< ಯೋಹಾನನು 20 >

1 ವಾರದ ಮೊದಲನೆಯ ದಿನದಲ್ಲಿ ಮುಂಜಾನೆ ಇನ್ನೂ ಕತ್ತಲಿರುವಾಗಲೇ ಮಗ್ದಲದ ಮರಿಯಳು ಸಮಾಧಿಯ ಬಳಿಗೆ ಬಂದು ಸಮಾಧಿಯಿಂದ ಬಂಡೆ ತೆಗೆದು ಹಾಕಿರುವುದನ್ನು ಕಂಡಳು.
Una autem sabbati, Maria Magdalene venit mane, cum adhuc tenebræ essent, ad monumentum: et vidit lapidem sublatum a monumento.
2 ಆಗ ಆಕೆಯು ಸೀಮೋನ ಪೇತ್ರನ ಬಳಿಗೂ ಯೇಸು ಪ್ರೀತಿಸಿದ ಇನ್ನೊಬ್ಬ ಶಿಷ್ಯನ ಬಳಿಗೂ ಓಡಿಬಂದು ಅವರಿಗೆ, “ಕರ್ತನನ್ನು ಅವರು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿದ್ದಾರೆ, ಅವರು ಕರ್ತನನ್ನು ಎಲ್ಲಿ ಇಟ್ಟಿದ್ದಾರೋ ನಮಗೆ ಗೊತ್ತಿಲ್ಲ,” ಎಂದು ಹೇಳಿದಳು.
Cucurrit ergo, et venit ad Simonem Petrum, et ad alium discipulum, quem amabat Jesus, et dicit illis: Tulerunt Dominum de monumento, et nescimus ubi posuerunt eum.
3 ಆಗ ಪೇತ್ರನೂ ಇನ್ನೊಬ್ಬ ಶಿಷ್ಯನೂ ಸಮಾಧಿಯ ಕಡೆಗೆ ಹೊರಟರು.
Exiit ergo Petrus, et ille alius discipulus, et venerunt ad monumentum.
4 ಅವರಿಬ್ಬರೂ ಜೊತೆಯಾಗಿ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ ಮುಂದೆ ಓಡಿ ಮೊದಲು ಸಮಾಧಿಗೆ ಬಂದನು.
Currebant autem duo simul, et ille alius discipulus præcucurrit citius Petro, et venit primus ad monumentum.
5 ಅವನು ಬಗ್ಗಿ ನೋಡಿದಾಗ ನಾರುಬಟ್ಟೆಗಳು ಬಿದ್ದಿರುವುದನ್ನು ಕಂಡನು. ಆದರೂ ಅವನು ಒಳಗೆ ಪ್ರವೇಶಿಸಲಿಲ್ಲ.
Et cum se inclinasset, vidit posita linteamina: non tamen introivit.
6 ಆಗ ಸೀಮೋನ ಪೇತ್ರನು ಸಹ ಅವನ ಹಿಂದೆ ಬಂದು ನೇರವಾಗಿ ಸಮಾಧಿಯೊಳಕ್ಕೆ ಪ್ರವೇಶಿಸಿ, ನಾರುಬಟ್ಟೆಗಳು ಬಿದ್ದಿರುವುದನ್ನೂ
Venit ergo Simon Petrus sequens eum, et introivit in monumentum, et vidit linteamina posita,
7 ಯೇಸುವಿನ ತಲೆಗೆ ಸುತ್ತಿದ ವಸ್ತ್ರವು ನಾರುಬಟ್ಟೆಗಳೊಂದಿಗೆ ಇರದೆ ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ಕಂಡನು.
et sudarium, quod fuerat super caput ejus, non cum linteaminibus positum, sed separatim involutum in unum locum.
8 ಆಗ ಮೊದಲು ಸಮಾಧಿಗೆ ಬಂದಿದ್ದ ಆ ಇನ್ನೊಬ್ಬ ಶಿಷ್ಯನು ಸಹ ಪ್ರವೇಶಿಸಿ, ಕಂಡು ನಂಬಿದನು.
Tunc ergo introivit et ille discipulus qui venerat primus ad monumentum: et vidit, et credidit:
9 ಯೇಸು ಸತ್ತವರೊಳಗಿಂದ ಪುನಃ ಎದ್ದು ಬರಬೇಕು ಎಂಬ ಪವಿತ್ರ ವೇದದ ವಾಕ್ಯವು ಅವರಿಗೆ ಇನ್ನೂ ತಿಳಿದಿರಲಿಲ್ಲ.
nondum enim sciebant Scripturam, quia oportebat eum a mortuis resurgere.
10 ತರುವಾಯ ಆ ಶಿಷ್ಯರು ಉಳಿದವರ ಬಳಿಗೆ ಹೊರಟು ಹೋದರು.
Abierunt ergo iterum discipuli ad semetipsos.
11 ಆದರೆ ಮರಿಯಳು ಸಮಾಧಿಯ ಹೊರಗೆ ಅಳುತ್ತಾ ನಿಂತಿದ್ದಳು. ಆಕೆಯು ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ,
Maria autem stabat ad monumentum foris, plorans. Dum ergo fleret, inclinavit se, et prospexit in monumentum:
12 ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳದಲ್ಲಿ ಬಿಳಿವಸ್ತ್ರಗಳನ್ನು ಧರಿಸಿದ್ದ ಇಬ್ಬರು ದೂತರು, ಒಬ್ಬನು ಯೇಸುವಿನ ತಲೆಯ ಕಡೆಗೂ ಮತ್ತೊಬ್ಬನು ಅವರ ಪಾದಗಳಿದ್ದ ಕಡೆಗೂ ಕುಳಿತಿರುವುದನ್ನು ಕಂಡಳು.
et vidit duos angelos in albis sedentes, unum ad caput, et unum ad pedes, ubi positum fuerat corpus Jesu.
13 ಅವರು ಆಕೆಗೆ, “ಅಮ್ಮಾ, ನೀನು ಏಕೆ ಅಳುತ್ತಿರುವೆ?” ಎಂದು ಕೇಳಲು, ಆಕೆಯು ಅವರಿಗೆ, “ನನ್ನ ಕರ್ತನನ್ನು ಅವರು ತೆಗೆದುಕೊಂಡು ಹೋಗಿದ್ದಾರೆ. ಕರ್ತನನ್ನು ಅವರು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ,” ಎಂದಳು.
Dicunt ei illi: Mulier, quid ploras? Dicit eis: Quia tulerunt Dominum meum: et nescio ubi posuerunt eum.
14 ಆಕೆಯು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಯೇಸು ನಿಂತಿರುವುದನ್ನು ಕಂಡಳು. ಆದರೆ ಅವರು ಯೇಸುವೇ ಎಂದು ಆಕೆಗೆ ತಿಳಿಯಲಿಲ್ಲ.
Hæc cum dixisset, conversa est retrorsum, et vidit Jesum stantem: et non sciebat quia Jesus est.
15 ಯೇಸು ಆಕೆಗೆ, “ಅಮ್ಮಾ, ನೀನು ಏಕೆ ಅಳುತ್ತಿರುವೆ? ಯಾರನ್ನು ಹುಡುಕುತ್ತಿರುವೆ?” ಎಂದು ಕೇಳಲು, ಆಕೆಯು ಅವರು ತೋಟಗಾರನೆಂದು ನೆನಸಿ ಅವರಿಗೆ, “ಅಯ್ಯಾ, ನೀನು ಅವರನ್ನು ತೆಗೆದುಕೊಂಡು ಹೋಗಿದ್ದರೆ ಎಲ್ಲಿ ಇಟ್ಟಿದ್ದೀ ಎಂದು ನನಗೆ ಹೇಳು; ನಾನು ಅವರನ್ನು ತೆಗೆದುಕೊಂಡು ಹೋಗುತ್ತೇನೆ,” ಎಂದಳು.
Dicit ei Jesus: Mulier, quid ploras? quem quæris? Illa existimans quia hortulanus esset, dicit ei: Domine, si tu sustulisti eum, dicito mihi ubi posuisti eum, et ego eum tollam.
16 ಯೇಸು ಆಕೆಗೆ, “ಮರಿಯಳೇ,” ಎಂದು ಹೇಳಲು, ಆಕೆಯು ತಿರುಗಿಕೊಂಡು ಹೀಬ್ರೂ ಭಾಷೆಯಲ್ಲಿ ಅವರಿಗೆ, “ರಬ್ಬೂನಿ!” ಎಂದಳು. ಹಾಗೆಂದರೆ “ಬೋಧಕನೇ” ಎಂದರ್ಥ.
Dicit ei Jesus: Maria. Conversa illa, dicit ei: Rabboni (quod dicitur Magister).
17 ಯೇಸು ಆಕೆಗೆ, “ನನ್ನನ್ನು ಹಿಡಿಯಬೇಡ, ಏಕೆಂದರೆ ನಾನು ಇನ್ನೂ ತಂದೆಯ ಬಳಿಗೆ ಹೋಗಲಿಲ್ಲ. ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವರಿಗೆ, ‘ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವ ತಂದೆಯ ಬಳಿಗೆ ನಾನು ಹೋಗುತ್ತೇನೆ’ ಎಂದು ತಿಳಿಸು,” ಎಂದರು.
Dicit ei Jesus: Noli me tangere, nondum enim ascendi ad Patrem meum: vade autem ad fratres meos, et dic eis: Ascendo ad Patrem meum, et Patrem vestrum, Deum meum, et Deum vestrum.
18 ಆಗ ಮಗ್ದಲದ ಮರಿಯಳು ಬಂದು, “ನಾನು ಕರ್ತನನ್ನು ಕಂಡಿದ್ದೇನೆ,” ಎಂದು ಹೇಳಿ, ಅವರು ತನಗೆ ಈ ಸಂಗತಿಗಳನ್ನು ಹೇಳಿದರೆಂದು ಶಿಷ್ಯರಿಗೆ ತಿಳಿಸಿದಳು.
Venit Maria Magdalene annuntians discipulis: Quia vidi Dominum, et hæc dixit mihi.
19 ಅದೇ ಭಾನುವಾರದ ಸಾಯಂಕಾಲದಲ್ಲಿ ಯೆಹೂದ್ಯರ ಭಯದಿಂದ ಶಿಷ್ಯರು ಕೂಡಿದ್ದ ಮನೆಯ ಬಾಗಿಲುಗಳು ಮುಚ್ಚಿದ್ದವು. ಆಗ ಯೇಸು ಬಂದು ಅವರ ಮಧ್ಯೆ ನಿಂತು, “ನಿಮಗೆ ಸಮಾಧಾನವಾಗಲಿ!” ಎಂದು ಅವರಿಗೆ ಹೇಳಿದರು.
Cum ergo sero esset die illo, una sabbatorum, et fores essent clausæ, ubi erant discipuli congregati propter metum Judæorum: venit Jesus, et stetit in medio, et dixit eis: Pax vobis.
20 ಇದನ್ನು ಹೇಳಿದ ಮೇಲೆ ತಮ್ಮ ಕೈಗಳನ್ನೂ ಪಕ್ಕೆಯನ್ನೂ ಅವರಿಗೆ ತೋರಿಸಿದರು. ಆಗ ಶಿಷ್ಯರು ಕರ್ತನನ್ನು ಕಂಡು ಸಂತೋಷಪಟ್ಟರು.
Et cum hoc dixisset, ostendit eis manus et latus. Gavisi sunt ergo discipuli, viso Domino.
21 ಯೇಸು ತಿರುಗಿ ಅವರಿಗೆ, “ನಿಮಗೆ ಸಮಾಧಾನವಾಗಲಿ, ತಂದೆಯು ನನ್ನನ್ನು ಕಳುಹಿಸಿದಂತೆಯೇ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ,” ಎಂದರು.
Dixit ergo eis iterum: Pax vobis. Sicut misit me Pater, et ego mitto vos.
22 ಯೇಸು ಇದನ್ನು ಹೇಳಿ ಅವರ ಮೇಲೆ ಉಸಿರೂದಿ ಅವರಿಗೆ, “ನೀವು ಪವಿತ್ರಾತ್ಮರನ್ನು ಪಡೆದುಕೊಳ್ಳಿರಿ.
Hæc cum dixisset, insufflavit, et dixit eis: Accipite Spiritum Sanctum:
23 ನೀವು ಯಾರ ಪಾಪಗಳನ್ನು ಕ್ಷಮಿಸುತ್ತೀರೋ ಅವು ಅವರಿಗೆ ಕ್ಷಮಿಸಲಾಗುವುದು ಮತ್ತು ಯಾರ ಪಾಪಗಳನ್ನು ನೀವು ಉಳಿಸುತ್ತೀರೋ ಅವು ಅವರಿಗೆ ಉಳಿಸಲಾಗುವುದು,” ಎಂದು ಹೇಳಿದರು.
quorum remiseritis peccata, remittuntur eis: et quorum retinueritis, retenta sunt.
24 ಆದರೆ ಯೇಸು ಬಂದಾಗ ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮನು ಎನಿಸಿಕೊಂಡ ತೋಮನು ಅವರ ಸಂಗಡ ಇರಲಿಲ್ಲ.
Thomas autem unus ex duodecim, qui dicitur Didymus, non erat cum eis quando venit Jesus.
25 ಉಳಿದ ಶಿಷ್ಯರು ಅವನಿಗೆ, “ನಾವು ಕರ್ತನನ್ನು ಕಂಡಿದ್ದೇವೆ,” ಎಂದು ಹೇಳಿದರು. ಆದರೆ ಅವನು ಅವರಿಗೆ, “ನಾನು ಅವರ ಕೈಗಳಲ್ಲಿ ಮೊಳೆಗಳ ಗುರುತನ್ನು ಕಂಡು, ಅದರಲ್ಲಿ ನನ್ನ ಬೆರಳನ್ನು ಇಟ್ಟು ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಹಾಕಿದ ಹೊರತು ನಂಬುವುದೇ ಇಲ್ಲ,” ಎಂದು ಹೇಳಿದನು.
Dixerunt ergo ei alii discipuli: Vidimus Dominum. Ille autem dixit eis: Nisi videro in manibus ejus fixuram clavorum, et mittam digitum meum in locum clavorum, et mittam manum meam in latus ejus, non credam.
26 ಎಂಟು ದಿವಸಗಳಾದ ಮೇಲೆ ಯೇಸುವಿನ ಶಿಷ್ಯರು ಪುನಃ ಮನೆಯ ಒಳಗಿದ್ದಾಗ ತೋಮನೂ ಅವರ ಸಂಗಡ ಇದ್ದನು. ಆಗ ಬಾಗಿಲುಗಳು ಮುಚ್ಚಿರಲಾಗಿ ಯೇಸು ಬಂದು ಮಧ್ಯದಲ್ಲಿ ನಿಂತು, “ನಿಮಗೆ ಸಮಾಧಾನವಾಗಲಿ!” ಎಂದರು.
Et post dies octo, iterum erant discipuli ejus intus, et Thomas cum eis. Venit Jesus januis clausis, et stetit in medio, et dixit: Pax vobis.
27 ಆಮೇಲೆ ಯೇಸು ತೋಮನಿಗೆ, “ನಿನ್ನ ಬೆರಳನ್ನು ಇಲ್ಲಿ ಇಡು. ನನ್ನ ಕೈಗಳನ್ನು ನೋಡು, ನಿನ್ನ ಕೈಚಾಚಿ ನನ್ನ ಪಕ್ಕೆಯಲ್ಲಿ ಇಡು. ನಂಬದವನಾಗಿರಬೇಡ, ನಂಬುವವನಾಗಿರು,” ಎಂದರು.
Deinde dicit Thomæ: Infer digitum tuum huc, et vide manus meas, et affer manum tuam, et mitte in latus meum: et noli esse incredulus, sed fidelis.
28 ಆಗ ತೋಮನು, “ನನ್ನ ಕರ್ತ, ನನ್ನ ದೇವರೇ!” ಎಂದನು.
Respondit Thomas, et dixit ei: Dominus meus et Deus meus.
29 ಯೇಸು ಅವನಿಗೆ, “ನೀನು ನನ್ನನ್ನು ಕಂಡಿದ್ದರಿಂದ ನಂಬಿದ್ದೀಯಾ? ಕಾಣದೆ ನಂಬಿದವರು ಧನ್ಯರು,” ಎಂದರು.
Dixit ei Jesus: Quia vidisti me, Thoma, credidisti: beati qui non viderunt, et crediderunt.
30 ಯೇಸು ಇನ್ನು ಬೇರೆ ಎಷ್ಟೋ ಸೂಚಕಕಾರ್ಯಗಳನ್ನು ಶಿಷ್ಯರ ಮುಂದೆ ಮಾಡಿದರು. ಅವುಗಳು ಈ ಪುಸ್ತಕದಲ್ಲಿ ಬರೆದಿಲ್ಲ.
Multa quidem et alia signa fecit Jesus in conspectu discipulorum suorum, quæ non sunt scripta in libro hoc.
31 ಆದರೆ ಯೇಸುವೇ ದೇವಪುತ್ರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ ನಂಬಿ ಅವರ ಹೆಸರಿನ ಮೂಲಕ ನಿತ್ಯಜೀವವನ್ನು ಪಡೆದುಕೊಳ್ಳುವಂತೆಯೂ ಇವುಗಳು ಬರೆಯಲಾಗಿದೆ.
Hæc autem scripta sunt ut credatis, quia Jesus est Christus Filius Dei: et ut credentes, vitam habeatis in nomine ejus.

< ಯೋಹಾನನು 20 >