< ಯೆಹೋಶುವನು 17 >

1 ಇದಲ್ಲದೆ ಮನಸ್ಸೆಯ ಗೋತ್ರಕ್ಕೂ ಭಾಗ ದೊರೆಯಿತು. ಏಕೆಂದರೆ ಅವನು ಯೋಸೇಫನಿಗೆ ಚೊಚ್ಚಲ ಮಗನಾಗಿದ್ದನು. ಮನಸ್ಸೆಯ ಹಿರಿಯ ಮಗ ಗಿಲ್ಯಾದನ ತಂದೆಯಾದ ಮಾಕೀರನು ಶೂರನಾದುದರಿಂದ ಗಿಲ್ಯಾದ್, ಬಾಷಾನ್ ಎಂಬ ಪ್ರಾಂತ್ಯಗಳು ಅವನ ಪಾಲಿಗೆ ಬಂದವು.
וַיְהִ֤י הַגֹּורָל֙ לְמַטֵּ֣ה מְנַשֶּׁ֔ה כִּי־ה֖וּא בְּכֹ֣ור יֹוסֵ֑ף לְמָכִיר֩ בְּכֹ֨ור מְנַשֶּׁ֜ה אֲבִ֣י הַגִּלְעָ֗ד כִּ֣י ה֤וּא הָיָה֙ אִ֣ישׁ מִלְחָמָ֔ה וֽ͏ַיְהִי־לֹ֖ו הַגִּלְעָ֥ד וְהַבָּשָֽׁן׃
2 ಮನಸ್ಸೆಯ ಉಳಿದವರಿಗೆ ಅಬೀಯೆಜೆರನ ಮಕ್ಕಳಿಗೂ ಹೇಲೆಕ್‌ನ ಮಕ್ಕಳಿಗೂ ಅಸ್ರೀಯೇಲನ ಮಕ್ಕಳಿಗೂ ಶೆಕೆಮ್ ಮಕ್ಕಳಿಗೂ ಹೇಫೆರನ ಮಕ್ಕಳಿಗೂ ಶೆಮೀದಾನನ ಮಕ್ಕಳಿಗೂ ಅವರ ಕುಟುಂಬಗಳಿಗೆ ತಕ್ಕ ಸೊತ್ತು ದೊರೆಯಿತು. ಇವರು ತಮ್ಮ ಕುಟುಂಬಗಳ ಪ್ರಕಾರ ಯೋಸೇಫನ ಮಗನಾದ ಮನಸ್ಸೆಯ ಗಂಡು ಮಕ್ಕಳಾಗಿದ್ದವರು.
וַ֠יְהִי לִבְנֵ֨י מְנַשֶּׁ֥ה הַנֹּותָרִים֮ לְמִשְׁפְּחֹתָם֒ לִבְנֵ֨י אֲבִיעֶ֜זֶר וְלִבְנֵי־חֵ֗לֶק וְלִבְנֵ֤י אַשְׂרִיאֵל֙ וְלִבְנֵי־שֶׁ֔כֶם וְלִבְנֵי־חֵ֖פֶר וְלִבְנֵ֣י שְׁמִידָ֑ע אֵ֠לֶּה בְּנֵ֨י מְנַשֶּׁ֧ה בֶּן־יֹוסֵ֛ף הַזְּכָרִ֖ים לְמִשְׁפְּחֹתָֽם׃
3 ಆದರೆ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ, ಗಿಲ್ಯಾದನ ಮೊಮ್ಮಗನೂ, ಹೇಫೆರನ ಮಗನೂ ಆದ ಚಲ್ಪಹಾದನಿಗೆ ಪುತ್ರರಿರಲಿಲ್ಲ. ಆದರೆ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ ಎಂಬ ಹೆಸರುಳ್ಳ ಪುತ್ರಿಯರು ಇದ್ದರು.
וְלִצְלָפְחָד֩ בֶּן־חֵ֨פֶר בֶּן־גִּלְעָ֜ד בֶּן־מָכִ֣יר בֶּן־מְנַשֶּׁ֗ה לֹא־הָ֥יוּ לֹ֛ו בָּנִ֖ים כִּ֣י אִם־בָּנֹ֑ות וְאֵ֙לֶּה֙ שְׁמֹ֣ות בְּנֹתָ֔יו מַחְלָ֣ה וְנֹעָ֔ה חָגְלָ֥ה מִלְכָּ֖ה וְתִרְצָֽה׃
4 ಇವರು ಯಾಜಕನಾದ ಎಲಿಯಾಜರನ ಬಳಿಗೂ ನೂನನ ಮಗ ಯೆಹೋಶುವನ ಬಳಿಗೂ ಪ್ರಧಾನರುಗಳ ಬಳಿಗೂ ಬಂದು ಅವರಿಗೆ, “ನಮ್ಮ ಸಹೋದರರಲ್ಲಿ ನಮಗೂ ಸೊತ್ತನ್ನು ಕೊಡುವಂತೆ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದರು,” ಎಂದರು. ಆದ್ದರಿಂದ ಅವರ ತಂದೆಗಳ ಸಹೋದರರ ಜೊತೆಗೆ ಅವರಿಗೂ ಯೆಹೋವ ದೇವರ ವಾಕ್ಯದ ಪ್ರಕಾರ ಸೊತ್ತನ್ನು ಕೊಟ್ಟನು.
וַתִּקְרַ֡בְנָה לִפְנֵי֩ אֶלְעָזָ֨ר הַכֹּהֵ֜ן וְלִפְנֵ֣י ׀ יְהֹושֻׁ֣עַ בִּן־נ֗וּן וְלִפְנֵ֤י הַנְּשִׂיאִים֙ לֵאמֹ֔ר יְהוָה֙ צִוָּ֣ה אֶת־מֹשֶׁ֔ה לָֽתֶת־לָ֥נוּ נַחֲלָ֖ה בְּתֹ֣וךְ אַחֵ֑ינוּ וַיִּתֵּ֨ן לָהֶ֜ם אֶל־פִּ֤י יְהוָה֙ נֽ͏ַחֲלָ֔ה בְּתֹ֖וךְ אֲחֵ֥י אֲבִיהֶֽן׃
5 ಯೊರ್ದನ್ ನದಿ ಆಚೆಯಲ್ಲಿರುವ ಗಿಲ್ಯಾದ್, ಬಾಷಾನ್ ಎಂಬ ಪ್ರಾಂತ್ಯಗಳ ಜೊತೆಗೆ ಮನಸ್ಸೆಗೆ ಬಿದ್ದ ಚೀಟಿನಲ್ಲಿ ಈಚೆಯಲ್ಲಿಯೂ ಹತ್ತು ಪಾಲು ಸಿಕ್ಕಿದವು.
וַיִּפְּל֥וּ חַבְלֵֽי־מְנַשֶּׁ֖ה עֲשָׂרָ֑ה לְבַ֞ד מֵאֶ֤רֶץ הַגִּלְעָד֙ וְהַבָּשָׁ֔ן אֲשֶׁ֖ר מֵעֵ֥בֶר לַיַּרְדֵּֽן׃
6 ಏಕೆಂದರೆ ಮನಸ್ಸೆಯ ಪುತ್ರಿಯರು ಸಹ ಅವನ ಪುತ್ರರಲ್ಲಿ ಸೊತ್ತನ್ನು ಹೊಂದಿದ್ದರು. ಆದರೆ ಉಳಿದ ಮನಸ್ಸೆಯ ಪುತ್ರರಿಗೆ ಗಿಲ್ಯಾದ್ ನಾಡು ದೊರೆಯಿತು.
כִּ֚י בְּנֹ֣ות מְנַשֶּׁ֔ה נָחֲל֥וּ נַחֲלָ֖ה בְּתֹ֣וךְ בָּנָ֑יו וְאֶ֙רֶץ֙ הַגִּלְעָ֔ד הָיְתָ֥ה לִבְנֵֽי־מְנַשֶּׁ֖ה הַנֹּֽותָרִֽים׃
7 ಮನಸ್ಸೆಯ ಮೇರೆ, ಆಶೇರಿನಿಂದ ಶೆಕೆಮಿನ ಮುಂದಿರುವ ಮಿಕ್ಮೆತಾತಿನವರೆಗೂ ಇತ್ತು. ಅಲ್ಲಿಂದ ದಕ್ಷಿಣ ಕಡೆಯಿರುವ ಎನ್ ತಪ್ಪೂಹದ ನಿವಾಸಗಳಿಗೆ ಹೋಗುತ್ತದೆ.
וַיְהִ֤י גְבוּל־מְנַשֶּׁה֙ מֵֽאָשֵׁ֔ר הַֽמִּכְמְתָ֔ת אֲשֶׁ֖ר עַל־פְּנֵ֣י שְׁכֶ֑ם וְהָלַ֤ךְ הַגְּבוּל֙ אֶל־הַיָּמִ֔ין אֶל־יֹשְׁבֵ֖י עֵ֥ין תַּפּֽוּחַ׃
8 ತಪ್ಪೂಹದ ಭೂಮಿ ಮನಸ್ಸೆಯದಾಗಿತ್ತು. ಆದರೆ ಮನಸ್ಸೆಯ ಮೇರೆಯಲ್ಲಿರುವ ತಪ್ಪೂಹ ಎಫ್ರಾಯೀಮನ ಮಕ್ಕಳದ್ದಾಗಿತ್ತು.
לִמְנַשֶּׁ֕ה הָיְתָ֖ה אֶ֣רֶץ תַּפּ֑וּחַ וְתַפּ֛וּחַ אֶל־גְּב֥וּל מְנַשֶּׁ֖ה לִבְנֵ֥י אֶפְרָֽיִם׃
9 ಮೇರೆ ಕಾನಾ ನದಿಯ ದಕ್ಷಿಣಕ್ಕೆ ನದಿಯವರೆಗೂ ಇಳಿದುಹೋಗುವುದು. ಅಲ್ಲಿರುವ ಮನಸ್ಸೆಯ ಪಟ್ಟಣಗಳಲ್ಲಿ ಕೆಲವು ಪಟ್ಟಣಗಳು ಎಫ್ರಾಯೀಮನದಾಗಿದ್ದವು. ಮನಸ್ಸೆಯ ಮೇರೆಯು ನದಿಯ ಉತ್ತರಕ್ಕಿರುವ ಮೆಡಿಟೆರೆನಿಯನ್ ಸಮುದ್ರದವರೆಗೂ ಹೋಗಿರುವುದು.
וְיָרַ֣ד הַגְּבוּל֩ נַ֨חַל קָנָ֜ה נֶ֣גְבָּה לַנַּ֗חַל עָרִ֤ים הָאֵ֙לֶּה֙ לְאֶפְרַ֔יִם בְּתֹ֖וךְ עָרֵ֣י מְנַשֶּׁ֑ה וּגְב֤וּל מְנַשֶּׁה֙ מִצְּפֹ֣ון לַנַּ֔חַל וַיְהִ֥י תֹצְאֹתָ֖יו הַיָּֽמָּה׃
10 ನದಿಯ ದಕ್ಷಿಣ ಸೀಮೆ ಎಫ್ರಾಯೀಮನದು; ಉತ್ತರ ಸೀಮೆ ಮನಸ್ಸೆಯದು, ಮೆಡಿಟೆರೆನಿಯನ್ ಸಮುದ್ರವು ಅದರ ಮೇರೆಯಾಗಿರುವುದು. ಉತ್ತರಕ್ಕೆ ಇರುವ ಆಶೇರ್ ಗೋತ್ರದವರ ಪ್ರಾಂತವೂ ಪೂರ್ವಕ್ಕೆ ಇರುವ ಇಸ್ಸಾಕಾರ್ ಗೋತ್ರವೂ ಇರುವುದು.
נֶ֣גְבָּה לְאֶפְרַ֗יִם וְצָפֹ֙ונָה֙ לִמְנַשֶּׁ֔ה וַיְהִ֥י הַיָּ֖ם גְּבוּלֹ֑ו וּבְאָשֵׁר֙ יִפְגְּע֣וּן מִצָּפֹ֔ון וּבְיִשָּׂשכָ֖ר מִמִּזְרָֽח׃
11 ಇಸ್ಸಾಕಾರನ ಮಧ್ಯದಲ್ಲಿಯೂ ಆಶೇರನ ಮಧ್ಯದಲ್ಲಿಯೂ ಇರುವ ಸೀಮೆಗಳಾದ ಬೇತ್ ಷೆಯಾನ, ಅದರ ಗ್ರಾಮಗಳೂ ಇಬ್ಲೆಯಾಮ್ ಅದರ ಗ್ರಾಮಗಳೂ ದೋರ್ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ಎಂದೋರ್, ತಾನಕ್, ಮೆಗಿದ್ದೋ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ಮನಸ್ಸೆಗೆ ಸೇರಿದವು. ಮೂರನೆಯ ಊರು ನಾಫೋತ್ ಆಗಿರುತ್ತದೆ.
וַיְהִ֨י לִמְנַשֶּׁ֜ה בְּיִשָּׂשכָ֣ר וּבְאָשֵׁ֗ר בֵּית־שְׁאָ֣ן וּ֠בְנֹותֶיהָ וְיִבְלְעָ֨ם וּבְנֹותֶ֜יהָ וְֽאֶת־יֹשְׁבֵ֧י דֹ֣אר וּבְנֹותֶ֗יהָ וְיֹשְׁבֵ֤י עֵֽין־דֹּר֙ וּבְנֹתֶ֔יהָ וְיֹשְׁבֵ֤י תַעְנַךְ֙ וּבְנֹתֶ֔יהָ וְיֹשְׁבֵ֥י מְגִדֹּ֖ו וּבְנֹותֶ֑יהָ שְׁלֹ֖שֶׁת הַנָּֽפֶת׃
12 ಆದರೆ ಮನಸ್ಸೆಯ ಸಂತತಿಯರಿಗೆ ಆ ಪಟ್ಟಣಗಳ ನಿವಾಸಿಗಳಾದ ಕಾನಾನ್ಯರನ್ನು ಹೊರಡಿಸುವುದಕ್ಕಾಗದೆ ಹೋಯಿತು. ಕಾನಾನ್ಯರು ಆ ಸೀಮೆಯಲ್ಲೇ ವಾಸವಾಗಿರಲು ನಿರ್ಧರಿಸಿದ್ದರು.
וְלֹ֤א יָכְלוּ֙ בְּנֵ֣י מְנַשֶּׁ֔ה לְהֹורִ֖ישׁ אֶת־הֶֽעָרִ֣ים הָאֵ֑לֶּה וַיֹּ֙ואֶל֙ הַֽכְּנַעֲנִ֔י לָשֶׁ֖בֶת בָּאָ֥רֶץ הַזֹּֽאת׃
13 ಆದರೆ ಇಸ್ರಾಯೇಲರು ಬಲಗೊಂಡಾಗ, ಕಾನಾನ್ಯರನ್ನು ಹೊರಡಿಸದೆ ಅವರನ್ನು ಜೀತದಾಳುಗಳನ್ನಾಗಿ ಮಾಡಿಕೊಂಡರು.
וֽ͏ַיְהִ֗י כִּ֤י חֽ͏ָזְקוּ֙ בְּנֵ֣י יִשְׂרָאֵ֔ל וַיִּתְּנ֥וּ אֶת־הַֽכְּנַעֲנִ֖י לָמַ֑ס וְהֹורֵ֖שׁ לֹ֥א הֹורִישֹֽׁו׃ ס
14 ಯೋಸೇಫನ ಸಂತತಿಯರು ಯೆಹೋಶುವನಿಗೆ, “ಯೆಹೋವ ದೇವರು ನಮ್ಮನ್ನು ಈವರೆಗೂ ಆಶೀರ್ವದಿಸುತ್ತಾ ಬಂದದ್ದರಿಂದ, ನಾವು ಮಹಾ ಜನಾಂಗವಾಗಿದ್ದೇವೆ. ಹೀಗಿರುವಾಗ ನೀವು ನಮಗೆ ಸೊತ್ತಾಗಿ ಒಂದೇ ಒಂದು ಭಾಗವನ್ನು ಮಾತ್ರ ಪಾಲನ್ನಾಗಿ ಕೊಟ್ಟಿದ್ದು ಏಕೆ?” ಎಂದು ಕೇಳಿದರು.
וַֽיְדַבְּרוּ֙ בְּנֵ֣י יֹוסֵ֔ף אֶת־יְהֹושֻׁ֖עַ לֵאמֹ֑ר מַדּוּעַ֩ נָתַ֨תָּה לִּ֜י נַחֲלָ֗ה גֹּורָ֤ל אֶחָד֙ וְחֶ֣בֶל אֶחָ֔ד וֽ͏ַאֲנִ֣י עַם־רָ֔ב עַ֥ד אֲשֶׁר־עַד־כֹּ֖ה בֵּֽרְכַ֥נִי יְהוָֽה׃
15 ಅದಕ್ಕೆ ಯೆಹೋಶುವನು ಉತ್ತರವಾಗಿ ಅವರಿಗೆ, “ನೀವು ಹೆಚ್ಚು ಜನರಾಗಿದ್ದರೆ ಮತ್ತು ನಿಮಗೆ ಎಫ್ರಾಯೀಮ್ ಪರ್ವತವು ಸಾಲದಿದ್ದರೆ, ನೀವು ಪೆರಿಜೀಯರ ಮತ್ತು ರೆಫಾಯರ ನಾಡುಗಳಿಗೆ ಹೋಗಿ ಅಲ್ಲಿನ ಕಾಡನ್ನು ಕಡಿದು ನಿಮಗೆ ಸ್ಥಳಮಾಡಿಕೊಳ್ಳಿರಿ,” ಎಂದನು.
וַיֹּ֨אמֶר אֲלֵיהֶ֜ם יְהֹושֻׁ֗עַ אִם־עַם־רַ֤ב אַתָּה֙ עֲלֵ֣ה לְךָ֣ הַיַּ֔עְרָה וּבֵרֵאתָ֤ לְךָ֙ שָׁ֔ם בְּאֶ֥רֶץ הַפְּרִזִּ֖י וְהָֽרְפָאִ֑ים כִּֽי־אָ֥ץ לְךָ֖ הַר־אֶפְרָֽיִם׃
16 ಅದಕ್ಕೆ ಯೋಸೇಫನ ಸಂತತಿಯರು, “ಆ ಪರ್ವತವು ನಮಗೆ ಸಾಲದು. ಇದಲ್ಲದೆ ತಗ್ಗಿನ ಸೀಮೆಯಲ್ಲಿರುವ ಬೇತ್ ಷೆಯಾನ್‌ನಲ್ಲಿಯೂ ಇಜ್ರೆಯೇಲ್ ಕಣಿವೆಯಲ್ಲಿಯೂ ವಾಸಿಸಿರುವ ಸಮಸ್ತ ಕಾನಾನ್ಯರ ಬಳಿಯಲ್ಲಿ ಕಬ್ಬಿಣದ ರಥಗಳು ಇವೆ,” ಎಂದರು.
וַיֹּֽאמְרוּ֙ בְּנֵ֣י יֹוסֵ֔ף לֹֽא־יִמָּ֥צֵא לָ֖נוּ הָהָ֑ר וְרֶ֣כֶב בַּרְזֶ֗ל בְּכָל־הַֽכְּנַעֲנִי֙ הַיֹּשֵׁ֣ב בְּאֶֽרֶץ־הָעֵ֔מֶק לֽ͏ַאֲשֶׁ֤ר בְּבֵית־שְׁאָן֙ וּבְנֹותֶ֔יהָ וְלַֽאֲשֶׁ֖ר בְּעֵ֥מֶק יִזְרְעֶֽאל׃
17 ಆಗ ಯೆಹೋಶುವನು ಯೋಸೇಫನ ಮಕ್ಕಳಾದ ಎಫ್ರಾಯೀಮನಿಗೂ ಮನಸ್ಸೆಗೂ, “ನೀವು ಮಹಾಜನಾಂಗವೂ ಬಹು ಬಲವುಳ್ಳವರೂ ಆಗಿರುವಿರಿ. ಒಂದೇ ಭಾಗ ನಿಮಗೆ ಇರಬಾರದು. ಆದರೆ ಪರ್ವತವು ನಿಮ್ಮದಾಗಿರುವುದು.
וַיֹּ֤אמֶר יְהֹושֻׁ֙עַ֙ אֶל־בֵּ֣ית יֹוסֵ֔ף לְאֶפְרַ֥יִם וְלִמְנַשֶּׁ֖ה לֵאמֹ֑ר עַם־רַ֣ב אַתָּ֗ה וְכֹ֤חַ גָּדֹול֙ לָ֔ךְ לֹֽא־יִהְיֶ֥ה לְךָ֖ גֹּורָ֥ל אֶחָֽד׃
18 ಏಕೆಂದರೆ ಅದು ಅಡವಿಯಾಗಿದೆ. ಅದನ್ನು ನೀವು ಕಡಿಯಬೇಕು. ಅದರ ಅಂತ್ಯಗಳವರೆಗೂ ನಿಮ್ಮದಾಗಿರುವುದು. ಕಬ್ಬಿಣದ ರಥಗಳಿದ್ದರೂ ಅವರು ಬಲಿಷ್ಠರಾಗಿದ್ದರೂ ನೀವು ಅವರನ್ನು ಹೊರಡಿಸಿಬಿಡಲು ನಿಮಗೆ ಸಾಧ್ಯ,” ಎಂದನು.
כִּ֣י הַ֤ר יִֽהְיֶה־לָּךְ֙ כִּֽי־יַ֣עַר ה֔וּא וּבֵ֣רֵאתֹ֔ו וְהָיָ֥ה לְךָ֖ תֹּֽצְאֹתָ֑יו כִּֽי־תֹורִ֣ישׁ אֶת־הַֽכְּנַעֲנִ֗י כִּ֣י רֶ֤כֶב בַּרְזֶל֙ לֹ֔ו כִּ֥י חָזָ֖ק הֽוּא׃ פ

< ಯೆಹೋಶುವನು 17 >