< ಯಾಜಕಕಾಂಡ 26 >
1 “‘ನೀವು ನಿಮಗಾಗಿ ವಿಗ್ರಹಗಳನ್ನಾಗಲಿ, ಕೆತ್ತಿದ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ, ಇಲ್ಲವೆ ನಿಲ್ಲಿಸುವ ಪ್ರತಿಮೆಯನ್ನು ಮಾಡಿಕೊಳ್ಳಬೇಡಿರಿ, ಕಲ್ಲಿನ ವಿಗ್ರಹಗಳನ್ನು ನಿಮ್ಮ ದೇಶದಲ್ಲಿಟ್ಟುಕೊಂಡು ಅದಕ್ಕೆ ಅಡ್ಡಬೀಳಬೇಡಿರಿ. ಏಕೆಂದರೆ ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
너희는 자기를 위하여 우상을 만들지 말지니 목상이나 주상을 세우지 말며 너희 땅에 조각한 석상을 세우고 그에게 경배하지 말라 나는 너희 하나님 여호와임이니라
2 “‘ನನ್ನ ವಿಶ್ರಾಂತಿಯ ದಿನಗಳನ್ನು ನೀವು ಆಚರಿಸಬೇಕು. ನನ್ನ ಪರಿಶುದ್ಧಸ್ಥಳದ ವಿಷಯದಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನೇ ಯೆಹೋವ ದೇವರು.
너희는 나의 안식일을 지키며 나의 성소를 공경하라 나는 여호와니라
3 “‘ನೀವು ನನ್ನ ನಿಯಮಗಳ ಪ್ರಕಾರ ನಡೆದುಕೊಂಡು, ನನ್ನ ಆಜ್ಞೆಗಳನ್ನು ಕೈಗೊಂಡು ಅವುಗಳಂತೆ ನಡೆದರೆ,
너희가 나의 규례와 계명을 준행하면
4 ನಿಮಗೆ ಮಳೆಯನ್ನು ತಕ್ಕ ಕಾಲದಲ್ಲಿ ಸುರಿಸುವೆನು. ಆಗ ಭೂಮಿಯು ಅದರ ಬೆಳೆಯನ್ನು ಕೊಡುವುದು. ಭೂಮಿಯ ಮರಗಳು ಅವುಗಳ ಫಲವನ್ನು ಕೊಡುವವು.
내가 너희 비를 그 시후에 주리니 땅은 그 산물을 내고 밭의 수목은 열매를 맺을지라
5 ಕಣ ತುಳಿಸುವ ಕೆಲಸವು ದ್ರಾಕ್ಷಿ ಬೆಳೆಯುವವರೆಗೂ ದ್ರಾಕ್ಷಿ ಬೆಳೆಯನ್ನು ಕೂಡಿಸುವ ಕೆಲಸವು ಬಿತ್ತನೆಯ ಕಾಲದವರೆಗೂ ನಡೆಯುವವು. ನೀವು ನಿಮ್ಮ ರೊಟ್ಟಿಯನ್ನು ತಿಂದು, ತೃಪ್ತಿಹೊಂದಿ ಸುರಕ್ಷಿತವಾಗಿ ನಿಮ್ಮ ದೇಶದಲ್ಲಿ ವಾಸಮಾಡುವಿರಿ.
너희의 타작은 포도 딸 때까지 미치며 너희의 포도 따는 것은 파종할 때까지 미치리니 너희가 음식을 배불리 먹고 너희 땅에 안전히 거하리라
6 “‘ನಾನು ದೇಶದಲ್ಲಿ ಶಾಂತಿಯನ್ನು ಕೊಡುವೆನು, ಯಾರ ಭಯವೂ ಇಲ್ಲದೆ ನೀವು ಮಲಗಿಕೊಳ್ಳುವಿರಿ. ದೇಶದಲ್ಲಿ ದುಷ್ಟಮೃಗಗಳು ಇಲ್ಲದ ಹಾಗೆ ನಾನು ಮಾಡುವೆನು. ಖಡ್ಗ ನಿಮ್ಮ ದೇಶದಲ್ಲಿ ಹಾದು ಹೋಗುವುದಿಲ್ಲ.
내가 그 땅에 평화를 줄 것인즉 너희가 누우나 너희를 두렵게 할 자가 없을 것이며 내가 사나운 짐승을 그 땅에서 제할 것이요 칼이 너희 땅에 두루 행하지 아니할 것이며
7 ನೀವು ನಿಮ್ಮ ಶತ್ರುಗಳನ್ನು ಹಿಂದಟ್ಟುವಾಗ, ಅವರು ಖಡ್ಗದಿಂದ ನಿಮ್ಮ ಮುಂದೆ ಬೀಳುವರು.
너희가 대적을 쫓으리니 그들이 너희 앞에서 칼에 엎드러질 것이라
8 ನಿಮ್ಮಲ್ಲಿಯ ಐದು ಮಂದಿ ನೂರು ಮಂದಿಯನ್ನು ಹಿಂದಟ್ಟುವರು. ನಿಮ್ಮಲ್ಲಿಯ ನೂರು ಮಂದಿ, ಹತ್ತು ಸಾವಿರ ಮಂದಿಯನ್ನು ಅಟ್ಟಿಬಿಡುವರು. ನಿಮ್ಮ ಶತ್ರುಗಳು ಖಡ್ಗದಿಂದ ನಿಮ್ಮ ಮುಂದೆ ಬೀಳುವರು.
너희 다섯이 백을 쫓고 너희 백이 만을 쫓으리니 너희 대적들이 너희 앞에서 칼에 엎드러질 것이며
9 “‘ನಾನು ನಿಮ್ಮನ್ನು ಲಕ್ಷಿಸಿ, ನಿಮ್ಮನ್ನು ಅಭಿವೃದ್ಧಿ ಮಾಡಿ, ನಿಮ್ಮನ್ನು ಹೆಚ್ಚಿಸಿ, ನಿಮ್ಮ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು.
내가 너희를 권고하여 나의 너희와 세운 언약을 이행하여 너희로 번성케 하고 너희로 창대케 할 것이며
10 ನೀವು ಹಳೆಯ ಧಾನ್ಯವನ್ನು ತಿಂದು, ಹೊಸದು ಬಂದಾಗ ಹಳೆಯದನ್ನು ಹೊರಗೆ ತರುವಿರಿ.
너희는 오래 두었던 묵은 곡식을 먹다가 새 곡식을 인하여 묵은 곡식을 치우게 될 것이며
11 ಇದಲ್ಲದೆ ನಾನು ನನ್ನ ಗುಡಾರವನ್ನು ನಿಮ್ಮ ಮಧ್ಯದಲ್ಲಿ ಮಾಡಿಕೊಳ್ಳುವೆನು. ನನ್ನ ಪ್ರಾಣವು ನಿಮ್ಮನ್ನು ತಿರಸ್ಕರಿಸುವುದಿಲ್ಲ.
내가 내 장막을 너희 중에 세우리니 내 마음이 너희를 싫어하지 아니할 것이며
12 ನಾನು ನಿಮ್ಮ ಮಧ್ಯದಲ್ಲಿ ನಡೆದು ನಿಮ್ಮ ದೇವರಾಗಿರುವೆನು. ನೀವು ನನ್ನ ಜನರಾಗಿರುವಿರಿ.
나는 너희 중에 행하여 너희 하나님이 되고 너희는 나의 백성이 될 것이니라
13 ಈಜಿಪ್ಟ್ ದೇಶದವರಿಗೆ ನೀವು ದಾಸರಾಗಿರದ ಹಾಗೆ ಅವರ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿ, ನಿಮ್ಮ ನೊಗದ ಕಟ್ಟುಗಳನ್ನು ಮುರಿದು, ನಿಮ್ಮನ್ನು ತಲೆಯೆತ್ತಿ ನಡೆಯುವಂತೆ ಮಾಡಿದ ನಿಮ್ಮ ದೇವರಾದ ಯೆಹೋವ ದೇವರು ನಾನೇ.
나는 너희를 애굽 땅에서 인도하여 내어 그 종된 것을 면케 한 너희 하나님 여호와라 내가 너희 멍에 빗장목을 깨뜨리고 너희로 바로 서서 걷게 하였느니라
14 “‘ನೀವು ನನ್ನ ಮಾತನ್ನು ಕೇಳದೆ ಎಲ್ಲಾ ಆಜ್ಞೆಗಳ ಪ್ರಕಾರ ನಡೆಯದೆ ಹೋದರೆ,
그러나 너희가 내게 청종치 아니하여 이 모든 명령을 준행치 아니하며
15 ನನ್ನ ನಿಯಮಗಳನ್ನು ನೀವು ತಿರಸ್ಕರಿಸಿದರೆ, ನನ್ನ ನಿರ್ಣಯಗಳಿಗೆ ಅಸಹ್ಯಪಟ್ಟರೆ, ನೀವು ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ಎಲ್ಲಾ ಆಜ್ಞೆಗಳ ಪ್ರಕಾರ ಮಾಡದೆ ಹೋದರೆ,
나의 규례를 멸시하며 마음에 나의 법도를 싫어하여 나의 모든 계명을 준행치 아니하며 나의 언약을 배반할진대
16 ನಾನು ಸಹ ಇದನ್ನು ನಿಮಗೆ ಮಾಡುವೆನು: ನಿಮ್ಮ ಮೇಲೆ ಭೀತಿಯನ್ನು ಉಂಟುಮಾಡುವ, ಕಣ್ಣುಗಳನ್ನು ಕ್ಷೀಣಿಸುವಂತೆಯೂ ಹೃದಯವು ಕುಗ್ಗಿ ದುಃಖಕ್ಕೊಳಗಾಗುವಂತೆಯೂ ಮಾಡುವ ಕ್ಷಯರೋಗವನ್ನೂ ಚಳಿಜ್ವರವನ್ನೂ ಬರಮಾಡುವೆನು. ನೀವು ವ್ಯರ್ಥವಾಗಿ ಬೀಜವನ್ನು ಬಿತ್ತುವಿರಿ. ಏಕೆಂದರೆ ನಿಮ್ಮ ಶತ್ರುಗಳು ಅದನ್ನು ತಿಂದುಬಿಡುವರು.
내가 이같이 너희에게 행하리니 곧 내가 너희에게 놀라운 재앙을 내려 폐병과 열병으로 눈이 어둡고 생명이 쇠약하게 할 것이요 너희의 파종은 헛되리니 너희의 대적이 그것을 먹을 것임이며
17 ನಾನು ನಿಮಗೆ ವಿಮುಖನಾಗಿರುವೆನು. ಆದ್ದರಿಂದ ನೀವು ನಿಮ್ಮ ವೈರಿಗಳಿಂದ ಸೋತುಹೋಗುವಿರಿ. ನಿಮ್ಮ ವೈರಿಗಳು ನಿಮ್ಮ ಮೇಲೆ ದೊರೆತನ ಮಾಡುವರು. ಓಡಿಸುವವನು ಯಾರೂ ಇಲ್ಲದಿರುವಾಗಲೂ ಓಡಿಹೋಗುವಿರಿ.
내가 너희를 치리니 너희가 너희 대적에게 패할 것이요 너희를 미워하는 자가 너희를 다스릴 것이며 너희는 쫓는 자가 없어도 도망하리라
18 “‘ಹೀಗೂ ನನ್ನ ಮಾತನ್ನು ಕೇಳದೆ ಹೋದರೆ, ನಾನು ನಿಮ್ಮನ್ನು ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ಹೆಚ್ಚಾಗಿ ಶಿಕ್ಷಿಸುವೆನು.
너희가 그렇게 되어도 내게 청종치 아니하면 너희 죄를 인하여 내가 너희를 칠 배나 더 징치할지라
19 ನಿಮ್ಮ ಬಲದ ಗರ್ವವನ್ನು ಮುರಿದುಹಾಕಿ, ನಿಮ್ಮ ಆಕಾಶವನ್ನು ಕಬ್ಬಿಣದ ಹಾಗೆಯೂ ನಿಮ್ಮ ಭೂಮಿಯನ್ನು ಕಂಚಿನಂತೆಯೂ ಮಾಡುವೆನು.
내가 너희의 세력을 인한 교만을 꺾고 너희 하늘로 철과 같게 하며 너희 땅으로 놋과 같게 하리니
20 ಆಗ ನಿಮ್ಮ ಶಕ್ತಿಯು ವ್ಯರ್ಥವಾಗಿ ಮುಗಿದುಹೋಗುವುದು. ಏಕೆಂದರೆ ನಿಮ್ಮ ಭೂಮಿಯು ತನ್ನ ಬೆಳೆಯನ್ನು ಕೊಡದೆ ಇರುವುದು ಭೂಮಿಯ ಮರಗಳು ತಮ್ಮ ಫಲಗಳನ್ನು ಕೊಡುವುದಿಲ್ಲ.
너희 수고가 헛될지라 땅은 그 산물을 내지 아니하고 땅의 나무는 그 열매를 맺지 아니하리라
21 “‘ನನ್ನ ಮಾತನ್ನು ಕೇಳಲೊಲ್ಲದೆ ನನಗೆ ವಿರೋಧವಾಗಿ ನಡೆದರೆ, ನಾನು ನಿಮ್ಮ ಪಾಪಗಳಿಗೆ ತಕ್ಕಂತೆ ನಿಮ್ಮನ್ನು ಏಳರಷ್ಟು ಹೆಚ್ಚಾಗಿ ಬಾಧಿಸುವೆನು.
너희가 나를 거스려 내게 청종치 않을진대 내가 너희 죄대로 너희에게 칠 배나 더 재앙을 내릴 것이라
22 ಕಾಡುಮೃಗಗಳು ನಿಮ್ಮ ಮೇಲೆ ಬರುವಂತೆ ಮಾಡುವೆನು. ಅವು ನಿಮ್ಮನ್ನು ಮಕ್ಕಳಿಲ್ಲದವರನ್ನಾಗಿ ಮಾಡಿ, ನಿಮ್ಮ ದನಗಳನ್ನು ತಿಂದುಬಿಡುವವು. ನಿಮ್ಮನ್ನು ಸ್ವಲ್ಪ ಮಂದಿಯಾಗಿ ಮಾಡುವುವು. ನಿಮ್ಮ ಮಾರ್ಗಗಳು ಹಾಳಾಗಿ ಹೋಗುವುವು.
내가 들짐승을 너희 중에 보내리니 그것들이 너희 자녀를 움키고 너희 육축을 멸하며 너희 수효를 감소케 할지라 너희 도로가 황폐하리라
23 “‘ನನ್ನಿಂದಾಗುವ ಇವುಗಳಿಂದ ನೀವು ಶಿಕ್ಷಿತರಾಗದೆ ನನಗೆ ವಿರೋಧವಾಗಿ ನಡೆದರೆ,
이런 일을 당하여도 너희가 내게로 돌아오지 아니하고 나를 대항할진대
24 ನಾನು ಸಹ ನಿಮಗೆ ವಿರೋಧವಾಗಿ ನಡೆದು, ಇನ್ನೂ ಹೆಚ್ಚಾಗಿ ನಿಮ್ಮ ಪಾಪಗಳ ನಿಮಿತ್ತ, ಏಳರಷ್ಟು ಶಿಕ್ಷಿಸುವೆನು.
나 곧 나도 너희에게 대항하여 너희 죄를 인하여 너희를 칠 배나 더 칠지라
25 ಒಡಂಬಡಿಕೆಯನ್ನು ಮುರಿದದ್ದಕ್ಕಾಗಿ, ಮುಯ್ಯಿಗೆ ಮುಯ್ಯಿ ತೀರಿಸುವ ಖಡ್ಗವನ್ನು ನಾನು ನಿಮ್ಮ ಮೇಲೆ ಬರಮಾಡುವೆನು. ನೀವು ನಿಮ್ಮ ಪಟ್ಟಣಗಳಲ್ಲಿ ಸೇರಿದಾಗ, ವ್ಯಾಧಿಯನ್ನು ನಿಮ್ಮೊಳಗೆ ಬರಮಾಡುವೆನು. ನಿಮ್ಮನ್ನು ಶತ್ರುವಿನ ಕೈಗೆ ಒಪ್ಪಿಸಲಾಗುವುದು.
내가 칼을 너희에게로 가져다가 너희의 배약한 원수를 갚을 것이며 너희가 성읍에 모일지라도 너희 중에 염병을 보내고 너희를 대적의 손에 붙일 것이며
26 ನಾನು ನಿಮ್ಮ ಅನ್ನಾಧಾರವನ್ನು ಮುರಿದುಹಾಕಿದಾಗ, ಹತ್ತು ಸ್ತ್ರೀಯರು ನಿಮ್ಮ ರೊಟ್ಟಿಯನ್ನು ಒಂದೇ ಒಲೆಯಲ್ಲಿ ಸುಟ್ಟು, ತೂಕದ ಪ್ರಕಾರ ನಿಮಗೆ ರೊಟ್ಟಿಯನ್ನು ಕೊಡುವರು. ನೀವು ಅದನ್ನು ತಿನ್ನುವಿರಿ, ನಿಮಗೆ ತೃಪ್ತಿಯಾಗುವುದಿಲ್ಲ.
내가 너희 의뢰하는 양식을 끊을 때에 열 여인이 한 화덕에서 너희 떡을 구워 저울에 달아 주리니 너희가 먹어도 배부르지 아니하리라
27 “‘ಇದೆಲ್ಲಾ ಆದರೂ, ನೀವು ನನ್ನ ಮಾತನ್ನು ಕೇಳದೆ ನನಗೆ ವಿರೋಧವಾಗಿ ನಡೆದರೆ,
너희가 이같이 될지라도 내게 청종치 아니하고 내게 대항할진대
28 ನಾನು ಕೋಪದಿಂದ ನಿಮಗೆ ವಿರೋಧವಾಗಿ ನಡೆದು, ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಶಿಕ್ಷಿಸುವೆನು.
내가 진노로 너희에게 대항하되 너희 죄를 인하여 칠 배나 더 징책하리니
29 ನೀವು ನಿಮ್ಮ ಪುತ್ರಪುತ್ರಿಯರ ಮಾಂಸವನ್ನು ತಿನ್ನುವಿರಿ.
너희가 아들의 고기를 먹을 것이요 딸의 고기를 먹을 것이며
30 ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳು ಮಾಡಿ, ನಿಮ್ಮ ಧೂಪವೇದಿಗಳನ್ನು ಕಡಿದುಹಾಕಿ, ನಿಮ್ಮ ಹೆಣಗಳನ್ನು ನಿಮ್ಮ ವಿಗ್ರಹಗಳ ಮೇಲೆ ಹಾಕುವೆನು. ನಿಮ್ಮ ಬಗ್ಗೆ ನಾನು ಅಸಹ್ಯಪಡುವೆನು.
내가 너희의 산당을 헐며 너희의 태양 주상을 찍어 넘기며 너희 시체를 파상한 우상 위에 던지고 내 마음이 너희를 싫어할 것이며
31 ನಿಮ್ಮ ಪಟ್ಟಣಗಳನ್ನು ನಾನು ಕೆಡವಿಹಾಕಿ, ನಿಮ್ಮ ಪರಿಶುದ್ಧ ಸ್ಥಳಗಳನ್ನು ಹಾಳು ಮಾಡಿ, ನಿಮ್ಮ ಸುವಾಸನೆಗಳನ್ನು ಮೂಸಿ ನೋಡದೆ ಇರುವೆನು.
내가 너희 성읍으로 황폐케 하고 너희 성소들로 황량케 할 것이요 너희의 향기로운 향을 흠향치 아니하고
32 ನಾನು ದೇಶವನ್ನು ಹಾಳುಮಾಡುವೆನು. ಅದರಲ್ಲಿ ವಾಸವಾಗುವ ನಿಮ್ಮ ಶತ್ರುಗಳೂ ಅದಕ್ಕೆ ಆಶ್ಚರ್ಯಪಡುವರು.
그 땅을 황무케 하리니 거기 거하는 너희 대적들이 그것을 인하여 놀랄 것이며
33 ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ, ನಿಮ್ಮ ಹಿಂದೆ ಖಡ್ಗವನ್ನು ಬೀಸುವೆನು. ನಿಮ್ಮ ಭೂಮಿ ಹಾಳಾಗಿರುವುದು, ನಿಮ್ಮ ಪಟ್ಟಣಗಳು ನಾಶವಾಗಿರುವುವು.
내가 너희를 열방 중에 흩을 것이요 내가 칼을 빼어 너희를 따르게 하리니 너희의 땅이 황무하며 너희의 성읍이 황폐하리라
34 ಆಗ ನಾಡು ಹಾಳಾಗಿರುವ ಎಲ್ಲಾ ದಿನಗಳಲ್ಲಿಯೂ ನೀವು ನಿಮ್ಮ ಶತ್ರುಗಳ ದೇಶದಲ್ಲಿ ಇರುವವರೆಗೂ, ನಾಡು ತನ್ನ ಸಬ್ಬತ್ ಕಾಲವನ್ನು ಅನುಭವಿಸುವುದು. ಆಗ ನೆಲವು ವಿಶ್ರಮಿಸಿಕೊಂಡು ತನ್ನ ವಿಶ್ರಾಂತಿಯ ಕಾಲವನ್ನು ಅನುಭವಿಸುವುದು.
너희가 대적의 땅에 거할 동안에 너희 본토가 황무할 것이므로 땅이 안식을 누릴 것이라 그 때에 땅이 쉬어 안식을 누리리니
35 ನೀವು ನಿಮ್ಮ ಶತ್ರುಗಳ ದೇಶದಲ್ಲಿ ವಾಸವಾಗಿದ್ದಾಗ, ಹಾಳುಬಿದ್ದ ನಿಮ್ಮ ನಾಡು ತಾನು ಹೊಂದದ ವಿಶ್ರಾಂತಿಯನ್ನು ಈಗ ಸುದೀರ್ಘವಾಗಿ ಹೊಂದಿಕೊಳ್ಳುವುದು.
너희가 그 땅에 거한 동안 너희 안식시에 쉼을 얻지 못하던 땅이 그 황무할 동안에는 쉬리라
36 “‘ನಿಮ್ಮಲ್ಲಿ ಯಾರು ಉಳಿದು ಶತ್ರುಗಳ ದೇಶದಲ್ಲಿ ಇರುವರೋ, ಅವರ ಹೃದಯದಲ್ಲಿ ಭೀತಿಯನ್ನು ಹುಟ್ಟಿಸುವೆನು. ಬಡಿದಾಡುವ ಎಲೆಯ ಶಬ್ದವು ಅವರನ್ನು ಓಡಿಸುವುದು. ಖಡ್ಗಕ್ಕೆ ಓಡಿ ಹೋದ ಹಾಗೆ ಓಡಿಹೋಗುವರು.
너희 남은 자에게는 그 대적의 땅에서 내가 그들의 마음으로 약하게 하리니 그들은 바람에 불린 잎사귀 소리에도 놀라 도망하기를 칼을 피하여 도망하듯 할 것이요 쫓는 자가 없어도 엎드러질 것이라
37 ಓಡಿಸುವವನಿಲ್ಲದೆ ಒಬ್ಬರ ಮೇಲೊಬ್ಬರು ಖಡ್ಗದ ಭಯದಿಂದಾದ ಹಾಗೆ ಬೀಳುವರು. ನಿಮ್ಮ ಶತ್ರುಗಳಿಗೆದುರಾಗಿ ನಿಂತುಕೊಳ್ಳುವುದು ನಿಮ್ಮಿಂದಾಗದು.
그들은 쫓는 자가 없어도 칼 앞에 있음 같이 서로 천답하여 넘어지리니 너희가 대적을 당할 힘이 없을 것이요
38 ಜನಾಂಗಗಳೊಳಗೆ ನಾಶವಾಗುವಿರಿ. ನಿಮ್ಮ ಶತ್ರುಗಳ ದೇಶವು ನಿಮ್ಮನ್ನು ತಿಂದುಬಿಡುವುದು.
너희가 열방 중에서 망하리니 너희 대적의 땅이 너희를 삼킬 것이라
39 ನಿಮ್ಮಲ್ಲಿ ಉಳಿದವರು ತಮ್ಮ ಅಕ್ರಮದಿಂದ ನಿಮ್ಮ ಶತ್ರುಗಳ ದೇಶದಲ್ಲಿ ಕ್ಷೀಣವಾಗುವರು, ತಮ್ಮ ಪಿತೃಗಳ ಅಕ್ರಮಗಳಿಂದ ಅವರ ಸಂಗಡ ಕ್ಷೀಣವಾಗುವರು.
너희 남은 자가 너희 대적의 땅에서 자기의 죄로 인하여 쇠잔하며 그 열조의 죄로 인하여 그 열조 같이 쇠잔하리라
40 “‘ಆದರೆ ಅವರು ನನಗೆ ಮಾಡಿದ ತಮ್ಮ ದುಷ್ಕೃತ್ಯದಲ್ಲಿರುವ ತಮ್ಮ ಅಕ್ರಮವನ್ನೂ, ತಮ್ಮ ಪಿತೃಗಳ ಅಕ್ರಮವನ್ನೂ ತಾವು ನನಗೆ ವಿರೋಧವಾಗಿ ನಡೆದುಕೊಂಡದ್ದನ್ನೂ,
그들이 자기 죄와 그 열조의 죄와 및 그들이 나를 거스린 허물을 자복하고 또 자기들이 나를 대항하였으므로
41 ನಾನು ಸಹ ಅವರಿಗೆ ವಿರೋಧವಾಗಿ ನಡೆದುಕೊಂಡು ಅವರನ್ನು ತಮ್ಮ ಶತ್ರುಗಳ ದೇಶದಲ್ಲಿ ಬರಮಾಡಿದ್ದನ್ನೂ ಅರಿಕೆಮಾಡಿದರೆ, ಆಗಲೇ ತಮ್ಮ ಮೊಂಡತನವನ್ನು ಬಿಟ್ಟು ನನ್ನ ಆಜ್ಞೆಗೆ ತಲೆಬಾಗಿ, ಅವರು ತಮ್ಮ ಅಕ್ರಮದಿಂದ ಉಂಟಾದ ಶಿಕ್ಷೆಗೆ ಒಪ್ಪಿಕೊಳ್ಳುವುದಾದರೆ,
나도 그들을 대항하여 그 대적의 땅으로 끌어 갔음을 깨닫고 그 할례받지 아니한 마음이 낮아져서 그 죄악의 형벌을 순히 받으면
42 ನಾನು ಯಾಕೋಬನಿಗೆ, ಇಸಾಕನಿಗೆ ಮತ್ತು ಅಬ್ರಹಾಮನಿಗೆ ಮಾಡಿದ ನನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು, ದೇಶವನ್ನು ದಯೆಯಿಂದ ನೆನಪಿಸಿಕೊಳ್ಳುವೆನು.
내가 야곱과 맺은 내 언약과 이삭과 맺은 내 언약을 생각하며 아브라함과 맺은 내 언약을 생각하고 그 땅을 권고하리라
43 ಅವರು ಬಿಟ್ಟುಹೋದ ಸ್ವದೇಶವು ಯಾರೂ ಇಲ್ಲದೆ ಹಾಳಾದ ವೇಳೆಯಲ್ಲಿ ತನ್ನ ವಿಶ್ರಾಂತಿಯನ್ನು ಅನುಭವಿಸುವುದು. ಆದರೆ ಅವರು ತಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ಅನುಭವಿಸುವರು. ಅದು ಏಕೆಂದರೆ, ಅವರು ನನ್ನ ನ್ಯಾಯಗಳನ್ನು ಹೇಸಿ, ತಮ್ಮ ಹೃದಯಗಳಲ್ಲಿ ನನ್ನ ನಿಯಮಗಳನ್ನು ತಾತ್ಸಾರ ಮಾಡಿದ್ದರಿಂದಲೇ.
그들이 나의 법도를 싫어하며 나의 규례를 멸시하였으므로 그 땅을 떠나서 사람이 없을 때에 땅이 황폐하여 안식을 누릴 것이요 그들은 자기 죄악으로 형벌을 순히 받으리라
44 ಆದರೂ ಅವರು ತಮ್ಮ ಶತ್ರುಗಳ ದೇಶದಲ್ಲಿರುವಾಗ ಅವರನ್ನು ಧಿಕ್ಕರಿಸದೆ, ಅವರನ್ನು ಅಸಹ್ಯಪಡದೆ, ಅವರನ್ನು ಸಂಪೂರ್ಣವಾಗಿ ನಾಶಮಾಡದೆಯೂ, ಅವರ ಸಂಗಡ ಇರುವ ನನ್ನ ಒಡಂಬಡಿಕೆಯನ್ನು ಮುರಿಯದೆಯೂ ಇರುವೆನು. ಏಕೆಂದರೆ ಅವರ ದೇವರಾಗಿರುವ ಯೆಹೋವ ದೇವರು ನಾನೇ.
그런즉 그들이 대적의 땅에 거할 때에 내가 싫어 버리지 아니하며 미워하지 아니하며 아주 멸하지 아니하여 나의 그들과 세운 언약을 폐하지 아니하리니 나는 여호와 그들의 하나님이 됨이라
45 ನಾನು ಅವರ ಪಿತೃಗಳ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು, ಅವರಿಗೆ ಹಿತವನ್ನೇ ಮಾಡುವೆನು. ನಾನು ಅವರಿಗೆ ದೇವರಾಗಿರಬೇಕೆಂದೇ, ಅವರ ಪಿತೃಗಳನ್ನು ಎಲ್ಲಾ ಜನಾಂಗಗಳ ಮುಂದೆ ಈಜಿಪ್ಟಿನಿಂದ ಬರಮಾಡಿದೆನು. ನಾನೇ ಯೆಹೋವ ದೇವರು.’”
내가 그들의 하나님이 되기 위하여 열방의 목전에 애굽에서 인도하여 낸 그들의 열조와 맺은 언약을 그들을 위하여 기억하리라 나는 여호와니라
46 ಯೆಹೋವ ದೇವರು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ತನಗೂ, ಇಸ್ರಾಯೇಲರಿಗೂ ಮಧ್ಯದಲ್ಲಿ ಇಟ್ಟ ನಿಯಮಗಳೂ, ನ್ಯಾಯಗಳೂ, ಆಜ್ಞಾವಿಧಿಗಳೂ ಇವೇ.
이상은 여호와께서 시내 산에서 자기와 이스라엘 자손 사이에 모세로 세우신 규례와 법도와 율법이니라