< ಯಾಜಕಕಾಂಡ 15 >

1 ಯೆಹೋವ ದೇವರು ಮೋಶೆ ಆರೋನರೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
Olúwa sọ fún Mose àti Aaroni pé,
2 “ಇಸ್ರಾಯೇಲರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು: ‘ಒಬ್ಬ ಪುರುಷನ ಶರೀರದಿಂದ ಮೇಹಸ್ರಾವ ಹರಿಯುವುದಾಗಿದ್ದರೆ, ಆ ಸ್ರಾವದ ನಿಮಿತ್ತವಾಗಿ ಅವನು ಅಶುದ್ಧನಾಗಿರುವನು.
“Ẹ bá àwọn ọmọ Israẹli sọ̀rọ̀, kí ẹ wí fún wọn pé, ‘Bí ìsunjáde bá ń jáde lára ọkùnrin kan lójú ara, ìsunjáde náà jẹ́ àìmọ́.
3 ಅವನ ಸ್ರಾವದಲ್ಲಿ ಅದು ಅವನ ಅಶುದ್ಧತೆಯಾಗಿರುವುದು. ಅವನ ಶರೀರವು ತನ್ನ ಸ್ರಾವದಿಂದ ಹರಿಯುವುದಾಗಿದ್ದರೂ, ಸ್ರಾವವು ಅವನ ಶರೀರದಲ್ಲಿ ನಿಂತು ಹೋಗಿದ್ದರೂ, ಅದು ಅವನ ಅಶುದ್ಧತೆಯಾಗಿರುವುದು. ಅವನ ವಿಸರ್ಜನೆಯು ಹೇಗೆ ಅಶುದ್ಧತೆಯನ್ನು ತರುತ್ತದೆ ಅಂದರೆ:
Yálà ó ń jáde léraléra tàbí ó dúró, èyí yóò sọ ọ́ di aláìmọ́. Báyìí ni ìsunjáde rẹ̀ ṣe le è sọ ọ́ di aláìmọ́:
4 “‘ಸ್ರಾವವಿರುವವನು ಮಲಗುವ ಪ್ರತಿಯೊಂದು ಹಾಸಿಗೆಯೂ ಅಶುದ್ಧವಾದದ್ದು, ಅವನು ಕೂತುಕೊಳ್ಳುವ ಪ್ರತಿಯೊಂದು ವಸ್ತುವೂ ಅಶುದ್ಧವಾಗಿರುವುದು.
“‘Gbogbo ibùsùn tí irú ẹni tí ó ní ìsunjáde náà bá sùn di àìmọ́.
5 ಅವನ ಹಾಸಿಗೆಯನ್ನು ಮುಟ್ಟುವವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು, ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವರು ಅಶುದ್ಧರಾಗಿರಬೇಕು.
Bí ẹnikẹ́ni bá fi ara kan ibùsùn rẹ̀, ó gbọdọ̀ fọ aṣọ rẹ̀ kí ó sì wẹ̀. Yóò sì wà ní ipò àìmọ́ títí ìrọ̀lẹ́.
6 ಇದಲ್ಲದೆ ಸ್ರಾವವಿರುವವನು ಕುಳಿತುಕೊಂಡ ಯಾವುದೇ ವಸ್ತುವಿನ ಮೇಲೆ ಕುಳಿತುಕೊಳ್ಳುವವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವರು ಅಶುದ್ಧರಾಗಿರುವರು.
Ẹnikẹ́ni tí ó bá jókòó lórí ohunkóhun tí ọkùnrin tí ó ní ìsunjáde bá jókòó le gbọdọ̀ fọ aṣọ rẹ̀, kí ó sì wẹ̀, kí ó sì wà láìmọ́ títí di ìrọ̀lẹ́.
7 “‘ಸ್ರಾವವಿರುವವನ ಶರೀರವನ್ನು ಮುಟ್ಟುವವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು ಮತ್ತು ಸಂಜೆಯವರೆಗೆ ಅವರು ಅಶುದ್ಧನಾಗಿರಬೇಕು.
“‘Ẹnikẹ́ni tí ó bá fọwọ́ kan ọkùnrin náà tí ó ní ìsunjáde gbọdọ̀ fọ aṣọ rẹ̀, kí ó sì wẹ̀, yóò sì di aláìmọ́ títí di ìrọ̀lẹ́.
8 “‘ಶುದ್ಧರಾಗಿರುವವರ ಮೇಲೆ ಸ್ರಾವವಿರುವವನು ಉಗುಳಿದರೆ, ಅವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವರು ಅಶುದ್ಧರಾಗಿರಬೇಕು.
“‘Bí ẹni tí ó ní ìsunjáde bá tu itọ́ sí ẹni tí ó mọ́ lára, ẹni tí ó mọ́ náà gbọdọ̀ fọ aṣọ rẹ̀ kí ó sì wẹ̀, yóò sì wà ní ipò àìmọ́ títí di ìrọ̀lẹ́.
9 “‘ಸ್ರಾವವುಳ್ಳವನು ಏರಿ ಕುಳಿತುಕೊಂಡಿದ್ದ ತಡಿಯು ಅಶುದ್ಧವಾಗಿರುವುದು.
“‘Gàárì ẹranko tí ẹni náà bá gùn yóò di àìmọ́.
10 ಅವನ ಕೆಳಗಿರುವ ಯಾವುದಾದರೂ ವಸ್ತುವನ್ನು ಮುಟ್ಟಿದವನು ಸಂಜೆಯವರೆಗೆ ಅಶುದ್ಧನಾಗಿರಬೇಕು, ಅವುಗಳಲ್ಲಿ ಯಾವುದನ್ನಾದರೂ ಹೊತ್ತುಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವನು ಅಶುದ್ಧನಾಗಿರುವನು.
Ẹnikẹ́ni tí ó bá fọwọ́ kan ohunkóhun tí ó wà lábẹ́ ọkùnrin náà di aláìmọ́ títí di ìrọ̀lẹ́. Ẹnikẹ́ni tí ó bá mú irú nǹkan bẹ́ẹ̀ gbọdọ̀ fọ aṣọ rẹ̀, kí ó wẹ ara rẹ̀. Yóò sì jẹ́ aláìmọ́ títí di ìrọ̀lẹ́.
11 “‘ಸ್ರಾವವುಳ್ಳವನು ತನ್ನ ಕೈಗಳನ್ನು ನೀರಿನಿಂದ ತೊಳೆದುಕೊಳ್ಳದೆ, ಯಾರನ್ನಾದರೂ ಮುಟ್ಟಿದರೆ ಅವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವರು ಅಶುದ್ಧರಾಗಿರಬೇಕು.
“‘Ẹnikẹ́ni tí ọkùnrin tí ó ní ìsunjáde ní ara rẹ̀ bá fi ara kàn láìfi omi fọ ọwọ́ rẹ̀, gbọdọ̀ fọ aṣọ rẹ̀ kí ó sì wẹ̀. Yóò sì wà ní ipò àìmọ́ títí ìrọ̀lẹ́.
12 “‘ಸ್ರಾವವುಳ್ಳವನು ಮುಟ್ಟಿದ ಮಣ್ಣಿನ ಪಾತ್ರೆಯನ್ನು ಒಡೆಯಬೇಕು. ಮರದ ಪ್ರತಿಯೊಂದು ಪಾತ್ರೆಯನ್ನು ನೀರಿನಲ್ಲಿ ಜಾಲಿಸಿ ತೊಳೆಯಬೇಕು.
“‘Ìkòkò amọ̀ tí ọkùnrin náà bá fọwọ́ kàn ni kí ẹ fọ́, gbogbo ohun èlò igi tí ó fọwọ́ kàn ni kí ẹ fi omi sàn.
13 “‘ಸ್ರಾವವುಳ್ಳವನು ತನ್ನ ಸ್ರಾವದಿಂದ ತನ್ನ ಶುದ್ಧತೆಗಾಗಿ ಏಳು ದಿನಗಳನ್ನು ಲೆಕ್ಕ ಮಾಡಿ, ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಇದಲ್ಲದೆ ಹರಿಯುವ ನೀರಿನಲ್ಲಿ ಸ್ನಾನಮಾಡಬೇಕು. ಆಗ ಅವನು ಶುದ್ಧನಾಗಿರುವನು.
“‘Ẹnikẹ́ni tí a bá wẹ̀nù kúrò nínú ìsunjáde rẹ̀ gbọdọ̀ ka ọjọ́ méje fún àwọn ọjọ́ ìwẹ̀nùmọ́: kí ó fọ aṣọ rẹ̀, kí ó sì fi omi wẹ ara rẹ̀, yóò sì di mímọ́.
14 ಎಂಟನೆಯ ದಿನದಲ್ಲಿ ಅವನು ತನಗಾಗಿ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳ ಮರಿಗಳನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲ ಬಳಿ ಯೆಹೋವ ದೇವರ ಎದುರಿನಲ್ಲಿ ಬಂದು ಅವುಗಳನ್ನು ಯಾಜಕನಿಗೆ ಕೊಡಬೇಕು.
Ní ọjọ́ kẹjọ kí ó mú àdàbà méjì tàbí ọmọ ẹyẹlé méjì, kí ó sì wá sí ẹnu-ọ̀nà àgọ́ ìpàdé níwájú Olúwa, kí ó sì kó wọn fún àlùfáà.
15 ಆಗ ಯಾಜಕನು ಒಂದನ್ನು ಪಾಪ ಪರಿಹಾರದ ಬಲಿಗಾಗಿ ಮತ್ತು ಇನ್ನೊಂದನ್ನು ದಹನಬಲಿಗಾಗಿ ಅವುಗಳನ್ನು ಸಮರ್ಪಿಸಬೇಕು, ಯಾಜಕನು ಅವನ ಸ್ರಾವಕ್ಕೋಸ್ಕರ ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತವನ್ನು ಮಾಡಬೇಕು.
Kí àlùfáà fi wọ́n rú ẹbọ: ọ̀kan fún ọrẹ ẹ̀ṣẹ̀ àti èkejì fún ọrẹ ẹbọ sísun níwájú Olúwa ní ipò ọkùnrin náà nítorí ìsunjáde rẹ̀.
16 “‘ಒಬ್ಬನಿಗೆ ವೀರ್ಯವು ಹೊರಟು ಹೋದರೆ, ಅವನು ತನ್ನ ಶರೀರವನ್ನೆಲ್ಲಾ ನೀರಿನಲ್ಲಿ ತೊಳೆದು, ಸಂಜೆಯವರೆಗೆ ಅಶುದ್ಧನಾಗಿರಬೇಕು.
“‘Bí nǹkan ọkùnrin kan bá tú jáde, kí ó wẹ gbogbo ara rẹ̀, kí ó wà ní ipò àìmọ́ títí ìrọ̀lẹ́.
17 ವೀರ್ಯವು ಬಿದ್ದ ಪ್ರತಿಯೊಂದು ಬಟ್ಟೆ ಮತ್ತು ಪ್ರತಿಯೊಂದು ಚರ್ಮವನ್ನು ನೀರಿನಿಂದ ತೊಳೆದು, ಸಂಜೆಯವರೆಗೆ ಅಶುದ್ಧವಾಗಿರಬೇಕು.
Yálà àwọ̀ tàbí aṣọ tí nǹkan ọkùnrin bá dà sí lórí ni kí ẹ fọ̀, yóò sì wà ní ipò àìmọ́ di ìrọ̀lẹ́.
18 ಇದಲ್ಲದೆ ಸ್ತ್ರೀಯೊಂದಿಗೆ ಒಬ್ಬನು ಮಲಗಿ, ವೀರ್ಯ ಸ್ರಾವವಾಗಿದ್ದರೆ, ಅವರಿಬ್ಬರೂ ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅಶುದ್ಧರಾಗಿರಬೇಕು.
Bí ọkùnrin kan bá bá obìnrin lòpọ̀ tí nǹkan ọkùnrin sì tú jáde lára rẹ̀. Àwọn méjèèjì gbọdọ̀ fi omi wẹ̀, kí wọ́n sì wà ní ipò àìmọ́ títí di ìrọ̀lẹ́.
19 “‘ಒಬ್ಬ ಸ್ತ್ರೀಗೆ ತನ್ನ ಶರೀರದಲ್ಲಿ ರಕ್ತ ಸ್ರಾವವಿದ್ದರೆ, ಅವಳು ಏಳು ದಿವಸಗಳವರೆಗೆ ಪ್ರತ್ಯೇಕವಾಗಿರಬೇಕು, ಅವಳನ್ನು ಯಾರಾದರೂ ಮುಟ್ಟಿದರೆ, ಅವರು ಸಂಜೆಯವರೆಗೆ ಅಶುದ್ಧರಾಗಿರುವರು.
“‘Bí obìnrin bá ń ṣe nǹkan oṣù rẹ̀, obìnrin yìí wà ní àìmọ́ títí di ọjọ́ méje. Ẹnikẹ́ni tí ó bá fọwọ́ kàn án yóò wà ní ipò àìmọ́ títí ìrọ̀lẹ́.
20 “‘ಅವಳು ಮುಟ್ಟಾದಾಗ ಅವಳು ಮಲಗುವ ಪ್ರತಿಯೊಂದು ಹಾಸಿಗೆ ಅಶುದ್ಧವಾಗಿರುವುದು. ಅವಳು ಕೂತುಕೊಳ್ಳುವ ಪ್ರತಿಯೊಂದು ವಸ್ತುವು ಅಶುದ್ಧವಾಗಿರುವುದು.
“‘Gbogbo ohun tí ó bá sùn lé ní àkókò nǹkan oṣù rẹ̀ di àìmọ́.
21 ಅವಳ ಹಾಸಿಗೆಯನ್ನು ಮುಟ್ಟುವವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅಶುದ್ಧರಾಗಿರುವರು.
Ẹnikẹ́ni tí ó bá fọwọ́ kan ibùsùn rẹ̀ gbọdọ̀ fọ aṣọ rẹ̀ kí ó sì wẹ̀, yóò sì wà ní ipò àìmọ́ títí di ìrọ̀lẹ́.
22 ಅವಳು ಯಾವುದರ ಮೇಲೆ ಕುಳಿತಿದ್ದಳೋ, ಅದನ್ನು ಮುಟ್ಟಿದವರು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು. ಅವರು ಸಂಜೆಯವರೆಗೆ ಅಶುದ್ಧರಾಗಿರುವರು.
Ẹnikẹ́ni tí ó bá fọwọ́ kan ohunkóhun tí ó bá jókòó lé gbọdọ̀ fọ aṣọ rẹ̀, kí ó sì wẹ̀, yóò sì wà ní ipò àìmọ́ títí di ìrọ̀lẹ́.
23 ಇದಲ್ಲದೆ ಅವಳ ಹಾಸಿಗೆಯ ಮೇಲಾಗಲಿ ಇಲ್ಲವೆ ಅವಳು ಕುಳಿತುಕೊಂಡ ಯಾವದರ ಮೇಲಾಗಲಿ ಇರುವುದನ್ನು ಮುಟ್ಟಿದವರು ಸಂಜೆಯವರೆಗೆ ಅಶುದ್ಧರಾಗಿರುವರು.
Ìbá à ṣe ibùsùn tàbí ohunkóhun tí ó jókòó lé. Ẹnikẹ́ni tí ó bá fọwọ́ kàn án yóò jẹ́ aláìmọ́ títí di ìrọ̀lẹ́.
24 “‘ಯಾವನಾದರೂ ಅವಳೊಂದಿಗೆ ಸಂಗಮಿಸಿದರೆ ಮತ್ತು ಅವಳ ಸ್ರಾವವು ಅವನಿಗೆ ತಗಲಿದರೆ, ಅವನು ಏಳು ದಿವಸ ಅಶುದ್ಧನಾಗಿರಬೇಕು. ಅವನು ಮಲಗಿಕೊಳ್ಳುವ ಹಾಸಿಗೆಯೆಲ್ಲಾ ಅಶುದ್ಧವಾಗಿರುವುದು.
“‘Bí ọkùnrin kan bá bá a lòpọ̀, tí nǹkan oṣù rẹ̀ sì kàn án lára, yóò jẹ́ aláìmọ́ fún ọjọ́ méje, gbogbo ibùsùn tí ọkùnrin náà bá sùn yóò jẹ́ aláìmọ́.
25 “‘ಇದಲ್ಲದೆ ಸ್ತ್ರೀಗೆ ಅವಳ ಮುಟ್ಟಿನ ಕಾಲಕ್ಕಿಂತಲೂ ಹೆಚ್ಚು ದಿನ ರಕ್ತಸ್ರಾವವು ಇದ್ದರೆ, ಇಲ್ಲವೆ ಮುಟ್ಟಾಗಿದ್ದ ಕಾಲದಲ್ಲಾಗುವ ರಕ್ತಸ್ರಾವಕ್ಕಿಂತ ಹೆಚ್ಚಾಗಿ ಹರಿಯುತ್ತಿದ್ದರೆ, ಅವಳ ಸ್ರಾವದ ಅಶುದ್ಧತ್ವದ ಎಲ್ಲಾ ದಿನಗಳು ಅವಳ ಮುಟ್ಟಿನ ದಿನಗಳಂತೆ ಇರಬೇಕು. ಅವಳು ಅಶುದ್ಧಳಾಗಿರುವಳು.
“‘Bí obìnrin bá ní ìsun ẹ̀jẹ̀ fún ọjọ́ púpọ̀ yálà sí àkókò nǹkan oṣù rẹ̀ tàbí tí nǹkan oṣù rẹ̀ bá kọjá ìgbà tí ó yẹ. Gbogbo ìgbà tí ó bá fi ń ní ìsun ẹ̀jẹ̀ náà ni yóò fi wà ní àìmọ́ gẹ́gẹ́ bí àkókò nǹkan oṣù rẹ̀.
26 ಅವಳ ಸ್ರಾವದ ಎಲ್ಲಾ ದಿನಗಳಲ್ಲಿ ಅವಳು ಮಲಗಿಕೊಳ್ಳುವ ಹಾಸಿಗೆಯು, ಅವಳ ಮುಟ್ಟಿನ ಹಾಸಿಗೆಯಂತೆ ಅಶುದ್ಧವಾಗಿರುವುದು. ಅವಳು ಕುಳಿತುಕೊಳ್ಳುವುದೆಲ್ಲವೂ ಅವಳ ಮುಟ್ಟಿನ ಅಶುದ್ಧತೆಯಂತೆಯೇ ಅಶುದ್ಧವಾಗಿರುವುದು.
Ibùsùn tí ó wù kí ó sùn sí ní gbogbo ìgbà tí ẹ̀jẹ̀ náà ń wá yóò jẹ́ àìmọ́ bí ibùsùn rẹ̀ ṣe jẹ́ ní àkókò nǹkan oṣù rẹ̀. Gbogbo ohun tí ó bá jókòó lé yóò wà ní àìmọ́, gẹ́gẹ́ bí àkókò nǹkan oṣù rẹ̀.
27 ಯಾರಾದರೂ ಆ ವಸ್ತುಗಳನ್ನು ಮುಟ್ಟಿದರೆ ಅಶುದ್ಧರಾಗಿರುವರು. ತಮ್ಮ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಅವರು ಸಂಜೆಯವರೆಗೆ ಅಶುದ್ಧರಾಗಿರುವರು.
Ẹnikẹ́ni tí ó bá fọwọ́ kàn wọ́n yóò wà ní àìmọ́. Ó gbọdọ̀ fọ aṣọ rẹ̀, kí ó sì wẹ̀ kí ó sì wà ní àìmọ́ títí di ìrọ̀lẹ́.
28 “‘ಅವಳು ತನ್ನ ಸ್ರಾವದಿಂದ ಶುದ್ಧಳಾದರೆ, ಅವಳು ಶುದ್ಧಳಾದಂದಿನಿಂದ ತನಗಾಗಿ ಏಳು ದಿನಗಳನ್ನು ಲೆಕ್ಕಿಸಬೇಕು.
“‘Nígbà tí ó bá di mímọ́ kúrò nínú ìsun rẹ̀, kí ó ka ọjọ́ méje lẹ́yìn náà, a ó kà á sí mímọ́.
29 ಎಂಟನೆಯ ದಿನದಲ್ಲಿ ಅವಳು ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು, ದೇವದರ್ಶನದ ಗುಡಾರದ ಬಾಗಿಲ ಬಳಿ ಯಾಜಕನ ಬಳಿಗೆ ತರಬೇಕು.
Ní ọjọ́ kẹjọ kí ó mú àdàbà méjì àti ọmọ ẹyẹlé wá síwájú àlùfáà ní ẹnu-ọ̀nà àgọ́ ìpàdé.
30 ಯಾಜಕನು ಒಂದನ್ನು ಪಾಪ ಪರಿಹಾರದ ಬಲಿಗಾಗಿಯೂ, ಇನ್ನೊಂದನ್ನು ದಹನಬಲಿಗಾಗಿಯೂ ಸಮರ್ಪಿಸಬೇಕು, ಯಾಜಕನು ಅವಳಿಗಾಗಿ ಅವಳ ಅಶುದ್ಧತೆಯ ಸ್ರಾವದ ವಿಷಯದಲ್ಲಿ ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತ ಮಾಡಬೇಕು.
Kí àlùfáà fi ọ̀kan rú ẹbọ ẹ̀ṣẹ̀ àti èkejì fún ẹbọ sísun. Báyìí ni yóò ṣe ètùtù fún un, níwájú Olúwa fún àìmọ́ ìsun ẹ̀jẹ̀ rẹ̀.
31 “‘ಹೀಗೆ ನೀವು ಇಸ್ರಾಯೇಲರನ್ನು ಅಶುದ್ಧತೆಯಿಂದ ದೂರವಾಗಿರುವಂತೆ ನೋಡಿಕೊಳ್ಳಬೇಕು. ಆಗ ಅವರು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಅಶುದ್ಧ ಮಾಡದೆ, ತಮ್ಮ ಅಶುದ್ಧತ್ವದಿಂದ ಸಾಯುವುದಿಲ್ಲ.’”
“‘Ẹ ya ará Israẹli sọ́tọ̀ kúrò nínú ohun tí ó ń sọ wọ́n di aláìmọ́, kí wọ́n má bá a kú nínú àìmọ́ wọn nípa bíba ibùgbé mímọ́ mi jẹ́, èyí tí ó wà láàrín wọn.’”
32 ಮೇಹಸ್ರಾವವುಳ್ಳವನಿಗೂ ವೀರ್ಯ ಸ್ರಾವವುಳ್ಳವನಿಗೂ ಅವುಗಳಿಂದ ಅಶುದ್ಧವಾಗುವವರೆಗೂ ಇರುವ ನಿಯಮವು ಇದೆ.
Ìwọ̀nyí ni àwọn òfin fún ọkùnrin tí ó ni ìsunjáde fún ẹnikẹ́ni tí a sọ di àìmọ́ nípa ìsunjáde nǹkan ọkùnrin rẹ̀.
33 ಮುಟ್ಟು ಇರುವವಳಿಗೂ, ಸ್ರಾವವಿರುವ ಪುರುಷನಿಗೂ ಸ್ತ್ರೀಗೂ, ಅಶುದ್ಧವಾದವಳ ಸಂಗಡ ಮಲಗಿದವನಿಗೂ ಇರುವ ನಿಯಮ ಇದೆ.
Fún obìnrin ní nǹkan oṣù rẹ̀, fún ọkùnrin tàbí obìnrin tí ó ní ìsunjáde, àti fún ọkùnrin tí ó ní ìbálòpọ̀ pẹ̀lú obìnrin tí ó jẹ́ aláìmọ́.

< ಯಾಜಕಕಾಂಡ 15 >