< ಲೂಕನು 17 >

1 ಯೇಸು ತಮ್ಮ ಶಿಷ್ಯರಿಗೆ: “ಜನರಿಗೆ ಪಾಪದ ಶೋಧನೆಗಳು ಬಂದೇ ಬರುತ್ತವೆ, ಆದರೆ ಅವು ಯಾರಿಂದ ಬರುತ್ತವೋ ಅವರಿಗೆ ಕಷ್ಟ.
І сказав Він до учнів Своїх: „Неможливо, щоб спокуси не мали прийти; але горе тому́, через кого приходять вони!
2 ಅಂಥವರು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಕ್ಕೆ ನಡೆಸುವುದಕ್ಕಿಂತ ಅವರ ಕೊರಳಿಗೆ ಬೀಸುವ ಕಲ್ಲನ್ನು ನೇತುಹಾಕಿ ಅವರನ್ನು ಸಮುದ್ರದೊಳಗೆ ಬಿಸಾಡುವುದು ಉತ್ತಮವಾಗಿರುವುದು.
Краще б такому було́, коли б жо́рно млино́ве на шию йому почепити та й кинути в море, аніж щоб спокусив він одно́го з мали́х цих!
3 ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಿಂದಿರಿ. “ನಿನ್ನ ಸಹೋದರನು ಅಥವಾ ಸಹೋದರಿ ನಿನಗೆ ವಿರೋಧವಾಗಿ ಪಾಪಮಾಡಿದರೆ, ಅವರನ್ನು ಗದರಿಸು; ಅವರು ಪಶ್ಚಾತ್ತಾಪಪಟ್ಟರೆ, ಅವರನ್ನು ಕ್ಷಮಿಸು.
Уважайте на себе! Коли провини́ться твій брат, докори́ йому, а коли він покається, то вибач йому.
4 ಅವರು ಒಂದು ದಿನದಲ್ಲಿ ಏಳು ಸಾರಿ ಪಾಪಮಾಡಿ, ಏಳು ಸಾರಿಯೂ ನಿನ್ನ ಬಳಿಗೆ ಬಂದು, ‘ನಾನು ಪಶ್ಚಾತ್ತಾಪಪಡುತ್ತೇನೆ,’ ಎಂದು ಹೇಳಿದರೆ ನೀನು ಅವರನ್ನು ಕ್ಷಮಿಸಬೇಕು,” ಎಂದರು.
І хоча б сім раз денно він провинивсь проти тебе, і сім раз звернувся до тебе, говорячи: „Каюся“, — вибач йому́!“
5 ಆಗ ಅಪೊಸ್ತಲರು ಕರ್ತದೇವರಿಗೆ, “ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ,” ಎಂದರು.
І сказали апо́столи Господу: „Дода́й Ти нам віри!“
6 ಅದಕ್ಕೆ ಯೇಸು, “ಸಾಸಿವೆ ಕಾಳಿನಷ್ಟು ನಂಬಿಕೆ ನಿಮಗಿರುವುದಾದರೆ, ನೀವು ಈ ಅತ್ತಿಮರಕ್ಕೆ, ‘ನೀನು ಬೇರುಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೋ,’ ಎಂದು ಹೇಳುವುದಾದರೆ ಅದು ನಿಮಗೆ ವಿಧೇಯವಾಗುವುದು.
А Господь відказав: „Коли б мали ви віру, хоч як зе́рно гірчи́чне, і сказали шовко́виці цій: „Ви́рвися з коренем і посадися до моря“, — то й послухала б вас!
7 “ನಿಮ್ಮಲ್ಲಿ ಯಾವನಿಗಾದರೂ ಒಬ್ಬ ಕೆಲಸದವನಿರಲಾಗಿ, ಅವನು ಹೊಲದ ಕೆಲಸ ಅಥವಾ ಕುರಿ ಮೇಯಿಸಿ ಮನೆಗೆ ಬಂದ ಕೂಡಲೇ ಯಜಮಾನನು ಕೆಲಸದವನಿಗೆ, ‘ಬಾ ಊಟಕ್ಕೆ ಕುಳಿತುಕೋ,’ ಎಂದು ಹೇಳುವುದುಂಟೇ?
Хто ж із вас, мавши раба, що оре́ чи пасе, скаже йому, як він ве́рнеться з поля: „Негайно йди та сідай до столу“?
8 ಹಾಗೆ ಹೇಳದೆ, ‘ನೀನು ಊಟ ತಯಾರುಮಾಡಿ, ನೀನೂ ಸಿದ್ಧವಾಗಿ, ನಾನು ತಿಂದು ಕುಡಿಯುವ ತನಕ ನನ್ನ ಸೇವೆಮಾಡು; ಆಮೇಲೆ ನೀನು ಊಟಮಾಡು,’ ಎಂದು ಅವನಿಗೆ ಹೇಳುವಿರಲ್ಲವೇ?
Але чи ж не скаже йому: „Приготуй що вече́ряти, і підпережись, і мені прислуго́вуй, аж поки я їстиму й питиму, а пото́му ти сам будеш їсти та пити“?
9 ತನಗೆ ಅಪ್ಪಣೆ ಕೊಟ್ಟವುಗಳನ್ನು ಆ ಕೆಲಸದವನು ಮಾಡಿದ್ದಕ್ಕೆ ಯಜಮಾನನು ಅವನಿಗೆ ಕೃತಜ್ಞತೆ ಸಲ್ಲಿಸುವನೋ?
Чи ж він дякує тому рабові, що наказане виконав?
10 ಅದೇ ರೀತಿಯಾಗಿ, ನಿಮಗೆ ಆಜ್ಞಾಪಿಸಿದವುಗಳನ್ನೆಲ್ಲಾ ನೀವು ಮಾಡಿದ ಮೇಲೆ, ‘ನಾವು ಅಯೋಗ್ಯರಾದ ಆಳುಗಳಷ್ಟೇ, ನಾವು ಮಾಡಬೇಕಾದ ಕರ್ತವ್ಯವನ್ನೇ ಮಾಡಿದ್ದೇವೆ ಎಂದು ನೀವು ಹೇಳಿರಿ,’” ಎಂದು ಹೇಳಿದರು.
Так і ви, коли зробите все вам нака́зане, то кажіть: „Ми — нікчемні раби, бо зробили лиш те, що повинні зробити були́!“
11 ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ, ಸಮಾರ್ಯ ಮತ್ತು ಗಲಿಲಾಯ ಪ್ರಾಂತಗಳ ಮಧ್ಯದಲ್ಲಿದ್ದ ಹಳ್ಳಿಯ ಮಾರ್ಗವಾಗಿ ಪ್ರಯಾಣಮಾಡಿದರು.
І сталось, коли Він ішов до Єрусалиму, то прохо́див поміж Самарі́єю та Галілеєю.
12 ಯೇಸು ಒಂದು ಹಳ್ಳಿಯನ್ನು ಪ್ರವೇಶಿಸಿದಾಗ, ಹತ್ತು ಮಂದಿ ಕುಷ್ಠರೋಗಿಗಳು ಯೇಸುವಿನ ಕಡೆಗೆ ಬಂದು ದೂರದಲ್ಲಿ ನಿಂತುಕೊಂಡು,
І, коли вхо́див до одно́го села, перестріли Його десять мужів, слаби́х на проказу, що стали здалека.
13 “ಯೇಸುವೇ, ಗುರುವೇ, ನಮ್ಮನ್ನು ಕರುಣಿಸು!” ಎಂದು ತಮ್ಮ ಧ್ವನಿಯೆತ್ತಿ ಕೂಗಿದರು.
І голос піднесли вони та й казали: „Ісусе, Наставнику, — змилуйсь над нами!“
14 ಯೇಸು ಅವರನ್ನು ನೋಡಿ, “ಹೋಗಿ, ಯಾಜಕರಿಗೆ ನಿಮ್ಮನ್ನು ತೋರಿಸಿಕೊಳ್ಳಿರಿ,” ಎಂದರು. ಅವರು ಹೋಗುತ್ತಿರುವಾಗಲೇ ಸ್ವಸ್ಥರಾದರು.
І, побачивши їх, Він промовив до них: „Підіть і покажіться священикам!“І сталось, коли вони йшли, то очи́стились.
15 ಅವರಲ್ಲಿ ಒಬ್ಬನು, ತಾನು ಸ್ವಸ್ಥವಾದದ್ದನ್ನು ಕಂಡು, ಮಹಾಶಬ್ದದಿಂದ ದೇವರನ್ನು ಮಹಿಮೆಪಡಿಸುತ್ತಾ ಹಿಂದಿರುಗಿ ಬಂದು,
Один же з них, як побачив, що видужав, то верну́вся, і почав гучни́м голосом сла́вити Бога.
16 ಯೇಸುವಿನ ಪಾದಕ್ಕೆ ಅಡ್ಡಬಿದ್ದು, ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದನು. ಅವನೋ ಸಮಾರ್ಯದವನಾಗಿದ್ದನು.
І припав він обличчям до ніг Його, складаючи дяку Йому. А то самаряни́н був...
17 ಯೇಸು ಅವನಿಗೆ, “ಆ ಎಲ್ಲಾ ಹತ್ತು ಮಂದಿ ಸ್ವಸ್ಥರಾದರಲ್ಲವೆ? ಉಳಿದ ಒಂಬತ್ತು ಮಂದಿ ಎಲ್ಲಿ?
Ісус же промовив у відповідь: „Чи не десять очи́стилось, — а дев'ять же де́?
18 ದೇವರನ್ನು ಮಹಿಮೆಪಡಿಸುವುದಕ್ಕೆ ಈ ವಿದೇಶಿಯೇ ಹೊರತು ಯಾರೂ ಹಿಂದಿರುಗಲಿಲ್ಲವೇ?”
Чому́ не вернулись вони хвалу́ Богові віддати, крім цього́ чужинця?“
19 ಎಂದು ಹೇಳಿ ಅವನಿಗೆ, “ಎದ್ದು ಹೋಗು; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದರು.
І сказав Він йому: „Підведися й іди: твоя віра спасла тебе!“
20 ಒಂದು ದಿನ, ದೇವರ ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಯೇಸುವನ್ನು ಕೇಳಲು, ಅವರಿಗೆ ಉತ್ತರವಾಗಿ ಯೇಸು, “ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವುದಿಲ್ಲ,
А як фарисеї спитали Його, коли Царство Боже при́йде, то Він їм відповів і сказав: „Царство Боже не при́йде помітно,
21 ‘ಇಗೋ ಇಲ್ಲಿದೆ,’ ಇಲ್ಲವೆ ‘ಅಗೋ ಅಲ್ಲಿದೆ,’ ಎಂದು ಹೇಳುವುದಕ್ಕಾಗುವುದಿಲ್ಲ ಏಕೆಂದರೆ ದೇವರ ರಾಜ್ಯವು ನಿಮ್ಮ ನಡುವೆ ಇದೆ,” ಎಂದರು.
і не скажуть: „Ось тут“, або: „Там“. Бо Боже Царство всере́дині вас!“
22 ಯೇಸು ತಮ್ಮ ಶಿಷ್ಯರಿಗೆ, “ಮನುಷ್ಯಪುತ್ರನಾದ ನನ್ನ ದಿವಸಗಳಲ್ಲಿ ಒಂದನ್ನು ಕಾಣಬೇಕೆಂದು ನೀವು ಬಯಸುವ ಕಾಲ ಬರುತ್ತದೆ, ಆದರೂ ನೀವು ಅದನ್ನು ಕಾಣುವುದಿಲ್ಲ.
І сказав Він до учнів: „Прийдуть дні, коли побажаєте бачити один з днів Сина Лю́дського, — та не побачите.
23 ಜನರು ನಿಮಗೆ, ‘ಇಲ್ಲಿ ಇದ್ದಾನೆ!’ ಇಲ್ಲವೆ, ‘ಅಲ್ಲಿ ಇದ್ದಾನೆ’ ಎಂದು ಹೇಳಿದರೆ ಅವರ ಹಿಂದೆ ಓಡಬೇಡಿರಿ.
І скажуть до вас: „Ось тут“, чи: „Ось там“, — не йдіть, і за ним не біжіть!
24 ಏಕೆಂದರೆ ಮಿಂಚು ಆಕಾಶದ ಒಂದು ಭಾಗದಲ್ಲಿ ಮಿಂಚಿ ಮತ್ತೊಂದು ಭಾಗದಲ್ಲಿ ಹೇಗೆ ಹೊಳೆಯುತ್ತದೆಯೋ ಹಾಗೆಯೇ ಮನುಷ್ಯಪುತ್ರನಾದ ನಾನು ಬರುವ ದಿನದಲ್ಲಿ ಕಾಣಿಸಿಕೊಳ್ಳುವೆನು.
Бо як бли́скавка, бли́снувши, світить із о́дного кра́ю під небом до другого кра́ю під небом, так буде Свого дня й Син Лю́дський.
25 ಆದರೆ ನಾನು ಮೊದಲು ಅನೇಕ ಕಷ್ಟಗಳನ್ನು ಅನುಭವಿಸಿ ಈ ಸಂತತಿಯವರಿಂದ ತಿರಸ್ಕಾರ ಹೊಂದುವುದು ಅಗತ್ಯವಾಗಿದೆ.
А перше належить багато страждати Йому, і відцурається рід цей від Нього.
26 “ನೋಹನ ದಿವಸಗಳು ಇದ್ದಂತೆಯೇ, ಅದೇ ರೀತಿಯಲ್ಲಿ ಮನುಷ್ಯಪುತ್ರನಾದ ನನ್ನ ದಿವಸಗಳಲ್ಲಿಯೂ ಇರುವುದು.
І, як було за днів Но́євих, то буде так само й за днів Сина Лю́дського:
27 ನೋಹನು ನಾವೆಯಲ್ಲಿ ಸೇರಿದ ದಿನದವರೆಗೂ ಅವರು ತಿನ್ನುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ, ಮದುವೆ ಮಾಡಿಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ನಾವೆಯ ಹೊರಗಡೆ ಇದ್ದವರೆಲ್ಲರನ್ನು ನಾಶಮಾಡಿತು.
їли, пили, женилися, заміж вихо́дили, аж до того дня, коли „Ной увійшов до ковче́гу“; прийшов же потоп, — і всіх вигубив.
28 “ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಜನರೆಲ್ಲರೂ ತಿನ್ನುತ್ತಿದ್ದರು, ಕುಡಿಯುತ್ತಿದ್ದರು, ಕೊಂಡುಕೊಳ್ಳುತ್ತಿದ್ದರು, ಮಾರುತ್ತಿದ್ದರು, ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.
Так само, як було за днів Ло́тових: їли, пили, купували, продавали, садили, будували;
29 ಆದರೆ ಲೋಟನು ಸೊದೋಮಿನಿಂದ ತೆರಳಿದ ದಿನವೇ ಆಕಾಶದಿಂದ ಬೆಂಕಿಯೂ ಗಂಧಕವೂ ಸುರಿದು ಎಲ್ಲರನ್ನು ನಾಶಮಾಡಿತು.
того ж дня, як Лот вийшов із Содо́му, — огонь із сіркою з неба лину́в, і всіх погубив.
30 “ಮನುಷ್ಯಪುತ್ರನಾದ ನನ್ನ ಪ್ರತ್ಯಕ್ಷತೆಯ ದಿನದಲ್ಲಿಯೂ ಹಾಗೆ ಇರುವುದು.
Так буде й того дня, як Син Лю́дський з'я́виться!
31 ಆ ದಿನದಲ್ಲಿ ಮನೆಯ ಮಾಳಿಗೆಯ ಮೇಲೆ ಇದ್ದವನು, ಮನೆಯಲ್ಲಿದ್ದ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಕೆಳಗಿಳಿದು ಬರಬಾರದು. ಹಾಗೆಯೇ, ಹೊಲದಲ್ಲಿದ್ದವನು ಹಿಂದಿರುಗಿ ಬರಬಾರದು.
Хто буде того дня на домі, а речі його будуть у домі, нехай їх забрати не зла́зить. Хто ж на полі, так само нехай назад не верта́ється, —
32 ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ!
пам'ятайте про Ло́тову дружи́ну!
33 ಯಾರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುವರೋ ಅವರು ಅದನ್ನು ಕಳೆದುಕೊಳ್ಳುವರು ಮತ್ತು ಯಾರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವರೋ ಅವರು ಅದನ್ನು ಕಾಪಾಡಿಕೊಳ್ಳುವರು.
Хто дба́тиме зберегти свою душу, — той погубить її, а коли хто погубить, — той оживить її.
34 ಆ ರಾತ್ರಿಯಲ್ಲಿ ಇಬ್ಬರು ಒಂದೇ ಹಾಸಿಗೆಯಲ್ಲಿ ಇರುವರು; ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು.
Кажу вам: удвох будуть ночі тієї на о́дному ліжкові: один ві́зьметься, а другий поли́шиться.
35 ಇಬ್ಬರು ಹೆಂಗಸರು ಜೊತೆಯಾಗಿ ಕಾಳುಬೀಸುತ್ತಿರುವರು; ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬಳನ್ನು ಬಿಡಲಾಗುವುದು.
Дві моло́тимуть ра́зом, — одна ві́зьметься, а друга полишиться.
36 ಇಬ್ಬರು ಹೊಲದಲ್ಲಿರುವರು. ಒಬ್ಬರನ್ನು ತೆಗೆದುಕೊಳ್ಳಲಾಗುವುದು ಮತ್ತೊಬ್ಬರನ್ನು ಬಿಡಲಾಗುವುದು, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
Двоє будуть на полі, — один ві́зьметься, а другий полишиться!“
37 ಅವರು ಯೇಸುವಿಗೆ, “ಕರ್ತದೇವರೇ, ಇದು ಎಲ್ಲಿ ನಡೆಯುವುದು?” ಎಂದು ಕೇಳಲು ಯೇಸು ಅವರಿಗೆ, “ಹೆಣ ಎಲ್ಲಿದೆಯೋ, ಅಲ್ಲಿ ಹದ್ದುಗಳು ಬಂದು ಸೇರುತ್ತವೆ,” ಎಂದರು.
І казали вони Йому в відповідь: „Де, Господи?“А Він відказав їм: „Де труп, там зберуться й орли“.

< ಲೂಕನು 17 >