< ಯೋಬನು 12 >
1 ಅದಕ್ಕೆ ಯೋಬನು ಹೀಗೆ ಉತ್ತರಕೊಟ್ಟನು:
約伯回答說:
2 “ನಿಸ್ಸಂದೇಹವಾಗಿ ನೀವೇ ಆ ಜನರು; ನಿಮ್ಮ ಸಂಗಡಲೇ ಜ್ಞಾನವು ಸಾಯುವುದು.
的確,只有你們是有知識的子民;那麼,你們一死,智慧也與你們一同喪亡!
3 ನಿಮ್ಮ ಹಾಗೆಯೇ ನನಗೂ ಸಹ ತಿಳುವಳಿಕೆ ಉಂಟು; ನಾನು ನಿಮಗಿಂತ ಕಡಿಮೆ ಇಲ್ಲ; ಇಂಥಾ ವಿಷಯಗಳನ್ನು ತಿಳಿಯದಿರುವವನು ಯಾರು?
其實,我和你們有同樣的心理,我並不亞於你們! 誰不知道這些事﹖
4 “ನಾನು ನೀತಿವಂತನೂ, ನಿರ್ದೋಷಿಯಾದರೂ ಗೆಳೆಯರ ಗೇಲಿ ಪರಿಹಾಸ್ಯಕ್ಕೆ ಗುರಿಯಾದೆನು; ನಾನು ದೇವರಿಗೆ ಪ್ರಾರ್ಥಿಸಿದೆ; ದೇವರು ನನಗೆ ಉತ್ತರಕೊಟ್ಟರು;
我這呼籲天主而蒙應允的人,卻被他的友人所嘲笑,無辜的義人卻成了笑柄。
5 ಸುಖಜೀವಿಗಳಾಗಿರುವ ಜನರು ತೊಂದರೆಯಲ್ಲಿ ಇರುವವರನ್ನು ಅಪಹಾಸ್ಯ ಮಾಡುತ್ತಾರೆ, ಎಡವಿ ಬೀಳುವ ಜನರಿಗೆ ಕಾದಿದೆ ಆಪತ್ತು.
幸運的人心想:遭難的人應受蔑視,失足的人應再予以打擊。
6 ಕಳ್ಳರ ಗುಡಾರಗಳು ವೃದ್ಧಿಯಾಗಿವೆ; ದೇವರನ್ನು ಕೆರಳಿಸುವವರು ನಿಶ್ಚಿಂತರಾಗಿದ್ದಾರೆ; ದೇವರೇ ತಮ್ಮ ಕೈಯಲ್ಲಿ ಇರುವುದಾಗಿ ತಿಳಿಯುತ್ತಾರೆ.
但是,強盜的帳幕竟能安全,觸怒天主的人,以勢力為神的人卻享平安。
7 “ಆದರೂ ಮೃಗಗಳನ್ನು ಕೇಳು, ಅವು ನಿನಗೆ ಬೋಧಿಸುವುವು; ಆಕಾಶದ ಪಕ್ಷಿಗಳನ್ನು ಕೇಳು, ಅವು ನಿನಗೆ ತಿಳಿಸುವುವು.
請你詢問走獸,牠們也會開導你;詢問天上的飛鳥,牠們也會告訴你;
8 ಭೂಮಿಯ ಸಂಗಡ ಮಾತನಾಡು, ಅದು ನಿನಗೆ ಬೋಧಿಸುವುದು, ಸಮುದ್ರದ ಮೀನುಗಳು ನಿನಗೆ ವಿವರಿಸುವುವು.
地上的爬蟲也會教訓你,海中的魚族也會給你說明。
9 ಯೆಹೋವ ದೇವರ ಕೈ ಇವುಗಳನ್ನೆಲ್ಲಾ ಮಾಡಿತೆಂದು ಇವುಗಳಲ್ಲಿ ತಿಳಿಯದಿರುವುದು ಯಾವುದು?
牠們中有誰不知道:是天主的手創造了這一切﹖
10 ದೇವರ ಕೈಯಲ್ಲಿ ಎಲ್ಲಾ ಜೀವಿಗಳ ಪ್ರಾಣವೂ ಎಲ್ಲಾ ಮನುಷ್ಯರ ಶ್ವಾಸವೂ ಇವೆ.
因為一切活物的生魂,一切血肉之人的靈魂,都握在他手中。
11 ಬಾಯಿಯು ಆಹಾರವನ್ನು ರುಚಿ ನೋಡುವಂತೆ ಕಿವಿಯು ನುಡಿಗಳನ್ನು ವಿವೇಚಿಸುವುದಿಲ್ಲವೇ?
耳朵不是為明辨言語,口腔不是為辨嘗食物嗎﹖
12 ಮುದುಕರಲ್ಲಿ ಜ್ಞಾನವು ಇರುವುದಿಲ್ಲವೋ? ದೀರ್ಘಾಯುಷ್ಯರಲ್ಲಿ ತಿಳುವಳಿಕೆಯನ್ನು ತರುವುದಿಲ್ಲವೋ?
白髮老人是有智慧的,年紀大者是有見識的;
13 “ಜ್ಞಾನವೂ, ಶಕ್ತಿಯೂ ದೇವರಲ್ಲಿವೆ; ಸಮಾಲೋಚನೆಯೂ, ಗ್ರಹಿಕೆಯೂ ದೇವರವೇ.
但智慧和能力同在天主內,智慧與見識是天主所有。
14 ದೇವರು ಕೆಡವಿದ್ದನ್ನು ತಿರುಗಿ ಕಟ್ಟಲಾಗುವುದಿಲ್ಲ; ದೇವರು ಸೆರೆಯಲ್ಲಿ ಹಾಕುವ ಮನುಷ್ಯನನ್ನು ಯಾರೂ ಬಿಡಿಸಲಾಗುವುದಿಲ್ಲ.
他若拆毀,人不能再建;他若拘禁,人不得開釋。
15 ದೇವರು ಮಳೆಯನ್ನು ತಡೆಹಿಡಿಯುತ್ತಾರೆ, ಭೂಮಿ ಒಣಗುತ್ತದೆ; ದೇವರು ನೀರನ್ನು ಬಿಟ್ಟರೆ, ಭೂಮಿಯನ್ನು ಹಾಳುಮಾಡುತ್ತದೆ.
他若制水,水便乾涸;他若放水,水便沖毀大地。
16 ಬಲವೂ, ಜ್ಞಾನವೂ ದೇವರಲ್ಲಿವೆ; ವಂಚಕ ಹಾಗು ವಂಚಿತ ದೇವರಿಗೆ ಒಳಪಟ್ಟವರು.
力量與才能,為他所有;受騙者與騙人者,都屬於他。
17 ದೇವರು ಸಲಹೆಗಾರರನ್ನು ಸೆರೆಹಿಡಿಯುತ್ತಾರೆ; ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುತ್ತಾರೆ.
他使謀士糊塗,使判官愚蠢;
18 ದೇವರು ಅರಸರಿಂದ ಹಾಕಲಾದ ಬಂಧನಗಳನ್ನು ಬಿಚ್ಚಿ, ಅವರ ನಡುಗಳಿಗೆ ವಸ್ತ್ರವನ್ನು ಕಟ್ಟುತ್ತಾರೆ.
他解除君王所繫的玉帶,將繩索捆在他們的腰間;
19 ದೇವರು ಯಾಜಕರನ್ನು ಅಧಿಕಾರದಿಂದ ತೆಗೆದುಹಾಕುತ್ತಾರೆ; ಪ್ರಧಾನರನ್ನು ಕೆಡವಿಬಿಡುತ್ತಾರೆ.
他使司祭赤足而行,推倒掌握大權者;
20 ದೇವರು ವಿಶ್ವಾಸಾರ್ಹ ಸಲಹೆಗಾರರನ್ನು ಮೌನಗೊಳಿಸುತ್ತಾರೆ; ವೃದ್ಧರ ವಿವೇಚನೆಯನ್ನು ತೆಗೆದುಬಿಡುತ್ತಾರೆ.
奪去忠貞者的辯才,剝去年老者的理智:
21 ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯ್ಯುತ್ತಾರೆ; ಬಲಿಷ್ಠರ ಬಲವನ್ನು ಸಡಿಲಿಸುತ್ತಾರೆ.
使貴人備受侮辱,使勇士的腰帶鬆弛;
22 ದೇವರು ಕತ್ತಲೆಯೊಳಗಿಂದ ಅಗಾಧವಾದ ವಿಷಯಗಳನ್ನು ಪ್ರಕಟಪಡಿಸುತ್ತಾರೆ, ಗಾಢಾಂಧಕಾರವನ್ನು ಪ್ರಕಾಶಗೊಳಿಸುತ್ತಾರೆ.
使隱秘的事由暗處彰顯,使黑暗進入光明;
23 ದೇಶಗಳನ್ನು ಬೆಳೆಸುವುದೂ, ದಂಡಿಸುವುದೂ ದೇವರ ಕೈಯಲ್ಲಿದೆ; ದೇಶಗಳನ್ನು ವಿಸ್ತಾರಮಾಡುವುದೂ, ಚದರಿಸುವುದೂ ದೇವರ ಅಧಿಕಾರದಲ್ಲಿದೆ.
使邦國興起而又滅亡,使民族強大而又消散;
24 ದೇವರು ಭೂಮಿಯ ಮುಖ್ಯಸ್ಥರ ವಿವೇಚನೆಯನ್ನು ತೆಗೆದುಬಿಡುತ್ತಾರೆ; ಅಂಥವರು ಮಾರ್ಗವಿಲ್ಲದ ಅಲೆಯ ಮಾಡುವುದೂ ದೇವರಿಗೆ ಸಾಧ್ಯ.
剝去國君的理智,使他們漂泊於無路的荒野中,
25 ನಾಯಕರು ಬೆಳಕು ಇಲ್ಲದ ಕತ್ತಲೆಯಲ್ಲಿ ತಡಕಾಡುವಂತೆಯೂ ಅವರು ಮತ್ತೇರಿದವರಂತೆ ದಿಗ್ಭ್ರಮೆಗೊಳಿಸುವಂತೆಯೂ ಮಾಡಲು ದೇವರು ಶಕ್ತರು.
在無光的黑暗中摸索,踉蹌猶如醉漢。