< ಯೋಬನು 41 >

1 “ಯೋಬನೇ, ಲಿವ್ಯಾತಾನ್ ಮೊಸಳೆಯನ್ನು ಗಾಳದಿಂದ ಎಳೆಯಬಲ್ಲೆಯಾ? ಹಗ್ಗದಿಂದ ಅದರ ನಾಲಿಗೆಯನ್ನು ಬಿಗಿಯಬಲ್ಲೆಯಾ?
“ಯೋಬನೇ, ಲಿವ್ಯಾತಾನ್ ಮೊಸಳೆಯನ್ನು ಗಾಳದಿಂದ ಎಳೆಯಬಲ್ಲೆಯಾ? ಹಗ್ಗದಿಂದ ಅದರ ನಾಲಿಗೆಯನ್ನು ಬಿಗಿಯಬಲ್ಲೆಯಾ?
2 ಅದರ ಮೂಗಿನಲ್ಲಿ ಗಾಳ ಇಡುವೆಯಾ? ಅದರ ದವಡೆಗೆ ಮುಳ್ಳಿನಿಂದ ಚುಚ್ಚುವೆಯಾ?
ಅದರ ಮೂಗಿನಲ್ಲಿ ಗಾಳ ಇಡುವೆಯಾ? ಅದರ ದವಡೆಗೆ ಮುಳ್ಳಿನಿಂದ ಚುಚ್ಚುವೆಯಾ?
3 ಅದು ಅನೇಕ ಸಾರಿ ಕರುಣೆಗಾಗಿ ನಿನಗೆ ವಿಜ್ಞಾಪನೆಮಾಡಿತೇ? ನಿನ್ನ ಸಂಗಡ ನಮ್ರತೆಯಿಂದ ಮಾತನಾಡೀತೇ?
ಅದು ಅನೇಕ ಸಾರಿ ಕರುಣೆಗಾಗಿ ನಿನಗೆ ವಿಜ್ಞಾಪನೆಮಾಡಿತೇ? ನಿನ್ನ ಸಂಗಡ ನಮ್ರತೆಯಿಂದ ಮಾತನಾಡೀತೇ?
4 ನೀನು ಅದನ್ನು ಇಡೀ ಜೀವಮಾನಕ್ಕೂ ಆಳಾಗಿ ಸೇರಿಸಿಕೊಳ್ಳುವಂತೆ, ನಿನ್ನೊಂದಿಗೆ ಒಡಂಬಡಿಕೆ ಮಾಡಿಕೊಂಡೀತೆ?
ನೀನು ಅದನ್ನು ಇಡೀ ಜೀವಮಾನಕ್ಕೂ ಆಳಾಗಿ ಸೇರಿಸಿಕೊಳ್ಳುವಂತೆ, ನಿನ್ನೊಂದಿಗೆ ಒಡಂಬಡಿಕೆ ಮಾಡಿಕೊಂಡೀತೆ?
5 ಸಾಕುಪಕ್ಷಿಯಂತೆ ಅದನ್ನು ಆಡಿಸಬಲ್ಲೆಯಾ? ಮನೆಯಲ್ಲಿರುವ ನಿನ್ನ ಹುಡುಗಿಯರ ವಿನೋದಕ್ಕಾಗಿ ಅದನ್ನು ಕಟ್ಟಿ ಹಾಕಬಲ್ಲೆಯಾ?
ಸಾಕುಪಕ್ಷಿಯಂತೆ ಅದನ್ನು ಆಡಿಸಬಲ್ಲೆಯಾ? ಮನೆಯಲ್ಲಿರುವ ನಿನ್ನ ಹುಡುಗಿಯರ ವಿನೋದಕ್ಕಾಗಿ ಅದನ್ನು ಕಟ್ಟಿ ಹಾಕಬಲ್ಲೆಯಾ?
6 ಬೆಸ್ತರು ಅದಕ್ಕಾಗಿ ವ್ಯಾಪಾರ ಒಪ್ಪಂದ ಮಾಡುತ್ತಾರೆಯೆ? ಅವರು ಅದನ್ನು ವರ್ತಕರಲ್ಲಿ ಹಂಚಿ ಮಾರುವರೆ?
ಬೆಸ್ತರು ಅದಕ್ಕಾಗಿ ವ್ಯಾಪಾರ ಒಪ್ಪಂದ ಮಾಡುತ್ತಾರೆಯೆ? ಅವರು ಅದನ್ನು ವರ್ತಕರಲ್ಲಿ ಹಂಚಿ ಮಾರುವರೆ?
7 ಆ ಮೊಸಳೆಯ ಚರ್ಮವನ್ನು ಮುಳ್ಳುಗಳಿಂದ ಚುಚ್ಚಬಲ್ಲೆಯಾ? ಅದರ ತಲೆಯನ್ನು ಮೀನು ಹಿಡಿಯುವ ಈಟಿಯಿಂದ ತಿವಿಯಬಲ್ಲೆಯಾ?
ಆ ಮೊಸಳೆಯ ಚರ್ಮವನ್ನು ಮುಳ್ಳುಗಳಿಂದ ಚುಚ್ಚಬಲ್ಲೆಯಾ? ಅದರ ತಲೆಯನ್ನು ಮೀನು ಹಿಡಿಯುವ ಈಟಿಯಿಂದ ತಿವಿಯಬಲ್ಲೆಯಾ?
8 ಅದರ ಮೇಲೆ ನಿನ್ನ ಕೈಹಾಕಿ ನೋಡು! ಆ ಹೋರಾಟವನ್ನು ನೆನೆಸಿಕೊಂಡರೆ, ನೀನು ಮತ್ತೆ ಅದನ್ನು ಮುಟ್ಟುವುದೇ ಇಲ್ಲ!
ಅದರ ಮೇಲೆ ನಿನ್ನ ಕೈಹಾಕಿ ನೋಡು! ಆ ಹೋರಾಟವನ್ನು ನೆನೆಸಿಕೊಂಡರೆ, ನೀನು ಮತ್ತೆ ಅದನ್ನು ಮುಟ್ಟುವುದೇ ಇಲ್ಲ!
9 ಅದನ್ನು ಹಿಡಿಯಬಹುದೆಂಬ ನಿರೀಕ್ಷೆಯು ವ್ಯರ್ಥವಾದದ್ದು; ಹಿಡಿಯ ಬಂದವನು ನೋಡಿದ ಮಾತ್ರಕ್ಕೆ ಹೆದರಿ ಬಿದ್ದುಹೋಗುವನು.
ಅದನ್ನು ಹಿಡಿಯಬಹುದೆಂಬ ನಿರೀಕ್ಷೆಯು ವ್ಯರ್ಥವಾದದ್ದು; ಹಿಡಿಯ ಬಂದವನು ನೋಡಿದ ಮಾತ್ರಕ್ಕೆ ಹೆದರಿ ಬಿದ್ದುಹೋಗುವನು.
10 ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆ ಯಾರಲ್ಲಿಯೂ ಇಲ್ಲ; ಹೀಗಿರುವಾಗ, ನನಗೆ ಎದುರಾಗಿ ನಿಲ್ಲಲು ಶಕ್ತರು ಯಾರು?
ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆ ಯಾರಲ್ಲಿಯೂ ಇಲ್ಲ; ಹೀಗಿರುವಾಗ, ನನಗೆ ಎದುರಾಗಿ ನಿಲ್ಲಲು ಶಕ್ತರು ಯಾರು?
11 ನಾನು ಸಾಲ ತೀರಿಸಬೇಕೆಂದು ನನಗೆ ವಿರೋಧವಾಗಿ ಹಕ್ಕು ಸಾಧಿಸುವವರು ಯಾರು? ಆಕಾಶದ ಕೆಳಗೆ ಇರುವಂಥ ಪ್ರತಿಯೊಂದೂ ನನ್ನದೇ.
ನಾನು ಸಾಲ ತೀರಿಸಬೇಕೆಂದು ನನಗೆ ವಿರೋಧವಾಗಿ ಹಕ್ಕು ಸಾಧಿಸುವವರು ಯಾರು? ಆಕಾಶದ ಕೆಳಗೆ ಇರುವಂಥ ಪ್ರತಿಯೊಂದೂ ನನ್ನದೇ.
12 “ನಾನು ಲಿವ್ಯಾತಾನ್ ಮೊಸಳೆಯ ದೇಹದ ಭಾಗಗಳನ್ನೂ ಬಲವನ್ನೂ, ಅದರ ಆಕರ್ಷಕ ಸೊಬಗನ್ನೂ ವರ್ಣಿಸದೆ ಸುಮ್ಮನಿರಲಾರೆನು.
“ನಾನು ಲಿವ್ಯಾತಾನ್ ಮೊಸಳೆಯ ದೇಹದ ಭಾಗಗಳನ್ನೂ ಬಲವನ್ನೂ, ಅದರ ಆಕರ್ಷಕ ಸೊಬಗನ್ನೂ ವರ್ಣಿಸದೆ ಸುಮ್ಮನಿರಲಾರೆನು.
13 ಅದರ ಹೊರ ವಸ್ತ್ರವನ್ನು ತೆಗೆಯಬಲ್ಲವರು ಯಾರು? ಅದರ ಜೋಡು ದವಡೆಗಳೊಳಗೆ ಕಡಿವಾಣದಿಂದ ನುಗ್ಗಬಲ್ಲವರು ಯಾರು?
ಅದರ ಹೊರ ವಸ್ತ್ರವನ್ನು ತೆಗೆಯಬಲ್ಲವರು ಯಾರು? ಅದರ ಜೋಡು ದವಡೆಗಳೊಳಗೆ ಕಡಿವಾಣದಿಂದ ನುಗ್ಗಬಲ್ಲವರು ಯಾರು?
14 ಅದರ ಮುಖದ ಕದಗಳನ್ನು ತೆರೆಯಬಲ್ಲವರು ಯಾರು? ಅದರ ಹಲ್ಲುಗಳ ಸುತ್ತಲೂ ಭಯಭೀತಿ ಆವರಿಸಿರುವುದು.
ಅದರ ಮುಖದ ಕದಗಳನ್ನು ತೆರೆಯಬಲ್ಲವರು ಯಾರು? ಅದರ ಹಲ್ಲುಗಳ ಸುತ್ತಲೂ ಭಯಭೀತಿ ಆವರಿಸಿರುವುದು.
15 ಗುರಾಣಿಗಳ ಸಾಲುಗಳು ಅದರ ಬೆನ್ನಿಗೆ ಹೆಮ್ಮೆಯಾಗಿವೆ; ಅವು ಒಟ್ಟಿಗೆ ಬಿಗಿಯಾಗಿ ಮುದ್ರಿಸಲಾಗಿವೆ.
ಗುರಾಣಿಗಳ ಸಾಲುಗಳು ಅದರ ಬೆನ್ನಿಗೆ ಹೆಮ್ಮೆಯಾಗಿವೆ; ಅವು ಒಟ್ಟಿಗೆ ಬಿಗಿಯಾಗಿ ಮುದ್ರಿಸಲಾಗಿವೆ.
16 ಗಾಳಿಯೂ ಅವುಗಳ ನಡುವೆ ನುಗ್ಗದಂತೆ, ಒಂದಕ್ಕೊಂದು ಹೊಂದಿಕೊಂಡಿವೆ.
ಗಾಳಿಯೂ ಅವುಗಳ ನಡುವೆ ನುಗ್ಗದಂತೆ, ಒಂದಕ್ಕೊಂದು ಹೊಂದಿಕೊಂಡಿವೆ.
17 ಆ ಅಡ್ಡಣಗಳು ಒಂದಕ್ಕೊಂದು ಅಂಟಿಕೊಂಡಿವೆ; ಪ್ರತ್ಯೇಕಿಸಲಾಗದಂತೆ ಹಿಡಿದುಕೊಂಡಿವೆ.
ಆ ಅಡ್ಡಣಗಳು ಒಂದಕ್ಕೊಂದು ಅಂಟಿಕೊಂಡಿವೆ; ಪ್ರತ್ಯೇಕಿಸಲಾಗದಂತೆ ಹಿಡಿದುಕೊಂಡಿವೆ.
18 ಅದರ ಸೀನಿನ ತುಂತುರುಗಳು ಬೆಳಕಿನ ಹೊಳಪನ್ನು ಹೊರಹಾಕುವುದು; ಅದರ ಕಣ್ಣುಗಳು ಉದಯದ ಕಿರಣಗಳ ಹಾಗೆ ಇವೆ.
ಅದರ ಸೀನಿನ ತುಂತುರುಗಳು ಬೆಳಕಿನ ಹೊಳಪನ್ನು ಹೊರಹಾಕುವುದು; ಅದರ ಕಣ್ಣುಗಳು ಉದಯದ ಕಿರಣಗಳ ಹಾಗೆ ಇವೆ.
19 ಅದರ ಬಾಯಿಂದ ಉರಿಯುವ ದೀಪಗಳು ಹೊರಡುತ್ತವೆ; ಬೆಂಕಿಯ ಕಿಡಿಗಳು ಹಾರುತ್ತವೆ.
ಅದರ ಬಾಯಿಂದ ಉರಿಯುವ ದೀಪಗಳು ಹೊರಡುತ್ತವೆ; ಬೆಂಕಿಯ ಕಿಡಿಗಳು ಹಾರುತ್ತವೆ.
20 ಆಪುಹುಲ್ಲಿಗೆ ಬೆಂಕಿಯಿಟ್ಟಾಗ ಕುದಿಯುವ ಪಾತ್ರೆಯೊಳಗಿಂದ ಆವಿ ಬರುವಂತೆ, ಅದರ ಮೂಗಿನೊಳಗಿಂದ ಹೊಗೆ ಹಾಯುವುದು.
ಆಪುಹುಲ್ಲಿಗೆ ಬೆಂಕಿಯಿಟ್ಟಾಗ ಕುದಿಯುವ ಪಾತ್ರೆಯೊಳಗಿಂದ ಆವಿ ಬರುವಂತೆ, ಅದರ ಮೂಗಿನೊಳಗಿಂದ ಹೊಗೆ ಹಾಯುವುದು.
21 ಅದರ ಶ್ವಾಸವೇ ಇದ್ದಲನ್ನು ಹೊತ್ತಿಸುವುದು; ಜ್ವಾಲೆಯು ಅದರ ಬಾಯಿಯೊಳಗಿಂದ ಹೊರಡುವುದು.
ಅದರ ಶ್ವಾಸವೇ ಇದ್ದಲನ್ನು ಹೊತ್ತಿಸುವುದು; ಜ್ವಾಲೆಯು ಅದರ ಬಾಯಿಯೊಳಗಿಂದ ಹೊರಡುವುದು.
22 ಅದರ ಬಲವು ಕುತ್ತಿಗೆಯಲ್ಲಿ ನೆಲೆಗೊಂಡಿರುವುದು; ಅದರ ಮುಂದೆ ಭಯವು ಸಾಗುತ್ತಿರುವುದು.
ಅದರ ಬಲವು ಕುತ್ತಿಗೆಯಲ್ಲಿ ನೆಲೆಗೊಂಡಿರುವುದು; ಅದರ ಮುಂದೆ ಭಯವು ಸಾಗುತ್ತಿರುವುದು.
23 ಅದರ ಮಾಂಸದ ಖಂಡಗಳು ಒಟ್ಟಾಗಿ ಕೂಡಿಕೊಂಡಿವೆ; ಅವು ಸ್ಥಿರವಾಗಿದ್ದು ಕದಲದೆ ಇರುತ್ತವೆ.
ಅದರ ಮಾಂಸದ ಖಂಡಗಳು ಒಟ್ಟಾಗಿ ಕೂಡಿಕೊಂಡಿವೆ; ಅವು ಸ್ಥಿರವಾಗಿದ್ದು ಕದಲದೆ ಇರುತ್ತವೆ.
24 ಅದರ ಹೃದಯವು ಬಂಡೆಯಂತೆಯೂ, ಬೀಸುವ ಕೆಳಗಲ್ಲಿನಂತೆಯೂ ಗಟ್ಟಿಯಾಗಿದೆ.
ಅದರ ಹೃದಯವು ಬಂಡೆಯಂತೆಯೂ, ಬೀಸುವ ಕೆಳಗಲ್ಲಿನಂತೆಯೂ ಗಟ್ಟಿಯಾಗಿದೆ.
25 ಅದು ಎದ್ದರೆ ಶೂರರು ಸಹ ಹೆದರುತ್ತಾರೆ; ಅದರ ಹೊಡೆತಕ್ಕೆ ಭಯಭ್ರಾಂತರಾಗಿ ಹಿಂಜರಿಯುವರು.
ಅದು ಎದ್ದರೆ ಶೂರರು ಸಹ ಹೆದರುತ್ತಾರೆ; ಅದರ ಹೊಡೆತಕ್ಕೆ ಭಯಭ್ರಾಂತರಾಗಿ ಹಿಂಜರಿಯುವರು.
26 ಖಡ್ಗದಿಂದ ಹೊಡೆದರೆ ಅದಕ್ಕೇನೂ ಆಗುವುದಿಲ್ಲ; ಭರ್ಜಿ, ಬಾಣ, ಕವಚ ಇವುಗಳಿಂದಲೂ ಅದಕ್ಕೆ ಏನು ಆಗುವುದಿಲ್ಲ.
ಖಡ್ಗದಿಂದ ಹೊಡೆದರೆ ಅದಕ್ಕೇನೂ ಆಗುವುದಿಲ್ಲ; ಭರ್ಜಿ, ಬಾಣ, ಕವಚ ಇವುಗಳಿಂದಲೂ ಅದಕ್ಕೆ ಏನು ಆಗುವುದಿಲ್ಲ.
27 ಕಬ್ಬಿಣವು ಅದಕ್ಕೆ ಒಣಹುಲ್ಲಿನಂತೆಯೂ, ಕಂಚು ಅದಕ್ಕೆ ಕೊಳೆತ ಕಟ್ಟಿಗೆಯಂತೆಯೂ ಇರುವುದು.
ಕಬ್ಬಿಣವು ಅದಕ್ಕೆ ಒಣಹುಲ್ಲಿನಂತೆಯೂ, ಕಂಚು ಅದಕ್ಕೆ ಕೊಳೆತ ಕಟ್ಟಿಗೆಯಂತೆಯೂ ಇರುವುದು.
28 ಲಿವ್ಯಾತಾನ್ ಮೊಸಳೆಯನ್ನು ಬಿಲ್ಲುಬಾಣಗಳು ಓಡಿಸಲು ಅಸಾಧ್ಯ; ಕವಣೆಯ ಕಲ್ಲು ಅದಕ್ಕೆ ಹೊಟ್ಟಿಗೆ ಸಮಾನ.
ಲಿವ್ಯಾತಾನ್ ಮೊಸಳೆಯನ್ನು ಬಿಲ್ಲುಬಾಣಗಳು ಓಡಿಸಲು ಅಸಾಧ್ಯ; ಕವಣೆಯ ಕಲ್ಲು ಅದಕ್ಕೆ ಹೊಟ್ಟಿಗೆ ಸಮಾನ.
29 ದೊಣ್ಣೆಗಳು ಅದಕ್ಕೆ ಒಣಹುಲ್ಲಿನ ಹಾಗೆ ಇರುವುದು; ಭರ್ಜಿ ಅದಕ್ಕೆ ತಾಕಿದರೆ, ಅದು ನಗುವುದು.
ದೊಣ್ಣೆಗಳು ಅದಕ್ಕೆ ಒಣಹುಲ್ಲಿನ ಹಾಗೆ ಇರುವುದು; ಭರ್ಜಿ ಅದಕ್ಕೆ ತಾಕಿದರೆ, ಅದು ನಗುವುದು.
30 ಅದರ ಹೊಟ್ಟೆಯ ಅಡಿಯಲ್ಲಿ ಚೂಪಾದ ಒಡೆದ ಮಡಕೆಗಳಂತಿವೆ, ಅದು ಕೆಸರಿನ ಮೇಲೆ ತೆನೆಬಡಿಯುವ ಯಂತ್ರದಿಂದ ಆಗುವ ಗುರುತಿನಂತಿರುವುದು.
ಅದರ ಹೊಟ್ಟೆಯ ಅಡಿಯಲ್ಲಿ ಚೂಪಾದ ಒಡೆದ ಮಡಕೆಗಳಂತಿವೆ, ಅದು ಕೆಸರಿನ ಮೇಲೆ ತೆನೆಬಡಿಯುವ ಯಂತ್ರದಿಂದ ಆಗುವ ಗುರುತಿನಂತಿರುವುದು.
31 ಅದು ಆಳವಾದ ನೀರನ್ನು ಕುದಿಯುವ ಹಂಡೆಯ ನೀರಿನಂತೆ ಕಲಕುವುದು; ಸಮುದ್ರವನ್ನು ತೈಲದ ಪಾತ್ರೆಯ ಹಾಗೆಯೂ ಕದಲಿಸುವುದು.
ಅದು ಆಳವಾದ ನೀರನ್ನು ಕುದಿಯುವ ಹಂಡೆಯ ನೀರಿನಂತೆ ಕಲಕುವುದು; ಸಮುದ್ರವನ್ನು ತೈಲದ ಪಾತ್ರೆಯ ಹಾಗೆಯೂ ಕದಲಿಸುವುದು.
32 ಸಾಗರಕ್ಕೆ ನೆರೆ ಬಂತೋ ಎಂಬಂತೆ, ಅದು ತಾನು ಬಂದ ಹಾದಿಯನ್ನೇ ಬೆಳ್ಳಗಾಗುವಂತೆ ಮಾಡುವುದು.
ಸಾಗರಕ್ಕೆ ನೆರೆ ಬಂತೋ ಎಂಬಂತೆ, ಅದು ತಾನು ಬಂದ ಹಾದಿಯನ್ನೇ ಬೆಳ್ಳಗಾಗುವಂತೆ ಮಾಡುವುದು.
33 ಭೂಮಿಯ ಮೇಲೆ ಇದಕ್ಕೆ ಸಮಾನವಾದದ್ದು ಇಲ್ಲ; ಇದು ಭಯಭೀತಿಯಿಲ್ಲದ ಸೃಷ್ಟಿ.
ಭೂಮಿಯ ಮೇಲೆ ಇದಕ್ಕೆ ಸಮಾನವಾದದ್ದು ಇಲ್ಲ; ಇದು ಭಯಭೀತಿಯಿಲ್ಲದ ಸೃಷ್ಟಿ.
34 ಇದು ಪ್ರತಿ ಅಹಂಕಾರಿಯನ್ನು ನೋಡುವುದು; ಗರ್ವಪಡುವ ಎಲ್ಲರ ಮೇಲೆ ಇದು ರಾಜನಾಗಿರುವುದು.”
ಇದು ಪ್ರತಿ ಅಹಂಕಾರಿಯನ್ನು ನೋಡುವುದು; ಗರ್ವಪಡುವ ಎಲ್ಲರ ಮೇಲೆ ಇದು ರಾಜನಾಗಿರುವುದು.”

< ಯೋಬನು 41 >