< ಯಾಜಕಕಾಂಡ 3 >
1 “‘ಯಾರಾದರು ಸಮಾಧಾನ ಸಮರ್ಪಣೆಗಾಗಿ ಬಲಿದಾನ ಮಾಡಬೇಕಾದರೆ, ಅಂಥವನು ಸಮರ್ಪಿಸುವ ಪ್ರಾಣಿ ದನಕರುವಾಗಿದ್ದಲ್ಲಿ, ಅದು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ಯೆಹೋವ ದೇವರ ದೃಷ್ಟಿಯಲ್ಲಿ ಕಳಂಕರಹಿತವಾಗಿರಬೇಕು.
၁တစ်စုံတစ်ယောက်သည် မိမိ၏နွားတစ်ကောင် ကိုမိတ်သဟာယယဇ်အဖြစ်ပူဇော်လိုလျှင် ထိုနွားသည်အပြစ်အနာကင်းသောနွားထီး သို့မဟုတ်နွားမဖြစ်ရမည်။-
2 ಅವನು ಅರ್ಪಿಸಬೇಕಾದ ಆ ಪ್ರಾಣಿಯನ್ನು ಯೆಹೋವ ದೇವರ ಸನ್ನಿಧಿಗೆ ತಂದು ಅದರ ತಲೆಯ ಮೇಲೆ ಕೈ ಇಡಬೇಕು. ದೇವದರ್ಶನದ ಗುಡಾರದ ಬಾಗಿಲಲ್ಲಿ ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
၂ထိုသူသည်ထာဝရဘုရားစံတော်မူရာတဲ တော်တံခါးဝ၌ နွား၏ဦးခေါင်းပေါ်တွင်လက် ကိုတင်၍နွားကိုသတ်ရမည်။ အာရုန်၏သား များဖြစ်ကြသောယဇ်ပုရောဟိတ်တို့သည် ယဇ်ကောင်၏သွေးကိုပလ္လင်၏ဘေးလေးဘက် စလုံးပေါ်သို့ပက်ဖျန်းရမည်။-
3 ಅವನು ಸಮಾಧಾನದ ಕಾಣಿಕೆಯ ಯಜ್ಞಾರ್ಪಣೆಯನ್ನು ಅಂದರೆ ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ,
၃ထို့နောက်နွား၏ဝမ်းတွင်းသားများရှိသမျှ အဆီ၊ ကျောက်ကပ်များနှင့်ကျောက်ကပ်အဆီ၊ အသည်းမှအကောင်းဆုံးအပိုင်းတို့ကိုထာ ဝရဘုရားအားပူဇော်ရမည်။-
4 ಎರಡು ಮೂತ್ರ ಜನಕಾಂಗಗಳನ್ನೂ, ಪಕ್ಕೆಯ ಬದಿಯಲ್ಲಿಯ ಅವುಗಳ ಮೇಲಿರುವ ಕೊಬ್ಬನ್ನೂ, ಮೂತ್ರ ಜನಕಾಂಗಗಳ ಮೇಲಿರುವ ಪೊರೆಯನ್ನೂ ಮೂತ್ರಜನಕಾಂಗಗಳೊಂದಿಗೆ ಅದನ್ನು ತೆಗೆದುಕೊಂಡು ಯೆಹೋವ ದೇವರಿಗೆ ಬೆಂಕಿಯಿಂದ ಕಾಣಿಕೆಯಾಗಿ ಸಮರ್ಪಿಸಬೇಕು.
၄
5 ಆರೋನನ ಪುತ್ರರು ಅದನ್ನು ಬಲಿಪೀಠದಲ್ಲಿ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ದಹನಬಲಿಯಾಗಿ ಸುಡಬೇಕು. ಅದು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿದ್ದು, ಯೆಹೋವ ದೇವರಿಗೆ ಸುವಾಸನೆಯಾಗಿರುವುದು.
၅ယဇ်ပုရောဟိတ်တို့သည်ယင်းတို့ကိုမီးရှို့ရာ ယဇ်နှင့်အတူပလ္လင်ပေါ်တွင်မီးရှို့ပူဇော်ရ မည်။ ဤပူဇော်သကာ၏ရနံ့ကိုထာဝရ ဘုရားနှစ်သက်တော်မူ၏။
6 “‘ಅವನ ಕಾಣಿಕೆಯು ಸಮಾಧಾನದ ಬಲಿಯಾಗಿ, ಅದು ಯೆಹೋವ ದೇವರಿಗೆ ತನ್ನ ಆಡುಕುರಿಗಳಿಂದಾದ ಕಾಣಿಕೆಯಾಗಿದ್ದರೆ, ಗಂಡಾಗಲಿ, ಹೆಣ್ಣಾಗಲಿ ಕಳಂಕರಹಿತವಾದದ್ದನ್ನು ಅವನು ಸಮರ್ಪಿಸಬೇಕು.
၆သိုးကိုဖြစ်စေ၊ ဆိတ်ကိုဖြစ်စေ၊ မိတ်သဟာယ ယဇ်အဖြစ်ပူဇော်လိုလျှင် အပြစ်အနာကင်း သောအထီးကိုဖြစ်စေအမကိုဖြစ်စေပူ ဇော်ရမည်။-
7 ಅವನು ಕುರಿಮರಿಯನ್ನು ಅರ್ಪಣೆಗೋಸ್ಕರ ಅರ್ಪಿಸುವುದಾದರೆ, ಅದನ್ನು ಅವನು ಯೆಹೋವ ದೇವರ ಎದುರಿನಲ್ಲಿ ಸಮರ್ಪಿಸಬೇಕು.
၇သိုးကိုပူဇော်သူသည်၊
8 ಅವನು ತನ್ನ ಅರ್ಪಣೆಯ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು, ಅದನ್ನು ದೇವದರ್ಶನದ ಗುಡಾರದ ಎದುರಿನಲ್ಲಿ ವಧಿಸಬೇಕು. ಇದಲ್ಲದೆ ಆರೋನನ ಪುತ್ರರು ಬಲಿಪೀಠದ ಮೇಲೆ ಸುತ್ತಲೂ ರಕ್ತವನ್ನು ಚಿಮುಕಿಸಬೇಕು.
၈တဲတော်ရှေ့တွင်သိုး၏ဦးခေါင်းပေါ်၌လက် ကိုတင်၍သိုးကိုသတ်ရမည်။ ယဇ်ပုရောဟိတ် တို့သည် ယဇ်ကောင်၏သွေးကိုယဇ်ပလ္လင်လေး ဘက်စလုံးပေါ်သို့ပက်ဖျန်းရမည်။-
9 ಸಮಾಧಾನದ ಬಲಿಗಾಗಿ ಅದರ ಇಡೀ ಹಿಂಭಾಗವನ್ನೂ, ಅದರ ಕೊಬ್ಬನ್ನೂ, ಅವನು ಬೆನ್ನೆಲುಬಿನಿಂದ ತೆಗೆದು ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ, ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ,
၉ထို့နောက်သိုးအဆီ၊ ဆူဖြိုးသောအမြီး၊ ဝမ်း တွင်းသားများမှရှိသမျှအဆီ၊ ကျောက်ကပ် များနှင့်ကျောက်ကပ်အဆီ၊ အသည်းမှအကောင်း ဆုံးအပိုင်းတို့ကိုထာဝရဘုရားအားဆက် ကပ်ရမည်။-
10 ಎರಡು ಮೂತ್ರ ಜನಕಾಂಗಗಳನ್ನೂ, ಪಕ್ಕೆಯ ಬದಿಗಳಲ್ಲಿರುವವುಗಳ ಮೇಲಿರುವ ಕೊಬ್ಬನ್ನೂ, ಕಾಳಿಜದ ಉತ್ತಮ ಭಾಗ, ಮೂತ್ರಜನಕಾಂಗಗಳೊಂದಿಗೆ ವಪೆಯ ಮೇಲಿರುವ ಪೊರೆಯನ್ನೂ ತೆಗೆದುಕೊಂಡು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿ ಯೆಹೋವ ದೇವರಿಗೆ ಸಮರ್ಪಿಸಬೇಕು.
၁၀
11 ಯಾಜಕನು ಅದನ್ನು ಬಲಿಪೀಠದ ಮೇಲೆ ಸುಡಬೇಕು. ಅದು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯ ಆಹಾರವಾಗಿರುವುದು.
၁၁တာဝန်ကျယဇ်ပုရောဟိတ်သည်ယင်းတို့ ကိုယဇ်ပလ္လင်ပေါ်တွင်မီးရှို့ပူဇော်ရမည်။
12 “‘ಸಮರ್ಪಣೆಯು ಮೇಕೆಯಾಗಿದ್ದರೆ, ಅದನ್ನು ಯೆಹೋವ ದೇವರ ಎದುರಿನಲ್ಲಿ ಸಮರ್ಪಿಸಬೇಕು.
၁၂ဆိတ်ကိုပူဇော်သူသည်။-
13 ಅವನು ಅದರ ತಲೆಯ ಮೇಲೆ ತನ್ನ ಕೈಯನ್ನಿಟ್ಟು ದೇವದರ್ಶನದ ಗುಡಾರದ ಮುಂದೆ ಅದನ್ನು ವಧಿಸಬೇಕು. ಆಗ ಆರೋನನ ಪುತ್ರರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
၁၃တဲတော်ရှေ့တွင်ဆိတ်၏ဦးခေါင်းပေါ်၌ လက် ကိုတင်၍ဆိတ်ကိုသတ်ရမည်။ ယဇ်ပုရော ဟိတ်တို့သည် ယဇ်ကောင်၏သွေးကိုယဇ်ပလ္လင် ဘေးလေးဘက်စလုံးပေါ်သို့ပက်ဖျန်းရမည်။-
14 ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ, ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ,
၁၄ထို့နောက်ဝမ်းတွင်းသားများမှရှိသမျှ အဆီ၊ ကျောက်ကပ်များနှင့်ကျောက်ကပ်အဆီ၊ အသည်းမှအကောင်းဆုံးအပိုင်းတို့ကို ထာဝရဘုရားအားဆက်ကပ်ရမည်။-
15 ಎರಡು ಮೂತ್ರ ಜನಕಾಂಗಗಳನ್ನೂ ಪಕ್ಕೆಯ ಬದಿಗಳಲ್ಲಿರುವವುಗಳ ಮೇಲಿರುವ ಕೊಬ್ಬನ್ನೂ ಕಾಳಿಜದ ಉತ್ತಮ ಭಾಗ, ಮೂತ್ರಜನಕಾಂಗಗಳೊಂದಿಗೆ ವಪೆಯ ಮೇಲಿರುವ ಪೊರೆಯನ್ನೂ ತೆಗೆದುಕೊಂಡು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿ ಯೆಹೋವ ದೇವರಿಗೆ ಸಮರ್ಪಿಸಬೇಕು.
၁၅
16 ಯಾಜಕನು ಅವುಗಳನ್ನು ಬಲಿಪೀಠದ ಮೇಲೆ ಸುಡಬೇಕು. ಅದು ಬೆಂಕಿಯಿಂದ ಮಾಡಿದ ಸುವಾಸನೆಯ ಯಜ್ಞಾರ್ಪಣೆಯ ಆಹಾರವಾಗಿರುವುದು. ಎಲ್ಲಾ ಕೊಬ್ಬು ಯೆಹೋವ ದೇವರದೇ.
၁၆ယဇ်ပုရောဟိတ်သည်ယင်းတို့ကိုယဇ်ပလ္လင် ပေါ်တွင် မီးရှို့ပူဇော်ရမည်။ ဤပူဇော်သကာ ၏ရနံ့ကိုထာဝရဘုရားနှစ်သက်တော် မူ၏။ အဆီရှိသမျှတို့သည်ထာဝရ ဘုရားနှင့်ဆိုင်၏။-
17 “‘ನೀವು ಕೊಬ್ಬನ್ನಾಗಲಿ, ರಕ್ತವನ್ನಾಗಲಿ ತಿನ್ನದೆ ಇರುವುದು ನಿಮ್ಮ ಸಂತತಿಯವರಿಗೆಲ್ಲಾ ನಿಮ್ಮ ಎಲ್ಲಾ ನಿವಾಸಗಳಲ್ಲಿ ನಿರಂತರವಾದ ಕಟ್ಟಳೆಯಾಗಿರುವುದು,’” ಎಂದು ಹೇಳಿದರು.
၁၇ဣသရေလအမျိုးသားတို့သည်အဆီ ကိုသော်လည်းကောင်း၊ သွေးကိုသော်လည်း ကောင်းမစားရ။ အရပ်ရပ်တွင်နေထိုင်သော ဣသရေလအမျိုးသားအပေါင်းတို့သည် ဤပညတ်ကိုထာဝစဉ်လိုက်နာရကြမည်။