< ಪ್ರಲಾಪಗಳು 3 >

1 ಯೆಹೋವ ದೇವರ ಕೋಪದ ಕೋಲಿನಿಂದ ಕಷ್ಟವನ್ನು ನೋಡಿದ ಮನುಷ್ಯನು ನಾನೇ.
ಯೆಹೋವನ ರೌದ್ರದಂಡದ ಪೆಟ್ಟನ್ನು ತಿಂದವನು ನಾನೇ.
2 ಅವರು ನನ್ನನ್ನು ಕರೆತಂದು ನಡೆಸಿದ್ದು ಕತ್ತಲೆಗೇ ಹೊರತು ಬೆಳಕಿಗಲ್ಲ.
ಆತನೇ ನನ್ನನ್ನು ಕರೆದುಕೊಂಡು ಹೋಗಿ ಬೆಳಕಿನಲ್ಲಿ ಅಲ್ಲ, ಕತ್ತಲಲ್ಲೇ ನಡೆಯಮಾಡಿದ್ದಾನೆ.
3 ನಿಶ್ಚಯವಾಗಿ ಅವರು ನನಗೆ ವಿರೋಧವಾಗಿ ತಿರುಗಿದ್ದಾರೆ. ಅವರು ದಿನವೆಲ್ಲಾ ತಮ್ಮ ಕೈಯನ್ನು ನನಗೆ ವಿರೋಧವಾಗಿ ತಿರುಗಿಸಿದ್ದಾರೆ.
ನಿಶ್ಚಯವಾಗಿ ಆತನು ನನಗೆ ವಿರುದ್ಧವಾಗಿದ್ದಾನೆ. ದಿನವೆಲ್ಲಾ ನನ್ನ ಮೇಲೆ ಕೈಮಾಡುತ್ತಾ ಬಂದಿದ್ದಾನೆ.
4 ನನ್ನ ಮಾಂಸ, ಚರ್ಮವನ್ನು ಆತನು ಹಳೆಯದನ್ನಾಗಿ ಮಾಡಿದ್ದಾರೆ. ಅವರು ನನ್ನ ಎಲುಬುಗಳನ್ನು ಮುರಿದಿದ್ದಾರೆ.
ನನ್ನ ಮಾಂಸಚರ್ಮಗಳನ್ನು ಕ್ಷೀಣಿಸುವಂತೆ ಮಾಡಿ, ನನ್ನ ಎಲುಬುಗಳನ್ನು ಮುರಿದಿದ್ದಾನೆ;
5 ಅವರು ನನಗೆ ವಿರೋಧವಾಗಿ ಕಟ್ಟಿದ್ದಾರೆ ಮತ್ತು ನನ್ನನ್ನು ವಿಷದಿಂದಲೂ, ಸಂಕಟದಿಂದಲೂ ಸುತ್ತಿಕೊಂಡಿದ್ದಾರೆ.
ನನ್ನ ಸುತ್ತಲು ಶ್ರಮಸಂಕಟಗಳ ದಿಬ್ಬಗಳನ್ನು ಹಾಕಿದ್ದಾನೆ.
6 ಅವರು ನನ್ನನ್ನು ಬಹುಕಾಲದ ಹಿಂದೆ ಸತ್ತವರ ಹಾಗೆ, ಕತ್ತಲೆಯ ಸ್ಥಳಗಳಲ್ಲಿ ಇರಿಸಿದ್ದಾರೆ.
ಕಾರ್ಗತ್ತಲಲ್ಲಿ ನನ್ನನ್ನು ಇರಿಸಿದ್ದಾನೆ; ಬಹುಕಾಲದ ಹಿಂದೆ ಸತ್ತವರ ಹಾಗೆ ನಾನು ಇದ್ದೇನೆ.
7 ನಾನು ಹೊರಗೆ ಬಾರದ ಹಾಗೆ, ಅವರು ನನ್ನ ಸುತ್ತಲೂ ಗೋಡೆಯನ್ನು ಕಟ್ಟಿದ್ದಾರೆ. ಅವರು ನನ್ನ ಸಂಕೋಲೆಯ ಭಾರವನ್ನು ಹೆಚ್ಚಿಸಿದ್ದಾರೆ.
ನಾನು ತಪ್ಪಿಸಿಕೊಂಡು ಹೋಗದಂತೆ ನನ್ನ ಸುತ್ತಲು ಗೋಡೆಯನ್ನು ಕಟ್ಟಿ, ನನಗೆ ಭಾರವಾದ ಬೇಡಿಯನ್ನು ಹಾಕಿದ್ದಾನೆ.
8 ನಾನು ಕರೆದು ಕೂಗಿದರೂ ಅವರು ನನ್ನ ಪ್ರಾರ್ಥನೆಯನ್ನು ಲಾಲಿಸುವುದಿಲ್ಲ.
ಇದಲ್ಲದೆ ನಾನು ಮೊರೆಯಿಟ್ಟು ಕೂಗಿಕೊಂಡರೂ ನನ್ನ ಬಿನ್ನಹಕ್ಕೆ ಕಿವಿಗೊಡುತ್ತಿಲ್ಲ.
9 ಕೆತ್ತಿದ ಕಲ್ಲಿನಿಂದ ನನ್ನ ಮಾರ್ಗಗಳನ್ನು ಮುಚ್ಚಿ, ಆ ನನ್ನ ದಾರಿಗಳನ್ನು ಡೊಂಕು ಮಾಡಿದ್ದಾನೆ.
ನನ್ನ ದಾರಿಗಳಿಗೆ ಅಡ್ಡವಾಗಿ ಕೆತ್ತನೆಯ ಕಲ್ಲಿನ ಗೋಡೆಗಳನ್ನು ಹಾಕಿ, ಹಾದಿಗಳನ್ನು ಸುತ್ತುವರಿಯುವಂತೆ ಮಾಡಿದ್ದಾನೆ.
10 ಅವರು ನನಗೆ ಹೊಂಚು ಹಾಕುವ ಕರಡಿಯ ಹಾಗೆಯೂ, ಗುಪ್ತ ಸ್ಥಳಗಳಲ್ಲಿರುವ ಸಿಂಹದ ಹಾಗೆಯೂ ಇದ್ದಾರೆ.
೧೦ಆತನು ನನಗೆ ಹೊಂಚುಹಾಕುತ್ತಿರುವ ಕರಡಿಯಂತಿದ್ದಾನೆ, ಗುಪ್ತಸ್ಥಳಗಳಲ್ಲಿ ಅಡಗಿಕೊಂಡಿರುವ ಸಿಂಹದ ಹಾಗಿದ್ದಾನೆ.
11 ಅವರು ನನ್ನ ಮಾರ್ಗಗಳನ್ನು ತಪ್ಪಿಸಿ, ನನ್ನನ್ನು ತುಂಡುಗಳನ್ನಾಗಿ ಕತ್ತರಿಸಿ, ನನ್ನನ್ನು ಹಾಳು ಮಾಡಿದ್ದಾರೆ.
೧೧ನಾನು ನಡೆದ ದಾರಿಗಳಿಂದ ನನ್ನನ್ನು ತಪ್ಪಿಸಿದ್ದಾನೆ. ಆತನು ನನ್ನನ್ನು ದಿಕ್ಕಿಲ್ಲದವನಂತೆ ಮಾಡಿದ್ದಾನೆ.
12 ಅವರು ತನ್ನ ಬಿಲ್ಲನ್ನು ಬಗ್ಗಿಸಿದ್ದಾರೆ, ನನ್ನನ್ನು ಬಾಣಕ್ಕೆ ಗುರಿಮಾಡಿದ್ದಾರೆ.
೧೨ತನ್ನ ಬಿಲ್ಲನ್ನು ಬೊಗ್ಗಿಸಿ ಬಾಣಕ್ಕೆ ನನ್ನನ್ನು ಗುರಿಮಾಡಿಕೊಂಡಿದ್ದಾನೆ.
13 ಅವರು ತನ್ನ ಬತ್ತಳಿಕೆಯಲ್ಲಿನ ಬಾಣಗಳನ್ನು ನನ್ನ ಅಂತರಂಗಗಳಲ್ಲಿ ತೂರಿ ಹೋಗುವಹಾಗೆ ಮಾಡಿದ್ದಾರೆ.
೧೩ತನ್ನ ಬತ್ತಳಿಕೆಯ ಅಂಬುಗಳಿಂದ ನನ್ನ ಅಂತರಂಗಗಳನ್ನು ಇರಿದಿದ್ದಾನೆ.
14 ನಾನು ನನ್ನ ಎಲ್ಲಾ ಜನರಿಗೆ ಹಾಸ್ಯವೂ, ದಿನವೆಲ್ಲವೂ ಅವರ ಗೇಲಿಯ ಹಾಡಾಗಿಯೂ ಇದ್ದೇನೆ.
೧೪ನಾನು ಸ್ವಜನರೆಲ್ಲರಿಗೂ ಹಾಸ್ಯಾಸ್ಪದನಾಗಿ, ಹಗಲೆಲ್ಲಾ ಅವರ ಗೇಲಿಯ ಮಾತು ಮತ್ತು ಹಾಡುಗಳಿಗೆ ಗುರಿಯಾಗಿದ್ದೇನೆ.
15 ಅವರು ನನ್ನನ್ನು ಕಹಿಯಿಂದ ತುಂಬಿಸಿ, ವಿಷ ಸಸ್ಯಗಳಿಂದ ನನ್ನನ್ನು ತಣಿಸಿದ್ದಾರೆ.
೧೫ಆತನು ನನಗೆ ಕಹಿಯಾದ ಆಹಾರವನ್ನು ಕೊಟ್ಟು, ವಿಷ ಪಾನವನ್ನು ಕುಡಿಯಮಾಡಿದ್ದಾನೆ.
16 ಅವರು ನುರುಜು ಕಲ್ಲುಗಳಿಂದ ನನ್ನ ಹಲ್ಲುಗಳನ್ನು ಮುರಿದು, ಅವರು ನನ್ನನ್ನು ಧೂಳಿನಲ್ಲಿ ತುಳಿದಿದ್ದಾರೆ.
೧೬ನಾನು ಗರಸು ಕಲ್ಲುಚೂರುಗಳನ್ನು ಅಗೆಯುವಂತೆ ಮಾಡಿ ನನ್ನ ಹಲ್ಲುಗಳನ್ನು ಮುರಿದುಬಿಟ್ಟು, ನನ್ನನ್ನು ಬೂದಿಯಲ್ಲಿ ತಳ್ಳಿದ್ದಾನೆ.
17 ನನ್ನ ಪ್ರಾಣವನ್ನು ಸಮಾಧಾನದಿಂದ ದೂರ ಮಾಡಿದ್ದಾರೆ, ನಾನು ಸಮೃದ್ಧಿಯನ್ನು ಮರೆತುಬಿಟ್ಟೆನು.
೧೭ನನ್ನನ್ನು ತಳ್ಳಿಹಾಕಿ ಸಮಾಧಾನಕ್ಕೆ ದೂರಮಾಡಿದ್ದಾನೆ; ನಾನು ಸಂತೋಷವನ್ನು ಮರೆಯುವಂತೆ ಮಾಡಿದ್ದಾನೆ.
18 “ಅಯ್ಯೋ, ನನ್ನ ಬಲವು ಮತ್ತು ನನ್ನ ನಿರೀಕ್ಷೆಯು ಯೆಹೋವ ದೇವರಿಂದ ನಾಶವಾದವು,” ಎಂದು ನಾನು ಹೇಳಿದೆನು.
೧೮“ಅಯ್ಯೋ, ನನ್ನ ಶಕ್ತಿಯೆಲ್ಲಾ ಹಾಳಾಯಿತು, ಯೆಹೋವನು ನನಗೆ ದಯಪಾಲಿಸಿದ ನಿರೀಕ್ಷೆಯೂ ವ್ಯರ್ಥವಾಯಿತು” ಅಂದುಕೊಂಡೆನು.
19 ನನ್ನ ಸಂಕಟವನ್ನು, ನನ್ನ ಅಲೆದಾಡುವಿಕೆಯನ್ನು, ನನ್ನ ಕಹಿಯನ್ನು, ನನ್ನ ವಿಷತನವನ್ನು ನಾನು ಜ್ಞಾಪಕಮಾಡಿಕೊಂಡಿದ್ದೇನೆ.
೧೯ನಾನು ಅಲೆದು ಕಷ್ಟಪಟ್ಟದ್ದನ್ನು ನೆನಪಿಗೆ ತಂದುಕೋ, ಕಹಿಯಾದ ನನ್ನ ಆಹಾರಪಾನಗಳನ್ನು ಜ್ಞಾಪಕಮಾಡಿಕೋ.
20 ನನ್ನ ಪ್ರಾಣವು ಇನ್ನೂ ಅವುಗಳನ್ನು ಜ್ಞಾಪಿಸಿಕೊಳ್ಳುತ್ತಾ ನನ್ನೊಳಗೆ ಕುಂದಿಹೋಗಿದೆ.
೨೦ನನ್ನ ಆತ್ಮವು ಇವುಗಳನ್ನು ನಿತ್ಯವೂ ಜ್ಞಾಪಿಸಿಕೊಳ್ಳುತ್ತಾ ನನ್ನೊಳಗೆ ಕುಗ್ಗಿದೆ.
21 ಇದನ್ನು ನಾನು ನನ್ನ ಮನಸ್ಸಿಗೆ ತಂದುಕೊಳ್ಳುತ್ತೇನೆ. ಆದ್ದರಿಂದ ನನಗೆ ನಿರೀಕ್ಷೆ ಇದೆ.
೨೧ಹೀಗಿರಲು ನಾನು ನಿನ್ನ ಕರುಣೆಯನ್ನು ನೆನಪಿಗೆ ತಂದುಕೊಳ್ಳುತ್ತೇನೆ, ಅದರಿಂದ ನನಗೆ ನಿರೀಕ್ಷೆಯುಂಟಾಗುತ್ತದೆ!
22 ನಾವು ನಾಶವಾಗದೇ ಉಳಿದಿರುವುದು ಯೆಹೋವ ದೇವರ ಮಹಾ ಪ್ರೀತಿಯಿಂದಲೇ. ಏಕೆಂದರೆ ಅವರ ಅನುಕಂಪಗಳು ಮುಗಿಯುವುದಿಲ್ಲ.
೨೨ನಾನು ಉಳಿದಿರುವುದು ಒಡಂಬಡಿಕೆಗೆ ಬದ್ಧವಾಗಿರುವ ಆತನ ನಂಬಿಗಸ್ತಿಕೆಯಿಂದಲೇ; ಯೆಹೋವನ ಕೃಪಾವರಗಳ ಕಾರ್ಯಗಳು ನಿಂತುಹೋಗವು.
23 ಅವು ಪ್ರತಿ ಮುಂಜಾನೆಯೂ ಹೊಸದಾಗಿರುವುವು. ನಿನ್ನ ನಂಬಿಗಸ್ತಿಕೆಯು ಮಹತ್ತಾದದ್ದು.
೨೩ದಿನದಿನವು ಹೊಸಹೊಸದಾಗಿ ಒದಗುತ್ತವೆ; ನಿನ್ನ ನಂಬಿಗಸ್ತಿಕೆಯು ದೊಡ್ಡದು!
24 “ಯೆಹೋವ ದೇವರೇ ನನ್ನ ಪಾಲು, ಆದ್ದರಿಂದ ನಾನು ಅವರಿಗಾಗಿ ಕಾದಿರುತ್ತೇನೆ,” ಎಂದು ನಾನು ನನ್ನೊಳಗೆ ಎಂದುಕೊಳ್ಳುವೆನು.
೨೪“ಯೆಹೋವನೇ ನನ್ನ ಪಾಲು, ಆದಕಾರಣ ಆತನನ್ನು ನಿರೀಕ್ಷಿಸುವೆನು” ಎಂದು ನನ್ನ ಅಂತರಾತ್ಮವು ಅಂದುಕೊಳ್ಳುತ್ತದೆ.
25 ಆತನನ್ನು ನಿರೀಕ್ಷಿಸುವವರಿಗೂ, ಆತನನ್ನು ಹುಡಕುವವರಿಗೂ ಯೆಹೋವ ದೇವರು ಒಳ್ಳೆಯವರಾಗಿದ್ದಾರೆ.
೨೫ಯೆಹೋವನು ತನ್ನನ್ನು ನಿರೀಕ್ಷಿಸುವವರಿಗೂ ಮತ್ತು ಹುಡುಕುವವರಿಗೂ ಮಹೋಪಕಾರಿಯಾಗಿದ್ದಾನೆ.
26 ಮನುಷ್ಯನು ಮೌನವಾಗಿ ಯೆಹೋವ ದೇವರ ರಕ್ಷಣೆಗೆ ಕಾಯುವುದು ಒಳ್ಳೆಯದು.
೨೬ಯೆಹೋವನ ರಕ್ಷಣಕಾರ್ಯವನ್ನು ಎದುರುನೋಡುತ್ತಾ ಶಾಂತವಾಗಿ ಕಾದುಕೊಂಡಿರುವುದು ಒಳ್ಳೇಯದು.
27 ತನ್ನ ಯೌವನದಲ್ಲಿ ನೊಗವನ್ನು ಹೊಂದಿರುವುದು ಮಾನವನಿಗೆ ಒಳ್ಳೆಯದು.
೨೭ಯೌವನದಲ್ಲಿ ನೊಗಹೊರುವುದು ಮನುಷ್ಯನಿಗೆ ಹಿತಕರ.
28 ಅವನು ಒಂಟಿಯಾಗಿ ಕುಳಿತು ಮೌನವಾಗಿರಲಿ. ಏಕೆಂದರೆ ಯೆಹೋವ ದೇವರೇ ಅದನ್ನು ಅವನ ಮೇಲೆ ಹೊರಿಸಿದ್ದಾರೆ.
೨೮ನನ್ನ ಮೇಲೆ ಇದನ್ನು ಹೊರಿಸಿದವನು ಯೆಹೋವನೇ ಎಂದು ಅವನು ಒಂಟಿಗನಾಗಿ ಕುಳಿತು ಮೌನವಾಗಿರಲಿ.
29 ಒಂದು ವೇಳೆ ನಿರೀಕ್ಷೆ ಇರಬಹುದೇನೋ ಎಂದು ಅವನು ತನ್ನ ಮುಖವನ್ನು ಧೂಳಿನಲ್ಲಿ ಇಟ್ಟುಕೊಳ್ಳಲಿ.
೨೯ಒಂದು ವೇಳೆ ಯೆಹೋವನಿಂದ ಸುಗತಿಯಾದೀತೆಂಬ ನಿರೀಕ್ಷೆಯಿಂದ ತನ್ನ ಮುಖವನ್ನು ಕೊಳಕಿನ ಮೇಲೆ ಹಾಕಲಿ.
30 ಅವನು ತನ್ನನ್ನು ಹೊಡೆಯುವವನಿಗೆ ಕೆನ್ನೆ ಕೊಡಲಿ. ಅವನು ನಿಂದೆಯಿಂದಲೇ ತುಂಬಿರಲಿ.
೩೦ಹೊಡೆಯುವವನಿಗೆ ತನ್ನ ಕೆನ್ನೆಯನ್ನು ಕೊಟ್ಟು ಅವಮಾನವನ್ನು ಹೊಟ್ಟೆತುಂಬಾ ತಿನ್ನಲಿ.
31 ಏಕೆಂದರೆ ಕರ್ತದೇವರು ಜನರನ್ನು ಎಂದೆಂದಿಗೂ ತಳ್ಳಿಬಿಡುವುದಿಲ್ಲ.
೩೧ಕರ್ತನು ನಿರಂತರಕ್ಕೂ ಕೈ ಬಿಡುವವನಲ್ಲ.
32 ಆತನು ದುಃಖಪಡಿಸಿದರೂ, ತನ್ನ ಒಡಂಬಡಿಕೆಯ ಮಹಾಪ್ರೀತಿಯಿಂದ ಅನುಕಂಪ ತೋರಿಸುವರು.
೩೨ಆತನು ವ್ಯಥೆಗೊಳಿಸಿದರೇನು, ತನ್ನ ಕೃಪಾತಿಶಯದಿಂದ ಕನಿಕರಿಸುವನು.
33 ಏಕೆಂದರೆ ಆತನು ಬೇಕೆಂದು ಮನುಷ್ಯರ ಮಕ್ಕಳಿಗೆ ಬಾಧೆಯನ್ನೂ, ದುಃಖವನ್ನೂ ಕೊಡುವುದಿಲ್ಲ.
೩೩ನರಜನ್ಮದವರನ್ನು ಬಾಧಿಸಿ, ವ್ಯಥೆಗೊಳಿಸುವುದು ಆತನಿಗೆ ಇಷ್ಟವಿಲ್ಲ.
34 ಭೂಲೋಕದ ಸೆರೆಯವರನ್ನೆಲ್ಲಾ ಕಾಲುಗಳ ಕೆಳಗೆ ತುಳಿಯುವುದನ್ನೂ,
೩೪ಲೋಕದ ಸೆರೆಯವರನ್ನೆಲ್ಲಾ ತನ್ನ ಕಾಲುಗಳ ಕೆಳಗೆ ತುಳಿದುಬಿಡುವುದೂ,
35 ಮಹೋನ್ನತನ ಸನ್ನಿಧಿಯಲ್ಲಿ ಮನುಷ್ಯನ ನ್ಯಾಯವನ್ನು ನಿರಾಕರಿಸುವುದನ್ನೂ,
೩೫ಪರಾತ್ಪರನಾದ ದೇವರ ಸನ್ನಿಧಿಯಲ್ಲಿ ನ್ಯಾಯವನ್ನು ತಪ್ಪಿಸುವುದೂ,
36 ಮನುಷ್ಯನನ್ನು ಅವನ ಜಗಳದಲ್ಲಿ ಅನ್ಯಾಯವಾಗಿ ತೀರಿಸುವುದು ಕರ್ತದೇವರು ಮೆಚ್ಚುವುದಿಲ್ಲ.
೩೬ವ್ಯಾಜ್ಯವನ್ನು ಅನ್ಯಾಯವಾಗಿ ತೀರಿಸುವುದೂ, ಇವುಗಳನ್ನು ಕರ್ತನು ಲಕ್ಷ್ಯಕ್ಕೆ ತಾರನೇ?
37 ಕರ್ತದೇವರು ಆಜ್ಞಾಪಿಸದೆ ಇರುವಾಗ, ಸಂಭವಿಸಿ ನಡೆಯುವ ಹಾಗೆ ಹೇಳುವವನು ಯಾರು?
೩೭ಕರ್ತನ ಅಪ್ಪಣೆಯಿಲ್ಲದೆ ಯಾರ ಮಾತು ಸಾರ್ಥಕವಾದೀತು?
38 ಮಹೋನ್ನತರ ಬಾಯಿಂದ ಕೇಡೂ, ಒಳ್ಳೆಯ ಸಂಗತಿಗಳೂ ಹೊರಡುವುದಿಲ್ಲವೇ?
೩೮ಪರಾತ್ಪರನಾದ ದೇವರ ಬಾಯಿಯ ಮಾತಿನಿಂದಲೇ ಮೇಲು ಮತ್ತು ಕೇಡುಗಳು ಸಂಭವಿಸುತ್ತವಲ್ಲಾ.
39 ಬದುಕುವ ಮನುಷ್ಯನು ತನ್ನ ಪಾಪಗಳ ಶಿಕ್ಷೆಗಾಗಿ ಗೊಣಗುಟ್ಟುವುದೇಕೆ?
೩೯ಮನುಷ್ಯನಿಗೆ ಜೀವ ವರವಿರಲು ತನ್ನ ಪಾಪದ ಶಿಕ್ಷೆಗಾಗಿ ಗುಣುಗುಟ್ಟುವುದೇಕೆ?
40 ನಾವು ನಮ್ಮ ಮಾರ್ಗಗಳನ್ನು ಪರಿಶೋಧಿಸಿ, ಪರೀಕ್ಷಿಸಿಕೊಂಡು ಆಮೇಲೆ ಯೆಹೋವ ದೇವರ ಬಳಿಗೆ ತಿರುಗಿಕೊಳ್ಳೋಣ.
೪೦ನಮ್ಮ ನಡತೆಯನ್ನು ಶೋಧಿಸಿ, ಪರೀಕ್ಷಿಸಿಕೊಂಡು ಯೆಹೋವನ ಕಡೆಗೆ ತಿರುಗಿಕೊಳ್ಳೋಣ.
41 ನಮ್ಮ ಹೃದಯಗಳನ್ನು ನಮ್ಮ ಕೈಗಳೊಂದಿಗೆ ಪರಲೋಕದ ದೇವರ ಕಡೆಗೆ ಎತ್ತಿಕೊಳ್ಳೋಣ.
೪೧ಪರಲೋಕದಲ್ಲಿರುವ ದೇವರ ಕಡೆಗೆ ನಮ್ಮ ಕೈಗಳೊಡನೆ ಮನಸ್ಸನ್ನೂ ತಿರುಗಿಸಿ ಸ್ತುತಿಸೋಣ.
42 ನಾವು ದ್ರೋಹಮಾಡಿದ್ದೇವೆ ಮತ್ತು ಎದುರು ಬಿದ್ದಿದ್ದೇವೆ, ನೀವು ಮನ್ನಿಸಲಿಲ್ಲ.
೪೨“ನಾವು ಅವಿಧೇಯರಾಗಿ ದ್ರೋಹಮಾಡಿದ್ದೇವೆ; ನೀನು ಕ್ಷಮಿಸಲಿಲ್ಲ.
43 ಕೋಪದಲ್ಲಿ ನಮ್ಮನ್ನು ಮುಚ್ಚಿ ಹಿಂಸಿಸಿದ್ದೀರಿ. ಕನಿಕರಿಸದೆ ಕೊಂದು ಹಾಕಿರುವಿರಿ.
೪೩ನೀನು ರೋಷವನ್ನು ಹೊದ್ದುಕೊಂಡು ನಮ್ಮನ್ನು ಹಿಂದಟ್ಟಿದ್ದೀ; ಕನಿಕರಿಸದೆ ಕೊಂದು ಹಾಕಿದ್ದೀ.
44 ನಮ್ಮ ಪ್ರಾರ್ಥನೆಯು ನಿನ್ನ ಸನ್ನಿಧಿಗೆ ಸೇರದಂತೆ ನಿನ್ನನ್ನು ಮೇಘದಿಂದ ಮುಚ್ಚಿಕೊಂಡಿದ್ದೀರಿ.
೪೪ನಮ್ಮ ಪ್ರಾರ್ಥನೆಯು ನಿನಗೆ ಮುಟ್ಟಬಾರದೆಂದು ಮೋಡವನ್ನು ಮರೆಮಾಡಿಕೊಂಡಿದ್ದೀ.
45 ನೀನು ನಮ್ಮನ್ನು ಜನರ ಮಧ್ಯದಲ್ಲಿ ಕಲ್ಮಷವನ್ನಾಗಿಯೂ, ಕಸವನ್ನಾಗಿಯೂ ಮಾಡಿದ್ದೀಯೆ.
೪೫ನಮ್ಮನ್ನು ಜನಾಂಗಗಳ ಮಧ್ಯದಲ್ಲಿ ಕಸವನ್ನಾಗಿಯೂ ಮತ್ತು ಹೊಲಸನ್ನಾಗಿಯೂ ಹಾಕಿಬಿಟ್ಟಿದ್ದೀ.
46 ನಮ್ಮ ಎಲ್ಲಾ ಶತ್ರುಗಳು ನಮಗೆ ವಿರುದ್ಧವಾಗಿ ಅವರ ಬಾಯಿಗಳನ್ನು ತೆರೆದಿದ್ದಾರೆ.
೪೬ನಮ್ಮ ಶತ್ರುಗಳೆಲ್ಲಾ ನಮ್ಮನ್ನು ನೋಡಿ ಹಾಸ್ಯಮಾಡುತ್ತಾರೆ.
47 ಭಯವನ್ನೂ, ನಾಶವನ್ನೂ ನಾವು ಅನುಭವಿಸಿದ್ದೇವೆ.
೪೭ಭಯವೂ, ಗುಂಡಿಯೂ, ಸಂಹಾರವೂ ಮತ್ತು ಭಂಗವೂ ನಮಗೆ ಕಾದಿವೆ.”
48 ನನ್ನ ಜನರ ನಾಶದ ನಿಮಿತ್ತವಾಗಿ, ನನ್ನ ಕಣ್ಣಿನಿಂದ ನೀರು ನದಿಯಾಗಿ ಹರಿದು ಹೋಗುತ್ತದೆ.
೪೮ಸ್ವಜನರು ನಾಶವಾದ ಕಾರಣ ನನ್ನ ಕಣ್ಣೀರು ಹೊಳೆಹೊಳೆಯಾಗಿ ಹರಿಯುವುದು.
49 ಯೆಹೋವ ದೇವರು ಕಟಾಕ್ಷಿಸಿ, ಪರಲೋಕದಿಂದ ನೋಡುವ ತನಕ ನೇತ್ರವು ನಿರಂತರ ಕಣ್ಣೀರು ಸುರಿಸುತ್ತದೆ.
೪೯ಯೆಹೋವನು ಆಕಾಶದಿಂದ ಕಟಾಕ್ಷಿಸಿ ನೋಡುವ ತನಕ
50 ವಿಶ್ರಮಿಸಿಕೊಳ್ಳುವುದೂ ಇಲ್ಲ.
೫೦ನನ್ನ ಕಣ್ಣುಗಳು ನಿರಂತರವಾಗಿ ಅಶ್ರುಧಾರೆ ಸುರಿಸುವುದನ್ನು, ಎಂದಿಗೂ ಬಿಡದು.
51 ನನ್ನ ನಗರದ ಪುತ್ರಿಯರೆಲ್ಲರ ನಿಮಿತ್ತವಾಗಿ ನನ್ನ ಕಣ್ಣುಗಳು ನನ್ನ ಹೃದಯವನ್ನು ಪೀಡಿಸಿದೆ.
೫೧ನನ್ನ ಪಟ್ಟಣದ ಕನ್ಯೆಯರಿಗಾಗಿ ಅಳುತ್ತಿರುವ ನಾನು ಕಣ್ಣುರಿಯಿಂದ ಪೀಡಿತನಾಗಿದ್ದೇನೆ.
52 ನನ್ನ ಶತ್ರುಗಳು ಕಾರಣವಿಲ್ಲದೆ ಪಕ್ಷಿಯಂತೆ ನನ್ನನ್ನು ಕಠೋರವಾಗಿ ಹಿಂದಟ್ಟಿ ಬೇಟೆಯಾಡಿದರು.
೫೨ನಿಷ್ಕಾರಣವಾಗಿ ನನ್ನ ವೈರಿಗಳು ಪಕ್ಷಿಯನ್ನೋ ಎಂಬಂತೆ ನನ್ನನ್ನು ಆತುರದಿಂದ ಹಿಂದಟ್ಟಿದರು.
53 ಅವರು ಕಾರಾಗೃಹದಲ್ಲಿ ನನ್ನ ಜೀವವನ್ನು ತೆಗೆದುಹಾಕಿ, ನನ್ನ ಮೇಲೆ ಕಲ್ಲನ್ನು ಹಾಕಿದ್ದಾರೆ.
೫೩ನನ್ನನ್ನು ನೆಲಮಾಳಿಗೆಯಲ್ಲಿ ಇಳಿಸಿ ಕಲ್ಲುಮುಚ್ಚಿ ನನ್ನ ಪ್ರಾಣವನ್ನು ತೆಗೆದುಬಿಟ್ಟರು
54 ನನ್ನ ತಲೆಯ ಮೇಲೆ ನೀರು ಹರಿಯಿತು. ಆಗ ನಾನು ನಾಶವಾದೆನು ಅಂದುಕೊಂಡೆನು.
೫೪ಪ್ರವಾಹವು ನನ್ನನ್ನು ಮುಣುಗಿಸಿತು; ಆಗ ಸತ್ತೆನು ಅಂದುಕೊಂಡೆನು.
55 ಯೆಹೋವ ದೇವರೇ, ನಾನು ಆಳವಾದ ಕಾರಾಗೃಹದಿಂದ ನಿಮ್ಮ ಹೆಸರನ್ನು ಎತ್ತಿ ಬೇಡಿಕೊಂಡೆನು.
೫೫ಯೆಹೋವನೇ, ಅಗಾಧವಾದ ನೆಲಮಾಳಿಗೆಯಲ್ಲಿ ನಿನ್ನ ಹೆಸರೆತ್ತಿ ಪ್ರಾರ್ಥಿಸಿದೆನು.
56 ನೀನು ನನ್ನ ಸ್ವರವನ್ನು ಕೇಳಿದ್ದೀ. “ನನ್ನ ಶ್ವಾಸಕ್ಕೂ, ನನ್ನ ಕೂಗಿಗೂ ನಿನ್ನ ಕಿವಿಯನ್ನು ಮರೆಮಾಡಬೇಡಿರಿ.”
೫೬ನೀನು ನನ್ನ ಧ್ವನಿಯನ್ನು ಕೇಳಿದಿ; ನನ್ನ ನಿಟ್ಟುಸಿರಿಗೂ ಮತ್ತು ಮೊರೆಗೂ ಕಿವಿಯನ್ನು ಮರೆಮಾಡಿಕೊಳ್ಳಬೇಡ!
57 ನಾನು ನಿನ್ನನ್ನು ಕರೆದ ದಿನದಲ್ಲಿ ನೀನು ಸಮೀಪಕ್ಕೆ ಬಂದು, “ಭಯಪಡಬೇಡ,” ಎಂದು ಹೇಳಿದಿರಿ.
೫೭ನಾನು ನಿನ್ನನ್ನು ಕೂಗಿಕೊಂಡಾಗ ನನ್ನ ಸಮೀಪಕ್ಕೆ ಬಂದು “ಭಯಪಡಬೇಡ” ಎಂದು ಅಭಯವಚನ ನೀಡಿದೆ.
58 ಕರ್ತದೇವರೇ, ನೀನು ನನ್ನ ಪ್ರಾಣದ ವ್ಯಾಜ್ಯಗಳನ್ನು ನಡೆಸಿ, ನನ್ನ ಜೀವವನ್ನು ವಿಮೋಚಿಸಿದ್ದೀರಿ.
೫೮ಕರ್ತನೇ, ನೀನು ನನ್ನ ವ್ಯಾಜ್ಯಗಳನ್ನು ನಡಿಸಿ, ನನ್ನ ಪ್ರಾಣವನ್ನು ಉಳಿಸಿದ್ದೀ.
59 ಯೆಹೋವ ದೇವರೇ, ನೀವು ನನ್ನ ಅನ್ಯಾಯವನ್ನು ನೋಡಿದ್ದೀರಿ, ನೀವು ನನ್ನ ನ್ಯಾಯವನ್ನು ತೀರಿಸಿರಿ.
೫೯ಯೆಹೋವನೇ, ನನಗಾದ ಅನ್ಯಾಯವನ್ನು ನೋಡಿದ್ದೀ, ನನಗೆ ನ್ಯಾಯತೀರಿಸು.
60 ನನಗೆ ವಿರುದ್ಧವಾಗಿ ಅವರ ಎಲ್ಲಾ ಪ್ರತೀಕಾರವನ್ನೂ ನೋಡಿದ್ದೀರಲ್ಲಾ.
೬೦ನನ್ನ ವೈರಿಗಳು ನನ್ನ ಮೇಲೆ ತೀರಿಸಿದ ಹಗೆಯನ್ನೂ ಮತ್ತು ಕಲ್ಪಿಸಿಕೊಂಡ ಯುಕ್ತಿಗಳನ್ನೂ ನೋಡಿದ್ದೀಯಲ್ಲಾ.
61 ಯೆಹೋವ ದೇವರೇ, ಅವರ ಎಲ್ಲಾ ಕಲ್ಪನೆಗಳನ್ನೂ ಮತ್ತು ನನಗೆ ವಿರುದ್ಧವಾಗಿ ಹೇಳುವವರ ತುಟಿಗಳನ್ನೂ,
೬೧ಯೆಹೋವನೇ, ಅವರು ನನಗೆ ವಿರುದ್ಧವಾಗಿ ಮಾಡಿದ ದೂಷಣೆಯೂ, ನನ್ನ ಹಾನಿಗಾಗಿ ಕಲ್ಪಿಸಿದ ಕುಯುಕ್ತಿಗಳೂ,
62 ದಿನವಿಡೀ ನನಗೆ ವಿರುದ್ಧವಾದ ಅವರ ದುರಾಲೋಚನೆಯನ್ನೂ ಕೇಳಿರುವಿರಿ.
೬೨ನಿತ್ಯ ನಡಿಸುತ್ತಿರುವ ತಂತ್ರೋಪಾಯವೂ ಮತ್ತು ನನ್ನ ಎದುರಾಳಿಗಳ ನಿಂದೆಯೂ ನಿನ್ನ ಕಿವಿಗೆ ಬಿದ್ದಿವೆಯಷ್ಟೆ.
63 ಅವರನ್ನು ನೋಡು! ಕುಳಿತು ಅಥವಾ ನಿಂತಾಗ, ಅವರು ತಮ್ಮ ಹಾಡುಗಳಲ್ಲಿ ನನ್ನನ್ನು ಅಣಕಿಸುತ್ತಾರೆ.
೬೩ಅವರು ಕುಳಿತುಕೊಳ್ಳಲಿ, ಏಳಲಿ ನೋಡುತ್ತಲೇ ಇರು; ನಾನು ಅವರ ಗೇಲಿಯ ಹಾಡಿಗೆ ಗುರಿಯಾಗಿದ್ದೇನೆ.
64 ಯೆಹೋವ ದೇವರೇ, ಅವರ ಕೈಕೆಲಸಗಳ ಪ್ರಕಾರ ಅವರಿಗೆ ಪ್ರತಿಫಲವನ್ನು ಕೊಡಿ.
೬೪ಯೆಹೋವನೇ, ಅವರ ದುಷ್ಕೃತ್ಯಗಳಿಗೆ ಸರಿಯಾದ ಪ್ರತಿಫಲವನ್ನು ನೀನು ಅವರಿಗೆ ಕೊಡುವಿ;
65 ಅವರಿಗೆ ದುಃಖಕರವಾದ ಹೃದಯವನ್ನೂ, ನಿಮ್ಮ ಶಾಪವನ್ನೂ ಕೊಡಿ.
೬೫ಅವರ ಮನಸ್ಸಿನಲ್ಲಿ ಭಯಹುಟ್ಟಿಸುವಿ, ನಿನ್ನ ಶಾಪವು ಅವರ ಮೇಲಿರಲಿ!
66 ಯೆಹೋವ ದೇವರೇ, ಆಕಾಶದ ಕೆಳಗಿನಿಂದ ಕೋಪದಿಂದ ಅವರನ್ನು ಹಿಂಸಿಸಿ ಹಾಳುಮಾಡಿರಿ.
೬೬ನೀನು ಕೋಪಗೊಂಡು ಅವರನ್ನು ಹಿಂದಟ್ಟಿ ಅವರು ನಿನ್ನ ಕೈಕೆಲಸವಾಗಿರುವ ಆಕಾಶದ ಕೆಳಗೆ ಉಳಿಯದಂತೆ ಅಳಿಸಿಬಿಡುವಿ.

< ಪ್ರಲಾಪಗಳು 3 >