< ನ್ಯಾಯಸ್ಥಾಪಕರು 20 >

1 ಆಗ ಇಸ್ರಾಯೇಲರೆಲ್ಲರು ಹೊರಟು ಗಿಲ್ಯಾದ್ ಸಹಿತವಾಗಿ ದಾನ್ ಪಟ್ಟಣ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ ಒಬ್ಬ ಮನುಷ್ಯನಂತೆ ಮಿಚ್ಪೆಯಲ್ಲಿ ಯೆಹೋವ ದೇವರ ಮುಂದೆ ಕೂಡಿಬಂದರು.
Sa’an nan dukan Isra’ilawa daga Dan zuwa Beyersheba kuma daga ƙasar Gileyad mutane kamar mutum guda suka fito suka taru a gaban Ubangiji a Mizfa.
2 ಇದಲ್ಲದೆ ಇಸ್ರಾಯೇಲಿನ ಸಮಸ್ತ ಗೋತ್ರಗಳಾದ ಸಮಸ್ತ ಜನರ ಮುಖ್ಯಸ್ಥರು ಬಿಚ್ಚು ಖಡ್ಗ ಹಿಡಿದುಕೊಂಡ ನಾಲ್ಕು ಲಕ್ಷ ಕಾಲಾಳುಗಳು ದೇವರ ಸಮೂಹದ ಜನರಲ್ಲಿಗೆ ಬಂದರು.
Shugabanni dukan kabilan mutane na kabilan Isra’ila suka zazzauna a wurarensu a taron jama’ar Allah, mayaƙa dubu ɗari huɗu masu ɗamara da takuba.
3 ಬೆನ್ಯಾಮೀನ್ಯರು, ಇಸ್ರಾಯೇಲರು ಮಿಚ್ಪೆಗೆ ಬಂದ ವರ್ತಮಾನವನ್ನು ಕೇಳಿದರು. ಆಗ ಇಸ್ರಾಯೇಲರು, “ನೀವು ಮಾತನಾಡಿರಿ; ಆ ಕೆಟ್ಟತನವು ಹೇಗೆ ಆಯಿತು?” ಎಂದರು.
(Mutanen Benyamin suka ji cewa Isra’ilawa sun haura zuwa Mizfa.) Sa’an nan Isra’ilawa suka ce, “Gaya mana yadda wannan mugun abu ya faru.”
4 ಹತಳಾದ ಸ್ತ್ರೀಯ ಗಂಡನಾದ ಆ ಲೇವಿಯನು ಅವರಿಗೆ ಉತ್ತರಕೊಟ್ಟು, “ನಾನು ಬೆನ್ಯಾಮೀನನ ಊರಾದ ಗಿಬೆಯಕ್ಕೆ ನನ್ನ ಉಪಪತ್ನಿ ಸಹಿತವಾಗಿ ಇಳಿದುಕೊಳ್ಳುವುದಕ್ಕೆ ಬಂದೆನು.
Sai Balawen, mijin matar da aka kashe ya ce, “Ni da ƙwarƙwarata mun zo Gibeya a Benyamin don mu kwana.
5 ಆದರೆ ಗಿಬೆಯ ಪಟ್ಟಣದವರು ನನಗೆ ವಿರೋಧವಾಗಿ ಎದ್ದು, ನಾನು ಇಳಿದಿದ್ದ ಮನೆಯನ್ನು ರಾತ್ರಿಯಲ್ಲಿ ಮುತ್ತಿಕೊಂಡು ನನ್ನನ್ನು ಕೊಲ್ಲಬೇಕೆಂದಿದ್ದರು ಮತ್ತು ನನ್ನ ಉಪಪತ್ನಿಯನ್ನು ಅತ್ಯಾಚಾರಮಾಡಿದರು. ಅವಳು ಸತ್ತುಹೋದಳು.
Da dad dare mutanen Gibeya suka bi ni suka kewaye gidan da niyya su kashe ni. Suka yi wa ƙwarƙwarata fyaɗe, har ta mutu.
6 ಅವರು ಇಸ್ರಾಯೇಲಿನಲ್ಲಿ ಇಂಥ ದುಷ್ಕಾರ್ಯವನ್ನೂ ಅತಿರೇಕದ ಕೆಲಸವನ್ನೂ ಮಾಡಿದ್ದರಿಂದ, ನಾನು ನನ್ನ ಉಪಪತ್ನಿಯನ್ನು ಹಿಡಿದು, ಅವಳನ್ನು ಕಡಿದು, ಇಸ್ರಾಯೇಲಿನ ಬಾಧ್ಯತೆಯಾದ ಎಲ್ಲಾ ಸೀಮೆಗಳಿಗೆ ಕಳುಹಿಸಿದೆನು. ನೀವೆಲ್ಲರೂ ಇಸ್ರಾಯೇಲರಾಗಿದ್ದೀರಿ.
Na ɗauki ƙwarƙwarata na yayyanka gunduwa-gunduwa na aika da shi ga kowane yankin gādon Isra’ila, domin sun aikata mugu abu da abin kunya a Isra’ila.
7 ಇಲ್ಲಿ ಕೂಡಿದ ಎಲ್ಲಾ ಇಸ್ರಾಯೇಲರೇ, ನಿಮ್ಮ ಮಾತನ್ನೂ ಆಲೋಚನೆಯನ್ನೂ ಇಲ್ಲಿ ಹೇಳಿಕೊಳ್ಳಿರಿ,” ಎಂದನು.
To, dukanku Isra’ilawa, sai ku yi magana ku kuma yanke hukuncinku.”
8 ಆಗ ಸಮಸ್ತ ಜನರೂ ಒಟ್ಟಾಗಿ ಎದ್ದು, “ನಮ್ಮಲ್ಲಿ ಯಾವನೂ ತನ್ನ ಡೇರೆಗೆ ಹೋಗದಿರಲಿ. ತನ್ನ ಮನೆಗೆ ಹಿಂದಿರುಗದಿರಲಿ.
Dukan mutane suka tashi kamar mutum ɗaya, suna cewa “Ba waninmu da zai tafi gida. Sam, babu ko ɗayanmu da zai koma gidansa.
9 ಈಗ ನಾವು ಗಿಬೆಯಕ್ಕೆ ಮಾಡುವುದು ಇದೇ. ಅದಕ್ಕೆ ವಿರೋಧವಾಗಿ ಚೀಟುಗಳು ಬಿದ್ದ ಪ್ರಕಾರ ಹೋಗೋಣ.
Amma yanzu ga abin da za mu yi wa Gibeya. Za mu haura mu fāɗa yadda ƙuri’a ta nunar.
10 ಆದರೆ ಬೆನ್ಯಾಮೀನನ ಗೋತ್ರದವರಾದ ಗಿಬೆಯದವರು ಇಸ್ರಾಯೇಲಿನಲ್ಲಿ ಮಾಡಿದ ಈ ಅತಿರೇಕದ ಕೆಲಸಕ್ಕೆ ತಕ್ಕ ಪ್ರಕಾರ ಮಾಡುವ ಹಾಗೆ ನಾವು ಆಹಾರವನ್ನು ತೆಗೆದುಕೊಂಡು ಬರುವುದಕ್ಕೆ ಇಸ್ರಾಯೇಲಿನ ಸಕಲ ಗೋತ್ರಗಳಲ್ಲಿ ನೂರಕ್ಕೆ ಹತ್ತು ಸಾವಿರಕ್ಕೆ ನೂರು, ಹತ್ತು ಸಾವಿರಕ್ಕೆ ಸಾವಿರ ಜನರನ್ನು ತೆಗೆದುಕೊಂಡು ಕಳುಹಿಸುತ್ತೇವೆ,” ಎಂದರು.
Za mu ɗauko mutum goma a kowane mutum ɗari daga dukan kabilan Isra’ila, da ɗari a dubu, da kuma dubu a dubu goma, domin a tanada wa mayaƙan. Sa’an nan, sa’ad da mayaƙan suka iso Geba a Benyamin, za su yi da su daidai bisa ga muguntar da suka yi a Isra’ila.”
11 ಹೀಗೆಯೇ ಇಸ್ರಾಯೇಲರೆಲ್ಲರೂ ಒಟ್ಟಾಗಿ ಆ ಪಟ್ಟಣದ ಮುಂದೆ ಕೂಡಿದರು.
Saboda haka dukan mutane Isra’ilawa suka taru suka kuma haɗu kamar mutum guda don su fāɗa wa birnin da yaƙi.
12 ಅಲ್ಲಿಂದ ಇಸ್ರಾಯೇಲ್ ಗೋತ್ರಗಳು ಬೆನ್ಯಾಮೀನನ ಸಮಸ್ತ ಗೋತ್ರಗಳಿಗೆ ದೂತರನ್ನು ಕಳುಹಿಸಿ, “ನಿಮ್ಮಲ್ಲಿ ಮಾಡಿದ ಈ ಕೆಟ್ಟತನವೇನು?
Kabilan Isra’ila suka aika jakadu a ko’ina a cikin kabilar Benyamin cewa, “Wace irin mugunta ce wannan da kuka aikata?
13 ಗಿಬೆಯದಲ್ಲಿರುವ ದುಷ್ಟ ಮನುಷ್ಯರನ್ನು ನಾವು ಕೊಂದು, ಕೆಟ್ಟತನವನ್ನು ಇಸ್ರಾಯೇಲಿನಿಂದ ತೆಗೆದುಹಾಕುವ ಹಾಗೆ, ಅವರನ್ನು ಒಪ್ಪಿಸಿಕೊಡಿರಿ,” ಎಂದು ಹೇಳಿ ಕಳುಹಿಸಿದರು. ಆದರೆ ಬೆನ್ಯಾಮೀನ್ಯರು ಇಸ್ರಾಯೇಲರಾದ ತಮ್ಮ ಸಹೋದರರ ಮಾತನ್ನು ಕೇಳುವುದಕ್ಕೆ ಮನಸ್ಸಿಲ್ಲದೆ,
Yanzu fa sai ku fitar da waɗannan’yan iskan da suka aikata wannan abu na Gibeya don mu kashe su mu kawar da mugunta daga Isra’ila!” Amma mutanen Benyamin ba su saurari’yan’uwansu Isra’ilawa ba.
14 ಇಸ್ರಾಯೇಲರ ಸಂಗಡ ಯುದ್ಧಮಾಡುವುದಕ್ಕೆ ಹೊರಡುವ ಹಾಗೆ ಪಟ್ಟಣಗಳಲ್ಲಿಂದ ಗಿಬೆಯದಲ್ಲಿ ಬಂದು ಕೂಡಿದರು.
Daga biranensu suka tattaru a Gibeya don su yaƙi Isra’ilawa.
15 ಆ ಕಾಲದಲ್ಲಿ ಆಯಾ ಪಟ್ಟಣಗಳಿಂದ ಯುದ್ಧಸನ್ನದ್ಧರಾಗಿ ಕೂಡಿಬಂದ ಬೆನ್ಯಾಮೀನ್ಯರ ಸಂಖ್ಯೆಯು ಇಪ್ಪತ್ತಾರು ಸಾವಿರವಾಗಿತ್ತು. ಇವರಲ್ಲದೆ ಗಿಬೆಯದಲ್ಲಿಯೇ ಏಳು ನೂರು ಮಂದಿ ಯುದ್ಧವೀರರಿದ್ದರು.
Nan da nan mutanen Benyamin suka tattara mayaƙa dubu ashirin da shida masu takuba daga biranensu, ban da mayaƙa ɗari bakwai da aka zaɓa daga mazauna a Gibeya.
16 ಈ ಸಮಸ್ತ ಜನರಲ್ಲಿ ಆರಿಸಿದ ಏಳು ನೂರು ಜನರು ಬಲಗೈ ಅಭ್ಯಾಸವಿಲ್ಲದವರಾಗಿದ್ದರು. ಅವರೆಲ್ಲರೂ ಒಂದು ಕೂದಲೆಳೆ ತಪ್ಪದ ಹಾಗೆ ಕವಣೆಯಿಂದ ಕಲ್ಲೆಸೆಯುವವರಾಗಿದ್ದರು.
Cikin dukan mayaƙan nan akwai zaɓaɓɓu mutane ɗari bakwai waɗanda su bahagwai ne, kowanne yana iya harbin gashin guda na kai da majajjawa ba kuskure.
17 ಬೆನ್ಯಾಮೀನನವರ ಹೊರತು ಇಸ್ರಾಯೇಲರಲ್ಲಿ ನಾಲ್ಕು ಲಕ್ಷ ಯೋಧರಿದ್ದರು. ಇವರೆಲ್ಲರೂ ಯುದ್ಧವೀರರಾಗಿದ್ದರು.
Isra’ila kuwa, ban da Benyamin, sun tara mayaƙa masu takobi dubu ɗari huɗu, dukansu gwanayen yaƙi ne.
18 ಆಗ ಇಸ್ರಾಯೇಲರು ಬೇತೇಲಿಗೆ ಹೋಗಿ, ತಮ್ಮಲ್ಲಿ ಮೊದಲು ಬೆನ್ಯಾಮೀನ್ಯರ ಸಂಗಡ ಯುದ್ಧಮಾಡುವುದಕ್ಕೆ ಹೋಗಬೇಕಾದವರು ಯಾರೆಂದು ದೇವರನ್ನು ಕೇಳಿದರು. ಅದಕ್ಕೆ ಯೆಹೋವ ದೇವರು, “ಯೆಹೂದ ಗೋತ್ರದವರು ಮೊದಲು ಹೋಗಬೇಕು,” ಎಂದರು.
Sai Isra’ilawa suka haura zuwa Betel suka nemi nufin Allah, suka ce, “Wane ne a cikinmu zai fara fāɗa wa mutanen Benyamin?” Ubangiji ya ce, “Yahuda ce za tă fara.”
19 ಆಗ ಇಸ್ರಾಯೇಲರು ಉದಯದಲ್ಲಿ ಎದ್ದು ಗಿಬೆಯಕ್ಕೆ ಎದುರಾಗಿ ಪಾಳೆಯಮಾಡಿಕೊಂಡರು.
Kashegari sai Isra’ilawa suka tashi suka kafa sansani kusa da Gibeya.
20 ಇಸ್ರಾಯೇಲಿನ ಮನುಷ್ಯರು ಗಿಬೆಯದ ಬಳಿಯಲ್ಲಿ ಬೆನ್ಯಾಮೀನ್ಯರೊಡನೆ ಯುದ್ಧಮಾಡುವದಕ್ಕೋಸ್ಕರ ವ್ಯೂಹ ಕಟ್ಟಿದರು.
Mutanen Isra’ila suka fita yaƙi da mutane Benyamin suka kuma ja dāgār yaƙi a Gibeya.
21 ಆಗ ಬೆನ್ಯಾಮೀನ್ಯರು ಗಿಬೆಯದಿಂದ ಹೊರಟು, ಇಸ್ರಾಯೇಲರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಆ ದಿವಸದಲ್ಲಿ ನೆಲಕ್ಕೆ ಬೀಳುವಂತೆ ಸಂಹರಿಸಿದರು.
Mutanen Benyamin suka fito daga Gibeya suka kashe mutum dubu ashirin da biyu na Isra’ilawa a dāgār yaƙi a ranar.
22 ಇಸ್ರಾಯೇಲರಾದ ಜನರು ಬಲಗೊಂಡು, ಮೊದಲನೆಯ ದಿವಸ ಯುದ್ಧಕ್ಕೆ ವ್ಯೂಹ ಕಟ್ಟಿದ ಸ್ಥಳದಲ್ಲಿ ತಿರುಗಿ ವ್ಯೂಹ ಕಟ್ಟಿದರು.
Amma mutanen Isra’ila suka ƙarfafa juna, suka sāke koma inda suka ja dāgā a rana ta farko.
23 ಇಸ್ರಾಯೇಲರು ಯೆಹೋವ ದೇವರ ಬಳಿಗೆ ಹೋಗಿ, ಅವರ ಮುಂದೆ ಸಂಜೆಯವರೆಗೆ ಅತ್ತು, “ನಮ್ಮ ಸಹೋದರರಾದ ಬೆನ್ಯಾಮೀನ್ಯರ ಸಂಗಡ ಯುದ್ಧಮಾಡುವುದಕ್ಕೆ ಹೋಗಬೇಕೋ?” ಎಂದು ಯೆಹೋವ ದೇವರನ್ನು ಕೇಳಿದರು. ಅದಕ್ಕೆ ಯೆಹೋವ ದೇವರು, “ಅವರ ಮೇಲೆ ಹೋಗಿರಿ,” ಎಂದರು. ಎರಡನೆಯ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರ ಬಳಿಗೆ ಬಂದರು.
Isra’ilawa suka haura suka yi kuka a gaban Ubangiji, har yamma, suka nemi nufin Ubangiji. Suka ce, “Mu sāke koma yaƙi da mutanen Benyamin,’yan’uwanmu?” Ubangiji ya ce, “Ku haura ku fāɗa musu.”
24 ಆಗ ಬೆನ್ಯಾಮೀನನವರು ಆ ಎರಡನೆಯ ದಿವಸದಲ್ಲಿ ಗಿಬೆಯದಿಂದ ಅವರಿಗೆ ಎದುರಾಗಿ ಹೊರಟುಬಂದು,
Sai Isra’ilawa suka matsa kusa da Benyamin a rana ta biyu.
25 ಬೆನ್ಯಾಮೀನ್ಯರು ಎರಡನೆಯ ದಿನದಲ್ಲಿಯೂ ಗಿಬೆಯಾದಿಂದ ಹೊರಗೆ ಬಂದು ಇಸ್ರಾಯೇಲರಲ್ಲಿ ಖಡ್ಗ ಹಿಡಿಯುವ ಹದಿನೆಂಟು ಸಾವಿರ ಜನರನ್ನು ನೆಲಕ್ಕೆ ಉರುಳಿಸಿದರು.
A wannan lokaci, da mutanen Benyamin suka fito daga Gibeya don su yaƙe su, sai suka sāke kashe Isra’ilawa dubu goma sha takwas, dukansu ɗauke da takuba.
26 ಆಗ ಇಸ್ರಾಯೇಲರೆಲ್ಲರೂ ಸಮಸ್ತ ಸೇನೆಯೂ ಬೇತೇಲಿಗೆ ಹೊರಟು, ಅಲ್ಲಿ ಅಳುತ್ತಾ ಯೆಹೋವ ದೇವರ ಮುಂದೆ ಕುಳಿತುಕೊಂಡು, ಆ ಸಂಜೆಯವರೆಗೆ ಉಪವಾಸವಾಗಿದ್ದು, ಯೆಹೋವ ದೇವರಿಗೆ ದಹನಬಲಿಗಳನ್ನೂ ಸಮಾಧಾನದ ಸಮರ್ಪಣೆಗಳನ್ನೂ ಅರ್ಪಿಸಿದರು.
Sa’an nan Isra’ilawa, dukan mutane, suka haura zuwa Betel, a can suka zauna suna kuka a gaban Ubangiji. Suka yi azumi a wannan rana har yamma suka miƙa hadayun ƙonawa da hadayun salama ga Ubangiji.
27 ಏಕೆಂದರೆ ಆ ದಿವಸಗಳಲ್ಲಿ ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿದ್ದದರಿಂದಲೂ,
Isra’ilawa suka nemi nufin Ubangiji (A kwanakin nan akwatin alkawarin Allah yana can,
28 ಆರೋನನ ಮೊಮ್ಮಗನೂ, ಎಲಿಯಾಜರನ ಮಗನೂ ಆದ ಫೀನೆಹಾಸನು ಅವರ ಮುಂದೆ ನಿಂತಿದ್ದದರಿಂದಲೂ, ಇಸ್ರಾಯೇಲರು, “ನಮ್ಮ ಸಹೋದರರಾದ ಬೆನ್ಯಾಮೀನ್ಯರಿಗೆ ವಿರೋಧವಾಗಿ ಇನ್ನೂ ಯುದ್ಧಮಾಡುವುದಕ್ಕೆ ಹೋಗಬೇಕೋ ಬೇಡವೋ?” ಎಂದು ದೇವರನ್ನು ಕೇಳಿಕೊಂಡರು. ಯೆಹೋವ ದೇವರು, “ಹೋಗಿರಿ, ಏಕೆಂದರೆ ನಾಳೆ ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಡುವೆನು,” ಎಂದರು.
Finehas ɗan Eleyazar, ɗan Haruna, kuwa yana hidima a gabansa.) Suka ce, “Mu sāke haura mu yi yaƙi da mutanen Benyamin’yan’uwanmu, ko a’a?” Ubangiji ya ce, “Ku je, gama gobe zan ba da su a hannuwanku.”
29 ಇಸ್ರಾಯೇಲರು ಗಿಬೆಯದ ಸುತ್ತಲೂ ಹೊಂಚಿ ನೋಡುವವರನ್ನು ಇಟ್ಟರು.
Sa’an nan Isra’ila ta yi kwanto kewaya da Gibeya.
30 ಮೂರನೆಯ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರಿಗೆ ಎದುರಾಗಿ ಹೋಗಿ ಮೊದಲು ಎರಡು ಸಾರಿ ಮಾಡಿದ ಹಾಗೆಯೇ, ಗಿಬೆಯದ ಸಮೀಪದಲ್ಲಿ ವ್ಯೂಹವನ್ನು ಕಟ್ಟಿದರು.
Suka haura su kara da mutanen Benyamin a rana ta uku suka ja dāgā a Gibeya kamar dā.
31 ಆಗ ಬೆನ್ಯಾಮೀನ್ಯರು ಇಸ್ರಾಯೇಲ್ ಜನಕ್ಕೆ ಎದುರಾಗಿ ಹೊರಟು, ಪಟ್ಟಣದ ಬಳಿಯಿಂದ ಹೊರಬಂದು, ಅಡವಿಯಲ್ಲಿ ಹೆದ್ದಾರಿಯಾದ ಬೇತೇಲಿಗೂ ಗಿಬೆಯಕ್ಕೂ ಹೋಗುವ ಎರಡು ಮಾರ್ಗಗಳಲ್ಲಿ ಇಸ್ರಾಯೇಲ್ ಜನರೊಳಗೆ ಮೊದಲಿನ ಹಾಗೆಯೇ ಹೆಚ್ಚು ಕಡಿಮೆ ಮೂವತ್ತು ಜನರನ್ನು ಹೊಡೆದು ಕೊಲ್ಲಲಾರಂಭಿಸಿದಾಗ,
Mutanen Benyamin suka fito su same su aka kuma jawo su nesa da birnin. Suka fara karkashe Isra’ilawa kamar dā, har aka kashe wajen mutum talatin a filaye da kuma a hanyoyi, wadda take zuwa Betel da kuma wadda take zuwa Gibeya.
32 ಬೆನ್ಯಾಮೀನ್ಯರು, “ಅವರು ಮೊದಲಿನ ಹಾಗೆಯೇ ನಮ್ಮ ಮುಂದೆ ಸೋತುಹೋಗುತ್ತಾರೆ,” ಎಂದುಕೊಂಡರು. ಆದರೆ ಇಸ್ರಾಯೇಲರು, “ಅವರನ್ನು ಪಟ್ಟಣದ ಬಳಿಯಿಂದ ಹೆದ್ದಾರಿಗಳಿಗೆ ಎಳೆದುಕೊಳ್ಳುವ ಹಾಗೆ ನಾವು ಹಿಂದಕ್ಕೆ ಓಡಿಹೋಗೋಣ,” ಎಂದುಕೊಂಡರು.
Yayinda mutanen Benyamin suna cewa, “Muna cin nasara a kansu kamar dā,” Isra’ilawa kuwa suna cewa, “Mu yi ta jan da baya mu janye su daga birni zuwa kan hanyoyi.”
33 ಇಸ್ರಾಯೇಲರೆಲ್ಲರೂ ತಮ್ಮ ಸ್ಥಳದಿಂದ ಎದ್ದು, ಬಾಳ್ ತಾಮಾರಿನಲ್ಲಿ ವ್ಯೂಹವನ್ನು ಕಟ್ಟಿದರು. ಆಗ ಗಿಬೆಯದ ಗವಿಯಲ್ಲಿ ಹೊಂಚಿ ನೋಡುತ್ತಿದ್ದ ಇಸ್ರಾಯೇಲರು ಹೊರಟು ಬಂದರು.
Dukan mutanen Isra’ila suka taso daga wurarensu suka ja dāgā a Ba’al-Tamar, Isra’ilawan da suka yi kwanto a yammancin Geba kuwa suka fito.
34 ಅವರಲ್ಲಿ ಆರಿಸಿದ ಹತ್ತು ಸಾವಿರ ಮನುಷ್ಯರು ಗಿಬೆಯಕ್ಕೆ ವಿರೋಧವಾಗಿ ಬಂದರು. ಯುದ್ಧವು ಘೋರವಾಗಿತ್ತು. ಆದರೆ ಬೆನ್ಯಾಮೀನ್ಯರು, ಕೇಡು ತಮಗೆ ಸಮೀಪವಾಗಿತ್ತೆಂದು ಅರಿಯದೆ ಇದ್ದರು.
Sa’an nan jarumai Isra’ila dubu goma suka yi gaba suka kai wa Gibeya hari. Yaƙi kuwa ya yi zafi har mutane Benyamin ba su san masifa tana dab da su ba.
35 ಆಗ ಯೆಹೋವ ದೇವರು ಇಸ್ರಾಯೇಲಿನ ಮುಂದೆ ಬೆನ್ಯಾಮೀನ್ಯರನ್ನು ಹೊಡೆದರು. ಆ ದಿವಸದಲ್ಲಿ ಇಸ್ರಾಯೇಲರು ಬೆನ್ಯಾಮೀನ್ಯರಲ್ಲಿ ಖಡ್ಗ ಹಿಡಿಯುವವರಾದ ಇಪ್ಪತ್ತೈದು ಸಾವಿರದ ನೂರು ಮನುಷ್ಯರನ್ನು ನಾಶಮಾಡಿದರು.
Ubangiji kuwa ya fatattake mutanen Benyamin a gaban Isra’ila; a ranar kuwa Isra’ilawa sun kashe mutum 25,100 na mutanen Benyamin, dukansu ɗauke da takuba.
36 ತಾವು ಸೋತುಹೋದೆವೆಂಬುದು ಹೀಗೆ ಬೆನ್ಯಾಮೀನ್ಯರಿಗೆ ಆಗ ತಿಳಿಯಿತು. ಏಕೆಂದರೆ ಇಸ್ರಾಯೇಲರು ಗಿಬೆಯದ ಹತ್ತಿರ ಹೊಂಚು ಹಾಕುವದಕ್ಕೆ ಇಟ್ಟ ಜನರನ್ನು ನಂಬಿದ್ದರು. ಆದುದರಿಂದ ತಮ್ಮ ಸ್ಥಳವನ್ನು ಬಿಟ್ಟು ಬೆನ್ಯಾಮೀನ್ಯರ ಮುಂದೆ ಓಡಿಹೋದರು.
Sa’an nan Benyamin suka ga an ci su. To, mutanen Isra’ila sun yi ta ja da baya daga mutanen Benyamin domin suna dogara ga waɗanda sa su yi kwanto kusa da Gibeya ne.
37 ಆಗ ಹೊಂಚು ಹಾಕಿಕೊಂಡಿದ್ದವರು ತೀವ್ರವಾಗಿ ಗಿಬೆಯಕ್ಕೆ ಸಾಲಾಗಿ ಹೊರಟು, ಪಟ್ಟಣದಲ್ಲಿರುವವರೆಲ್ಲರನ್ನು ಖಡ್ಗದಿಂದ ಸಂಹರಿಸಿದರು.
Mutanen da suke kwanto suka yi wuf suka ruga cikin Gibeya, suka bazu suka kuma karkashe dukan waɗanda suke a birnin.
38 ಇಸ್ರಾಯೇಲರು ಹೊಂಚು ಹಾಕಿಕೊಂಡಿದ್ದವರ ಸಂಗಡ ನೇಮಿಸಿಕೊಂಡ ಗುರುತೇನೆಂದರೆ, ಪಟ್ಟಣದಲ್ಲಿಂದ ಮಹಾ ದೊಡ್ಡ ಹೊಗೆಯನ್ನು ಏಳ ಮಾಡುವುದೇ.
Mutanen Isra’ila sun riga sun shirya da’yan kwanton cewa su murtuke hayaƙi daga birnin,
39 ತದನಂತರ ಇಸ್ರಾಯೇಲರು ಪ್ರತಿದಾಳಿ ನಡೆಸಿದರು. ಬೆನ್ಯಾಮೀನ್ಯರು ಇಸ್ರಾಯೇಲರನ್ನು ಹೊಡೆಯುವುದಕ್ಕೆ ಪ್ರಾರಂಭಿಸಿ, ಅವರಲ್ಲಿ ಹೆಚ್ಚು ಕಡಿಮೆ ಮೂವತ್ತು ಜನರನ್ನು ಕೊಂದಾಗ, “ಮೊದಲು ಯುದ್ಧದಲ್ಲಿ ಆದ ಹಾಗೆ ನಿಶ್ಚಯವಾಗಿ ಅವರು ನಮ್ಮ ಮುಂದೆ ಸೋತುಹೋದರು,” ಎಂದು ಅಂದುಕೊಂಡರು.
a sa’an nan ne mutanen Isra’ila za su juya su fāɗa wa mutane Benyamin da yaƙi. Mutanen Benyamin sun fara karkashe mutum talatin na Isra’ila, sai suka ce, “Muna cin nasara a kansu kamar dā.”
40 ಆದರೆ ಪಟ್ಟಣದೊಳಗಿಂದ ಹೊಗೆಯ ಸ್ತಂಭ ಸಹಿತವಾಗಿ ಏಳುವುದಕ್ಕೆ ಪ್ರಾರಂಭಿಸಿತು. ಬೆನ್ಯಾಮೀನ್ಯರು ಹಿಂದಕ್ಕೆ ತಿರುಗಿ ನೋಡಿದಾಗ, ಪಟ್ಟಣದ ಜ್ವಾಲೆಯು ಆಕಾಶಕ್ಕೆ ಏರಿತು.
Amma da alamar hayaƙi ya fara murtukewa daga birnin, sai mutanen Benyamin suka juya suka ga hayaƙi yana murtukewa ko’ina a cikin birnin zuwa sararin sama.
41 ಇಸ್ರಾಯೇಲರು ತಿರುಗಿಕೊಂಡು ಬಂದಾಗ, ಬೆನ್ಯಾಮೀನನ ಜನರು ತಲ್ಲಣಗೊಂಡರು, ಏಕೆಂದರೆ ಕೇಡು ತಮ್ಮ ಮೇಲೆ ಪ್ರಾಪ್ತವಾಯಿತೆಂದು ಕಂಡರು.
Sa’an nan mutanen Isra’ila suka juyo musu, mutanen Benyamin kuwa suka tsorata domin sun gane masifa ta zo musu.
42 ಅವರು ಇಸ್ರಾಯೇಲರ ಮುಂದೆ ಮರುಭೂಮಿಯ ಮಾರ್ಗಕ್ಕೆ ತಿರುಗಿಕೊಂಡು ಹೋದರು. ಆದರೆ ಸೈನಿಕರು ಅವರನ್ನು ಹಿಡಿದು, ಪಟ್ಟಣದಿಂದ ಹೊರಟು ಬರುವ ಜನರನ್ನು ಮಧ್ಯದಲ್ಲೇ ಕೊಂದುಹಾಕಿದರು.
Saboda haka suka tsere a gaban Isra’ila zuwa wajen hamada, amma ba su iya tsere wa yaƙin ba. Mutanen Isra’ila da suka fito daga cikin birnin suka karkashe su a can.
43 ಹೀಗೆ ಬೆನ್ಯಾಮೀನ್ಯರನ್ನು ಸುತ್ತಲೂ ಮುತ್ತಿಕೊಂಡು, ಅವರನ್ನು ಹಿಂದಟ್ಟಿ, ಗಿಬೆಯ ಊರಿನ ಪೂರ್ವದಿಕ್ಕಿನಲ್ಲಿ ಅವಕಾಶವಿಲ್ಲದೆ ತುಳಿದು ಹಾಕಿದರು.
Suka kewaye mutanen Benyamin, suka kore su, suka fatattake su a wajajen Gibeya a gabashi.
44 ಬೆನ್ಯಾಮೀನ್ಯರಲ್ಲಿ ಹದಿನೆಂಟು ಸಾವಿರ ಜನರು ಸತ್ತರು. ಇವರೆಲ್ಲರೂ ಪರಾಕ್ರಮಶಾಲಿಗಳಾಗಿದ್ದರು.
Mutum dubu goma sha takwas na mutanen Benyamin suka mutu dukansu kuwa jarumai ne.
45 ಆದರೆ ಕೆಲವರು ತಿರುಗಿಕೊಂಡು ಮರುಭೂಮಿಯಲ್ಲಿರುವ ರಿಮ್ಮೋನ್ ಬಂಡೆಗೆ ಓಡಿಹೋದರು. ಅದರಲ್ಲಿ ಐದು ಸಾವಿರ ಜನರನ್ನು ಹೆದ್ದಾರಿಗಳಲ್ಲಿ ಹಕ್ಕಲಾರಿಸಿ ಕೊಂದುಹಾಕಿದರು. ಉಳಿದವರನ್ನು ಗಿದೋಮಿನವರೆಗೆ ಹಿಂದಟ್ಟಿ ಅವರಲ್ಲಿ ಎರಡು ಸಾವಿರ ಮನುಷ್ಯರನ್ನು ವಧಿಸಿದರು.
Da suka juya suka juya suka tsere zuwa wajajen hamada zuwa dutsen Rimmon, Isra’ilawa suka kashe mutum dubu biyar a kan hanyoyi. Suka yi ta matsa wa mutanen Benyamin har zuwa Gidom suka kashe mutum dubu biyu kuma.
46 ಹೀಗೆಯೇ ಬೆನ್ಯಾಮೀನ್ಯರೊಳಗೆ ಆ ದಿವಸದಲ್ಲಿ ಬಿದ್ದವರೆಲ್ಲರೂ ಖಡ್ಗ ಹಿಡಿಯುವ ಇಪ್ಪತ್ತೈದು ಸಾವಿರ ಜನರು. ಇವರೆಲ್ಲರೂ ಪರಾಕ್ರಮಶಾಲಿಗಳಾಗಿದ್ದರು.
A ranar kuwa mutanen Benyamin dubu ashirin da biyar ne aka kashe, dukansu jarumai.
47 ಆದರೆ ಆರುನೂರು ಮಂದಿ ತಿರುಗಿಕೊಂಡು ಮರುಭೂಮಿಯಲ್ಲಿರುವ ರಿಮ್ಮೋನ್ ಬೆಟ್ಟಕ್ಕೆ ಓಡಿಹೋಗಿ, ರಿಮ್ಮೋನ್ ಗುಡ್ಡದಲ್ಲಿ ನಾಲ್ಕು ತಿಂಗಳು ವಾಸವಾಗಿದ್ದರು.
Amma mutane ɗari shida suka juya suka tsere wajajen hamada zuwa dutsen Rimmon, inda suka zauna wata huɗu.
48 ಇಸ್ರಾಯೇಲರು ಬೆನ್ಯಾಮೀನ್ಯರ ಮೇಲೆ ತಿರುಗಿ ಹೋಗಿ, ಪಟ್ಟಣದಲ್ಲಿ ಜನರನ್ನೂ, ಪಶುಗಳನ್ನೂ, ಕೈಗೆ ಸಿಕ್ಕಿದ್ದೆಲ್ಲವನ್ನೂ ಸಂಹರಿಸಿ, ತಾವು ಹೋದ ಸಮಸ್ತ ಪಟ್ಟಣಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
Mutanen Isra’ila suka koma wurin mutanen Benyamin suka kashe dukan waɗanda suke a birnin, tare da dabbobi da kome da suka samu. Dukan garuruwan da suka samu sun ƙone su ƙaf.

< ನ್ಯಾಯಸ್ಥಾಪಕರು 20 >