< ಯೆಹೋಶುವನು 8 >

1 ಆಗ ಯೆಹೋವ ದೇವರು ಯೆಹೋಶುವನಿಗೆ, “ಭಯಪಡಬೇಡ, ನಿರುತ್ಸಾಹಗೊಳ್ಳಬೇಡ, ನೀನು ಸಮಸ್ತ ಸೈನ್ಯವನ್ನು ಕೂಡಿಸಿಕೊಂಡು ಎದ್ದು ಆಯಿ ಎಂಬ ಪಟ್ಟಣಕ್ಕೆ ಏರಿ ಹೋಗು. ನೋಡು, ನಾನು ಆಯಿ ಎಂಬ ಪಟ್ಟಣದ ಅರಸನನ್ನೂ ಅವನ ಜನರನ್ನೂ ಅವನ ಪಟ್ಟಣವನ್ನೂ ಅವನ ಸೀಮೆಯನ್ನೂ ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ.
וַיֹּאמֶר יְהֹוָה אֶל־יְהוֹשֻׁעַ אַל־תִּירָא וְאַל־תֵּחָת קַח עִמְּךָ אֵת כׇּל־עַם הַמִּלְחָמָה וְקוּם עֲלֵה הָעָי רְאֵה ׀ נָתַתִּי בְיָדְךָ אֶת־מֶלֶךְ הָעַי וְאֶת־עַמּוֹ וְאֶת־עִירוֹ וְאֶת־אַרְצֽוֹ׃
2 ನೀನು ಯೆರಿಕೋವಿಗೂ ಅದರ ಅರಸನಿಗೂ ಯಾವ ಪ್ರಕಾರ ಮಾಡಿದೆಯೋ ಹಾಗೆಯೇ ಆಯಿ ಎಂಬ ಪಟ್ಟಣಕ್ಕೂ ಅದರ ಅರಸನಿಗೂ ಮಾಡಬೇಕು. ಅದರ ಕೊಳ್ಳೆಯನ್ನೂ, ಪಶುಪ್ರಾಣಿಗಳನ್ನು ಮಾತ್ರವೇ ನಿಮಗೋಸ್ಕರ ಇಟ್ಟುಕೊಳ್ಳಿರಿ. ನೀವು ಆ ಪಟ್ಟಣದ ಹಿಂಭಾಗದಲ್ಲಿ ಹೊಂಚುಹಾಕಲು ಸ್ಥಳಮಾಡಿಕೊಳ್ಳಿರಿ,” ಎಂದರು.
וְעָשִׂיתָ לָעַי וּלְמַלְכָּהּ כַּאֲשֶׁר עָשִׂיתָ לִּֽירִיחוֹ וּלְמַלְכָּהּ רַק־שְׁלָלָהּ וּבְהֶמְתָּהּ תָּבֹזּוּ לָכֶם שִׂים־לְךָ אֹרֵב לָעִיר מֵאַחֲרֶֽיהָ׃
3 ಆಗ ಆಯಿ ಎಂಬ ಪಟ್ಟಣಕ್ಕೆ ಏರಿ ಹೋಗಲು ಯೆಹೋಶುವನೂ, ಸಮಸ್ತ ಸೈನಿಕರೂ ಎದ್ದರು. ಆದರೆ ಯೆಹೋಶುವನು ಪರಾಕ್ರಮಶಾಲಿಗಳಾದ ಮೂವತ್ತು ಸಾವಿರ ಜನರನ್ನು ಆಯ್ದುಕೊಂಡು ರಾತ್ರಿಯಲ್ಲಿ ಅವರನ್ನು ಕಳುಹಿಸಿದನು.
וַיָּקׇם יְהוֹשֻׁעַ וְכׇל־עַם הַמִּלְחָמָה לַעֲלוֹת הָעָי וַיִּבְחַר יְהוֹשֻׁעַ שְׁלֹשִׁים אֶלֶף אִישׁ גִּבּוֹרֵי הַחַיִל וַיִּשְׁלָחֵם לָֽיְלָה׃
4 ಅವರಿಗೆ ಆಜ್ಞಾಪಿಸಿ, “ಪಟ್ಟಣದ ಹಿಂದೆ ನೀವು ಹೊಂಚಿಕೊಂಡಿರಿ, ಪಟ್ಟಣಕ್ಕೆ ಬಹುದೂರ ಹೋಗಬೇಡಿರಿ. ನೀವೆಲ್ಲರೂ ಸಿದ್ಧವಾಗಿರಿ.
וַיְצַו אֹתָם לֵאמֹר רְאוּ אַתֶּם אֹרְבִים לָעִיר מֵאַחֲרֵי הָעִיר אַל־תַּרְחִיקוּ מִן־הָעִיר מְאֹד וִהְיִיתֶם כֻּלְּכֶם נְכֹנִֽים׃
5 ಆದರೆ ನಾನೂ, ನನ್ನ ಸಂಗಡ ಇರುವ ಜನರೆಲ್ಲರೂ ಪಟ್ಟಣದ ಸಮೀಪಕ್ಕೆ ಸೇರುವೆವು. ಆಗ, ಅವರು ಮುಂಚಿನ ಹಾಗೆಯೇ ನಮಗೆ ವಿರೋಧವಾಗಿ ಪಟ್ಟಣದಿಂದ ಹೊರಟು ಬರುವಾಗ ಅವರ ಮುಂದೆ ನಾವು ಓಡಿ ಹೋಗುವೆವು.
וַאֲנִי וְכׇל־הָעָם אֲשֶׁר אִתִּי נִקְרַב אֶל־הָעִיר וְהָיָה כִּֽי־יֵצְאוּ לִקְרָאתֵנוּ כַּאֲשֶׁר בָּרִֽאשֹׁנָה וְנַסְנוּ לִפְנֵיהֶֽם׃
6 ಆಗ ಅವರು, ‘ಮುಂಚಿನ ಹಾಗೆಯೇ ನಮ್ಮ ಮುಂದೆ ಓಡಿಹೋಗುತ್ತಾರೆ,’ ಎಂದು ಹೇಳಿಕೊಳ್ಳುವರು. ಪಟ್ಟಣದ ಬಳಿಯಿಂದ ದೂರದವರೆಗೂ ಅವರು ಬರುವವರೆಗೆ ನಾವು ಓಡಿ ಹೋಗುತ್ತಲೇ ಇರುವೆವು.
וְיָצְאוּ אַחֲרֵינוּ עַד הַתִּיקֵנוּ אוֹתָם מִן־הָעִיר כִּי יֹֽאמְרוּ נָסִים לְפָנֵינוּ כַּאֲשֶׁר בָּרִֽאשֹׁנָה וְנַסְנוּ לִפְנֵיהֶֽם׃
7 ಆಗ ನೀವು ಹೊಂಚಿಕೊಳ್ಳುವ ಸ್ಥಳದಿಂದ ಎದ್ದು ಬಂದು ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವ ದೇವರು ಅದನ್ನು ನಿಮ್ಮ ಕೈಗೆ ಒಪ್ಪಿಸಿಕೊಡುವರು.
וְאַתֶּם תָּקֻמוּ מֵהָאוֹרֵב וְהוֹרַשְׁתֶּם אֶת־הָעִיר וּנְתָנָהּ יְהֹוָה אֱלֹהֵיכֶם בְּיֶדְכֶֽם׃
8 ನೀವು ಪಟ್ಟಣವನ್ನು ಹಿಡಿದ ತರುವಾಯ, ಬೆಂಕಿ ಹಚ್ಚಿ, ಅದನ್ನು ಸುಟ್ಟುಬಿಟ್ಟು, ಯೆಹೋವ ದೇವರ ಆಜ್ಞೆಯ ಪ್ರಕಾರವೇ ಮಾಡಿರಿ. ನಾನು ಇದನ್ನು ನಿಮಗೆ ಆಜ್ಞಾಪಿಸಿದ್ದೇನೆ,” ಎಂದನು.
וְהָיָה כְּתׇפְשְׂכֶם אֶת־הָעִיר תַּצִּיתוּ אֶת־הָעִיר בָּאֵשׁ כִּדְבַר יְהֹוָה תַּעֲשׂוּ רְאוּ צִוִּיתִי אֶתְכֶֽם׃
9 ಯೆಹೋಶುವನು ಅವರನ್ನು ಕಳುಹಿಸಿದಾಗ ಅವರು ಹೋಗಿ ಹೊಂಚಿಕೊಂಡು ಬೇತೇಲಿಗೂ ಆಯಿ ಎಂಬ ಪಟ್ಟಣಕ್ಕೂ ನಡುವೆ ಆಯಿ ಎಂಬ ಪಟ್ಟಣಕ್ಕೆ ಪಶ್ಚಿಮದ ಕಡೆ ಅಡಗಿಕೊಂಡರು. ಆದರೆ ಯೆಹೋಶುವನು ಆ ರಾತ್ರಿ ಜನರ ಮಧ್ಯದಲ್ಲಿ ಉಳಿದನು.
וַיִּשְׁלָחֵם יְהוֹשֻׁעַ וַיֵּֽלְכוּ אֶל־הַמַּאְרָב וַיֵּשְׁבוּ בֵּין בֵּֽית־אֵל וּבֵין הָעַי מִיָּם לָעָי וַיָּלֶן יְהוֹשֻׁעַ בַּלַּיְלָה הַהוּא בְּתוֹךְ הָעָֽם׃
10 ಉದಯಕಾಲದಲ್ಲಿ ಯೆಹೋಶುವನು ಎದ್ದು ಸೈನ್ಯವನ್ನು ಲೆಕ್ಕ ಮಾಡಿ, ತಾನೂ ಇಸ್ರಾಯೇಲಿನ ಹಿರಿಯರೂ ಜನರ ಮುಂದೆ ನಡೆದು ಆಯಿ ಎಂಬ ಪಟ್ಟಣಕ್ಕೆ ಏರಿಹೋದರು.
וַיַּשְׁכֵּם יְהוֹשֻׁעַ בַּבֹּקֶר וַיִּפְקֹד אֶת־הָעָם וַיַּעַל הוּא וְזִקְנֵי יִשְׂרָאֵל לִפְנֵי הָעָם הָעָֽי׃
11 ಅವನ ಸಂಗಡ ಇದ್ದ ಸೈನಿಕರೆಲ್ಲಾ ನಡೆದು ಪಟ್ಟಣದ ಸಮೀಪವಾಗಿ ಬಂದು ಸೇರಿ, ಆಯಿ ಎಂಬ ಪಟ್ಟಣದ ಉತ್ತರ ದಿಕ್ಕಿನಲ್ಲಿ ಪಾಳೆಯಲ್ಲಿ ಇಳಿದುಕೊಂಡರು. ಆದರೆ ಆಯಿ ಎಂಬ ಪಟ್ಟಣಕ್ಕೂ ಅವರಿಗೂ ಮಧ್ಯದಲ್ಲಿ ಒಂದು ಕಣಿವೆ ಇತ್ತು.
וְכׇל־הָעָם הַמִּלְחָמָה אֲשֶׁר אִתּוֹ עָלוּ וַֽיִּגְּשׁוּ וַיָּבֹאוּ נֶגֶד הָעִיר וַֽיַּחֲנוּ מִצְּפוֹן לָעַי וְהַגַּי בֵּינָו וּבֵין־הָעָֽי׃
12 ಯೆಹೋಶುವನು ಹೆಚ್ಚು ಕಡಿಮೆ ಐದು ಸಾವಿರ ಜನರನ್ನು ಆಯ್ದುಕೊಂಡು, ಆ ಪಟ್ಟಣದ ಪಶ್ಚಿಮ ಕಡೆಯಲ್ಲಿ ಬೇತೇಲಿಗೂ, ಆಯಿ ಎಂಬ ಪಟ್ಟಣದ ನಡುವೆ ಹೊಂಚಿಹಾಕಿಕೊಂಡಿರಲು ಅವರನ್ನು ಇಟ್ಟನು.
וַיִּקַּח כַּחֲמֵשֶׁת אֲלָפִים אִישׁ וַיָּשֶׂם אוֹתָם אֹרֵב בֵּין בֵּֽית־אֵל וּבֵין הָעַי מִיָּם לָעִֽיר׃
13 ಪಟ್ಟಣಕ್ಕೆ ಉತ್ತರದಲ್ಲಿರುವ ಸಕಲ ಸೈನ್ಯದ ಜನರನ್ನೂ, ಪಟ್ಟಣಕ್ಕೆ ಪಶ್ಚಿಮ ದಿಕ್ಕಿನಲ್ಲಿ ಹೊಂಚುಗಾರರನ್ನೂ ಇಟ್ಟ ತರುವಾಯ ಯೆಹೋಶುವನು ಆ ರಾತ್ರಿಯಲ್ಲಿ ಕಣಿವೆಯ ಮಧ್ಯಕ್ಕೆ ಹೋದನು.
וַיָּשִׂימוּ הָעָם אֶת־כׇּל־הַֽמַּחֲנֶה אֲשֶׁר מִצְּפוֹן לָעִיר וְאֶת־עֲקֵבוֹ מִיָּם לָעִיר וַיֵּלֶךְ יְהוֹשֻׁעַ בַּלַּיְלָה הַהוּא בְּתוֹךְ הָעֵֽמֶק׃
14 ಆಯಿ ಎಂಬ ಪಟ್ಟಣದ ಅರಸನು ಇದನ್ನು ಕಂಡಾಗ, ಆ ಪಟ್ಟಣದ ಜನರು ತ್ವರೆಪಟ್ಟು, ಉದಯಕಾಲದಲ್ಲಿ ಎದ್ದು, ನಿಶ್ಚಯಿಸಿದ ವೇಳೆಯಲ್ಲಿ ಆಯಿ ಎಂಬ ಪಟ್ಟಣದ ಅರಸನೂ ಅವನ ಜನರೆಲ್ಲರೂ ಇಸ್ರಾಯೇಲಿಗೆ ಎದುರಾಗಿ ಯುದ್ಧಮಾಡಲು ಬಯಲಿಗೆ ಹೊರಟರು. ಅವನೂ ಅವನ ಜನರೂ ಅರಾಬಾ ಎಂಬ ತಗ್ಗಾದ ಪ್ರದೇಶವು ಕಾಣುವ ಸ್ಥಳಕ್ಕೆ ಬಂದರು. ಆದರೆ ಅವನು ಪಟ್ಟಣದ ಹಿಂದೆ ತನಗೋಸ್ಕರ ಹೊಂಚಿಕೊಂಡಿರುವವರನ್ನು ಅರಿಯದೆ ಇದ್ದನು.
וַיְהִי כִּרְאוֹת מֶֽלֶךְ־הָעַי וַֽיְמַהֲרוּ וַיַּשְׁכִּימוּ וַיֵּצְאוּ אַנְשֵֽׁי־הָעִיר לִקְרַֽאת־יִשְׂרָאֵל לַֽמִּלְחָמָה הוּא וְכׇל־עַמּוֹ לַמּוֹעֵד לִפְנֵי הָעֲרָבָה וְהוּא לֹא יָדַע כִּֽי־אֹרֵב לוֹ מֵאַחֲרֵי הָעִֽיר׃
15 ಅವರ ಮುಂದೆ ಯೆಹೋಶುವನೂ ಇಸ್ರಾಯೇಲರೆಲ್ಲರೂ ಸೋತವರ ಹಾಗೆ ಮರುಭೂಮಿಯ ಮಾರ್ಗವಾಗಿ ಓಡಿಹೋದರು.
וַיִּנָּגְעוּ יְהוֹשֻׁעַ וְכׇל־יִשְׂרָאֵל לִפְנֵיהֶם וַיָּנֻסוּ דֶּרֶךְ הַמִּדְבָּֽר׃
16 ಆಗ ಆಯಿ ಎಂಬ ಪಟ್ಟಣದಲ್ಲಿರುವ ಜನರೆಲ್ಲರನ್ನು ಕರೆದುಕೊಂಡು ಹಿಂದಟ್ಟುವುದಕ್ಕೆ ಕರೆಯಲಾದವರು ಯೆಹೋಶುವನನ್ನು ಹಿಂದಟ್ಟಿದರು. ಹೀಗೆ ಅವರು ಆ ಪಟ್ಟಣದಿಂದ ಹೊರಬಂದರು.
וַיִּזָּעֲקוּ כׇּל־הָעָם אֲשֶׁר (בעיר) [בָּעַי] לִרְדֹּף אַחֲרֵיהֶם וַֽיִּרְדְּפוּ אַֽחֲרֵי יְהוֹשֻׁעַ וַיִּנָּתְקוּ מִן־הָעִֽיר׃
17 ಆಯಿ ಎಂಬ ಪಟ್ಟಣದಲ್ಲಿಯೂ ಬೇತೇಲಿನಲ್ಲಿಯೂ ಇಸ್ರಾಯೇಲಿನ ಹಿಂದೆ ಹೊರಟು ಹೋಗದ ಮನುಷ್ಯನು ಒಬ್ಬನೂ ಇರಲಿಲ್ಲ. ಪಟ್ಟಣವನ್ನು ತೆರೆದಿಟ್ಟು ಹೋಗಿ ಇಸ್ರಾಯೇಲರನ್ನು ಹಿಂದಟ್ಟಿದರು.
וְלֹא־נִשְׁאַר אִישׁ בָּעַי וּבֵית אֵל אֲשֶׁר לֹא־יָצְאוּ אַחֲרֵי יִשְׂרָאֵל וַיַּעַזְבוּ אֶת־הָעִיר פְּתוּחָה וַֽיִּרְדְּפוּ אַחֲרֵי יִשְׂרָאֵֽל׃
18 ಆಗ ಯೆಹೋವ ದೇವರು ಯೆಹೋಶುವನಿಗೆ, “ನಿನ್ನ ಕೈಯಲ್ಲಿರುವ ಈಟಿಯನ್ನು ಆಯಿ ಎಂಬ ಪಟ್ಟಣಕ್ಕೆ ಎದುರಾಗಿ ಚಾಚು. ಏಕೆಂದರೆ ಅದನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು,” ಎಂದರು. ಹಾಗೆಯೇ ಅವನು ತನ್ನ ಕೈಯಲ್ಲಿರುವ ಈಟಿಯನ್ನು ಪಟ್ಟಣಕ್ಕೆ ಎದುರಾಗಿ ಚಾಚಿದನು.
וַיֹּאמֶר יְהֹוָה אֶל־יְהוֹשֻׁעַ נְטֵה בַּכִּידוֹן אֲשֶׁר־בְּיָֽדְךָ אֶל־הָעַי כִּי בְיָדְךָ אֶתְּנֶנָּה וַיֵּט יְהוֹשֻׁעַ בַּכִּידוֹן אֲשֶׁר־בְּיָדוֹ אֶל־הָעִֽיר׃
19 ಆಗ ಹೊಂಚುಗಾರರು ತ್ವರೆಯಾಗಿ ತಮ್ಮ ಸ್ಥಳದಿಂದ ಎದ್ದು ಪಟ್ಟಣದಲ್ಲಿ ಪ್ರವೇಶಿಸಿ, ಸೆರೆಹಿಡಿದು ಕೂಡಲೆ ಅದಕ್ಕೆ ಬೆಂಕಿಯನ್ನು ಹಚ್ಚಿದರು.
וְהָאוֹרֵב קָם מְהֵרָה מִמְּקוֹמוֹ וַיָּרוּצוּ כִּנְטוֹת יָדוֹ וַיָּבֹאוּ הָעִיר וַֽיִּלְכְּדוּהָ וַֽיְמַהֲרוּ וַיַּצִּיתוּ אֶת־הָעִיר בָּאֵֽשׁ׃
20 ಆಯಿ ಎಂಬ ಪಟ್ಟಣದ ಮನುಷ್ಯರು ಹಿಂದಕ್ಕೆ ತಿರುಗಿ ನೋಡಿದಾಗ, ಪಟ್ಟಣದ ಹೊಗೆ ಹೊತ್ತಿ ಆಕಾಶಕ್ಕೆ ಏಳುವುದನ್ನು ಕಂಡರು. ಹೇಗಾದರೂ ಓಡಿಹೋಗಲು ಅವರಿಗೆ ತ್ರಾಣ ಇಲ್ಲದೆ ಹೋಯಿತು. ಆಗ ಮರುಭೂಮಿಗೆ ಓಡಿ ಹೋದ ಇಸ್ರಾಯೇಲರು ಹಿಂದಟ್ಟಿದವರ ಕಡೆಗೆ ತಿರುಗಿದರು.
וַיִּפְנוּ אַנְשֵׁי הָעַי אַחֲרֵיהֶם וַיִּרְאוּ וְהִנֵּה עָלָה עֲשַׁן הָעִיר הַשָּׁמַיְמָה וְלֹא־הָיָה בָהֶם יָדַיִם לָנוּס הֵנָּה וָהֵנָּה וְהָעָם הַנָּס הַמִּדְבָּר נֶהְפַּךְ אֶל־הָֽרוֹדֵֽף׃
21 ಪಟ್ಟಣವು ಹೊಂಚುಗಾರರಿಗೆ ಸ್ವಾಧೀನವಾದುದನ್ನೂ ಹೊಗೆ ಆಕಾಶಕ್ಕೆ ಏರುತ್ತಿದ್ದುದನ್ನೂ ಕಂಡಾಗ ಯೆಹೋಶುವನೂ ಇಸ್ರಾಯೇಲರೂ ಹಿಂದಿರುಗಿ ಆಯಿ ಎಂಬ ಪಟ್ಟಣದ ಜನರ ಮೇಲೆ ಬಿದ್ದರು.
וִיהוֹשֻׁעַ וְכׇל־יִשְׂרָאֵל רָאוּ כִּֽי־לָכַד הָאֹרֵב אֶת־הָעִיר וְכִי עָלָה עֲשַׁן הָעִיר וַיָּשֻׁבוּ וַיַּכּוּ אֶת־אַנְשֵׁי הָעָֽי׃
22 ಅವರು ಪಟ್ಟಣದೊಳಗಿಂದ ಇವರಿಗೆ ಎದುರಾಗಿ ಬಂದ ಕಾರಣ, ಅವರು ಈ ಕಡೆ ಆ ಕಡೆ ಇರುವ ಇಸ್ರಾಯೇಲರ ಮಧ್ಯದಲ್ಲಿ ಸಿಕ್ಕಿದರು. ಅವರಲ್ಲಿ ಇಬ್ಬರೂ ತಪ್ಪಿಸಿಕೊಂಡ ಹಾಗೆಯೂ ಅವರನ್ನು ಹೊಡೆದರು.
וְאֵלֶּה יָצְאוּ מִן־הָעִיר לִקְרָאתָם וַיִּֽהְיוּ לְיִשְׂרָאֵל בַּתָּוֶךְ אֵלֶּה מִזֶּה וְאֵלֶּה מִזֶּה וַיַּכּוּ אוֹתָם עַד־בִּלְתִּי הִשְׁאִֽיר־לוֹ שָׂרִיד וּפָלִֽיט׃
23 ಆಯಿ ಎಂಬ ಪಟ್ಟಣದ ಅರಸನನ್ನು ಜೀವಸಹಿತ ಹಿಡಿದು ಯೆಹೋಶುವನ ಬಳಿಗೆ ತಂದರು.
וְאֶת־מֶלֶךְ הָעַי תָּפְשׂוּ חָי וַיַּקְרִבוּ אֹתוֹ אֶל־יְהוֹשֻֽׁעַ׃
24 ಇಸ್ರಾಯೇಲರು ಮರುಭೂಮಿಯಲ್ಲಿಯೂ ಬಯಲಿನಲ್ಲಿಯೂ ಓಡಿಸಿದ ಆಯಿ ಎಂಬ ಪಟ್ಟಣದ ನಿವಾಸಿಗಳೆಲ್ಲರನ್ನೂ ಖಡ್ಗದಿಂದ ಸಂಹರಿಸಿದ ನಂತರ ಅವರೆಲ್ಲರೂ ಪಟ್ಟಣಕ್ಕೆ ಹೋಗಿ ಅಲ್ಲಿದ್ದವರನ್ನು ಕೊಂದರು.
וַיְהִי כְּכַלּוֹת יִשְׂרָאֵל לַהֲרֹג אֶת־כׇּל־יֹשְׁבֵי הָעַי בַּשָּׂדֶה בַּמִּדְבָּר אֲשֶׁר רְדָפוּם בּוֹ וַֽיִּפְּלוּ כֻלָּם לְפִי־חֶרֶב עַד־תֻּמָּם וַיָּשֻׁבוּ כׇל־יִשְׂרָאֵל הָעַי וַיַּכּוּ אֹתָהּ לְפִי־חָֽרֶב׃
25 ಆ ದಿನದಲ್ಲಿ ಆಯಿ ಎಂಬ ಪಟ್ಟಣದಲ್ಲಿಯ ಹನ್ನೆರಡು ಸಾವಿರ ಜನರು ಹತರಾದರು.
וַיְהִי כׇל־הַנֹּפְלִים בַּיּוֹם הַהוּא מֵאִישׁ וְעַד־אִשָּׁה שְׁנֵים עָשָׂר אָלֶף כֹּל אַנְשֵׁי הָעָֽי׃
26 ಆಯಿ ಎಂಬ ಪಟ್ಟಣದ ನಿವಾಸಿಗಳೆಲ್ಲರನ್ನೂ ಸಂಪೂರ್ಣ ನಾಶವಾಗುವವರೆಗೂ ಯೆಹೋಶುವನು ಚಾಚಿಕೊಂಡಿರುವ ತನ್ನ ಕೈಯಲ್ಲಿದ್ದ ಈಟಿಯನ್ನು ಹಿಂದೆಗೆಯಲಿಲ್ಲ.
וִיהוֹשֻׁעַ לֹא־הֵשִׁיב יָדוֹ אֲשֶׁר נָטָה בַּכִּידוֹן עַד אֲשֶׁר הֶחֱרִים אֵת כׇּל־יֹשְׁבֵי הָעָֽי׃
27 ಯೆಹೋವ ದೇವರು ಯೆಹೋಶುವನಿಗೆ ಆಜ್ಞಾಪಿಸಿದ ಮಾತಿನ ಪ್ರಕಾರವೇ ಇಸ್ರಾಯೇಲರು ಆ ಪಟ್ಟಣದ ಪಶುಪ್ರಾಣಿಗಳನ್ನೂ, ಕೊಳ್ಳೆಯನ್ನೂ ತಮಗೋಸ್ಕರ ಇಟ್ಟುಕೊಂಡರು.
רַק הַבְּהֵמָה וּשְׁלַל הָעִיר הַהִיא בָּֽזְזוּ לָהֶם יִשְׂרָאֵל כִּדְבַר יְהֹוָה אֲשֶׁר צִוָּה אֶת־יְהוֹשֻֽׁעַ׃
28 ಯೆಹೋಶುವನು ಆಯಿ ಎಂಬ ಪಟ್ಟಣವನ್ನು ಸುಟ್ಟುಬಿಟ್ಟು, ಅದನ್ನು ಮರಳಿ ಕಟ್ಟಲಾಗದಂತೆ ಹಾಳು ದಿಬ್ಬವಾಗಿ ಮಾಡಿದನು. ಅದು ಇಂದಿನವರೆಗೂ ಹಾಗೆಯೇ ಉಳಿದಿದೆ.
וַיִּשְׂרֹף יְהוֹשֻׁעַ אֶת־הָעָי וַיְשִׂימֶהָ תֵּל־עוֹלָם שְׁמָמָה עַד הַיּוֹם הַזֶּֽה׃
29 ಆಯಿ ಎಂಬ ಪಟ್ಟಣದ ಅರಸನನ್ನು ಸಾಯಂಕಾಲದವರೆಗೂ ಒಂದು ಮರದಲ್ಲಿ ತೂಗಿಹಾಕಿಸಿದನು. ಸೂರ್ಯ ಅಸ್ತಮಿಸುವಾಗ ಯೆಹೋಶುವನು ಅವನ ಹೆಣವನ್ನು ಮರದಿಂದ ಇಳಿಸಿ, ಅದನ್ನು ಆ ಪಟ್ಟಣದ ಬಾಗಿಲಿನ ದ್ವಾರದಲ್ಲಿ ಹಾಕಲು ಆಜ್ಞಾಪಿಸಿದನು. ಆಗ ಅವರು ಹಾಗೆಯೇ ಮಾಡಿದರು. ಆ ದೊಡ್ಡ ಕಲ್ಲು ಕುಪ್ಪೆಯನ್ನು ಅದರ ಮೇಲೆ ಇಟ್ಟರು. ಅದು ಇಂದಿನವರೆಗೂ ಇದೆ.
וְאֶת־מֶלֶךְ הָעַי תָּלָה עַל־הָעֵץ עַד־עֵת הָעָרֶב וּכְבוֹא הַשֶּׁמֶשׁ צִוָּה יְהוֹשֻׁעַ וַיֹּרִידוּ אֶת־נִבְלָתוֹ מִן־הָעֵץ וַיַּשְׁלִיכוּ אוֹתָהּ אֶל־פֶּתַח שַׁעַר הָעִיר וַיָּקִימוּ עָלָיו גַּל־אֲבָנִים גָּדוֹל עַד הַיּוֹם הַזֶּֽה׃
30 ಆಗ ಯೆಹೋಶುವನು ಏಬಾಲ್ ಪರ್ವತದಲ್ಲಿ ಇಸ್ರಾಯೇಲಿನ ಯೆಹೋವ ದೇವರಿಗೆ ಒಂದು ಬಲಿಪೀಠವನ್ನು ಕಟ್ಟಿದನು.
אָז יִבְנֶה יְהוֹשֻׁעַ מִזְבֵּחַ לַֽיהֹוָה אֱלֹהֵי יִשְׂרָאֵל בְּהַר עֵיבָֽל׃
31 ಸೇವಕನಾದ ಮೋಶೆಯು ಇಸ್ರಾಯೇಲರಿಗೆ ಆಜ್ಞಾಪಿಸಿದಂತೆ, ಮೋಶೆಯ ನಿಯಮದಲ್ಲಿ ಬರೆದಿರುವ ಪ್ರಕಾರ, ಯೆಹೋವ ದೇವರಿಗೆ ಉಳಿಮುಟ್ಟದ ಪೂರ್ಣವಾದ ಕಲ್ಲುಗಳಿಂದ ಬಲಿಪೀಠವನ್ನು ಕಟ್ಟಿದನು. ಆಗ ಅವರು ಅದರ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನೂ ಸಮಾಧಾನ ಸಮರ್ಪಣೆಗಳನ್ನೂ ಅರ್ಪಿಸಿದರು.
כַּֽאֲשֶׁר צִוָּה מֹשֶׁה עֶֽבֶד־יְהֹוָה אֶת־בְּנֵי יִשְׂרָאֵל כַּכָּתוּב בְּסֵפֶר תּוֹרַת מֹשֶׁה מִזְבַּח אֲבָנִים שְׁלֵמוֹת אֲשֶׁר לֹא־הֵנִיף עֲלֵיהֶן בַּרְזֶל וַיַּעֲלוּ עָלָיו עֹלוֹת לַֽיהֹוָה וַֽיִּזְבְּחוּ שְׁלָמִֽים׃
32 ಅಲ್ಲಿ ಅವನು ಇಸ್ರಾಯೇಲರ ಸಮಕ್ಷಮದಲ್ಲಿ ಮೋಶೆ ಬರೆದಿದ್ದ ಮೋಶೆಯ ನಿಯಮದ ಪ್ರತಿಯನ್ನು ಬರೆದನು.
וַיִּכְתׇּב־שָׁם עַל־הָאֲבָנִים אֵת מִשְׁנֵה תּוֹרַת מֹשֶׁה אֲשֶׁר כָּתַב לִפְנֵי בְּנֵי יִשְׂרָאֵֽל׃
33 ಇಸ್ರಾಯೇಲರೆಲ್ಲರೂ ಅವರ ಹಿರಿಯರೂ ಅವರ ಅಧಿಕಾರಿಗಳೂ ಅವರ ನ್ಯಾಯಾಧಿಪತಿಗಳೂ ಪರದೇಶಸ್ಥರೂ ಸ್ವದೇಶಸ್ಥರೂ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವ ಲೇವಿಯರಾದ ಯಾಜಕರ ಮುಂದೆ ಒಡಂಬಡಿಕೆಯ ಮಂಜೂಷಕ್ಕೆ ಈ ಕಡೆಯೂ ಆ ಕಡೆಯೂ ಅರ್ಧ ಗೆರಿಜೀಮ್ ಪರ್ವತದ ಕಡೆಗೂ ಅರ್ಧ ಏಬಾಲ್ ಪರ್ವತದ ಮುಂದೆಯೂ ನಿಂತರು. ಯೆಹೋವ ದೇವರ ಸೇವಕ ಮೋಶೆ ಇಸ್ರಾಯೇಲರನ್ನು ಆಶೀರ್ವದಿಸುವಂತೆ ಮುಂಚೆ ವಾಕ್ಯಗಳನ್ನು ಕೊಟ್ಟಾಗ ಆಜ್ಞಾಪಿಸಿದ ಹಾಗೆಯೇ ನಿಂತರು.
וְכׇל־יִשְׂרָאֵל וּזְקֵנָיו וְשֹׁטְרִים ׀ וְשֹׁפְטָיו עֹמְדִים מִזֶּה ׀ וּמִזֶּה ׀ לָאָרוֹן נֶגֶד הַכֹּהֲנִים הַלְוִיִּם נֹשְׂאֵי ׀ אֲרוֹן בְּרִית־יְהֹוָה כַּגֵּר כָּאֶזְרָח חֶצְיוֹ אֶל־מוּל הַר־גְּרִזִים וְהַחֶצְיוֹ אֶל־מוּל הַר־עֵיבָל כַּאֲשֶׁר צִוָּה מֹשֶׁה עֶבֶד־יְהֹוָה לְבָרֵךְ אֶת־הָעָם יִשְׂרָאֵל בָּרִאשֹׁנָֽה׃
34 ತರುವಾಯ ಯೆಹೋಶುವನು ದೇವರ ನಿಯಮ ಗ್ರಂಥದಲ್ಲಿ ಬರೆದಿರುವ ಎಲ್ಲಾ ಮಾತುಗಳನ್ನೂ ಆಶೀರ್ವಾದಗಳನ್ನೂ, ಶಾಪಗಳನ್ನೂ ಓದಿದನು.
וְאַחֲרֵי־כֵן קָרָא אֶת־כׇּל־דִּבְרֵי הַתּוֹרָה הַבְּרָכָה וְהַקְּלָלָה כְּכׇל־הַכָּתוּב בְּסֵפֶר הַתּוֹרָֽה׃
35 ಮೋಶೆ ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಮಹಿಳೆಯರಿಗೂ, ಮಕ್ಕಳಿಗೂ, ಅನ್ಯದೇಶೀಯರಿಗೂ ಕೇಳಿಸುವಂತೆ ಸರ್ವಸಮೂಹದ ಮುಂದೆ ಓದಿದನು.
לֹא־הָיָה דָבָר מִכֹּל אֲשֶׁר־צִוָּה מֹשֶׁה אֲשֶׁר לֹֽא־קָרָא יְהוֹשֻׁעַ נֶגֶד כׇּל־קְהַל יִשְׂרָאֵל וְהַנָּשִׁים וְהַטַּף וְהַגֵּר הַהֹלֵךְ בְּקִרְבָּֽם׃

< ಯೆಹೋಶುವನು 8 >