< ಯೋಹಾನನು 13 >
1 ಅಂದು ಪಸ್ಕಹಬ್ಬದ ಹಿಂದಿನ ದಿನವಾಗಿತ್ತು. ಯೇಸು ತಾವು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ಸಮಯ ಬಂತೆಂದು ತಿಳಿದು, ಈ ಲೋಕದಲ್ಲಿದ್ದ ತಮ್ಮವರನ್ನು ಪ್ರೀತಿಸುತ್ತಿದ್ದ ಆ ಪ್ರೀತಿಯ ಪರಿಪೂರ್ಣತೆಯನ್ನು ಈಗ ತೋರಿಸಲಿದ್ದರು.
୧ନିସ୍ତାର୍ ପରବର୍ ଆଗ୍ତୁର୍ ଦିନ୍ ଅଇରଇଲା । ଜିସୁ, ଏ ଜଗତ୍ ଚାଡି ବାବା ପର୍ମେସରର୍ ଲଗେ ଜିବାକେ ତାର୍ ବେଲା କେଟ୍ଲାବେ ବଲି ଜାନିରଇଲା । ଦୁନିଆଇ ରଇବା ତାର୍ ସବୁ ଲକ୍ମନ୍କେ ସାରାସାରି ଜାକ ବେସି ଆଲାଦ୍ କର୍ତେରଇଲା ।
2 ಸಾಯಂಕಾಲ ಊಟದ ಸಮಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಯೋಚನೆಯನ್ನು, ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಹಾಕಿದ್ದನು.
୨ସେଦିନର୍ ରାତି ଜିସୁ ଆରି ତାର୍ ସିସ୍ମନ୍ କାଇବାକେ ବସିରଇଲାଇ । ଜିସୁକେ ବିସ୍ବାସେ ବିସ୍ ଦେଲାପାରା କରାଇବା ଚିନ୍ତା, ସଇତାନ୍ ସିମନ୍ ଇସ୍କାରିୟତର୍ ପିଲା ଜିଉଦାର୍ ମନେ ପୁରିକରି ଦେଲା ।
3 ತಂದೆಯು ತನ್ನ ಕೈಯಲ್ಲಿ ಎಲ್ಲವನ್ನೂ ಕೊಟ್ಟಿದ್ದಾರೆಂದೂ ತಾನು ದೇವರ ಬಳಿಯಿಂದ ಬಂದು ಮರಳಿ ದೇವರ ಬಳಿಗೆ ಹೋಗುತ್ತೇನೆಂದೂ ಯೇಸುವಿಗೆ ತಿಳಿದಿತ್ತು.
୩ବାବା ପର୍ମେସର୍, ତାକେ ସବୁ ବିସଇର୍ ଅଦିକାର୍ ଦେଇ ଆଚେ, ସେ ପର୍ମେସରର୍ ଟାନେଅନି ଆସିଆଚେ ଆରି ତାର୍ ଲଗେସେ ଜାଇସି, ବଲି ଜିସୁ ସବୁ ବିସଇ ଜାନିରଇଲା ।
4 ಯೇಸು ಊಟದಿಂದೆದ್ದು ತಮ್ಮ ಮೇಲು ಹೊದಿಕೆಯನ್ನು ತೆಗೆದಿಟ್ಟು ಅಂಗವಸ್ತ್ರವನ್ನು ತೆಗೆದುಕೊಂಡು ಸೊಂಟಕ್ಕೆ ಕಟ್ಟಿಕೊಂಡರು.
୪ତେବର୍ପାଇ ସେ କାଇବା ଜାଗାଇଅନି ଉଟିକରି ଅଡି ରଇବା ବସ୍ତର୍ ବେଟି ସଙ୍ଗଇ, ଆଁଟାଇ ଗଟେକ୍ ତୁଆଲ୍ ବାନ୍ଦିଅଇଲା ।
5 ಅನಂತರ ಅವರು ಬೋಗುಣಿಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಪಾದಗಳನ್ನು ತೊಳೆಯುವುದಕ್ಕೂ ತಾವು ಸೊಂಟಕ್ಕೆ ಕಟ್ಟಿಕೊಂಡ ಅಂಗವಸ್ತ್ರದಿಂದ ಪಾದಗಳನ್ನು ಒರೆಸುವುದಕ್ಕೂ ಪ್ರಾರಂಭಿಸಿದರು.
୫ତାର୍ ପଚେ ସେ ଗଟେକ୍ ମୁତାଇ ପାନିନେଲା ଆରି ନିଜର୍ ସିସ୍ମନର୍ ପାଦ୍ ଦଇକରି ବାନ୍ଦିଅଇଲା ତୁଆଲ୍ ବେଟି ପୁଚି ଦେବାର୍ ଦାର୍ଲା ।
6 ಯೇಸು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಯೇಸುವಿಗೆ, “ಸ್ವಾಮೀ, ನೀವು ನನ್ನ ಪಾದಗಳನ್ನು ತೊಳೆಯುತ್ತೀರೋ?” ಎಂದು ಕೇಳಿದನು.
୬ଜେଡେବେଲେ ଜିସୁ ସିମନ୍ ପିତରର୍ ଲଗେ ଆଇଲା, ପିତର୍ ତାକେ କଇଲା, “ମାପ୍ରୁ ତମେ ମର୍ ପାଦ୍ ଦଇସା କି?”
7 ಯೇಸು ಅವನಿಗೆ, “ನಾನು ಮಾಡುವುದು ಏನೆಂದು ಈಗ ನಿನಗೆ ಅರ್ಥವಾಗುವುದಿಲ್ಲ. ಆದರೆ ಇನ್ನು ಮುಂದೆ ನಿನಗೆ ಅರ್ಥವಾಗುವುದು,” ಎಂದರು.
୭ଜିସୁ ତାକେ କଇଲା, “ମୁଇ ଏବେ ଜାଇଟା କଲିନି, ସେଟା ତମେ ବୁଜି ନାପାରାସ୍, ମାତର୍ ପଚେ ବୁଜ୍ସା ।”
8 ಪೇತ್ರನು ಯೇಸುವಿಗೆ, “ನೀವು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು,” ಎಂದನು. ಯೇಸು ಅವನಿಗೆ, “ನಾನು ನಿನ್ನ ಪಾದಗಳನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇಲ್ಲ,” ಎಂದು ಹೇಳಿದರು. (aiōn )
୮ପିତର୍ ତାକେ ମନାକରି କଇଲା, “ନିଚୁ, ତମେ ମର୍ ପାଦ୍ ଦୁଆନାଇ ।” ଜିସୁ ତାକେ କଇଲା, “ମୁଇ ଜଦି ତର୍ ପାଦ୍ ନ ଦଇଲେ, କେବେ ମିସା ମର୍ ସିସ୍ ଅଇ ନାପାରୁସ୍ ।” (aiōn )
9 ಅದಕ್ಕೆ ಸೀಮೋನ ಪೇತ್ರನು ಯೇಸುವಿಗೆ, “ಸ್ವಾಮೀ, ನನ್ನ ಪಾದಗಳನ್ನು ಮಾತ್ರವಲ್ಲದೆ, ನನ್ನ ಕೈಗಳನ್ನು ಮತ್ತು ತಲೆಯನ್ನು ಸಹ ತೊಳೆ,” ಎಂದನು.
୯ସିମନ୍ ପିତର୍ ତାକେ କଇଲା, “ମାପ୍ରୁ ସେନ୍ତାର୍ଆଲେ କାଇକେ ମର୍ ପାଦ୍ସେ ଦଇ ଦେଇସୁ? ମର୍ ମୁଣ୍ଡ୍ ଆରି ଆତ୍ ମିସା ଦଇଦିଆସ୍ ।”
10 ಯೇಸು ಅವನಿಗೆ, “ಸ್ನಾನಮಾಡಿಕೊಂಡವರು ತಮ್ಮ ಪಾದಗಳನ್ನು ಮಾತ್ರ ತೊಳೆದುಕೊಂಡರೆ ಸಾಕು. ಅವರು ಸಂಪೂರ್ಣವಾಗಿ ಶುದ್ಧರಾಗಿದ್ದಾರೆ. ನೀವು ಸಹ ಶುದ್ಧರಾಗಿದ್ದೀರಿ. ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,” ಎಂದರು.
୧୦ଜିସୁ ପିତର୍କେ କଇଲା, “ଜନ୍ ଲକ୍ମନ୍ ଗାଦଇ ସାରିଆଚତ୍, ସେମନ୍ ପୁରାପୁରୁନ୍ ସୁକଲ୍ । ପାଦ୍ ଦଇବାଟା ଚାଡି, କାଇଟା ଦଇବାର୍ ଲଡାନାଇ । ଗଟେକ୍ ଲକ୍କେ ଚାଡି, ତମେ ସବୁଲକ୍ ସୁକଲ୍ ଆଚାସ୍ ।”
11 ತನ್ನನ್ನು ಹಿಡಿದುಕೊಡುವವನು ಯಾರೆಂದು ಯೇಸು ತಿಳಿದಿದ್ದರಿಂದ, “ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,” ಎಂದು ಹೇಳಿದರು.
୧୧କାଇକେ ବଇଲେ ଜନ୍ ସିସ୍ ଜିସୁକେ ସତ୍ରୁମନ୍କେ ଦାରାଇଦେଇସି ତାକେ ଜିସୁ ଜାନି ରଇଲା । ସେଟାର୍ ପାଇ ସେ ଗଟେକ୍ ଲକ୍କେ ଚାଡି ସବୁଲକ୍ ସୁକଲ୍ ଆଚାସ୍ ବଲି କଇଲା ।
12 ಯೇಸು ಅವರ ಪಾದಗಳನ್ನು ತೊಳೆದ ಮೇಲೆ ತಮ್ಮ ಮೇಲು ಹೊದಿಕೆಯನ್ನು ಧರಿಸಿ, ತಮ್ಮ ಸ್ಥಳದಲ್ಲಿ ಕುಳಿತುಕೊಂಡು ಅವರಿಗೆ, “ನಾನು ನಿಮಗೆ ಮಾಡಿದ್ದು ಏನೆಂದು ಅರ್ಥವಾಯಿತೋ?
୧୨ଜିସୁ ସିସ୍ମନର୍ ପାଦ୍ ଦଇଲା ପଚେ ବେଟିରଇଲା ବସ୍ତର୍ ପିନ୍ଦିକରି ବସି ସେମନ୍କେ ପାଚାର୍ଲା, “ଏବେ ମୁଇ ତମର୍ ପାଇ କଲା କାମ୍ ବୁଜ୍ଲାସ୍ନି କି?”
13 ನೀವು ನನ್ನನ್ನು ‘ಬೋಧಕರೇ’ ಮತ್ತು ‘ಕರ್ತಾ’ ಎಂದು ಕರೆಯುತ್ತೀರಿ. ನೀವು ಹೇಳುವುದು ಸರಿ. ಹೌದು, ನಾನು ಅಂಥವನೇ ಆಗಿದ್ದೇನೆ.
୧୩ଆରି ସେ କଇଲା, “ତମେ ମକେ ଗୁରୁ ଆରି ମାପ୍ରୁ ବଲି ଡାକ୍ଲାସ୍ନି, ସେଟା ଟିକ୍ସେ । କାଇକେ ବଇଲେ ଗୁରୁ ଆରି ମାପ୍ରୁ ମୁଇସେ ।”
14 ಹಾಗಾದರೆ ನಿಮ್ಮ ಕರ್ತನೂ ಬೋಧಕನೂ ಆಗಿರುವ ನಾನೇ ನಿಮ್ಮ ಪಾದಗಳನ್ನು ತೊಳೆದಿರುವಾಗ ನೀವು ಸಹ ಒಬ್ಬರ ಪಾದಗಳನ್ನೊಬ್ಬರು ತೊಳೆಯಬೇಕು.
୧୪ମୁଇ ତମର୍ ଗୁରୁ ଆରି ମାପ୍ରୁ ଅଇକରି, ତମର୍ ପାଦ୍ ଦଇଦେଲି ଆଚି ବଇଲେ ତମେ ମିସା ତମର୍ ତମର୍ ବିତ୍ରେ ପାଦ୍ ଦଇବାର୍ ଆଚେ ।
15 ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ಕೊಟ್ಟಿದ್ದೇನೆ.
୧୫ମୁଇ ଏଟା ତମର୍ ପାଇ ଗଟେକ୍ ଉଦାଅରଣ୍ ପାରା କଲିଆଚି, ତମେ ମିସା ବିନ୍ ଲକ୍ମନ୍କେ ଏନ୍ତି କରା ।
16 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತನ್ನ ಧಣಿಗಿಂತ ಆಳು ದೊಡ್ಡವನಲ್ಲ, ಹಾಗೆಯೇ ಕಳುಹಿಸಲಾದವನು ಅವನನ್ನು ಕಳುಹಿಸಿದವನಿಗಿಂತ ದೊಡ್ಡವನಲ್ಲ.
୧୬ମୁଇ ତମ୍କେ ସତ୍ କାତା କଇଲିନି, ଗତିଦାଙ୍ଗ୍ଡା ନିଜର୍ ସାଉକାରର୍ ତେଇଅନି ବଡ୍ ନଏଁ । ଆରି କବର୍ ନେଉଁ କବର୍ ପାଟାଇଲା ଲକର୍ତେଇଅନି ବଡ୍ ନଏଁ ।
17 ನೀವು ಇವುಗಳನ್ನು ತಿಳಿದುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.
୧୭ଜଦି ତମେ ଏ ସବୁ ବିସଇ ଜାନିଆଚାସ୍, ଆରି ସେ ଇସାବେ କର୍ସା ବଇଲେ ବେସି ସାର୍ଦା ଅଇସା ।
18 “ನಾನು ನಿಮ್ಮೆಲ್ಲರನ್ನು ಕುರಿತು ಮಾತನಾಡುತ್ತಿಲ್ಲ. ನಾನು ಆರಿಸಿಕೊಂಡವರನ್ನು ನಾನು ಬಲ್ಲೆನು. ಆದರೆ ‘ನನ್ನ ಸಂಗಡ ರೊಟ್ಟಿಯನ್ನು ತಿಂದವನೇ, ನನಗೆ ದ್ರೋಹ ಬಗೆದನು,’ ಎಂಬ ಪವಿತ್ರ ವಾಕ್ಯವು ನೆರವೇರಬೇಕಾಗಿದೆ.
୧୮ମୁଇ ତମର୍ ସବୁ ଲକର୍ ବିସଇ ନେଇକରି କଇନାଇ, ଜନ୍ ଲକ୍ମନ୍କେ ବାଚି ଆଚି, ସେମନ୍ କେନ୍ତି ବଲି ଜାନିଆଚି । ମାତର୍ ସାସ୍ତରେ ଲେକା ଅଇଲା କାତା ସିଦ୍ ଅଇବାକେ ଏନ୍ତି ଗଟ୍ନା ଅଇଲାନି । ସାସ୍ତରେ ଲେକା ଅଇଲା ଆଚେ ଜେ ମର୍ ସଙ୍ଗ୍ କାଇଲାନି ସେ ମର୍ ବିରଦେ ଉଟ୍ସି ।
19 “ಅದು ಆಗುವುದು, ‘ನಾನೇ ಆತನು’ ಎಂದು ನೀವು ನಂಬುವಂತೆ ಅದು ಸಂಭವಿಸುವುದಕ್ಕಿಂತ ಮುಂಚೆ ಈಗಲೇ ನಿಮಗೆ ಹೇಳುತ್ತಿದ್ದೇನೆ.
୧୯ଏବେ ଏ ଗଟ୍ନା ଅଇବା ଆଗ୍ତୁସେ ମୁଇ ତମ୍କେ ଏ କାତା କଇଲିନି । ଜେଡେବେଲା ଏ ଗଟ୍ନା ଗଟ୍ସି, ତମେ ମୁଇ ମସିଅ ବଲି ବିସ୍ବାସ୍ କର୍ସା ।
20 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ಕಳುಹಿಸಿದ ತಂದೆಯನ್ನು ಸ್ವೀಕರಿಸುವವನು ನನ್ನನ್ನು ಸ್ವೀಕರಿಸುತ್ತಾನೆ; ನನ್ನನ್ನು ಸ್ವೀಕರಿಸುವವನು ನನ್ನನ್ನು ಕಳುಹಿಸಿದ ತಂದೆಯನ್ನೇ ಸ್ವೀಕರಿಸುತ್ತಾನೆ.”
୨୦“ତମ୍କେ ସତ୍ କାତା କଇଲିନି, ଜନ୍ ଲକ୍ମନ୍ ମର୍ କବର୍ ନେବା ଲକ୍ମନ୍କେ ନାମ୍ବାଇ, ସେମନ୍ ମକେ ମିସା ନାମ୍ବାଇ, ଆରି ମକେ ପାଟାଇଲା ପର୍ମେସର୍କେ ମିସା ନାମ୍ବାଇ ।”
21 ಯೇಸು ಇವುಗಳನ್ನು ಹೇಳುತ್ತಾ ಆತ್ಮದಲ್ಲಿ ನೊಂದುಕೊಂಡವರಾಗಿ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಬಗೆಯುವನು,” ಎಂದು ಸ್ವಷ್ಟವಾಗಿ ಹೇಳಿದರು.
୨୧ଜିସୁ ଏ ସବୁ କାତା କଇସାରାଇଲା ପଚେ, ଆତ୍ମାଇ ବାୟାବିକଲ୍ ଅଇ ପୁଟ୍କାର୍ କରି କଇଲା, “ମୁଇ ତମ୍କେ ସତ୍ କାତା କଇଲିନି, ତମର୍ ବିତ୍ରେଅନି ଗଟେକ୍ ଲକ୍ ମକେ ବିସ୍ବାସେ ବିସ୍ ଦେଲାପାରା କର୍ସି ।”
22 ಆಗ ಶಿಷ್ಯರು ಗಲಿಬಿಲಿಗೊಂಡು, “ಯೇಸು ಯಾರನ್ನು ಕುರಿತು ಹೇಳಿದರು?” ಎಂದು ಒಬ್ಬರನ್ನೊಬ್ಬರು ನೋಡುವವರಾದರು.
୨୨ସେ ଏ କାତା, କାର୍ ବିସଇ ନେଇକରି କଇଲାନି ବଲି ସିସ୍ମନ୍ ବୁଜିନାପାରି ନିଜର୍ ନିଜର୍ ବିତ୍ରେ ଆର୍ ମୁଏ ସେ ତାର୍ ମୁଏ ଏ, ଦେକାଦେକି ଅଇବାର୍ ଦାର୍ଲାଇ ।
23 ಶಿಷ್ಯರಲ್ಲಿ ಯೇಸು ಪ್ರೀತಿಸಿದ ಒಬ್ಬನು ಅವರ ಎದೆಗೆ ಒರಗಿಕೊಂಡಿದ್ದನು.
୨୩ଜିସୁର୍ ସିସ୍ମନର୍ ବିତ୍ରେଅନି ଜଅନ୍, ଜାକେକି ଜିସୁ ମୁକିଅ ଇସାବେ ଆଲାଦ୍ କର୍ତେ ରଇଲା, ସେ ଜିସୁର୍ ଲଗେ ବସିକରି କାଇତେ ରଇଲା ।
24 ಸೀಮೋನ ಪೇತ್ರನು ಅವನಿಗೆ ಸನ್ನೆಮಾಡಿ, “ಅವರು ಯಾರ ವಿಷಯವಾಗಿ ಮಾತನಾಡಿದರು ಕೇಳು,” ಎಂದು ಹೇಳಿದನು.
୨୪ସିମନ୍ ପିତର୍ ଜଅନ୍କେ ସଗିଆ କରି କଇଲା, “ସେ କାର୍ ବିସଇ ନେଇକରି କଇଲାନି, ତାକେ ପାଚାର୍ ।”
25 ಅವನು ಯೇಸುವಿನ ಎದೆಗೆ ಒರಗಿಕೊಂಡವನಾಗಿ, “ಸ್ವಾಮೀ, ಅವನು ಯಾರು?” ಎಂದು ಯೇಸುವನ್ನು ಕೇಳಿದನು.
୨୫ସେଟାର୍ ପାଇ ଜଅନ୍ ଜିସୁର୍ ଉପ୍ରେ ଆଉଜି ଅଇକରି ପାଚାର୍ଲା, “ଏ ମାପ୍ରୁ, ସେ ଲକ୍ କେ?”
26 ಅದಕ್ಕೆ ಯೇಸು, “ನಾನು ರೊಟ್ಟಿಯ ತುಂಡನ್ನು ಅದ್ದಿ ಯಾವನಿಗೆ ಕೊಡುತ್ತೇನೋ ಅವನೇ,” ಎಂದರು. ತರುವಾಯ, ಆ ರೊಟ್ಟಿಯ ತುಂಡನ್ನು ಅದ್ದಿ ಸೀಮೋನನ ಮಗನಾದ ಯೂದ ಇಸ್ಕರಿಯೋತನಿಗೆ ಕೊಟ್ಟರು.
୨୬ଜିସୁ କଇଲା, “ମୁଇ ଏ ରୁଟି ଜଲେ ଚବାଲି ଜାକେ ଦେବି, ସେ ଲକ୍ ସେ ।” ସେବେଲେ ସେ ରୁଟି ଜଲେ ଚବାଲି କରି ସିମନ୍ ଇସ୍କାରିୟତର୍ ପିଲା ଜିଉଦାକେ ଦେଲା ।
27 ಅವನು ರೊಟ್ಟಿಯ ತುಂಡನ್ನು ತೆಗೆದುಕೊಂಡು ತಿಂದನು. ಅನಂತರ ಸೈತಾನನು ಅವನೊಳಗೆ ಪ್ರವೇಶಿಸಿದನು. ಆಗ ಯೇಸು ಅವನಿಗೆ, “ನೀನು ಮಾಡುವುದನ್ನು ಬೇಗನೆ ಮಾಡು,” ಎಂದು ಹೇಳಿದರು.
୨୭ଇସ୍କାରିୟତ୍ ଜିଉଦା ରୁଟି ମାଙ୍ଗ୍ଲା ଦାପ୍ରେ ସଇତାନ୍ ତାର୍ ମନ୍ ବିତ୍ରେ ଜାଇକରି ଚାଲାଇବାର୍ ଦାର୍ଲା । ଜିସୁ ସେ ବେଲାଇ ତାକେ କଇଲା, “ତୁଇ ଜାଇଟା କର୍ବାକେ ଗାଲୁସ୍ନି ବେଗି କର୍ ।”
28 ಆದರೆ ಯೇಸು ಅವನಿಗೆ ಇದನ್ನು ಏಕೆ ಹೇಳಿದರೆಂದು ಕುಳಿತವರಲ್ಲಿ ಯಾರಿಗೂ ಗೊತ್ತಾಗಲಿಲ್ಲ.
୨୮ଜିସୁ ଏ କାତା ଇସ୍କାରିୟତ୍ ଜିଉଦାକେ କାଇକେ କଇଲା, ତେଇ କାଇବାକେ ବସି ରଇଲା ଲକ୍ମନର୍ ବିତ୍ରେଅନି କେମିସା, ବୁଜି ନାପାର୍ଲାଇ ।
29 ಏಕೆಂದರೆ ಯೂದನು ಹಣದ ಚೀಲವನ್ನು ಇಟ್ಟುಕೊಂಡಿದ್ದರಿಂದ ಯೇಸು ಅವನಿಗೆ, ಹಬ್ಬಕ್ಕೆ ನಮಗೆ ಅವಶ್ಯವಾದವುಗಳನ್ನು ಕೊಂಡುಕೋ, ಎಂದೋ ಬಡವರಿಗೆ ಏನಾದರೂ ಕೊಡು ಎಂದೋ ಯೇಸು ಅವನಿಗೆ ಹೇಳಿದರೆಂದು ಅವರಲ್ಲಿ ಕೆಲವರು ಭಾವಿಸಿದರು.
୨୯ଇସ୍କାରିୟତ୍ ଜିଉଦାର୍ ଲଗେ ଡାବୁ ପେଡି ରଇଲାଜେ କେତେଟା ସିସ୍ମନ୍ ପାଚାର୍ଲାଇ, “ପରବ୍ ପାଇ କାଇକାଇଟା ଦର୍କାର୍ ଆଚେ, ସେଟାର୍ପାଇ ନଇଲେ ଗରିବ୍ ଲକ୍ମନ୍କେ ଦାନ୍ଦେବାକେ ଜିସୁ ତାକେ କଇଲାଆଚେ ।”
30 ಯೂದನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ ಹೊರಗೆ ಹೋದನು. ಆಗ ರಾತ್ರಿಯಾಗಿತ್ತು.
୩୦ତାର୍ ପଚେ ଇସ୍କାରିୟତ ଜିଉଦା ରୁଟି ମାଙ୍ଗି ଦାପ୍ରେ ବାରଇକରି ଉଟିଗାଲା । ସେ ବେଲେ ରାତି ଅଇରଇଲା ।
31 ಅವನು ಹೊರಟುಹೋದ ಮೇಲೆ ಯೇಸು, “ಈಗ ಮನುಷ್ಯಪುತ್ರನಾದ ನಾನು ಮಹಿಮೆ ಹೊಂದಲಿದ್ದೇನೆ. ದೇವರೂ ನನ್ನಲ್ಲಿ ಮಹಿಮೆ ಹೊಂದುವರು.
୩୧ଇସ୍କାରିୟତ୍ ଜିଉଦା ବାରଇକରି ଉଟିଗାଲା ପଚେ ଜିସୁ କଇଲା, “ଏବେ ପର୍ମେସରର୍ ତେଇଅନି ଆଇଲା ନର୍ପିଲା ମୁଇ ତାର୍ଟାନେଅନି ଡାକ୍ପୁଟା ପାଇବା ବେଲା ଆସିଆଚେ । ଆରି ମର୍ ଲାଗି ପର୍ମେସର୍ ମିସା ଡାକ୍ପୁଟା ପାଇସି ।
32 ದೇವರು ಮನುಷ್ಯಪುತ್ರನಾದ ನನ್ನಲ್ಲಿ ಮಹಿಮೆ ಪಟ್ಟರೆ, ದೇವರು ಸಹ ಮನುಷ್ಯಪುತ್ರನಾದ ನನ್ನನ್ನು ತಮ್ಮಲ್ಲಿ ಮಹಿಮೆಪಡಿಸುವರು ಮತ್ತು ತಕ್ಷಣವೇ ಮಹಿಮೆಪಡಿಸುವರು.
୩୨ଜଦି ପର୍ମେସର୍ ମର୍ତେଇଅନି ଡାକ୍ପୁଟା ଅଇଲେ, ନିଜର୍ ମଇମାସଙ୍ଗ୍ ନର୍ପିଲା ମକେ ମିସା ଡାକ୍ପୁଟା କରାଇସି । ଦାପ୍ରେସେ ମକେ ସେନ୍ତି କରାଇସି ।
33 “ನನ್ನ ಮಕ್ಕಳೇ, ಇನ್ನು ಸ್ವಲ್ಪ ಕಾಲವೇ ನಾನು ನಿಮ್ಮೊಡನೆ ಇರುತ್ತೇನೆ. ‘ನೀವು ನನ್ನನ್ನು ಹುಡುಕುವಿರಿ, ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದಿ ನಾಯಕರಿಗೆ ಹೇಳಿದಂತೆಯೇ ನಿಮಗೂ ಈಗ ಹೇಳುತ್ತೇನೆ.
୩୩ଏ ମର୍ ପିଲାମନ୍ ମୁଇ ତମର୍ ସଙ୍ଗ୍ ଚନେକର୍ପାଇ ରଇବି । ତାର୍ ପଚେ ତମେ ମକେ କଜ୍ସା, ଆରି ମୁଇ ଜନ୍ତି ଗାଲିନି ତମେ ତେଇ ଜାଇନାପାରାସ୍ । ଏ ବିସଇ ଜିଉଦି ନେତାମନ୍କେ ଜେନ୍ତି କଇରଇଲି, ସେନ୍ତି ଏବେ ତମ୍କେ ଆରିତରେକ୍ କଇଲିନି ।
34 “ನಾನು ನಿಮಗೊಂದು ಹೊಸ ಆಜ್ಞೆಯನ್ನು ಕೊಡುತ್ತೇನೆ: ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು.
୩୪ମୁଇ ତମ୍କେ ଗଟେକ୍ ନୁଆ ଆଦେସ୍ ଦେଲିନି, ତମେ ତମର୍ ନିଜର୍ ନିଜର୍ ବିତ୍ରେ ଆଲାଦ୍ କରା । ମୁଇ ଜେନ୍ତି ତମ୍କେ ଆଲାଦ୍ କଲିଆଚି, ତମେ ମିସା ନିଜର୍ ନିଜର୍ ବିତ୍ରେ ଆଲାଦ୍ କର୍ବାର୍ଆଚେ ।
35 ನಿಮಗೆ ಪರಸ್ಪರ ಪ್ರೀತಿಯಿದ್ದರೆ, ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಿದುಕೊಳ್ಳುವರು,” ಎಂದು ಹೇಳಿದರು.
୩୫ତମର୍ ନିଜର୍ ନିଜର୍ ବିତ୍ରେ ଆଲାଦ୍ ରଇଲେ, ତମେ ମର୍ ସିସ୍ ବଲି ସବୁଲକ୍ ଜାନ୍ବାଇ ।”
36 ಸೀಮೋನ ಪೇತ್ರನು ಯೇಸುವಿಗೆ, “ಸ್ವಾಮೀ, ನೀವು ಎಲ್ಲಿಗೆ ಹೋಗುತ್ತೀರಿ?” ಎಂದು ಕೇಳಿದ್ದಕ್ಕೆ, ಯೇಸು ಅವನಿಗೆ, “ನಾನು ಹೋಗುವ ಕಡೆಗೆ ಈಗ ನೀನು ನನ್ನನ್ನು ಹಿಂಬಾಲಿಸಲಾರೆ, ನಂತರ ಹಿಂಬಾಲಿಸುವೆ,” ಎಂದರು.
୩୬ସିମନ୍ ପିତର୍ ଜିସୁକେ ପାଚାର୍ଲା, “ଏ ମାପ୍ରୁ ତମେ କନ୍ତି ଗାଲାସ୍ନି?” ଜିସୁ କଇଲା, “ମୁଇ ଜନ୍ତି ଗାଲିନି ସେ ଜାଗାଇ ଏବେ ତୁଇ ଆସି ନାପାରୁସ୍ ମାତର୍ ପଚେ ଆଇସୁ ।”
37 ಪೇತ್ರನು ಯೇಸುವಿಗೆ, “ಕರ್ತದೇವರೇ, ನಾನು ಈಗ ನಿಮ್ಮನ್ನು ಏಕೆ ಹಿಂಬಾಲಿಸಲಾರೆನು? ನಿಮಗಾಗಿ ನನ್ನ ಪ್ರಾಣವನ್ನೇ ಕೊಡುವೆನು,” ಎಂದನು.
୩୭ପିତର୍ ଜିସୁକେ କଇଲା, “ଏ ମାପ୍ରୁ ଏବେ କାଇକେ ତମର୍ ପଚେ ପଚେ ଆସିନାପାରି? ମୁଇ ତମର୍ପାଇ ମର୍ବାକେ ମିସା ରାଜିଆଚି ।”
38 ಯೇಸು ಅವನಿಗೆ, “ನೀನು ನನಗಾಗಿ ನಿನ್ನ ಪ್ರಾಣವನ್ನೇ ಕೊಡುವೆಯೋ? ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ನನ್ನನ್ನು ಮೂರು ಸಾರಿ ನಿರಾಕರಿಸುವ ತನಕ ಹುಂಜ ಕೂಗುವುದೇ ಇಲ್ಲ,” ಎಂದರು.
୩୮ଜିସୁ ତାକେ କଇଲା, “ତୁଇ କାଇକେ ମର୍ପାଇ ମର୍ସୁ? ମୁଇ ତକେ ସତ୍ କାତା କଇଲିନି କୁକୁଡା ନ ଡାକ୍ତେ ତୁଇ ମକେ ତିନ୍ ତର୍ ନାଜାନି ବଲି କଇସୁ ।”