< ಲೂಕನು 21 >

1 ಯೇಸು ಗಮನಿಸುತ್ತಿರುವಾಗ, ಐಶ್ವರ್ಯವಂತರು ತಮ್ಮ ಕಾಣಿಕೆಗಳನ್ನು ದೇವಾಲಯದ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದನ್ನು ಕಂಡರು.
Alò, Li leve zye li e te wè moun rich yo ki t ap mete ofrann nan bwat kès nan tanp lan.
2 ಒಬ್ಬ ಬಡ ವಿಧವೆಯು ಸಹ ಎರಡು ಕಾಸುಗಳನ್ನು ಪೆಟ್ಟಿಗೆಯಲ್ಲಿ ಹಾಕುವುದನ್ನು ಯೇಸು ಕಂಡರು.
Konsa, Li te wè yon sèten vèv pòv ki t ap mete de ti pyès monnen an kwiv.
3 ಆಗ ಯೇಸು, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ಈ ಬಡ ವಿಧವೆಯು ಅವರೆಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ.
Li te di: “Anverite Mwen di nou, ke fanm pòv sila a te mete plis pase yo tout;
4 ಏಕೆಂದರೆ ಇವರೆಲ್ಲರೂ ತಮಗಿರುವ ಸಮೃದ್ಧಿಯಲ್ಲಿ, ದೇವರಿಗೆ ಕಾಣಿಕೆಗಳನ್ನು ಹಾಕಿದ್ದಾರೆ. ಆದರೆ ಈಕೆಯು ತನ್ನ ಬಡತನದಲ್ಲಿಯೂ ತನ್ನ ಜೀವನಕ್ಕೆ ಇದ್ದದ್ದನ್ನೆಲ್ಲಾ ಹಾಕಿದ್ದಾಳೆ,” ಎಂದರು.
paske yo te mete ofrann selon abondans yo; men li menm, nan povrete li, li te mete tout sa li te gen pou l viv.”
5 ತರುವಾಯ ಶಿಷ್ಯರಲ್ಲಿ ಕೆಲವರು ದೇವಾಲಯದ ಕುರಿತು ಅದು ಸುಂದರವಾದ ಕಲ್ಲುಗಳಿಂದಲೂ ದೇವರಿಗೆ ಪ್ರತಿಷ್ಠೆಯ ಕೊಡುಗೆಗಳಿಂದಲೂ ಅಲಂಕೃತವಾಗಿದೆ ಎಂದು ಮಾತನಾಡುತ್ತಿದ್ದರು.
Alò, pandan kèk moun t ap pale de tanp lan, kijan li te byen dekore avèk bèl bijou, ak kado konsakre yo, Li te di:
6 ಆದರೆ ಯೇಸು, “ನೀವು ಕಾಣುತ್ತಿರುವ ಇವೆಲ್ಲವೂ ಕೆಡವಿಹಾಕಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಉಳಿಯದ ಕಾಲ ಬರುವುದು,” ಎಂದರು.
Pou bagay sa yo ke nou ap gade la a, jou a va vini lè p ap rete yon sèl wòch sou lòt ki p ap chire dekonble.
7 ಆಗ ಅವರು ಯೇಸುವಿಗೆ, “ಬೋಧಕರೇ, ಇವುಗಳು ಯಾವಾಗ ಆಗುವುವು? ಇವುಗಳು ಸಂಭವಿಸುವುದಕ್ಕಿರುವಾಗ ಯಾವ ಸೂಚನೆ ಇರುವುದು?” ಎಂದು ಕೇಳಿದರು.
Yo te mande L: “Mèt, kilè bagay sa yo ap rive? Epi ki sign k ap demontre ke yo prèt pou rive?”
8 ಅದಕ್ಕೆ ಯೇಸು, “ನೀವು ಮೋಸಹೋಗದಂತೆ ಎಚ್ಚರಿಕೆಯಾಗಿರಿ. ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಅವರು,’ ಎಂದೂ ‘ಸಮಯ ಸಮೀಪಿಸಿದೆ,’ ಎಂದೂ ಹಕ್ಕು ಸಾಧಿಸುವರು. ನೀವು ಅವರನ್ನು ಹಿಂಬಾಲಿಸಬೇಡಿರಿ.
Li te di: “Veye byen pou nou pa twonpe; paske anpil moun ap vini nan non Mwen, e yo va di: ‘Mwen se Li menm’, e, ‘Lè a toupre’. Pa kouri dèyè yo.
9 ನೀವು ಯುದ್ಧಗಳ ಮತ್ತು ಕಲಹಗಳ ವಿಷಯವಾಗಿ ಕೇಳುವಾಗ ದಿಗಿಲುಪಡಬೇಡಿರಿ. ಇವುಗಳೆಲ್ಲಾ ಮೊದಲು ಸಂಭವಿಸಬೇಕು. ಆದರೂ ಕೂಡಲೇ ಅಂತ್ಯ ಬರುವುದಿಲ್ಲ,” ಎಂದರು.
Lè nou tande afè lagè, avèk boulvèsman, pa enkyete; paske fòk bagay sa yo rive avan, men lafen an poko ap rive.”
10 ಯೇಸು ಅವರಿಗೆ, “ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು.
Ankò, Li te di yo: “Nasyon va leve kont nasyon, e wayòm kont wayòm.
11 ವಿವಿಧ ಕಡೆಗಳಲ್ಲಿ ಮಹಾಭೂಕಂಪಗಳೂ ಬರಗಳೂ ವ್ಯಾಧಿಗಳೂ ಇರುವುವು. ಭಯ ಹುಟ್ಟಿಸುವ ಘಟನೆಗಳೂ ಆಕಾಶದಿಂದ ಮಹಾಸೂಚನೆಗಳೂ ಆಗುವುವು.
Va gen gran tranbleman detè, e nan plizyè andwa, epidemi avèk gwo grangou. Va gen gwo laperèz avèk gwo sign ki sòti nan syèl la.
12 “ಆದರೆ ಇವೆಲ್ಲವುಗಳಿಗಿಂತ ಮೊದಲು ಅವರು ನಿಮ್ಮನ್ನು ಹಿಡಿದು, ಹಿಂಸಿಸಿ ಸಭಾಮಂದಿರಗಳಿಗೂ ಸೆರೆಮನೆಗಳಿಗೂ ಒಪ್ಪಿಸಿ, ನನ್ನ ಹೆಸರಿನ ನಿಮಿತ್ತ ಅರಸುಗಳ ಮತ್ತು ಅಧಿಕಾರಿಗಳ ಮುಂದೆ ನಿಮ್ಮನ್ನು ತರುವರು.
Men avan tout bagay sa yo, yo va mete men sou nou, yo va pèsekite nou, e yo va livre nou nan sinagòg avèk prizon yo. Yo va mennen nou devan wa ak gouvènè yo pou koz a non Mwen.
13 ಇದು ಸಾಕ್ಷಿ ನೀಡಲು ನಿಮಗೆ ಸದಾವಕಾಶವಾಗಿರುತ್ತದೆ.
Sa va ouvri yon chemen pou temwayaj nou.
14 ಆಗ ನೀವು ಏನು ಉತ್ತರಕೊಡಬೇಕೆಂದು ಮುಂದಾಗಿ ಚಿಂತಿಸಬೇಕಾಗಿಲ್ಲವೆಂದು ನಿಮ್ಮ ಹೃದಯಗಳಲ್ಲಿ ನಿಶ್ಚಯಮಾಡಿಕೊಳ್ಳಿರಿ.
Pou sa, pran desizyon avan lè pou pa prepare defans nou.
15 ಏಕೆಂದರೆ ನಿಮ್ಮ ವಿರೋಧಿಗಳು ಸಹ ಪ್ರತಿವಾದಿಸಲಾಗದ ಇಲ್ಲವೆ ವಿರೋಧಿಸಲಾಗದ ಮಾತನ್ನೂ ಜ್ಞಾನವನ್ನೂ ನಾನು ನಿಮಗೆ ಕೊಡುವೆನು.
Paske Mwen va bannou pawòl avèk sajès pou okenn nan advèsè nou yo pa kapab reziste ni demanti.
16 ತಂದೆತಾಯಿಗಳೂ ಸಹೋದರರೂ ಬಂಧುಗಳೂ ಸ್ನೇಹಿತರೂ ನಿಮ್ಮನ್ನು ಹಿಡಿದುಕೊಡುವರು ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು.
Men Nou va trayi menm pa paran nou, frè, manm fanmi nou avèk zanmi nou. Yo va mete kèk nan nou a lanmò.
17 ಇದಲ್ಲದೆ ನನ್ನ ನಿಮಿತ್ತ ನಿಮ್ಮನ್ನು ಎಲ್ಲರೂ ದ್ವೇಷಿಸುವರು.
Nou va rayi pa tout moun akoz non Mwen.
18 ಆದರೆ ನಿಮ್ಮ ತಲೆ ಕೂದಲೊಂದಾದರೂ ನಾಶವಾಗುವುದಿಲ್ಲ.
Men pa menm yon cheve nan tèt nou p ap peri.
19 ನೀವು ನಿಮ್ಮ ಸಹನೆಯಿಂದ, ನಿಮ್ಮ ಪ್ರಾಣಗಳನ್ನು ಕಾಪಾಡಿಕೊಳ್ಳುವಿರಿ.
Pa pèseverans nou, nou va reyisi genyen lavi nou.
20 “ಸೈನ್ಯಗಳು ಯೆರೂಸಲೇಮಿಗೆ ಮುತ್ತಿಗೆ ಹಾಕುವುದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲವು ಸಮೀಪಿಸಿದೆ ಎಂದು ತಿಳಿದುಕೊಳ್ಳಿರಿ.
Men lè nou wè Jérusalem antoure pa lame, nan moman sa a, rekonèt ke dezolasyon li toupre.
21 ಆಗ ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ; ಪಟ್ಟಣದ ಮಧ್ಯದಲ್ಲಿರುವವರು ಹೊರಟು ಹೋಗಲಿ; ಇದಲ್ಲದೆ ಹಳ್ಳಿಗಳಲ್ಲಿ ಇರುವವರು ಪಟ್ಟಣಕ್ಕೆ ಪ್ರವೇಶಿಸದೆ ಇರಲಿ.
Answit nan lè sa a, sila ki nan Juda yo va oblije sove pou ale nan mòn yo, sila ki nan mitan vil yo va oblije sòti, e sila ki andeyò yo p ap pou antre nan vil la.
22 ಏಕೆಂದರೆ ಪವಿತ್ರ ವೇದದಲ್ಲಿ ಬರೆದಿರುವವುಗಳೆಲ್ಲವೂ ನೆರವೇರಲು, ಇವು ದಂಡನೆಯ ದಿವಸಗಳಾಗಿವೆ.
Paske jou sa yo se jou vanjans yo, pou tout bagay ki ekri yo kapab vin akonpli.
23 ಆದರೆ ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ! ದೇಶದಲ್ಲಿ ಈ ಜನರು ಮಹಾ ವಿಪತ್ತಿಗೂ ಕೋಪಕ್ಕೂ ಗುರಿಯಾಗುವರು.
Malè a sila yo k ap pote pitit, ak sila yo ki nouris nan jou sa yo, paske va gen gwo twoub sou tè a, e kòlè sou pèp sila a.
24 ಇದಲ್ಲದೆ ಅವರು ಖಡ್ಗಕ್ಕೆ ತುತ್ತಾಗಿ ಬೀಳುವರು ಮತ್ತು ಸೆರೆಯಾಗಿ ಎಲ್ಲಾ ರಾಷ್ಟ್ರಗಳಲ್ಲಿ ಒಯ್ಯುವರು. ಯೆಹೂದ್ಯರಲ್ಲದವರ ಕಾಲ ಪರಿಪೂರ್ಣವಾಗುವವರೆಗೆ ಅವರು ಯೆರೂಸಲೇಮನ್ನು ತುಳಿದುಹಾಕುವರು.
Yo va tonbe pa lam nepe, e yo va mennen kòm kaptif pou antre nan tout nasyon yo. Jérusalem va foule anba pye pa payen yo jiskaske tan payen yo fin acheve.
25 “ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ಸೂಚನೆಗಳು ಕಾಣಿಸಿಕೊಳ್ಳುವುವು. ಭೂಮಿಯಲ್ಲಾದರೋ, ಮೊರೆಯುವ ತೆರೆಗಳ ಮತ್ತು ಭೋರ್ಗರೆಯುವ ಸಮುದ್ರದ ನಿಮಿತ್ತ ಜನಾಂಗಗಳು ದಿಕ್ಕುತೋಚದೆ ಸಂಕಟಕ್ಕೆ ಒಳಗಾಗುವರು.
Konsa, va gen sign nan solèy la, lalin ak zetwal yo, e sou latè, sezisman pami nasyon yo, ak gwo malantandi akoz laraj lanmè a ak lanm lanmè yo.
26 ಆಕಾಶದ ಶಕ್ತಿಗಳು ಕದಲುವುದರಿಂದ ಲೋಕಕ್ಕೆ ಏನು ಸಂಭವಿಸುವುದೋ ಎಂಬ ಭಯಭೀತಿಯಿಂದ, ಮಾನವರು ಮನಗುಂದಿಹೋಗುವರು.
Moun va pèdi kapasite akoz laperèz, avèk twòp refleksyon sou sa k ap rive nan mond lan. Paske pouvwa nan syèl yo ap vin ebranle.
27 ಆಗ ಮನುಷ್ಯಪುತ್ರನಾದ ನಾನು ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ ಮೇಘದಲ್ಲಿ ಬರುವುದನ್ನು ಜನರು ಕಾಣುವರು.
Answit yo va wè Fis a Lòm nan k ap vini nan yon nyaj avèk pouvwa, ak gran glwa.
28 ಈ ಸಂಗತಿಗಳು ಸಂಭವಿಸಲು ತೊಡಗುವಾಗ, ತಲೆಯೆತ್ತಿ ನಿಲ್ಲಿರಿ. ಏಕೆಂದರೆ ನಿಮ್ಮ ವಿಮೋಚನೆಯು ಸಮೀಪಿಸಿತು,” ಎಂದರು.
Men lè bagay sa yo kòmanse fèt, ranje kò nou, e leve tèt nou, paske delivrans nou ap toupre.
29 ಯೇಸು ಶಿಷ್ಯರಿಗೆ ಈ ಸಾಮ್ಯವನ್ನು ಹೇಳಿದರು: “ಅಂಜೂರದ ಮರವನ್ನು ಮತ್ತು ಇತರ ಮರಗಳನ್ನು ಗಮನಿಸಿರಿ.
Answit Li te di yo yon parabòl: Veye byen pye figye frans lan, avèk tout pyebwa yo.
30 ಅವುಗಳ ಎಲೆಗಳು ಚಿಗುರುವುದನ್ನು ಕಾಣುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವಾಗಿಯೇ ತಿಳಿದುಕೊಳ್ಳುತ್ತೀರಿ.
Depi yo pouse fèy, nou va wè sa, e nou vakonnen pou kont nou ke gran sezon chalè a toupre kounye a.
31 ಅದೇ ಪ್ರಕಾರ, ಇವೆಲ್ಲ ಸಂಭವಿಸುವುದನ್ನು ನೀವು ಕಾಣುವಾಗ, ದೇವರ ರಾಜ್ಯ ಸಮೀಪಿಸಿತೆಂದು ತಿಳಿದುಕೊಳ್ಳಿರಿ.
Menm jan an, nou menm tou, lè nou wè bagay sa yo ap fèt, rekonèt ke wayòm Bondye a toupre.
32 “ಇವೆಲ್ಲವೂ ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
Anverite Mwen di nou, ke jenerasyon sila a p ap pase avan tout bagay sa yo rive.
33 ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ.
Syèl la avèk tè a va pase, men pawòl Mwen yo p ap pase.
34 “ನಿಮ್ಮ ಮೇಲೆ ಆ ದಿನವು ಉರುಲಿನಂತೆ ಫಕ್ಕನೆ ಬಾರದಂತೆ ನೀವು ಅತಿಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ, ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ.
Veye nou, swa kè nou va vin lou nan banbòch ak bwason avèk enkyetid lavi yo, paske jou sa a va vini sou nou sibitman.
35 ಅದು ಭೂಮಿಯ ಮೇಲೆ ವಾಸವಾಗಿರುವವರೆಲ್ಲರ ಮೇಲೆ ಬರುವುದು.
Paske li va vini kon yon piyej sou tout sila yo ki rete sou fas tout tè a.
36 ಆದಕಾರಣ ಸಂಭವಿಸುವುದಕ್ಕಿರುವ ಇವೆಲ್ಲವುಗಳಿಂದ, ನೀವು ತಪ್ಪಿಸಿಕೊಳ್ಳುವುದಕ್ಕೆ ಯೋಗ್ಯರೆಂದು ಎಣಿಸಿಕೊಳ್ಳುವಂತೆಯೂ ಮನುಷ್ಯಪುತ್ರನಾದ ನನ್ನ ಮುಂದೆ ನಿಂತುಕೊಳ್ಳುವಂತೆಯೂ ಯಾವಾಗಲೂ ಎಚ್ಚರವಾಗಿದ್ದು ಪ್ರಾರ್ಥಿಸುತ್ತಾ ಇರಿ,” ಎಂದರು.
Men rete vijilan tout tan avèk lapriyè pou nou kapab gen fòs pou chape de tout bagay sila yo ki prèt pou rive, e pou kanpe devan Fis a Lòm nan.”
37 ಯೇಸು ಹಗಲಿನಲ್ಲಿ ದೇವಾಲಯದೊಳಗೆ ಬೋಧಿಸುತ್ತಾ ಇದ್ದು, ರಾತ್ರಿಯಲ್ಲಿ ಹೊರಟುಹೋಗಿ ಓಲಿವ್ ಗುಡ್ಡದಲ್ಲಿ ವಾಸಿಸುತ್ತಿದ್ದರು.
Alò pandan jounen an, Li t ap enstwi nan tanp lan; men nan aswè, Li te konn ale deyò pou pase nwit lan sou mòn ki rele Olivye a.
38 ಜನರೆಲ್ಲರೂ ಬೆಳಗಿನ ಜಾವದಲ್ಲಿ ಎದ್ದು ಯೇಸುವಿನ ಉಪದೇಶವನ್ನು ಕೇಳುವುದಕ್ಕಾಗಿ ದೇವಾಲಯಕ್ಕೆ ಬರುತ್ತಿದ್ದರು.
Epi tout pèp la te toujou leve granmmaten pou vin kote Li nan tanp lan pou koute Li.

< ಲೂಕನು 21 >