< ಲೂಕನು 4 >
1 ಯೇಸು ಪವಿತ್ರಾತ್ಮಭರಿತರಾಗಿ, ಯೊರ್ದನ್ ನದಿ ತೀರದಿಂದ ಹಿಂದಿರುಗಿ ಬಂದು, ದೇವರಾತ್ಮರಿಂದ ಅರಣ್ಯದೊಳಕ್ಕೆ ಮಾರ್ಗದರ್ಶನ ಹೊಂದಿ,
តតះ បរំ យីឝុះ បវិត្រេណាត្មនា បូណ៌ះ សន៑ យទ៌្ទននទ្យាះ បរាវ្ឫត្យាត្មនា ប្រាន្តរំ នីតះ សន៑ ចត្វារិំឝទ្ទិនានិ យាវត៑ ឝៃតានា បរីក្ឞិតោៜភូត៑,
2 ನಲವತ್ತು ದಿನಗಳು ಸೈತಾನನಿಂದ ಶೋಧನೆಯನ್ನು ಎದುರಿಸಿದರು. ಆ ದಿನಗಳಲ್ಲಿ ಯೇಸು ಏನೂ ತಿನ್ನಲಿಲ್ಲ. ಆ ದಿನಗಳು ಮುಗಿದ ಮೇಲೆ ಯೇಸುವಿಗೆ ಹಸಿವಾಯಿತು.
កិញ្ច តានិ សវ៌្វទិនានិ ភោជនំ វិនា ស្ថិតត្វាត៑ កាលេ បូណ៌េ ស ក្ឞុធិតវាន៑។
3 ಸೈತಾನನು ಯೇಸುವಿಗೆ, “ನೀನು ದೇವರ ಪುತ್ರನಾಗಿದ್ದರೆ, ಈ ಕಲ್ಲಿಗೆ ರೊಟ್ಟಿಯಾಗುವಂತೆ ಹೇಳು,” ಎಂದನು.
តតះ ឝៃតានាគត្យ តមវទត៑ ត្វំ ចេទីឝ្វរស្យ បុត្រស្តហ៌ិ ប្រស្តរានេតាន៑ អាជ្ញយា បូបាន៑ កុរុ។
4 ಅದಕ್ಕೆ ಯೇಸು ಉತ್ತರವಾಗಿ ಅವನಿಗೆ, “‘ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
តទា យីឝុរុវាច, លិបិរីទ្ឫឝី វិទ្យតេ មនុជះ កេវលេន បូបេន ន ជីវតិ កិន្ត្វីឝ្វរស្យ សវ៌្វាភិរាជ្ញាភិ រ្ជីវតិ។
5 ಸೈತಾನನು ಯೇಸುವನ್ನು ಎತ್ತರವಾದ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗಿ, ಲೋಕದ ಎಲ್ಲಾ ರಾಜ್ಯಗಳನ್ನು ಕ್ಷಣಮಾತ್ರದಲ್ಲಿ ಅವರಿಗೆ ತೋರಿಸಿದನು.
តទា ឝៃតាន៑ តមុច្ចំ បវ៌្វតំ នីត្វា និមិឞៃកមធ្យេ ជគតះ សវ៌្វរាជ្យានិ ទឝ៌ិតវាន៑។
6 ಅನಂತರ ಸೈತಾನನು ಯೇಸುವಿಗೆ, “ಈ ಎಲ್ಲಾ ರಾಜ್ಯಗಳ ಅಧಿಕಾರವನ್ನೂ ಇವುಗಳ ಮಹಿಮೆಯನ್ನೂ ನಾನು ನಿನಗೆ ಕೊಡುವೆನು. ಇವೆಲ್ಲಾ ನನಗೆ ಕೊಟ್ಟಿರುವುದರಿಂದ ನನಗೆ ಇಷ್ಟ ಬಂದ ಯಾರಿಗಾದರೂ ನಾನು ಕೊಡುವೆನು.
បឝ្ចាត៑ តមវាទីត៑ សវ៌្វម៑ ឯតទ៑ វិភវំ ប្រតាបញ្ច តុភ្យំ ទាស្យាមិ តន៑ មយិ សមប៌ិតមាស្តេ យំ ប្រតិ មមេច្ឆា ជាយតេ តស្មៃ ទាតុំ ឝក្នោមិ,
7 ಆದ್ದರಿಂದ ನೀನು ನನ್ನನ್ನು ಆರಾಧಿಸಿದರೆ, ಎಲ್ಲವೂ ನಿನ್ನದಾಗುವವು,” ಎಂದು ಹೇಳಿದನು.
ត្វំ ចេន្មាំ ភជសេ តហ៌ិ សវ៌្វមេតត៑ តវៃវ ភវិឞ្យតិ។
8 ಯೇಸು ಅವನಿಗೆ ಉತ್ತರವಾಗಿ, “‘ನಿನ್ನ ದೇವರಾದ ಕರ್ತದೇವರನ್ನು ಆರಾಧಿಸಿ, ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು,’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
តទា យីឝុស្តំ ប្រត្យុក្តវាន៑ ទូរី ភវ ឝៃតាន៑ លិបិរាស្តេ, និជំ ប្រភុំ បរមេឝ្វរំ ភជស្វ កេវលំ តមេវ សេវស្វ ច។
9 ಸೈತಾನನು ಯೇಸುವನ್ನು ಯೆರೂಸಲೇಮಿಗೆ ಕರೆತಂದು ದೇವಾಲಯದ ಅತಿ ಎತ್ತರವಾದ ಶಿಖರದ ಮೇಲೆ ನಿಲ್ಲಿಸಿ ಯೇಸುವಿಗೆ, “ನೀನು ದೇವರ ಪುತ್ರನಾಗಿದ್ದರೆ ಇಲ್ಲಿಂದ ಕೆಳಕ್ಕೆ ಧುಮುಕು,
អថ ឝៃតាន៑ តំ យិរូឝាលមំ នីត្វា មន្ទិរស្យ ចូឌាយា ឧបរិ សមុបវេឝ្យ ជគាទ ត្វំ ចេទីឝ្វរស្យ បុត្រស្តហ៌ិ ស្ថានាទិតោ លម្ផិត្វាធះ
10 ಏಕೆಂದರೆ ಪವಿತ್ರ ವೇದದಲ್ಲಿ ಬರೆದಿರುವಂತೆ: “‘ದೇವರು ನಿನ್ನನ್ನು ಕಾಪಾಡುವುದಕ್ಕೆ ತಮ್ಮ ದೂತರಿಗೆ ಆಜ್ಞಾಪಿಸುವರು
បត យតោ លិបិរាស្តេ, អាជ្ញាបយិឞ្យតិ ស្វីយាន៑ ទូតាន៑ ស បរមេឝ្វរះ។
11 ಮತ್ತು ನಿನ್ನ ಪಾದಗಳು ಕಲ್ಲಿಗೆ ತಗಲದಂತೆ, ದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು,’” ಎಂದನು.
រក្ឞិតុំ សវ៌្វមាគ៌េ ត្វាំ តេន ត្វច្ចរណេ យថា។ ន លគេត៑ ប្រស្តរាឃាតស្ត្វាំ ធរិឞ្យន្តិ តេ តថា។
12 ಅದಕ್ಕೆ ಯೇಸು ಅವನಿಗೆ, “‘ನಿನ್ನ ದೇವರಾದ ಕರ್ತದೇವರನ್ನು ಪರೀಕ್ಷಿಸಬಾರದು,’ ಎಂದೂ ಹೇಳಿದೆ,” ಎಂದು ಉತ್ತರಕೊಟ್ಟರು.
តទា យីឝុនា ប្រត្យុក្តម៑ ឥទមប្យុក្តមស្តិ ត្វំ ស្វប្រភុំ បរេឝំ មា បរីក្ឞស្វ។
13 ಸೈತಾನನು ಯೇಸುವನ್ನು ನಾನಾರೀತಿಯಲ್ಲಿ ಶೋಧಿಸಿದ ಮೇಲೆ, ತಕ್ಕಕಾಲ ಬರುವ ತನಕ ಅವರನ್ನು ಬಿಟ್ಟು ಹೊರಟುಹೋದನು.
បឝ្ចាត៑ ឝៃតាន៑ សវ៌្វបរីក្ឞាំ សមាប្យ ក្ឞណាត្តំ ត្យក្ត្វា យយៅ។
14 ಯೇಸು ಪವಿತ್ರಾತ್ಮರ ಶಕ್ತಿಯಿಂದ ಗಲಿಲಾಯಕ್ಕೆ ಹಿಂದಿರುಗಿದರು. ಅವರ ಸುದ್ದಿಯು ಸುತ್ತಮುತ್ತೆಲ್ಲಾ ಹರಡಿತು.
តទា យីឝុរាត្មប្រភាវាត៑ បុនគ៌ាលីល្ប្រទេឝំ គតស្តទា តត្សុខ្យាតិឝ្ចតុទ៌ិឝំ វ្យានឝេ។
15 ಯೇಸು ಯೆಹೂದ್ಯರ ಸಭಾಮಂದಿರಗಳಲ್ಲಿ ಬೋಧಿಸಿದ್ದರಿಂದ, ಎಲ್ಲರೂ ಅವರನ್ನು ಹೊಗಳಿದರು.
ស តេឞាំ ភជនគ្ឫហេឞុ ឧបទិឝ្យ សវ៌្វៃះ ប្រឝំសិតោ ពភូវ។
16 ಯೇಸು ತಾವು ಬೆಳೆದ ನಜರೇತಿಗೆ ಬಂದು, ತಮ್ಮ ಪದ್ಧತಿಯಂತೆ ಸಬ್ಬತ್ ದಿನದಲ್ಲಿ ಸಭಾಮಂದಿರದೊಳಕ್ಕೆ ಹೋಗಿ ಪವಿತ್ರ ವೇದದ ಸುರುಳಿಯನ್ನು ಓದುವುದಕ್ಕಾಗಿ ಎದ್ದು ನಿಂತರು.
អថ ស ស្វបាលនស្ថានំ នាសរត្បុរមេត្យ វិឝ្រាមវារេ ស្វាចារាទ៑ ភជនគេហំ ប្រវិឝ្យ បឋិតុមុត្តស្ថៅ។
17 ಯೇಸುವಿನ ಕೈಗೆ ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಕೊಟ್ಟರು. ಯೇಸು ಅದನ್ನು ಬಿಚ್ಚಿ, ಅದರಲ್ಲಿ ಬರೆದಿರುವ ಈ ವಾಕ್ಯಗಳನ್ನು ಕಂಡು ಓದಿದರು:
តតោ យិឝយិយភវិឞ្យទ្វាទិនះ បុស្តកេ តស្យ ករទត្តេ សតិ ស តត៑ បុស្តកំ វិស្តាយ៌្យ យត្រ វក្ឞ្យមាណានិ វចនានិ សន្តិ តត៑ ស្ថានំ ប្រាប្យ បបាឋ។
18 “ಕರ್ತದೇವರ ಆತ್ಮರು ನನ್ನ ಮೇಲೆ ಇದ್ದಾರೆ, ಅವರು ನನ್ನನ್ನು ಬಡವರಿಗೆ ಸುವಾರ್ತೆ ಸಾರುವುದಕ್ಕೆ ಅಭಿಷೇಕಿಸಿದ್ದಾರೆ. ಸೆರೆಯಲ್ಲಿದ್ದವರಿಗೆ ಬಿಡುಗಡೆಯನ್ನು ಸಾರುವುದಕ್ಕೂ, ಕುರುಡರಿಗೆ ದೃಷ್ಟಿ ಕೊಡುವುದಕ್ಕೂ, ಜಜ್ಜಿ ಹೋದವರನ್ನು ಬಿಡಿಸಿ ಕಳುಹಿಸುವುದಕ್ಕೂ,
អាត្មា តុ បរមេឝស្យ មទីយោបរិ វិទ្យតេ។ ទរិទ្រេឞុ សុសំវាទំ វក្តុំ មាំ សោភិឞិក្តវាន៑។ ភគ្នាន្តះ ករណាល្លោកាន៑ សុស្វស្ថាន៑ កត៌្តុមេវ ច។ ពន្ទីក្ឫតេឞុ លោកេឞុ មុក្តេ រ្ឃោឞយិតុំ វចះ។ នេត្រាណិ ទាតុមន្ធេភ្យស្ត្រាតុំ ពទ្ធជនានបិ។
19 ಕರ್ತದೇವರ ಮೆಚ್ಚುಗೆಯ ವರ್ಷವನ್ನು ಸಾರುವುದಕ್ಕೂ ಅವರು ನನ್ನನ್ನು ಕಳುಹಿಸಿದ್ದಾರೆ.”
បរេឝានុគ្រហេ កាលំ ប្រចារយិតុមេវ ច។ សវ៌្វៃតត្ករណាត៌្ហាយ មាមេវ ប្រហិណោតិ សះ៕
20 ಯೇಸು ಗ್ರಂಥದ ಸುರುಳಿಯನ್ನು ಸುತ್ತಿ, ಪರಿಚಾರಕನ ಕೈಗೆ ಕೊಟ್ಟು ಕುಳಿತುಕೊಂಡರು. ಆಗ ಆ ಸಭಾಮಂದಿರದಲ್ಲಿ ಇದ್ದವರೆಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು.
តតះ បុស្តកំ ពទ្វ្វា បរិចារកស្យ ហស្តេ សមប៌្យ ចាសនេ សមុបវិឞ្ដះ, តតោ ភជនគ្ឫហេ យាវន្តោ លោកា អាសន៑ តេ សវ៌្វេៜនន្យទ្ឫឞ្ដ្យា តំ វិលុលោកិរេ។
21 ಯೇಸು ಅವರಿಗೆ, “ನೀವು ಕೇಳುತ್ತಿದ್ದಂತೆಯೇ ಈ ಪವಿತ್ರ ವೇದದ ವಾಕ್ಯವು ಇಂದು ನೆರವೇರಿತು,” ಎಂದು ಹೇಳಲಾರಂಭಿಸಿದರು.
អនន្តរម៑ អទ្យៃតានិ សវ៌្វាណិ លិខិតវចនានិ យុឞ្មាកំ មធ្យេ សិទ្ធានិ ស ឥមាំ កថាំ តេភ្យះ កថយិតុមារេភេ។
22 ಎಲ್ಲರೂ ಅವರನ್ನು ಹೊಗಳಿದರು. ಯೇಸುವಿನ ಬಾಯಿಂದ ಬಂದ ಕೃಪೆಯುಳ್ಳ ಮಾತುಗಳಿಗೆ ಆಶ್ಚರ್ಯಪಟ್ಟು, “ಈತನು ಯೋಸೇಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು.
តតះ សវ៌្វេ តស្មិន៑ អន្វរជ្យន្ត, កិញ្ច តស្យ មុខាន្និគ៌តាភិរនុគ្រហស្យ កថាភិឝ្ចមត្ក្ឫត្យ កថយាមាសុះ កិមយំ យូឞផះ បុត្រោ ន?
23 ಯೇಸು ಅವರಿಗೆ, “‘ವೈದ್ಯನೇ, ನಿನ್ನನ್ನು ನೀನೇ ವಾಸಿಮಾಡಿಕೋ!’ ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಹೇಳಿ, ‘ಕಪೆರ್ನೌಮಿನಲ್ಲಿ ಎಂತೆಂಥ ಕಾರ್ಯಗಳು ನಡೆಯಿತೆಂದು ನಾವು ಕೇಳಿದೆವು. ಅದನ್ನು ಇಲ್ಲಿ ನಿನ್ನ ಸ್ವಂತ ಊರಿನಲ್ಲಿಯೂ ಮಾಡು’ ಎಂದು ನನಗೆ ಹೇಳುವಿರಿ,” ಎಂದರು.
តទា សោៜវាទីទ៑ ហេ ចិកិត្សក ស្វមេវ ស្វស្ថំ កុរុ កផន៌ាហូមិ យទ្យត៑ ក្ឫតវាន៑ តទឝ្រៅឞ្ម តាះ សវ៌ាះ ក្រិយា អត្រ ស្វទេឝេ កុរុ កថាមេតាំ យូយមេវាវឝ្យំ មាំ វទិឞ្យថ។
24 ಯೇಸು ಮುಂದುವರಿಸಿ, “ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಯಾವ ಪ್ರವಾದಿಯೂ ಸ್ವಂತ ಊರಿನಲ್ಲಿ ಸ್ವೀಕಾರವಾಗುವುದಿಲ್ಲ.
បុនះ សោវាទីទ៑ យុឞ្មានហំ យថាត៌្ហំ វទាមិ, កោបិ ភវិឞ្យទ្វាទី ស្វទេឝេ សត្ការំ ន ប្រាប្នោតិ។
25 ನಿಮಗೆ ಸತ್ಯವನ್ನು ಹೇಳುತ್ತೇನೆ: ಎಲೀಯನ ದಿವಸಗಳಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಬರ ಉಂಟಾದಾಗ, ಇಸ್ರಾಯೇಲಿನಲ್ಲಿ ಅನೇಕ ವಿಧವೆಯರು ಇದ್ದರು.
អបរញ្ច យថាត៌្ហំ វច្មិ, ឯលិយស្យ ជីវនកាលេ យទា សាទ៌្ធត្រិតយវឞ៌ាណិ យាវត៑ ជលទប្រតិពន្ធាត៑ សវ៌្វស្មិន៑ ទេឝេ មហាទុព៌្ហិក្ឞម៑ អជនិឞ្ដ តទានីម៑ ឥស្រាយេលោ ទេឝស្យ មធ្យេ ពហ្វ្យោ វិធវា អាសន៑,
26 ಅವರಲ್ಲಿ ಯಾರ ಬಳಿಗೂ ದೇವರು ಎಲೀಯನನ್ನು ಕಳುಹಿಸದೆ ಸೀದೋನ್ ಪಟ್ಟಣದ ಸರೆಪ್ತದಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಕಳುಹಿಸಿದರು.
កិន្តុ សីទោន្ប្រទេឝីយសារិផត្បុរនិវាសិនីម៑ ឯកាំ វិធវាំ វិនា កស្យាឝ្ចិទបិ សមីបេ ឯលិយះ ប្រេរិតោ នាភូត៑។
27 ಹಾಗೆಯೇ, ಪ್ರವಾದಿ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರಾಯೇಲಿನಲ್ಲಿದ್ದರೂ ಸಿರಿಯದ ನಾಮಾನನ ಹೊರತು ಅವರಲ್ಲಿ ಬೇರೆ ಯಾರೂ ಶುದ್ಧರಾಗಲಿಲ್ಲ,” ಎಂದರು.
អបរញ្ច ឥលីឝាយភវិឞ្យទ្វាទិវិទ្យមានតាកាលេ ឥស្រាយេល្ទេឝេ ពហវះ កុឞ្ឋិន អាសន៑ កិន្តុ សុរីយទេឝីយំ នាមាន្កុឞ្ឋិនំ វិនា កោប្យន្យះ បរិឞ្ក្ឫតោ នាភូត៑។
28 ಆಗ ಸಭಾಮಂದಿರದಲ್ಲಿ ಇದ್ದವರೆಲ್ಲರೂ ಇವುಗಳನ್ನು ಕೇಳಿ ಬಹು ಕೋಪಗೊಂಡರು.
ឥមាំ កថាំ ឝ្រុត្វា ភជនគេហស្ថិតា លោកាះ សក្រោធម៑ ឧត្ថាយ
29 ಅವರು ಮೇಲಕ್ಕೆದ್ದು, ಯೇಸುವನ್ನು ಪಟ್ಟಣದ ಹೊರಗೆ ದಬ್ಬಬೇಕೆಂದು, ತಮ್ಮ ಬೆಟ್ಟದ ಮೇಲೆ ಕಟ್ಟಿರುವ ಪಟ್ಟಣದ ಕಡಿದಾದ ಸ್ಥಳಕ್ಕೆ ಅವರನ್ನು ಹಿಡಿದುಕೊಂಡು ಹೋದರು.
នគរាត្តំ ពហិឞ្ក្ឫត្យ យស្យ ឝិខរិណ ឧបរិ តេឞាំ នគរំ ស្ថាបិតមាស្តេ តស្មាន្និក្ឞេប្តុំ តស្យ ឝិខរំ តំ និន្យុះ
30 ಆದರೆ ಯೇಸು ಅವರ ಮಧ್ಯದಿಂದ ಹಾದು ಹೊರಟು ಹೋದರು.
កិន្តុ ស តេឞាំ មធ្យាទបស្ឫត្យ ស្ថានាន្តរំ ជគាម។
31 ಯೇಸು ಗಲಿಲಾಯದ ಕಪೆರ್ನೌಮಿಗೆ ಬಂದು, ಸಬ್ಬತ್ ದಿನಗಳಲ್ಲಿ ಅವರಿಗೆ ಬೋಧಿಸುತ್ತಿದ್ದರು.
តតះ បរំ យីឝុគ៌ាលីល្ប្រទេឝីយកផន៌ាហូម្នគរ ឧបស្ថាយ វិឝ្រាមវារេ លោកានុបទេឞ្ដុម៑ អារព្ធវាន៑។
32 ಯೇಸುವಿನ ಬೋಧನೆಯನ್ನು ಕೇಳಿ ಜನರು ಆಶ್ಚರ್ಯಪಟ್ಟರು. ಏಕೆಂದರೆ ಅವರ ವಾಕ್ಯವು ಅಧಿಕಾರದಿಂದ ಕೂಡಿದ್ದಾಗಿತ್ತು.
តទុបទេឝាត៑ សវ៌្វេ ចមច្ចក្រុ រ្យតស្តស្យ កថា គុរុតរា អាសន៑។
33 ಆ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾಗಿ ಕಿರುಚುತ್ತಾ,
តទានីំ តទ្ភជនគេហស្ថិតោៜមេធ្យភូតគ្រស្ត ឯកោ ជន ឧច្ចៃះ កថយាមាស,
34 “ನಜರೇತಿನ ಯೇಸುವೇ, ನಮ್ಮ ಗೊಡವೆ ನಿಮಗೆ ಏಕೆ? ನಮ್ಮನ್ನು ನಾಶಮಾಡುವುದಕ್ಕಾಗಿ ಬಂದಿರಾ? ನೀವು ಯಾರೆಂದು ನಾನು ಬಲ್ಲೆನು. ನೀವು ದೇವರ ಪರಿಶುದ್ಧರು,” ಎಂದು ಹೇಳಿದನು.
ហេ នាសរតីយយីឝោៜស្មាន៑ ត្យជ, ត្វយា សហាស្មាកំ កះ សម្ពន្ធះ? កិមស្មាន៑ វិនាឝយិតុមាយាសិ? ត្វមីឝ្វរស្យ បវិត្រោ ជន ឯតទហំ ជានាមិ។
35 ಆಗ ಯೇಸು ಅವನನ್ನು ಗದರಿಸಿ, “ಸುಮ್ಮನಿರು, ಅವನೊಳಗಿಂದ ಹೊರಗೆ ಬಾ,” ಎಂದರು. ಆ ದೆವ್ವವು ಅವನನ್ನು ಮಧ್ಯದಲ್ಲಿ ಕೆಡವಿ, ಬಾಧಿಸದೆ ಅವನೊಳಗಿಂದ ಹೊರಗೆ ಬಂತು.
តទា យីឝុស្តំ តជ៌យិត្វាវទត៑ មៅនី ភវ ឥតោ ពហិព៌្ហវ; តតះ សោមេធ្យភូតស្តំ មធ្យស្ថានេ បាតយិត្វា កិញ្ចិទប្យហិំសិត្វា តស្មាទ៑ ពហិគ៌តវាន៑។
36 ಜನರೆಲ್ಲರೂ ಬೆರಗಾಗಿ, “ಇದೆಂಥಾ ಮಾತಾಗಿದೆ! ಈತನು ಅಧಿಕಾರದಿಂದಲೂ ಶಕ್ತಿಯಿಂದಲೂ ಅಶುದ್ಧಾತ್ಮಗಳಿಗೆ ಅಪ್ಪಣೆಕೊಡಲು ಅವು ಹೊರಗೆ ಬರುತ್ತವಲ್ಲಾ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
តតះ សវ៌្វេ លោកាឝ្ចមត្ក្ឫត្យ បរស្បរំ វក្តុមារេភិរេ កោយំ ចមត្ការះ។ ឯឞ ប្រភាវេណ បរាក្រមេណ ចាមេធ្យភូតាន៑ អាជ្ញាបយតិ តេនៃវ តេ ពហិគ៌ច្ឆន្តិ។
37 ಯೇಸುವಿನ ಸುದ್ದಿಯು ಸುತ್ತಲಿನ ಪ್ರದೇಶದ ಪ್ರತಿಯೊಂದು ಸ್ಥಳದಲ್ಲಿ ಹರಡಿತು.
អនន្តរំ ចតុទ៌ិក្ស្ថទេឝាន៑ តស្យ សុខ្យាតិវ៌្យាប្នោត៑។
38 ಯೇಸು ಸಭಾಮಂದಿರದಿಂದ ಎದ್ದು ಸೀಮೋನನ ಮನೆಗೆ ಹೋದರು. ಅಲ್ಲಿ ಸೀಮೋನನ ಅತ್ತೆಗೆ ಕಠಿಣ ಜ್ವರವಿದ್ದುದರಿಂದ ಅಲ್ಲಿದ್ದವರು ಆಕೆಗೆ ಸಹಾಯ ಮಾಡಬೇಕೆಂದು ಯೇಸುವನ್ನು ಬೇಡಿಕೊಂಡರು.
តទនន្តរំ ស ភជនគេហាទ៑ ពហិរាគត្យ ឝិមោនោ និវេឝនំ ប្រវិវេឝ តទា តស្យ ឝ្វឝ្រូជ៌្វរេណាត្យន្តំ បីឌិតាសីត៑ ឝិឞ្យាស្តទត៌្ហំ តស្មិន៑ វិនយំ ចក្រុះ។
39 ಆಗ ಯೇಸು ಆಕೆಯ ಬಳಿಯಲ್ಲಿ ನಿಂತು ಜ್ವರವನ್ನು ಗದರಿಸಲು ಅದು ಆಕೆಯನ್ನು ಬಿಟ್ಟುಹೋಯಿತು. ಕೂಡಲೇ ಆಕೆಯು ಎದ್ದು ಅವರನ್ನು ಉಪಚರಿಸಿದಳು.
តតះ ស តស្យាះ សមីបេ ស្ថិត្វា ជ្វរំ តជ៌យាមាស តេនៃវ តាំ ជ្វរោៜត្យាក្ឞីត៑ តតះ សា តត្ក្ឞណម៑ ឧត្ថាយ តាន៑ សិឞេវេ។
40 ಸಂಜೆಯಾದ ನಂತರ, ನಾನಾ ವಿಧವಾದ ರೋಗಗಳಿಂದ ಅಸ್ವಸ್ಥರಾದವರೆಲ್ಲರನ್ನು ಜನರು ಯೇಸುವಿನ ಬಳಿಗೆ ಕರೆತಂದರು, ಅವರಲ್ಲಿ ಪ್ರತಿಯೊಬ್ಬನ ಮೇಲೆ ಯೇಸು ತಮ್ಮ ಕೈಗಳನ್ನಿಟ್ಟು ಅವರನ್ನು ಸ್ವಸ್ಥಪಡಿಸಿದರು.
អថ សូយ៌្យាស្តកាលេ ស្វេឞាំ យេ យេ ជនា នានារោគៃះ បីឌិតា អាសន៑ លោកាស្តាន៑ យីឝោះ សមីបម៑ អានិន្យុះ, តទា ស ឯកៃកស្យ គាត្រេ ករមប៌យិត្វា តានរោគាន៑ ចការ។
41 ಅನೇಕರೊಳಗಿಂದ, ದೆವ್ವಗಳು ಸಹ ಹೊರಗೆ ಬಂದು, “ನೀವು ದೇವರ ಪುತ್ರ” ಎಂದು ಅರಚಿದವು. ಯೇಸು ಅವುಗಳನ್ನು ಗದರಿಸಿ ಮಾತನಾಡಬಾರದೆಂದು ಹೇಳಿದರು. ಏಕೆಂದರೆ ಅವರೇ ಕ್ರಿಸ್ತನೆಂದು ಅವುಗಳಿಗೆ ಗೊತ್ತಿತ್ತು.
តតោ ភូតា ពហុភ្យោ និគ៌ត្យ ចីត្ឝព្ទំ ក្ឫត្វា ច ពភាឞិរេ ត្វមីឝ្វរស្យ បុត្រោៜភិឞិក្តត្រាតា; កិន្តុ សោភិឞិក្តត្រាតេតិ តេ វិវិទុរេតស្មាត៑ ការណាត៑ តាន៑ តជ៌យិត្វា តទ្វក្តុំ និឞិឞេធ។
42 ಬೆಳಗಾದ ಮೇಲೆ, ಯೇಸು ಏಕಾಂತ ಸ್ಥಳಕ್ಕೆ ಹೊರಟು ಹೋದರು. ಜನರು ಅವರನ್ನು ಹುಡುಕಿಕೊಂಡು ಅವರ ಬಳಿಗೆ ಬಂದು ತಮ್ಮನ್ನು ಬಿಟ್ಟು ಹೋಗಬಾರದೆಂದು ಅವರನ್ನು ತಡೆದರು.
អបរញ្ច ប្រភាតេ សតិ ស វិជនស្ថានំ ប្រតស្ថេ បឝ្ចាត៑ ជនាស្តមន្វិច្ឆន្តស្តន្និកដំ គត្វា ស្ថានាន្តរគមនាត៌្ហំ តមន្វរុន្ធន៑។
43 ಆದರೆ ಯೇಸು ಅವರಿಗೆ, “ಬೇರೆ ಪಟ್ಟಣಗಳಿಗೂ ದೇವರ ರಾಜ್ಯದ ಸುವಾರ್ತೆಯನ್ನು ನಾನು ಸಾರಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಇದಕ್ಕಾಗಿಯೇ,” ಎಂದರು.
កិន្តុ ស តាន៑ ជគាទ, ឦឝ្វរីយរាជ្យស្យ សុសំវាទំ ប្រចារយិតុម៑ អន្យានិ បុរាណ្យបិ មយា យាតវ្យានិ យតស្តទត៌្ហមេវ ប្រេរិតោហំ។
44 ಅನಂತರ ಯೇಸು ಯೂದಾಯದ ಸಭಾಮಂದಿರಗಳಲ್ಲಿ ಸುವಾರ್ತೆ ಸಾರುತ್ತಾ ಇದ್ದರು.
អថ គាលីលោ ភជនគេហេឞុ ស ឧបទិទេឝ។