< ಯಾಜಕಕಾಂಡ 23 >

1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
Chúa Hằng Hữu phán bảo Môi-se:
2 “ಇಸ್ರಾಯೇಲರೊಂದಿಗೆ ನೀನು ಮಾತನಾಡಿ ಅವರಿಗೆ ಹೀಗೆ ಹೇಳು, ‘ನೀವು ಪರಿಶುದ್ಧ ಸಭೆಗಳಾಗಿ ಸೇರಿ ಯೆಹೋವ ದೇವರಾಗಿರುವ ನನಗೋಸ್ಕರ ನೇಮಕವಾದ ಈ ಹಬ್ಬಗಳನ್ನು ಪ್ರಕಟಿಸಬೇಕು.
“Hãy nói với người Ít-ra-ên: Đây là những ngày lễ Chúa Hằng Hữu ấn định; các ngươi sẽ hội họp trong những ngày thánh đó.
3 “‘ಆರು ದಿವಸ ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ಸಬ್ಬತ್ ದಿನ. ಆ ದಿನವು ಪರಿಶುದ್ಧ ದಿನವಾಗಿರುವುದು. ನೀವು ಆ ದಿನದಲ್ಲಿ ಕೆಲಸಮಾಡಬಾರದು. ನಿಮ್ಮ ಎಲ್ಲಾ ನಿವಾಸಗಳಲ್ಲಿಯೂ ಅದು ಯೆಹೋವ ದೇವರ ಸಬ್ಬತ್ ದಿನವಾಗಿರುವುದು.
Ngày lễ Sa-bát là một ngày nghỉ long trọng, ngày nhóm họp thánh. Làm công việc trong sáu ngày, nhưng nghỉ ngày thứ bảy. Dù các ngươi ở đâu, ngày nghỉ cuối tuần cũng là ngày của Chúa Hằng Hữu.
4 “‘ಇವು ಯೆಹೋವ ದೇವರ ಹಬ್ಬಗಳು: ನೀವು ನೇಮಕವಾದ ಕಾಲಗಳಲ್ಲಿ ನಿಮ್ಮ ಪವಿತ್ರ ಸಭಾ ಕೂಟಗಳಲ್ಲಿ ಈ ಹಬ್ಬಗಳನ್ನು ಪ್ರಕಟಿಸಬೇಕು.
Đây là những ngày lễ thánh hằng năm được Chúa Hằng Hữu ấn định, mỗi dịp lễ phải thông báo cho toàn dân.”
5 ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯಲ್ಲಿ ಯೆಹೋವ ದೇವರ ಪಸ್ಕಹಬ್ಬವಾಗಬೇಕು.
“Lễ Vượt Qua của Chúa Hằng Hữu phải tổ chức vào tối ngày mười bốn tháng giêng.
6 ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಯೆಹೋವ ದೇವರಿಗೋಸ್ಕರ ಆಚರಿಸಬೇಕು. ಅದು ಮೊದಲುಗೊಂಡು ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು.
Lễ Bánh Không Men dâng lên Chúa Hằng Hữu kéo dài bảy ngày, bắt đầu ngày mười lăm tháng giêng.
7 ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು. ಯಾವ ತರವಾದ ಉದ್ಯೋಗವನ್ನು ನೀವು ಆ ದಿನದಲ್ಲಿ ಮಾಡಬೇಡಿರಿ.
Ngày đầu là ngày nhóm họp thánh, không ai được làm việc nặng nhọc.
8 ಆದರೆ ಏಳು ದಿವಸ ನೀವು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಬಲಿಯನ್ನು ಸಮರ್ಪಿಸಬೇಕು. ಏಳನೆಯ ದಿನದಲ್ಲಿ ಪರಿಶುದ್ಧ ಸಭಾಕೂಟವಿರುವುದು. ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡಬಾರದು.’”
Suốt bảy ngày, ngày nào cũng phải dâng lễ thiêu lên Chúa Hằng Hữu. Đến ngày thứ bảy, hãy tổ chức nhóm họp thánh, và không được làm những việc thông thường.”
9 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
Chúa Hằng Hữu lại phán bảo Môi-se:
10 “ಇಸ್ರಾಯೇಲರೊಂದಿಗೆ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ: ‘ನಾನು ನಿಮಗೆ ಕೊಡುವ ದೇಶದೊಳಕ್ಕೆ ನೀವು ಬಂದಾಗ ಮತ್ತು ಅಲ್ಲಿಯ ಸುಗ್ಗಿಯನ್ನು ಕೊಯ್ದರೆ, ನಿಮ್ಮ ಸುಗ್ಗಿಯ ಪ್ರಥಮ ಫಲಗಳ ಸಿವುಡನ್ನು ಯಾಜಕನ ಬಳಿಗೆ ತರಬೇಕು.
“Hãy nói với người Ít-ra-ên: Khi các ngươi vào lãnh thổ Ta cho, trong vụ gặt đầu tiên, phải đem bó lúa đầu mùa đến cho thầy tế lễ.
11 ಅದು ನಿಮಗೋಸ್ಕರ ಅಂಗೀಕಾರವಾಗುವಂತೆ ಅದನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಅರ್ಪಿಸಬೇಕು. ಸಬ್ಬತ್ ದಿನವಾದ ಮಾರನೆಯ ದಿನ ಯಾಜಕನು ಅದನ್ನು ಅರ್ಪಿಸಬೇಕು.
Vào ngày sau ngày Sa-bát, thầy tế lễ sẽ đem bó lúa dâng lên Chúa Hằng Hữu theo cách đưa qua đưa lại; lễ vật sẽ được chấp nhận.
12 ನೀವು ಸಿವುಡನ್ನು ಅರ್ಪಿಸುವ ದಿನದಲ್ಲಿ ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸುವಂತೆ ಒಂದು ವರ್ಷದ ಮತ್ತು ಕಳಂಕರಹಿತವಾದ ಕುರಿಮರಿಯನ್ನು ಅರ್ಪಿಸಬೇಕು.
Trong cùng ngày ấy, các ngươi phải đem một con chiên đực một tuổi không tì vít làm tế lễ thiêu dâng lên Chúa Hằng Hữu.
13 ಇದರೊಂದಿಗೆ, ಧಾನ್ಯ ಸಮರ್ಪಣೆಯಲ್ಲಿ ಬೆರೆಸಿದ ಎಣ್ಣೆ ಮತ್ತು ಮೂರು ಕಿಲೋಗ್ರಾಂ ನಯವಾದ ಹಿಟ್ಟನ್ನು ಆಹ್ಲಾದಕರವಾದ ಪರಿಮಳದ ರೂಪದಲ್ಲಿ ಯೆಹೋವ ದೇವರಿಗೆ ಅರ್ಪಿಸಬೇಕು. ಇದಲ್ಲದೆ ಅದರೊಂದಿಗೆ ಸಮರ್ಪಿಸಬೇಕಾದ ಪಾನದ್ರವ್ಯವು ಸುಮಾರು ಒಂದು ಲೀಟರ್ ದ್ರಾಕ್ಷಾರಸ ಆಗಿರಬೇಕು.
Đồng thời, cũng dâng ngũ cốc, gồm 4,4 lít bột mịn pha dầu, dùng lửa dâng hương thơm lên Chúa Hằng Hữu, cùng với một lít rượu nho.
14 ಅದೇ ದಿನದಲ್ಲಿ ನೀವು ನಿಮ್ಮ ದೇವರಿಗೆ ಬಲಿಯನ್ನು ತರುವವರೆಗೆ ರೊಟ್ಟಿಯನ್ನಾಗಲಿ, ಹುರಿದ ಕಾಳನ್ನಾಗಲಿ ಇಲ್ಲವೆ ಹಸಿರಾದ ತೆನೆಗಳನ್ನಾಗಲಿ ತಿನ್ನಬಾರದು. ಇದು ನಿಮಗೆ ನಿಮ್ಮ ಸಂತತಿಯ ಎಲ್ಲಾ ನಿವಾಸಗಳಲ್ಲಿಯೂ ಶಾಶ್ವತವಾದ ನಿಯಮವಾಗಿರಬೇಕು.
Không ai được ăn bánh hoặc ngũ cốc—còn tươi hay đã phơi khô—cho đến ngày hôm ấy là ngày dâng lễ vật lên Đức Chúa Trời. Luật này áp dụng vĩnh viễn qua các thế hệ, trong khắp lãnh thổ.”
15 “‘ಸಬ್ಬತ್ ದಿನದ ಮಾರನೆಯ ದಿನ ನೀವು ನೈವೇದ್ಯವಾಗಿ ನಿವಾಳಿಸಿದ ಸಿವುಡನ್ನು ತಂದ ದಿನದಿಂದ ಏಳು ವಾರಗಳು ಪೂರ್ಣವಾಗುವವರೆಗೆ ಲೆಕ್ಕಿಸಬೇಕು.
“Từ ngày sau ngày Sa-bát, là ngày các ngươi sẽ đem dâng ngũ cốc mới thu hoạch lên Chúa, hãy đếm đủ bảy tuần lễ,
16 ಏಳನೆಯ ಸಬ್ಬತ್ ದಿನದ ಮಾರನೆಯ ದಿನದಿಂದ ನೀವು ಐವತ್ತು ದಿನಗಳನ್ನು ಲೆಕ್ಕಿಸಬೇಕು. ನೀವು ಯೆಹೋವ ದೇವರಿಗೆ ಹೊಸ ಧಾನ್ಯ ಸಮರ್ಪಣೆಯನ್ನು ಅರ್ಪಿಸಬೇಕು.
tức là đếm năm mươi ngày cho đến sau ngày Sa-bát thứ bảy, và dâng một tế lễ chay mới lên Chúa Hằng Hữu.
17 ಇದಲ್ಲದೆ ನೀವು ನಿಮ್ಮ ಮನೆಗಳಿಂದ ತಂದ ಹಿಟ್ಟಿನಲ್ಲಿ ಎರಡೆರಡು ಓಮರ್ ಹಿಟ್ಟಿನಿಂದ ಎರಡು ರೊಟ್ಟಿಗಳನ್ನು ಮಾಡಬೇಕು. ಇವುಗಳನ್ನು ಹುಳಿಹಾಕಿದ ಗೋಧಿಯ ಹಿಟ್ಟಿನಿಂದ ಮಾಡಿ ಪ್ರಥಮಫಲವಾಗಿ ಯೆಹೋವ ದೇವರಿಗೆ ನೈವೇದ್ಯವಾಗಿ ನಿವಾಳಿಸಬೇಕು.
Lấy 4,4 lít bột mịn pha men, làm hai ổ bánh để dâng đưa qua đưa lại; bánh này sẽ được nướng tại nhà đem tới, làm lễ vật đầu mùa lên Chúa Hằng Hữu.
18 ಇದಲ್ಲದೆ ನೀವು ರೊಟ್ಟಿಯೊಂದಿಗೆ ಕಳಂಕರಹಿತವಾದ ಒಂದು ವರ್ಷದ ಏಳು ಕುರಿಮರಿಗಳನ್ನೂ ಒಂದು ಎಳೆಯ ಹೋರಿಯನ್ನೂ ಎರಡು ಟಗರುಗಳನ್ನೂ ಸಮರ್ಪಿಸಬೇಕು. ಅವು ಯೆಹೋವ ದೇವರಿಗೆ ದಹನಬಲಿಗಳಾಗುವುವು. ಅವುಗಳೊಂದಿಗೆ ಆಹಾರ ಬಲಿಯು ಮತ್ತು ಪಾನಾರ್ಪಣೆಗಳು, ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸುವಾಸನೆಯಾದ ಅರ್ಪಣೆಗಳಾಗಿರಬೇಕು.
Cùng với bánh và rượu, các ngươi sẽ dâng bảy con chiên một tuổi không tì vít, một bò tơ đực và hai chiên đực, dùng lửa dâng hương thơm lên Chúa Hằng Hữu.
19 ತರುವಾಯ ಹೋತವನ್ನು ಪಾಪ ಪರಿಹಾರದ ಬಲಿಯಾಗಿಯೂ ಮತ್ತು ಸಮಾಧಾನ ಬಲಿಯಾಗಿ ಒಂದು ವರ್ಷದ ಎರಡು ಕುರಿಮರಿಗಳನ್ನು ಬಲಿಯಾಗಿ ಅರ್ಪಿಸಬೇಕು.
Các ngươi cũng sẽ dâng một dê đực làm lễ chuộc tội, hai chiên đực một tuổi làm lễ tạ ơn.
20 ಯಾಜಕನು ಯೆಹೋವ ದೇವರ ಸನ್ನಿಧಿಯಲ್ಲಿ ಪ್ರಥಮ ಫಲದ ರೊಟ್ಟಿಯೊಂದಿಗೂ, ಎರಡು ಕುರಿಮರಿಗಳೊಂದಿಗೂ ಅವುಗಳನ್ನು ನೈವೇದ್ಯವಾಗಿ ನಿವಾಳಿಸಬೇಕು. ಅವು ಯೆಹೋವ ದೇವರಿಗೆ ಪರಿಶುದ್ಧವಾಗಿದ್ದು ಯಾಜಕನಿಗೋಸ್ಕರ ಇರಬೇಕು.
Thầy tế lễ sẽ dâng các lễ vật này lên Chúa Hằng Hữu theo cách đưa qua đưa lại, cùng với hai ổ bánh làm bằng ngũ cốc đầu mùa. Các lễ vật này là thánh được dâng lên Chúa Hằng Hữu, và sẽ thuộc về thầy tế lễ.
21 ಅದೇ ದಿನದಲ್ಲಿ ಪವಿತ್ರ ಸಭೆ ಕೂಡುವುದೆಂದು ಪ್ರಕಟಿಸಬೇಕು ಮತ್ತು ಆ ದಿನದಲ್ಲಿ ನೀವು ಉದ್ಯೋಗವನ್ನೂ ಮಾಡಬಾರದು. ಇದು ನಿಮಗೂ, ನಿಮ್ಮ ಸಂತತಿಯವರಿಗೂ, ನೀವು ಎಲ್ಲೇ ಇದ್ದರೂ ಪಾಲಿಸಬೇಕಾದ ಶಾಶ್ವತ ನಿಯಮ.
Ngày hôm ấy, phải thông báo triệu tập dân chúng đến dự thánh lễ, không ai được làm việc nặng nhọc. Luật này áp dụng vĩnh viễn qua các thế hệ, trong khắp lãnh thổ.
22 “‘ನಿಮ್ಮ ಭೂಮಿಯ ಸುಗ್ಗಿಯನ್ನು ನೀವು ಕೊಯ್ಯುವಾಗ, ನಿಮ್ಮ ಹೊಲದ ಮೂಲೆಯನ್ನು ಸಂಪೂರ್ಣವಾಗಿ ಕೊಯ್ಯಬಾರದು, ಇಲ್ಲವೆ ನಿಮ್ಮ ಸುಗ್ಗಿಯಲ್ಲಿ ಯಾವ ಹಕ್ಕಲನ್ನೂ ಕೂಡಿಸಿಕೊಳ್ಳಬಾರದು. ನೀವು ಅವುಗಳನ್ನು ಬಡವರಿಗಾಗಿ ಮತ್ತು ಪರಕೀಯರಿಗಾಗಿ ಬಿಟ್ಟುಬಿಡಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’”
Khi gặt hái thổ sản, đừng gặt sạch tận góc đồng, cũng đừng mót lại phần đã sót. Hãy để các phần đó cho người nghèo và khách tạm trú. Ta là Chúa Hằng Hữu, Đức Chúa Trời của các ngươi.”
23 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
Chúa Hằng Hữu phán bảo Môi-se:
24 “ಇಸ್ರಾಯೇಲರೊಂದಿಗೆ ಮಾತನಾಡಿ: ‘ಏಳನೆಯ ತಿಂಗಳಿನಲ್ಲಿ ಮೊದಲನೆಯ ದಿನದಲ್ಲಿ ನಿಮಗೆ ತುತೂರಿಗಳನ್ನು ಊದುವ ಜ್ಞಾಪಕಾರ್ಥವಾದ ಸಬ್ಬತ್ ದಿನವಾಗಿರಬೇಕು. ಆ ದಿನ ಪರಿಶುದ್ಧ ಸಭೆಯ ಕೂಟವೂ ಇರಬೇಕು.
“Hãy nói với người Ít-ra-ên: Ngày mồng một tháng bảy là ngày nghỉ long trọng, một ngày kỷ niệm, phải thổi kèn triệu tập dân đến dự thánh lễ.
25 ನೀವು ಅದರಲ್ಲಿ ಕಷ್ಟಕರವಾದ ಕೆಲಸವನ್ನು ಮಾಡಬಾರದು. ಆದರೆ ದಹನಬಲಿಯನ್ನು ಯೆಹೋವ ದೇವರಿಗೆ ಅರ್ಪಿಸಬೇಕು,’” ಎಂದು ಹೇಳಿದರು.
Ngày ấy không ai làm việc nặng nhọc, nhưng sẽ dâng tế lễ thiêu lên Chúa Hằng Hữu.”
26 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
Chúa Hằng Hữu phán bảo Môi-se:
27 “ಈ ಏಳನೆಯ ತಿಂಗಳಿನ ಹತ್ತನೆಯ ದಿವಸವು ಪ್ರಾಯಶ್ಚಿತ್ತದ ದಿವಸವಾಗಿರುವುದು. ಅದು ನಿಮಗೆ ಒಂದು ಪರಿಶುದ್ಧ ಸಭೆಯ ಕೂಟವಾಗಿರುವುದು. ನೀವು ಉಪವಾಸ ಮಾಡಿ ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನು ಯೆಹೋವ ದೇವರಿಗೆ ಅರ್ಪಿಸಬೇಕು.
“Ngày mồng mười tháng bảy là Ngày Chuộc Tội. Toàn dân phải họp lại trong ngày thánh này, để ăn năn hối lỗi và dâng tế lễ thiêu lên Chúa Hằng Hữu.
28 ಆ ದಿವಸದಲ್ಲಿ ನೀವು ಕೆಲಸವನ್ನು ಮಾಡಬಾರದು. ಏಕೆಂದರೆ ಅದು ನಿಮಗೋಸ್ಕರ ನಿಮ್ಮ ದೇವರಾಗಿರುವ ಯೆಹೋವ ದೇವರ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಪ್ರಾಯಶ್ಚಿತ್ತದ ದಿವಸವಾಗಿರುವುದು.
Không ai làm việc trong Ngày Chuộc Tội, chỉ lo chuộc tội mình trước mặt Chúa Hằng Hữu, Đức Chúa Trời các ngươi.
29 ಅದೇ ದಿವಸದಲ್ಲಿ ಯಾರಾದರೂ ಉಪವಾಸ ಮಾಡದೆ ಇದ್ದಲ್ಲಿ, ಅವರು ತಮ್ಮ ಜನರೊಳಗಿಂದ ಸಂಪೂರ್ಣವಾಗಿ ತೆಗೆಯಲಾಗುವುದು.
Ai không xét mình hối lỗi hôm ấy sẽ bị trục xuất khỏi cộng đồng.
30 ಅದೇ ದಿವಸದಲ್ಲಿ ಯಾರಾದರೂ ಕೆಲಸವನ್ನು ಮಾಡಿದರೆ, ಅವರನ್ನು ನಾನು ಅವರ ಜನರ ಮಧ್ಯದಿಂದ ನಾಶಮಾಡುವೆನು.
Ai làm bất kỳ việc gì trong ngày ấy, Ta sẽ khai trừ người ấy khỏi cộng đồng.
31 ನೀವು ಯಾವ ತರಹದ ಕೆಲಸವನ್ನೂ ಮಾಡಬಾರದು. ಇದು ನಿಮ್ಮ ಸಂತತಿಗೆ ಎಲ್ಲಾ ನಿವಾಸಗಳಲ್ಲಿ ಶಾಶ್ವತವಾದ ನಿಯಮವಾಗಿರಬೇಕು.
Luật này áp dụng đời đời cho mọi thế hệ, trong khắp lãnh thổ.
32 ಇದು ನಿಮಗೆ ಸಬ್ಬತ್ ದಿನವಾಗಿರುವುದು. ನೀವು ನಿಮ್ಮನ್ನು ಉಪವಾಸ ಇಡಬೇಕು. ಆ ತಿಂಗಳಿನ ಒಂಬತ್ತನೆಯ ದಿವಸದ ಸಾಯಂಕಾಲದಿಂದ ಹಿಡಿದು ಮರುದಿನದ ಸಂಜೆಯವರೆಗೆ ಸಬ್ಬತ್ ದಿನವನ್ನು ಆಚರಿಸಬೇಕು,” ಎಂಬದೇ.
Ngày ấy là một ngày nghỉ long trọng, phải xét mình hối lỗi. Lễ này bắt đầu tối ngày chín và chấm dứt tối ngày mười tháng bảy.”
33 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
Chúa Hằng Hữu phán bảo Môi-se:
34 “ಇಸ್ರಾಯೇಲರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು: ‘ಈ ಏಳನೆಯ ತಿಂಗಳಿನ ಹದಿನೈದನೆಯ ದಿವಸವು ಏಳು ದಿವಸಗಳವರೆಗೆ ಯೆಹೋವ ದೇವರಿಗೆ ಗುಡಾರಗಳ ಹಬ್ಬವಾಗಿರುವುದು.
“Hãy nói với người Ít-ra-ên: Ngày rằm tháng bảy sẽ là Lễ Lều Tạm của Chúa Hằng Hữu. Phải giữ lễ này trong bảy ngày.
35 ಮೊದಲನೆಯ ದಿವಸದಲ್ಲಿ ಪರಿಶುದ್ಧ ಸಭೆಯ ಕೂಟವಿರುವುದು. ನೀವು ಅದರಲ್ಲಿ ಕಷ್ಟಕರವಾದ ಕೆಲಸಗಳನ್ನು ಮಾಡಬಾರದು.
Ngày thứ nhất là ngày hội họp thánh, không ai được làm việc nặng nhọc.
36 ಏಳು ದಿವಸ ನೀವು ಬೆಂಕಿಯ ಮೂಲಕ ಬಲಿಗಳನ್ನು ಯೆಹೋವ ದೇವರಿಗೆ ಅರ್ಪಿಸಬೇಕು. ಎಂಟನೆಯ ದಿವಸವು ನಿಮಗೆ ಪರಿಶುದ್ಧ ಕೂಟವಾಗಿರುವುದು. ನೀವು ಬೆಂಕಿಯ ಮೂಲಕ ಬಲಿಯನ್ನು ಯೆಹೋವ ದೇವರಿಗೆ ಅರ್ಪಿಸಬೇಕು. ಅದೊಂದು ಗಂಭೀರ ಸಭೆಯಾಗಿರುವುದು. ಅದರಲ್ಲಿ ನೀವು ಕಷ್ಟಕರವಾದ ಕೆಲಸಗಳನ್ನು ಮಾಡಬಾರದು.
Trong suốt bảy ngày lễ này, ngày nào cũng phải dâng tế lễ thiêu lên Chúa Hằng Hữu. Ngày thứ tám lại là ngày hội họp thánh long trọng, cũng sẽ có lễ thiêu dâng lên Chúa Hằng Hữu. Không ai được làm việc nặng nhọc.
37 “‘ನೀವು ಪರಿಶುದ್ಧ ಸಭೆಯಾಗಿ ಯೆಹೋವ ದೇವರ ನೇಮಕವಾದ ಹಬ್ಬಗಳು ಇವೇ. ಇವುಗಳ ಒಂದೊಂದು ದಿವಸದಲ್ಲಿ ಯೆಹೋವ ದೇವರಿಗೆ ದಹನಬಲಿಯನ್ನೂ, ಧಾನ್ಯ ಸಮರ್ಪಣೆಯನ್ನೂ, ಯಜ್ಞವನ್ನೂ, ಪಾನದ್ರವ್ಯ ಬಲಿಗಳನ್ನೂ ಅರ್ಪಿಸಬೇಕು.
(Đó là những ngày lễ Chúa ấn định, phải thông báo triệu tập dân chúng đến dự các buổi họp thánh, và dùng lửa dâng lễ vật lên Chúa Hằng Hữu gồm có sinh tế, ngũ cốc, rượu—như đã ấn định.
38 ಯೆಹೋವ ದೇವರ ವಿಶ್ರಾಂತಿಯ ದಿನಗಳ ಹೊರತಾಗಿಯೂ, ನೀವು ಯೆಹೋವ ದೇವರಿಗೆ ಸಮರ್ಪಿಸುವ ನಿಮ್ಮ ದಾನಗಳ ಹೊರತಾಗಿಯೂ, ನಿಮ್ಮ ಎಲ್ಲಾ ಹರಕೆಗಳ ಹೊರತಾಗಿಯೂ, ನಿಮ್ಮ ಎಲ್ಲಾ ಸ್ವಯಿಚ್ಛೆಯ ಕಾಣಿಕೆಗಳ ಹೊರತಾಗಿಯೂ ಸಲ್ಲಿಸಬೇಕಾದ ಅರ್ಪಣೆಗಳಿರುತ್ತವೆ.
Các ngày lễ này là những ngày nghỉ ngoài các ngày nghỉ cuối tuần thông thường; các lễ vật dâng trong các ngày ấy là những lễ vật ngoài các lễ vật thông thường, và cũng không tính đến các tế lễ khác như lễ vật khấn nguyện, và mọi lễ vật tự nguyện dâng lên Chúa Hằng Hữu.)
39 “‘ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಭೂಮಿಯ ಫಲವನ್ನು ಕೂಡಿಸಿದಾಗ, ಯೆಹೋವ ದೇವರಿಗೆ ಏಳು ದಿವಸಗಳ ಹಬ್ಬವನ್ನು ಕೈಗೊಳ್ಳಬೇಕು. ಮೊದಲನೆಯ ದಿನವು ಸಬ್ಬತ್ ದಿನವಾಗಿರಬೇಕು ಮತ್ತು ಎಂಟನೆಯ ದಿನವು ಸಬ್ಬತ್ ದಿನವಾಗಿರಬೇಕು.
Ngày rằm tháng bảy, sau khi đã gặt hái xong, mọi người sẽ giữ lễ này cho Chúa Hằng Hữu bảy ngày, họ sẽ nghỉ ngơi để hội họp trong ngày thứ nhất và ngày thứ tám.
40 ಮೊದಲನೆಯ ದಿವಸದಲ್ಲಿ ನೀವು ಸುಂದರವಾದ ಮರಗಳ ರೆಂಬೆಗಳನ್ನೂ, ಖರ್ಜೂರ ಮರಗಳ ರೆಂಬೆಗಳನ್ನೂ, ದಟ್ಟವಾದ ಮರಗಳ ರೆಂಬೆಗಳನ್ನೂ, ಹಳ್ಳದ ನೀರವಂಜಿ ಮರಗಳನ್ನೂ ತೆಗೆದುಕೊಂಡು ಏಳು ದಿನಗಳವರೆಗೆ ನಿಮ್ಮ ದೇವರಾಗಿರುವ ಯೆಹೋವ ದೇವರ ಎದುರಿನಲ್ಲಿ ಸಂತೋಷ ಪಡಬೇಕು.
Vào ngày thứ nhất, các ngươi sẽ lấy nhánh cây đầy quả, cành chà là, nhánh cây đầy lá, cành dương liễu, và vui mừng trong bảy ngày trước mặt Chúa Hằng Hữu, Đức Chúa Trời các ngươi.
41 ವರ್ಷದಲ್ಲಿ ನೀವು ಏಳು ದಿವಸಗಳ ಹಬ್ಬವನ್ನು ಯೆಹೋವ ದೇವರಿಗಾಗಿ ಕೈಗೊಳ್ಳಬೇಕು. ಇದು ನಿಮ್ಮ ಸಂತತಿಗಳಲ್ಲಿ ಶಾಶ್ವತವಾದ ನಿಯಮವಾಗಿರಬೇಕು. ನೀವು ಇದನ್ನು ಏಳನೆಯ ತಿಂಗಳಿನಲ್ಲಿ ಆಚರಿಸಬೇಕು.
Bảy ngày lễ trong tháng bảy hằng năm này phải được tôn trọng mãi mãi qua các thế hệ.
42 ಏಳು ದಿವಸಗಳವರೆಗೆ ನೀವು ಗುಡಾರಗಳಲ್ಲಿ ವಾಸಿಸಬೇಕು. ಸ್ವದೇಶೀಯರಾದ ಇಸ್ರಾಯೇಲರಾಗಿ ಹುಟ್ಟಿದವರೆಲ್ಲರೂ ಗುಡಾರಗಳಲ್ಲಿ ವಾಸಿಸಬೇಕು.
Mọi người Ít-ra-ên sẽ ở lều trong bảy ngày.
43 ಏಕೆಂದರೆ ನಾನು ಇಸ್ರಾಯೇಲರನ್ನು ಈಜಿಪ್ಟ್ ದೇಶದೊಳಗಿನಿಂದ ಹೊರಗೆ ಬರಮಾಡಿದಾಗ, ಅವರು ಗುಡಾರಗಳಲ್ಲಿ ವಾಸಿಸುವಂತೆ ಮಾಡಿದೆನೆಂದು ನಿಮ್ಮ ಸಂತತಿಯವರು ತಿಳಿದುಕೊಳ್ಳುವರು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’”
Như vậy, từ thế hệ này qua thế hệ khác, họ sẽ tưởng niệm thời kỳ ở lều sau khi Ta đem họ ra khỏi Ai Cập. Ta là Chúa Hằng Hữu, Đức Chúa Trời của các ngươi.”
44 ಹೀಗೆ ಮೋಶೆಯು ಇಸ್ರಾಯೇಲರಿಗೆ ಯೆಹೋವ ದೇವರ ಹಬ್ಬಗಳನ್ನು ನೇಮಕಮಾಡಿದನು.
Môi-se thông báo cho người Ít-ra-ên các ngày lễ Chúa Hằng Hữu đã ấn định.

< ಯಾಜಕಕಾಂಡ 23 >