< ಯೋಬನು 6 >
1 ಅದಕ್ಕೆ ಯೋಬನು ಉತ್ತರವಾಗಿ ಹೀಗೆಂದನು:
Na Hiob buaa sɛ,
2 “ಅಯ್ಯೋ, ನನ್ನ ವ್ಯಥೆಯನ್ನು ತೂಕಮಾಡಿ ನೋಡಿದರೆ ಒಳ್ಳೇದು, ನನ್ನ ದುಃಖವನ್ನೆಲ್ಲಾ ತಕ್ಕಡಿಗೆ ಹಾಕಿದರೆ ಲೇಸು.
“Sɛ wɔbɛtumi akari mʼawerɛhodie na me haw nso wɔde agu nsania so a,
3 ಏಕೆಂದರೆ ನನ್ನ ಕಷ್ಟ ಈಗಲೇ ಸಮುದ್ರದ ಮರಳಿಗಿಂತ ಭಾರವಾಗಿದೆ; ನನ್ನ ಮಾತುಗಳು ದುಡುಕಿದ್ದರಲ್ಲಿ ಆಶ್ಚರ್ಯವಿಲ್ಲ.
anka emu bɛyɛ duru asene anwea a ɛwɔ ɛpo mu nyinaa, enti ɛnyɛ nwanwa sɛ me nsɛm ayɛ hagyahagya.
4 ಸರ್ವಶಕ್ತರ ಬಾಣಗಳು ನನ್ನಲ್ಲಿ ನಾಟಿವೆ; ಅವುಗಳ ವಿಷವನ್ನು ನನ್ನ ಆತ್ಮವು ಹೀರುತ್ತಿದೆ; ದೇವರ ವಿಷಯವಾದ ಹೆದರಿಕೆಗಳು ನನ್ನನ್ನು ಸುತ್ತುವರೆದಿವೆ.
Otumfoɔ agyan no awɔ me mu, me honhom nom ano awuduro no; wɔahyehyɛ Onyankopɔn ahunahuna nyinaa atia me.
5 ಹುಲ್ಲು ಇರುವಾಗ ಕಾಡುಕತ್ತೆಯು ಅರಚುವುದೋ? ಮೇವು ಇದ್ದರೆ ಎತ್ತು ಕೂಗುವುದೋ?
Wiram afunumu su wɔ ɛberɛ a wanya ɛserɛ anaa, na nantwie nso su wɔ ɛberɛ a wanya nʼaduane anaa?
6 ರುಚಿ ಇಲ್ಲದ ಆಹಾರನ್ನು ಉಪ್ಪಿಲ್ಲದೆ ತಿನ್ನಬಹುದೋ? ಕೋಳಿ ಮೊಟ್ಟೆಯ ಲೋಳೆಯಲ್ಲಿ ರುಚಿಯುಂಟೋ?
Wɔdi aduane a nkyene nni mu anaa, na kosua mu fufuo nso ɔdɛ bi wɔ mu anaa?
7 ಮುಟ್ಟಲು ಕೂಡ ನನಗೆ ಇಷ್ಟವಾಗಲಿಲ್ಲ, ಅಂಥ ಆಹಾರವು ನನಗೆ ಬೇಸರ.
Mempɛ sɛ mede me nsa ka; aduane a ɛte saa no bɔ me yadeɛ.
8 “ದೇವರು ನನ್ನ ವಿಜ್ಞಾಪನೆಯನ್ನು ಲಾಲಿಸಿದರೆ ಸಾಕು, ನಾನು ನಿರೀಕ್ಷಿಸಿದ್ದನ್ನು ದೇವರು ಕೊಟ್ಟರೆ ಲೇಸು.
“Ao sɛ me nsa bɛka mʼabisadeɛ, sɛ Onyankopɔn bɛyɛ deɛ mʼani da so ama me.
9 ನನ್ನನ್ನು ಜಜ್ಜುವುದು ದೇವರಿಗೆ ಮೆಚ್ಚಿಗೆಯಾದರೆ, ದೇವರು ತಮ್ಮ ಕೈಚಾಚಿ ನನ್ನ ಪ್ರಾಣವನ್ನು ತೆಗೆದುಕೊಳ್ಳಲಿ.
Mepɛ sɛ Onyankopɔn dwerɛ me, sɛ ɔbɛtwe ne nsa na wakum me,
10 ಹಾಗಿದ್ದರೆ, ಇದು ನನಗೆ ಆದರಣೆಯಾಗಿರುವುದು; ಪರಿಶುದ್ಧ ದೇವರ ಮಾತುಗಳನ್ನು ನನ್ನ ಅತ್ಯಂತ ಯಾತನೆಯಲ್ಲಿಯೂ ನಾನು ನಿರಾಕರಿಸಲಿಲ್ಲ; ಇದರಿಂದ ಬರುವ ಆನಂದವು ನನಗೆ ಇನ್ನೂ ಇರುವುದು.
ɛnneɛ anka mɛkɔ so anya saa awerɛkyekyerɛ yi. Nanso, ɔyea yi nyinaa akyi no memmuu Ɔkronkronni no nsɛm so da.
11 “ನಾನು ನಿರೀಕ್ಷೆಯಿಂದಿರಲು, ನನಗೆ ಶಕ್ತಿ ಎಲ್ಲಿದೆ? ನಾನು ಸಹನೆಯಿಂದಿರಲು, ನನಗೆ ಭವಿಷ್ಯ ಏನಿದೆ?
“Ahoɔden bɛn na mewɔ a enti ɛsɛ sɛ menya anidasoɔ? Daakye nneɛma pa bɛn enti na ɛsɛ sɛ menya ntoboaseɛ?
12 ನನ್ನ ಶಕ್ತಿ ಕಲ್ಲುಗಳ ಶಕ್ತಿಯೋ? ನನ್ನ ಶರೀರ ಕಂಚಿನ ಶರೀರವೋ?
Mewɔ ahoɔden sɛ ɛboɔ anaa? Me honam yɛ kɔbere mfrafraeɛ anaa?
13 ನನಗೆ ಸಹಾಯವು ಇಲ್ಲದೆ ಹೋಗಿದೆಯಲ್ಲಾ? ಈಗ ಯಶಸ್ಸು ಸಹ ನನ್ನಿಂದ ತೊಲಗಿಹೋಗಿದೆಯಲ್ಲಾ.
Mewɔ tumi a mede bɛboa me ho anaa? Saa ɛberɛ yi a nkonimdie apare me yi?
14 “ಒಬ್ಬನು ಸರ್ವಶಕ್ತರ ಮೇಲಣ ಭಯಭಕ್ತಿಯನ್ನು ಬಿಡುವವನಾಗಿದ್ದರೂ, ಅವನ ಮಿತ್ರನು ಅವನಿಗೆ ದಯೆ ತೋರಿಸಬೇಕು.
“Deɛ nʼanidasoɔ asa no hia ne nnamfonom mpaeɛbɔ, ɛnyɛ saa a, ɔbɛpa aba wɔ Otumfoɔ no suro ho.
15 ಆದರೆ ನನ್ನ ಸಹೋದರರಾದರೋ, ಉಕ್ಕಿ ಹರಿಯುವ ತೊರೆಯಂತೆಯೂ, ಬತ್ತಿದ ಹಳ್ಳದಂತೆಯೂ ಅಪನಂಬಿಗಸ್ತರಾಗಿದ್ದಾರೆ.
Nanso ahotosoɔ nni me nuanom mu. Wɔte sɛ nsuwa nsuwa a ɛyirie na ɛweɛ, wɔte sɛ nsuwa nsuwa a ɛyirie
16 ಅವು ಮಂಜುಗಡ್ಡೆಯಿಂದ ಕಪ್ಪಾಗಿವೆ, ಅವುಗಳಲ್ಲಿ ಹಿಮ ಅಡಗಿಕೊಳ್ಳುತ್ತದೆ.
ɛberɛ a sukyerɛmma renane na asukɔtweaa nso redane nsuo,
17 ಉಷ್ಣ ಸಮಯದಲ್ಲಿ ಅವು ಹರಿಯುವದಿಲ್ಲ; ಸೆಕೆಯಾದಾಗ ಬತ್ತಿ ಅದರ ಸ್ಥಳದಿಂದ ಮಾಯವಾಗುತ್ತವೆ.
nanso owiaberɛ mu no, ɛntene bio na ɔhyew enti nsuo no tu yera.
18 ಇಂಥಾ ತೊರೆಗಳ ಮಾರ್ಗವಾಗಿ ಪ್ರಯಾಣ ಮಾಡುವ ವರ್ತಕರ ಗುಂಪುಗಳು, ದಾರಿತಪ್ಪಿ ಮರಳುಗಾಡಿನಲ್ಲಿ ಅಲೆದು ನಾಶವಾಗುತ್ತವೆ.
Akwantufoɔ mane firi wɔn akwan so; wɔforo kɔ nsase bonini so na wɔwuwu.
19 ತೇಮದ ವರ್ತಕರ ಗುಂಪುಗಳು ನೀರಿಗಾಗಿ ಹಂಬಲಿಸುತ್ತಾರೆ; ಶೆಬದ ವ್ಯಾಪಾರಿಗಳು ನಿರೀಕ್ಷೆಯಿಂದ ನೋಡುತ್ತಾರೆ.
Tema akwantufoɔ hwehwɛ nsuo, adwadifoɔ akwantufoɔ a wɔfiri Seba de anidasoɔ hwehwɛ nsuo.
20 ಅವರು ನಿರೀಕ್ಷಿಸಿದ್ದರಿಂದ ವ್ಯಥೆಗೊಂಡರು; ಅವರು ಬಂದು ಸ್ಥಳಸೇರಿದರೂ ನಿರಾಶರಾದರು.
Wɔn ho yera wɔn, ɛfiri sɛ na wɔwɔ awerɛhyɛmu; wɔduruu hɔ, nanso wɔn anidasoɔ yɛ ɔkwa.
21 ಈಗ ನೀವು ಸಹ ಹಾಗೆಯೇ ನಿಸ್ಸಹಾಯಕರಾಗಿ ಇದ್ದೀರಿ; ಏಕೆಂದರೆ ನೀವು ನನ್ನ ವಿಪತ್ತನ್ನು ಕಂಡು ಹಿಂಜರಿಯುತ್ತೀರಿ.
Afei wo nso woakyerɛ sɛ wo ho nni mfasoɔ; Woahunu mʼamanehunu no, na ama woasuro.
22 ನಾನು ನಿಮ್ಮನ್ನು, ‘ನನಗೆ ದಾನಮಾಡಿರಿ,’ ಎಂದು ಬಿನ್ನವಿಸಿದೆನೋ? ‘ನಿಮ್ಮ ಆಸ್ತಿಯಿಂದ ನನಗಾಗಿ ಈಡು ಕೊಡಿರಿ,’ ಎಂದೆನೋ?
Maka sɛ, ‘Momma me biribi? Maka sɛ momfiri mo ahodeɛ ntua me tiri so sika,
23 ‘ಶತ್ರುವಿನ ಕೈಯಿಂದ ನನ್ನನ್ನು ತಪ್ಪಿಸಿರಿ,’ ಎಂದೂ, ‘ಬಲಾತ್ಕಾರಿಗಳ ಕೈಗಳಿಂದ ನನ್ನನ್ನು ವಿಮೋಚಿಸಿರಿ,’ ಎಂದೂ ನಾನು ಕೇಳಿದೆನೋ?
anaasɛ monnye me mfiri mʼatamfoɔ nsam, ne atirimuɔdenfoɔ nkyehoma mu anaa?’
24 “ನನಗೆ ಬೋಧಿಸಿರಿ, ನಾನು ಮೌನವಾಗಿರುವೆನು; ನಾನು ಮಾಡಿದ ತಪ್ಪನ್ನು ನನಗೆ ತಿಳಿಸಿರಿ.
“Monkyerɛkyerɛ me, na mɛyɛ komm; monkyerɛ me mfomsoɔ a mayɛ.
25 ಯಥಾರ್ಥ ಮಾತುಗಳು ಎಷ್ಟೋ ನೋವನ್ನು ತರುತ್ತವೆ! ಆದರೆ ನಿಮ್ಮ ತರ್ಕವು ರುಜುಪಡಿಸುವುದೇನು?
Nokorɛka yɛ yea, na mo adwenkyerɛ no, ɛkɔsi sɛn?
26 ನಾನು ಹೇಳಿದ ಮಾತುಗಳನ್ನು ತಿದ್ದಬೇಕೆನ್ನುವಿರೋ? ಬೇಸರದ ನನ್ನ ಮಾತುಗಳು ನಿಮಗೆ ಗಾಳಿಮಾತುಗಳೋ?
Mokyerɛ sɛ deɛ maka no nnyɛ nokorɛ, mofa obi a nʼabamu abu asɛm sɛ mframa anaa?
27 ತಂದೆಯಿಲ್ಲದವರಿಗಾಗಿ ಚೀಟು ಹಾಕುತ್ತೀರಿ, ನಿಮ್ಮ ಸ್ನೇಹಿತನನ್ನು ಮಾರಿಬಿಡುತ್ತೀರಿ.
Mpo mobɛbɔ awisiaa so ntonto, na mode mo adamfo adi nsesa dwa.
28 “ಆದ್ದರಿಂದ ಈಗ ಸ್ವಲ್ಪ ದಯೆಯುಳ್ಳವರಾಗಿ ನನ್ನನ್ನು ದೃಷ್ಟಿಸಿರಿ; ನಾನು ನಿಮ್ಮೆದುರಿನಲ್ಲಿ ಸುಳ್ಳು ಹೇಳುವೆನೋ?
“Afei momfa ahummɔborɔ nhwɛ me. Mɛtumi adi atorɔ wɔ mo anim anaa?
29 ಕರುಣೆ ತೋರಿಸಿರಿ, ಅನ್ಯಾಯವಾಗದಿರಲಿ; ಪುನಃ ಯೋಚಿಸಿರಿ, ನನ್ನ ಪ್ರಾಮಾಣಿಕತೆಯು ಪ್ರಶ್ನಿಸಲಾಗಿದೆ.
Monto mo bo ase, mommu ntɛnkyea; monsane nnwene ho, ɛfiri sɛ me pɛpɛyɛ ho aba akyinnyegyeɛ.
30 ನನ್ನ ನಾಲಿಗೆಯಲ್ಲಿ ದುಷ್ಟತನ ಇದೆಯೋ? ವಿಪತ್ತುಗಳ ವಿವೇಚನೆಯು ನನಗಿಲ್ಲವೋ?
Amumuyɛsɛm wɔ mʼano anaa? Mennim papa ne bɔne ntam nsonsonoeɛ anaa?