< ಯಾಜಕಕಾಂಡ 17 >

1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
Olúwa sọ fún Mose pé,
2 “ಆರೋನನಿಗೂ, ಅವನ ಪುತ್ರರಿಗೂ, ಇಸ್ರಾಯೇಲರೆಲ್ಲರಿಗೂ ಮಾತನಾಡಿ ಅವರಿಗೆ ಹೀಗೆ ಹೇಳು: ‘ಯೆಹೋವ ದೇವರು ನಿಮಗೆ ಇಂತೆಂದು ಆಜ್ಞಾಪಿಸುತ್ತಾರೆ.
“Sọ fún Aaroni àti àwọn ọmọ rẹ̀ pẹ̀lú gbogbo àwọn ọmọ Israẹli: ‘Ohun tí Olúwa pàṣẹ nìyí,
3 ಇಸ್ರಾಯೇಲಿನ ಮನೆತನದಲ್ಲಿ ಯಾವನು ಒಂದು ಎತ್ತನ್ನಾಗಲಿ ಇಲ್ಲವೆ ಒಂದು ಕುರಿಯನ್ನಾಗಲಿ ಇಲ್ಲವೆ ಒಂದು ಆಡನ್ನಾಗಲಿ ಪಾಳೆಯದೊಳಗೆ ಆಗಲಿ ಇಲ್ಲವೆ ಪಾಳೆಯದ ಹೊರಗೆ ಆಗಲಿ ವಧಿಸಿ,
bí ẹnikẹ́ni nínú ìdílé Israẹli bá pa màlúù tàbí ọ̀dọ́-àgùntàn tàbí àgbò nínú ibùdó tàbí bí ó bá pa á lẹ́yìn ibùdó
4 ಯೆಹೋವ ದೇವರಿಗೆ ಸಮರ್ಪಿಸುವುದಕ್ಕಾಗಿ ದೇವದರ್ಶನದ ಗುಡಾರದ ಬಾಗಿಲ ಮುಂದೆ ತಾರದಿದ್ದರೆ, ಆ ಮನುಷ್ಯನ ಮೇಲೆ ರಕ್ತಾಪರಾಧವು ಹೊರಿಸಬೇಕು. ಅವನು ರಕ್ತ ಸುರಿಸಿರುವವನು, ಆ ಮನುಷ್ಯನು ತನ್ನ ಜನರ ಮಧ್ಯದೊಳಗಿಂದ ತೆಗೆದುಹಾಕಬೇಕು.
tí kò sì mú un wá sí ibi àgọ́ ìpàdé láti fi rú ẹbọ sí Olúwa níwájú àgọ́ ìpàdé, ẹ̀bi ìtàjẹ̀ sílẹ̀ ni kí ẹ kà sí ẹni náà lọ́rùn: torí pé ó ti ta ẹ̀jẹ̀ sílẹ̀, ẹni náà ni a ó sì gé kúrò láàrín àwọn ènìyàn rẹ̀.
5 ಇಸ್ರಾಯೇಲರು ತಾವು ಬಯಲಿನಲ್ಲಿ ಸಮರ್ಪಿಸುವ ಬಲಿಗಳನ್ನು ಯೆಹೋವ ದೇವರಿಗೆ ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಯಾಜಕನ ಬಳಿಗೆ ತಂದು ಯೆಹೋವ ದೇವರಿಗೆ ಸಮಾಧಾನದ ಬಲಿಯಾಗಿ ಸಮರ್ಪಿಸಬೇಕು.
Èyí rí bẹ́ẹ̀ kí àwọn ọmọ Israẹli le è máa mú ẹbọ wọn tí wọn ti rú ní ìta gbangba wá sí iwájú Olúwa: wọ́n gbọdọ̀ mú un wá síwájú àlùfáà àní sí Olúwa ní ẹnu-ọ̀nà àgọ́ ìpàdé, kí wọ́n sì rú wọn gẹ́gẹ́ bí ẹbọ àlàáfíà sí Olúwa.
6 ಯಾಜಕನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಬಲಿಪೀಠದ ಮೇಲೆ ರಕ್ತವನ್ನು ಚಿಮುಕಿಸಬೇಕು. ಕೊಬ್ಬನ್ನು ಯೆಹೋವ ದೇವರಿಗೆ ಆಹ್ಲಾದಕರ ಸುಗಂಧ ವಾಸನೆಯಾಗಿ ಸುಡಬೇಕು.
Àlùfáà náà yóò sì fi ẹ̀jẹ̀ náà wọ́n ibi pẹpẹ Olúwa ní ẹnu-ọ̀nà àgọ́ ìpàdé, yóò sì sun ọ̀rá rẹ̀ ní òórùn dídùn sí Olúwa.
7 ಜಾರತ್ವ ಮಾಡುವಂತೆ ಅವರು ಇದುವರೆಗೆ ಪೂಜಿಸುತ್ತಿದ್ದ ಆ ಮೇಕೆ ದೇವತೆಗಳಿಗೆ ಇನ್ನೆಂದಿಗೂ ತಮ್ಮ ಯಜ್ಞಗಳನ್ನು ಸಮರ್ಪಿಸಬಾರದು. ಇದು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾದ ನಿಯಮ.’
Nítorí náà, kí wọn má ṣe rú ẹbọ wọn sí ère ẹranko mọ́, nínú èyí tí wọ́n ti ṣe àgbèrè tọ̀ lọ. Èyí yóò sì jẹ́ ìlànà títí láé láti ìran dé ìran wọn tí ń bọ̀.’
8 “ಇದಲ್ಲದೆ ನೀನು ಅವರಿಗೆ ಹೇಳಬೇಕಾದದ್ದೇನೆಂದರೆ, ‘ಇಸ್ರಾಯೇಲಿನ ಮನೆತನದವರಲ್ಲಿ ಯಾವ ಮನುಷ್ಯನಾದರು ಇಲ್ಲವೆ ನಿಮ್ಮೊಳಗೆ ಪ್ರವಾಸಿಗರಾಗಿದ್ದ ಪರಕೀಯರು ದಹನಬಲಿಯನ್ನಾಗಲಿ, ಯಜ್ಞವನ್ನಾಗಲಿ ಅರ್ಪಿಸಿದರೆ,
“Kí ó sọ fún wọn pé, ‘Ọkùnrin yówù kí ó jẹ́ ní ìdílé Israẹli tàbí ti àwọn àlejò tí ń gbé láàrín wọn tí ó bá rú ẹbọ sísun tàbí ṣe ẹbọ
9 ಅದನ್ನು ಯೆಹೋವ ದೇವರಿಗೆ ಸಮರ್ಪಿಸುವಂತೆ ದೇವದರ್ಶನದ ಗುಡಾರದ ಬಾಗಿಲ ಬಳಿಗೆ ತಾರದಿದ್ದರೆ, ಆ ಮನುಷ್ಯನನ್ನು ತನ್ನ ಜನರ ಮಧ್ಯದೊಳಗಿಂದ ತೆಗೆದುಹಾಕಬೇಕು.
tí kò sì mú un wá sí ẹnu-ọ̀nà àgọ́ ìpàdé láti fi rú ẹbọ sí Olúwa irú ẹni bẹ́ẹ̀ ni a ó gé kúrò láàrín àwọn ènìyàn rẹ̀.
10 “‘ಇದಲ್ಲದೆ ಇಸ್ರಾಯೇಲ್ ಮನೆತನದಲ್ಲಿ ಯಾವನಾದರೂ ನಿಮ್ಮ ಮಧ್ಯದೊಳಗೆ ಪ್ರವಾಸಿಯಾಗಿರುವ ಪರಕೀಯನಾದರೂ, ಯಾವುದೇ ತರದ ರಕ್ತವನ್ನು ತಿಂದರೆ, ರಕ್ತವನ್ನು ತಿನ್ನುವ ಆ ಪ್ರಾಣಕ್ಕೆ ನಾನು ವಿಮುಖನಾಗಿರುವೆನು, ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
“‘Bí ẹnikẹ́ni bá jẹ ẹ̀jẹ̀ yálà nínú ìdílé Israẹli tàbí àwọn àlejò tí ń gbé láàrín wọn, Èmi yóò bínú sí irú ẹni náà tí ó jẹ ẹ̀jẹ̀, èmi yóò sì gé e kúrò láàrín àwọn ènìyàn rẹ̀.
11 ಏಕೆಂದರೆ ದೇಹದ ಜೀವವು ರಕ್ತದೊಳಗೆ ಇರುತ್ತದೆ ಮತ್ತು ನಾನು ಅದನ್ನು ನಿಮ್ಮ ಆತ್ಮಗಳಿಗೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಬಲಿಪೀಠದ ಮೇಲೆ ನಿಮಗೆ ಕೊಟ್ಟಿದ್ದೇನೆ. ಪ್ರಾಣಕ್ಕೆ ಪ್ರಾಯಶ್ಚಿತ್ತ ಮಾಡುವುದು ರಕ್ತವೇ.
Nítorí pé nínú ẹ̀jẹ̀ ni ẹ̀mí ẹ̀dá wà, èmi sì ti fi fún yín lórí pẹpẹ fún ètùtù ọkàn yín: nítorí pé ẹ̀jẹ̀ ni a fi ń ṣe ètùtù fún ẹ̀mí ènìyàn.
12 ಆದಕಾರಣ ನಾನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಿದೆನು, “ನಿಮ್ಮಲ್ಲಿಯಾಗಲಿ, ನಿಮ್ಮ ನಡುವೆ ತಂಗಿರುವ ಪರಕೀಯರಲ್ಲಿಯಾಗಲಿ ಯಾರೂ ರಕ್ತವನ್ನು ಭುಜಿಸಬಾರದು.”
Ìdí nìyí tí mo fi sọ fún àwọn ọmọ Israẹli pé, ọ̀kankan nínú yín kò gbọdọ̀ jẹ ẹ̀jẹ̀, bẹ́ẹ̀ ni àlejò kan tí ń ṣe àtìpó nínú yín kò gbọdọ̀ jẹ ẹ̀jẹ̀.
13 “‘ಇದಲ್ಲದೆ ಇಸ್ರಾಯೇಲರು ಯಾವ ಮನುಷ್ಯನಾದರೂ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿರುವ ಪರಕೀಯನಾದರೂ ತಿನ್ನುವುದಕ್ಕಾಗಿ ಬೇಟೆಯಾಡಿ, ಯಾವುದೇ ಪಶುವನ್ನಾಗಲಿ ಇಲ್ಲವೆ ಪಕ್ಷಿಯನ್ನಾಗಲಿ ಹಿಡಿದರೆ, ಅದರ ರಕ್ತವನ್ನೆಲ್ಲಾ ಸುರಿದು ಅದನ್ನು ಮಣ್ಣಿನಿಂದ ಮುಚ್ಚಬೇಕು.
“‘Ẹnikẹ́ni yálà nínú àwọn ọmọ Israẹli tàbí àlejò tí ń gbé láàrín wọn, tí ó bá pa ẹranko tàbí ẹyẹ tí ó yẹ fún jíjẹ gbọdọ̀ ro ẹ̀jẹ̀ rẹ̀ sílẹ̀ kí ó sì bò ó mọ́lẹ̀.
14 ಏಕೆಂದರೆ ಅದು ಎಲ್ಲಾ ಶರೀರಗಳ ಜೀವವಾಗಿದೆ. ಅದಕ್ಕಿರುವ ರಕ್ತವು ಅದರ ಜೀವಕ್ಕಾಗಿಯೇ ಇದೆ. ಆದ್ದರಿಂದ ನಾನು ಇಸ್ರಾಯೇಲರಿಗೆ, “ನೀವು ಯಾವ ತರಹದ ರಕ್ತವನ್ನೂ ತಿನ್ನಬಾರದು,” ಎಂದು ಹೇಳಿದ್ದೇನೆ. ಏಕೆಂದರೆ ಎಲ್ಲಾ ಶರೀರಗಳ ಜೀವವೂ ಅದರ ರಕ್ತದಲ್ಲಿಯೇ ಇದೆ. ಅದನ್ನು ತಿನ್ನುವ ಯಾವನನ್ನಾದರೂ ಬಹಿಷ್ಕರಿಸಬೇಕು.
Torí pé ẹ̀mí gbogbo ẹ̀dá ni ẹ̀jẹ̀ rẹ̀, torí náà ni mo fi kìlọ̀ fún àwọn ọmọ Israẹli pé wọn kò gbọdọ̀ jẹ ẹ̀jẹ̀ ohun abẹ̀mí kankan, torí pé nínú ẹ̀jẹ̀ ohun abẹ̀mí wọ̀nyí ni ẹ̀mí wọn wà, ẹnikẹ́ni tí ó bá jẹ ẹ́ ni a ó gé kúrò.
15 “‘ಸ್ವದೇಶದವನಾಗಲಿ ಇಲ್ಲವೆ ಪರಕೀಯನಾಗಲಿ ತನ್ನಷ್ಟಕ್ಕೆ ತಾನೇ ಸತ್ತು ಹೋದದ್ದನ್ನು ಇಲ್ಲವೆ ಕಾಡುಮೃಗ ಕೊಂದದ್ದನ್ನು ತಿಂದ ಪ್ರತಿಯೊಬ್ಬನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವನು ಅಶುದ್ಧನಾಗಿರಬೇಕು. ತರುವಾಯ ಅವನು ಶುದ್ಧನಾಗಿರುವನು.
“‘Ẹnikẹ́ni tí ó bá jẹ ohun tí ó kú sílẹ̀ fúnra rẹ̀, tàbí èyí tí ẹranko búburú pa kálẹ̀ yálà onílé tàbí àlejò, ó ní láti fọ aṣọ rẹ̀. Kí ó sì fi omi wẹ ara rẹ̀, yóò sì wà ní ipò àìmọ́ títí di àṣálẹ́ lẹ́yìn èyí ni yóò tó di mímọ́.
16 ಆದರೆ ಅವನು ಬಟ್ಟೆಗಳನ್ನು ಒಗೆದುಕೊಳ್ಳದೆ ಇದ್ದರೆ, ಇಲ್ಲವೆ ತಾನು ಸ್ನಾನ ಮಾಡದಿದ್ದರೆ, ತನ್ನ ಅಪರಾಧವನ್ನು ತಾನೇ ಹೊತ್ತುಕೊಳ್ಳಬೇಕು.’”
Ṣùgbọ́n bí ó bá kọ̀ láti wẹ ara rẹ̀ tí kò sì fọ aṣọ rẹ̀ náà: ẹ̀bi rẹ̀ yóò wà lórí ara rẹ̀.’”

< ಯಾಜಕಕಾಂಡ 17 >