< ಯೋಬನು 39 >

1 “ಕಾಡುಮೇಕೆಗಳು ಈಯುವ ಕಾಲವನ್ನು ನೀನು ತಿಳಿದಿರುವೆಯಾ? ಜಿಂಕೆಗಳ ಹೆರಿಗೆಯನ್ನು ನೋಡಿರುವೆಯಾ?
הֲיָדַ֗עְתָּ עֵ֭ת לֶ֣דֶת יַעֲלֵי־סָ֑לַע חֹלֵ֖ל אַיָּל֣וֹת תִּשְׁמֹֽר׃
2 ಅವುಗಳ ಗರ್ಭ ತುಂಬುವ ತಿಂಗಳುಗಳನ್ನು ಎಣಿಸಿರುವೆಯಾ? ಅವು ಈಯುವ ಕಾಲವನ್ನು ತಿಳಿದಿರುವಿಯೋ?
תִּסְפֹּ֣ר יְרָחִ֣ים תְּמַלֶּ֑אנָה וְ֝יָדַ֗עְתָּ עֵ֣ת לִדְתָּֽנָה׃
3 ಅವು ಬಗ್ಗಿ ಮರಿಗಳನ್ನು ಹಾಕುತ್ತವೆ; ಅದರ ಪ್ರಸವ ವೇದನೆಯನ್ನು ಮರೆತುಬಿಡುತ್ತವೆ.
תִּ֭כְרַעְנָה יַלְדֵיהֶ֣ן תְּפַלַּ֑חְנָה חֶבְלֵיהֶ֥ם תְּשַׁלַּֽחְנָה׃
4 ಅವುಗಳ ಮರಿಗಳು ಪುಷ್ಟಿಯಾಗಿ ಕಾಡಿನಲ್ಲಿ ಬೆಳೆಯುತ್ತವೆ; ಅವು ತಾಯಿಯನ್ನು ಅಗಲಿದ ಬಳಿಕ ತಿರುಗಿ ಬರುವುದಿಲ್ಲ.
יַחְלְמ֣וּ בְ֭נֵיהֶם יִרְבּ֣וּ בַבָּ֑ר יָ֝צְא֗וּ וְלֹא־שָׁ֥בוּ לָֽמוֹ׃
5 “ಕಾಡುಕತ್ತೆಗೆ ಸ್ವತಂತ್ರವನ್ನು ಕೊಟ್ಟವರು ಯಾರು? ಕಾಡುಕತ್ತೆಯ ಕಟ್ಟನ್ನು ಬಿಚ್ಚಿದವರು ಯಾರು?
מִֽי־שִׁלַּ֣ח פֶּ֣רֶא חָפְשִׁ֑י וּמֹסְר֥וֹת עָ֝ר֗וֹד מִ֣י פִתֵּֽחַ׃
6 ಮರುಭೂಮಿಯನ್ನು ಅದರ ನಿವಾಸವನ್ನಾಗಿ ಕೊಟ್ಟಿರುವುದು ನಾನೇ. ಸವಳುಬಯಲನ್ನು ಅದರ ವಾಸ ಸ್ಥಳವಾಗಿಯೂ ನೇಮಿಸಿದ್ದು ನಾನೇ.
אֲשֶׁר־שַׂ֣מְתִּי עֲרָבָ֣ה בֵית֑וֹ וּֽמִשְׁכְּנוֹתָ֥יו מְלֵֽחָה׃
7 ಪಟ್ಟಣದ ಗದ್ದಲವನ್ನು ಕಾಡುಕತ್ತೆಯು ಧಿಕ್ಕರಿಸುತ್ತದೆ; ಅದು ಓಡಿಸುವವನ ಕೂಗನ್ನು ಲಕ್ಷಿಸುವುದಿಲ್ಲ.
יִ֭שְׂחַק לַהֲמ֣וֹן קִרְיָ֑ה תְּשֻׁא֥וֹת נ֝וֹגֵ֗שׂ לֹ֣א יִשְׁמָֽע׃
8 ಬೆಟ್ಟಗಳಲ್ಲಿ ಕಂಡದ್ದೆಲ್ಲಾ ಅದರ ಮೇವು; ಹಸುರಾಗಿರುವುದನ್ನು ಎಲ್ಲಿದ್ದರೂ ಹುಡುಕುತ್ತಲೇ ಇರುವುದು.
יְת֣וּר הָרִ֣ים מִרְעֵ֑הוּ וְאַחַ֖ר כָּל־יָר֣וֹק יִדְרֽוֹשׁ׃
9 “ಕಾಡುಕೋಣವು ನಿನ್ನ ಸೇವೆ ಮಾಡಲು ಎಂದಾದರೂ ಒಪ್ಪಿದೆಯೆ? ಅದು ರಾತ್ರಿಯಲ್ಲಿ ನಿನ್ನ ಗೋದಲಿಯ ಬಳಿಯಲ್ಲಿ ಉಳಿದುಕೊಂಡಿದೆಯೆ?
הֲיֹ֣אבֶה רֵּ֣ים עָבְדֶ֑ךָ אִם־יָ֝לִ֗ין עַל־אֲבוּסֶֽךָ׃
10 ಕಾಡುಕೋಣವನ್ನು ಹಗ್ಗದಿಂದ ನೇಗಿಲ ಸಾಲಿಗೆ ಕಟ್ಟಿರುವೆಯಾ? ಅದು ಕಣಿವೆಯಲ್ಲಿ ನಿನ್ನನ್ನು ಹಿಂಬಾಲಿಸಿ ಕುಂಟೆ ಎಳೆಯುವುದೆ?
הֲֽתִקְשָׁר־רֵ֭ים בְּתֶ֣לֶם עֲבֹת֑וֹ אִם־יְשַׂדֵּ֖ד עֲמָקִ֣ים אַחֲרֶֽיךָ׃
11 ಅದರ ಶಕ್ತಿ ಹೆಚ್ಚಾಗಿರುವುದರಿಂದ ನೀನು ಕೆಲಸಕ್ಕಾಗಿ ಅದನ್ನೇ ನಂಬಿರುವೆಯಾ? ನಿನ್ನ ಭಾರವಾದ ಕೆಲಸವನ್ನು ಅದಕ್ಕೆ ಒಪ್ಪಿಸಿಬಿಡುವೆಯಾ?
הֲֽתִבְטַח־בּ֭וֹ כִּי־רַ֣ב כֹּח֑וֹ וְתַעֲזֹ֖ב אֵלָ֣יו יְגִיעֶֽךָ׃
12 ಅದು ನಿನ್ನ ಧಾನ್ಯ ತೆನೆಗಳನ್ನು ಮನೆಗೆ ತರುವುದೆಂದು ನಂಬುವೆಯಾ? ನಿನ್ನ ಕಣದಲ್ಲಿ ಕಾಳು ಕೂಡಿಸುವದೆಂದೂ ಅದನ್ನು ನಿರೀಕ್ಷಿಸುವೆಯಾ?
הֲתַאֲמִ֣ין בּ֭וֹ כִּי־ישוב זַרְעֶ֑ךָ וְֽגָרְנְךָ֥ יֶאֱסֹֽף׃
13 “ಉಷ್ಟ್ರಪಕ್ಷಿ ಸಂತೋಷದಿಂದ ರೆಕ್ಕೆ ಬಡಿಯುತ್ತದೆ. ಆದರೂ ಕೊಕ್ಕರೆಯ ರೆಕ್ಕೆ ಗರಿಗಳೊಂದಿಗೆ ಅವುಗಳನ್ನು ಹೋಲಿಸಲಾಗದು.
כְּנַף־רְנָנִ֥ים נֶעֱלָ֑סָה אִם־אֶ֝בְרָ֗ה חֲסִידָ֥ה וְנֹצָֽה׃
14 ಏಕೆಂದರೆ ಉಷ್ಟ್ರಪಕ್ಷಿಯು ತನ್ನ ಮೊಟ್ಟೆಗಳನ್ನು ನೆಲದಲ್ಲಿ ಬಿಟ್ಟು, ಕೇವಲ ಮರಳಿನಿಂದ ಅವುಗಳಿಗೆ ಕಾವು ಕೊಡುತ್ತದೆ.
כִּֽי־תַעֲזֹ֣ב לָאָ֣רֶץ בֵּצֶ֑יהָ וְֽעַל־עָפָ֥ר תְּחַמֵּֽם׃
15 ಜನರು ಕಾಲಿನಿಂದ ಮೊಟ್ಟೆಗಳನ್ನು ಮೆಟ್ಟಿಯಾರು, ಇಲ್ಲವೆ ಕಾಡುಮೃಗ ಅದನ್ನು ಅವುಗಳನ್ನು ತುಳಿದೀತು ಎಂಬ ಚಿಂತೆ ಆ ಪಕ್ಷಿಗೆ ಇಲ್ಲ.
וַ֭תִּשְׁכַּח כִּי־רֶ֣גֶל תְּזוּרֶ֑הָ וְחַיַּ֖ת הַשָּׂדֶ֣ה תְּדוּשֶֽׁהָ׃
16 ತನ್ನ ಮರಿಗಳನ್ನು ತನ್ನವುಗಳಲ್ಲ ಎಂಬಂತೆ ಕ್ರೂರವಾಗಿ ನಡೆಸುತ್ತದೆ; ಉಷ್ಟ್ರಪಕ್ಷಿಯು ತನ್ನ ಹೆರಿಗೆ ವ್ಯರ್ಥವಾದರೂ ಅದಕ್ಕೆ ಚಿಂತೆ ಇಲ್ಲ.
הִקְשִׁ֣יחַ בָּנֶ֣יהָ לְּלֹא־לָ֑הּ לְרִ֖יק יְגִיעָ֣הּ בְּלִי־פָֽחַד׃
17 ಏಕೆಂದರೆ ದೇವರು ಉಷ್ಟ್ರಪಕ್ಷಿಗೆ ಜ್ಞಾನವನ್ನು ಮರೆಮಾಡಿ, ತಿಳುವಳಿಕೆಯನ್ನು ಅದಕ್ಕೆ ಕೊಡಲಿಲ್ಲವಷ್ಟೆ.
כִּֽי־הִשָּׁ֣הּ אֱל֣וֹהַּ חָכְמָ֑ה וְלֹא־חָ֥לַק לָ֝֗הּ בַּבִּינָֽה׃
18 ಆದರೂ ಆ ಪಕ್ಷಿ ತನ್ನ ರೆಕ್ಕೆಗಳನ್ನು ಹರಡಿ ಓಡಿದಾಗ, ಅದು ಕುದುರೆ ಸವಾರನನ್ನು ಸಹ ನೋಡಿ ಅಣಕಿಸುತ್ತದೆ.
כָּ֭עֵת בַּמָּר֣וֹם תַּמְרִ֑יא תִּֽשְׂחַ֥ק לַ֝סּ֗וּס וּלְרֹֽכְבֽוֹ׃
19 “ಯೋಬನೇ, ಕುದುರೆಗೆ ಶಕ್ತಿ ಕೊಟ್ಟವನು ನೀನೋ? ಅದರ ಕೊರಳಿಗೆ ಜುಟ್ಟುಗುಡುಗನ್ನು ಹೊದಿಸಿದವನು ನೀನೋ?
הֲתִתֵּ֣ן לַסּ֣וּס גְּבוּרָ֑ה הֲתַלְבִּ֖ישׁ צַוָּאר֣וֹ רַעְמָֽה׃
20 ಮಿಡತೆಯ ಹಾಗೆ ಅದನ್ನು ಹಾರುವಂತೆ ಮಾಡಿದವನು ನೀನೋ? ಅದರ ಕೆನೆತದ ಪ್ರಭಾವ ಭಯಂಕರವಾಗಿದೆಯಲ್ಲಾ?
הְֽ֭תַרְעִישֶׁנּוּ כָּאַרְבֶּ֑ה ה֖וֹד נַחְר֣וֹ אֵימָֽה׃
21 ಕುದುರೆಯು ನೆಲವನ್ನು ಕೆರೆಯುತ್ತಾ ತನ್ನ ಶಕ್ತಿಯಲ್ಲಿ ಹಿಗ್ಗುತ್ತದೆ; ಸನ್ನದ್ಧವಾಗಿರುವ ಸೈನ್ಯವನ್ನು ಎದುರಿಸಲು ಹೊರಡುತ್ತದೆ.
יַחְפְּר֣וּ בָ֭עֵמֶק וְיָשִׂ֣ישׂ בְּכֹ֑חַ יֵ֝צֵ֗א לִקְרַאת־נָֽשֶׁק׃
22 ಭಯವನ್ನು ಕಂಡು ನಗುತ್ತದೆ; ಯಾವುದಕ್ಕೂ ಹೆದರುವುದಿಲ್ಲ; ಖಡ್ಗಕ್ಕೆ ಸಹ ಹಿಂದೆಗೆಯುವುದಿಲ್ಲ.
יִשְׂחַ֣ק לְ֭פַחַד וְלֹ֣א יֵחָ֑ת וְלֹֽא־יָ֝שׁ֗וּב מִפְּנֵי־חָֽרֶב׃
23 ಅದರ ಮೇಲೆ ಬತ್ತಳಿಕೆಯೂ, ಪ್ರಜ್ವಲಿಸುವ ಭಲ್ಲೆಯೂ, ಭರ್ಜಿಯೂ ಥಳಥಳಿಸುತ್ತವೆ.
עָ֭לָיו תִּרְנֶ֣ה אַשְׁפָּ֑ה לַ֖הַב חֲנִ֣ית וְכִידֽוֹן׃
24 ಕುದುರೆ ಕಹಳೆಯ ನಾದವನ್ನು ಕೇಳಿದರೂ ಭೀಕರ ಉತ್ಸಾಹದಲ್ಲಿ ನೆಲನುಂಗುವಂತೆ ನಿಲ್ಲದೆ ಓಡುತ್ತದೆ.
בְּרַ֣עַשׁ וְ֭רֹגֶז יְגַמֶּא־אָ֑רֶץ וְלֹֽא־יַ֝אֲמִ֗ין כִּי־ק֥וֹל שׁוֹפָֽר׃
25 ರಣಕಹಳೆ ಮೊಳಗಿದಾಗ ಕುದುರೆ ಕೆನೆಯುತ್ತದೆ. ಅದು ಅಧಿಪತಿಗಳ ಗರ್ಜನೆಯನ್ನೂ ಕಾಳಗದ ಆರ್ಭಟವನ್ನೂ ದೂರದಿಂದಲೇ ಮೂಸಿ ನೋಡಿ ತಿಳಿಯುತ್ತದೆ.
בְּדֵ֤י שֹׁפָ֨ר ׀ יֹ֘אמַ֤ר הֶאָ֗ח וּֽ֭מֵרָחוֹק יָרִ֣יחַ מִלְחָמָ֑ה רַ֥עַם שָׂ֝רִים וּתְרוּעָֽה׃
26 “ಯೋಬನೇ, ಗಿಡುಗವು ತನ್ನ ರೆಕ್ಕೆಗಳನ್ನು ಹರಡಿ, ದಕ್ಷಿಣದ ಕಡೆಗೆ ಹಾರುವುದು ನಿನ್ನ ಜ್ಞಾನದಿಂದಲೋ?
הֲֽ֭מִבִּינָ֣תְךָ יַֽאֲבֶר־נֵ֑ץ יִפְרֹ֖שׂ כנפו לְתֵימָֽן׃
27 ರಣಹದ್ದು ಎತ್ತರಕ್ಕೆ ಹಾರುವುದೂ, ಉನ್ನತ ಸ್ಥಳದಲ್ಲಿ ಗೂಡುಕಟ್ಟುವುದು ನಿನ್ನ ಅಪ್ಪಣೆಯಿಂದಲೋ?
אִם־עַל־פִּ֭יךָ יַגְבִּ֣יהַּ נָ֑שֶׁר וְ֝כִ֗י יָרִ֥ים קִנּֽוֹ׃
28 ಅದು ಬಂಡೆಯ ಸಂದುಗಳಲ್ಲಿ ರಾತ್ರಿಯನ್ನು ಕಳೆಯುತ್ತದೆ; ಶಿಲಾಶಿಖರದ ದುರ್ಗಗಳಲ್ಲಿಯೂ ಅದು ತಂಗುತ್ತದೆ.
סֶ֣לַע יִ֭שְׁכֹּן וְיִתְלֹנָ֑ן עַֽל־שֶׁן־סֶ֝֗לַע וּמְצוּדָֽה׃
29 ಅಲ್ಲಿಂದಲೇ ಆಹಾರವನ್ನು ಹುಡುಕುತ್ತದೆ; ಅದರ ಕಣ್ಣುಗಳು ದೂರದಿಂದಲೇ ನೋಡುತ್ತವೆ.
מִשָּׁ֥ם חָֽפַר־אֹ֑כֶל לְ֝מֵרָח֗וֹק עֵינָ֥יו יַבִּֽיטוּ׃
30 ಅದರ ಮರಿಗಳು ತಂದ ಬೇಟೆಯನ್ನು ತಿಂದುಬಿಡುತ್ತವೆ; ಹೆಣ ಬಿದ್ದಲ್ಲಿಯೇ ರಣಹದ್ದು ಇರುವುದು.”
ואפרחו יְעַלְעוּ־דָ֑ם וּבַאֲשֶׁ֥ר חֲ֝לָלִ֗ים שָׁ֣ם הֽוּא׃ פ

< ಯೋಬನು 39 >