< ಲೂಕನು 7 >

1 ತಮ್ಮ ಎಲ್ಲಾ ಮಾತುಗಳನ್ನು ಜನರೆಲ್ಲರೂ ಕೇಳುವಂತೆ ಹೇಳಿ ಮುಗಿಸಿದ ಮೇಲೆ, ಯೇಸು ಕಪೆರ್ನೌಮಿಗೆ ಪ್ರವೇಶಿಸಿದರು.
ತತಃ ಪರಂ ಸ ಲೋಕಾನಾಂ ಕರ್ಣಗೋಚರೇ ತಾನ್ ಸರ್ವ್ವಾನ್ ಉಪದೇಶಾನ್ ಸಮಾಪ್ಯ ಯದಾ ಕಫರ್ನಾಹೂಮ್ಪುರಂ ಪ್ರವಿಶತಿ
2 ಆಗ ಒಬ್ಬ ಶತಾಧಿಪತಿಗೆ, ಪ್ರಿಯನಾಗಿದ್ದ ಸೇವಕ, ಅಸ್ವಸ್ಥನಾಗಿ ಸಾಯುವುದರಲ್ಲಿದ್ದನು.
ತದಾ ಶತಸೇನಾಪತೇಃ ಪ್ರಿಯದಾಸ ಏಕೋ ಮೃತಕಲ್ಪಃ ಪೀಡಿತ ಆಸೀತ್|
3 ಅವನು ಯೇಸುವಿನ ವಿಷಯ ಕೇಳಿದಾಗ, ಬಂದು ತನ್ನ ಸೇವಕನನ್ನು ಗುಣಮಾಡಬೇಕೆಂದು ಬೇಡಿಕೊಳ್ಳುವಂತೆ ಯೆಹೂದ್ಯರ ಹಿರಿಯರನ್ನು ಅವರ ಬಳಿಗೆ ಕಳುಹಿಸಿದನು.
ಅತಃ ಸೇನಾಪತಿ ರ್ಯೀಶೋ ರ್ವಾರ್ತ್ತಾಂ ನಿಶಮ್ಯ ದಾಸಸ್ಯಾರೋಗ್ಯಕರಣಾಯ ತಸ್ಯಾಗಮನಾರ್ಥಂ ವಿನಯಕರಣಾಯ ಯಿಹೂದೀಯಾನ್ ಕಿಯತಃ ಪ್ರಾಚಃ ಪ್ರೇಷಯಾಮಾಸ|
4 ಅವರು ಯೇಸುವಿನ ಬಳಿಗೆ ಬಂದು ಅವರಿಗೆ, “ನೀವು ಇದನ್ನು ಮಾಡುವುದಕ್ಕೆ ಅವನು ಯೋಗ್ಯನು,
ತೇ ಯೀಶೋರನ್ತಿಕಂ ಗತ್ವಾ ವಿನಯಾತಿಶಯಂ ವಕ್ತುಮಾರೇಭಿರೇ, ಸ ಸೇನಾಪತಿ ರ್ಭವತೋನುಗ್ರಹಂ ಪ್ರಾಪ್ತುಮ್ ಅರ್ಹತಿ|
5 ಏಕೆಂದರೆ ಅವನು ನಮ್ಮ ಜನಾಂಗವನ್ನು ಪ್ರೀತಿಸುವುದಲ್ಲದೆ ನಮಗಾಗಿ ಒಂದು ಸಭಾಮಂದಿರವನ್ನು ಕಟ್ಟಿಸಿದ್ದಾನೆ,” ಎಂದು ಆಸಕ್ತಿಯಿಂದ ಬೇಡಿಕೊಂಡರು.
ಯತಃ ಸೋಸ್ಮಜ್ಜಾತೀಯೇಷು ಲೋಕೇಷು ಪ್ರೀಯತೇ ತಥಾಸ್ಮತ್ಕೃತೇ ಭಜನಗೇಹಂ ನಿರ್ಮ್ಮಿತವಾನ್|
6 ಯೇಸು ಅವರೊಂದಿಗೆ ಹೋದರು. ಅವರು ಮನೆಗೆ ಇನ್ನೂ ಸ್ವಲ್ಪ ದೂರ ಇರುವಾಗಲೇ ಶತಾಧಿಪತಿಯು ಸ್ನೇಹಿತರನ್ನು ಯೇಸುವಿನ ಬಳಿಗೆ ಕಳುಹಿಸಿ, “ಕರ್ತದೇವರೇ, ನಿಮ್ಮನ್ನು ತೊಂದರೆ ಪಡಿಸಿಕೊಳ್ಳಬೇಡಿರಿ, ನನ್ನ ಮನೆಯೊಳಗೆ ನೀವು ಬರುವಷ್ಟು ಯೋಗ್ಯತೆ ನನಗಿಲ್ಲ.
ತಸ್ಮಾದ್ ಯೀಶುಸ್ತೈಃ ಸಹ ಗತ್ವಾ ನಿವೇಶನಸ್ಯ ಸಮೀಪಂ ಪ್ರಾಪ, ತದಾ ಸ ಶತಸೇನಾಪತಿ ರ್ವಕ್ಷ್ಯಮಾಣವಾಕ್ಯಂ ತಂ ವಕ್ತುಂ ಬನ್ಧೂನ್ ಪ್ರಾಹಿಣೋತ್| ಹೇ ಪ್ರಭೋ ಸ್ವಯಂ ಶ್ರಮೋ ನ ಕರ್ತ್ತವ್ಯೋ ಯದ್ ಭವತಾ ಮದ್ಗೇಹಮಧ್ಯೇ ಪಾದಾರ್ಪಣಂ ಕ್ರಿಯೇತ ತದಪ್ಯಹಂ ನಾರ್ಹಾಮಿ,
7 ನಾನು ನಿಮ್ಮ ಬಳಿಗೆ ಬರುವುದಕ್ಕೆ ಯೋಗ್ಯನೆಂದು ಎಣಿಸಿಕೊಳ್ಳಲಿಲ್ಲ. ಆದರೆ ನೀವು ಒಂದು ಮಾತು ಹೇಳಿರಿ, ಆಗ ನನ್ನ ಸೇವಕ ಗುಣಹೊಂದುವನು.
ಕಿಞ್ಚಾಹಂ ಭವತ್ಸಮೀಪಂ ಯಾತುಮಪಿ ನಾತ್ಮಾನಂ ಯೋಗ್ಯಂ ಬುದ್ಧವಾನ್, ತತೋ ಭವಾನ್ ವಾಕ್ಯಮಾತ್ರಂ ವದತು ತೇನೈವ ಮಮ ದಾಸಃ ಸ್ವಸ್ಥೋ ಭವಿಷ್ಯತಿ|
8 ನಾನು ಸಹ ಮತ್ತೊಬ್ಬ ಅಧಿಕಾರಿಯ ಕೈಕೆಳಗಿರುವವನು, ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ ಮತ್ತು ನಾನು ಒಬ್ಬನಿಗೆ, ‘ಹೋಗು,’ ಎಂದರೆ ಅವನು ಹೋಗುತ್ತಾನೆ, ಮತ್ತೊಬ್ಬನಿಗೆ ‘ಬಾ,’ ಎಂದರೆ ಅವನು ಬರುತ್ತಾನೆ. ನನ್ನ ಸೇವಕನಿಗೆ, ‘ಇದನ್ನು ಮಾಡು,’ ಎಂದರೆ ಅವನು ಮಾಡುತ್ತಾನೆ,” ಎಂದು ಹೇಳಿ ಕಳುಹಿಸಿದನು.
ಯಸ್ಮಾದ್ ಅಹಂ ಪರಾಧೀನೋಪಿ ಮಮಾಧೀನಾ ಯಾಃ ಸೇನಾಃ ಸನ್ತಿ ತಾಸಾಮ್ ಏಕಜನಂ ಪ್ರತಿ ಯಾಹೀತಿ ಮಯಾ ಪ್ರೋಕ್ತೇ ಸ ಯಾತಿ; ತದನ್ಯಂ ಪ್ರತಿ ಆಯಾಹೀತಿ ಪ್ರೋಕ್ತೇ ಸ ಆಯಾತಿ; ತಥಾ ನಿಜದಾಸಂ ಪ್ರತಿ ಏತತ್ ಕುರ್ವ್ವಿತಿ ಪ್ರೋಕ್ತೇ ಸ ತದೇವ ಕರೋತಿ|
9 ಯೇಸು ಅವನ ಈ ಮಾತುಗಳನ್ನು ಕೇಳಿದಾಗ, ಆಶ್ಚರ್ಯಪಟ್ಟು ತಿರುಗಿಕೊಂಡು ತಮ್ಮನ್ನು ಹಿಂಬಾಲಿಸುತ್ತಿದ್ದ ಗುಂಪಿಗೆ, “ನಾನು ನಿಮಗೆ ಹೇಳುವುದೇನೆಂದರೆ, ಇಂಥ ಮಹಾ ನಂಬಿಕೆಯನ್ನು ನಾನು ಇಸ್ರಾಯೇಲ್ ಜನರಲ್ಲಿಯೂ ಸಹ ಕಾಣಲಿಲ್ಲ,” ಎಂದರು.
ಯೀಶುರಿದಂ ವಾಕ್ಯಂ ಶ್ರುತ್ವಾ ವಿಸ್ಮಯಂ ಯಯೌ, ಮುಖಂ ಪರಾವರ್ತ್ಯ ಪಶ್ಚಾದ್ವರ್ತ್ತಿನೋ ಲೋಕಾನ್ ಬಭಾಷೇ ಚ, ಯುಷ್ಮಾನಹಂ ವದಾಮಿ ಇಸ್ರಾಯೇಲೋ ವಂಶಮಧ್ಯೇಪಿ ವಿಶ್ವಾಸಮೀದೃಶಂ ನ ಪ್ರಾಪ್ನವಂ|
10 ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಅಸ್ವಸ್ಥನಾಗಿದ್ದ ಆ ಸೇವಕ ಸ್ವಸ್ಥನಾಗಿರುವುದನ್ನು ಕಂಡರು.
ತತಸ್ತೇ ಪ್ರೇಷಿತಾ ಗೃಹಂ ಗತ್ವಾ ತಂ ಪೀಡಿತಂ ದಾಸಂ ಸ್ವಸ್ಥಂ ದದೃಶುಃ|
11 ಇದಾದ ಮೇಲೆ, ಯೇಸು ನಾಯಿನ್ ಎಂಬ ಪಟ್ಟಣಕ್ಕೆ ಹೋದರು. ಆಗ ಅವರ ಶಿಷ್ಯರೂ ಜನರ ದೊಡ್ಡ ಗುಂಪೂ ಅವರ ಸಂಗಡ ಹೋದರು.
ಪರೇಽಹನಿ ಸ ನಾಯೀನಾಖ್ಯಂ ನಗರಂ ಜಗಾಮ ತಸ್ಯಾನೇಕೇ ಶಿಷ್ಯಾ ಅನ್ಯೇ ಚ ಲೋಕಾಸ್ತೇನ ಸಾರ್ದ್ಧಂ ಯಯುಃ|
12 ಯೇಸು ಪಟ್ಟಣ ದ್ವಾರದ ಸಮೀಪಕ್ಕೆ ಬಂದಾಗ, ಸತ್ತು ಹೋಗಿದ್ದ ಒಬ್ಬನನ್ನು ಹೊತ್ತುಕೊಂಡು ಹೋಗುತ್ತಿದ್ದರು, ಅವನು ತನ್ನ ತಾಯಿಗೆ ಒಬ್ಬನೇ ಮಗನು, ಆಕೆಯು ವಿಧವೆಯಾಗಿದ್ದಳು. ಪಟ್ಟಣದ ಬಹಳ ಜನರು ಆಕೆಯೊಂದಿಗೆ ಇದ್ದರು.
ತೇಷು ತನ್ನಗರಸ್ಯ ದ್ವಾರಸನ್ನಿಧಿಂ ಪ್ರಾಪ್ತೇಷು ಕಿಯನ್ತೋ ಲೋಕಾ ಏಕಂ ಮೃತಮನುಜಂ ವಹನ್ತೋ ನಗರಸ್ಯ ಬಹಿರ್ಯಾನ್ತಿ, ಸ ತನ್ಮಾತುರೇಕಪುತ್ರಸ್ತನ್ಮಾತಾ ಚ ವಿಧವಾ; ತಯಾ ಸಾರ್ದ್ಧಂ ತನ್ನಗರೀಯಾ ಬಹವೋ ಲೋಕಾ ಆಸನ್|
13 ಕರ್ತದೇವರು ಆಕೆಯನ್ನು ಕಂಡು, ಆಕೆಯ ಮೇಲೆ ಕನಿಕರಪಟ್ಟು, “ಅಳಬೇಡ” ಎಂದರು.
ಪ್ರಭುಸ್ತಾಂ ವಿಲೋಕ್ಯ ಸಾನುಕಮ್ಪಃ ಕಥಯಾಮಾಸ, ಮಾ ರೋದೀಃ| ಸ ಸಮೀಪಮಿತ್ವಾ ಖಟ್ವಾಂ ಪಸ್ಪರ್ಶ ತಸ್ಮಾದ್ ವಾಹಕಾಃ ಸ್ಥಗಿತಾಸ್ತಮ್ಯುಃ;
14 ಅನಂತರ ಯೇಸು ಬಂದು ಶವದ ಚಟ್ಟವನ್ನು ಮುಟ್ಟಿದಾಗ, ಅದನ್ನು ಹೊತ್ತುಕೊಂಡಿದ್ದವರು ಹಾಗೆಯೇ ನಿಂತರು. ಆಗ ಯೇಸು, “ಯುವಕನೇ, ನಾನು ನಿನಗೆ ಹೇಳುತ್ತೇನೆ, ಎದ್ದೇಳು!” ಎಂದರು.
ತದಾ ಸ ಉವಾಚ ಹೇ ಯುವಮನುಷ್ಯ ತ್ವಮುತ್ತಿಷ್ಠ, ತ್ವಾಮಹಮ್ ಆಜ್ಞಾಪಯಾಮಿ|
15 ಆಗ ಸತ್ತವನು ಎದ್ದು ಕುಳಿತುಕೊಂಡು ಮಾತನಾಡಲಾರಂಭಿಸಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದರು.
ತಸ್ಮಾತ್ ಸ ಮೃತೋ ಜನಸ್ತತ್ಕ್ಷಣಮುತ್ಥಾಯ ಕಥಾಂ ಪ್ರಕಥಿತಃ; ತತೋ ಯೀಶುಸ್ತಸ್ಯ ಮಾತರಿ ತಂ ಸಮರ್ಪಯಾಮಾಸ|
16 ಆಗ ಅವರೆಲ್ಲರೂ ಭಯಭಕ್ತಿಯಿಂದ ಕೂಡಿದವರಾಗಿ, “ನಮ್ಮ ಮಧ್ಯದಲ್ಲಿ ಒಬ್ಬ ಮಹಾ ಪ್ರವಾದಿಯು ಎದ್ದಿದ್ದಾರೆ; ದೇವರು ತಮ್ಮ ಜನರಿಗೆ ಸಹಾಯಮಾಡಲು ಬಂದಿದ್ದಾರೆ,” ಎಂದು ದೇವರನ್ನು ಮಹಿಮೆಪಡಿಸುತ್ತಾ ಹೇಳಿದರು.
ತಸ್ಮಾತ್ ಸರ್ವ್ವೇ ಲೋಕಾಃ ಶಶಙ್ಕಿರೇ; ಏಕೋ ಮಹಾಭವಿಷ್ಯದ್ವಾದೀ ಮಧ್ಯೇಽಸ್ಮಾಕಮ್ ಸಮುದೈತ್, ಈಶ್ವರಶ್ಚ ಸ್ವಲೋಕಾನನ್ವಗೃಹ್ಲಾತ್ ಕಥಾಮಿಮಾಂ ಕಥಯಿತ್ವಾ ಈಶ್ವರಂ ಧನ್ಯಂ ಜಗದುಃ|
17 ಯೇಸುವಿನ ವಿಷಯವಾದ ಈ ಸುದ್ದಿಯು ಯೂದಾಯದ ಎಲ್ಲಾ ಪ್ರಾಂತಕ್ಕೂ, ಸುತ್ತಲಿನ ಎಲ್ಲಾ ಪ್ರಾಂತಕ್ಕೂ ಹರಡಿತು.
ತತಃ ಪರಂ ಸಮಸ್ತಂ ಯಿಹೂದಾದೇಶಂ ತಸ್ಯ ಚತುರ್ದಿಕ್ಸ್ಥದೇಶಞ್ಚ ತಸ್ಯೈತತ್ಕೀರ್ತ್ತಿ ರ್ವ್ಯಾನಶೇ|
18 ಯೋಹಾನನ ಶಿಷ್ಯರು ಈ ಎಲ್ಲಾ ವಿಷಯಗಳನ್ನು ಅವನಿಗೆ ತಿಳಿಯಪಡಿಸಿದರು,
ತತಃ ಪರಂ ಯೋಹನಃ ಶಿಷ್ಯೇಷು ತಂ ತದ್ವೃತ್ತಾನ್ತಂ ಜ್ಞಾಪಿತವತ್ಸು
19 ಆಗ ಯೋಹಾನನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರಬೇಕಾದ ಕ್ರಿಸ್ತನು ನೀನೋ ಇಲ್ಲವೇ ನಾವು ಇನ್ನೊಬ್ಬನಿಗಾಗಿ ಎದುರು ನೋಡಬೇಕೋ?” ಎಂದು ಕರ್ತದೇವರನ್ನು ಕೇಳಲು ಅವರ ಬಳಿಗೆ ಕಳುಹಿಸಿದನು.
ಸ ಸ್ವಶಿಷ್ಯಾಣಾಂ ದ್ವೌ ಜನಾವಾಹೂಯ ಯೀಶುಂ ಪ್ರತಿ ವಕ್ಷ್ಯಮಾಣಂ ವಾಕ್ಯಂ ವಕ್ತುಂ ಪ್ರೇಷಯಾಮಾಸ, ಯಸ್ಯಾಗಮನಮ್ ಅಪೇಕ್ಷ್ಯ ತಿಷ್ಠಾಮೋ ವಯಂ ಕಿಂ ಸ ಏವ ಜನಸ್ತ್ವಂ? ಕಿಂ ವಯಮನ್ಯಮಪೇಕ್ಷ್ಯ ಸ್ಥಾಸ್ಯಾಮಃ?
20 ಅವರು ಯೇಸುವಿನ ಬಳಿಗೆ ಬಂದು, “‘ಬರಬೇಕಾದವರು ನೀವೋ? ಇಲ್ಲವೆ ನಾವು ಬೇರೊಬ್ಬರಿಗಾಗಿ ಎದುರು ನೋಡಬೇಕೋ?’ ಎಂದು ಕೇಳುವುದಕ್ಕಾಗಿ ಸ್ನಾನಿಕ ಯೋಹಾನನು ನಮ್ಮನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ,” ಎಂದು ಹೇಳಿದರು.
ಪಶ್ಚಾತ್ತೌ ಮಾನವೌ ಗತ್ವಾ ಕಥಯಾಮಾಸತುಃ, ಯಸ್ಯಾಗಮನಮ್ ಅಪೇಕ್ಷ್ಯ ತಿಷ್ಠಾಮೋ ವಯಂ, ಕಿಂ ಸಏವ ಜನಸ್ತ್ವಂ? ಕಿಂ ವಯಮನ್ಯಮಪೇಕ್ಷ್ಯ ಸ್ಥಾಸ್ಯಾಮಃ? ಕಥಾಮಿಮಾಂ ತುಭ್ಯಂ ಕಥಯಿತುಂ ಯೋಹನ್ ಮಜ್ಜಕ ಆವಾಂ ಪ್ರೇಷಿತವಾನ್|
21 ಅದೇ ಸಮಯದಲ್ಲಿ ರೋಗಗಳಿಂದಲೂ ವ್ಯಾಧಿಗಳಿಂದಲೂ ದುರಾತ್ಮಗಳಿಂದಲೂ ಪೀಡಿತರಾದ ಅನೇಕರನ್ನು ಯೇಸು ಗುಣಪಡಿಸುತ್ತಿದ್ದರು, ಕುರುಡರಾದ ಅನೇಕರಿಗೆ ದೃಷ್ಟಿ ನೀಡುತ್ತಿದ್ದರು.
ತಸ್ಮಿನ್ ದಣ್ಡೇ ಯೀಶೂರೋಗಿಣೋ ಮಹಾವ್ಯಾಧಿಮತೋ ದುಷ್ಟಭೂತಗ್ರಸ್ತಾಂಶ್ಚ ಬಹೂನ್ ಸ್ವಸ್ಥಾನ್ ಕೃತ್ವಾ, ಅನೇಕಾನ್ಧೇಭ್ಯಶ್ಚಕ್ಷುಂಷಿ ದತ್ತ್ವಾ ಪ್ರತ್ಯುವಾಚ,
22 ತರುವಾಯ ಯೇಸು ಅವರಿಗೆ, “ನೀವು ಕಂಡು ಕೇಳಿದವುಗಳನ್ನು ಹೋಗಿ ಯೋಹಾನನಿಗೆ ತಿಳಿಸಿರಿ: ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಮರಣಹೊಂದಿದವರು ಜೀವ ಪಡೆಯುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲಾಗುತ್ತದೆ.
ಯುವಾಂ ವ್ರಜತಮ್ ಅನ್ಧಾ ನೇತ್ರಾಣಿ ಖಞ್ಜಾಶ್ಚರಣಾನಿ ಚ ಪ್ರಾಪ್ನುವನ್ತಿ, ಕುಷ್ಠಿನಃ ಪರಿಷ್ಕ್ರಿಯನ್ತೇ, ಬಧಿರಾಃ ಶ್ರವಣಾನಿ ಮೃತಾಶ್ಚ ಜೀವನಾನಿ ಪ್ರಾಪ್ನುವನ್ತಿ, ದರಿದ್ರಾಣಾಂ ಸಮೀಪೇಷು ಸುಸಂವಾದಃ ಪ್ರಚಾರ್ಯ್ಯತೇ, ಯಂ ಪ್ರತಿ ವಿಘ್ನಸ್ವರೂಪೋಹಂ ನ ಭವಾಮಿ ಸ ಧನ್ಯಃ,
23 ನನ್ನ ವಿಷಯದಲ್ಲಿ ವಿಶ್ವಾಸ ಕಳೆದುಕೊಳ್ಳದವನೇ ಧನ್ಯನು,” ಎಂದರು.
ಏತಾನಿ ಯಾನಿ ಪಶ್ಯಥಃ ಶೃಣುಥಶ್ಚ ತಾನಿ ಯೋಹನಂ ಜ್ಞಾಪಯತಮ್|
24 ಯೋಹಾನನ ಶಿಷ್ಯರು ಹೊರಟುಹೋದ ಮೇಲೆ, ಯೇಸು ಯೋಹಾನನ ವಿಷಯವಾಗಿ ಮಾತನಾಡಲಾರಂಭಿಸಿ ಜನರಿಗೆ, “ನೀವು ಯಾವುದನ್ನು ಕಾಣುವುದಕ್ಕಾಗಿ ಅರಣ್ಯಕ್ಕೆ ಹೋದಿರಿ? ಗಾಳಿಗೆ ಓಲಾಡುವ ದಂಟನ್ನೋ?
ತಯೋ ರ್ದೂತಯೋ ರ್ಗತಯೋಃ ಸತೋ ರ್ಯೋಹನಿ ಸ ಲೋಕಾನ್ ವಕ್ತುಮುಪಚಕ್ರಮೇ, ಯೂಯಂ ಮಧ್ಯೇಪ್ರಾನ್ತರಂ ಕಿಂ ದ್ರಷ್ಟುಂ ನಿರಗಮತ? ಕಿಂ ವಾಯುನಾ ಕಮ್ಪಿತಂ ನಡಂ?
25 ಇಲ್ಲವಾದರೆ, ನೀವು ಏನನ್ನು ಕಾಣುವುದಕ್ಕಾಗಿ ಹೋದಿರಿ? ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ಶೋಭಾಯಮಾನವಾದ ಉಡುಪನ್ನು ಧರಿಸಿಕೊಂಡು ಸುಖವಾಗಿ ಜೀವಿಸುವವರು ಅರಮನೆಗಳಲ್ಲಿ ಇರುತ್ತಾರೆ.
ಯೂಯಂ ಕಿಂ ದ್ರಷ್ಟುಂ ನಿರಗಮತ? ಕಿಂ ಸೂಕ್ಷ್ಮವಸ್ತ್ರಪರಿಧಾಯಿನಂ ಕಮಪಿ ನರಂ? ಕಿನ್ತು ಯೇ ಸೂಕ್ಷ್ಮಮೃದುವಸ್ತ್ರಾಣಿ ಪರಿದಧತಿ ಸೂತ್ತಮಾನಿ ದ್ರವ್ಯಾಣಿ ಭುಞ್ಜತೇ ಚ ತೇ ರಾಜಧಾನೀಷು ತಿಷ್ಠನ್ತಿ|
26 ಹಾಗಾದರೆ ಏನು ಕಾಣುವುದಕ್ಕಾಗಿ ಹೋದಿರಿ? ಒಬ್ಬ ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದಿರಿ, ಎಂದು ನಾನು ನಿಮಗೆ ಹೇಳುತ್ತೇನೆ.
ತರ್ಹಿ ಯೂಯಂ ಕಿಂ ದ್ರಷ್ಟುಂ ನಿರಗಮತ? ಕಿಮೇಕಂ ಭವಿಷ್ಯದ್ವಾದಿನಂ? ತದೇವ ಸತ್ಯಂ ಕಿನ್ತು ಸ ಪುಮಾನ್ ಭವಿಷ್ಯದ್ವಾದಿನೋಪಿ ಶ್ರೇಷ್ಠ ಇತ್ಯಹಂ ಯುಷ್ಮಾನ್ ವದಾಮಿ;
27 ಯಾರ ವಿಷಯವಾಗಿ ಪವಿತ್ರ ವೇದದಲ್ಲಿ ಬರೆದಿತ್ತೋ ಅವನೇ ಇವನು: “‘ಇಗೋ, ನಿನ್ನ ದಾರಿಯನ್ನು ನಿನ್ನ ಮುಂದೆ ಸಿದ್ಧಮಾಡುವಂತೆ ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ,’
ಪಶ್ಯ ಸ್ವಕೀಯದೂತನ್ತು ತವಾಗ್ರ ಪ್ರೇಷಯಾಮ್ಯಹಂ| ಗತ್ವಾ ತ್ವದೀಯಮಾರ್ಗನ್ತು ಸ ಹಿ ಪರಿಷ್ಕರಿಷ್ಯತಿ| ಯದರ್ಥೇ ಲಿಪಿರಿಯಮ್ ಆಸ್ತೇ ಸ ಏವ ಯೋಹನ್|
28 ನಾನು ನಿಮಗೆ ಹೇಳುವುದೇನೆಂದರೆ, ಸ್ತ್ರೀಯರಲ್ಲಿ ಹುಟ್ಟಿದವರಲ್ಲಿ ಸ್ನಾನಿಕ ಯೋಹಾನನಿಗಿಂತ ದೊಡ್ಡವನು ಇಲ್ಲ; ಆದರೆ ದೇವರ ರಾಜ್ಯದಲ್ಲಿ ಅತ್ಯಂತ ಚಿಕ್ಕವನು ಅವನಿಗಿಂತಲೂ ದೊಡ್ಡವನಾಗಿದ್ದಾನೆ,” ಎಂದರು.
ಅತೋ ಯುಷ್ಮಾನಹಂ ವದಾಮಿ ಸ್ತ್ರಿಯಾ ಗರ್ಬ್ಭಜಾತಾನಾಂ ಭವಿಷ್ಯದ್ವಾದಿನಾಂ ಮಧ್ಯೇ ಯೋಹನೋ ಮಜ್ಜಕಾತ್ ಶ್ರೇಷ್ಠಃ ಕೋಪಿ ನಾಸ್ತಿ, ತತ್ರಾಪಿ ಈಶ್ವರಸ್ಯ ರಾಜ್ಯೇ ಯಃ ಸರ್ವ್ವಸ್ಮಾತ್ ಕ್ಷುದ್ರಃ ಸ ಯೋಹನೋಪಿ ಶ್ರೇಷ್ಠಃ|
29 ಯೋಹಾನನಿಂದ ಉಪದೇಶ ಕೇಳಿದ ಎಲ್ಲಾ ಜನರೂ ಸುಂಕದವರೂ ಸಹ, ಯೇಸುವಿನ ಮಾತುಗಳನ್ನು ಕೇಳಿದಾಗ, ದೇವರ ಮಾರ್ಗವು ಸರಿಯಾಗಿದೆಯೆಂದು ಒಪ್ಪಿಕೊಂಡರು, ಏಕೆಂದರೆ ಅವರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರು.
ಅಪರಞ್ಚ ಸರ್ವ್ವೇ ಲೋಕಾಃ ಕರಮಞ್ಚಾಯಿನಶ್ಚ ತಸ್ಯ ವಾಕ್ಯಾನಿ ಶ್ರುತ್ವಾ ಯೋಹನಾ ಮಜ್ಜನೇನ ಮಜ್ಜಿತಾಃ ಪರಮೇಶ್ವರಂ ನಿರ್ದೋಷಂ ಮೇನಿರೇ|
30 ಆದರೆ ಫರಿಸಾಯರೂ ಮೋಶೆಯ ನಿಯಮ ಪಂಡಿತರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳದೆ ಹೋದದ್ದರಿಂದ ತಮ್ಮ ವಿಷಯದಲ್ಲಿರುವ ದೇವರ ಸಂಕಲ್ಪವನ್ನು ತಿರಸ್ಕಾರ ಮಾಡಿದರು.
ಕಿನ್ತು ಫಿರೂಶಿನೋ ವ್ಯವಸ್ಥಾಪಕಾಶ್ಚ ತೇನ ನ ಮಜ್ಜಿತಾಃ ಸ್ವಾನ್ ಪ್ರತೀಶ್ವರಸ್ಯೋಪದೇಶಂ ನಿಷ್ಫಲಮ್ ಅಕುರ್ವ್ವನ್|
31 ಅನಂತರ ಯೇಸು ಜನರಿಗೆ, “ಈ ಕಾಲದ ಜನರನ್ನು, ನಾನು ಯಾವುದಕ್ಕೆ ಹೋಲಿಸಲಿ? ಅವರು ಯಾವುದಕ್ಕೆ ಹೋಲಿಕೆಯಾಗಿದ್ದಾರೆ?
ಅಥ ಪ್ರಭುಃ ಕಥಯಾಮಾಸ, ಇದಾನೀನ್ತನಜನಾನ್ ಕೇನೋಪಮಾಮಿ? ತೇ ಕಸ್ಯ ಸದೃಶಾಃ?
32 ಅವರು ಸಂತೆಯಲ್ಲಿ ಕುಳಿತುಕೊಂಡು ಒಬ್ಬರನ್ನೊಬ್ಬರು ಕರೆಯುತ್ತಾ: “‘ನಾವು ನಿಮಗಾಗಿ ಕೊಳಲೂದಿದೆವು, ನೀವು ಕುಣಿಯಲಿಲ್ಲ, ನಾವು ನಿಮಗಾಗಿ ಶೋಕಗೀತೆ ಹಾಡಿದೆವು, ನೀವು ಅಳಲಿಲ್ಲ,’ ಎಂದು ಹೇಳುವ ಮಕ್ಕಳಿಗೆ ಹೋಲಿಕೆಯಾಗಿದ್ದಾರೆ.
ಯೇ ಬಾಲಕಾ ವಿಪಣ್ಯಾಮ್ ಉಪವಿಶ್ಯ ಪರಸ್ಪರಮ್ ಆಹೂಯ ವಾಕ್ಯಮಿದಂ ವದನ್ತಿ, ವಯಂ ಯುಷ್ಮಾಕಂ ನಿಕಟೇ ವಂಶೀರವಾದಿಷ್ಮ, ಕಿನ್ತು ಯೂಯಂ ನಾನರ್ತ್ತಿಷ್ಟ, ವಯಂ ಯುಷ್ಮಾಕಂ ನಿಕಟ ಅರೋದಿಷ್ಮ, ಕಿನ್ತು ಯುಯಂ ನ ವ್ಯಲಪಿಷ್ಟ, ಬಾಲಕೈರೇತಾದೃಶೈಸ್ತೇಷಾಮ್ ಉಪಮಾ ಭವತಿ|
33 “ಸ್ನಾನಿಕ ಯೋಹಾನನು ರೊಟ್ಟಿಯನ್ನು ತಿನ್ನದೆಯೂ ದ್ರಾಕ್ಷಾರಸವನ್ನು ಕುಡಿಯದೆಯೂ ಬಂದನು, ಅದಕ್ಕೆ ನೀವು, ‘ಅವನಿಗೆ ದೆವ್ವ ಹಿಡಿದಿದೆ,’ ಎನ್ನುತ್ತೀರಿ.
ಯತೋ ಯೋಹನ್ ಮಜ್ಜಕ ಆಗತ್ಯ ಪೂಪಂ ನಾಖಾದತ್ ದ್ರಾಕ್ಷಾರಸಞ್ಚ ನಾಪಿವತ್ ತಸ್ಮಾದ್ ಯೂಯಂ ವದಥ, ಭೂತಗ್ರಸ್ತೋಯಮ್|
34 ಮನುಷ್ಯಪುತ್ರನಾದ ನಾನು ಅನ್ನಪಾನ ಸೇವಿಸುವವನಾಗಿ ಬಂದೆನು, ಆದರೆ ನೀವು, ‘ಇಗೋ, ಹೊಟ್ಟೆಬಾಕನು, ಕುಡುಕನು, ಸುಂಕದವರ ಮತ್ತು ಪಾಪಿಗಳ ಸ್ನೇಹಿತನು,’ ಎನ್ನುತ್ತೀರಿ.
ತತಃ ಪರಂ ಮಾನವಸುತ ಆಗತ್ಯಾಖಾದದಪಿವಞ್ಚ ತಸ್ಮಾದ್ ಯೂಯಂ ವದಥ, ಖಾದಕಃ ಸುರಾಪಶ್ಚಾಣ್ಡಾಲಪಾಪಿನಾಂ ಬನ್ಧುರೇಕೋ ಜನೋ ದೃಶ್ಯತಾಮ್|
35 ಆದರೆ ಜ್ಞಾನವನ್ನು ಅನ್ವಯಿಸಿಕೊಳ್ಳುವಾಗಲೇ ಜ್ಞಾನದ ಗುಣಲಕ್ಷಣಗಳು ಸ್ಪಷ್ಟವಾಗಿರುವುದು,” ಎಂದರು.
ಕಿನ್ತು ಜ್ಞಾನಿನೋ ಜ್ಞಾನಂ ನಿರ್ದೋಷಂ ವಿದುಃ|
36 ಆಗ ಫರಿಸಾಯರಲ್ಲಿ ಒಬ್ಬನು ಯೇಸು ತನ್ನೊಂದಿಗೆ ಊಟ ಮಾಡಬೇಕೆಂದು ಅಪೇಕ್ಷಿಸಿದನು, ಆಗ ಯೇಸು ಆ ಫರಿಸಾಯನ ಮನೆಯೊಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು.
ಪಶ್ಚಾದೇಕಃ ಫಿರೂಶೀ ಯೀಶುಂ ಭೋಜನಾಯ ನ್ಯಮನ್ತ್ರಯತ್ ತತಃ ಸ ತಸ್ಯ ಗೃಹಂ ಗತ್ವಾ ಭೋಕ್ತುಮುಪವಿಷ್ಟಃ|
37 ಆ ಪಟ್ಟಣದಲ್ಲಿದ್ದ ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತುಕೊಂಡಿದ್ದಾರೆಂದು ಒಬ್ಬ ಪಾಪಿ ಸ್ತ್ರೀಯು ತಿಳಿದು, ಸುಗಂಧ ತೈಲದ ಭರಣಿಯನ್ನು ತಂದು,
ಏತರ್ಹಿ ತತ್ಫಿರೂಶಿನೋ ಗೃಹೇ ಯೀಶು ರ್ಭೇಕ್ತುಮ್ ಉಪಾವೇಕ್ಷೀತ್ ತಚ್ಛ್ರುತ್ವಾ ತನ್ನಗರವಾಸಿನೀ ಕಾಪಿ ದುಷ್ಟಾ ನಾರೀ ಪಾಣ್ಡರಪ್ರಸ್ತರಸ್ಯ ಸಮ್ಪುಟಕೇ ಸುಗನ್ಧಿತೈಲಮ್ ಆನೀಯ
38 ಅವರ ಪಾದಗಳ ಬಳಿಯಲ್ಲಿ ನಿಂತು, ಅಳುತ್ತಾ ಅವರ ಪಾದಗಳನ್ನು ಕಣ್ಣೀರಿನಿಂದ ತೊಳೆಯಲಾರಂಭಿಸಿ, ತನ್ನ ತಲೆಕೂದಲಿನಿಂದ ಒರೆಸಿ, ಅವರ ಪಾದಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು.
ತಸ್ಯ ಪಶ್ಚಾತ್ ಪಾದಯೋಃ ಸನ್ನಿಧೌ ತಸ್ಯೌ ರುದತೀ ಚ ನೇತ್ರಾಮ್ಬುಭಿಸ್ತಸ್ಯ ಚರಣೌ ಪ್ರಕ್ಷಾಲ್ಯ ನಿಜಕಚೈರಮಾರ್ಕ್ಷೀತ್, ತತಸ್ತಸ್ಯ ಚರಣೌ ಚುಮ್ಬಿತ್ವಾ ತೇನ ಸುಗನ್ಧಿತೈಲೇನ ಮಮರ್ದ|
39 ಆಗ ಯೇಸುವನ್ನು ಆಮಂತ್ರಿಸಿದ ಫರಿಸಾಯನು, ಅದನ್ನು ಕಂಡು ತನ್ನೊಳಗೆ, “ಈ ಮನುಷ್ಯ ಒಬ್ಬ ಪ್ರವಾದಿಯಾಗಿದ್ದರೆ, ತನ್ನನ್ನು ಮುಟ್ಟುತ್ತಿದ್ದವಳು ಯಾರು, ಎಂಥಾ ಹೆಂಗಸು ಎಂದು ತಿಳಿದುಕೊಳ್ಳುತ್ತಿದ್ದನು. ಅವಳು ಒಬ್ಬ ಪಾಪಿ,” ಎಂದು ಅಂದುಕೊಂಡನು.
ತಸ್ಮಾತ್ ಸ ನಿಮನ್ತ್ರಯಿತಾ ಫಿರೂಶೀ ಮನಸಾ ಚಿನ್ತಯಾಮಾಸ, ಯದ್ಯಯಂ ಭವಿಷ್ಯದ್ವಾದೀ ಭವೇತ್ ತರ್ಹಿ ಏನಂ ಸ್ಪೃಶತಿ ಯಾ ಸ್ತ್ರೀ ಸಾ ಕಾ ಕೀದೃಶೀ ಚೇತಿ ಜ್ಞಾತುಂ ಶಕ್ನುಯಾತ್ ಯತಃ ಸಾ ದುಷ್ಟಾ|
40 ಆಗ ಯೇಸು ಅವನಿಗೆ, “ಸೀಮೋನನೇ, ನಾನು ನಿನಗೆ ಹೇಳಬೇಕಾದ ಒಂದು ವಿಷಯವಿದೆ,” ಎಂದರು. ಸೀಮೋನನು ಯೇಸುವಿಗೆ, “ಗುರುವೇ, ಹೇಳಿ” ಎಂದನು.
ತದಾ ಯಾಶುಸ್ತಂ ಜಗಾದ, ಹೇ ಶಿಮೋನ್ ತ್ವಾಂ ಪ್ರತಿ ಮಮ ಕಿಞ್ಚಿದ್ ವಕ್ತವ್ಯಮಸ್ತಿ; ತಸ್ಮಾತ್ ಸ ಬಭಾಷೇ, ಹೇ ಗುರೋ ತದ್ ವದತು|
41 ಆಗ ಯೇಸು, “ಸಾಲಕೊಡುವ ಒಬ್ಬನಿಗೆ ಇಬ್ಬರು ಸಾಲಗಾರರಿದ್ದರು, ಒಬ್ಬನು ಐದು ನೂರು ಬೆಳ್ಳಿ ನಾಣ್ಯಗಳನ್ನೂ, ಮತ್ತೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನೂ ಕೊಡಬೇಕಾಗಿತ್ತು.
ಏಕೋತ್ತಮರ್ಣಸ್ಯ ದ್ವಾವಧಮರ್ಣಾವಾಸ್ತಾಂ, ತಯೋರೇಕಃ ಪಞ್ಚಶತಾನಿ ಮುದ್ರಾಪಾದಾನ್ ಅಪರಶ್ಚ ಪಞ್ಚಾಶತ್ ಮುದ್ರಾಪಾದಾನ್ ಧಾರಯಾಮಾಸ|
42 ಆದರೆ ಅವರಿಬ್ಬರಿಗೂ ಸಾಲತೀರಿಸುವುದಕ್ಕೆ ಹಣ ಇರಲಿಲ್ಲ. ಅವನು ಅವರಿಬ್ಬರ ಸಾಲವನ್ನೂ ರದ್ದುಮಾಡಿಬಿಟ್ಟನು. ಆದ್ದರಿಂದ ಅವರಲ್ಲಿ ಯಾರು ಬಹಳವಾಗಿ ಅವನನ್ನು ಪ್ರೀತಿಸುವರು?” ಎಂದು ಕೇಳಿದರು.
ತದನನ್ತರಂ ತಯೋಃ ಶೋಧ್ಯಾಭಾವಾತ್ ಸ ಉತ್ತಮರ್ಣಸ್ತಯೋ ರೃಣೇ ಚಕ್ಷಮೇ; ತಸ್ಮಾತ್ ತಯೋರ್ದ್ವಯೋಃ ಕಸ್ತಸ್ಮಿನ್ ಪ್ರೇಷ್ಯತೇ ಬಹು? ತದ್ ಬ್ರೂಹಿ|
43 ಅದಕ್ಕೆ ಸೀಮೋನನು ಉತ್ತರವಾಗಿ, “ಯಾರಿಗೆ ಅವನು ಹೆಚ್ಚಾಗಿ ರದ್ದು ಮಾಡಿದನೋ ಅವನೇ ಎಂದು ತೋರುತ್ತದೆ,” ಎಂದನು. ಆಗ ಯೇಸು ಅವನಿಗೆ, “ನೀನು ಸರಿಯಾಗಿ ತೀರ್ಪು ಮಾಡಿದೆ,” ಎಂದರು.
ಶಿಮೋನ್ ಪ್ರತ್ಯುವಾಚ, ಮಯಾ ಬುಧ್ಯತೇ ಯಸ್ಯಾಧಿಕಮ್ ಋಣಂ ಚಕ್ಷಮೇ ಸ ಇತಿ; ತತೋ ಯೀಶುಸ್ತಂ ವ್ಯಾಜಹಾರ, ತ್ವಂ ಯಥಾರ್ಥಂ ವ್ಯಚಾರಯಃ|
44 ತರುವಾಯ ಯೇಸು ಆ ಸ್ತ್ರೀಯ ಕಡೆಗೆ ತಿರುಗಿಕೊಂಡು ಸೀಮೋನನಿಗೆ, “ಈ ಸ್ತ್ರೀಯನ್ನು ಕಂಡಿದ್ದೀಯಾ? ನಾನು ನಿನ್ನ ಮನೆಯೊಳಗೆ ಪ್ರವೇಶಿಸಿದಾಗ ನನ್ನ ಪಾದಗಳಿಗೆ ನೀನು ನೀರು ಕೊಡಲಿಲ್ಲ. ಇವಳಾದರೋ ನನ್ನ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದು ತನ್ನ ತಲೆಕೂದಲಿನಿಂದ ಅವುಗಳನ್ನು ಒರೆಸಿದ್ದಾಳೆ.
ಅಥ ತಾಂ ನಾರೀಂ ಪ್ರತಿ ವ್ಯಾಘುಠ್ಯ ಶಿಮೋನಮವೋಚತ್, ಸ್ತ್ರೀಮಿಮಾಂ ಪಶ್ಯಸಿ? ತವ ಗೃಹೇ ಮಯ್ಯಾಗತೇ ತ್ವಂ ಪಾದಪ್ರಕ್ಷಾಲನಾರ್ಥಂ ಜಲಂ ನಾದಾಃ ಕಿನ್ತು ಯೋಷಿದೇಷಾ ನಯನಜಲೈ ರ್ಮಮ ಪಾದೌ ಪ್ರಕ್ಷಾಲ್ಯ ಕೇಶೈರಮಾರ್ಕ್ಷೀತ್|
45 ನೀನು ನನಗೆ ಮುದ್ದು ಕೊಡಲಿಲ್ಲ. ಆದರೆ ನಾನು ಒಳಗೆ ಬಂದಾಗಿನಿಂದ ಈ ಸ್ತ್ರೀಯು ನನ್ನ ಪಾದಗಳಿಗೆ ಮುದ್ದಿಡುವುದನ್ನು ಬಿಡಲಿಲ್ಲ.
ತ್ವಂ ಮಾಂ ನಾಚುಮ್ಬೀಃ ಕಿನ್ತು ಯೋಷಿದೇಷಾ ಸ್ವೀಯಾಗಮನಾದಾರಭ್ಯ ಮದೀಯಪಾದೌ ಚುಮ್ಬಿತುಂ ನ ವ್ಯರಂಸ್ತ|
46 ನೀನು ನನ್ನ ತಲೆಗೆ ಎಣ್ಣೆ ಹಚ್ಚಲಿಲ್ಲ, ಆದರೆ ಈ ಸ್ತ್ರೀಯು ನನ್ನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿದ್ದಾಳೆ.
ತ್ವಞ್ಚ ಮದೀಯೋತ್ತಮಾಙ್ಗೇ ಕಿಞ್ಚಿದಪಿ ತೈಲಂ ನಾಮರ್ದೀಃ ಕಿನ್ತು ಯೋಷಿದೇಷಾ ಮಮ ಚರಣೌ ಸುಗನ್ಧಿತೈಲೇನಾಮರ್ದ್ದೀತ್|
47 ಬಹಳವಾಗಿರುವ ಇವಳ ಪಾಪಗಳು ಕ್ಷಮಿಸಲಾಗಿವೆ. ಏಕೆಂದರೆ ಇವಳು ಬಹಳವಾಗಿ ಪ್ರೀತಿಸಿದಳು. ಆದರೆ ಕಡಿಮೆ ಕ್ಷಮೆ ಪಡೆದವನು ಕಡಿಮೆ ಪ್ರೀತಿಸುವನು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು.
ಅತಸ್ತ್ವಾಂ ವ್ಯಾಹರಾಮಿ, ಏತಸ್ಯಾ ಬಹು ಪಾಪಮಕ್ಷಮ್ಯತ ತತೋ ಬಹು ಪ್ರೀಯತೇ ಕಿನ್ತು ಯಸ್ಯಾಲ್ಪಪಾಪಂ ಕ್ಷಮ್ಯತೇ ಸೋಲ್ಪಂ ಪ್ರೀಯತೇ|
48 ಯೇಸು ಆಕೆಗೆ, “ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದರು.
ತತಃ ಪರಂ ಸ ತಾಂ ಬಭಾಷೇ, ತ್ವದೀಯಂ ಪಾಪಮಕ್ಷಮ್ಯತ|
49 ಯೇಸುವಿನ ಸಂಗಡ ಊಟಕ್ಕೆ ಕುಳಿತವರು, “ಪಾಪಗಳನ್ನು ಸಹ ಕ್ಷಮಿಸುವುದಕ್ಕೆ ಈತನು ಯಾರು?” ಎಂದು ತಮ್ಮತಮ್ಮೊಳಗೆ ಅಂದುಕೊಳ್ಳಲಾರಂಭಿಸಿದರು.
ತದಾ ತೇನ ಸಾರ್ದ್ಧಂ ಯೇ ಭೋಕ್ತುಮ್ ಉಪವಿವಿಶುಸ್ತೇ ಪರಸ್ಪರಂ ವಕ್ತುಮಾರೇಭಿರೇ, ಅಯಂ ಪಾಪಂ ಕ್ಷಮತೇ ಕ ಏಷಃ?
50 ಯೇಸು ಆ ಸ್ತ್ರೀಗೆ, “ನಿನ್ನ ನಂಬಿಕೆಯು ನಿನ್ನನ್ನು ರಕ್ಷಿಸಿದೆ, ಸಮಾಧಾನದಿಂದ ಹೋಗು,” ಎಂದರು.
ಕಿನ್ತು ಸ ತಾಂ ನಾರೀಂ ಜಗಾದ, ತವ ವಿಶ್ವಾಸಸ್ತ್ವಾಂ ಪರ್ಯ್ಯತ್ರಾಸ್ತ ತ್ವಂ ಕ್ಷೇಮೇಣ ವ್ರಜ|

< ಲೂಕನು 7 >