< ನ್ಯಾಯಸ್ಥಾಪಕರು 7 >
1 ಗಿದ್ಯೋನನೆಂಬ ಯೆರುಬ್ಬಾಳನೂ, ಅವನ ಸಂಗಡ ಇದ್ದ ಜನರೆಲ್ಲರೂ ಉದಯದಲ್ಲಿ ಎದ್ದು, ಹೆರೋದಿನ ಬಾವಿಯ ಬಳಿಯಲ್ಲಿ ದಂಡಿಳಿಸಿದರು. ಮಿದ್ಯಾನ್ಯರ ದಂಡು ಅವರಿಗೆ ಉತ್ತರಕ್ಕೆ ಮೋರೆ ಬೆಟ್ಟದ ತಗ್ಗಿನಲ್ಲಿ ಇಳಿದಿತ್ತು.
Alors Jérubbaal (c'est-à-dire, Gédéon) se leva dès le matin, ainsi que toute la troupe qu'il avait avec lui, et ils campèrent à la source de Harod. Or les Madianites avaient leur camp au nord près du monticule de More dans la vallée.
2 ಆಗ ಯೆಹೋವ ದೇವರು ಗಿದ್ಯೋನನಿಗೆ, “ನಿನ್ನ ಸಂಗಡ ಇರುವ ಜನರು ಬಹಳವಾಗಿದ್ದಾರೆ, ನಾನು ಮಿದ್ಯಾನ್ಯರನ್ನು ಜನರ ಕೈಗಳಿಗೆ ಒಪ್ಪಿಸಿಕೊಡುವುದಕ್ಕೆ ಸಾಧ್ಯವಿಲ್ಲ ಇಸ್ರಾಯೇಲರು, ‘ನನ್ನ ಕೈ ನನ್ನನ್ನು ರಕ್ಷಿಸಿತು,’ ಎಂದು ನನಗೆ ವಿರೋಧವಾಗಿ ಹೆಚ್ಚಳಪಟ್ಟಾರು.
Et l'Éternel dit à Gédéon: Il y a trop de gens avec toi, pour que je livre Madian entre leurs mains, car il ne faut pas qu'Israël se glorifie à ma face et dise: C'est mon bras qui m'a sauvé.
3 ಆದ್ದರಿಂದ ನೀನು ಹೋಗಿ ಜನರು ಕೇಳುವ ಹಾಗೆ, ‘ಯಾವನಿಗೆ ಭಯವೂ, ಹೆದರಿಕೆಯೂ ಉಂಟೋ ಅವನು ತಿರುಗಿ ತ್ವರೆಯಾಗಿ ಗಿಲ್ಯಾದ್ ಬೆಟ್ಟದಿಂದ ಹೋಗಲಿ,’ ಎಂದು ಪ್ರಕಟಮಾಡು,” ಎಂದರು. ಆಗ ಜನರಲ್ಲಿ ಇಪ್ಪತ್ತೆರಡು ಸಾವಿರ ಜನರು ತಿರುಗಿ ಹೋದರು; ನಂತರ ಹತ್ತು ಸಾವಿರ ಜನರು ಉಳಿದರು.
Fais donc proclamer aux oreilles de l'armée cet avis: Que tous ceux qui sont timides et craintifs s'en retournent, et de la montagne se retirent à Galaad. Alors vingt-deux mille s'en allèrent de l'armée, et il en resta dix mille.
4 ಯೆಹೋವ ದೇವರು ಗಿದ್ಯೋನನಿಗೆ, “ಜನರು ಇನ್ನೂ ತುಂಬ ಇದ್ದರೆ; ಅವರನ್ನು ಹತ್ತಿರದ ಹಳ್ಳಕ್ಕೆ ಕರೆದುಕೊಂಡು ಹೋಗು. ಅಲ್ಲಿ ನಾನು ಅವರನ್ನು ನಿನಗೋಸ್ಕರ ಪರೀಕ್ಷೆಮಾಡಿ ಆರಿಸುವೆನು. ನಿನ್ನ ಸಂಗಡ ಹೋಗುವವರಲ್ಲಿ ಯಾವನನ್ನು ಕುರಿತು ಹೇಳುವೆನೋ, ಅವನು ನಿನ್ನ ಸಂಗಡ ಹೋಗಲಿ. ಆದರೆ ನಾನು ನಿನ್ನ ಸಂಗಡ ಬರಬಾರದೆಂದು ಯಾವನನ್ನು ಕುರಿತು ಹೇಳುವೆನೋ, ಅವನು ಹೋಗಬಾರದು,” ಎಂದರು.
Et l'Éternel dit à Gédéon: Il y en a encore trop. Fais-les descendre à l'eau, et là je t'en ferai l'épuration; et celui-là marchera avec toi, duquel je te dirai: il marchera avec toi; et aucun de ceux desquels je te dirai: il ne marchera pas avec toi, ne devra marcher avec toi.
5 ಗಿದ್ಯೋನನು ಜನರನ್ನು ಹಳ್ಳದ ಬಳಿಗೆ ಕರಕೊಂಡು ಬಂದನು. ಆಗ ಯೆಹೋವ ದೇವರು ಗಿದ್ಯೋನನಿಗೆ, “ನಾಯಿ ನೆಕ್ಕುವ ಹಾಗೆ ಜಲವನ್ನು ತನ್ನ ನಾಲಿಗೆಯಿಂದ ನೆಕ್ಕುವ ಪ್ರತಿಯೊಬ್ಬನನ್ನೂ, ಕುಡಿಯುವುದಕ್ಕೆ ಮೊಣಕಾಲೂರಿ ಬಗ್ಗುವ ಪ್ರತಿಯೊಬ್ಬನನ್ನೂ ಬೇರೆಬೇರೆಯಾಗಿ ನಿಲ್ಲಿಸು,” ಎಂದರು.
Et il fit descendre la troupe à l'eau, et l'Éternel dit à Gédéon: Mets à part tous ceux qui tireront l'eau avec la langue en lapant comme lape le chien, et de même tous ceux qui s'agenouilleront pour boire.
6 ಆಗ ನೀರನ್ನು ತಮ್ಮ ಕೈಯಿಂದ ತೆಗೆದುಕೊಂಡು, ತಮ್ಮ ಬಾಯಿಗೆ ಎತ್ತಿ ನೆಕ್ಕಿದವರು ಮುನ್ನೂರು ಜನ, ಉಳಿದ ಜನರೆಲ್ಲಾ ನೀರು ಕುಡಿಯುವುದಕ್ಕೆ ಮೊಣಕಾಲೂರಿ ಬಗ್ಗಿದರು.
Et le nombre de ceux qui lapèrent en portant avec la main l'eau à la bouche fut de trois cents hommes, et tout le reste de la troupe s'était agenouillé pour humer l'eau.
7 ಆಗ ಯೆಹೋವ ದೇವರು ಗಿದ್ಯೋನನಿಗೆ, “ನೆಕ್ಕಿ ಕುಡಿದ ಆ ಮುನ್ನೂರು ಜನರಿಂದ ನಾನು ನಿಮ್ಮನ್ನು ರಕ್ಷಿಸಿ, ಮಿದ್ಯಾನ್ಯರನ್ನು ನಿನ್ನ ಕೈಯಲ್ಲಿ ಒಪ್ಪಿಸುವೆನು. ಇತರ ಜನರೆಲ್ಲಾ ತಮ್ಮ ತಮ್ಮ ಸ್ಥಳಗಳಿಗೆ ಹೋಗಲಿ,” ಎಂದರು.
Et l'Éternel dit à Gédéon: C'est par ces trois cents hommes qui ont lapé, que je vous sauverai et livrerai Madian entre tes mains; d'ailleurs que tout le reste de la troupe regagne le logis.
8 ಆಗ ಜನರು ಆಹಾರವನ್ನೂ, ತಮ್ಮ ತುತೂರಿಗಳನ್ನೂ ತಮ್ಮ ಕೈಗಳಲ್ಲಿ ತೆಗೆದುಕೊಂಡರು. ಆದರೆ ಗಿದ್ಯೋನನು ಇಸ್ರಾಯೇಲರನ್ನೆಲ್ಲಾ ಅವರವರ ಗುಡಾರಗಳಿಗೆ ಕಳುಹಿಸಿ, ಆ ಮುನ್ನೂರು ಜನರನ್ನು ಇಟ್ಟುಕೊಂಡನು. ಮಿದ್ಯಾನ್ಯರ ದಂಡು ಅವನಿಗೆ ಕೆಳಭಾಗದ ಕಣಿವೆಯಲ್ಲಿ ಇತ್ತು.
Et ils prirent avec eux des vivres et leurs trompettes, et Gédéon renvoya les autres Israélites chacun dans leurs tentes, et il retint les trois cents hommes. Or le camp de Madian était en bas dans la vallée.
9 ಆಗ ರಾತ್ರಿಯಲ್ಲಿ, ಯೆಹೋವ ದೇವರು ಅವನಿಗೆ, “ನೀನು ಎದ್ದು ಪಾಳೆಗೆ ವಿರೋಧವಾಗಿ ಇಳಿದು ಹೋಗು. ಏಕೆಂದರೆ ಅದನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ.
Et pendant la nuit même l'Éternel lui dit: Debout! descends sur le camp, car je l'ai livré entre tes mains,
10 ಇಳಿದು ಹೋಗುವುದಕ್ಕೆ ನೀನು ಭಯಪಟ್ಟರೆ, ಮೊದಲು ನೀನು ನಿನ್ನ ಸೇವಕನಾದ ಪುರನ ಸಂಗಡ ಪಾಳೆಯ ಬಳಿಗೆ ಇಳಿದು ಹೋಗಿ,
et si tu redoutes cette descente, descends au camp avec Pura, ton valet.
11 ಅವರು ಮಾತನಾಡುವುದನ್ನು ಕೇಳು. ತರುವಾಯ ಪಾಳೆಯಲ್ಲಿ ಇಳಿದು ಹೋಗುವುದಕ್ಕೆ ನಿನ್ನ ಕೈಗಳು ಬಲಗೊಳ್ಳುವುವು,” ಎಂದರು. ಹಾಗೆಯೇ ಅವನು ತನ್ನ ಸೇವಕನಾದ ಪುರನ ಸಂಗಡ ಪಾಳೆಯ ಹೊರಗಿರುವ ಸೈನಿಕರ ಬಳಿಗೆ ಹೋದನು.
Et tu écouteras ce qu'on y dit; en suite de quoi tu prendras courage pour descendre sur le camp. Alors il descendit avec Pura, son valet, jusqu'à l'extrémité des avant-postes du camp.
12 ಮಿದ್ಯಾನ್ಯರೂ, ಅಮಾಲೇಕ್ಯರೂ, ಪೂರ್ವದೇಶದ ಜನರೆಲ್ಲರೂ ಮಿಡತೆಗಳಷ್ಟು ಗುಂಪಾಗಿ ತಗ್ಗಿನಲ್ಲಿ ಮಲಗಿದ್ದರು. ಅವರ ಒಂಟೆಗಳು ಸಮುದ್ರದ ಮರಳಿನ ಹಾಗೆ ಅಸಂಖ್ಯವಾಗಿದ್ದವು.
Or les Madianites et les Amalécites et tous les enfants de l'Orient s'étendaient dans la vallée aussi nombreux que des sauterelles, et leurs chameaux étaient innombrables, pareils en quantité aux grains de sable des bords de la mer.
13 ಗಿದ್ಯೋನನು ಬಂದಾಗ, ಒಬ್ಬನು ತನ್ನ ಜೊತೆಗಾರನಿಗೆ ತನಗಾದ ಸ್ವಪ್ನವನ್ನು ವಿವರಿಸಿ ಹೇಳಿದ್ದೇನೆಂದರೆ, “ಇಗೋ, ನಾನು ಒಂದು ಕನಸನ್ನು ಕಂಡೆನು. ಒಂದು ಜವೆಗೋಧಿಯ ರೊಟ್ಟಿಯು ಮಿದ್ಯಾನ್ಯರ ಪಾಳೆಯ ಮೇಲೆ ಹೊರಳಿ, ಒಂದು ಡೇರೆಯ ಮೇಲೆ ಬಂದು, ಅದು ಬೀಳುವ ಹಾಗೆ ಅದನ್ನು ಹೊಡೆದು, ಅದನ್ನು ಕೆಡವಿ ಹಾಕಿತು. ಆಗ ಡೇರೆಯು ಬಿದ್ದುಹೋಯಿತು,” ಎಂದನು.
Et Gédéon vint, et voici, l'un d'eux racontait à l'autre un songe en ces termes: Voici, j'ai eu un songe: et voilà qu'une galette de pain d'orge roulait dans le camp de Madian, et elle arriva jusqu'aux tentes et elle les heurta, et elles tombèrent, et elle les mit sens dessus dessous, et les tentes étaient renversées.
14 ಅವನ ಜೊತೆಗಾರನು ಉತ್ತರಕೊಟ್ಟು, “ಇದು ಯೋವಾಷನ ಮಗನಾದ ಗಿದ್ಯೋನನೆಂಬ ಇಸ್ರಾಯೇಲಿನ ಮನುಷ್ಯನ ಖಡ್ಗವೇ ಹೊರತು ಬೇರೆ ಅಲ್ಲ. ದೇವರು ಮಿದ್ಯಾನ್ಯರನ್ನೂ, ಈ ಸಮಸ್ತ ಪಾಳೆಯನ್ನೂ ಅವನ ಕೈಯಲ್ಲಿ ಒಪ್ಪಿಸಿಕೊಟ್ಟರು,” ಎಂದನು.
Et l'autre répondait et disait: Ce n'est pas autre chose que l'épée de Gédéon, fils de Joas, l'homme d'Israël: Dieu livre entre ses mains Madian et toute l'armée.
15 ಗಿದ್ಯೋನನು ಆ ಕನಸಿನ ವಿವರವನ್ನೂ, ಅದರ ಅರ್ಥವನ್ನೂ ಕೇಳಿದಾಗ, ಅವನು ಯೆಹೋವ ದೇವರನ್ನು ಆರಾಧಿಸಿ, ಇಸ್ರಾಯೇಲ್ ಪಾಳೆಗೆ ತಿರುಗಿಬಂದು, “ಏಳಿರಿ, ಯೆಹೋವ ದೇವರು ಮಿದ್ಯಾನ್ಯರ ಪಾಳೆಯನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾರೆ,” ಎಂದು ಹೇಳಿದನು.
Et Gédéon, à l'ouïe du récit du songe et de son explication, se prosterna. Puis étant rentré au camp d'Israël il dit: Debout! car l'Éternel livre entre vos mains le camp de Madian.
16 ಆ ಮುನ್ನೂರು ಜನರನ್ನು ಮೂರು ಭಾಗವಾಗಿ ಹಂಚಿ, ಎಲ್ಲರ ಕೈಯಲ್ಲಿ ತುತೂರಿಗಳನ್ನೂ, ಬರಿದಾದ ಕೊಡಗಳನ್ನೂ, ಅವುಗಳಲ್ಲಿ ಇಡುವ ಪಂಜುಗಳನ್ನೂ ಕೊಟ್ಟನು.
Et il divisa les trois cents hommes en trois sections. Et il leur mit à tous des trompettes à la main et des cruches vides, et des torches dans les cruches.
17 ಅನಂತರ ಗಿದ್ಯೋನನು, “ನಾನು ಮಾಡುವುದನ್ನು ನೋಡಿ ಹಾಗೆಯೇ ನೀವೂ ಮಾಡಿರಿ. ನಾನು ಪಾಳೆಯ ಹೊರಗೆ ಬಂದಾಗ ಹೇಗೆ ಮಾಡುವೆನೋ, ಹಾಗೆಯೇ ನೀವೂ ಮಾಡಿರಿ.
Et il leur dit: Regardez à moi, et imitez! Voici, je vais me porter au bout du camp, et ce que je ferai, faites-le de même.
18 ನಾನೂ, ನನ್ನ ಸಂಗಡ ಇರುವವರೆಲ್ಲರೂ ತುತೂರಿಯನ್ನು ಊದುವಾಗ, ನೀವೆಲ್ಲರೂ ಪಾಳೆಯ ಸುತ್ತಲೂ, ಎಲ್ಲಾ ಕಡೆಯಲ್ಲಿಯೂ ತುತೂರಿಗಳನ್ನು ಊದಿ, ‘ಯೆಹೋವ ದೇವರಿಗಾಗಿ, ಗಿದ್ಯೋನನಿಗಾಗಿ,’ ಎಂದು ಕೂಗಿರಿ,” ಎಂದನು.
Et quand moi et tous mes compagnons, nous sonnerons de la trompette, vous aussi, sonnez de la trompette tout autour du camp et criez: Pour l'Éternel et Gédéon!
19 ಮಧ್ಯರಾತ್ರಿ ಆರಂಭದ ಜಾವದಲ್ಲಿ ಕಾವಲುಗಾರರನ್ನು ಬದಲಾಯಿಸಿದಾಗ, ಗಿದ್ಯೋನನೂ, ಅವನ ಸಂಗಡ ಇದ್ದ ನೂರು ಮಂದಿಯೂ ಪಾಳೆಯ ಹೊರಗೆ ಬಂದು, ತುತೂರಿಗಳನ್ನು ಊದಿ, ತಮ್ಮ ಕೈಯಲ್ಲಿದ್ದ ಕೊಡಗಳನ್ನು ಒಡೆದರು.
Ainsi Gédéon accompagné de ses cent hommes se porta à un bout du camp à l'entrée de la veille médiale: on venait à peine de placer les sentinelles. Alors ils sonnèrent des trompettes et cassèrent les cruches qu'ils portaient à la main,
20 ಈ ಮೂರು ಗುಂಪಿನ ಜನರು ತುತೂರಿಗಳನ್ನು ಊದಿ, ಆ ಕೊಡಗಳನ್ನು ಒಡೆದುಬಿಟ್ಟು, ಪಂಜುಗಳನ್ನು ತಮ್ಮ ಎಡಗೈಯಲ್ಲಿಯೂ, ಊದುವ ತುತೂರಿಗಳನ್ನು ತಮ್ಮ ಬಲಗೈಯಲ್ಲಿಯೂ ಹಿಡಿದು, “ಯೆಹೋವ ದೇವರಿಗಾಗಿ ಖಡ್ಗ, ಗಿದ್ಯೋನನಿಗಾಗಿ ಖಡ್ಗ,” ಎಂದು ಕೂಗಿ ಪಾಳೆಯ ಸುತ್ತಲೂ ಅವರವರ ಸ್ಥಳದಲ್ಲಿ ನಿಂತರು.
et les trois sections sonnèrent des trompettes, et cassèrent les cruches, et prenant de la main gauche les torches et de la droite les trompettes pour en sonner, ils crièrent: Épée de l'Éternel et de Gédéon!
21 ಆಗ ಪಾಳೆಯದವರಾದರೋ ಕೂಗುತ್ತಾ ಓಡಿಹೋದರು.
Et ils restèrent chacun en place tout autour du camp. Alors dans tout le camp, de courir, de pousser des cris, et de fuir.
22 ಮುನ್ನೂರು ಜನರು ತುತೂರಿಗಳನ್ನು ಊದುವಾಗ, ಯೆಹೋವ ದೇವರು ಪಾಳೆಯದಲ್ಲಿ ಎಲ್ಲೆಲ್ಲಿಯೂ ಒಬ್ಬನ ಖಡ್ಗವನ್ನು ಒಬ್ಬನ ಮೇಲೆ ಬರಮಾಡಿದರು. ಪಾಳೆಯ ಚೆರೇರಿನಲ್ಲಿರುವ ಬೇತ್ ಷಿಟ್ಟದವರೆಗೂ, ಟಬ್ಬಾತಿನ ಬಳಿಯಲ್ಲಿರುವ ಆಬೇಲ್ ಮೆಹೋಲಾದ ಮೇರೆಯವರೆಗೂ ಓಡಿಹೋಯಿತು.
Et ils sonnèrent des trois cents trompettes, et l'Éternel leur fit dans toute l'enceinte du camp tourner leurs épées les uns contre les autres. Et l'armée s'enfuit jusqu'à Beth-Sitta vers Tsejera, à la lisière d'Abel-Mehola près de Thabbath.
23 ಇಸ್ರಾಯೇಲರು ನಫ್ತಾಲಿಯಿಂದಲೂ, ಆಶೇರನಿಂದಲೂ, ಸಮಸ್ತ ಮನಸ್ಸೆಯವರೆಲ್ಲರೂ ಕೂಡಿಬಂದು ಮಿದ್ಯಾನ್ಯರನ್ನು ಹಿಂದಟ್ಟಿದರು.
Alors se rassemblèrent les Israélites de Nephthali et d'Asser et de tout Manassé, et ils se mirent à la poursuite de Madian.
24 ಇದಲ್ಲದೆ ಗಿದ್ಯೋನನು ಎಫ್ರಾಯೀಮ್ ಬೆಟ್ಟದಲ್ಲೆಲ್ಲಾ ದೂತರನ್ನು ಕಳುಹಿಸಿ, “ನೀವು ಮಿದ್ಯಾನ್ಯರಿಗೆ ಎದುರಾಗಿ ಇಳಿದು ಹೋಗಿ, ಬೇತ್‌ಬಾರದವರೆಗಿರುವ ನೀರನ್ನೂ, ಯೊರ್ದನನ್ನೂ ಅವರಿಗೆ ಮುಂದಾಗಿ ಹಿಡಿಯಿರಿ,” ಎಂದು ಹೇಳಿದನು. ಹಾಗೆಯೇ ಎಫ್ರಾಯೀಮನ ಜನರೆಲ್ಲರೂ ಕೂಡಿಕೊಂಡು, ಬೇತ್‌ಬಾರದವರೆಗೆ ನೀರನ್ನೂ, ಯೊರ್ದನನ್ನೂ ಹಿಡಿದರು.
Et Gédéon dépêcha des messagers dans toute la montagne d'Ephraïm pour dire: Descendez à la rencontre des Madianites, et coupez-leur l'eau jusqu'à Beth-Bara et au Jourdain. Alors tous les hommes d'Ephraïm se rassemblèrent, et ils leur coupèrent l'eau jusqu'à Beth-Bara et au Jourdain.
25 ಮಿದ್ಯಾನ್ಯರ ಇಬ್ಬರು ಅಧಿಪತಿಗಳಾದ ಓರೇಬನನ್ನೂ, ಜೇಬನನ್ನೂ ಹಿಡಿದು, ಓರೇಬನನ್ನು ಓರೇಬೆಂಬ ಬಂಡೆಯಲ್ಲಿಯೂ, ಜೇಬನನ್ನು ಜೇಬನ ದ್ರಾಕ್ಷಿಯ ಆಲೆಯ ಬಳಿಯಲ್ಲಿಯೂ ಕೊಂದುಹಾಕಿ, ಮಿದ್ಯಾನ್ಯರನ್ನು ಹಿಂದಟ್ಟಿ, ಓರೇಬ್, ಜೇಬರ ತಲೆಗಳನ್ನು ಯೊರ್ದನಿಗೆ ಈಚೆಯಲ್ಲಿದ್ದ ಗಿದ್ಯೋನನ ಬಳಿಗೆ ತಂದರು.
Et ils firent prisonniers deux princes de Madian, Oreb et Zeeb, et ils égorgèrent Oreb sur le rocher d'Oreb et Zeeb près du Pressoir de Zeeb; et ils poursuivirent les Madianites, et ils apportèrent à Gédéon depuis l'autre côté du Jourdain les têtes d'Oreb et de Zeeb.