< ಯೋಬನು 38 >

1 ಆಗ ಯೆಹೋವ ದೇವರು ಬಿರುಗಾಳಿಯೊಳಗಿಂದ ಯೋಬನಿಗೆ ಹೀಗೆಂದು ಉತ್ತರಕೊಟ್ಟರು:
Tete Yehowa ɖo nyawo ŋu na Hiob to ahom me be,
2 “ಅಜ್ಞಾನದ ಮಾತುಗಳಿಂದ ನನ್ನ ಯೋಜನೆಗಳನ್ನು ಮಂಕುಮಾಡುವ ನೀನು ಯಾರು?
“Ame ka nye esi tsɔ viviti tsyɔ nye aɖaŋudede dzi kple nya siwo gɔmesese meli na la o?
3 ಶೂರನ ಹಾಗೆ ನಡುವನ್ನು ಕಟ್ಟಿಕೋ, ನಾನು ನಿನ್ನನ್ನು ಪ್ರಶ್ನೆಮಾಡುವೆನು; ನೀನೇ ನನಗೆ ಉತ್ತರಕೊಡು.
Tso nàbla ali dzi abe ŋutsu ene, mabia nya wò, nàɖo eŋu nam.
4 “ನಾನು ಭೂಮಿಗೆ ಅಸ್ತಿವಾರ ಹಾಕಿದಾಗ, ನೀನು ಎಲ್ಲಿ ಇದ್ದೀ? ನಿನಗೆ ತಿಳುವಳಿಕೆ ಇದ್ದರೆ ನನಗೆ ಹೇಳು.
“Afi ka nènɔ esi meɖo anyigba ƒe gɔmeɖokpewo anyi? Gblɔe nam, ne èse egɔme.
5 ಭೂಮಿಯ ಅಳತೆಯನ್ನು ಗೊತ್ತುಮಾಡಿದವರು ಯಾರು? ನಿಶ್ಚಯವಾಗಿ ನಿನಗೆ ಗೊತ್ತಿರಬೇಕಲ್ಲಾ? ಭೂಮಿಯ ಮೇಲೆ ನೂಲು ಹಿಡಿದವರು ಯಾರು?
Ame kae dzidze eƒe kekeme kple didime? Ànyae godoo! Ame kae tsɔ dzidzeka ɖo eŋu?
6 ಯಾವುದರ ಮೇಲೆ ಭೂಮಿಯ ಅಸ್ತಿವಾರ ಸ್ಥಿರಪಡಿಸಲಾಗಿದೆ? ಅದಕ್ಕೆ ಮೂಲೆಗಲ್ಲನ್ನು ಇಟ್ಟವರು ಯಾರು?
Nu ka dzi woɖo egɔme anyi ɖo? Alo ame kae ɖo eƒe dzogoedzikpe
7 ಉದಯದ ನಕ್ಷತ್ರಗಳು ಕೂಡಿ ಹಾಡುತ್ತಿರುವಾಗ, ದೇವದೂತರೆಲ್ಲರೂ ಹರ್ಷಧ್ವನಿಮಾಡುತ್ತಿರುವಾಗ, ಭೂಮಿಗೆ ಮೂಲೆಗಲ್ಲು ಹಾಕಿದವರಾರು?
esi ŋukeɣletiviwo le ha dzim ɖekae eye Mawudɔlawo katã do dzidzɔɣli?
8 “ಭೂಗರ್ಭವನ್ನು ನುಗ್ಗಿಕೊಂಡು ಬಂದ, ಸಮುದ್ರವನ್ನು ದ್ವಾರಗಳಿಂದ ಮುಚ್ಚಿದವರು ಯಾರು?
“Ame kae do ʋɔ ɖe atsiaƒu nu esi wòdo go kpoyi tso dadaa ƒe dɔ me
9 ನಾನು ಸಮುದ್ರಕ್ಕೆ ಮೇಘವನ್ನು ವಸ್ತ್ರವನ್ನಾಗಿ ತೊಡಿಸಿ, ಅದಕ್ಕೆ ಕಾರ್ಗತ್ತಲನ್ನು ಉಡಿಸಿದೆನು.
esi metsɔ lilikpo wɔ eƒe awudodoe heblae ɖe viviti tsiɖitsiɖitsiɖi me,
10 ನಾನು ಸಮುದ್ರಕ್ಕೆ ಮಿತಿಗಳನ್ನು ನಿಗದಿಪಡಿಸಿ, ಅಗುಳಿಗಳನ್ನೂ, ಬಾಗಿಲುಗಳನ್ನೂ ಇಟ್ಟೆನು.
esi meɖo seɖoƒe nɛ, hede ʋɔtru kple gametiwo enu,
11 ‘ಇಲ್ಲಿಯ ತನಕ ಬರಬಹುದು, ಇದನ್ನು ಮೀರಿ ಬರಕೂಡದು; ಇಲ್ಲಿಗೇ ನಿನ್ನ ತೆರೆಗಳ ಹೆಮ್ಮೆ ನಿಲ್ಲಲಿ,’ ಎಂದು ಆಜ್ಞಾಪಿಸಿದೆನು.
esi megblɔ be, ‘Afii ko nàse, mèkpɔ mɔ ato liƒo sia dzi o, afi sia ko wò dada kple ɖokuidodoɖedzi ase?’
12 “ಯೋಬನೇ, ನಿನ್ನ ಜೀವಮಾನದಲ್ಲಿ ಎಂದಾದರೂ, ‘ಅರುಣೋದಯವಾಗಲಿ,’ ಎಂದು ಆಜ್ಞಾಪಿಸಿರುವೆಯಾ? ಮುಂಜಾನೆಯ ಬೆಳಗಿಗೆ ಅದರ ಸ್ಥಳವನ್ನು ತಿಳಿಯಪಡಿಸಿರುವೆಯಾ?
“Èɖe gbe na ŋdi kpɔ tso esi wò ŋkekewo dze egɔme alo na fɔŋli nya eƒe nɔƒe,
13 ‘ದುಷ್ಟರನ್ನು ಅದರೊಳಗಿಂದ ಒದರಿಬಿಡು,’ ಎಂದು ನೀನು ಭೂಮಿಯ ಅಂಚುಗಳನ್ನು ಹಿಡಿದು ಉದಯಕ್ಕೆ ಎಂದಾದರೂ ಅಪ್ಪಣೆಮಾಡಿದೆಯಾ?
be wòalé anyigba ƒe toga, ahaʋuʋu ame vɔ̃ɖiwo ɖa le edzia?
14 ಮುದ್ರೆ ಒತ್ತಿದ ಜೇಡಿಮಣ್ಣಿನಂತೆ ಭೂಮಿ ರೂಪ ತಾಳುತ್ತದೆ; ನೆರಿಗೆ ಕಟ್ಟಿದ ಉಡಿಗೆಯಂತೆ ಭೂಮಿಯ ವಿಶೇಷತೆಗಳು ಕಾಣಿಸುತ್ತವೆ.
Anyigba trɔ eƒe nɔnɔme abe anyi le nutrenu te ene, eye eƒe nɔnɔme le abe avɔ tɔ ene.
15 ಅದರಂತೆ ದುಷ್ಟರಿಗೆ ಬೆಳಕು ನಿರಾಕರಿಸಲಾಗುವುದು; ಅವರ ಹಿಂಸಾಚಾರವೂ ಮುರಿದು ಹೋಗುವುದು.
Woxɔ ame vɔ̃ɖiwo ƒe kekeli le wo si eye woŋe woƒe abɔ si wodo ɖe dzi.
16 “ನೀನು ಎಂದಾದರೂ ಸಮುದ್ರದ ಬುಗ್ಗೆಗಳಲ್ಲಿ ನಡೆದಿರುವೆಯೋ? ಸಾಗರದ ತಳಹದಿಯಲ್ಲಿ ತಿರುಗಾಡಿರುವೆಯೋ?
“Èzɔ mɔ yi ɖe atsiaƒu ƒe vudo me alo zɔ le gogloƒe ƒe nudiƒewo kpɔa?
17 ನಿನಗೆ ಮರಣದ ಬಾಗಿಲುಗಳು ತೋರಿಸಲಾಗಿದೆಯೋ? ಘೋರಾಂಧಕಾರದ ಬಾಗಿಲುಗಳನ್ನು ನೀನು ಕಂಡಿರುವೆಯೋ?
Wofia ku ƒe agbowo wò kpɔa? Èkpɔ ku ƒe vɔvɔli ƒe agbowo kpɔa?
18 ಭೂವಿಸ್ತಾರಗಳನ್ನು ನೀನು ಗ್ರಹಿಸಿರುವೆಯೋ? ಇದನ್ನೆಲ್ಲಾ ನೀನು ತಿಳಿದಿದ್ದರೆ ನನಗೆ ಹೇಳು ನೋಡೋಣ.
Èse anyigba ƒe kekeme gɔmea? Gblɔe nam, ne ènya esiawo katã.
19 “ಬೆಳಕಿನ ನಿವಾಸಕ್ಕೆ ಹೋಗುವ ಮಾರ್ಗವೆಲ್ಲಿ? ಕತ್ತಲು ವಾಸಮಾಡುವ ಸ್ಥಳವೆಲ್ಲಿ?
“Afi ka mɔ si yi kekeli ƒe nɔƒe la to? Eye afi kae nye viviti nɔƒe?
20 ನೀನು ಬೆಳಕನ್ನೂ ಕತ್ತಲನ್ನೂ ಅವುಗಳ ಸ್ಥಳಕ್ಕೆ ತೆಗೆದುಕೊಂಡು ಹೋಗಬಲ್ಲೆಯಾ? ಅವು ತಮ್ಮ ಮನೆಗಳಿಗೆ ಹೋಗುವ ಹಾದಿಗಳನ್ನು ನೀನು ಬಲ್ಲೆಯಾ?
Àte ŋu akplɔ wo ayi wo nɔƒewoea? Ènya toƒe si yi ɖe wo nɔƒea?
21 ನಿಜವಾಗಿಯೂ ನೀನು ಆಗ ಹುಟ್ಟಿದ್ದರೆ, ಇವೆಲ್ಲಾ ನಿನಗೆ ಗೊತ್ತಾಗುತಿತ್ತು. ಮತ್ತು ಈಗ ನೀನು ಬಹಳ ವರ್ಷಗಳ ವೃದ್ಧನಾಗಿರುತ್ತಿದ್ದೆ.
Meka ɖe edzi be ènyae elabena wodzi wò ye ma ɣi xoxo! Ƒe geɖewoe nye esia esi nèle agbe!
22 “ಯೋಬನೇ, ನೀನು ಹಿಮದ ಉಗ್ರಾಣಗಳಲ್ಲಿ ಪ್ರವೇಶಿಸಿರುವೆಯಾ? ಕಲ್ಮಳೆಯ ಉಗ್ರಾಣಗಳನ್ನು ನೋಡಿರುವೆಯಾ?
“Ège ɖe sno ƒe nudzraɖoƒe alo kpɔ kpetsi ƒe nudzraɖoƒe,
23 ಅವುಗಳನ್ನು ನಾನು ಇಕ್ಕಟ್ಟಿನ ಕಾಲಕ್ಕಾಗಿ ಇಟ್ಟಿರುವೆನು; ಯುದ್ಧಕದನಗಳ ದಿನಗಳಿಗಾಗಿಯೂ ಕಾದಿಟ್ಟಿರುವೆನು.
esi meɖo ɖi na xaxaɣi, aʋaŋkekewo kple aʋakpegbe la kpɔa?
24 ಬೆಳಕಿನ ಮೂಲ ಮಾರ್ಗ ಎಲ್ಲಿದೆ? ಪೂರ್ವ ಗಾಳಿಯ ಮಾರ್ಗವು ಯಾವುದು?
Afi ka mɔ si wotona yia teƒe si dzikedzo kakana le alo teƒe si wokakaa ɣedzeƒeya le ɖe anyigba blibo la dzi la to?
25 ಮಳೆಯ ಪ್ರವಾಹಕ್ಕೆ ಕಾಲುವೆಗಳನ್ನು ಕಡಿದವರು ಯಾರು? ಸಿಡಿಲಿಗೆ ಮಾರ್ಗವನ್ನು ನೇಮಿಸಿದವರು ಯಾರು?
Ame kae ɖo toƒe na tsi gã siwo dzana kple mɔ na ahom sesẽwo,
26 ಮಳೆ ಮನುಷ್ಯರಿಲ್ಲದ ಕಾಡಿನಲ್ಲಿಯೂ ನಿರ್ಜನ ಪ್ರದೇಶದಲ್ಲಿಯೂ, ಸುರಿಯುವುದು.
be woade tsi anyigba si dzi ame mele o kple gbegbe si ame menɔ o,
27 ಹಾಳು ಬೈಲುಗಳಿಗೆ ತೃಪ್ತಿಯನ್ನು ಉಂಟುಮಾಡುವುದು; ಹಸಿರಾದ ಹುಲ್ಲನ್ನು ಮೊಳಿಸುವುದು.
be wòaɖi kɔ na kuɖiɖinyigba gbɔlo eye wòamie gbe fɛ̃wo?
28 ಮಳೆಗೆ ತಂದೆ ಇದ್ದಾನೆಯೇ? ಮಂಜಿನ ಹನಿಗಳನ್ನು ಹೆತ್ತವಳಿದ್ದಾಳೆಯೆ?
Fofo le tsidzadza sia? Ame kae nye tɔ na ahũdzadza?
29 ಯಾರ ಗರ್ಭದಿಂದ ಹಿಮಗಡ್ಡೆ ಹೊರಡುತ್ತದೆ? ಆಕಾಶದ ಇಬ್ಬನಿಯನ್ನು ಹೆತ್ತವರು ಯಾರು?
Ame ka ƒe dɔ mee tsikpe do tso? Ame kae dzi zãmu si dzana tso dziƒo,
30 ಕಲ್ಲಿನ ಹಾಗೆ ನೀರು ಗಟ್ಟಿಯಾಗುವುದು ಯಾವಾಗ? ಸಮುದ್ರದ ಮೇಲ್ಭಾಗವು ಹೆಪ್ಪುಗಟ್ಟುವುದು ಯಾವಾಗ?
esi tsiwo do kpe abe ahlihã ene eye gogloƒewo tame zu tsikpe?
31 “ನೀನು ಕೃತ್ತಿಕೆಯ ಸರಪಣಿಯನ್ನು ಬಂಧಿಸಬಲ್ಲೆಯಾ? ಮೃಗಶಿರದ ಸಂಕೋಲೆಯನ್ನು ಬಿಚ್ಚಬಲ್ಲೆಯಾ?
“Àte ŋu abla Atifieŋu siwo le keklẽma? Àte ŋu atu Avutɔ ƒe kawoa?
32 ನೀನು ನಕ್ಷತ್ರರಾಶಿಗಳನ್ನು ಅವುಗಳ ಕಾಲದಲ್ಲಿ ಹೊರಗೆ ಬರಮಾಡುವೆಯಾ? ಸಪ್ತರ್ಷಿ ತಾರೆಗಳನ್ನು ಅವುಗಳ ಪರಿವಾರ ಸಹಿತವಾಗಿ ನೀನು ನಡೆಸುವೆಯಾ?
Àte ŋu akplɔ ŋukeɣletiviwo ado goe ne woƒe dodoɣi ɖo alo akplɔ koklonɔ kple viawoa?
33 ಖಗೋಳದ ನಿಯಮಗಳನ್ನು ನೀನು ತಿಳಿದಿರುವೆಯಾ? ದೇವರ ಆಳಿಕೆಯನ್ನು ಭೂಮಿಯಲ್ಲಿ ಸ್ಥಾಪಿಸಿರುವೆಯಾ?
Ènya dziƒo ƒe sewoa? Àte ŋu aɖo Mawu ƒe fiaɖuɖu anyi ɖe anyigba dzia?
34 “ನೀರು ಪ್ರವಾಹವಾಗಿ ನಿನ್ನನ್ನು ತಲುಪುವಂತೆ, ನಿನ್ನ ಧ್ವನಿಯೆತ್ತಿ ಮೋಡಗಳಿಗೆ ಅಪ್ಪಣೆಕೊಡುವೆಯಾ?
“Àte ŋu akɔ gbe dzi ado ɣli na lilikpowo, eye nàtsɔ tsiɖɔɖɔ atsyɔ ɖokuiwò dzia?
35 ನಿನ್ನ ಅಪ್ಪಣೆಯಂತೆ ಸಿಡಿಲುಗಳು ಹೋಗಿಬಂದು, ‘ಇಗೋ, ನಾವು ಇಲ್ಲಿದ್ದೇವೆ,’ ಎಂದು ನಿನಗೆ ಹೇಳುತ್ತವೆಯೋ?
Wòe ɖo dzikedzo ɖe eƒe mɔ dzia? Ɖe wova gblɔna na wò be, ‘Míawoe nye esi’ mahã?
36 ಇಬಿಸ್ ಪಕ್ಷಿಗೆ ಜ್ಞಾನವನ್ನು ಕೊಟ್ಟವರು ಯಾರು? ಕೋಳಿಹುಂಜಕ್ಕೆ ಅರಿವನ್ನು ಕೊಟ್ಟವರು ಯಾರು?
Ame kae tsɔ nunya na dzi alo gɔmesese na susu?
37 ಮೋಡಗಳನ್ನು ಎಣಿಸುವ ಜ್ಞಾನ ಯಾರಿಗೆ ಇದೆ? ಆಕಾಶದಲ್ಲಿನ ಬುದ್ದಲಿಗಳನ್ನು ಸಾಗಿಸುವವರು ಯಾರು?
Ame ka sie nunya le be wòaxlẽ lilikpowo? Ame kae ate ŋu aviã tsizɔ siwo le dziƒo,
38 ಧೂಳುಮಣ್ಣನ್ನು ಒತ್ತಟ್ಟಿಗೆ ಸೇರುವಂತೆ ಮಾಡುವವರು ಯಾರು? ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಯಾರು ಮಾಡುವರು?
ne anyigba do kpe eye anyikɔ siwo le anyigba la lé ɖe wo nɔewo ŋu?
39 “ಗುಹೆಯಲ್ಲಿ ಮಲಗಿರುವ ಸಿಂಹದ ಆಹಾರಕ್ಕೋಸ್ಕರ ನೀನು ಬೇಟೆಯಾಡುವೆಯಾ? ಪ್ರಾಯದ ಸಿಂಹಗಳ ಹಸಿವೆಯನ್ನು ನೀನು ನೀಗಿಸುವೆಯಾ?
“Wòe daa ade na dzatanɔ eye nèdia nuɖuɖu na dzatawo, ne dɔ le wo wum
40 ಪೊದೆಯಲ್ಲಿ ಹೊಂಚು ಹಾಕಿರುವ, ಪ್ರಾಯದ ಸಿಂಹಗಳ ಹಸಿವೆಯನ್ನು ತೀರಿಸುವೆಯಾ?
eye womlɔ woƒe dowo me alo le adeklo dzi le ave mea?
41 ಹಸಿದ ಕಾಗೆ ಮರಿಗಳು ಆಹಾರ ಇಲ್ಲದೆ ಅಲೆದು, ದೇವರಿಗೆ ಮೊರೆ ಇಡುವಾಗ, ತಾಯಿ ಕಾಗೆಗೆ ಆಹಾರವನ್ನು ಒದಗಿಸುವವರು ಯಾರು?
Ame kae dia nuɖuɖu na akpaviãwo, ne viawo le xɔxlɔ̃m na Mawu eye wole tsatsam le nuɖuɖu makpɔmakpɔ ta?

< ಯೋಬನು 38 >