo faccio.
30 ಯೋಹಾನನಿಗೆ ದೀಕ್ಷಾಸ್ನಾನವನ್ನು ಕೊಡುವ ಅಧಿಕಾರ ಪರಲೋಕದಿಂದ ಬಂದದ್ದೋ ಇಲ್ಲವೇ ಮನುಷ್ಯರಿಂದಲೋ? ನನಗೆ ಉತ್ತರಕೊಡಿರಿ,” ಎಂದರು.
Il battesimo di Giovanni veniva dal cielo o dagli uomini? Rispondetemi».
31 ಆಗ ಅವರು, “ಪರಲೋಕದಿಂದ ಎಂದು ನಾವು ಹೇಳಿದರೆ, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು.
Ed essi discutevano tra sé dicendo: «Se rispondiamo "dal cielo", dirà: Perché allora non gli avete creduto?
32 ಆದರೆ ನಾವು, ‘ಮನುಷ್ಯರಿಂದ ಬಂತು’ ಎಂದು ಹೇಳುವುದಾದರೆ, ನಮಗೆ ಜನರ ಭಯವಿದೆ. ಏಕೆಂದರೆ ಯೋಹಾನನು ನಿಜವಾಗಿಯೂ ಪ್ರವಾದಿ ಎಂದು ಎಲ್ಲರೂ ಎಣಿಸಿಕೊಂಡಿರುವರು,” ಎಂದು ತಮ್ಮಲ್ಲಿ ಚರ್ಚಿಸಿಕೊಂಡರು.
Diciamo dunque "dagli uomini"?». Però temevano la folla, perché tutti consideravano Giovanni come un vero profeta.
33 ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ,” ಎಂದು ಉತ್ತರಕೊಟ್ಟರು. ಅದಕ್ಕೆ ಯೇಸು, “ಹಾಗಾದರೆ ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದು ಅವರಿಗೆ ಉತ್ತರಕೊಟ್ಟರು.
Allora diedero a Gesù questa risposta: «Non sappiamo». E Gesù disse loro: «Neanch'io vi dico con quale autorità faccio queste cose».