< ಯೆಹೋಶುವನು 12 >
1 ಇಸ್ರಾಯೇಲರು ಯೊರ್ದನ್ ನದಿಯ ಆಚೆ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಅರ್ನೋನ್ ಕಣಿವೆಯಿಂದ ಹೆರ್ಮೋನ್ ಬೆಟ್ಟದವರೆಗೂ ಅರಾಬಾ ಎಲ್ಲಾ ಪೂರ್ವ ಭಾಗಗಳನ್ನು ಒಳಗೊಂಡಂತೆ ಭೂಪ್ರದೇಶವನ್ನು ಸ್ವಾಧೀನ ಮಾಡಿಸಿಕೊಂಡ ದೇಶಗಳ ಅರಸರು ಯಾರಾರೆಂದರೆ:
१यार्देन नदीच्या पूर्वेकडील सूर्य उगवतो त्या बाजूला, आर्णोन नदीपासून ते हर्मोन डोंगरापर्यंत, आणि पूर्वेकडील संपूर्ण अराबाचा प्रदेश इस्राएल लोकांनी जिंकून काबीज केला, त्याच्या राजांची नावे ही आहेत:
2 ಅವರಲ್ಲಿ ಮೊದಲನೆಯವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸ ಸೀಹೋನ್ ಎಂಬವನು. ಅವನು ಅರ್ನೋನ್ ಕಣಿವೆಯ ಮಧ್ಯಭಾಗದ ದಾರಿಯ ಬಳಿಯಲ್ಲಿ ಇರುವ ಅರೋಯೇರ್ ನಗರದಿಂದ, ಅರ್ಧ ಗಿಲ್ಯಾದಿನಿಂದಲೂ ಅಮ್ಮೋನಿಯರ ಮೇರೆಯಾದ ಯಬ್ಬೋಕ್ ನದಿಯವರೆಗೆ ಆಳುತ್ತಿದ್ದನು.
२अमोऱ्यांचा राजा सीहोन; जो हेशबोन शहरात राहत होता, तो खोऱ्याच्या मध्यावर आर्णोन गोर्गच्या काठावर असणाऱ्या अरोएरपासून अम्मोन्यांच्या अर्ध्या गिलादावर खाली याब्बोक सीमेपर्यंत राज्य करत असे.
3 ಯೊರ್ದನ್ ನದಿಯ ಪೂರ್ವದಲ್ಲಿ ಕಿನ್ನೆರೆತ್ ಸಮುದ್ರದಿಂದ ಲವಣ ಸಮುದ್ರವೆನಿಸಿಕೊಳ್ಳುವ ಅರಾಬಾ ಸಮುದ್ರದ ಹತ್ತಿರವಿರುವ ಬೇತ್ ಯೆಷೀಮೋತನವರೆಗೂ ದಕ್ಷಿಣದಲ್ಲಿರುವ ಪಿಸ್ಗಾ ಬೆಟ್ಟದ ಬುಡದವರೆಗೂ ಇರುವ ತಗ್ಗಾದ ಪ್ರದೇಶವು ಸಹ ಅವನ ರಾಜ್ಯವಾಗಿತ್ತು.
३किन्नेरोथ समुद्रापर्यंत आराबावर, अराब समुद्राच्या पूर्वेकडे, बेथ-यशिमोथापर्यंत आणि दक्षिणेकडे, पिसगा पर्वताच्या उतरणीपर्यंतसुद्धा सीहोन राज्य करत असे.
4 ಅಷ್ಟಾರೋತ್ ಮತ್ತು ಎದ್ರೈ ಎಂಬ ಊರುಗಳಲ್ಲಿ ವಾಸಮಾಡಿದ್ದ ರೆಫಾಯರ ವಂಶಸ್ಥನೂ ಬಾಷಾನಿನ ಅರಸನೂ ಆದ ಓಗನು ಎರಡನೆಯವನು.
४बाशानाचा राजा ओग, उरलेल्या रेफाई लोकांतून राहिलेल्यांपैकी एक होता, तो अष्टारोथ व एद्रई येथे राहत होता.
5 ಅವನು ಹೆರ್ಮೋನ್ ಬೆಟ್ಟವನ್ನೂ ಸಲ್ಕಾ ನಗರವನ್ನೂ ಗೆಷೂರಿಯರ ಮತ್ತು ಮಾಕಾತೀಯರ ಮೇರೆಯವರೆಗೂ ಇದ್ದ ಇಡೀ ಬಾಷಾನ್ ನಾಡನ್ನು ಆಳುತ್ತಿದ್ದನು. ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದವರೆಗೂ ಅವನು ಆಳಿಕೊಂಡಿದ್ದನು.
५तो हर्मोन पर्वत, सलेख, आणि संपूर्ण बाशानावर, गशूरी सीमेपर्यंत आणि माकाथी, आणि अर्ध्या गिलादावर, हेशबोनचा राजा सीहोन याच्या सीमेपर्यंत राज्य करत असे.
6 ಯೆಹೋವ ದೇವರ ಸೇವಕನಾದ ಮೋಶೆಯೂ ಇಸ್ರಾಯೇಲರೂ ಅವರನ್ನು ಸೋಲಿಸಿ, ಅವರ ರಾಜ್ಯವನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆ ಕುಲದ ಅರ್ಧ ಗೋತ್ರದವರಿಗೂ ಸೊತ್ತಾಗಿ ಕೊಟ್ಟನು.
६परमेश्वराचा सेवक मोशे, आणि इस्राएली लोकांनी त्यांचा पराभव केला, आणि परमेश्वराचा सेवक मोशे याने ती भूमी रऊबेनी, गादी, आणि मनश्शेचा अर्धा वंश यांना वतन म्हणून दिली.
7 ಯೆಹೋಶುವನು ಇಸ್ರಾಯೇಲರ ಸಮೇತ ಯೊರ್ದನ್ ನದಿಯ ಪಶ್ಚಿಮದಲ್ಲಿ ಲೆಬನೋನ್ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಪರ್ವತದವರೆಗೂ ವಿಸ್ತರಿಸಿಕೊಂಡಿದ್ದ ಮಲೆನಾಡಿನ ಪ್ರದೇಶದ ಅರಸರನ್ನೂ,
७यार्देनेच्या पश्चिमेस लबानोन खोऱ्यातील बाल-गादापासून सेईरास जाणाऱ्या घाटातील हालाक डोंगरापर्यंत ज्या राजांचे देश होते आणि ज्यांना यहोशवा व इस्राएल लोकांनी मारले ते हे, हा देश यहोशवाने इस्राएल वंशाना त्यांच्या वाट्याप्रमाणे वतन म्हणून दिला,
8 ಇಳಿಜಾರಿನ ಪ್ರದೇಶ, ಬೆಟ್ಟದ ಪ್ರದೇಶ, ತಪ್ಪಲು ಪ್ರದೇಶ, ಮರುಭೂಮಿ ಹಾಗೂ ದಕ್ಷಿಣ ಪ್ರಾಂತ್ಯ ಇವುಗಳನ್ನು ಆಳುತ್ತಿದ್ದ ಹಿತ್ತಿಯ, ಅಮೋರಿಯ, ಕಾನಾನ್, ಪೆರಿಜೀಯ, ಹಿವ್ವಿಯ ಹಾಗೂ ಯೆಬೂಸಿಯ ಅರಸರನ್ನೂ ಸೋಲಿಸಿ, ಅವರ ನಾಡುಗಳನ್ನು ಇಸ್ರಾಯೇಲ್ ಕುಲಗಳಿಗೆ ಶಾಶ್ವತ ಸೊತ್ತಾಗಿ ಕೊಟ್ಟನು. ಆ ಅರಸರ ಪಟ್ಟಿ ಹೀಗಿದೆ:
८डोंगराळ प्रदेशात, तळवटीत, अराबात, उतरणीत, रानात आणि नेगेबात, हित्ती, अमोरी, कनानी, परिज्जी, हिव्वी व यबूसी राहत होते.
9 ಯೆರಿಕೋವಿನ ಅರಸನು ಬೇತೇಲ್ ಬಳಿಯಲ್ಲಿರುವ ಆಯಿ ಪಟ್ಟಣದ ಅರಸನು.
९या राजांमध्ये, यरीहोचा राजा, बेथेलशेजारी असलेल्या आयचा राजा,
10 ಯೆರೂಸಲೇಮಿನ ಅರಸನು. ಹೆಬ್ರೋನಿನ ಅರಸನು.
१०यरूशलेमचा राजा, हेब्रोनाचा राजा,
11 ಯರ್ಮೂತಿನ ಅರಸನು. ಲಾಕೀಷಿನ ಅರಸನು.
११यर्मूथाचा राजा, लाखीशाचा राजा
12 ಎಗ್ಲೋನಿನ ಅರಸನು. ಗೆಜೆರಿನ ಅರಸನು.
१२एग्लोनाचा राजा, गेजेराचा राजा,
13 ದೆಬೀರಿನ ಅರಸನು. ಗೆದೆರಿನ ಅರಸನು.
१३दबीरचा राजा, बेथ-गेदेरचा राजा,
14 ಹೊರ್ಮಾದ ಅರಸನು. ಅರಾದಿನ ಅರಸನು.
१४हर्माचा राजा, अरादचा राजा,
15 ಲಿಬ್ನದ ಅರಸನು. ಅದುಲ್ಲಾಮಿನ ಅರಸನು.
१५लिब्नाचा राजा, अदुल्लामाचा राजा.
16 ಮಕ್ಕೇದದ ಅರಸನು. ಬೇತೇಲಿನ ಅರಸನು.
१६मक्केदाचा राजा बेथेलचा राजा,
17 ತಪ್ಪೂಹದ ಅರಸನು. ಹೇಫೆರಿನ ಅರಸನು.
१७तप्पूहाचा राजा, हेफेरचा राजा,
18 ಅಫೇಕದ ಅರಸನು. ಲಷ್ಷಾರೋನಿನ ಅರಸನು.
१८अफेकाचा राजा, शारोनचा राजा,
19 ಮಾದೋನಿನ ಅರಸನು. ಹಾಚೋರಿನ ಅರಸನು.
१९मादोनाचा राजा, हासोराचा राजा,
20 ಶಿಮ್ರೋನ್ ಮೆರೋನಿನ ಅರಸನು. ಅಕ್ಷಾಫಿನ ಅರಸನು.
२०शिम्रोन-मरोनचा राजा, अक्षाफाचा राजा,
21 ತಾನಕದ ಅರಸನು. ಮೆಗಿದ್ದೋವಿನ ಅರಸನು.
२१तानखाचा राजा, मगिद्दोचा राजा,
22 ಕೆದೆಷಿನ ಅರಸನು. ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು.
२२केदेशचा राजा, कर्मेलांतील यकनामाचा राजा,
23 ನೆಪೊತ್ ದೋರ್ ಪ್ರಾಂತದ ದೋರಿನ ಅರಸನು. ಗಿಲ್ಗಾಲದಲ್ಲಿಯ ಗೊಯ್ಮದ ಅರಸನು.
२३नाफत-दोर येथील दोराचा राजा, गिलगाल येथील गोयीमचा राजा,
24 ತಿರ್ಚದ ಅರಸನು. ಹೀಗೆ ಒಟ್ಟು ಮೂವತ್ತೊಂದು ಮಂದಿ ಅರಸರು ಅಪಜಯಗೊಂಡರು.
२४तिरसाचा राजा; या प्रमाणे एकंदर एकतीस राजे होते.