< ಯೋಹಾನನು 1 >
1 ಆದಿಯಲ್ಲಿ ವಾಕ್ಯವಿತ್ತು, ಆ ವಾಕ್ಯವು ದೇವರ ಬಳಿಯಲ್ಲಿತ್ತು, ಆ ವಾಕ್ಯವು ದೇವರಾಗಿತ್ತು.
En el principio el Verbo era, y el Verbo era junto a Dios, y el Verbo era Dios.
2 ಆ ವಾಕ್ಯವೆಂಬುವವರು ಆದಿಯಲ್ಲಿ ದೇವರ ಬಳಿಯಲ್ಲಿದ್ದರು.
Él era, en el principio, junto a Dios:
3 ಆ ವಾಕ್ಯವೆಂಬುವವರ ಮೂಲಕವಾಗಿಯೇ ಸಮಸ್ತವೂ ಸೃಷ್ಟಿಯಾಯಿತು. ಸೃಷ್ಟಿಯಾದವುಗಳಲ್ಲಿ ಯಾವುದೂ ಅವರಿಲ್ಲದೆ ಸೃಷ್ಟಿಯಾಗಲಿಲ್ಲ.
Por Él, todo fue hecho, y sin Él nada se hizo de lo que ha sido hecho.
4 ಅವರಲ್ಲಿ ಜೀವವಿತ್ತು. ಆ ಜೀವವು ಮಾನವರಿಗೆ ಬೆಳಕಾಗಿತ್ತು.
En Él era la vida, y la vida era la luz de los hombres.
5 ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲೆಯು ಆ ಬೆಳಕನ್ನು ಅಡಗಿಸಲಿಲ್ಲ.
Y la luz luce en las tinieblas, y las tinieblas no la recibieron.
6 ದೇವರು ಕಳುಹಿಸಿದ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಯೋಹಾನನು.
Apareció un hombre, enviado de Dios, que se llamaba Juan.
7 ತನ್ನ ಮೂಲಕ ಎಲ್ಲರು ವಿಶ್ವಾಸವಿಡುವಂತೆ ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡಲು ಯೋಹಾನನು ಸಾಕ್ಷಿಯಾಗಿ ಬಂದನು.
Él vino como testigo, para dar testimonio acerca de la luz, a fin de que todos creyesen por Él.
8 ಅವನೇ ಆ ಬೆಳಕಾಗಿರಲಿಲ್ಲ. ಆ ಬೆಳಕಿನ ವಿಷಯದಲ್ಲಿ ಸಾಕ್ಷಿಯಾಗಿ ಬಂದನಷ್ಟೇ.
Él no era la luz, sino para dar testimonio acerca de la luz.
9 ನಿಜ ಬೆಳಕು ಲೋಕಕ್ಕೆ ಬರುವುದಾಗಿತ್ತು. ಆ ಬೆಳಕೇ ಪ್ರತಿ ಮಾನವನಿಗೂ ಬೆಳಕನ್ನು ನೀಡುವುದಾಗಿತ್ತು.
La verdadera luz, la que alumbra a todo hombre, venía a este mundo.
10 ಆ ವಾಕ್ಯವೆಂಬುವವರು ಲೋಕದಲ್ಲಿದ್ದರು ಮತ್ತು ಲೋಕವು ಅವರ ಮೂಲಕ ಉಂಟಾಯಿತು. ಆದರೂ ಲೋಕವು ಅವರ ಗುರುತು ಹಿಡಿಯಲಿಲ್ಲ.
Él estaba en el mundo; por Él, el mundo había sido hecho, y el mundo no lo conoció.
11 ಅವರು ತಮ್ಮ ಸ್ವಜನರ ಬಳಿಗೆ ಬಂದರು. ಆದರೆ ಸ್ವಜನರೇ ಅವರನ್ನು ಸ್ವೀಕರಿಸಲಿಲ್ಲ.
Él vino a lo suyo, y los suyos no lo recibieron.
12 ಆದರೂ ಯಾರಾರು ಅವರನ್ನು ಸ್ವೀಕರಿಸಿದರೋ, ಅಂದರೆ ಅವರ ಹೆಸರಿನಲ್ಲಿ ವಿಶ್ವಾಸವಿಟ್ಟರೋ ಅವರೆಲ್ಲರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಕೊಟ್ಟರು.
Pero a todos los que lo recibieron, les dio el poder de llegar a ser hijos de Dios: a los que creen en su nombre.
13 ಇವರು ರಕ್ತಸಂಬಂಧದಿಂದಾಗಲಿ, ದೈಹಿಕ ಇಚ್ಛೆಯಿಂದಾಗಲಿ, ಪುರುಷನ ಇಚ್ಛೆಯಿಂದಾಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು.
Los cuales no han nacido de la sangre, ni del deseo de la carne, ni de voluntad de varón, sino de Dios.
14 ವಾಕ್ಯವೆಂಬುವವರು ದೇಹಧಾರಿಯಾಗಿ ನಮ್ಮ ಮಧ್ಯದಲ್ಲಿ ವಾಸಿಸಿದರು. ನಾವು ಅವರ ಮಹಿಮೆಯನ್ನು ಕಂಡೆವು. ಆ ಮಹಿಮೆಯು ತಂದೆಯಿಂದ ಬಂದ ಏಕೈಕ ಪುತ್ರ ಆಗಿರುವವರಿಗೆ ಇರತಕ್ಕ ಮಹಿಮೆ. ಆ ವಾಕ್ಯವೆಂಬುವವರು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವರಾಗಿದ್ದರು.
Y el Verbo se hizo carne, y puso su morada entre nosotros —y nosotros vimos su gloria, gloria como del Unigénito del Padre— lleno de gracia y de verdad.
15 “ಅವರನ್ನು ಕುರಿತು ಯೋಹಾನನು ಸಾಕ್ಷಿ ಕೊಡುತ್ತಾ, ‘ನನ್ನ ಬಳಿಕ ಬರುವವರು ನನಗಿಂತ ಮೊದಲೇ ಇದ್ದುದರಿಂದ ಅವರು ನನಗಿಂತಲೂ ಶ್ರೇಷ್ಠರು’ ಎಂದು ನಾನು ಹೇಳಿದವರು ಇವರೇ,” ಎಂದು ಘೋಷಿಸಿದನು.
Juan da testimonio de él, y clama: “De Este dije yo: El que viene después de mí, se me ha adelantado porque Él existía antes que yo”.
16 ಅವರ ಪರಿಪೂರ್ಣತೆಯಿಂದ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಪಡೆದೆವು.
Y de su plenitud hemos recibido todos, a saber, una gracia correspondiente a su gracia.
17 ಏಕೆಂದರೆ ನಿಯಮವು ಮೋಶೆಯ ಮೂಲಕ ಕೊಡಲಾಯಿತು. ಕೃಪೆಯೂ ಸತ್ಯವೂ ಕ್ರಿಸ್ತ ಯೇಸುವಿನ ಮೂಲಕ ಬಂದವು.
Porque la Ley fue dada por Moisés, pero la gracia y la verdad han venido por Jesucristo.
18 ದೇವರನ್ನು ಯಾರೂ ಎಂದೂ ಕಂಡಿಲ್ಲ; ತಂದೆ ದೇವರ ಹೃದಯಕ್ಕೆ ಹತ್ತಿರವಾಗಿರುವ ಏಕೈಕ ಪುತ್ರ ಆಗಿರುವವರೂ ಸ್ವತಃ ದೇವರೂ ಆಗಿರುವವರೂ ತಂದೆಯನ್ನು ಪ್ರಕಟಪಡಿಸಿದ್ದಾರೆ.
Nadie ha visto jamás a Dios; el Dios, Hijo único, que es en el seno del Padre, Ese le ha dado a conocer.
19 ಯೆರೂಸಲೇಮಿನ ಯೆಹೂದ್ಯ ನಾಯಕರು, ಯಾಜಕರನ್ನು ಮತ್ತು ಲೇವಿಯರನ್ನು ಯೋಹಾನನ ಬಳಿಗೆ ಕಳುಹಿಸಿ, “ನೀನು ಯಾರು?” ಎಂದು ಕೇಳಿದರು.
Y he aquí el testimonio de Juan, cuando los judíos enviaron a él, desde Jerusalén, sacerdotes y levitas para preguntarle: “¿Quién eres tú?”.
20 ಅದಕ್ಕೆ ಯೋಹಾನನು, “ನಾನು ಕ್ರಿಸ್ತನಲ್ಲ” ಎಂದು ಅರಿಕೆಮಾಡಿ ಸಾಕ್ಷಿಕೊಟ್ಟನು.
Él confesó y no negó; y confesó: “Yo no soy el Cristo”.
21 ಅದಕ್ಕೆ ಅವರು, “ಹಾಗಾದರೆ ನೀನು ಎಲೀಯನೋ?” ಎಂದು ಕೇಳಿದರು. ಅದಕ್ಕೆ ಅವನು, “ನಾನು ಎಲೀಯನಲ್ಲ.” “ನೀನು ಆ ಪ್ರವಾದಿಯೋ?” ಎಂದು ಕೇಳಿದರು. ಅದಕ್ಕೆ ಅವನು, “ಅಲ್ಲ” ಎಂದನು.
Le preguntaron: “¿Entonces qué?¿Eres tú Elías?” Dijo: “No lo soy”. “¿Eres el Profeta?” Respondió: “No”.
22 ಅವರು, “ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಕೊಡುವಂತೆ ನಿನ್ನ ವಿಷಯವಾಗಿ ನೀನು ಏನು ಹೇಳುತ್ತೀ?” ಎಂದು ಕೇಳಿದರು.
Le dijeron entonces: “¿Quién eres tú? para que demos una respuesta a los que nos han enviado. ¿Qué dices de ti mismo?”
23 ಅದಕ್ಕೆ ಯೋಹಾನನು, “ಪ್ರವಾದಿ ಯೆಶಾಯನು ಹೇಳಿದಂತೆ, ‘ಕರ್ತದೇವರ ಮಾರ್ಗವನ್ನು ಸಿದ್ಧಮಾಡಿರಿ,’ ಎಂದು ಅರಣ್ಯದಲ್ಲಿ ಕೂಗುವ ಸ್ವರವೇ ನಾನು,” ಎಂದು ಹೇಳಿದನು.
Él dijo: “Yo soy la voz de uno que clama en el desierto: Enderezad el camino del Señor, como dijo el profeta Isaías”.
24 ಬಂದಿದ್ದವರು ಫರಿಸಾಯರ ಕಡೆಯವರಾಗಿದ್ದರು.
Había también enviados de entre los fariseos.
25 ಅವರು ಯೋಹಾನನಿಗೆ, “ನೀನು ಕ್ರಿಸ್ತ ಇಲ್ಲವೆ ಎಲೀಯನಾಗಲಿ, ಆ ಪ್ರವಾದಿಯಾಗಲಿ ಆಗಿರದಿದ್ದರೆ ನೀನು ದೀಕ್ಷಾಸ್ನಾನ ಕೊಡುವುದೇಕೆ?” ಎಂದು ಪ್ರಶ್ನಿಸಿದರು.
Ellos le preguntaron: “¿Por qué, pues, bautizas, si no eres ni el Cristo, ni Elías, ni el Profeta?”
26 ಅದಕ್ಕೆ ಯೋಹಾನನು, “ನಾನು ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನೀವು ಅರಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ.
Juan les respondió: “Yo, por mi parte, bautizo con agua; pero en medio de vosotros está uno que vosotros no conocéis,
27 ಅವರೇ ನನ್ನ ಬಳಿಕ ಬರುವವರು. ಅವರ ಪಾದರಕ್ಷೆಗಳ ದಾರವನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,” ಎಂದು ಉತ್ತರಕೊಟ್ಟನು.
que viene después de mí, y al cual yo no soy digno de desatar la correa de su sandalia”.
28 ಇದೆಲ್ಲಾ ಯೋಹಾನನು ದೀಕ್ಷಾಸ್ನಾನ ಮಾಡಿಸುತ್ತಿದ್ದ ಯೊರ್ದನ್ ನದಿಯ ಆಚೆಕಡೆಯಲ್ಲಿರುವ ಬೇಥಾನ್ಯದಲ್ಲಿ ನಡೆಯಿತು.
Esto sucedió en Betania, al otro lado del Jordán, donde Juan bautizaba.
29 ಮರುದಿನ ಯೇಸು ತನ್ನ ಕಡೆಗೆ ಬರುತ್ತಿರುವುದನ್ನು ಯೋಹಾನನು ಕಂಡು, “ಇಗೋ, ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ,
Al día siguiente vio a Jesús que venía hacia él, y dijo: “He aquí el cordero de Dios, que lleva el pecado del mundo.
30 ‘ನನ್ನ ತರುವಾಯ ಬರುವವರು ನನಗಿಂತ ಮೊದಲೇ ಇದ್ದುದರಿಂದ ಅವರು ನನಗಿಂತಲೂ ಶ್ರೇಷ್ಠರು,’ ಎಂದು ನಾನು ಹೇಳಿದವರು ಇವರೇ.
Este es Aquel de quien yo dije: En pos de mí viene un varón que me ha tomado la delantera, porque Él existía antes que yo.
31 ನನಗೂ ಇವರ ಗುರುತಿರಲಿಲ್ಲ. ಆದರೆ ಇವರನ್ನು ಇಸ್ರಾಯೇಲರಿಗೆ ಪ್ರಕಟಪಡಿಸುವುದಕ್ಕೊಸ್ಕರ ನಾನು ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾ ಬಂದೆನು,” ಎಂದು ಹೇಳಿದನು.
Yo no lo conocía, mas yo vine a bautizar en agua, para que Él sea manifestado a Israel”.
32 ಯೋಹಾನನು ಸಾಕ್ಷಿಕೊಟ್ಟು, “ಪವಿತ್ರಾತ್ಮರು ಪರಲೋಕದಿಂದ ಪಾರಿವಾಳದಂತೆ ಇಳಿದುಬಂದು ಯೇಸುವಿನ ಮೇಲೆ ನೆಲೆಗೊಂಡಿರುವುದನ್ನು ನಾನು ಕಂಡೆನು.
Y Juan dio testimonio, diciendo: “He visto al Espíritu descender como paloma del cielo, y se posó sobre Él.
33 ನನಗೂ ಅವರ ಗುರುತಿರಲಿಲ್ಲ. ಆದರೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಲು ನನ್ನನ್ನು ಕಳುಹಿಸಿದವರು, ‘ಯಾರ ಮೇಲೆ ಪವಿತ್ರಾತ್ಮರು ಇಳಿದುಬಂದು ನೆಲೆಸುವುದನ್ನು ನೀನು ನೋಡುವಿಯೋ ಅವರೇ ಪವಿತ್ರಾತ್ಮರಿಂದ ದೀಕ್ಷಾಸ್ನಾನ ಮಾಡಿಸುವವರು,’ ಎಂದು ತಿಳಿಸಿದರು.
Ahora bien, yo no lo conocía, pero Él que me envió a bautizar con agua, me había dicho: “Aquel sobre quien vieres descender el Espíritu y posarse sobre Él, Ese es el que bautiza en Espíritu Santo”.
34 ಈಗ ನಾನು ಕಂಡು, ಇವರೇ ದೇವರ ಪುತ್ರರು ಎಂದು ಸಾಕ್ಷಿ ನೀಡುತ್ತಿದ್ದೇನೆ,” ಎಂದು ಹೇಳಿದನು.
Y bien: he visto, y testifico que Él es el Hijo de Dios”.
35 ಮರುದಿನ ಯೋಹಾನನು ಪುನಃ ತನ್ನ ಶಿಷ್ಯರಲ್ಲಿ ಇಬ್ಬರೊಂದಿಗೆ ನಿಂತುಕೊಂಡಿದ್ದನು.
Al día siguiente, Juan estaba otra vez allí, como también dos de sus discípulos;
36 ಆಗ ಯೇಸು ಹೋಗುತ್ತಿರುವುದನ್ನು ಕಂಡು ಅವನು, “ಇಗೋ, ದೇವರ ಕುರಿಮರಿ,” ಎಂದು ಹೇಳಿದನು.
y fijando su mirada sobre Jesús que pasaba, dijo: “He aquí el Cordero de Dios”.
37 ಆ ಇಬ್ಬರು ಶಿಷ್ಯರು ಅವನು ಹೇಳಿದ್ದನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು.
Los dos discípulos, oyéndolo hablar ( así ), siguieron a Jesús.
38 ಯೇಸು ಹಿಂತಿರುಗಿ ತನ್ನನ್ನು ಹಿಂಬಾಲಿಸುತ್ತಿದ್ದ ಅವರನ್ನು ನೋಡಿ, “ನಿಮಗೆ ಏನು ಬೇಕು?” ಎಂದು ಕೇಳಲು, ಅವರು, “ಬೋಧಕರೇ, ನೀವು ವಾಸಿಸುವುದು ಎಲ್ಲಿ?” ಎಂದು ಕೇಳಿದರು.
Jesús, volviéndose y viendo que lo seguían, les dijo: “¿Qué queréis?” Le dijeron: Rabí, —que se traduce: Maestro—, ¿dónde moras?”
39 ಯೇಸು ಅವರಿಗೆ, “ಬಂದು ನೋಡಿರಿ,” ಎಂದು ಹೇಳಲು, ಅವರು ಹೋಗಿ ಯೇಸು ವಾಸಿಸುತ್ತಿದ್ದ ಸ್ಥಳವನ್ನು ಕಂಡು ಆ ದಿವಸ ಅವರ ಸಂಗಡ ಇದ್ದರು. ಆಗ ಸಂಜೆ ಸುಮಾರು ನಾಲ್ಕು ಗಂಟೆಯಾಗಿತ್ತು.
Él les dijo: “Venid y veréis”. Fueron entonces y vieron dónde moraba, y se quedaron con Él ese día. Esto pasaba alrededor de la hora décima.
40 ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ ಇಬ್ಬರಲ್ಲಿ ಸೀಮೋನ್ ಪೇತ್ರನ ಸಹೋದರ ಅಂದ್ರೆಯನು ಒಬ್ಬನಾಗಿದ್ದನು.
Andrés, hermano de Simón Pedro, era uno de los dos que habían oído ( la palabra ) de Juan y que habían seguido (a Jesús ).
41 ಅಂದ್ರೆಯನು ಮೊದಲು ತನ್ನ ಸಹೋದರ ಸೀಮೋನನನ್ನು ಕಂಡು, “ನಾವು ಮೆಸ್ಸೀಯ ಆಗಿರುವವರನ್ನು ಕಂಡೆವು,” ಎಂದು ಹೇಳಿ,
Él encontró primero a su hermano Simón y le dijo: “Hemos hallado al Mesías —que se traduce: “Cristo”.
42 ಅವನನ್ನು ಯೇಸುವಿನ ಬಳಿಗೆ ಕರೆತಂದನು. “ಮೆಸ್ಸೀಯ” ಎಂದರೆ ಕ್ರಿಸ್ತ ಎಂದು ಅರ್ಥ. ಯೇಸು ಅವನನ್ನು ನೋಡಿ, “ನೀನು ಯೋಹಾನನ ಮಗ ಸೀಮೋನನು. ನಿನ್ನನ್ನು ‘ಕೇಫ’ ಎಂದು ಕರೆಯುವರು,” ಎಂದು ಹೇಳಿದರು. “ಕೇಫ” ಎಂದರೆ ಪೇತ್ರ ಇಲ್ಲವೆ ಬಂಡೆ ಎಂದರ್ಥ.
Lo condujo a Jesús, y Jesús poniendo sus ojos en él, dijo: “Tú eres Simón, hijo de Juan: tú te llamarás Kefas —que se traduce: Pedro”.
43 ಯೇಸು ಮರುದಿನ ಗಲಿಲಾಯಕ್ಕೆ ಹೋಗಬೇಕೆಂದಿದ್ದಾಗ, ಅವರು ಫಿಲಿಪ್ಪನನ್ನು ಕಂಡು, “ನನ್ನನ್ನು ಹಿಂಬಾಲಿಸು,” ಎಂದರು.
Al día siguiente resolvió partir para Galilea. Encontró a Felipe y le dijo: “Sígueme”.
44 ಫಿಲಿಪ್ಪನು, ಅಂದ್ರೆಯ ಮತ್ತು ಪೇತ್ರನ ಪಟ್ಟಣವಾದ ಬೇತ್ಸಾಯಿದಕ್ಕೆ ಸೇರಿದವನು.
Era Felipe de Betsaida, la ciudad de Andrés y Pedro.
45 ಫಿಲಿಪ್ಪನು ನತಾನಯೇಲನನ್ನು ಕಂಡು, “ಮೋಶೆಯ ನಿಯಮದಲ್ಲಿ ಸೂಚಿಸಿದವರೂ ಪ್ರವಾದಿಗಳೂ ಯಾರನ್ನು ಕುರಿತು ಬರೆದಿದ್ದಾರೋ ಅವರು ನಮಗೆ ಸಿಕ್ಕಿದ್ದಾರೆ. ಅವರೇ ಯೋಸೇಫನ ಪುತ್ರರಾಗಿರುವ ನಜರೇತಿನ ಯೇಸು,” ಎಂದನು.
Felipe encontró a Natanael y le dijo: “A Aquel de quien Moisés habló en la Ley, y también los profetas, lo hemos encontrado: es Jesús, hijo de José, de Nazaret”.
46 “ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರಲು ಸಾಧ್ಯವೋ?” ಎಂದು ನತಾನಯೇಲನು ಕೇಳಲು, “ಬಂದು ನೋಡು,” ಎಂದು ಫಿಲಿಪ್ಪನು ಹೇಳಿದನು.
Natanael le replicó: “¿De Nazaret puede salir algo bueno?” Felipe le dijo: “Ven y ve”.
47 ನತಾನಯೇಲನು ತಮ್ಮ ಬಳಿಗೆ ಬರುವುದನ್ನು ಯೇಸು ಕಂಡು ಅವನ ವಿಷಯವಾಗಿ, “ಇವನು ನಿಜವಾದ ಇಸ್ರಾಯೇಲನು, ಇವನಲ್ಲಿ ಕಪಟವಿಲ್ಲ,” ಎಂದು ಹೇಳಿದರು.
Jesús vio a Natanael que se le acercaba, y dijo de él: “He aquí, en verdad, un israelita sin doblez”.
48 ಅದಕ್ಕೆ ನತಾನಯೇಲನು, “ನೀವು ನನ್ನನ್ನು ಹೇಗೆ ಬಲ್ಲಿರಿ?” ಎಂದು ಕೇಳಲು, ಯೇಸು ಅವನಿಗೆ, “ಫಿಲಿಪ್ಪನು ನಿನ್ನನ್ನು ಕರೆಯುವುದಕ್ಕಿಂತ ಮುಂಚೆಯೇ ನೀನು ಅಂಜೂರದ ಮರದ ಕೆಳಗಿರುವುದನ್ನು ನಾನು ಕಂಡೆನು,” ಎಂದು ಉತ್ತರಿಸಿದರು.
Díjole Natanael: “¿De dónde me conoces?” Jesús le respondió: “Antes de que Felipe te llamase, cuando estabas bajo la higuera te vi”.
49 ಅದಕ್ಕೆ ನತಾನಯೇಲನು, “ಗುರುವೇ, ನೀವು ದೇವಪುತ್ರ; ಇಸ್ರಾಯೇಲಿನ ಅರಸ ನೀವೇ,” ಎಂದನು.
Natanael le dijo: “Rabí, Tú eres el Hijo de Dios, Tú eres el Rey de Israel”.
50 ಯೇಸು ಅವನಿಗೆ, “ನಿನ್ನನ್ನು ಅಂಜೂರದ ಮರದ ಕೆಳಗೆ ಕಂಡಿದ್ದೆ ಎಂದು ನಾನು ಹೇಳಿದ್ದಕ್ಕೆ ನೀನು ನಂಬುತ್ತೀಯೋ? ನೀನು ಇವುಗಳಿಗಿಂತಲೂ ಮಹಾಕಾರ್ಯಗಳನ್ನು ಕಾಣುವೆ,” ಎಂದು ಉತ್ತರಿಸಿದರು.
Jesús le respondió: “Porque te dije que te vi debajo de la higuera, crees. Verás todavía más”.
51 ಯೇಸು ಅವನಿಗೆ, “ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ನೀವು ಪರಲೋಕವು ತೆರೆದಿರುವುದನ್ನೂ ದೇವದೂತರು ಮನುಷ್ಯಪುತ್ರನಾದ ನನ್ನ ಮುಖಾಂತರ ಇಳಿಯುತ್ತಾ ಏರುತ್ತಾ ಇರುವುದನ್ನೂ ಕಾಣುವಿರಿ,” ಎಂದು ಹೇಳಿದರು.
Y le dijo: “En verdad, en verdad os digo: Veréis el cielo abierto y a los ángeles de Dios que suben y descienden sobre el Hijo del hombre”.