< ಯಾಜಕಕಾಂಡ 22 >

1 ತರುವಾಯ ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
וַיְדַבֵּר יְהוָה אֶל־מֹשֶׁה לֵּאמֹֽר׃
2 “ಆರೋನನೊಂದಿಗೂ, ಅವನ ಪುತ್ರರೊಂದಿಗೂ ಮಾತನಾಡು, ಅವರು ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಮಾಡದಂತೆ ಇಸ್ರಾಯೇಲರು ನನಗೆ ಸಲ್ಲಿಸುವ ಪರಿಶುದ್ಧವಾದವುಗಳನ್ನು ಗೌರವದಿಂದ ಅವರು ಪ್ರತ್ಯೇಕವಾಗಿರಿಸಬೇಕು. ನಾನೇ ಯೆಹೋವ ದೇವರು.
דַּבֵּר אֶֽל־אַהֲרֹן וְאֶל־בָּנָיו וְיִנָּֽזְרוּ מִקָּדְשֵׁי בְנֵֽי־יִשְׂרָאֵל וְלֹא יְחַלְּלוּ אֶת־שֵׁם קָדְשִׁי אֲשֶׁר הֵם מַקְדִּשִׁים לִי אֲנִי יְהוָֽה׃
3 “ಅವರಿಗೆ ನೀನು ಹೀಗೆ ಹೇಳು: ‘ನಿಮ್ಮ ಎಲ್ಲಾ ಸಂತತಿಯ ವಂಶಾವಳಿಗಳಲ್ಲಿ ಅಶುದ್ಧತ್ವವಿರುವ ಇಸ್ರಾಯೇಲರು ಯೆಹೋವ ದೇವರಿಗೆ ಸಲ್ಲಿಸುವ ಪರಿಶುದ್ಧವಾದವುಗಳ ಬಳಿಗೆ ಯಾವನು ಬರುವನೋ, ಅವನನ್ನು ನನ್ನ ಸನ್ನಿಧಿಯಿಂದ ತೆಗೆದುಹಾಕಬೇಕು. ನಾನೇ ಯೆಹೋವ ದೇವರು.
אֱמֹר אֲלֵהֶם לְדֹרֹתֵיכֶם כָּל־אִישׁ ׀ אֲשֶׁר־יִקְרַב מִכָּל־זַרְעֲכֶם אֶל־הַקֳּדָשִׁים אֲשֶׁר יַקְדִּישׁוּ בְנֵֽי־יִשְׂרָאֵל לַֽיהוָה וְטֻמְאָתוֹ עָלָיו וְנִכְרְתָה הַנֶּפֶשׁ הַהִוא מִלְּפָנַי אֲנִי יְהוָֽה׃
4 “‘ಆರೋನನ ಸಂತತಿಯವರಲ್ಲಿ ಯಾವನಾದರೂ ಚರ್ಮರೋಗ ಇಲ್ಲವೆ ಸ್ರಾವವುಳ್ಳವನಿದ್ದರೆ, ಅವನು ಶುದ್ಧನಾಗುವವರೆಗೆ ಪರಿಶುದ್ಧವಾದವುಗಳನ್ನು ತಿನ್ನಬಾರದು. ಹೆಣದಿಂದ ಅಶುದ್ಧವಾದದ್ದನ್ನು ಮುಟ್ಟಿದವನು ಇಲ್ಲವೆ ತನ್ನೊಳಗಿಂದ ವೀರ್ಯ ಹೊರಟವನು
אִישׁ אִישׁ מִזֶּרַע אַהֲרֹן וְהוּא צָרוּעַ אוֹ זָב בַּקֳּדָשִׁים לֹא יֹאכַל עַד אֲשֶׁר יִטְהָר וְהַנֹּגֵעַ בְּכָל־טְמֵא־נֶפֶשׁ אוֹ אִישׁ אֲשֶׁר־תֵּצֵא מִמֶּנּוּ שִׁכְבַת־זָֽרַע׃
5 ಇಲ್ಲವೆ ತನ್ನನ್ನು ಅಶುದ್ಧನಾಗುವಂತೆ ಹರಿದಾಡುವ ಯಾವುದನ್ನಾಗಲಿ ಇಲ್ಲವೆ ಅಶುದ್ಧ ಮನುಷ್ಯನನ್ನಾಗಲಿ ಮುಟ್ಟಿದವನು,
אוֹ־אִישׁ אֲשֶׁר יִגַּע בְּכָל־שֶׁרֶץ אֲשֶׁר יִטְמָא־לוֹ אוֹ בְאָדָם אֲשֶׁר יִטְמָא־לוֹ לְכֹל טֻמְאָתֽוֹ׃
6 ಸಂಜೆಯವರೆಗೆ ಅಶುದ್ಧನಾಗಿರಬೇಕು. ಅವನು ನೀರಿನಲ್ಲಿ ಸ್ನಾನಮಾಡಿದ ಮೇಲೆ ಪರಿಶುದ್ಧವಾದವುಗಳನ್ನು ತಿನ್ನಬಹುದು.
נֶפֶשׁ אֲשֶׁר תִּגַּע־בּוֹ וְטָמְאָה עַד־הָעָרֶב וְלֹא יֹאכַל מִן־הַקֳּדָשִׁים כִּי אִם־רָחַץ בְּשָׂרוֹ בַּמָּֽיִם׃
7 ಸೂರ್ಯನು ಮುಳುಗಿದಾಗ ಅವನು ಶುದ್ಧನಾಗಿರುವನು. ತರುವಾಯ ಅವನು ಪರಿಶುದ್ಧವಾದವುಗಳನ್ನು ತಿನ್ನಲಿ. ಏಕೆಂದರೆ ಅದು ಅವನಿಗೆ ಆಹಾರ.
וּבָא הַשֶּׁמֶשׁ וְטָהֵר וְאַחַר יֹאכַל מִן־הַקֳּדָשִׁים כִּי לַחְמוֹ הֽוּא׃
8 ತನ್ನನ್ನು ಅಶುದ್ಧಮಾಡಿಕೊಳ್ಳದಂತೆ ತನ್ನಷ್ಟಕ್ಕೆ ತಾನೇ ಸತ್ತಿರುವುದನ್ನಾಗಲಿ ಇಲ್ಲವೆ ಕಾಡುಮೃಗಗಳಿಂದ ಕೊಂದದ್ದನ್ನಾಗಲಿ ತಿನ್ನಬಾರದು. ನಾನೇ ಯೆಹೋವ ದೇವರು.
נְבֵלָה וּטְרֵפָה לֹא יֹאכַל לְטָמְאָה־בָהּ אֲנִי יְהוָֽה׃
9 “‘ಯಾಜಕರು ಅದನ್ನು ಅಪವಿತ್ರ ಪಡಿಸಿದರೆ, ಅದರ ನಿಮಿತ್ತ ಅಪರಾಧಿಯಾಗಿ ಸಾಯದಂತೆ ನನ್ನ ವಿಧಿಗಳನ್ನು ಕೈಗೊಳ್ಳಬೇಕು. ಅವರನ್ನು ಶುದ್ಧೀಕರಿಸುವ ಯೆಹೋವ ದೇವರು ನಾನೇ.
וְשָׁמְרוּ אֶת־מִשְׁמַרְתִּי וְלֹֽא־יִשְׂאוּ עָלָיו חֵטְא וּמֵתוּ בוֹ כִּי יְחַלְּלֻהוּ אֲנִי יְהוָה מְקַדְּשָֽׁם׃
10 “‘ಪರಿಶುದ್ಧವಾದದ್ದನ್ನು ಪರಕೀಯನು ತಿನ್ನಬಾರದು. ಯಾಜಕನ ಅತಿಥಿಯಾಗಲಿ ಇಲ್ಲವೆ ಕೂಲಿ ಆಳಾಗಲಿ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು.
וְכָל־זָר לֹא־יֹאכַל קֹדֶשׁ תּוֹשַׁב כֹּהֵן וְשָׂכִיר לֹא־יֹאכַל קֹֽדֶשׁ׃
11 ಆದರೆ ಯಾಜಕನು ಯಾವನನ್ನಾದರೂ ತನ್ನ ಹಣದಿಂದ ಕೊಂಡುಕೊಂಡರೆ, ಅವನು ಅದರಲ್ಲಿ ತಿನ್ನಬಹುದು. ಅವನ ಮನೆಯಲ್ಲಿ ಹುಟ್ಟಿದವನು ಅದನ್ನು ತಿನ್ನಬಹುದು.
וְכֹהֵן כִּֽי־יִקְנֶה נֶפֶשׁ קִנְיַן כַּסְפּוֹ הוּא יֹאכַל בּוֹ וִילִיד בֵּיתוֹ הֵם יֹאכְלוּ בְלַחְמֽוֹ׃
12 ಯಾಜಕನ ಮಗಳು ಒಬ್ಬ ಯಾಜಕನಲ್ಲದವನನ್ನು ಮದುವೆಯಾದರೆ, ಅವಳು ಸಮರ್ಪಣೆಯಾದ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು.
וּבַת־כֹּהֵן כִּי תִהְיֶה לְאִישׁ זָר הִוא בִּתְרוּמַת הַקֳּדָשִׁים לֹא תֹאכֵֽל׃
13 ಯಾಜಕನ ಮಗಳು ವಿಧವೆಯಾಗಿದ್ದರೆ ಇಲ್ಲವೆ ಗಂಡಬಿಟ್ಟವಳಾಗಿದ್ದರೆ ಮತ್ತು ಮಕ್ಕಳಿಲ್ಲದವಳಾಗಿ ತನ್ನ ಯೌವನದಲ್ಲಿದ್ದಂತೆಯೇ ತನ್ನ ತಂದೆಯ ಮನೆಗೆ ಹಿಂದಿರುಗಿದವಳಾಗಿದ್ದರೆ, ಅವಳು ತನ್ನ ತಂದೆಯ ಆಹಾರದಲ್ಲಿ ತಿನ್ನಲಿ. ಆದರೆ ಯಾಜಕರಲ್ಲದ ಕುಟುಂಬದವರು ಅದರಲ್ಲಿ ತಿನ್ನಬಾರದು.
וּבַת־כֹּהֵן כִּי תִהְיֶה אַלְמָנָה וּגְרוּשָׁה וְזֶרַע אֵין לָהּ וְשָׁבָה אֶל־בֵּית אָבִיהָ כִּנְעוּרֶיהָ מִלֶּחֶם אָבִיהָ תֹּאכֵל וְכָל־זָר לֹא־יֹאכַל בּֽוֹ׃
14 “‘ಇದಲ್ಲದೆ ಯಾವನಾದರೂ ತಿಳಿಯದೆ ಪರಿಶುದ್ಧವಾದದ್ದನ್ನು ತಿಂದರೆ, ಅವನು ಅದರ ಐದನೆಯ ಪಾಲನ್ನು ಕೂಡಿಸಿ, ಪರಿಶುದ್ಧವಾದದ್ದನ್ನು ಯಾಜಕನಿಗೆ ಕೊಡಬೇಕು.
וְאִישׁ כִּֽי־יֹאכַל קֹדֶשׁ בִּשְׁגָגָה וְיָסַף חֲמִֽשִׁיתוֹ עָלָיו וְנָתַן לַכֹּהֵן אֶת־הַקֹּֽדֶשׁ׃
15 ಇಸ್ರಾಯೇಲರು ಯೆಹೋವ ದೇವರಿಗೆ ಅರ್ಪಿಸುವ ಪರಿಶುದ್ಧವಾದವುಗಳನ್ನು ಅವರು ಅಪವಿತ್ರ ಮಾಡಬಾರದು.
וְלֹא יְחַלְּלוּ אֶת־קָדְשֵׁי בְּנֵי יִשְׂרָאֵל אֵת אֲשֶׁר־יָרִימוּ לַיהוָֽה׃
16 ಇಲ್ಲವೆ ಅವರು ಪರಿಶುದ್ಧವಾದವುಗಳನ್ನು ತಿನ್ನುವುದರಿಂದ ತಮ್ಮ ಮೇಲೆ ಅತಿಕ್ರಮದ ಅಪರಾಧವನ್ನು ಹೊತ್ತುಕೊಳ್ಳದಿರಲಿ. ಏಕೆಂದರೆ ಅವರನ್ನು ಶುದ್ಧೀಕರಿಸುವ ಯೆಹೋವ ದೇವರು ನಾನೇ.’”
וְהִשִּׂיאוּ אוֹתָם עֲוֺן אַשְׁמָה בְּאָכְלָם אֶת־קָדְשֵׁיהֶם כִּי אֲנִי יְהוָה מְקַדְּשָֽׁם׃
17 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
וַיְדַבֵּר יְהוָה אֶל־מֹשֶׁה לֵּאמֹֽר׃
18 “ಆರೋನನೊಂದಿಗೂ, ಅವನ ಪುತ್ರರೊಂದಿಗೂ ಮಾತನಾಡಿ ಅವರಿಗೆ ಹೇಳಬೇಕಾದದ್ದು ಇದೇ, ‘ಇಸ್ರಾಯೇಲ್ ಮನೆತನದವರಲ್ಲಿಯಾಗಲಿ, ಇಸ್ರಾಯೇಲರಾದ ಪರಕೀಯರಲ್ಲಿಯಾಗಲಿ ಯಾರಾದರೂ ತಮ್ಮ ಎಲ್ಲಾ ಪ್ರಮಾಣಗಳ ನಿಮಿತ್ತವಾಗಿ ಕಾಣಿಕೆಯನ್ನು ದಹನಬಲಿಯಾಗಿ ಯೆಹೋವ ದೇವರಿಗೆ ಅರ್ಪಿಸುವ ಉಚಿತವಾದ ಅರ್ಪಣೆಗಳಲ್ಲಿ
דַּבֵּר אֶֽל־אַהֲרֹן וְאֶל־בָּנָיו וְאֶל כָּל־בְּנֵי יִשְׂרָאֵל וְאָמַרְתָּ אֲלֵהֶם אִישׁ אִישׁ מִבֵּית יִשְׂרָאֵל וּמִן־הַגֵּר בְּיִשְׂרָאֵל אֲשֶׁר יַקְרִיב קָרְבָּנוֹ לְכָל־נִדְרֵיהֶם וּלְכָל־נִדְבוֹתָם אֲשֶׁר־יַקְרִיבוּ לַיהוָה לְעֹלָֽה׃
19 ನೀವು ನಿಮ್ಮ ಸ್ವಯಿಚ್ಛೆಯಿಂದ ಕಳಂಕರಹಿತವಾದ ಗಂಡು ಪಶು, ಕುರಿ ಅಥವಾ ಮೇಕೆಯನ್ನೇ ಅರ್ಪಿಸಬೇಕು.
לִֽרְצֹנְכֶם תָּמִים זָכָר בַּבָּקָר בַּכְּשָׂבִים וּבָֽעִזִּֽים׃
20 ಆದರೆ ದೋಷವಿರುವ ಯಾವುದನ್ನೂ ಸಮರ್ಪಿಸಬಾರದು. ಏಕೆಂದರೆ ಅದು ನಿಮಗೋಸ್ಕರ ಅಂಗೀಕಾರವಾಗುವುದಿಲ್ಲ.
כֹּל אֲשֶׁר־בּוֹ מוּם לֹא תַקְרִיבוּ כִּי־לֹא לְרָצוֹן יִהְיֶה לָכֶֽם׃
21 ತಮ್ಮ ಪ್ರಮಾಣವನ್ನು ಪೂರೈಸುವ ಹಾಗೆ ಯಾರಾದರೂ ಸಮಾಧಾನದ ಬಲಿಯನ್ನಾಗಲಿ, ಪಶುಗಳನ್ನಾಗಲಿ, ಕುರಿಗಳನ್ನಾಗಲಿ ಉಚಿತವಾದ ಕಾಣಿಕೆಯಾಗಿ ಯೆಹೋವ ದೇವರಿಗೆ ಅರ್ಪಿಸುವುದಾದರೆ, ಅದು ಅಂಗೀಕಾರಕ್ಕೆ ಪರಿಪೂರ್ಣವುಳ್ಳದ್ದಾಗಿರಬೇಕು. ಅದರೊಳಗೆ ಯಾವ ದೋಷವೂ ಕಳಂಕವೂ ಇರಬಾರದು.
וְאִישׁ כִּֽי־יַקְרִיב זֶֽבַח־שְׁלָמִים לַיהוָה לְפַלֵּא־נֶדֶר אוֹ לִנְדָבָה בַּבָּקָר אוֹ בַצֹּאן תָּמִים יִֽהְיֶה לְרָצוֹן כָּל־מוּם לֹא יִהְיֶה־בּֽוֹ׃
22 ಕುರುಡಾದದ್ದು, ಮುರಿದದ್ದು, ಅಂಗಹೀನವಾದದ್ದು, ಬೊಕ್ಕೆಯುಳ್ಳದ್ದು, ಕಜ್ಜಿ ತುರಿಯುಳ್ಳದ್ದು, ಇವುಗಳನ್ನು ನೀವು ಯೆಹೋವ ದೇವರಿಗೆ ಸಮರ್ಪಿಸಲೂಬಾರದು ಮತ್ತು ಅವುಗಳನ್ನು ಬಲಿಪೀಠದ ಮೇಲೆ ದಹನಬಲಿಯಾಗಿ ಯೆಹೋವ ದೇವರಿಗೆ ಸಮರ್ಪಿಸಲೂಬಾರದು.
עַוֶּרֶת אוֹ שָׁבוּר אוֹ־חָרוּץ אֽוֹ־יַבֶּלֶת אוֹ גָרָב אוֹ יַלֶּפֶת לֹא־תַקְרִיבוּ אֵלֶּה לַיהוָה וְאִשֶּׁה לֹא־תִתְּנוּ מֵהֶם עַל־הַמִּזְבֵּחַ לַיהוָֽה׃
23 ಹೋರಿಯಾಗಲಿ ಇಲ್ಲವೆ ಕುರಿಮರಿಯಾಗಲಿ ಅದಕ್ಕೆ ಹೆಚ್ಚಾದ ಅಂಗವಿರುವದಾಗಿದ್ದರೆ ಇಲ್ಲವೆ ಅದರ ಅಂಗಗಳಲ್ಲಿ ಕೊರತೆಯಿರುವುದಾದರೆ, ಅದನ್ನು ಉಚಿತ ಕಾಣಿಕೆಯಾಗಿ ಅರ್ಪಿಸಬಹುದು. ಆದರೆ ಹರಕೆಯಾಗಿ ಅದು ಅಂಗೀಕಾರವಾಗುವುದಿಲ್ಲ.
וְשׁוֹר וָשֶׂה שָׂרוּעַ וְקָלוּט נְדָבָה תַּעֲשֶׂה אֹתוֹ וּלְנֵדֶר לֹא יֵרָצֶֽה׃
24 ಜಜ್ಜಿ ಗಾಯವಾದ, ನುಜ್ಜುಗುಜ್ಜಾದ, ಮುರಿದ ಇಲ್ಲವೆ ಕೊಯ್ದಿರುವ ಯಾವುದನ್ನೂ ಯೆಹೋವ ದೇವರಿಗೆ ಸಮರ್ಪಿಸಬಾರದು. ನಿಮ್ಮ ದೇಶದೊಳಗಿರುವ ಅಂಥ ಯಾವ ಬಲಿಯನ್ನಾದರೂ ನೀವು ಸಮರ್ಪಿಸಬಾರದು.
וּמָעוּךְ וְכָתוּת וְנָתוּק וְכָרוּת לֹא תַקְרִיבוּ לַֽיהוָה וּֽבְאַרְצְכֶם לֹא תַעֲשֽׂוּ׃
25 ಇದಲ್ಲದೆ ಪರಕೀಯನಿಂದ ತೆಗೆದುಕೊಂಡ ಅಂತಹ ಯಾವ ಪಶುವನ್ನೂ ನಿಮ್ಮ ದೇವರಿಗೆ ಆಹಾರವಾಗಿ ಅರ್ಪಿಸಬಾರದು. ಏಕೆಂದರೆ ಅವರ ಕುಂದುಳ್ಳದ್ದು ಮತ್ತು ದೋಷಗಳೂ ಅವುಗಳಲ್ಲಿ ಇರುತ್ತವೆ. ಅವು ನಿಮಗೋಸ್ಕರವಾಗಿ ಅಂಗೀಕಾರವಾಗುವುದಿಲ್ಲ.’”
וּמִיַּד בֶּן־נֵכָר לֹא תַקְרִיבוּ אֶת־לֶחֶם אֱלֹהֵיכֶם מִכָּל־אֵלֶּה כִּי מָשְׁחָתָם בָּהֶם מוּם בָּם לֹא יֵרָצוּ לָכֶֽם׃
26 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
וַיְדַבֵּר יְהוָה אֶל־מֹשֶׁה לֵּאמֹֽר׃
27 “ಹೋರಿಯನ್ನಾಗಲಿ ಇಲ್ಲವೆ ಕುರಿಯನ್ನಾಗಲಿ ಇಲ್ಲವೆ ಆಡನ್ನಾಗಲಿ ತಂದಾಗ, ಏಳು ದಿವಸಗಳವರೆಗೆ ಅದು ತನ್ನ ತಾಯಿಯ ಬಳಿಯಲ್ಲಿ ಇರಲಿ. ಎಂಟನೆಯ ದಿನದಿಂದ ಅದು ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸಿದರೆ ಅಂಗೀಕಾರವಾಗುವುದು.
שׁוֹר אוֹ־כֶשֶׂב אוֹ־עֵז כִּי יִוָּלֵד וְהָיָה שִׁבְעַת יָמִים תַּחַת אִמּוֹ וּמִיּוֹם הַשְּׁמִינִי וָהָלְאָה יֵרָצֶה לְקָרְבַּן אִשֶּׁה לַיהוָֽה׃
28 ಹಸುವನ್ನಾಗಲಿ ಇಲ್ಲವೆ ಕುರಿಯನ್ನಾಗಲಿ ಅದರ ಮರಿಯೊಂದಿಗೆ ಎರಡನ್ನೂ ಒಂದೇ ದಿನದಲ್ಲಿ ವಧಿಸಬಾರದು.
וְשׁוֹר אוֹ־שֶׂה אֹתוֹ וְאֶת־בְּנוֹ לֹא תִשְׁחֲטוּ בְּיוֹם אֶחָֽד׃
29 “ನೀವು ಕೃತಜ್ಞತೆಯ ಯಜ್ಞಾರ್ಪಣೆಯನ್ನು, ಯೆಹೋವ ದೇವರಿಗೆ ಮಾಡುವ ಬಲಿದಾನವನ್ನು ಮೆಚ್ಚಿಗೆಯಾದ ರೀತಿಯಲ್ಲಿ ಸಮರ್ಪಿಸಬೇಕು.
וְכִֽי־תִזְבְּחוּ זֶֽבַח־תּוֹדָה לַיהוָה לִֽרְצֹנְכֶם תִּזְבָּֽחוּ׃
30 ಅದೇ ದಿನದಲ್ಲಿ ಅದನ್ನು ತಿಂದುಬಿಡಬೇಕು. ಅದರಲ್ಲಿ ಯಾವುದನ್ನೂ ಮಾರನೆಯ ದಿನದವರೆಗೆ ಉಳಿಸಬಾರದು. ನಾನೇ ಯೆಹೋವ ದೇವರು.
בַּיּוֹם הַהוּא יֵאָכֵל לֹֽא־תוֹתִירוּ מִמֶּנּוּ עַד־בֹּקֶר אֲנִי יְהוָֽה׃
31 “ಆದ್ದರಿಂದ ನೀವು ನನ್ನ ಆಜ್ಞೆಗಳನ್ನು ಕೈಗೊಂಡು ಅವುಗಳನ್ನು ಮಾಡಬೇಕು. ನಾನೇ ಯೆಹೋವ ದೇವರು.
וּשְׁמַרְתֶּם מִצְוֺתַי וַעֲשִׂיתֶם אֹתָם אֲנִי יְהוָֽה׃
32 ನನ್ನ ಪರಿಶುದ್ಧವಾದ ಹೆಸರನ್ನು ಅಪರಿಶುದ್ಧಗೊಳಿಸಬಾರದು, ಏಕೆಂದರೆ ಇಸ್ರಾಯೇಲರ ಮಧ್ಯದಲ್ಲಿ ನಾನು ಪರಿಶುದ್ಧನೆಂದು ಪರಿಗಣಿಸಬೇಕು. ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವ ದೇವರು ನಾನೇ.
וְלֹא תְחַלְּלוּ אֶת־שֵׁם קָדְשִׁי וְנִקְדַּשְׁתִּי בְּתוֹךְ בְּנֵי יִשְׂרָאֵל אֲנִי יְהוָה מְקַדִּשְׁכֶֽם׃
33 ನಿಮಗೆ ದೇವರಾಗಿರಲು ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದೆನು. ನಾನೇ ಯೆಹೋವ ದೇವರು.”
הַמּוֹצִיא אֶתְכֶם מֵאֶרֶץ מִצְרַיִם לִהְיוֹת לָכֶם לֵאלֹהִים אֲנִי יְהוָֽה׃

< ಯಾಜಕಕಾಂಡ 22 >