< ಲೂಕನು 11 >

1 ಯೇಸು ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡಿ ಮುಗಿಸಿದ ಮೇಲೆ, ಅವರ ಶಿಷ್ಯರಲ್ಲಿ ಒಬ್ಬನು ಅವರಿಗೆ, “ಕರ್ತದೇವರೇ, ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆಯೇ ನಮಗೂ ಪ್ರಾರ್ಥನೆಮಾಡುವುದಕ್ಕೆ ಕಲಿಸಿರಿ,” ಎಂದು ಕೇಳಿದನು.
І сталось, як молився Він у місці одно́му, і коли перестав, озвався до Нього один із Його у́чнів: „Господи, навчи нас молитися, як і Іван навчив своїх учнів.“
2 ಯೇಸು ಅವರಿಗೆ, “ನೀವು ಪ್ರಾರ್ಥನೆ ಮಾಡುವಾಗ ಈ ರೀತಿಯಾಗಿ ಪ್ರಾರ್ಥಿಸಿರಿ, “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿಮ್ಮ ನಾಮವು ಪರಿಶುದ್ಧವೆಂದು ಎಣಿಕೆಯಾಗಿರಲಿ, ನಿಮ್ಮ ರಾಜ್ಯವು ಬರಲಿ. ನಿಮ್ಮ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.
Він же промовив до них: „Коли молитеся, говоріть: „Отче наш, що на небі! Нехай святиться Ім'я́ Твоє, нехай при́йде Царство Твоє, нехай бу́де воля Твоя, як на небі, так і на землі.
3 ನಮ್ಮ ಅನುದಿನದ ಆಹಾರವನ್ನು ನಮಗೆ ಪ್ರತಿದಿನವೂ ದಯಪಾಲಿಸಿರಿ.
Хліба нашого щоденного дай нам на кожний день.
4 ನಮಗೆ ಪಾಪಮಾಡಿದವರನ್ನು, ನಾವು ಕ್ಷಮಿಸಿದಂತೆಯೇ ನಮ್ಮ ಪಾಪಗಳನ್ನು ಕ್ಷಮಿಸಿರಿ. ನಮ್ಮನ್ನು ಶೋಧನೆಯೊಳಗೆ ಸೇರಿಸದೆ, ಕೇಡಿನಿಂದ ನಮ್ಮನ್ನು ತಪ್ಪಿಸಿ.”
І прости нам наші гріхи́, бо й самі ми прощаємо кожному боржнико́ві нашому. І не введи нас у випробо́вування, але визволи нас від лукавого!“
5 ಯೇಸು ಅವರಿಗೆ, “ನಿಮ್ಮಲ್ಲಿ ಯಾವನಿಗಾದರೂ ಒಬ್ಬ ಸ್ನೇಹಿತನಿರಲಾಗಿ, ಮಧ್ಯರಾತ್ರಿಯಲ್ಲಿ ಅವನ ಬಳಿಗೆ ಹೋಗಿ ಅವನಿಗೆ, ‘ಸ್ನೇಹಿತನೇ, ಮೂರು ರೊಟ್ಟಿಗಳನ್ನು ನನಗೆ ಸಾಲವಾಗಿ ಕೊಡು;
І сказав Він до них: „Хто з вас матиме при́ятеля, і пі́де до нього опі́вночі, і скаже йому: „Позич мені, друже, три хліби́,
6 ಏಕೆಂದರೆ ನನ್ನ ಒಬ್ಬ ಸ್ನೇಹಿತನು ಪ್ರಯಾಣಮಾಡಿ ನನ್ನ ಬಳಿಗೆ ಬಂದಿದ್ದಾನೆ, ಅವನಿಗೆ ಬಡಿಸುವುದಕ್ಕೆ ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು
бо прийшов із дороги до мене мій при́ятель, я ж не маю, що́ дати йому“.
7 ಅವನು ಒಳಗಿನಿಂದಲೇ ಇವನಿಗೆ ಉತ್ತರವಾಗಿ, ‘ನನ್ನನ್ನು ತೊಂದರೆಪಡಿಸಬೇಡ. ಬಾಗಿಲು ಈಗ ಮುಚ್ಚಿದೆ, ಹಾಸಿಗೆಯಲ್ಲಿ ನನ್ನ ಮಕ್ಕಳು ನನ್ನ ಜೊತೆ ಮಲಗಿದ್ದಾರೆ. ನಾನೆದ್ದು ಕೊಡಲಾರೆನು,’ ಎಂದು ಹೇಳುವನು.
А той із сере́дини в відповідь скаже: „Не роби мені кло́поту, — уже за́мкнені двері, і мої діти зо мною на ліжкові. Не можу я встати та дати тобі“.
8 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಅವನು ಸ್ನೇಹಿತನಾಗಿರುವುದರಿಂದ ಎದ್ದು ಇವನಿಗೆ ಕೊಡದೆಹೋದರೂ ಮೇಲಿಂದ ಮೇಲೆ ನಾಚಿಕೆಪಡದೆ ಬೇಡುವುದರಿಂದ ಎದ್ದು ಇವನಿಗೆ ಬೇಕಾದಷ್ಟು ಕೊಡುವನು.
Кажу вам: коли він не встане, і не дасть ради дружби йому, то за докуча́ння його він устане та й дасть йому, скільки той потребу́є.
9 “ಕೇಳಿಕೊಳ್ಳಿರಿ ನಿಮಗೆ ಕೊಡಲಾಗುವುದು; ಹುಡುಕಿರಿ ನಿಮಗೆ ಸಿಗುವುದು; ತಟ್ಟಿರಿ ನಿಮಗೆ ಬಾಗಿಲು ತೆರೆಯಲಾಗುವುದು.
І Я вам кажу́: просіть, — і буде вам да́но, шукайте — і знайдете, стукайте — і відчинять вам!
10 ಬೇಡಿಕೊಳ್ಳುವ ಪ್ರತಿಯೊಬ್ಬರು ಪಡೆದುಕೊಳ್ಳುವರು; ಹುಡುಕುವವರಿಗೆ ಸಿಗುವುದು; ತಟ್ಟುವವರಿಗೆ ಬಾಗಿಲು ತೆರೆಯಲಾಗುವುದು.
Бо кожен, хто просить — одержує, хто шукає — знахо́дить, а тому́, хто стукає — відчинять.
11 “ನಿಮ್ಮಲ್ಲಿ ತಂದೆಯಾಗಿರುವಾತನು, ತನ್ನ ಮಗನು ರೊಟ್ಟಿಯನ್ನು ಕೇಳಿದರೆ ಮಗನಿಗೆ ಕಲ್ಲನ್ನು ಕೊಡುವನೇ, ಮೀನನ್ನು ಕೇಳಿದರೆ, ಮೀನಿಗೆ ಬದಲಾಗಿ ಹಾವನ್ನು ಕೊಡುವನೇ?
І котри́й з вас, батьків, як син хліба проси́тиме, подасть йому каменя? Або, як проситиме риби, замість риби подасть йому га́дину?
12 ಇಲ್ಲವೆ ಮೊಟ್ಟೆಯನ್ನು ಕೇಳಿದರೆ, ಅವನಿಗೆ ಚೇಳನ್ನು ಕೊಡುವನೇ?
Або, як яйця́ він проситиме, дасть йому скорпіо́на?
13 ಹಾಗಾದರೆ ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯವುಗಳನ್ನು ಕೊಡಬಲ್ಲವರಾದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ಎಷ್ಟೋ ಹೆಚ್ಚಾಗಿ ತಮ್ಮನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮರನ್ನು ದಯಪಾಲಿಸುವರಲ್ಲವೇ!” ಎಂದು ನಾನು ನಿಮಗೆ ಹೇಳುತ್ತೇನೆ ಎಂದರು.
Отож, коли ви, бувши злі, потра́пите добрі дари́ своїм дітям давати, — скільки ж більше Небесний Отець подасть Духа Святого всім тим, хто проситиме в Нього?“
14 ಯೇಸು ಒಂದು ಮೂಕದೆವ್ವವನ್ನು ಹೊರಗೆ ಓಡಿಸುತ್ತಿದ್ದರು. ಆ ದೆವ್ವವು ಹೊರಟುಹೋದ ಮೇಲೆ, ಆ ಮೂಕನು ಮಾತನಾಡಿದನು. ಅದಕ್ಕೆ ಜನರು ಆಶ್ಚರ್ಯಪಟ್ಟರು.
Раз виго́нив Він де́мона, який був німий. І коли демон вийшов, німий заговорив. А наро́д дивувався.
15 ಆದರೆ ಅವರಲ್ಲಿ ಕೆಲವರು, “ದೆವ್ವಗಳ ಅಧಿಪತಿಯಾದ ಬೆಲ್ಜೆಬೂಲನಿಂದ ಈತನು ದೆವ್ವಗಳನ್ನು ಓಡಿಸುತ್ತಾನೆ,” ಎಂದರು.
А деякі з них гомоніли: „Виганяє Він де́монів силою Вельзеву́ла, князя де́монів“.
16 ಇನ್ನು ಕೆಲವರು ಯೇಸುವನ್ನು ಪರೀಕ್ಷಿಸುವವರಾಗಿ ಪರಲೋಕದಿಂದ ಒಂದು ಸೂಚಕಕಾರ್ಯವನ್ನು ತೋರಿಸಬೇಕೆಂದು ಕೇಳಿದರು.
А інші, випробовуючи, хотіли від Нього ознаки із неба.
17 ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದು: “ತನಗೆ ತಾನೇ ವಿರೋಧವಾಗಿ ವಿಭಾಗಗೊಂಡರೆ ಪ್ರತಿಯೊಂದು ರಾಜ್ಯವು ನಾಶವಾಗುವುದು, ಒಂದು ಮನೆಯು ತನಗೆ ತಾನೇ ವಿರೋಧವಾಗಿ ವಿಭಾಗವಾದರೆ, ಅದು ಬಿದ್ದುಹೋಗುವುದು.
Він же знав думки їхні, і промовив до них: „Кожне царство, само проти себе поді́лене, запусті́є, і дім на дім упаде́.
18 ಸೈತಾನನು ಸಹ ತನಗೆ ತಾನೇ ವಿರೋಧವಾಗಿ ತನ್ನಲ್ಲಿ ವಿಭಾಗವಾದರೆ, ಅವನ ರಾಜ್ಯವು ನಿಲ್ಲುವುದು ಹೇಗೆ? ಏಕೆಂದರೆ ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಓಡಿಸುತ್ತೇನೆಂದು ನೀವು ಹೇಳುತ್ತೀರಲ್ಲಾ.
А коли й сатана́ поділився сам супроти себе, — як стоятиме царство його? А ви кажете, що Вельзеву́лом виго́ню Я демонів.
19 ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಓಡಿಸುವುದಾದರೆ, ನಿಮ್ಮ ಪುತ್ರರು ಯಾರಿಂದ ಅವುಗಳನ್ನು ಓಡಿಸುತ್ತಾರೆ? ಆದ್ದರಿಂದ, ನಿಮ್ಮವರೇ ನಿಮಗೆ ನ್ಯಾಯಾಧಿಪತಿಗಳಾಗಿರುವರು.
Коли ж Вельзеву́лом виго́ню Я демонів, то чим виганяють їх ваші сини? Тому вони стануть вам су́ддями.
20 ನಾನು ದೇವರ ಬಲದಿಂದಲೇ ದೆವ್ವಗಳನ್ನು ಓಡಿಸುವುದಾದರೆ, ದೇವರ ರಾಜ್ಯವು ನಿಸ್ಸಂದೇಹವಾಗಿ ನಿಮ್ಮ ಬಳಿಗೆ ಬಂದಿದೆಯಲ್ಲಾ.
А коли пальцем Божим виго́ню Я де́монів, то справді прийшло до вас Боже Царство.
21 “ಆಯುಧಗಳನ್ನು ಧರಿಸಿಕೊಂಡು, ಬಲಿಷ್ಠನಾದವನೊಬ್ಬನು ತನ್ನ ಮನೆಯನ್ನು ಕಾಯುವುದಾದರೆ ಅವನ ಸೊತ್ತು ಸುರಕ್ಷಿತವಾಗಿರುವುದು.
Коли сильний збройно свій двір стереже, то в безпе́ці маєток його.
22 ಆದರೆ ಅವನಿಗಿಂತ ಬಲಿಷ್ಠನು ಅವನ ಮೇಲೆ ಬಂದು ಅವನನ್ನು ಜಯಿಸಿ, ಅವನು ಭರವಸೆಯಿಟ್ಟಿದ್ದ ಆಯುಧಗಳನ್ನು ಅವನಿಂದ ತೆಗೆದುಕೊಂಡು ತನ್ನ ಸುಲಿಗೆಯನ್ನೆಲ್ಲಾ ಹಂಚುವನು.
Коли ж дужчий від нього його нападе́ й переможе, то всю збро́ю йому забере́, на яку покладався був той, і роздасть свою здо́бич.
23 “ನನ್ನ ಪರವಾಗಿ ಇರದವನು ನನಗೆ ವಿರೋಧಿಯಾಗಿದ್ದಾನೆ, ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ.
Хто не зо Мною, той проти Мене; і хто не збирає зо Мною, той розкидає!
24 “ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ, ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ಹುಡುಕಾಡಿದರೂ ಅದನ್ನು ಕಂಡುಕೊಳ್ಳದೆ ಅದು, ‘ನಾನು ಹೊರಟು ಬಂದ ನನ್ನ ಮನೆಗೆ ಹಿಂದಿರುಗುವೆನು,’ ಎಂದು ಹೇಳಿಕೊಂಡು ಬಂದು,
Коли дух нечистий виходить з люди́ни, то блукає місцями безві́дними, відпочинку шукаючи, але, не знахо́дячи, каже: „Верну́ся до хати своєї, звідки я вийшов“.
25 ಅದು ಬಂದು ಆ ಮನೆಯು ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ.
А як ве́рнеться він, то хату знахо́дить заме́тену й при́брану.
26 ಆ ಅಶುದ್ಧಾತ್ಮವು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ಅಶುದ್ಧಾತ್ಮಗಳನ್ನು ತನ್ನೊಂದಿಗೆ ಕರೆದುಕೊಂಡು ಅವನ ಒಳಗೆ ಸೇರಿ ಅಲ್ಲಿ ವಾಸಮಾಡುತ್ತವೆ. ಹೀಗೆ ಆ ಮನುಷ್ಯನ ಕಡೆಯ ಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು,” ಎಂದರು.
Тоді він іде та й приводить сімох інших духів, лютіших за себе, — і входять вони та й живуть там. І буде останнє люди́ні тій гірше за перше!“
27 ಯೇಸು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಆ ಗುಂಪಿನಲ್ಲಿದ್ದ ಒಬ್ಬ ಸ್ತ್ರೀಯು ತನ್ನ ಸ್ವರವನ್ನೆತ್ತಿ ಅವರಿಗೆ, “ನಿಮ್ಮನ್ನು ಗರ್ಭದಲ್ಲಿ ಹೊತ್ತು, ನಿಮಗೆ ಹಾಲುಣಿಸಿದ ತಾಯಿ ಧನ್ಯಳು,” ಎಂದು ಹೇಳಿದಳು.
І сталось, як Він це говорив, одна жінка з народу свій голос підне́сла й сказала до Нього: „Блаженна утро́ба, що носила Тебе, і груди, що Ти ссав їх!“
28 ಅದಕ್ಕೆ ಯೇಸು, “ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವರು ಹೆಚ್ಚು ಭಾಗ್ಯವಂತರು,” ಎಂದರು.
А Він відказав: „Так. Блаженні ж і ті, хто слухає Божого Слова і його береже́!“
29 ಜನರು ಗುಂಪುಗುಂಪಾಗಿ ಕೂಡಿಬಂದಿದ್ದಾಗ, ಯೇಸು, “ಇದು ದುಷ್ಟ ಸಂತತಿಯು. ಇದು ಸೂಚಕಕಾರ್ಯವನ್ನು ಹುಡುಕುತ್ತದೆ, ಪ್ರವಾದಿ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ದೊರಕದು.
А як люди збира́лися, Він почав промовляти: „Рід цей — рід лукавий: він ознаки шукає, та ознаки йому не дадуть, крім ознаки проро́ка Йо́ни.
30 ಏಕೆಂದರೆ ಯೋನನು ನಿನೆವೆ ಪಟ್ಟಣದವರಿಗೆ ಸೂಚನೆಯಾಗಿದ್ದಂತೆಯೇ, ಮನುಷ್ಯಪುತ್ರನಾದ ನಾನೇ ಈ ಸಂತತಿಗೆ ಸೂಚನೆಯಾಗಿರುವೆನು.
Бо як Йо́на ознакою був для ніневі́тян, так буде й Син Лю́дський для роду цього́.
31 ನ್ಯಾಯತೀರ್ಪಿನಲ್ಲಿ ದಕ್ಷಿಣದ ರಾಣಿಯು ಈ ಸಂತತಿಗೆ ಎದುರಾಗಿ ಎದ್ದು ಇವರನ್ನು ಅಪರಾಧಿಗಳೆಂದು ತೀರ್ಪುಮಾಡುವಳು. ಏಕೆಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕಾಗಿ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತಲೂ ತುಂಬಾ ದೊಡ್ಡವನು ಇಲ್ಲಿದ್ದಾನೆ.
Цариця півде́нна на суд стане з му́жами роду цього́, — і їх засудить, бо вона з кінця світу прийшла Соломо́нову мудрість послухати. А тут ось Хтось більший, аніж Соломо́н!
32 ನಿನೆವೆ ಪಟ್ಟಣದವರು ನ್ಯಾಯತೀರ್ಪಿನಲ್ಲಿ ಈ ಸಂತತಿಗೆ ಎದುರಾಗಿ ಎದ್ದು ಇದನ್ನು ಅಪರಾಧ ಎಂದು ತೀರ್ಪುಮಾಡುವರು, ಏಕೆಂದರೆ ಯೋನನು ಸಾರಿದ್ದನ್ನು ಕೇಳಿ ಅವರು ದೇವರ ಕಡೆಗೆ ತಿರುಗಿಕೊಂಡರು; ಇಗೋ, ಇಲ್ಲಿ ಯೋನನಿಗಿಂತಲೂ ತುಂಬಾ ದೊಡ್ಡವನು ಇದ್ದಾನೆ,” ಎಂದು ಹೇಳಿದರು.
Ніневі́тяни стануть на суд із цим родом, — і засудять його, вони бо пока́ялися через Йонину проповідь. А тут ось Хтось більший, ніж Йона!
33 “ಯಾರೂ ದೀಪವನ್ನು ಹಚ್ಚಿ ಮರೆಯಾದ ಸ್ಥಳದಲ್ಲಾಗಲಿ ಬಟ್ಟಲ ಕೆಳಗಾಗಲಿ ಇಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ, ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.
Засвіченого світла ніхто в схо́вок не ставить, ані під посу́дину, але на світи́льника, щоб бачили світло, хто входить.
34 ನಿನ್ನ ಕಣ್ಣು ದೇಹಕ್ಕೆ ದೀಪವಾಗಿದೆ. ಆದ್ದರಿಂದ ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಬೆಳಕಾಗಿರುವುದು. ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವು ಸಹ ಕತ್ತಲೆಯಾಗಿರುವುದು.
Око твоє — то світи́льник для тіла; тому́, як око твоє буде дуже, то й усе тіло твоє буде світле. А коли б твоє око нездатне було́, то й усе тіло твоє буде темне.
35 ಆದ್ದರಿಂದ, ನಿನ್ನಲ್ಲಿರುವ ಬೆಳಕು ಕತ್ತಲೆಯಾಗದಂತೆ ನೋಡಿಕೋ.
Отож, уважай, щоб те світло, що в тобі, не сталося те́мрявою!
36 ದೇಹದ ಯಾವುದೊಂದು ಭಾಗದಲ್ಲಿಯೂ ಕತ್ತಲೆಯಾಗಿರದೆ, ನಿನ್ನ ದೇಹವೆಲ್ಲವೂ ಪೂರ್ಣವಾಗಿ ಬೆಳಕಾಗಿರುವುದಾದರೆ, ಪ್ರಕಾಶಮಾನವಾದ ದೀಪವು ನಿನಗೆ ಬೆಳಕುಕೊಡುವಂತೆ ಸಮಸ್ತವೂ ಬೆಳಕಾಗಿರುವುದು,” ಎಂದು ಹೇಳಿದರು.
Бо коли твоє тіло все світле, і не має жа́дної темної частини, то все буде світле, неначе б світильник ося́яв блиском тебе“.
37 ಯೇಸು ಮಾತನಾಡುವುದನ್ನು ಮುಗಿಸಿದಾಗ, ಒಬ್ಬ ಫರಿಸಾಯನು ತನ್ನೊಂದಿಗೆ ಊಟ ಮಾಡಬೇಕೆಂದು ಯೇಸುವನ್ನು ಬೇಡಿಕೊಂಡನು, ಆಗ ಅವರು ಒಳಗೆ ಹೋಗಿ ಊಟಕ್ಕೆ ಕೂತುಕೊಂಡರು.
Коли Він говорив, то один фарисей став благати Його пообідати в нього. Він же прийшов та й сів при столі.
38 ಆದರೆ ಊಟಕ್ಕೆ ಮೊದಲು ಯೇಸು ಕೈತೊಳೆಯದೆ ಇರುವುದನ್ನು ಫರಿಸಾಯನು ಕಂಡು ಆಶ್ಚರ್ಯಪಟ್ಟನು.
Фарисей же, побачивши це, здивувався, що перед обідом Він перш не обмився.
39 ಆಗ ಕರ್ತದೇವರು ಅವನಿಗೆ, “ಫರಿಸಾಯರಾದ ನೀವು, ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ, ಆದರೆ ನಿಮ್ಮ ಒಳಭಾಗವು ಸುಲಿಗೆಯಿಂದಲೂ ಕೆಟ್ಟತನದಿಂದಲೂ ತುಂಬಿರುತ್ತದೆ.
Господь же промовив до нього: „Тепер ви, фарисеї, он чистите зо́внішність ку́хля та миски, а ваше нутро́ повне зди́рства та кривди!
40 ಮೂರ್ಖರೇ! ಹೊರಭಾಗವನ್ನು ಮಾಡಿದಾತನು ಒಳಭಾಗವನ್ನು ಸಹ ಮಾಡಿದನಲ್ಲವೇ?
Нерозумні, — чи ж Той, Хто створив оте зо́внішнє, не створив Він і внутрішнє?
41 ನೀವು ನಿಮ್ಮೊಳಗೆ ಅಂಟಿಕೊಂಡಿರುವವುಗಳನ್ನು ಬಡವರಿಗೆ ದಾನ ಮಾಡಿಬಿಡಿರಿ, ಆಗ ನಿಮಗೆ ಎಲ್ಲವೂ ಶುದ್ಧವಾಗಿರುವುವು.
Тож милостиню подавайте з унутрішнього, — і ось все буде вам чисте.
42 “ಫರಿಸಾಯರೇ, ನಿಮಗೆ ಕಷ್ಟ, ಏಕೆಂದರೆ ನೀವು ಪುದೀನ, ಸದಾಪು ಮತ್ತು ಸಕಲ ವಿಧವಾದ ಸೊಪ್ಪುಗಳಲ್ಲಿ ದಶಮಭಾಗವನ್ನು ಕೊಟ್ಟು, ನ್ಯಾಯವನ್ನೂ ದೇವರ ಪ್ರೀತಿಯನ್ನೂ ಲಕ್ಷಿಸದೆ ಹೋಗುತ್ತೀರಿ. ಅವುಗಳನ್ನು ಮಾಡಿದ ನೀವು ಇವುಗಳನ್ನೂ ಅವಶ್ಯವಾಗಿ ಮಾಡಬೇಕಾಗಿತ್ತು.
Горе вам, фарисеям, — бо ви десятину даєте з м'яти та рути й усякого зілля, але обминаєте суд та Божу любов; це треба робити, і того́ не лишати!
43 “ಫರಿಸಾಯರೇ, ನಿಮಗೆ ಕಷ್ಟ, ಏಕೆಂದರೆ ನೀವು ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ ಇಷ್ಟಪಡುತ್ತೀರಿ.
Горе вам, фарисеям, що любите перші лавки́ в синагогах та привіти на ри́нках!
44 “ನಿಮಗೆ ಕಷ್ಟ, ಏಕೆಂದರೆ ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ, ಅವುಗಳ ಮೇಲೆ ನಡೆದಾಡುವ ಮನುಷ್ಯರು ಅವುಗಳನ್ನು ಅರಿಯರು,” ಎಂದು ಹೇಳಿದರು.
Горе вам, — бо ви як гроби́ непомітні, — люди ж ходять по них і не знають того“.
45 ನಿಯಮ ಬೋಧಕ ಒಬ್ಬನು ಯೇಸುವಿಗೆ, “ಬೋಧಕರೇ, ನೀವು ಇವುಗಳನ್ನು ಹೇಳುವುದರಿಂದ ನಮ್ಮನ್ನು ಸಹ ಅವಮಾನಪಡಿಸುತ್ತೀರಿ,” ಎಂದನು.
Озвався ж один із зако́нників, і каже Йому: „Учителю, кажучи це, Ти і нас ображаєш!“
46 ಅದಕ್ಕೆ ಯೇಸು, “ನಿಯಮ ಪಂಡಿತರೇ, ನಿಮಗೂ ಕಷ್ಟ, ಏಕೆಂದರೆ ಹೊರಲಾಗದ ಹೊರೆಗಳನ್ನು ಮನುಷ್ಯರ ಮೇಲೆ ಹೊರಿಸುತ್ತೀರಿ, ನೀವಾದರೋ ಈ ಹೊರೆಗಳನ್ನು ನಿಮ್ಮ ಬೆರಳುಗಳಲ್ಲಿ ಒಂದರಿಂದಾದರೂ ಮುಟ್ಟುವುದಿಲ್ಲ.
А Він відказав: „Горе й вам, зако́нникам, бо ви на людей тягарі́ накладаєте, які важко носити, а самі й одним пальцем своїм не дото́ркуєтесь тягарі́в!
47 “ನಿಮಗೆ ಕಷ್ಟ, ಏಕೆಂದರೆ ನಿಮ್ಮ ಪಿತೃಗಳು ಪ್ರವಾದಿಗಳನ್ನು ಕೊಂದರು, ನೀವು ಅವರ ಸಮಾಧಿಗಳನ್ನು ಕಟ್ಟುತ್ತೀರಿ.
Горе вам, бо надгро́бки пророкам ви ставите, — ваші ж батьки́ були їх повбивали.
48 ಇದರಿಂದ ನಿಜವಾಗಿಯೂ ನಿಮ್ಮ ಪಿತೃಗಳ ಕೃತ್ಯಗಳನ್ನು ನೀವು ಒಪ್ಪಿಕೊಳ್ಳುವಂತೆ ಸಾಕ್ಷಿಕರಿಸುತ್ತೀರಿ; ಏಕೆಂದರೆ ಅವರು ನಿಜವಾಗಿಯೂ ಪ್ರವಾದಿಗಳನ್ನು ಕೊಂದರು, ನೀವೋ ಅವರ ಸಮಾಧಿಗಳನ್ನು ಕಟ್ಟುತ್ತೀರಿ.
Так, — визнаєте ви й хвалите вчинки батьків своїх: бо вони їх повбивали, а ви їм надгро́бки будуєте!
49 ಈ ಕಾರಣದಿಂದ, ದೇವರ ಜ್ಞಾನವು ಸಹ ಹೇಳಿರುವುದೇನೆಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು, ಅವರಲ್ಲಿ ಕೆಲವರನ್ನು ಅವರು ಕೊಲ್ಲುವರು ಮತ್ತು ಹಿಂಸೆಪಡಿಸುವರು.’
Через те й мудрість Божа сказала: „Я пошлю їм пророків й апо́столів, — вони ж декого з них повбивають, а декого ви́женуть,
50 ಹೀಗೆ ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೆ ಈ ಸಂತತಿಯು ಲೆಕ್ಕ ಕೊಡಬೇಕಾಗಿರುವುದು,
щоб на роді оцім відомстилася кров усіх пророків, що пролита від ство́рення світу,
51 ಹೇಬೆಲನ ರಕ್ತ ಮೊದಲುಗೊಂಡು ಬಲಿಪೀಠಕ್ಕೂ ದೇವಾಲಯಕ್ಕೂ ಮಧ್ಯದಲ್ಲಿ ಹತವಾದ ಜಕರೀಯನ ರಕ್ತದವರೆಗೂ ಈ ಸಂತತಿಯು ಉತ್ತರಕೊಡಬೇಕು. ಹೌದು, ಈ ಸಂತತಿಯವರೇ ಇದಕ್ಕೆಲ್ಲಾ ಉತ್ತರಕೊಡಬೇಕೆಂದು, ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
від крови Авеля аж до крови Заха́рія, що загинув між же́ртівником і храмом“! Так, кажу вам, — відомсти́ться це все на цім роді!
52 “ನಿಯಮ ಪಂಡಿತರೇ, ನಿಮಗೆ ಕಷ್ಟ, ಏಕೆಂದರೆ ನೀವು ಜ್ಞಾನದ ಬೀಗದ ಕೈಯನ್ನು ತೆಗೆದುಕೊಂಡಿದ್ದೀರಿ. ನೀವಂತೂ ಒಳಗೆ ಪ್ರವೇಶಿಸಲಿಲ್ಲ; ಒಳಗೆ ಪ್ರವೇಶಿಸುತ್ತಿರುವವರಿಗೂ ನೀವು ತಡೆಗಟ್ಟುತ್ತೀರಿ,” ಎಂದು ಹೇಳಿದರು.
Горе вам, зако́нникам, бо взяли́ ви ключа́ розумі́ння: самі не ввійшли, і тим, хто хотів увійти, борони́ли!“
53 ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ, ನಿಯಮ ಬೋಧಕರೂ ಫರಿಸಾಯರೂ ಕೋಪಾವೇಶವುಳ್ಳವರಾಗಿ, ಯೇಸು ಇನ್ನೂ ಹೆಚ್ಚು ವಿಷಯಗಳನ್ನು ಮಾತನಾಡುವಂತೆ ಅವರನ್ನು ಕೆಣಕಿದರು,
А коли Він вихо́див ізвідти, стали книжники та фарисеї сильно тиснути та від Нього допитуватись про багато речей, —
54 ಏಕೆಂದರೆ ಯೇಸುವಿನ ಮಾತಿನಲ್ಲಿ ಏನನ್ನಾದರೂ ಕಂಡುಹಿಡಿದು ಅವರ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡುತ್ತಿದ್ದರು.
вони чатува́ли на Нього, щоб зловити що з уст Його (і щоб оска́ржити Його́).

< ಲೂಕನು 11 >