< ಯಾಜಕಕಾಂಡ 16 >

1 ಆರೋನನ ಇಬ್ಬರು ಗಂಡು ಮಕ್ಕಳು ಯೆಹೋವ ದೇವರ ಸನ್ನಿಧಿಗೆ ಬಂದು ಸತ್ತಾಗ ಮೋಶೆಯಂದಿಗೆ ಯೆಹೋವ ದೇವರು ಮಾತನಾಡಿದರು.
L'Éternel parla à Moïse, après la mort des deux fils d'Aaron, lorsqu'ils s'approchèrent devant l'Éternel et moururent;
2 ಆಗ ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನಿನ್ನ ಅಣ್ಣನಾದ ಆರೋನನು ಮಂಜೂಷದ ಮೇಲಿರುವ ಕರುಣಾಸನದ ಮುಂದಿರುವ ತೆರೆಯ ಒಳಗೆ ಮಹಾಪರಿಶುದ್ಧ ಸ್ಥಳಕ್ಕೆ ಎಲ್ಲಾ ಸಮಯಗಳಲ್ಲಿ ಬಾರದಿರಲಿ, ಇಲ್ಲವಾದರೆ ಅವನು ಸಾಯುತ್ತಾನೆ, ಏಕೆಂದರೆ ಕರುಣಾಸನದ ಮೇಲೆ ಮೇಘದೊಳಗೆ ನಾನು ಪ್ರತ್ಯಕ್ಷನಾಗುವೆನು.
L'Éternel dit donc à Moïse: Parle à Aaron ton frère, afin qu'il n'entre point en tout temps dans le sanctuaire, au-dedans du voile, devant le propitiatoire qui est sur l'arche, de peur qu'il ne meure; car j'apparaîtrai dans la nuée sur le propitiatoire.
3 “ಈ ಸೂಚನೆಗಳನ್ನು ಸಂಪೂರ್ಣವಾಗಿ ಅನುಸರಿಸಿದ ನಂತರವೇ ಆರೋನನು ಮಹಾಪರಿಶುದ್ಧ ಸ್ಥಳಕ್ಕೆ ಪ್ರವೇಶಿಸಬೇಕು: ಪಾಪ ಪರಿಹಾರದ ಬಲಿಗಾಗಿ ಒಂದು ಹೋರಿಯನ್ನು ಮತ್ತು ದಹನಬಲಿಗಾಗಿ ಒಂದು ಟಗರನ್ನು ತೆಗೆದುಕೊಂಡು ಬರಬೇಕು.
Voici avec quoi Aaron entrera dans le sanctuaire: avec un jeune taureau pour le sacrifice pour le péché, et un bélier pour l'holocauste.
4 ಅವನು ಪರಿಶುದ್ಧವಾದ ನಾರುಬಟ್ಟೆಯ ಮೇಲಂಗಿಯನ್ನು ತೊಟ್ಟುಕೊಂಡು, ತನ್ನ ಶರೀರದ ಮೇಲೆ ನಾರುಬಟ್ಟೆಯ ಒಳಉಡುಪನ್ನು ಹಾಕಿಕೊಳ್ಳಬೇಕು ಮತ್ತು ನಾರಿನ ನಡುಕಟ್ಟನ್ನು ಕಟ್ಟಿಕೊಂಡು, ನಾರಿನ ಮುಂಡಾಸವನ್ನು ಧರಿಸಬೇಕು. ಇವು ಪವಿತ್ರವಾದ ಉಡುಪುಗಳು. ಆದಕಾರಣ ಅವನು ನೀರಿನಿಂದ ಸ್ನಾನಮಾಡಿ ಅವುಗಳನ್ನು ಧರಿಸಿಕೊಳ್ಳಬೇಕು.
Il se revêtira de la tunique sacrée de lin, et portera sur sa chair des caleçons de lin; il se ceindra d'une ceinture de lin, et il se couvrira la tête d'une tiare de lin; ce sont des vêtements sacrés; il lavera son corps dans l'eau, et s'en revêtira.
5 ಅವನು ಇಸ್ರಾಯೇಲರ ಸಭೆಯ ಕಡೆಯಿಂದ ಪಾಪ ಪರಿಹಾರದ ಬಲಿಗಾಗಿ ಎರಡು ಹೋತಗಳನ್ನು, ದಹನಬಲಿಗಾಗಿ ಒಂದು ಟಗರನ್ನೂ ತೆಗೆದುಕೊಳ್ಳಬೇಕು.
Et il prendra de l'assemblée des enfants d'Israël deux boucs pour le sacrifice pour le péché, et un bélier pour l'holocauste.
6 “ಇದಲ್ಲದೆ ಆರೋನನು ತನಗೋಸ್ಕರ ಪಾಪ ಪರಿಹಾರದ ಬಲಿಗಾಗಿ ತನ್ನ ಹೋರಿಯನ್ನು ಸಮರ್ಪಿಸಿ, ತನ್ನ ಮನೆಯವರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಬೇಕು.
Puis Aaron offrira son taureau en sacrifice pour le péché, et il fera l'expiation pour lui et pour sa maison.
7 ಅವನು ಎರಡು ಹೋತಗಳನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ತಂದು, ಅವುಗಳನ್ನು ಯೆಹೋವ ದೇವರ ಎದುರಿನಲ್ಲಿ ನಿಲ್ಲಿಸಬೇಕು.
Et il prendra les deux boucs, et les placera devant l'Éternel, à l'entrée du tabernacle d'assignation.
8 ಆರೋನನು ಆ ಎರಡು ಹೋತಗಳಿಗಾಗಿ ಚೀಟುಹಾಕಬೇಕು. ಒಂದು ಚೀಟು ಯೆಹೋವ ದೇವರಿಗೋಸ್ಕರ, ಮತ್ತೊಂದು ಚೀಟು ಬಲಿಪಶುವಿಗೋಸ್ಕರ.
Puis Aaron jettera le sort sur les deux boucs; un sort pour l'Éternel, et un sort pour Azazel.
9 ಆರೋನನು ಯೆಹೋವ ದೇವರ ಚೀಟು ಬಿದ್ದ ಹೋತವನ್ನು ತಂದು, ಅದನ್ನು ಪಾಪ ಪರಿಹಾರದ ಬಲಿಗಾಗಿ ಸಮರ್ಪಿಸಬೇಕು.
Et Aaron fera approcher le bouc sur lequel le sort sera tombé pour l'Éternel, et l'offrira en sacrifice pour le péché.
10 ಆದರೆ ಬಲಿಪಶುವಿಗಾಗಿ ಚೀಟು ಬಿದ್ದ ಆ ಹೋತವನ್ನು ತನ್ನೊಂದಿಗೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ಸಜೀವವಾಗಿ ನಿಲ್ಲಿಸಿ, ಅದನ್ನು ಬಲಿಪಶುವಾಗಿ ಕಾಡಿನಲ್ಲಿ ಹೋಗುವಂತೆ ಬಿಟ್ಟುಬಿಡಬೇಕು.
Mais le bouc sur lequel le sort sera tombé pour Azazel, sera placé vivant devant l'Éternel, afin de faire sur lui l'expiation, et de l'envoyer au désert pour Azazel.
11 “ಇದಲ್ಲದೆ ಆರೋನನು ಪಾಪ ಪರಿಹಾರದ ಬಲಿಯಾಗಿರುವ ಹೋರಿಯನ್ನು ತಂದು, ತನಗೋಸ್ಕರ ಮತ್ತು ತನ್ನ ಮನೆತನದವರಿಗೋಸ್ಕರ ಪ್ರಾಯಶ್ಚಿತ್ತ ಮಾಡಬೇಕು. ತನಗೋಸ್ಕರ ದೋಷಪರಿಹಾರಕ ಬಲಿಯಾಗಿ ಆ ಹೋರಿಯನ್ನು ವಧಿಸಬೇಕು.
Aaron offrira donc pour lui le taureau du sacrifice pour le péché, et il fera l'expiation pour lui et pour sa maison; il égorgera son taureau, qui est le sacrifice pour le péché.
12 ಅವನು ಯೆಹೋವ ದೇವರ ಸನ್ನಿಧಿಯಲ್ಲಿರುವ ಬಲಿಪೀಠದಿಂದ ಬೆಂಕಿಯ ಕೆಂಡಗಳನ್ನು ಧೂಪ ಸುಡುವ ಪಾತ್ರೆಯಲ್ಲಿ ತುಂಬಿಸಿ, ತನ್ನ ಎರಡು ಕೈತುಂಬ ಪರಿಮಳ ಧೂಪದ್ರವ್ಯದ ಚೂರ್ಣವನ್ನು ತೆಗೆದುಕೊಂಡು, ತೆರೆಯನ್ನು ದಾಟಿ ತರಬೇಕು.
Puis il prendra un encensoir plein de charbons ardents de dessus l'autel devant l'Éternel, et plein ses deux mains de parfum d'aromates en poudre, et il portera ces choses en dedans du voile;
13 ಅವನು ಸಾಯದ ಹಾಗೆ ಆ ಧೂಪದ ಹೊಗೆಯು ಸಾಕ್ಷಿಯ ಮೇಲಿರುವ ಕರುಣಾಸನವು ಮುಚ್ಚಿಕೊಳ್ಳುವಂತೆ ಆ ಧೂಪವನ್ನು ಯೆಹೋವ ದೇವರ ಎದುರಿನಲ್ಲಿ ಬೆಂಕಿಯ ಮೇಲೆ ಹಾಕಬೇಕು.
Et il mettra le parfum sur le feu devant l'Éternel, afin que la nuée du parfum couvre le propitiatoire qui est sur le Témoignage, et il ne mourra point.
14 ಆ ಹೋರಿಯ ರಕ್ತದಿಂದ ಸ್ವಲ್ಪ ತೆಗೆದುಕೊಂಡು, ಕರುಣಾಸನದ ಮೇಲೆ ಪೂರ್ವಕ್ಕೆ ತನ್ನ ಬೆರಳಿನಿಂದ ಚಿಮುಕಿಸಬೇಕು, ಕರುಣಾಸನದ ಮುಂದೆ ಆ ರಕ್ತವನ್ನು ತನ್ನ ಬೆರಳಿನಿಂದ ಏಳು ಸಾರಿ ಚಿಮುಕಿಸಬೇಕು.
Il prendra aussi du sang du taureau, et en fera aspersion avec son doigt sur le devant du propitiatoire vers l'Orient; et devant le propitiatoire il fera aspersion du sang sept fois avec son doigt.
15 “ತರುವಾಯ ಅವನು ಜನರಿಗೋಸ್ಕರ ಪಾಪ ಪರಿಹಾರದ ಬಲಿಯಾಗಿರುವ ಹೋತವನ್ನು ವಧಿಸಿ, ಅದರ ರಕ್ತವನ್ನು ತೆರೆಯ ಒಳಗಡೆ ತಂದು, ಹೋರಿಯ ರಕ್ತದಿಂದ ಮಾಡಿದಂತೆಯೇ ಕರುಣಾಸನದ ಮೇಲೆಯೂ, ಕರುಣಾಸನದ ಮುಂದೆಯೂ ಚಿಮುಕಿಸಬೇಕು.
Puis il égorgera le bouc du sacrifice pour le péché, qui est pour le peuple, et il en portera le sang en dedans du voile. Il fera de son sang comme il a fait du sang du taureau, il en fera l'aspersion sur le propitiatoire et devant le propitiatoire.
16 ಇಸ್ರಾಯೇಲರ ಅಶುದ್ಧತ್ವದ ನಿಮಿತ್ತವಾಗಿಯೂ, ಎಲ್ಲಾ ಅಪರಾಧಗಳಿಗಾಗಿಯೂ ಅವನು ಮಹಾಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಅವರು ಅಶುದ್ಧತ್ವದ ಮಧ್ಯದಲ್ಲಿ ಉಳಿದವರಿಗೋಸ್ಕರ ದೇವದರ್ಶನದ ಗುಡಾರಕ್ಕೂ ಅದರಂತೆಯೇ ಮಾಡಬೇಕು.
Et il fera l'expiation pour le sanctuaire, à cause des souillures des enfants d'Israël, et de leurs rébellions en tous leurs péchés. Il fera de même pour le tabernacle d'assignation qui demeure avec eux au milieu de leurs souillures.
17 ಅವನು ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಮಹಾಪರಿಶುದ್ಧ ಸ್ಥಳಕ್ಕೆ ಹೋಗಿರುವಾಗ ತನಗೋಸ್ಕರವೂ, ತನ್ನ ಮನೆಯವರಿಗೆಲ್ಲರಿಗೋಸ್ಕರವೂ, ಇಸ್ರಾಯೇಲರ ಸಭೆಯವರೆಲ್ಲರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಿ ಹೊರಗೆ ಬರುವ ತನಕ ದೇವದರ್ಶನದ ಗುಡಾರದಲ್ಲಿ ಒಬ್ಬ ಮನುಷ್ಯನೂ ಇರಬಾರದು.
Et personne ne sera dans le tabernacle d'assignation quand il entrera pour faire l'expiation dans le sanctuaire, jusqu'à ce qu'il en sorte; et il fera l'expiation pour lui et pour sa maison, et pour toute l'assemblée d'Israël.
18 “ಅವನು ಯೆಹೋವ ದೇವರ ಎದುರಿನಲ್ಲಿರುವ ಬಲಿಪೀಠದ ಬಳಿಗೆ ಬಂದು, ಅದಕ್ಕೋಸ್ಕರ ಪ್ರಾಯಶ್ಚಿತ್ತವನ್ನು ಮಾಡಬೇಕು. ಹೋರಿಯ ರಕ್ತವನ್ನೂ, ಹೋತದ ರಕ್ತವನ್ನೂ ತೆಗೆದುಕೊಂಡು ಬಲಿಪೀಠದ ಸುತ್ತಲೂ ಇರುವ ಕೊಂಬುಗಳಿಗೆ ಹಚ್ಚಬೇಕು.
Puis il sortira vers l'autel qui est devant l'Éternel, et fera l'expiation pour lui; il prendra du sang du taureau, et du sang du bouc, et il en mettra sur les cornes de l'autel, tout autour.
19 ಅವನು ಏಳು ಸಾರಿ ಅದರ ಮೇಲೆ ರಕ್ತವನ್ನು ಚಿಮುಕಿಸಿ, ಅದನ್ನು ಶುದ್ಧಮಾಡಬೇಕು ಮತ್ತು ಇಸ್ರಾಯೇಲರ ಅಶುದ್ಧತೆಯನ್ನು ಹೋಗಲಾಡಿಸಿ, ಅದನ್ನು ಪರಿಶುದ್ಧ ಮಾಡಬೇಕು.
Et il fera aspersion du sang, avec son doigt, sept fois sur l'autel; il le purifiera et le sanctifiera, à cause des souillures des enfants d'Israël.
20 “ಹೀಗೆ ಮಹಾಪರಿಶುದ್ಧ ಸ್ಥಳಕ್ಕೂ, ಸಭೆಯ ಗುಡಾರಕ್ಕೂ, ಬಲಿಪೀಠಕ್ಕೂ ಸಂಧಾನದ ಕೊನೆಯಲ್ಲಿ ಅವನು ಒಂದು ಜೀವವುಳ್ಳ ಹೋತವನ್ನು ತರಬೇಕು.
Et quand il aura achevé de faire l'expiation pour le sanctuaire, pour le tabernacle d'assignation et pour l'autel, il offrira le bouc vivant.
21 ಆರೋನನು ಆ ಜೀವವುಳ್ಳ ಹೋತದ ತಲೆಯ ಮೇಲೆ ತನ್ನ ಎರಡೂ ಕೈಗಳನ್ನು ಇಟ್ಟು, ಅದರ ಮೇಲೆ ಇಸ್ರಾಯೇಲರ ಎಲ್ಲಾ ಅಕ್ರಮಗಳನ್ನೂ, ಅವರ ಎಲ್ಲಾ ಪಾಪಗಳಲ್ಲಿರುವ ದ್ರೋಹಗಳನ್ನೂ ಅರಿಕೆಮಾಡಿ ಅವುಗಳನ್ನು ಹೋತದ ತಲೆಯ ಮೇಲೆ ಇರಿಸಿ, ನೇಮಕವಾದ ಒಬ್ಬ ಮನುಷ್ಯನ ಕೈಯಿಂದ ಅದನ್ನು ಅಡವಿಯೊಳಗೆ ಕಳುಹಿಸಿಬಿಡಬೇಕು.
Aaron appuiera ses deux mains sur la tête du bouc vivant, et confessera sur lui toutes les iniquités des enfants d'Israël, et toutes leurs rébellions en tous leurs péchés; il les mettra sur la tête du bouc, et l'enverra au désert par un homme exprès.
22 ಆ ಹೋತ ಅವರ ಎಲ್ಲಾ ಪಾಪಗಳನ್ನೂ ತನ್ನ ಮೇಲೆ ಹೊತ್ತುಕೊಂಡು ನಿರ್ಜನವಾದ ಸ್ಥಳಕ್ಕೆ ತೆಗೆದುಕೊಂಡು ಹೋಗುವಂತೆ ಆ ಮನುಷ್ಯನು ಹೋತವನ್ನು ಅಡವಿಗೆ ತೆಗೆದುಕೊಂಡುಹೋಗಿ ಅಲ್ಲೇ ಬಿಟ್ಟುಬಿಡಬೇಕು.
Et le bouc emportera sur lui toutes leurs iniquités dans une terre déserte, et l'homme lâchera le bouc dans le désert.
23 “ಆರೋನನು ದೇವದರ್ಶನದ ಗುಡಾರದೊಳಗೆ ಬಂದು, ತಾನು ಮಹಾಪರಿಶುದ್ಧ ಸ್ಥಳದೊಳಕ್ಕೆ ಹೋಗುವಾಗ ತೊಟ್ಟುಕೊಂಡಿದ್ದ ನಾರಿನ ಬಟ್ಟೆಗಳನ್ನು ತೆಗೆದುಹಾಕಿ ಅವುಗಳನ್ನು ಅಲ್ಲಿಯೇ ಬಿಡಬೇಕು.
Et Aaron entrera dans le tabernacle d'assignation, et il quittera les vêtements de lin dont il s'était revêtu pour entrer dans le sanctuaire, et il les déposera là.
24 ಅವನು ಪರಿಶುದ್ಧ ಸ್ಥಳದಲ್ಲಿ ನೀರಿನಲ್ಲಿ ಸ್ನಾನಮಾಡಿ, ತನ್ನ ಬಳಕೆಯ ಬಟ್ಟೆಗಳನ್ನು ಧರಿಸಿಕೊಂಡು, ಹೊರಗೆ ಬಂದು ತನ್ನ ದಹನಬಲಿಯನ್ನೂ, ಜನರ ದಹನಬಲಿಯನ್ನೂ ಸಮರ್ಪಿಸಿ ತನಗೋಸ್ಕರವೂ, ಜನರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಬೇಕು.
Puis il lavera son corps avec de l'eau dans un lieu saint, et reprendra ses vêtements; puis il sortira et offrira son holocauste et l'holocauste du peuple, et il fera l'expiation pour lui et pour le peuple.
25 ಪಾಪ ಪರಿಹಾರದ ಬಲಿಯ ಕೊಬ್ಬನ್ನು ಬಲಿಪೀಠದ ಮೇಲೆ ಸುಡಬೇಕು.
Il fera aussi fumer sur l'autel la graisse du sacrifice pour le péché.
26 “ಬಲಿಪಶುವಿಗಾಗಿ ಹೋತವನ್ನು ಹೋಗಲು ಬಿಟ್ಟವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಿದ ಮೇಲೆ ಅವನು ಪಾಳೆಯದೊಳಕ್ಕೆ ಬರಬೇಕು.
Et celui qui aura conduit le bouc pour Azazel, lavera ses vêtements, et lavera son corps dans l'eau; après cela, il rentrera au camp.
27 ಇದಲ್ಲದೆ ಮಹಾಪರಿಶುದ್ಧ ಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಯಾವುದರ ರಕ್ತವು ತರಲಾಗಿತ್ತೋ, ಆ ಪಾಪ ಪರಿಹಾರದ ಬಲಿಯ ಹೋರಿಯನ್ನು ಮತ್ತು ದೋಷಪರಿಹಾರ ಬಲಿಯ ಹೋತವನ್ನು ಪಾಳೆಯದ ಆಚೆಗೆ ತೆಗೆದುಕೊಂಡುಹೋಗಿ ಅವುಗಳ ಚರ್ಮವನ್ನೂ, ಮಾಂಸವನ್ನೂ, ಸಗಣಿಯನ್ನೂ ಸುಡಬೇಕು.
Mais on emportera hors du camp le taureau et le bouc offerts en sacrifice pour le péché, et dont le sang aura été porté dans le sanctuaire pour faire l'expiation, et l'on brûlera au feu leurs peaux, leur chair et leurs excréments.
28 ಅವುಗಳನ್ನು ಸುಡುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಿದ ನಂತರ ಪಾಳೆಯದೊಳಕ್ಕೆ ಬರಬೇಕು.
Et celui qui les aura brûlés lavera ses vêtements, et lavera son corps dans l'eau; après cela, il rentrera au camp.
29 “ಇದು ನಿಮಗೆ ಶಾಶ್ವತವಾದ ನಿಯಮ: ಸ್ವದೇಶೀಯರಾದ ನೀವೂ, ನಿಮ್ಮೊಡನೆ ವಾಸಿಸುತ್ತಿರುವ ಪರಕೀಯರೂ, ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಎಲ್ಲಾ ಕೆಲಸಗಳನ್ನು ಬಿಟ್ಟು, ನಿಮ್ಮ ಆತ್ಮಗಳನ್ನು ಕುಂದಿಸಿಕೊಳ್ಳಬೇಕು.
Et ceci sera pour vous une ordonnance perpétuelle: au septième mois, le dixième jour du mois, vous humilierez vos âmes, et vous ne ferez aucune œuvre, ni celui qui est du pays, ni l'étranger qui séjourne au milieu de vous;
30 ನೀವು ಯೆಹೋವ ದೇವರ ಸನ್ನಿಧಿಯಲ್ಲಿ ನಿಮ್ಮ ಎಲ್ಲಾ ಪಾಪಗಳಿಂದ ಶುದ್ಧರಾಗಿರುವಂತೆ ನಿಮ್ಮನ್ನು ಶುದ್ಧೀಕರಿಸುವ ಹಾಗೆ, ಆ ದಿನದಲ್ಲಿ ಯಾಜಕನು ನಿಮಗೋಸ್ಕರ ಪ್ರಾಯಶ್ಚಿತ್ತವನ್ನು ಮಾಡುವನು.
Car en ce jour on fera l'expiation pour vous, afin de vous purifier; vous serez purifiés de tous vos péchés devant l'Éternel.
31 ಇದೇ ನಿಮಗೆ ಸಬ್ಬತ್ ದಿನವಾಗಿರುವುದು. ನಿಮಗೆ ನಿತ್ಯವಾದ ನಿಯಮವಿರುವಂತೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ.
Ce sera pour vous un sabbat, un jour de repos, et vous humilierez vos âmes; c'est une ordonnance perpétuelle.
32 ಯಾವನು ತನ್ನ ತಂದೆಯ ಬದಲಾಗಿ ಮಹಾಯಾಜಕ ಉದ್ಯೋಗಕ್ಕೋಸ್ಕರ ಅಭಿಷಿಕ್ತನಾಗಿ ಪ್ರತಿಷ್ಟಿಸಲಾಗಿದ್ದಾನೋ, ಆ ಮಹಾಯಾಜಕನು ಪ್ರಾಯಶ್ಚಿತ್ತವನ್ನು ಮಾಡಬೇಕು. ಅವನು ಪರಿಶುದ್ಧ ಉಡುಪುಗಳಾದ ನಾರು ಬಟ್ಟೆಗಳನ್ನು ಧರಿಸಿಕೊಳ್ಳಬೇಕು.
Et le sacrificateur qu'on aura oint, et qu'on aura installé pour exercer la sacrificature à la place de son père, fera l'expiation; il se revêtira des vêtements de lin, des vêtements sacrés.
33 ಹೀಗೆ ಅವನು ಮಹಾಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಇದಲ್ಲದೆ ಸಭೆಯ ಗುಡಾರಕ್ಕಾಗಿಯೂ, ಬಲಿಪೀಠಕ್ಕಾಗಿಯೂ ಪ್ರಾಯಶ್ಚಿತ್ತ ಮಾಡಬೇಕು. ಯಾಜಕರಿಗಾಗಿಯೂ, ಸಭೆಯ ಎಲ್ಲಾ ಜನರಿಗೋಸ್ಕರವೂ ಪ್ರಾಯಶ್ಚಿತ್ತ ಮಾಡಬೇಕು.
Et il fera l'expiation pour le saint sanctuaire, il fera l'expiation pour le tabernacle d'assignation, et pour l'autel; il fera l'expiation pour les sacrificateurs, et pour tout le peuple de l'assemblée.
34 “ಹೀಗೆ ಇಸ್ರಾಯೇಲರ ಎಲ್ಲಾ ಪಾಪಗಳಿಗಾಗಿ ವರ್ಷಕ್ಕೊಂದಾವರ್ತಿ ಪ್ರಾಯಶ್ಚಿತ್ತ ಮಾಡುವುದು, ನಿಮಗೆ ನಿರಂತರವಾದ ನಿಯಮವಾಗಿರುವುದು,” ಎಂದು ಹೇಳಿದರು. ಯೆಹೋವ ದೇವರು ಆಜ್ಞಾಪಿಸಿದಂತೆಯೇ ಮೋಶೆ ಮಾಡಿದನು.
Ceci sera donc pour vous une ordonnance perpétuelle, afin qu'une fois l'an il soit fait, pour les enfants d'Israël, l'expiation à cause de tous leurs péchés. Et l'on fit comme l'Éternel l'avait commandé à Moïse.

< ಯಾಜಕಕಾಂಡ 16 >