< ಯಾಜಕಕಾಂಡ 14 >
1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ:
परमप्रभु मोशासँग यसरी बोल्नुभयो,
2 “ಚರ್ಮರೋಗಿಯು ತನ್ನ ಶುದ್ಧತೆಯ ದಿನದಲ್ಲಿ ಮಾಡತಕ್ಕ ನಿಯಮವು ಇದೇ. ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
“रोग लागेको मानिसको शुद्धिकरणको दिनको निम्ति विधि यी नै हुन् । त्यसलाई पुजारीकहाँ लगिनुपर्छ ।
3 ಯಾಜಕನು ಪಾಳೆಯದ ಆಚೆಗೆ ಹೊರಟು ಹೋಗಬೇಕು. ಚರ್ಮರೋಗದಿಂದ ರೋಗಿಯು ಗುಣವಾದನೆಂದು ಯಾಜಕನು ಪರೀಕ್ಷಿಸಿದರೆ,
छालाको सरुवा रोग निको भएको छ वा छैन भनेर हेरेर त्यस मानिसलाई जाँच्नको निम्ति पुजारी छाउनीभन्दा बाहिर जाने छ ।
4 ಆಗ ಶುದ್ಧಮಾಡಿಕೊಳ್ಳುವವನಿಗೋಸ್ಕರ ಜೀವವುಳ್ಳ ಮತ್ತು ಶುದ್ಧವಾದ ಎರಡು ಪಕ್ಷಿಗಳನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣದ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಳ್ಳುವಂತೆ ಯಾಜಕನು ಆಜ್ಞಾಪಿಸಬೇಕು.
त्यसपछि कोही शुद्ध हुनको निम्ति दुई जीवित, शुद्ध चराहरू, देवदारुको काठ, सिन्दुरे रङ्गको धागो, र हिसप ल्याउनू भनी पुजारीले आज्ञा गर्ने छ ।
5 ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ಕೊಲ್ಲಬೇಕೆಂದು ಯಾಜಕನು ಆಜ್ಞಾಪಿಸಬೇಕು.
पुजारीले माटोको भाँडामा भएको ताजा पानीमाथि दुई चराहरूमध्ये एउटालाई मार्नू भनी आज्ञा गर्ने छ ।
6 ಇದಲ್ಲದೆ ಜೀವವುಳ್ಳ ಪಕ್ಷಿಯನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣದ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಂಡು, ಹರಿಯುವ ನೀರಿನ ಬಳಿಯಲ್ಲಿ ವಧಿಸಿದ ಆ ಪಕ್ಷಿಯ ರಕ್ತದಲ್ಲಿ ಅದ್ದಿ,
पुजारीले त्यसपछि जीवित चरा र देवदारुको काठ, र सिन्दुरे रङ्गको धागो र हिसप लिने छ, र यी सबैलाई ताजा पानीमाथि मारिएको चराको रगतमा चोप्ने छ ।
7 ಚರ್ಮರೋಗದಿಂದ ಶುದ್ಧಮಾಡಿಸಿಕೊಳ್ಳುವವನ ಮೇಲೆ ಏಳು ಸಾರಿ ಚಿಮುಕಿಸಿ, ಅವನನ್ನು ಶುದ್ಧನೆಂದು ನುಡಿದು, ಆ ಜೀವವುಳ್ಳ ಪಕ್ಷಿಯನ್ನು ಬಯಲಾದ ಹೊಲದಲ್ಲಿ ಬಿಟ್ಟುಬಿಡಬೇಕು.
त्यसपछि पुजारीले यस पानीलाई रोगबाट शुद्धिकरण गरिनुपर्ने मानिसमाथि सात पटक छर्कने छ, र त्यसलाई शुद्ध घोषणा गर्ने छ । त्यसपछि पुजारीले जीवित चरालाई भने खुला ठाउँमा छोडिदिने छ ।
8 “ಶುದ್ಧವಾಗುವುದಕ್ಕಿರುವವನು ತನ್ನ ಬಟ್ಟೆಗಳನ್ನು ತೊಳೆದುಕೊಂಡವನಾಗಿ, ತನ್ನ ಎಲ್ಲಾ ಕೂದಲನ್ನು ಬೋಳಿಸಿಕೊಂಡು, ತಾನು ಶುದ್ಧನಾಗುವಂತೆ ತನ್ನನ್ನು ನೀರಿನಲ್ಲಿ ತೊಳೆದುಕೊಳ್ಳಬೇಕು. ತರುವಾಯ ಅವನು ಪಾಳೆಯದೊಳಗೆ ಬಂದು ತನ್ನ ಡೇರೆಯೊಳಗೆ ಏಳು ದಿನಗಳವರೆಗೆ ಕಾಯಬೇಕು.
शुद्धिकरण भइरहेको मानिसले आफ्ना लुगाहरू धुने छ, आफ्नो सबै कपाल खौरने छ, र पानीले नुहाउने छ, र त्यो शुद्ध हुने छ । त्यसपछि त्यो छाउनीभित्र आओस्, तर त्यो सात दिनसम्म आफ्नो पालभन्दा बाहिरै बसोस् ।
9 ಆದರೆ ಏಳನೆಯ ದಿನದಲ್ಲಿ ಅವನು ತನ್ನ ತಲೆಯ ಎಲ್ಲಾ ಕೂದಲನ್ನೂ, ಗಡ್ಡವನ್ನೂ, ತನ್ನ ಕಣ್ಣುಹುಬ್ಬುಗಳನ್ನೂ ಮಾತ್ರವಲ್ಲದೆ ತನ್ನ ಎಲ್ಲಾ ಕೂದಲನ್ನೂ ಬೋಳಿಸಿಕೊಳ್ಳಬೇಕು. ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಇದಲ್ಲದೆ ತನ್ನ ದೇಹವನ್ನು ಸಹ ನೀರಿನಲ್ಲಿ ತೊಳೆಯಬೇಕು. ಆಗ ಅವನು ಶುದ್ಧನಾಗಿರುವನು.
सातौँ दिनमा त्यसले आफ्नो शिरको कपाल, र आफ्नो दाह्री र आँखीभुइँ खौरोस् । त्यसले आफ्नो सबै कपाल खौरोस्, र आफ्ना लुगाहरू धोओस् र पानीले नुहाओस्, अनि त्यो शुद्ध हुने छ ।
10 “ಎಂಟನೆಯ ದಿವಸದಲ್ಲಿ ಅವನು ಕಳಂಕರಹಿತವಾದ ಎರಡು ಕುರಿಮರಿಗಳನ್ನು ಮತ್ತು ಒಂದು ವರುಷದ ಕಳಂಕರಹಿತವಾದ ಹೆಣ್ಣು ಕುರಿಯನ್ನು, ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಐದು ಕಿಲೋಗ್ರಾಂ ಗೋಧಿ ಹಿಟ್ಟನ್ನು, ಒಂದನೆಯ ಮೂರು ಭಾಗ ಎಣ್ಣೆಯನ್ನು ತೆಗೆದುಕೊಳ್ಳಬೇಕು.
आठौँ दिनमा त्यसले दुईवटा निष्खोट भेडाका पाठा, एउटा निष्खोट एक वर्षे भेडाको पाठी, र अन्नबलिको निम्ति तेलसँग मुछिएको डेढ पाथी मसिनो पिठो, र आधा माना तेल ल्याओस् ।
11 ಅವನನ್ನು ಶುದ್ಧಪಡಿಸುವ ಯಾಜಕನು ಶುದ್ಧಮಾಡಿಸಿಕೊಳ್ಳುವವನನ್ನು ಇವುಗಳೊಂದಿಗೆ ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಯೆಹೋವ ದೇವರ ಮುಂದೆ ನಿಲ್ಲಿಸಬೇಕು.
शुद्ध गर्ने पुजारीले शुद्ध गरिनुपर्ने मानिसलाई ती सर-सामानहरूसँगै परमप्रभुको अगि भेट हुने पालको प्रवेशद्वारमा खडा गराओस् ।
12 “ಆಗ ಯಾಜಕನು ಒಂದು ಗಂಡು ಕುರಿಮರಿಯನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ ತೆಗೆದುಕೊಂಡು ಪ್ರಾಯಶ್ಚಿತ್ತ ಬಲಿಯಾಗಿ ಅರ್ಪಿಸಿ, ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.
पुजारीले दुईवटा भेडाका पाठामध्ये एउटा लिने छ र आधा माना तेलसँगै दोषबलि अर्पण गर्ने छ, र परमप्रभुको अगि डोलाइने बलिको रूपमा उसले त्यो डोलाउने छ ।
13 ಇದಲ್ಲದೆ ಅವನು ಆ ಕುರಿಮರಿಯನ್ನು ಪರಿಶುದ್ಧ ಸ್ಥಳದಲ್ಲಿ ಪಾಪ ಪರಿಹಾರದ ಬಲಿಯನ್ನು, ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ವಧಿಸಬೇಕು. ದೋಷಪರಿಹಾರ ಬಲಿಯಂತೆಯೇ ಪ್ರಾಯಶ್ಚಿತ್ತ ಬಲಿಯೂ ಯಾಜಕನದಾಗಿದೆ. ಅದು ಮಹಾಪರಿಶುದ್ಧವಾದದ್ದು.
उसले त्यो भेडाको पाठोलाई पवित्रस्थानमा पापबलिहरू र होमबलिहरू मारिने ठाउँमा मारोस्, किनभने पापबलि र दोषबलि पुजारीको भागको हो, कारण त्यो अति पवित्र हो ।
14 ಯಾಜಕನು ಪ್ರಾಯಶ್ಚಿತ್ತ ಬಲಿಯಲ್ಲಿ ಸ್ವಲ್ಪ ರಕ್ತವನ್ನು ತೆಗೆದುಕೊಳ್ಳಬೇಕು ಮತ್ತು ಯಾಜಕನು ಅದನ್ನು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಮತ್ತು ಬಲಗೈಯ ಹೆಬ್ಬೆರಳಿನ ಮೇಲೆಯೂ, ಬಲಗಾಲಿನ ಹೆಬ್ಬೆಟ್ಟಿನ ಮೇಲೆಯೂ ಹಚ್ಚಬೇಕು.
पुजारीले दोषबलिको केही रगत लिने छ र शुद्ध गरिनुपर्ने मानिसको दाहिने कानको टुप्पोमा, दाहिने हातको बुढी औँलामा, र दाहिने खुट्टाको बुढी औँलामा लगाउने छ ।
15 ಯಾಜಕನು ಒಂದನೆಯ ಮೂರು ಭಾಗದಷ್ಟು ಎಣ್ಣೆಯಲ್ಲಿ ಸ್ವಲ್ಪ ತೆಗೆದುಕೊಂಡು ತನ್ನ ಸ್ವಂತ ಎಡ ಅಂಗೈಯಲ್ಲಿ ಹೊಯ್ಯಬೇಕು.
पुजारीले मानाबाट तेल लिएर आफ्नै देब्रे हातको हत्केलामा खन्याउने छ र
16 ಯಾಜಕನು ತನ್ನ ಎಡಗೈಯಲ್ಲಿರುವ ಎಣ್ಣೆಯಲ್ಲಿ ತನ್ನ ಬಲಗೈ ಬೆರಳನ್ನು ಅದ್ದಿ, ತನ್ನ ಬೆರಳಿನಿಂದ ಆ ಎಣ್ಣೆಯನ್ನು ಏಳು ಸಾರಿ ಯೆಹೋವ ದೇವರ ಎದುರಿನಲ್ಲಿ ಚಿಮುಕಿಸಬೇಕು.
र आफ्नो देब्रे हातमा भएको तेलमा आफ्नो दाहिने औँला चोपेर परमप्रभुको अगि केही तेल सात पल्ट छर्कने छ ।
17 ತನ್ನ ಕೈಯಲ್ಲಿ ಮಿಕ್ಕಿದ ಎಣ್ಣೆಯನ್ನು ಯಾಜಕನು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆ ಮತ್ತು ಅವನ ಬಲಗೈಯ ಹೆಬ್ಬೆರಳಿನ ಮೇಲೆ, ಅವನ ಬಲಗಾಲಿನ ಹೆಬ್ಬೆಟ್ಟಿನ ಮೇಲೆ ಹಚ್ಚಬೇಕು. ಅದೇ ರೀತಿ ಪ್ರಾಯಶ್ಚಿತ್ತ ಬಲಿಯ ರಕ್ತದ ಮೇಲೆ ಹಚ್ಚಬೇಕು.
पुजारीले आफ्नो हातमा बाँकी रहेको तेललाई शुद्ध गरिनुपर्ने मानिसको दाहिने कानको टुप्पो, दाहिने हातको बुढी औँला, र दाहिने खुट्टाको बुढी औँलामा लगाउने छ ।
18 ಯಾಜಕನ ಕೈಯಲ್ಲಿರುವ ಉಳಿದ ಆ ಎಣ್ಣೆಯನ್ನು ಶುದ್ಧಮಾಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ಯಬೇಕು. ಯಾಜಕನು ಅವನಿಗಾಗಿ ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತ ಮಾಡಬೇಕು.
अनि पुजारीले आफ्नो हातमा बाँकी रहेको तेलचाहिँ शुद्ध गरिनुपर्ने मानिसको शिरमा खन्याउने छ, र पुजारीले परमप्रभुको अगि त्यो मानिसको निम्ति प्रायश्चित्त गर्ने छ ।
19 “ಯಾಜಕನು ಪಾಪ ಪರಿಹಾರದ ಬಲಿಯನ್ನು ಸಮರ್ಪಿಸಿ, ಶುದ್ಧಮಾಡಿಸಿಕೊಳ್ಳುವವನಿಗೋಸ್ಕರ ಅವನ ಅಶುದ್ಧತೆಗಾಗಿ ಪ್ರಾಯಶ್ಚಿತ್ತ ಮಾಡಬೇಕು. ತರುವಾಯ ಅವನು ದಹನಬಲಿಯ ಪ್ರಾಣಿಯನ್ನು ವಧಿಸಬೇಕು.
अनि पुजारीले पापबलिलाई अर्पण गर्ने छ र आफ्नो अशुद्धताको कारण शुद्ध गरिनुपर्ने मानिसको निम्ति प्रायश्चित्त गर्ने छ, र पछि उसले होमबलिलाई मार्ने छ ।
20 ಯಾಜಕನು ದಹನಬಲಿಯನ್ನೂ, ಧಾನ್ಯ ಸಮರ್ಪಣೆಯನ್ನೂ ಬಲಿಪೀಠದ ಮೇಲೆ ಸಮರ್ಪಿಸಬೇಕು. ಇದಲ್ಲದೆ ಯಾಜಕನು ಅವನಿಗೋಸ್ಕರ ಪ್ರಾಯಶ್ಚಿತ್ತವನ್ನು ಮಾಡಬೇಕು. ಆಗ ಅವನು ಶುದ್ಧನಾಗಿರುವನು.
त्यसपछि पुजारीले होमबलि र अन्नबलिलाई वेदीमा अर्पण गर्ने छ । पुजारीले त्यस मानिसको निम्ति प्रायश्चित्त गर्ने छ, अनि त्यो शुद्ध हुने छ ।
21 “ಅವನು ಬಡವನಾಗಿದ್ದರೆ ಅಷ್ಟೊಂದು ತರುವುದಕ್ಕೆ ಆಗದಿದ್ದರೆ, ಅವನು ತನ್ನ ಪ್ರಾಯಶ್ಚಿತ್ತಕ್ಕಾಗಿ ಬಲಿ ಕೊಡಲು ನೈವೇದ್ಯ ಮಾಡುವುದಕ್ಕೆ ಒಂದು ಕುರಿಮರಿಯನ್ನೂ, ಎಣ್ಣೆ ಬೆರೆಸಿದ ಒಂದುವರೆ ಕಿಲೋಗ್ರಾಂ ನಯವಾದ ಹಿಟ್ಟನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ
तर यदि त्यो मानिस गरिब छ, र यी बलिदानहरू ल्याउने त्यसको औकात छैन भने, त्यसले एउटा भेडाको पाठोलाई डोलाइनको निम्ति दोषबलिको रूपमा आफ्नै निम्ति प्रायश्चित्त गर्नलाई ल्याओस्, र अन्नबलिको निम्ति तेलमा मुछिएको आधा पाथी मसिनो पिठो, र आधा माना तेल,
22 ಮತ್ತು ಅವನಿಂದಾಗುವಷ್ಟು ಎರಡು ಬೆಳವಕ್ಕಿಗಳನ್ನೂ ಇಲ್ಲವೆ ಎರಡು ಪಾರಿವಾಳದ ಮರಿಗಳನ್ನೂ ತೆಗೆದುಕೊಳ್ಳಬೇಕು. ಅವುಗಳಲ್ಲಿ ಒಂದು ಪಾಪ ಪರಿಹಾರದ ಬಲಿಗಾಗಿಯೂ, ಇನ್ನೊಂದು ದಹನಬಲಿಗಾಗಿಯೂ ಇರುವುದು.
र आफूले ल्याउन सक्ने जति दुईवटा ढुकुर वा परेवाका दुई बचेरा ल्याओस् । एउटा चराचाहिँ पापबलि हुने छ र अर्कोचाहिँ होमबलि हुने छ ।
23 “ಅವನು ತನ್ನ ಶುದ್ಧತೆಗಾಗಿ ಎಂಟನೆಯ ದಿನದಲ್ಲಿ ಇವುಗಳನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ಯಾಜಕನ ಹತ್ತಿರಕ್ಕೆ ಯೆಹೋವ ದೇವರ ಎದುರಿನಲ್ಲಿ ತರಬೇಕು.
आठौँ दिनमा त्यसले यी सबै आफ्नो शुद्धिकरणको निम्ति पुजारीकहाँ परमप्रभुको अगि भेट हुने पालको प्रवेशद्वारमा ल्याओस् ।
24 ಯಾಜಕನು ಪ್ರಾಯಶ್ಚಿತ್ತದ ಸಮರ್ಪಣೆಯ ಆ ಕುರಿಮರಿಯನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ ತೆಗೆದುಕೊಳ್ಳಬೇಕು. ಯಾಜಕನು ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.
पुजारीले बलिदानको निम्ति भेडाको बच्चा लिने छ, र त्यससँगै उसले आधा माना जैतूनको तेल लिने छ, र उसले ती माथि उठाएर परमप्रभुको अगि अर्पण गर्ने छ ।
25 ಅವನು ಪ್ರಾಯಶ್ಚಿತ್ತ ಬಲಿಗಾಗಿ ಆ ಕುರಿಮರಿಯನ್ನು ವಧಿಸಬೇಕು. ಆ ಪ್ರಾಯಶ್ಚಿತ್ತ ಬಲಿಯ ಸ್ವಲ್ಪ ರಕ್ತವನ್ನು ಯಾಜಕನು ತೆಗೆದುಕೊಂಡು, ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆಯೂ, ಅವನ ಬಲಗೈಯ ಹೆಬ್ಬೆರಳಿನ ಮೇಲೆಯೂ ಹಚ್ಚಬೇಕು.
उसले दोषबलिको निम्ति भेडाको बच्चालाई मार्ने छ, र दोषबलिको केही रगत लिएर शुद्ध गरिनुपर्ने मानिसको दाहिने कानको टुप्पो, दाहिने हातको बुढी औँला, र दाहिने खुट्टाको बुढी औँलामा लगाउने छ ।
26 ಇದಲ್ಲದೆ ಯಾಜಕನು ತನ್ನ ಸ್ವಂತ ಎಡ ಅಂಗೈಯಲ್ಲಿ ಎಣ್ಣೆಯನ್ನು ಸುರಿಯಬೇಕು.
त्यसपछि पुजारीले केही तेल आफ्नो देब्रे हातको हत्केलामा खन्याउने छ,
27 ಯಾಜಕನು ತನ್ನ ಬಲಬೆರಳಿನಿಂದ ತನ್ನ ಎಡಗೈಯಲ್ಲಿರುವ ಸ್ವಲ್ಪ ಎಣ್ಣೆಯನ್ನು ಏಳು ಸಾರಿ ಯೆಹೋವ ದೇವರ ಎದುರಿನಲ್ಲಿ ಚಿಮುಕಿಸಬೇಕು.
र उसले आफ्नो दाहिने हातको औँलाले आफ्नो देब्रे हातमा भएको तेलबाट केही परमप्रभुको अगि सात पटकसम्म छर्कने छ ।
28 ಇದಲ್ಲದೆ ಯಾಜಕನು ತನ್ನ ಕೈಯಲ್ಲಿದ್ದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆಯೂ, ಅವನ ಬಲಗೈಯ ಹೆಬ್ಬೆರಳಿನ ಮೇಲೆಯೂ, ಅವನ ಬಲಗಾಲಿನ ಹೆಬ್ಬೆಟ್ಟಿನ ಮೇಲೆಯೂ ಪ್ರಾಯಶ್ಚಿತ್ತ ಬಲಿಯ ರಕ್ತದ ಸ್ಥಳದ ಮೇಲೆಯೂ ಹಚ್ಚಬೇಕು.
त्यसपछि पुजारीले आफ्नो हातमा भएको तेलबाट केही लिएर दोषबलिको रगत जहाँ-जहाँ लगाएको थियो अर्थात् शुद्ध गरिनुपर्ने मानिसको दाहिने कानको टुप्पो, दाहिने हातको बुढी औँला, र दाहिने खुट्टाको बुढी औँलामा लगाउने छ ।
29 ಯಾಜಕನ ಕೈಯಲ್ಲಿರುವ ಉಳಿದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದು, ಯೆಹೋವ ದೇವರ ಎದುರಿನಲ್ಲಿ ಅವನಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.
परमप्रभुको अगि शुद्ध गरिनुपर्ने मानिसको निम्ति प्रायश्चित्त गर्नलाई उसले आफ्नो हातमा भएको बाँकी तेल त्यस मानिसको शिरमा लगाइदिने छ ।
30 ತರುವಾಯ ಅವನು ತನ್ನ ಸ್ಥಿತಿಗೆ ತಕ್ಕಂತೆ ತಂದ ಬೆಳವಕ್ಕಿಗಳಲ್ಲಿಯಾಗಲಿ ಪಾರಿವಾಳದ ಮರಿಗಳಲ್ಲಿಯಾಗಲಿ ಸಮರ್ಪಿಸಬೇಕು.
उसले ढुकुरहरूमध्ये वा परेवाका बचेराहरूमध्ये एउटालाई आफ्नो क्षमताअनुसार अर्पण गरोस्-
31 ಅದರಂತೆಯೇ ಅವನು ತನ್ನ ಸ್ಥಿತಿಗೆ ತಕ್ಕಂತೆ ಒಂದನ್ನು ಪಾಪ ಪರಿಹಾರದ ಬಲಿಗಾಗಿ ಮತ್ತು ಇನ್ನೊಂದನ್ನು ದಹನಬಲಿಗಾಗಿ ಧಾನ್ಯಸಮರ್ಪಣೆಯೊಂದಿಗೆ ಸಮರ್ಪಿಸಬೇಕು, ಶುದ್ಧಪಡಿಸಿಕೊಳ್ಳುವವನಿಗೋಸ್ಕರ ಯಾಜಕನು ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತವನ್ನು ಮಾಡಬೇಕು.”
अन्नबलिसँगै उसले एउटाचाहिँ पापबलि र अर्को होमबलिको निम्ति अर्पण गरोस् ।
32 ಚರ್ಮರೋಗವುಳ್ಳವನು ಶುದ್ಧತೆ ಮಾಡಿಸಿಕೊಳ್ಳಲು ಗತಿಯಿಲ್ಲದವನಿಗೆ ತನ್ನ ಶುದ್ಧತೆಗಾಗಿ ಇರುವ ನಿಯಮವು ಇದೇ.
छालामा सरुवा रोग भएको मानिस जसले आफ्नो शुद्धिकरणको निम्ति आवश्यक बलि ल्याउन सक्दैन, त्यसको निम्ति विधि यी नै हुन् ।”
33 ಯೆಹೋವ ದೇವರು ಮೋಶೆ ಮತ್ತು ಆರೋನರೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ:
परमप्रभुले मोशा र हारूनलाई यसो भन्नुभयो,
34 “ನಾನು ನಿಮಗೆ ಸೊತ್ತಾಗಿ ಕೊಡುವ ಕಾನಾನ್ ದೇಶದೊಳಗೆ ನೀವು ಬಂದ ಬಳಿಕ ನಾನು ನಿಮಗೆ ಸೊತ್ತಾಗಿ ಕೊಡುವ ಮನೆಯಲ್ಲಿ ಬೂಜನ್ನು ಬರಮಾಡಿದಾಗ,
“मैले तिमीहरूलाई अधिकार गर्न दिएको कनान देशमा पुगेपछि तिमीहरूको अधिकार हुने त्यस देशमा यदि मैले तिमीहरूका घरमा फैलिने ढुसी पठाएँ भने,
35 ಮನೆಯವನು ಯಾಜಕನ ಬಳಿಗೆ ಬಂದು, ‘ನನ್ನ ಮನೆಯಲ್ಲಿ ಬೂಜಿನ ಗುರುತಿದ್ದಂತೆ ಕಾಣುತ್ತಿದೆ,’ ಎಂದು ಹೇಳಬೇಕು.
घरको मालिकले आएर पुजारीलाई त्यसबारे बताओस् । त्यसले भनोस् ‘मैले मेरो घरमा ढुसीजस्तै केही देखेको छु ।’
36 ಆಗ ಯಾಜಕನು ಆ ಮನೆಯಲ್ಲಿ ಬೂಜನ್ನು ಪರೀಕ್ಷಿಸುವುದಕ್ಕೆ ಹೋಗುವ ಮೊದಲು, ಆ ಮನೆಯೊಳಗೆ ಇರುವವುಗಳು ಅಶುದ್ಧವಾಗದಂತೆ ಆ ಮನೆಯನ್ನು ಬರಿದುಮಾಡಬೇಕೆಂದು ಆಜ್ಞಾಪಿಸಬೇಕು. ತರುವಾಯ ಯಾಜಕನು ಮನೆಯನ್ನು ಪರೀಕ್ಷಿಸುವುದಕ್ಕೆ ಒಳಗೆ ಹೋಗಬೇಕು.
त्यसपछि पुजारीले त्यहाँ गएर ढुसी छ वा छैन भनेर हेर्नुभन्दा अगि तिनीहरूले त्यो घर खाली गर्नू भनेर उसले आज्ञा गर्ने छ, ता कि घरमा भएको कुनै पनि कुरा अशुद्ध नहोस् ।
37 ಅವನು ಆ ಬೂಜನ್ನು ಪರೀಕ್ಷಿಸಿದಾಗ, ಅದು ಮನೆಯ ಗೋಡೆಗಳಲ್ಲಿ ತಗ್ಗಾದ ಸಾಲುಗಳಲ್ಲಿ ಹಸಿರಾಗಿಯಾದರೂ, ಕೆಂಪಾಗಿ ಗೋಡೆಯ ಮಟ್ಟಕ್ಕಿಂತ ತಗ್ಗಿನಲ್ಲಿ ತೋರಿಬಂದರೆ,
घरका पर्खालहरूमा ढुसी आएको छ वा छैन र त्यसले पर्खालका सतहहरूमा हरियो वा रातो रेखाहरू बनाएको छ वा छैन भनेर उसले जाँच गर्ने छ ।
38 ಯಾಜಕನು ಆ ಮನೆಯ ಹೊರಗೆ ಮನೆಯ ಬಾಗಿಲ ಬಳಿಗೆ ಹೋಗಿ ಅದನ್ನು ಏಳು ದಿವಸಗಳವರೆಗೆ ಮುಚ್ಚಬೇಕು.
यदि घरमा ढुसी आएको छ भने, पुजारी घरबाट बाहिर जाने छ र घरको ढोका सात दिनसम्म बन्द गरिदिने छ ।
39 ಏಳನೆಯ ದಿನದಲ್ಲಿ ಯಾಜಕನು ತಿರುಗಿಬಂದು ಪರೀಕ್ಷಿಸಿದಾಗ, ಆ ಬೂಜು ಮನೆಯ ಗೋಡೆಗಳಲ್ಲಿ ಹರಡಿಕೊಂಡಿದ್ದರೆ,
सातौँ दिनमा पुजारी फर्कने छ र घरका पर्खालहरूमा ढुसी फैलिएको छ वा छैन भनेर जाँच गर्ने छ ।
40 ಬೂಜುಳ್ಳ ಕಲ್ಲುಗಳನ್ನು ಅವರು ತೆಗೆದು ಪಟ್ಟಣದ ಆಚೆಗೆ ಅಶುದ್ಧ ಸ್ಥಳದಲ್ಲಿ ಬಿಸಾಡಬೇಕೆಂದೂ,
यदि फैलिएको छ भने, पुजारीले ढुसी देखा परेका ढुङ्गाहरूलाई झिकेर सहरभन्दा बाहिर कुनै एउटा अशुद्ध स्थानमा फ्याँक्न आज्ञा गर्ने छ ।
41 ಆ ಮನೆಯ ಒಳಭಾಗದಲ್ಲಿ ಸುತ್ತಲೂ ಕೆರೆದು, ಕೆರೆದ ಧೂಳನ್ನು ಪಟ್ಟಣದ ಹೊರಗೆ ಅಶುದ್ಧ ಸ್ಥಳದಲ್ಲಿ ಸುರಿಯಬೇಕೆಂದೂ,
घरका सबै भित्री पर्खालहरू खुर्कनुपर्ने छ, र खुर्किएर निकालिएको फोहोर वस्तुलाई सहरबाट बाहिर लगेर कुनै अशुद्ध स्थानमा फ्याँक्नुपर्छ ।
42 ಅವರು ಆ ಕಲ್ಲುಗಳಿಗೆ ಬದಲಾಗಿ ಬೇರೆ ಕಲ್ಲುಗಳನ್ನು ತೆಗೆದುಕೊಳ್ಳಬೇಕೆಂದೂ ಯಾಜಕನು ಆಜ್ಞಾಪಿಸಬೇಕು, ಅವನು ಬೇರೆ ಗಾರೆಯಿಂದ ಆ ಮನೆಗೆ ಗಿಲಾವುಮಾಡಬೇಕು.
तिनीहरूले अरू ढुङ्गाहरू लिएर ती झिकिएका ढुङ्गाहरूका स्थानमा राखून् र घरका पर्खालहरू पोत्नको निम्ति नयाँ माटो प्रयोग गरून् ।
43 “ಅವನು ಆ ಮನೆಯ ಕಲ್ಲುಗಳನ್ನು ತೆಗೆಸಿ ಅದನ್ನು ಕೆತ್ತಿ ಗಿಲಾವು ಮಾಡಿಸಿದ ಮೇಲೆ ಆ ಬೂಜು ತಿರುಗಿ ಕಾಣಬಂದರೆ,
ढुङ्गाहरू निकालिएको र पर्खाल खुर्किएर पोतिएको घरमा फेरि ढुसी देखा पर्यो र त्यो फैलियो भने,
44 ಯಾಜಕನು ಬಂದು ಪರೀಕ್ಷಿಸಬೇಕು. ಆಗ ಬೂಜು ಮನೆಯಲ್ಲಿ ಹರಡಿಕೊಂಡಿದ್ದರೆ, ಆ ಮನೆಯಲ್ಲಿ ಅದೊಂದು ನಾಶಕರವಾದ ಬೂಜು ಆಗಿರುವುದು, ಆ ಮನೆ ಅಶುದ್ಧವಾದದ್ದು.
पुजारी आएर घरमा ढुसी फैलिएको छ वा छैन भनेर जाँच गर्ने छ । यदि त्यो फैलिएको छ भने, त्यो हानि गर्ने ढुसी हो र त्यो घर अशुद्ध हुन्छ ।
45 ಅವನು ಆ ಮನೆಯನ್ನು ಕೆಡವಿಹಾಕಿ, ಅದರ ಕಲ್ಲುಗಳನ್ನೂ, ಮರಗಳನ್ನೂ, ಆ ಮನೆಯ ಎಲ್ಲಾ ಧೂಳನ್ನೂ ತೆಗೆದು, ಅವುಗಳನ್ನು ಪಟ್ಟಣದ ಹೊರಗೆ ಅಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
त्यो घर भत्काइयोस् । त्यस घरका ढुङ्गाहरू, काठहरू र पोतिएको माटो सबै सहरभन्दा बाहिर कुनै अशुद्ध स्थानमा लगियोस् ।
46 “ಆ ಮನೆಯು ಮುಚ್ಚಿರುವ ಕಾಲದಲ್ಲೆಲ್ಲಾ ಅದರೊಳಗೆ ಯಾವನಾದರೂ ಹೋದರೆ ಸಾಯಂಕಾಲದವರೆಗೆ ಅವನು ಅಶುದ್ಧನಾಗಿರುವನು.
साथै, त्यो घर बन्द गरिएको बेला त्यहाँ प्रवेश गर्ने मानिस साँझसम्म अशुद्ध हुने छ ।
47 ಆ ಮನೆಯೊಳಗೆ ಮಲಗಿಕೊಳ್ಳುವವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅಲ್ಲದೆ ಆ ಮನೆಯೊಳಗೆ ತಿನ್ನುವವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು.
त्यस घरमा सुतेका वा खाएका जोसुकैले आफ्ना लुगाहरू धोऊन् ।
48 “ಆದರೆ ಯಾಜಕನು ಒಳಗೆ ಬಂದು ಅದನ್ನು ಪರೀಕ್ಷಿಸಿದಾಗ, ಗಿಲಾವು ಮಾಡಿದ ನಂತರ ಆ ಮನೆಯಲ್ಲಿ ಆ ಬೂಜು ಹರಡಿಕೊಂಡಿರದಿದ್ದರೆ, ಆ ಮನೆಯು ಶುದ್ಧವೆಂದು ಯಾಜಕನು ನಿರ್ಣಯಿಸಬೇಕು. ಏಕೆಂದರೆ ಆ ಬೂಜು ಹೊರಟುಹೋಯಿತು.
घरलाई पोतिसकेपछि त्यहाँ ढुसी फैलिएको छ वा छैन भनेर पुजारी त्यस घरभित्र जाँच्नको निम्ति जाँदा यदि ढुसी बिलाइसकेको रहेछ भने, उसले त्यो घरलाई शुद्ध घोषणा गर्ने छ ।
49 ಆ ಮನೆಯನ್ನು ಶುದ್ಧಪಡಿಸುವುದಕ್ಕೋಸ್ಕರ ಎರಡು ಪಕ್ಷಿಗಳನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣ ದಾರವನ್ನೂ, ಹಿಸ್ಸೋಪನ್ನೂ ತೆಗೆದುಕೊಳ್ಳಬೇಕು.
त्यसपछि पुजारीले घरलाई शुद्ध गर्नको निम्ति दुईवटा चरा, देवदारुको काठ, सिन्दुरे रङ्गको धागो र हिसप लिओस् ।
50 ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಒಂದು ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕು.
उसले माटोको भाँडाको ताजा पानीमाथि एउटा चरालाई मार्ने छ ।
51 ತರುವಾಯ ದೇವದಾರು ಕಟ್ಟಿಗೆಯನ್ನೂ, ಹಿಸ್ಸೋಪನ್ನೂ, ರಕ್ತವರ್ಣ ದಾರವನ್ನೂ, ಸಜೀವವುಳ್ಳ ಪಕ್ಷಿಯನ್ನೂ ತೆಗೆದುಕೊಂಡು, ಅವುಗಳನ್ನು ವಧಿಸಿದ ಪಕ್ಷಿಯ ರಕ್ತದಲ್ಲಿ ಮತ್ತು ಹರಿಯುವ ನೀರಿನಲ್ಲಿ ಅದ್ದಿ, ಏಳು ಸಾರಿ ಆ ಮನೆಗೆ ಚಿಮುಕಿಸಬೇಕು.
उसले देवदारुको काठ, हिसप, सिन्दुरे रङ्गको धागो, र जीवित चरा लिएर ती सबैलाई मारिएको चराको रगत र ताजा पानीमा चोप्ने छ र घरमा सात पटक छर्कने छ ।
52 ಅವನು ಪಕ್ಷಿಯ ರಕ್ತದಿಂದಲೂ, ಹರಿಯುವ ನೀರಿನಿಂದಲೂ, ಸಜೀವವುಳ್ಳ ಪಕ್ಷಿಯಿಂದಲೂ, ದೇವದಾರು ಕಟ್ಟಿಗೆಯಿಂದಲೂ, ಹಿಸ್ಸೋಪಿನಿಂದಲೂ, ರಕ್ತವರ್ಣ ದಾರದಿಂದಲೂ ಆ ಮನೆಯನ್ನು ಶುದ್ಧೀಕರಿಸಬೇಕು.
उसले त्यो घरलाई चराको रगत र ताजा पनि, जीवित चरा, देवदारुको काठ, हिसप र सिन्दुरे रङ्गको धागोले शुद्ध गर्ने छ ।
53 ಆದರೆ ಜೀವವುಳ್ಳ ಆ ಪಕ್ಷಿಯನ್ನು ಪಟ್ಟಣದ ಆಚೆಗೆ ಬಯಲಾದ ಹೊಲಗಳಲ್ಲಿ ಬಿಟ್ಟುಬಿಡಬೇಕು. ಆ ಮನೆಗೋಸ್ಕರ ಪಾಪದ ಪ್ರಾಯಶ್ಚಿತ್ತವನ್ನು ಮಾಡಬೇಕು. ಆಗ ಅದು ಶುದ್ಧವಾಗುವುದು.”
तर उसले जीवित चरालाई भने सहरबाट बाहिर खुला मैदानहरूमा जान दिने छ । यसरी उसले त्यो घरको निम्ति प्रायश्चित्त गरोस्, र त्यो शुद्ध हुने छ ।
54 ಎಲ್ಲಾ ವಿಧವಾದ ಚರ್ಮರೋಗಕ್ಕೂ, ಇಸಬಿಗೂ,
सबै प्रकारका सरुवा रोगहरू र त्यस्ता रोग ल्याउने वस्तुहरू र चिलाउने रोग,
55 ಬಟ್ಟೆಯ ಮತ್ತು ಮನೆಯ ಬೂಜಿಗೂ,
लुगा र घरभित्रको ढुसी,
56 ಬಾವು, ಚರ್ಮವ್ಯಾಧಿಗೂ, ಹೊಳೆಯುವ ಕಲೆಗೂ
सुनिएर फुलेको ठाउँ, डाबर, र उज्ज्वल दागलाई,
57 ಅವುಗಳ ಶುದ್ಧಾಶುದ್ಧ ಬೇಧವನ್ನು ಬೋಧಿಸುವ ನಿಯಮಗಳು ಇವೇ. ಚರ್ಮರೋಗಗಳ ಹಾಗೂ ಬೂಜಿನ ವಿಷಯದಲ್ಲಿರುವ ನಿಯಮಗಳು ಇವೇ.
ती कुन बेला अशुद्ध छन् र कुन बेला शुद्ध छन् भनेर निर्धारण गर्नका निम्ति विधि यी नै हुन् । छालाका सरुवा रोगहरू र ढुसीको निम्ति विधि यी नै हुन् ।”