< ಯೆಹೋಶುವನು 23 >

1 ಯೆಹೋವ ದೇವರು ಇಸ್ರಾಯೇಲರನ್ನು ಸುತ್ತಲಿರುವ ಎಲ್ಲಾ ಶತ್ರುಗಳಿಂದ ತಪ್ಪಿಸಿ, ಅವರಿಗೆ ವಿಶ್ರಾಂತಿಕೊಟ್ಟ ಬಹಳ ದಿವಸಗಳ ತರುವಾಯ ಯೆಹೋಶುವನ ದಿವಸಗಳು ಗತಿಸಿ ವೃದ್ಧನಾದನು.
וֽ͏ַיְהִי֙ מִיָּמִ֣ים רַבִּ֔ים אַ֠חֲרֵי אֲשֶׁר־הֵנִ֨יחַ יְהוָ֧ה לְיִשְׂרָאֵ֛ל מִכָּל־אֹיְבֵיהֶ֖ם מִסָּבִ֑יב וִיהֹושֻׁ֣עַ זָקֵ֔ן בָּ֖א בַּיָּמִֽים׃
2 ಒಂದು ದಿನ ಅವನು ಸಮಸ್ತ ಇಸ್ರಾಯೇಲರನ್ನೂ ಅವರ ಹಿರಿಯರನ್ನೂ ಅವರ ಮುಖ್ಯಸ್ಥರನ್ನೂ ಅವರ ನ್ಯಾಯಾಧಿಪತಿಗಳನ್ನೂ ಅವರ ಅಧಿಕಾರಿಗಳನ್ನೂ ಕರೆಯಿಸಿ ಅವರಿಗೆ, “ನಾನು ದಿನತುಂಬಿದ ವೃದ್ಧನಾಗಿದ್ದೇನೆ.
וַיִּקְרָ֤א יְהֹושֻׁ֙עַ֙ לְכָל־יִשְׂרָאֵ֔ל לִזְקֵנָיו֙ וּלְרָאשָׁ֔יו וּלְשֹׁפְטָ֖יו וּלְשֹֽׁטְרָ֑יו וַיֹּ֣אמֶר אֲלֵהֶ֔ם אֲנִ֣י זָקַ֔נְתִּי בָּ֖אתִי בַּיָּמִֽים׃
3 ಆದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೋಸ್ಕರ ಈ ಸಕಲ ಜನಾಂಗಗಳಿಗೆ ಮಾಡಿದ ಎಲ್ಲವನ್ನೂ ನೋಡಿದ್ದೀರಿ. ನಿಮಗೋಸ್ಕರವಾಗಿ ಯುದ್ಧ ಮಾಡಿದವರು ನಿಮ್ಮ ದೇವರಾದ ಯೆಹೋವ ದೇವರು.
וְאַתֶּ֣ם רְאִיתֶ֗ם אֵת֩ כָּל־אֲשֶׁ֨ר עָשָׂ֜ה יְהוָ֧ה אֱלֹהֵיכֶ֛ם לְכָל־הַגֹּויִ֥ם הָאֵ֖לֶּה מִפְּנֵיכֶ֑ם כִּ֚י יְהוָ֣ה אֱלֹהֵיכֶ֔ם ה֖וּא הַנִּלְחָ֥ם לָכֶֽם׃
4 ನಾನು ಯೊರ್ದನ್ ನದಿ ಮೊದಲುಗೊಂಡು ಪಶ್ಚಿಮಕ್ಕಿರುವ ಮೆಡಿಟೆರೆನಿಯನ್ ಸಮುದ್ರದವರೆಗೂ ರಾಷ್ಟ್ರಗಳನ್ನು ಸೋಲಿಸಿ, ಉಳಿದ ಸಕಲ ನಾಡನ್ನು ನಿಮ್ಮ ಗೋತ್ರಗಳಿಗೆ ಸೊತ್ತಾಗಿ ಕೊಟ್ಟಿದ್ದೇನೆ.
רְאוּ֩ הִפַּ֨לְתִּי לָכֶ֜ם אֶֽת־הַ֠גֹּויִם הַנִּשְׁאָרִ֥ים הָאֵ֛לֶּה בְּנַחֲלָ֖ה לְשִׁבְטֵיכֶ֑ם מִן־הַיַּרְדֵּ֗ן וְכָל־הַגֹּויִם֙ אֲשֶׁ֣ר הִכְרַ֔תִּי וְהַיָּ֥ם הַגָּדֹ֖ול מְבֹ֥וא הַשָּֽׁמֶשׁ׃
5 ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ಉಳಿದವರನ್ನು ನಿಮ್ಮ ಮುಂದೆ ತಳ್ಳಿಬಿಟ್ಟು, ನಿಮ್ಮ ಕಣ್ಣೆದುರಿನಿಂದ ಅವರನ್ನು ಹೊರಡಿಸಿ ಬಿಡುವರು. ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಹಾಗೆಯೇ ನೀವು ಅವರ ದೇಶವನ್ನು ಸ್ವಾಧೀನಮಾಡಿಕೊಳ್ಳುವಿರಿ.
וַיהוָ֣ה אֱלֹֽהֵיכֶ֗ם ה֚וּא יֶהְדֳּפֵ֣ם מִפְּנֵיכֶ֔ם וְהֹורִ֥ישׁ אֹתָ֖ם מִלִּפְנֵיכֶ֑ם וִֽירִשְׁתֶּם֙ אֶת־אַרְצָ֔ם כַּאֲשֶׁ֥ר דִּבֶּ֛ר יְהוָ֥ה אֱלֹהֵיכֶ֖ם לָכֶֽם׃
6 “ನೀವು ಬಲಗೊಳ್ಳಿರಿ, ಎಡಕ್ಕಾಗಲಿ, ಬಲಕ್ಕಾಗಲಿ ತಿರುಗದೆ, ಮೋಶೆಯ ನಿಯಮದ ಗ್ರಂಥದಲ್ಲಿ ಬರೆದಿರುವ ಎಲ್ಲವನ್ನು ಕೈಗೊಂಡು ನಡೆಯಿರಿ.
וַחֲזַקְתֶּ֣ם מְאֹ֔ד לִשְׁמֹ֣ר וְלַעֲשֹׂ֔ות אֵ֚ת כָּל־הַכָּת֔וּב בְּסֵ֖פֶר תֹּורַ֣ת מֹשֶׁ֑ה לְבִלְתִּ֥י סוּר־מִמֶּ֖נּוּ יָמִ֥ין וּשְׂמֹֽאול׃
7 ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರಿಕೊಳ್ಳಬೇಡಿರಿ. ಅವರ ದೇವರುಗಳ ಹೆಸರುಗಳನ್ನು ಸ್ಮರಿಸಲೂ ಬೇಡಿರಿ. ಅವುಗಳ ಮೇಲೆ ಆಣೆಯೂ ಇಡಬೇಡಿರಿ. ಅವುಗಳಿಗೆ ಆರಾಧನೆ ಮಾಡಬಾರದು. ಅಡ್ಡಬೀಳಲೂಬಾರದು.
לְבִלְתִּי־בֹוא֙ בַּגֹּויִ֣ם הָאֵ֔לֶּה הַנִּשְׁאָרִ֥ים הָאֵ֖לֶּה אִתְּכֶ֑ם וּבְשֵׁ֨ם אֱלֹהֵיהֶ֤ם לֹא־תַזְכִּ֙ירוּ֙ וְלֹ֣א תַשְׁבִּ֔יעוּ וְלֹ֣א תַעַבְד֔וּם וְלֹ֥א תִֽשְׁתַּחֲו֖וּ לָהֶֽם׃
8 ಆದರೆ, ಈವರೆಗೂ ಹೇಗೋ ಹಾಗೆಯೇ ಇನ್ನು ಮುಂದೆಯೂ ನಿಮ್ಮ ದೇವರಾದ ಯೆಹೋವ ದೇವರನ್ನೇ ನಂಬಿಕೊಂಡಿರಿ.
כִּ֛י אִם־בַּיהוָ֥ה אֱלֹהֵיכֶ֖ם תִּדְבָּ֑קוּ כַּאֲשֶׁ֣ר עֲשִׂיתֶ֔ם עַ֖ד הַיֹּ֥ום הַזֶּֽה׃
9 “ಯೆಹೋವ ದೇವರು ನಿಮ್ಮ ಮುಂದೆ ಬಲವಾದ ದೊಡ್ಡ ರಾಷ್ಟ್ರಗಳನ್ನು ಸಹ ಹೊರಡಿಸಿಬಿಟ್ಟರು. ನಿಮ್ಮ ಮುಂದೆ ಈವರೆಗೂ ಒಬ್ಬರಾದರೂ ನಿಲ್ಲಲಾರದೆ ಹೋದರು.
וַיֹּ֤ורֶשׁ יְהוָה֙ מִפְּנֵיכֶ֔ם גֹּויִ֖ם גְּדֹלִ֣ים וַעֲצוּמִ֑ים וְאַתֶּ֗ם לֹא־עָ֤מַד אִישׁ֙ בִּפְנֵיכֶ֔ם עַ֖ד הַיֹּ֥ום הַזֶּֽה׃
10 ನಿಮ್ಮ ದೇವರಾದ ಯೆಹೋವ ದೇವರು ತಮ್ಮ ವಾಗ್ದಾನದಂತೆಯೇ ನಿಮಗೋಸ್ಕರ ಯುದ್ಧ ಮಾಡಿದ್ದರಿಂದ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವುದಕ್ಕೆ ಶಕ್ತನಾದನು.
אִישׁ־אֶחָ֥ד מִכֶּ֖ם יִרְדָּף־אָ֑לֶף כִּ֣י ׀ יְהוָ֣ה אֱלֹהֵיכֶ֗ם ה֚וּא הַנִּלְחָ֣ם לָכֶ֔ם כַּאֲשֶׁ֖ר דִּבֶּ֥ר לָכֶֽם׃
11 ಹೀಗಿರುವುದರಿಂದ ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಂಡು ನಿಮ್ಮ ದೇವರಾದ ಯೆಹೋವ ದೇವರನ್ನೇ ಪ್ರೀತಿಸಿರಿ.
וְנִשְׁמַרְתֶּ֥ם מְאֹ֖ד לְנַפְשֹֽׁתֵיכֶ֑ם לְאַהֲבָ֖ה אֶת־יְהוָ֥ה אֱלֹהֵיכֶֽם׃
12 “ಆದರೆ, ನೀವು ದೇವರಿಂದ ತಿರುಗಿಕೊಂಡು ನಿಮ್ಮಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರಿಕೊಂಡು ಅವರೊಂದಿಗೆ ಮದುವೆ ಮಾಡಿಕೊಟ್ಟರೆ, ನೀವು ಅವರ ಬಳಿಗೂ ಅವರು ನಿಮ್ಮ ಬಳಿಗೂ ಪ್ರವೇಶಿಸಿದರೆ,
כִּ֣י ׀ אִם־שֹׁ֣וב תָּשׁ֗וּבוּ וּדְבַקְתֶּם֙ בְּיֶ֙תֶר֙ הַגֹּויִ֣ם הָאֵ֔לֶּה הַנִּשְׁאָרִ֥ים הָאֵ֖לֶּה אִתְּכֶ֑ם וְהִֽתְחַתַּנְתֶּ֥ם בָּהֶ֛ם וּבָאתֶ֥ם בָּהֶ֖ם וְהֵ֥ם בָּכֶֽם׃
13 ನಿಮ್ಮ ದೇವರಾದ ಯೆಹೋವ ದೇವರು ಇನ್ನು ಮೇಲೆ ಈ ಜನಾಂಗಗಳನ್ನು ನಿಮ್ಮ ಮುಂದೆ ಹೊರಡಿಸಿಬಿಡುವುದಿಲ್ಲ. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಈ ಒಳ್ಳೆಯ ನಾಡಿನೊಳಗಿಂದ ನೀವು ನಾಶವಾಗುವವರೆಗೂ ಅವರು ನಿಮಗೆ ಉರುಲೂ ಬೋನೂ ಆಗಿರುವರು. ಇದಲ್ಲದೆ ದೇವರು ನಿಮ್ಮ ಪಕ್ಕೆಯಲ್ಲಿ ಶೂಲವಾಗಿಯೂ ನಿಮ್ಮ ಕಣ್ಣುಗಳಿಗೆ ಮುಳ್ಳುಗಳಾಗಿಯೂ ಇರುವರೆಂದು ನಿಶ್ಚಯವಾಗಿ ತಿಳಿದುಕೊಳ್ಳುವಿರಿ.
יָדֹ֙ועַ֙ תֵּֽדְע֔וּ כִּי֩ לֹ֨א יֹוסִ֜יף יְהוָ֣ה אֱלֹהֵיכֶ֗ם לְהֹורִ֛ישׁ אֶת־הַגֹּויִ֥ם הָאֵ֖לֶּה מִלִּפְנֵיכֶ֑ם וְהָי֨וּ לָכֶ֜ם לְפַ֣ח וּלְמֹוקֵ֗שׁ וּלְשֹׁטֵ֤ט בְּצִדֵּיכֶם֙ וְלִצְנִנִ֣ים בְּעֵינֵיכֶ֔ם עַד־אֲבָדְכֶ֗ם מֵ֠עַל הָאֲדָמָ֤ה הַטֹּובָה֙ הַזֹּ֔את אֲשֶׁר֙ נָתַ֣ן לָכֶ֔ם יְהוָ֖ה אֱלֹהֵיכֶֽם׃
14 “ಭೂನಿವಾಸಿಗಳೆಲ್ಲರು ಹೋಗುವ ಮಾರ್ಗವಾಗಿ ಇಂದು ನಾನು ಹೋಗಬೇಕಾಗಿದೆ. ನಿಮ್ಮ ದೇವರಾದ ಯೆಹೋವ ದೇವರು ನಿಮಗೋಸ್ಕರ ಹೇಳಿದ ಎಲ್ಲಾ ಒಳ್ಳೆಯ ವಾಗ್ದಾನಗಳಲ್ಲಿ ಒಂದೂ ತಪ್ಪಲಿಲ್ಲವೆಂದು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ಅರಿತಿದ್ದೀರಿ. ಅವುಗಳಲ್ಲಿ ಒಂದು ಮಾತಾದರೂ ತಪ್ಪದೆ ಅವೆಲ್ಲಾ ನಿಮಗೆ ಸಂಭವಿಸಿದವು.
וְהִנֵּ֨ה אָנֹכִ֤י הֹולֵךְ֙ הַיֹּ֔ום בְּדֶ֖רֶךְ כָּל־הָאָ֑רֶץ וִידַעְתֶּ֞ם בְּכָל־לְבַבְכֶ֣ם וּבְכָל־נַפְשְׁכֶ֗ם כִּ֣י לֹֽא־נָפַל֩ דָּבָ֨ר אֶחָ֜ד מִכֹּ֣ל ׀ הַדְּבָרִ֣ים הַטֹּובִ֗ים אֲשֶׁ֨ר דִּבֶּ֜ר יְהוָ֤ה אֱלֹהֵיכֶם֙ עֲלֵיכֶ֔ם הַכֹּל֙ בָּ֣אוּ לָכֶ֔ם לֹֽא־נָפַ֥ל מִמֶּ֖נּוּ דָּבָ֥ר אֶחָֽד׃
15 ಈಗ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಒಳ್ಳೆಯ ಕಾರ್ಯಗಳೆಲ್ಲಾ ನಿಮಗೆ ಹೇಗೆ ಸಂಭವಿಸಿದವೋ
וְהָיָ֗ה כַּאֲשֶׁר־בָּ֤א עֲלֵיכֶם֙ כָּל־הַדָּבָ֣ר הַטֹּ֔וב אֲשֶׁ֥ר דִּבֶּ֛ר יְהוָ֥ה אֱלֹהֵיכֶ֖ם אֲלֵיכֶ֑ם כֵּן֩ יָבִ֨יא יְהוָ֜ה עֲלֵיכֶ֗ם אֵ֚ת כָּל־הַדָּבָ֣ר הָרָ֔ע עַד־הַשְׁמִידֹ֣ו אֹותְכֶ֗ם מֵ֠עַל הָאֲדָמָ֤ה הַטֹּובָה֙ הַזֹּ֔את אֲשֶׁר֙ נָתַ֣ן לָכֶ֔ם יְהוָ֖ה אֱלֹהֵיכֶֽם׃
16 ಹಾಗೆಯೇ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಜ್ಞಾಪಿಸಿದ ಒಡಂಬಡಿಕೆಯನ್ನು ನೀವು ಉಲ್ಲಂಘಿಸಿ, ಅನ್ಯದೇವರುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಈ ಒಳ್ಳೆಯ ದೇಶದಿಂದ ನಿಮ್ಮನ್ನು ನಾಶಮಾಡುವ ಮಟ್ಟಿಗೂ ಅವರು ನಿಮ್ಮ ಮೇಲೆ ಸಕಲ ಕೇಡುಗಳನ್ನು ಬರಮಾಡುವರು. ಯೆಹೋವ ದೇವರ ಕೋಪವು ನಿಮ್ಮ ಮೇಲೆ ಉರಿಯುವುದು. ಅವರು ನಿಮಗೆ ಕೊಟ್ಟ ಒಳ್ಳೆಯ ದೇಶದಿಂದ ನೀವು ಬೇಗನೆ ನಾಶವಾಗಿಹೋಗುವಿರಿ,” ಎಂದನು.
בְּ֠עָבְרְכֶם אֶת־בְּרִ֨ית יְהוָ֥ה אֱלֹהֵיכֶם֮ אֲשֶׁ֣ר צִוָּ֣ה אֶתְכֶם֒ וַהֲלַכְתֶּ֗ם וַעֲבַדְתֶּם֙ אֱלֹהִ֣ים אֲחֵרִ֔ים וְהִשְׁתַּחֲוִיתֶ֖ם לָהֶ֑ם וְחָרָ֤ה אַף־יְהוָה֙ בָּכֶ֔ם וַאֲבַדְתֶּ֣ם מְהֵרָ֔ה מֵעַל֙ הָאָ֣רֶץ הַטֹּובָ֔ה אֲשֶׁ֖ר נָתַ֥ן לָכֶֽם׃ פ

< ಯೆಹೋಶುವನು 23 >