< ಲೂಕನು 1 >

1 ಸನ್ಮಾನ್ಯ ಥೆಯೊಫಿಲರೇ, ನಮ್ಮ ಮಧ್ಯದಲ್ಲಿ ನಡೆದಿರುವ ಘಟನೆಗಳ ವರದಿಯನ್ನು ಬರೆದಿಡಲು ಅನೇಕರು ಪ್ರಯತ್ನಿಸಿದ್ದಾರೆ.
תאופילוס היקר, אנשים רבים כבר כתבו על הדברים שהתרחשו בינינו,
2 ಮೊದಲಿನಿಂದ ಕಣ್ಣಾರೆ ಕಂಡವರೂ ದೇವರ ವಾಕ್ಯದ ಸೇವಕರೂ ನಮಗೆ ಕೊಟ್ಟಿರುವ ರೀತಿಯಲ್ಲಿಯೇ ಬರೆದಿದ್ದಾರೆ.
על־פי סיפוריהם של תלמידי ישוע ושל עדי ראייה אחרים.
3 ಆದ್ದರಿಂದ ನಾನು ಸಹ ಮೊದಲಿನಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೋಧಿಸಿ, ಅವುಗಳನ್ನು ಕ್ರಮವಾಗಿ ನಿಮಗೆ ಬರೆಯುವುದು ಒಳ್ಳೆಯದೆಂದು ನನಗೆ ತೋಚಿತು.
גם אני חקרתי היטב את התרחשות הדברים מתחילתם, והחלטתי כי טוב שאכתוב לך אותם לפי סדר העניינים,
4 ಹೀಗೆ ನಿಮಗೆ ಬೋಧಿಸಿರುವ ವಿಷಯಗಳು ಖಚಿತವೆಂದು ನಿಮಗೆ ತಿಳಿದುಬರುವುದು.
כדי שיהיה לך מידע מדויק על הנושא שלמדת.
5 ಯೂದಾಯದ ಅರಸನಾಗಿದ್ದ ಹೆರೋದನ ದಿನಗಳಲ್ಲಿ, ಅಬೀಯನ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಇವನ ಹೆಂಡತಿಯ ಹೆಸರು ಎಲಿಸಬೇತ್. ಇವಳು ಆರೋನನ ವಂಶದವಳು.
בימי הורדוס מלך יהודה היה בארץ כהן בשם זכריה, אשר היה שייך למחלקת אביה – ממשרתי בית־המקדש. גם אשתו אלישבע הייתה ממשפחה כוהנית.
6 ಇವರಿಬ್ಬರೂ ಕರ್ತದೇವರ ಎಲ್ಲಾ ಆಜ್ಞೆಗಳನ್ನೂ ತೀರ್ಪುಗಳನ್ನೂ ತಪ್ಪಿಲ್ಲದೆ ಕೈಕೊಂಡು, ದೇವರ ಮುಂದೆ ನೀತಿವಂತರಾಗಿದ್ದರು.
זכריה ואלישבע היו אנשים צדיקים, אשר אהבו את ה׳ ושמרו את כל מצוותיו וחוקותיו.
7 ಆದರೆ ಎಲಿಸಬೇತಳು ಬಂಜೆಯಾದುದರಿಂದ ಅವರಿಗೆ ಮಕ್ಕಳಿರಲಿಲ್ಲ, ಇದಲ್ಲದೆ ಅವರಿಬ್ಬರೂ ಬಹಳ ವಯಸ್ಸಾದವರಾಗಿದ್ದರು.
אולם לא היו להם ילדים, כי אלישבע הייתה עקרה, ושניהם כבר היו זקנים.
8 ಹೀಗಿರಲಾಗಿ ಜಕರೀಯನು ತನ್ನ ವರ್ಗದ ಸರದಿಯ ಪ್ರಕಾರ ದೇವರ ಮುಂದೆ ಯಾಜಕ ಸೇವೆಯನ್ನು ಮಾಡುತ್ತಿದ್ದಾಗ,
יום אחד, כאשר הייתה מחלקתו של זכריה בתורנות בבית־המקדש, נפל בגורלו להיכנס אל היכל ה׳ ולהקטיר קטורת.
9 ಯಾಜಕೋದ್ಯೋಗದ ಪದ್ಧತಿಯಂತೆ, ಅವನು ಕರ್ತದೇವರ ಆಲಯವನ್ನು ಪ್ರವೇಶಿಸಿ ಧೂಪವನ್ನು ಅರ್ಪಿಸುವದಕ್ಕೆ ಚೀಟು ಹಾಕಿದಾಗ, ಅದು ಅವನ ಪಾಲಿಗೆ ಬಿದ್ದಿತು.
10 ಧೂಪಾರ್ಪಣೆಯ ಸಮಯದಲ್ಲಿ ಸೇರಿದ ಜನರೆಲ್ಲರೂ ಹೊರಗೆ ಪ್ರಾರ್ಥಿಸುತ್ತಿದ್ದರು.
בינתיים עמד כל העם בחוץ והתפלל, כנהוג בעת הקטרת הקטורת.
11 ಆಗ ಧೂಪವೇದಿಯ ಬಲಗಡೆಯಲ್ಲಿ ನಿಂತುಕೊಂಡಿದ್ದ, ಕರ್ತದೇವರ ದೂತನು ಅವನಿಗೆ ಕಾಣಿಸಿಕೊಂಡನು.
לפתע נראה מלאך ה׳ אל זכריה מימין למזבח הקטורת.
12 ಜಕರೀಯನು ದೂತನನ್ನು ಕಂಡು, ಚಕಿತಗೊಂಡು ಭಯಭ್ರಾಂತನಾದನು.
זכריה נבהל ונמלא פחד.
13 ಆದರೆ ದೂತನು ಅವನಿಗೆ, “ಜಕರೀಯನೇ; ಭಯಪಡಬೇಡ, ದೇವರು ನಿನ್ನ ವಿಜ್ಞಾಪನೆಯನ್ನು ಕೇಳಿದ್ದಾರೆ. ನಿನ್ನ ಹೆಂಡತಿ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು, ನೀನು ಅವನಿಗೆ, ‘ಯೋಹಾನ’ ಎಂದು ಹೆಸರನ್ನಿಡಬೇಕು.
”אל תירא, זכריה“, הרגיע אותו המלאך.”באתי לבשר לך שאלוהים שמע את תפילתך, ושאשתך אלישבע תלד לך בן! עליך לקרוא לו’יוחנן‘.
14 ಅನೇಕರು ಅವನ ಜನನಕ್ಕೆ ಸಂತೋಷಪಡುವರು, ನಿನಗೆ ಆನಂದವೂ ಉಲ್ಲಾಸವೂ ಆಗುವುದು,
לידתו תביא לכם שמחה ואושר, ואנשים רבים ישמחו יחד אתכם,
15 ಅವನು ಕರ್ತದೇವರ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು. ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಅವನು ಕುಡಿಯುವುದಿಲ್ಲ, ಅವನು ತಾಯಿಯ ಗರ್ಭದಿಂದಲೇ ಪವಿತ್ರಾತ್ಮ ಭರಿತನಾಗಿರುವನು.
כי ה׳ הועיד אותו לגדולות. עליו להינזר מיין ומשקאות חריפים, והוא יימלא ברוח הקודש מעת לידתו.
16 ಅವನು ಇಸ್ರಾಯೇಲರಲ್ಲಿ ಅನೇಕರನ್ನು ಅವರ ಕರ್ತದೇವರ ಕಡೆಗೆ ತಿರುಗಿಸುವನು.
יוחנן ישיב רבים מעם ישראל אל ה׳ אלוהיהם.
17 ಅವನು ತಂದೆಯರ ಹೃದಯಗಳನ್ನು ಮಕ್ಕಳ ಕಡೆಗೂ ಅವಿಧೇಯರನ್ನು ನೀತಿವಂತರ ಜ್ಞಾನದ ಕಡೆಗೂ ತಿರುಗಿಸಿ, ಕರ್ತ ದೇವರಿಗೋಸ್ಕರ ಜನರನ್ನು ಸಿದ್ಧಮಾಡುವುದಕ್ಕೆ ಎಲೀಯನ ಆತ್ಮದಿಂದಲೂ ಶಕ್ತಿಯಿಂದಲೂ ಕರ್ತದೇವರ ಮುಂದೆ ಹೋಗುವನು,” ಎಂದು ಹೇಳಿದನು.
הוא ילך לפני ה׳ ברוחו ובגבורתו של אליהו הנביא, ישלים בין אבות לבנים, וישיב את המרדנים לדרך הצדקה והתבונה. אכן, הוא יכין את העם לבואו של האדון.“
18 ಜಕರೀಯನು ಆ ದೇವದೂತನಿಗೆ, “ಇದನ್ನು ನಾನು ಯಾವುದರಿಂದ ತಿಳಿದುಕೊಳ್ಳಲಿ? ನಾನು ಮುದುಕನು; ನನ್ನ ಹೆಂಡತಿಯೂ ಪ್ರಾಯ ಮೀರಿದವಳು,” ಎಂದನು.
”כיצד אדע שדבריך נכונים?“שאל זכריה.”הלא אדם זקן אני, וגם אשתי כבר זקנה.“
19 ಅದಕ್ಕೆ ಆ ದೂತನು ಉತ್ತರವಾಗಿ, “ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು. ನಿನ್ನ ಸಂಗಡ ಮಾತನಾಡುವುದಕ್ಕೂ ಈ ಸಂತೋಷದ ವರ್ತಮಾನವನ್ನು ನಿನಗೆ ತಿಳಿಸುವುದಕ್ಕೂ ದೇವರು ನನ್ನನ್ನು ಕಳುಹಿಸಿದ್ದಾರೆ.
”אני המלאך גבריאל!“השיב המלאך.”אני עומד לפני אלוהים, והוא אשר שלח אותי לבשר לך את ההודעה הזאת.
20 ಸಕಾಲದಲ್ಲಿ ನೆರವೇರುವ ನನ್ನ ಮಾತುಗಳನ್ನು ನೀನು ನಂಬದೆ ಹೋದಕಾರಣ, ಈ ಸಂಗತಿಗಳು ಈಡೇರುವ ದಿನದವರೆಗೆ ನೀನು ಮಾತನಾಡಲಾರದೆ ಮೂಕನಾಗಿರುವಿ,” ಎಂದನು.
דע לך כי כל אשר אמרתי יתקיים בבוא הזמן, אולם מאחר שלא האמנת לדברי, לא תוכל להוציא מילה מפיך מרגע זה ועד שיתקיימו דברי!“
21 ಆಗ, ಜಕರೀಯನಿಗಾಗಿ ಕಾದುಕೊಂಡಿದ್ದ ಜನರು ಅವನು ದೇವಾಲಯದೊಳಗೆ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು.
האנשים אשר התפללו בחוץ המתינו בינתיים לזכריה, ולא הבינו מדוע התעכב.
22 ಜಕರೀಯನು ಹೊರಗೆ ಬಂದಾಗ, ಅವರೊಂದಿಗೆ ಏನೂ ಮಾತನಾಡಲಾಗಲಿಲ್ಲ. ಅವನು ಅವರಿಗೆ ಸನ್ನೆಮಾಡುತ್ತಾ ಮೂಕನಾಗಿಯೇ ಇದ್ದುದರಿಂದ, ಅವರು ದೇವಾಲಯದಲ್ಲಿ ಅವನಿಗೆ ಏನೋ ದರ್ಶನವಾಗಿರಬೇಕೆಂದು ಗ್ರಹಿಸಿದರು.
לבסוף, כשיצא זכריה החוצה הוא לא יכול היה לדבר אל העם, אולם מסימני ידיים הבינו האנשים שראה חזיון.
23 ತನ್ನ ಸೇವೆಯ ದಿನಗಳು ಮುಗಿದ ನಂತರ, ಜಕರೀಯನು ತನ್ನ ಮನೆಗೆ ಹೊರಟುಹೋದನು.
זכריה נשאר בבית־המקדש עד תום ימי התורנות של מחלקתו, ולאחר מכן שב לביתו.
24 ಕೆಲವು ದಿನಗಳಾದ ಮೇಲೆ, ಅವನ ಹೆಂಡತಿ ಎಲಿಸಬೇತಳು ಗರ್ಭಿಣಿಯಾಗಿ, ಐದು ತಿಂಗಳು ಮನೆಯಲ್ಲಿ ಮರೆಯಾಗಿದ್ದಳು.
כעבור זמן קצר הרתה אלישבע אשתו והסתתרה מעיני הציבור כחמישה חודשים.
25 ಅವಳು, “ಜನರಲ್ಲಿ ನನಗಿದ್ದ ಅವಮಾನವನ್ನು ತೆಗೆದುಹಾಕುವುದಕ್ಕಾಗಿ ಕರ್ತದೇವರು ನನ್ನ ಮೇಲೆ ದಯೆತೋರಿಸಿ ಈ ದಿನಗಳಲ್ಲಿ ನನಗೆ ಹೀಗೆ ಮಾಡಿದ್ದಾರೆ,” ಎಂದು ಹೇಳಿದಳು.
”מה טוב הוא אלוהים!“קראה אלישבע בשמחה רבה.”ברחמיו הרבים הוא הסיר את חרפת עקרותי!“
26 ಎಲಿಸಬೇತಳು ಗರ್ಭಿಣಿಯಾದ ಆರನೆಯ ತಿಂಗಳಲ್ಲಿ, ಗಲಿಲಾಯ ಪ್ರಾಂತದ ನಜರೇತೆಂಬ ಊರಿಗೆ, ದೇವರು ಗಬ್ರಿಯೇಲನೆಂಬ ದೇವದೂತನನ್ನು,
בחודש השישי להריונה של אלישבע שלח אלוהים את המלאך גבריאל אל העיר נצרת שבגליל,
27 ದಾವೀದನ ವಂಶದ ಯೋಸೇಫನಿಗೆ, ನಿಶ್ಚಯವಾಗಿದ್ದ ಮರಿಯಳೆಂಬ ಒಬ್ಬ ಕನ್ನಿಕೆಯ ಬಳಿಗೆ ಕಳುಹಿಸಿದರು.
אל נערה בתולה בשם מרים, ארוסתו של יוסף משושלת בית־דוד.
28 ಆ ದೇವದೂತನು ಆಕೆಗೆ, “ಅತ್ಯಂತ ದಯೆ ಹೊಂದಿದವಳೇ! ನಿನಗೆ ಶುಭವಾಗಲಿ, ಪ್ರಭುವು ನಿನ್ನೊಂದಿಗಿದ್ದಾರೆ,” ಎಂದು ಹೇಳಿದನು.
גבריאל נגלה אל מרים ואמר לה:”שלום לך, אשת חן, ה׳ עמך!“
29 ಮರಿಯಳು ದೇವದೂತನ ಮಾತಿಗೆ ಬಹಳವಾಗಿ ಕಳವಳಗೊಂಡು, “ಇದು ಎಂಥಾ ಶುಭಾಶಯ?” ಎಂದು ತನ್ನ ಮನದಲ್ಲಿ ಯೋಚಿಸತೊಡಗಿದಳು.
מרים נבהלה לרגע; דברי המלאך הביכו אותה, והיא ניסתה לנחש בלבה למה הוא התכוון.
30 ಆ ದೇವದೂತನು ಆಕೆಗೆ, “ಮರಿಯಳೇ, ಹೆದರಬೇಡ. ನೀನು ದೇವರ ದಯೆಯನ್ನು ಹೊಂದಿರುವಿ.
”אל תפחדי, מרים, “הרגיע אותה המלאך,”כי מצאת חן בעיני אלוהים והוא החליט לברך אותך.
31 ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವೆ, ಅವರಿಗೆ ‘ಯೇಸು’ ಎಂದು ಹೆಸರಿಡಬೇಕು.
בעוד זמן קצר תיכנסי להריון ותלדי בן. בשם’ישוע‘תקראי לו.
32 ಅವರು ದೊಡ್ಡವರಾಗಿ ಮಹೋನ್ನತರ ಪುತ್ರ ಎಂದು ಎನಿಸಿಕೊಳ್ಳುವರು. ಕರ್ತದೇವರು ಅವರ ತಂದೆ ದಾವೀದನ ಸಿಂಹಾಸನವನ್ನು ಅವರಿಗೆ ಕೊಡುವರು.
הוא יהיה רם־מעלה וייקרא בן־אלוהים. ה׳ ייתן לו את כסא דוד אביו,
33 ಅವರು ಯಾಕೋಬನ ವಂಶವನ್ನು ಸದಾಕಾಲ ಆಳುವರು; ಅವರ ರಾಜ್ಯಕ್ಕೆ ಅಂತ್ಯವೇ ಇರುವುದಿಲ್ಲ,” ಎಂದು ಹೇಳಿದನು. (aiōn g165)
והוא ימלוך על עם־ישראל לעולם ועד; מלכותו לא תסתיים לעולם.“ (aiōn g165)
34 ಮರಿಯಳು ಆ ದೇವದೂತನಿಗೆ, “ಇದು ಹೇಗಾಗುವುದು, ನಾನು ಕನ್ಯೆ?” ಎಂದಳು.
”כיצד אוכל ללדת?“שאלה מרים בתמיהה.”הרי אני בתולה!“
35 ಆ ದೇವದೂತನು ಉತ್ತರವಾಗಿ ಮರಿಯಳಿಗೆ, “ಪವಿತ್ರಾತ್ಮ ನಿನ್ನ ಮೇಲೆ ಬರಲು, ಮಹೋನ್ನತ ದೇವರ ಶಕ್ತಿಯು ನಿನ್ನನ್ನು ಆವರಿಸುವುದು. ಆದ್ದರಿಂದ ನಿನ್ನಿಂದ ಹುಟ್ಟುವ ಆ ಪವಿತ್ರ ಶಿಶುವು ದೇವರ ಪುತ್ರ ಎನಿಸಿಕೊಳ್ಳುವುದು.
השיב לה המלאך:”רוח הקודש תבוא אליך, וגבורת אלוהים תצל עליך. משום כך הבן הקדוש שייוולד ייקרא בן־אלוהים.“
36 ನಿನ್ನ ಬಂಧು ಎಲಿಸಬೇತಳು ಸಹ ತನ್ನ ಮುಪ್ಪಿನ ಪ್ರಾಯದಲ್ಲಿ ಒಬ್ಬ ಮಗನನ್ನು ಹೆರಲಿದ್ದಾಳೆ. ಬಂಜೆಯಾಗಿದ್ದ ಆಕೆಗೆ ಇದು ಆರನೆಯ ತಿಂಗಳು.
המלאך המשיך:”לפני שישה חודשים נכנסה קרובתך הזקנה אלישבע להריון – כן, זו ששכנותיה קראו לה’העקרה‘– וגם היא תלד בן!
37 ದೇವರಿಂದ ಬರುವ ಯಾವ ತಕ್ಕ ಮಾತು ಎಂದಿಗೂ ಅಸಾಧ್ಯವಾಗಿರುವುದಿಲ್ಲ,” ಎಂದು ಹೇಳಿದನು.
כי אין דבר בלתי אפשרי לאלוהים“.
38 ಮರಿಯಳು, “ಇಗೋ ನಾನು ಕರ್ತದೇವರ ದಾಸಿ, ನಿನ್ನ ತಕ್ಕ ಮಾತಿನಂತೆ ನನಗಾಗಲಿ,” ಎಂದಳು. ಆಗ ದೇವದೂತನು ಆಕೆಯ ಬಳಿಯಿಂದ ಹೊರಟುಹೋದನು.
”הנני שפחתך, אדוני, “אמרה מרים בענווה,”ואני מוכנה לעשות את כל אשר יאמר לי. אמן שיתקיימו דבריך.“לאחר מכן נעלם המלאך.
39 ಆ ಕಾಲದಲ್ಲಿ ಮರಿಯಳು ಬೆಟ್ಟದ ಸೀಮೆಯ ಯೆಹೂದದಲ್ಲಿರುವ ಒಂದು ಊರಿಗೆ ಅವಸರವಾಗಿ ಹೊರಡಲು ಸಿದ್ಧಳಾದಳು.
כעבור ימים אחדים מיהרה מרים אל הרי יהודה, אל ביתו של זכריה, ובהיכנסה אל הבית ברכה את אלישבע לשלום.
40 ಅಲ್ಲಿ ಜಕರೀಯನ ಮನೆಯನ್ನು ಪ್ರವೇಶಿಸಿ, ಎಲಿಸಬೇತಳನ್ನು ವಂದಿಸಿದಳು.
41 ಮರಿಯಳ ವಂದನೆಯನ್ನು ಕೇಳಿದಾಗ, ಎಲಿಸಬೇತಳ ಗರ್ಭದಲ್ಲಿದ್ದ ಕೂಸು ನಲಿದಾಡಿತು ಮತ್ತು ಎಲಿಸಬೇತಳು ಪವಿತ್ರಾತ್ಮ ಭರಿತಳಾಗಿ
לשמע ברכתה של מרים התנועע התינוק בבטנה של אלישבע, והיא נמלאה ברוח הקודש.
42 ಮಹಾಧ್ವನಿಯಿಂದ: “ಸ್ತ್ರೀಯರಲ್ಲಿ ನೀನು ಧನ್ಯಳೇ, ನಿನ್ನಲ್ಲಿ ಹುಟ್ಟುವ ಶಿಶುವೂ ಆಶೀರ್ವಾದ ಹೊಂದಿದ್ದು!
”ברוכה את בנשים, מרים, וברוך תינוקך!“פרצה אלישבע בקריאת שמחה.
43 ನನ್ನ ಕರ್ತದೇವರ ತಾಯಿಯು, ನನ್ನ ಬಳಿಗೆ ಬರುವಷ್ಟು ನಾನು ದಯೆ ಹೊಂದಿದ್ದು ಏಕೆ?
”מדוע זכיתי בכבוד הגדול שאם אדוני באה לבקר אותי?
44 ಇಗೋ, ನಿನ್ನ ವಂದನೆಯ ಧ್ವನಿಯು ನನ್ನ ಕಿವಿಗಳಲ್ಲಿ ಬಿದ್ದ ಕೂಡಲೇ, ಶಿಶುವು ನನ್ನ ಗರ್ಭದಲ್ಲಿ ಉಲ್ಲಾಸದಿಂದ ನಲಿದಾಡಿತು.
התינוק בבטני התנועע בשמחה לשמע קול ברכתך!
45 ಕರ್ತದೇವರು ತಮಗೆ ಹೇಳಿದವುಗಳು ನೆರವೇರುವುವು ಎಂದು ನಂಬಿದವಳು ಧನ್ಯಳು,” ಎಂದು ಹೇಳಿದಳು.
אלוהים ברך אותך בצורה נפלאה כזאת משום שהאמנת כי יקיים את דבריו.“
46 ಆಗ ಮರಿಯಳು ಹೀಗೆ ಹೇಳಿದ್ದು: “ನನ್ನ ಪ್ರಾಣವು ಕರ್ತದೇವರನ್ನು ಸ್ತುತಿಸುತ್ತದೆ,
השיבה מרים:”ברכי נפשי את ה׳;
47 ನನ್ನ ಆತ್ಮವು ನನ್ನ ರಕ್ಷಕ ದೇವರಲ್ಲಿ ಉಲ್ಲಾಸಗೊಂಡಿದೆ.
אגיל ואשמח באלוהים מושיעי!
48 ದೇವರು ತಮ್ಮ ದಾಸಿಯ ದೀನಸ್ಥಿತಿಯನ್ನು ಲಕ್ಷಿಸಿದ್ದಾರೆ. ಇಂದಿನಿಂದ ತಲತಲಾಂತರದವರೆಲ್ಲರೂ ನನ್ನನ್ನು ಧನ್ಯಳೆಂದು ಕರೆಯುವರು,
כי עשה חסד עם שפחתו, ומעתה יברכוני כל הדורות.
49 ಪರಾಕ್ರಮಿಯಾದ ದೇವರು ನನಗೆ ಮಹಾಕಾರ್ಯಗಳನ್ನು ಮಾಡಿದ್ದಾರೆ, ಅವರ ಹೆಸರು ಪವಿತ್ರವಾದದ್ದು.
גדולות ונפלאות עשה עמי אל שדי, קדוש שמו.
50 ದೇವರಲ್ಲಿ ಭಯಭಕ್ತಿಯುಳ್ಳವರ ಮೇಲೆ, ಅವರ ಕರುಣೆಯು ತಲತಲಾಂತರಗಳಿಗೂ ಇರುವುದು.
מדור לדור הוא מעניק את חסדו ורחמיו לכל היראים אותו.
51 ದೇವರು ತಮ್ಮ ಭುಜಪರಾಕ್ರಮವನ್ನು ಮಾಡಿ; ಹೃದಯದ ಯೋಚನೆಯಲ್ಲಿ ಗರ್ವಿಷ್ಠರಾದವರನ್ನು ಚದರಿಸಿಬಿಟ್ಟಿದ್ದಾರೆ.
בזרוע נטויה עשה מעשי גבורה, הפר מזימות גאים ורשעים,
52 ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗೆ ದಬ್ಬಿ, ದೀನರನ್ನು ಮೇಲಕ್ಕೆ ಎತ್ತಿದ್ದಾರೆ.
והוריד שליטים מכיסאם. אולם את השפלים והנחותים הוא רומם!
53 ಹಸಿದವರನ್ನು ಒಳ್ಳೆಯವುಗಳಿಂದ ತುಂಬಿಸಿ, ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾರೆ.
את העניים האכיל ואת העשירים הרעיב!
54 ನಮ್ಮ ಪಿತೃಗಳಾದ ಅಬ್ರಹಾಮನಿಗೂ ಅವನ ಸಂತತಿಗೂ ತಾವು ವಾಗ್ದಾನಮಾಡಿದ ತಮ್ಮ ನಿತ್ಯ ಕರುಣೆಯನ್ನು ಜ್ಞಾಪಕಮಾಡಿಕೊಂಡು, ತಮ್ಮ ಸೇವಕನಾದ ಇಸ್ರಾಯೇಲನಿಗೆ, ದೇವರು ಸಹಾಯ ಮಾಡಿದ್ದಾರೆ.” (aiōn g165)
אלוהים תמך בעבדו ישראל, ולא שכח כי הבטיח לאבותינו – לאברהם ולזרעו – לרחם על ישראל לעולם ועד!“ (aiōn g165)
56 ಮರಿಯಳು ಸುಮಾರು ಮೂರು ತಿಂಗಳು ಎಲಿಸಬೇತಳ ಜೊತೆಯಲ್ಲಿದ್ದು, ಅನಂತರ ತನ್ನ ಮನೆಗೆ ಹಿಂತಿರುಗಿ ಹೋದಳು.
מרים נשארה אצל אלישבע כשלושה חודשים, ולאחר מכן חזרה לביתה.
57 ಎಲಿಸಬೇತಳಿಗೆ ಹೆರಿಗೆಯ ಕಾಲ ಬಂದಾಗ, ಆಕೆಯು ಒಬ್ಬ ಮಗನನ್ನು ಹೆತ್ತಳು.
בינתיים תמו ימי הריונה של אלישבע והיא ילדה בן.
58 ಕರ್ತದೇವರು ತಮ್ಮ ಮಹಾಕರುಣೆಯನ್ನು ಆಕೆಯ ಮೇಲೆ ತೋರಿಸಿದ್ದನ್ನು ಆಕೆಯ ನೆರೆಯವರೂ ಬಂಧುಗಳೂ ಕೇಳಿ, ಆಕೆಯ ಕೂಡ ಸಂತೋಷಪಟ್ಟರು.
השמועה על החסד שעשה איתה ה׳ התפשטה עד מהרה בין שכניה וקרובי משפחתה, וכולם שמחו בשמחתה.
59 ಅವರು ಎಂಟನೆಯ ದಿನ ಆ ಮಗುವಿಗೆ ಸುನ್ನತಿ ಮಾಡಿಸುವುದಕ್ಕಾಗಿ ಬಂದು, ಅವನ ತಂದೆಯ ಹೆಸರಿನಂತೆ ಮಗನನ್ನು ಜಕರೀಯನೆಂದು ನಾಮಕರಣ ಮಾಡಲಿದ್ದರು.
ביום השמיני להולדת התינוק התכנסו השכנים והקרובים לטקס ברית־המילה. האורחים היו בטוחים שהתינוק ייקרא”זכריה“– על שם אביו,
60 ಆದರೆ ಅದಕ್ಕೆ ಶಿಶುವಿನ ತಾಯಿಯು ಉತ್ತರವಾಗಿ, “ಹಾಗಲ್ಲ! ಅವನಿಗೆ ‘ಯೋಹಾನ’ ಎಂದು ಹೆಸರಿಡಬೇಕು,” ಎಂದಳು.
אולם אלישבע אמרה:”לא, שם התינוק יוחנן!“
61 ಬಂದಿದ್ದವರು ಆಕೆಗೆ, “ನಿನ್ನ ಬಂಧುಬಳಗದವರಲ್ಲಿ ಆ ಹೆಸರಿನವರು ಒಬ್ಬರೂ ಇಲ್ಲವಲ್ಲಾ,” ಎಂದರು.
”יוחנן?“התפלאו האורחים.”אבל אין במשפחתך אף אחד בשם הזה“.
62 ಶಿಶುವನ್ನು ಯಾವ ಹೆಸರಿನಿಂದ ಕರೆಯಬೇಕೆಂದು, ಅವನ ತಂದೆಗೆ ಅವರು ಸನ್ನೆಮಾಡಿದರು.
הם פנו אל זכריה (שעדיין לא היה מסוגל לדבר), ושאלו אותו בתנועות ידיים וברמזים כיצד ייקרא התינוק.
63 ಆಗ ಜಕರೀಯನು ಒಂದು ಬರೆಯುವ ಹಲಗೆಯನ್ನು ಕೇಳಿ, “ಶಿಶುವಿನ ಹೆಸರು ಯೋಹಾನ,” ಎಂದು ಬರೆದನು. ಆಗ ಅವರೆಲ್ಲರೂ ಆಶ್ಚರ್ಯಪಟ್ಟರು.
זכריה ביקש בתנועות ידיים שיביאו לו לוח, וכתב עליו:”שם הילד יוחנן“.
64 ಕೂಡಲೇ ಜಕರೀಯನಿಗೆ ಮಾತು ಬಂತು, ಅವನ ನಾಲಿಗೆಯು ಸಡಿಲವಾಯಿತು, ಅವನು ಮಾತನಾಡಿ, ದೇವರನ್ನು ಕೊಂಡಾಡಿದನು.
באותו רגע חזר אליו כושר הדיבור והוא החל לברך את אלוהים.
65 ಈ ಘಟನೆಯಿಂದ ಸುತ್ತಲೂ ವಾಸಮಾಡುತ್ತಿದ್ದವರೆಲ್ಲರಿಗೆ ಭಯವುಂಟಾಯಿತು, ಯೂದಾಯದ ಬೆಟ್ಟದ ಪ್ರಾಂತದಲ್ಲೆಲ್ಲಾ ಈ ಸಂಗತಿಗಳನ್ನು ಮಾತನಾಡಿಕೊಳ್ಳುತ್ತಿದ್ದರು.
כל השכונה נמלאה יראת כבוד, והדבר היה נושא לשיחה בכל הרי יהודה.
66 ಕೇಳಿದವರೆಲ್ಲರೂ ವಿಸ್ಮಯಗೊಂಡು, “ಈ ಮಗುವು ಎಂಥವನಾಗುವನೋ?” ಎಂದು ತಮ್ಮ ಮನಸ್ಸಿನಲ್ಲಿ ಪ್ರಶ್ನಿಸಿಕೊಂಡರು. ಕರ್ತದೇವರ ಹಸ್ತವು ಈ ಮಗುವಿನ ಮೇಲೆ ಇತ್ತು.
כל השומעים התרשמו עמוקות ואמרו:”מעניין למה נועד הילד הזה.“כי היה ברור להם שאלוהים איתו.
67 ಆಗ ಮಗುವಿನ ತಂದೆ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು:
לאחר מכן נמלא זכריה אביו רוח הקודש וניבא את הנבואה הבאה:
68 “ಇಸ್ರಾಯೇಲಿನ ಕರ್ತದೇವರಿಗೆ ಸ್ತೋತ್ರವಾಗಲಿ, ದೇವರು ತಮ್ಮ ಜನರನ್ನು ಸಂಧಿಸಿ ಅವರನ್ನು ವಿಮೋಚಿಸಿದ್ದಾರೆ.
”ברוך ה׳ אלוהי ישראל, כי פנה אל עמו, הודיע ופדה אותו.
69 ಪುರಾತನದಿಂದ ಅವರು ತಮ್ಮ ಪವಿತ್ರ ಪ್ರವಾದಿಗಳ ಬಾಯಿಂದ ಮಾತನಾಡಿದ ಪ್ರಕಾರ, ದೇವರು ತಮ್ಮ ಸೇವಕ ದಾವೀದನ ಮನೆತನದಿಂದ, ನಮಗಾಗಿ ಬಲವಾದ ರಕ್ಷಣೆಯ ಕರ್ತದೇವರನ್ನು ಎಬ್ಬಿಸಿದ್ದಾರೆ. (aiōn g165)
ה׳ שלח לנו מושיע גיבור משושלת בית דוד עבדו –
כפי שהבטיח לנו בפי נביאיו הקדושים עוד לפני זמן רב – (aiōn g165)
71 ಇದನ್ನು, ನಾವು ನಮ್ಮ ಶತ್ರುಗಳಿಂದಲೂ ನಮ್ಮನ್ನು ದ್ವೇಷಮಾಡುವವರ ಕೈಯಿಂದಲೂ ರಕ್ಷಣೆ ಹೊಂದುವಂತೆಯೂ
כדי להצילנו מיד כל אויבינו ושונאינו.
72 ನಮ್ಮ ಪಿತೃಗಳಿಗೆ ಕರುಣೆ ತೋರಿಸುವಂತೆಯೂ ನಮ್ಮ ಪಿತೃವಾದ ಅಬ್ರಹಾಮನಿಗೆ ಆಣೆಯಿಟ್ಟು ಪ್ರಮಾಣ ಮಾಡಿದಂತೆಯೂ ತಮ್ಮ ಪವಿತ್ರ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡವನಾಗಿಯೂ
אלוהים יעשה חסד עם אבותינו ויזכור את בריתו
ואת שבועתו לאברהם אבינו:
74 ನಾವು ನಮ್ಮ ಶತ್ರುಗಳ ಕೈಯಿಂದ ಬಿಡುಗಡೆಹೊಂದಿ ನಿರ್ಭಯವುಳ್ಳವರಾಗಿಯೂ
להצילנו מיד אויבינו, ולהעניק לנו את הזכות לשרתו כל ימי חיינו בקדושה, ובצדקה וללא פחד.“
75 ನಮ್ಮ ಜೀವಮಾನದ ಎಲ್ಲಾ ದಿನಗಳಲ್ಲಿ ದೇವರ ಮುಂದೆ ಪವಿತ್ರತೆಯಿಂದಲೂ ನೀತಿಯಿಂದಲೂ ಅವರನ್ನೇ ಸೇವಿಸುವವರಾಗುವಂತೆಯೂ ಈ ಪ್ರಕಾರ ಮಾಡಿದ್ದಾರೆ.
76 “ನನ್ನ ಮಗುವೇ, ನೀನಾದರೋ ಮಹೋನ್ನತರ ಪ್ರವಾದಿ ಎಂದು ಎನಿಸಿಕೊಳ್ಳುವೆ. ಯಾಕೆಂದರೆ, ನೀನು ಕರ್ತದೇವರ ಮಾರ್ಗಗಳನ್ನು ಸಿದ್ಧಮಾಡುವುದಕ್ಕೆ, ಅವರ ಮುಂದೆ ಹೋಗುವೆ.
”ואתה, ילדי הקטן, תיקרא נביא לאל עליון, כי תלך לפני האדון ותפנה לו את הדרך.
77 ನೀನು ಜನರ ಪಾಪಕ್ಷಮಾಪಣೆಯ ಮೂಲಕ ರಕ್ಷಣೆ ಹೊಂದುವ ತಿಳುವಳಿಕೆಯನ್ನು ಕೊಡುವೆ,
אתה תלמד את בני־ישראל כיצד הם יכולים להיוושע על־ידי סליחת חטאיהם.
78 ನಮ್ಮ ದೇವರ ಮಮತೆಯ ಕರುಣೆಯಿಂದಲೇ, ಸ್ವರ್ಗದಿಂದ ನಮಗೆ ಅರುಣೋದಯವು ಉಂಟಾಗಿ
בזכות אהבתו, רחמיו וטוב־לבו של אלוהים יזרח עלינו אור ממרום,
79 ಕತ್ತಲೆಯಲ್ಲಿಯೂ ಮರಣದ ನೆರಳಿನಲ್ಲಿಯೂ ವಾಸಿಸುವವರಿಗೆ ಪ್ರಕಾಶಿಸಿ, ನಮ್ಮ ಪಾದಗಳನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವಂತೆ ಮಾಡುವೆ.”
כדי להאיר לשרויים במוות ובחשכה, וכדי להוביל את רגלינו אל דרך השלום.“
80 ಆ ಶಿಶುವಾದ ಯೋಹಾನನು ಬೆಳೆದು, ಆತ್ಮದಲ್ಲಿ ಬಲಗೊಂಡು; ತನ್ನನ್ನು ಇಸ್ರಾಯೇಲರಿಗೆ ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯದಲ್ಲಿದ್ದನು.
הילד גדל, התחזק והתחשל באופיו. הוא התגורר במדבר עד שהגיע המועד להתחיל את שליחותו אל עם־ישראל.

< ಲೂಕನು 1 >