< ಯೆರೆಮೀಯನು 52 >
1 ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದು; ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿ ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್.
Zedekiah el yac longoul sie matwal ke el tokosrala lun Judah, ac el leum in acn Jerusalem yac singoul sie. Inen nina kial pa Hamutal, acn natul Jeremiah se su muta in siti Libnah.
2 ಅವನು ಯೆಹೋಯಾಕೀಮನು ಮಾಡಿದಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
Tokosra Zedekiah el orekma koluk lain LEUM GOD, oapana Tokosra Jehoiakim.
3 ಯೆಹೋವ ದೇವರ ಕೋಪದಿಂದ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಇವೆಲ್ಲ ಉಂಟಾದವು. ಹೀಗೆ ಯೆಹೋವ ದೇವರು ಅವರನ್ನು ತಮ್ಮ ಸಮ್ಮುಖದಿಂದ ತಳ್ಳಿಬಿಟ್ಟರು. ಚಿದ್ಕೀಯನು ಬಾಬಿಲೋನಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು.
LEUM GOD El mutawauk in arulana kasrkusrak sin mwet Jerusalem ac Judah, oru El siselosla liki ye mutal. Zedekiah el tuyak lainul Tokosra Nebuchadnezzar lun Babylonia,
4 ಅವನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ, ಹತ್ತನೆಯ ದಿವಸದಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ತನ್ನ ಸಮಸ್ತ ಸೈನ್ಯ ಸಮೇತ ಯೆರೂಸಲೇಮಿಗೆ ವಿರೋಧವಾಗಿ ಬಂದು, ಅದಕ್ಕೆ ಎದುರಾಗಿ ದಂಡಿಳಿದು ಅದರ ಸುತ್ತಲೂ ಮಣ್ಣಿನ ದಿಬ್ಬಗಳನ್ನು ಮಾಡಿಸಿದನು.
ke ma inge Nebuchadnezzar el tuku wi un mwet mweun lal nukewa ac mweuni Jerusalem ke len aksingoul in malem aksingoul ke yac akeu ma Zedekiah el tokosra. Elos tulokunak iwen aktuktuk selos likin siti uh, musaela acn in fan rauneak acn we,
5 ಈ ಪ್ರಕಾರ ಅರಸನಾದ ಚಿದ್ಕೀಯನ ಹನ್ನೊಂದನೆಯ ವರ್ಷದವರೆಗೆ ಪಟ್ಟಣಕ್ಕೆ ಮುತ್ತಿಗೆಹಾಕಿದನು.
ac kuhlusya siti uh nwe ke yac aksingoul sie lal Zedekiah.
6 ನಾಲ್ಕನೆಯ ತಿಂಗಳಿನ ಒಂಬತ್ತನೆಯ ದಿವಸದಲ್ಲಿ ಪಟ್ಟಣದಲ್ಲಿ ಕ್ಷಾಮವು ಬಲವಾದದ್ದರಿಂದ ದೇಶದ ಜನರಿಗೆ ರೊಟ್ಟಿಯಿಲ್ಲದೆ ಹೋಯಿತು.
Ke len akeu in malem akakosr ke yac sacna, ke sracl uh arulana upa ac wanginla mongo nun mwet uh,
7 ಆಗ ಪಟ್ಟಣದ ಗೋಡೆ ಮುರಿಯಲಾಯಿತು. ಸೈನಿಕರೆಲ್ಲರು ಓಡಿಹೋಗಿ, ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದಲ್ಲಿ ಇದ್ದ ಬಾಗಿಲಿನ ಮಾರ್ಗವಾಗಿ ಹೊರಟು, ಬಾಬಿಲೋನಿನವರು ಪಟ್ಟಣದ ಬಳಿಯಲ್ಲಿ ಇದ್ದದ್ದರಿಂದ ಅವರು ಅರಾಬಾ ಎಂಬ ಕಣಿವೆ ಪ್ರದೇಶದ ಕಡೆಗೆ ಪಲಾಯನ ಮಾಡಿದರು.
mwet Babylonia elos fukulya pot uh. Elos ne kuhlusya siti sac, a mwet mweun nukewa in siti uh kaingla in fong sac. Elos ut yen ima lun tokosra oan we, ac sasla ke mutunpot se inmasrlon pot luo ah, na elos kaingla ut layen nu ke Infahlfal Jordan.
8 ಆಗ ಬಾಬಿಲೋನಿಯರ ದಂಡು ಅರಸನಾದ ಚಿದ್ಕೀಯನನ್ನು ಯೆರಿಕೋವಿನ ಬಯಲಿನಲ್ಲಿ ಹಿಂದಟ್ಟಿದರು; ಅಷ್ಟರಲ್ಲಿ ಅವನ ಸೈನಿಕರೆಲ್ಲ ಅವನನ್ನು ಬಿಟ್ಟು ಚದರಿಹೋಗಿದ್ದರು.
Tusruktu mwet mweun lun Babylonia ukwal Tokosra Zedekiah, sruokilya yen tupasrpasr apkuran nu Jericho, ac mwet mweun lal nukewa kaingla lukel.
9 ಅನಂತರ ಬಾಬಿಲೋನಿಯರು ಚಿದ್ಕೀಯನನ್ನು ಹಿಡಿದರು. ಅವನನ್ನು ಹಮಾತ್ ನಾಡಿನ ರಿಬ್ಲದಲ್ಲಿರುವ ತಮ್ಮ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ತೆಗೆದುಕೊಂಡು ಬಂದು, ಅವನ ಮೇಲೆ ನ್ಯಾಯವನ್ನು ನಿರ್ಣಯಿಸಿದರು.
Utukla Tokosra Zedekiah nu yorol Tokosra Nebuchadnezzar, su tuh muta in siti Riblah in acn Hamath, na Nebuchadnezzar el wotela ma ac orek nu sel we.
10 ಆ ಬಾಬಿಲೋನಿಯದ ಅರಸನು ಅಲ್ಲೇ ಚಿದ್ಕೀಯನಿಗೆ ಶಿಕ್ಷೆಯನ್ನು ವಿಧಿಸಿ, ಅವನ ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿದನು. ಯೆಹೂದದ ಎಲ್ಲಾ ಪದಾಧಿಕಾರಿಗಳನ್ನು ರಿಬ್ಲದಲ್ಲಿ ಕೊಲ್ಲಿಸಿದನು.
In acn Riblah el uniya kewa wen natul Zedekiah ye mutal, ac el oayapa sap in anwuki mwet leum lun Judah.
11 ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಕೀಳಿಸಿ, ಅವನಿಗೆ ಬೇಡಿಹಾಕಿಸಿ, ಬಾಬಿಲೋನಿಗೆ ತೆಗೆದುಕೊಂಡುಹೋಗಿ, ಜೀವನಾವಧಿಯವರೆಗೆ ಅವನನ್ನು ಸೆರೆಯಲ್ಲಿಟ್ಟನು.
Tukun ma inge, el sap tipulyukla atronmutal Zedekiah, ac kapiri el ke sein, ac utukla el nu Babylon. Zedekiah el mutana in presin in acn Babylon nwe ke el misa.
12 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದ ಐದನೆಯ ತಿಂಗಳಿನ, ಹತ್ತನೆಯ ದಿನದಲ್ಲಿ ಬಾಬಿಲೋನಿನ ಅರಸನ ಸೇವಕನೂ, ಕಾವಲಿನ ಅಧಿಪತಿಯೂ ಆಗಿದ್ದ ನೆಬೂಜರದಾನನು ಯೆರೂಸಲೇಮಿಗೆ ಬಂದು,
Ke len aksingoul in malem aklimekosr ke yac aksingoul eu lal Tokosra Nebuchadnezzar lun Babylonia, Nebuzaradan su mwet kasru fulat lal tokosra ac mwet sap lun un mwet mweun, el utyak nu Jerusalem.
13 ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ, ಯೆರೂಸಲೇಮಿನಲ್ಲಿರುವ ಸಮಸ್ತ ಮನೆಗಳನ್ನೂ, ಪ್ರತಿ ದೊಡ್ಡಮನುಷ್ಯರ ಮನೆಗಳನ್ನೂ ಬೆಂಕಿಯಿಂದ ಸುಟ್ಟುಬಿಟ್ಟನು.
El esukak Tempul, inkul fulat sin tokosra, ac lohm sin mwet leum nukewa in Jerusalem,
14 ಕಾವಲುಗಾರರ ಅಧಿಪತಿಯ ಸಂಗಡದಲ್ಲಿದ್ದ ಬಾಬಿಲೋನಿಯರ ಸೈನ್ಯದವರೆಲ್ಲರೂ ಯೆರೂಸಲೇಮಿನ ಸುತ್ತಲೂ ಇರುವ ಗೋಡೆಗಳನ್ನು ಕೆಡವಿಬಿಟ್ಟರು.
ac mwet mweun lal fukulya pot in siti sac.
15 ಕಾವಲಿನ ಅಧಿಪತಿಯಾದ ನೆಬೂಜರದಾನನು ಜನರಲ್ಲಿ ಬಡವರಾದ ಕೆಲವರನ್ನೂ, ಪಟ್ಟಣದಲ್ಲಿ ಉಳಿದ ಜನರನ್ನೂ, ಬಾಬಿಲೋನಿನ ಅರಸನಿಗೆ ಮರೆಹೊಕ್ಕವರನ್ನೂ, ಬೇರೆ ಎಲ್ಲಾ ಜನರನ್ನೂ ಸೆರೆಯಾಗಿ ಒಯ್ದನು.
Na Nebuzaradan el usla nu Babylonia mwet ma lula in siti sac, wi elos su usrnguk ke orekma, ac elos su sifacna kaingla nu yurin mwet Babylonia.
16 ಆದರೆ ನೆಬೂಜರದಾನನು ಹೊಲಗಳನ್ನು ಮತ್ತು ದ್ರಾಕ್ಷಿತೋಟಗಳನ್ನು ಬೇಸಾಯ ಮಾಡುವದಕ್ಕಾಗಿ ದೇಶದ ಜನರಲ್ಲಿ ಕೇವಲ ಬಡವರನ್ನು ಮಾತ್ರ ಬಿಟ್ಟುಹೋದನು.
Tusruktu el filiya kutu sin mwet su arulana sukasrup in mutana in acn Judah, ac el sang elos in orekma ke nien grape ac acn in ima saya.
17 ಯೆಹೋವ ದೇವರ ಆಲಯದಲ್ಲಿದ್ದ ಕಂಚಿನ ಸ್ತಂಭಗಳನ್ನೂ, ಪೀಠಗಳನ್ನೂ, ಕಂಚಿನ ಸಮುದ್ರವೆಂಬ ಪಾತ್ರೆಯನ್ನೂ ಬಾಬಿಲೋನಿಯರು ಒಡೆದುಹಾಕಿ, ಅದರ ಎಲ್ಲಾ ಕಂಚನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು.
Mwet Babylonia elos kunausla sru bronze, ac mwe wiwa ma oan in Tempul, weang tacng bronze lulap sac, na elos usla bronze inge nukewa nu Babylon.
18 ಇದಲ್ಲದೆ ಅವರು ಆಲಯದ ಸೇವೆಗಾಗಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಸಾಂಬ್ರಾಣಿಕಳಸ ಮತ್ತು ಸಮಸ್ತ ಕಂಚಿನ ಸಲಕರಣೆಗಳನ್ನೂ ತೆಗೆದುಕೊಂಡು ಹೋದರು.
Elos usla pac saful, ac mwe neinyuk apat ma orekmakinyuk nu ke aknasnasye loang in kisa, mwe kosrkosr wik, pol ma orekmakinyuk in nein srah ke ma kisakinyuk, pol in akok mwe keng, ac ma bronze nukewa saya ma orekmakinyuk in Tempul.
19 ಕಾವಲುಗಾರರ ಅಧಿಪತಿಯು ಬೋಗುಣಿಗಳನ್ನೂ, ಅಗ್ನಿ ಪಾತ್ರೆಗಳನ್ನೂ, ಬಟ್ಟಲುಗಳನ್ನೂ ಬೋಗುಣಿಗಳನ್ನೂ, ದೀಪಸ್ತಂಭಗಳನ್ನೂ, ಸೌಟುಗಳನ್ನೂ, ಪಾನಾರ್ಪಣೆಯ ಪಾತ್ರೆ ಬಂಗಾರ ಬೆಳ್ಳಿಗಳಿಂದ ಮಾಡಿದ ಎಲ್ಲವನ್ನೂ ತೆಗೆದುಕೊಂಡನು.
Elos usla ma nukewa ma orekla ke gold ac silver: pol srisrik, pan in utuk mulut firir, pol in nein srah ke mwe kisa, mwe neinyuk apat, sukan lam, pol in akok mwe keng, ac pol nu ke okwok wain in kisa.
20 ಅರಸನಾದ ಸೊಲೊಮೋನನು ಯೆಹೋವ ದೇವರ ಆಲಯಕ್ಕಾಗಿ ಮಾಡಿಸಿದ್ದ ಎರಡು ಕಂಬಗಳು, ನೀರನ್ನು ಸಂಗ್ರಹಿಸಲು ಮಾಡಿದ ದೊಡ್ಡ ಕಂಚಿನ ಪಾತ್ರೆ, ಪೀಠಗಳನ್ನು ಹೊರುವ ಹನ್ನೆರಡು ಕಂಚಿನ ಹೋರಿಗಳು, ಇವುಗಳನ್ನು ಮಾಡುವುದಕ್ಕೆ ತೂಕ ಮಾಡಲಾರದಷ್ಟು ಕಂಚು ಹಿಡಿದಿತ್ತು.
Ma orekla ke bronze, ma Tokosra Solomon el orala lun Tempul — sru lukwa, mwe wiwa, tacng lulap sac wi cow mukul bronze singoul lukwa loangeya — ma inge arulana toasr ac tia ku in pauniyuki.
21 ಕಂಬಗಳಲ್ಲಿ ಮೊದಲನೆಯ ಕಂಬ ಎಂಟು ಮೀಟರ್ ಎತ್ತರವಿತ್ತು, ಅದರ ಸುತ್ತಳತೆ ಸುಮಾರು ಐದು ಮೀಟರ್.
Sru lukwa uh oana sie lumah — fit longoul itkosr fulata ac fit singoul oalkosr raunyak, kewana oalal, ac matoltoliyen bronze kac inch tolu.
22 ಕಂಬದ ಮೇಲೆ ಎತ್ತರವಾದ ಒಂದು ಕಂಚಿನ ಕುಂಭವಿತ್ತು, ಆ ಕುಂಭದ ಮೇಲೆ ಸುತ್ತಲೂ ಕಂಚಿನ ಜಾಲರಿ ಹಾಗೂ ದಾಳಿಂಬೆ ಹಣ್ಣುಗಳು ಇದ್ದವು. ಎರಡನೆಯ ಕಂಬವು ದಾಳಿಂಬೆ ಹಣ್ಣುಗಳಿಂದ ಹಾಗೆಯೇ ಅಲಂಕಾರವಾಗಿತ್ತು.
Sifen sru inge fit itkosr tafu ke kais soko, orekla mwe yun kac in luman sein ac pomegranate — ma inge nukewa orekla ke bronze.
23 ನಾಲ್ಕು ಪಕ್ಕಗಳಲ್ಲಿ ತೊಂಬತ್ತಾರು ದಾಳಿಂಬೆ ಹಣ್ಣುಗಳಿದ್ದವು. ಜಾಲರಿಯ ಮೇಲೆ ಸುತ್ತಲೂ ಒಟ್ಟಿಗೆ ನೂರು ದಾಳಿಂಬೆ ಹಣ್ಣುಗಳಿದ್ದವು.
Ke acn yunla inge fin kais soko sru, oasr pomegranate siofok nufon, ac ma eungoul onkosr ke ma inge pa ku in liyeyuk tenyak.
24 ಕಾವಲುಗಾರರ ಅಧಿಪತಿಯು ಮುಖ್ಯಯಾಜಕನಾದ ಸೆರಾಯನನ್ನೂ, ಎರಡನೆಯ ಯಾಜಕನಾದ ಚೆಫನ್ಯನನ್ನೂ, ಮೂವರು ದ್ವಾರಪಾಲಕರನ್ನೂ ಹಿಡಿದುಕೊಂಡು ಹೋದನು.
Sayen ma inge, Nebuzaradan, mwet kol fulat lun mwet mweun, el usalla pac Seraiah mwet Tol Fulat, Zephaniah mwet tol akluo yal, ac mwet fulat tolu saya lun Tempul nu in sruoh.
25 ಇದಲ್ಲದೆ ಪಟ್ಟಣದೊಳಗಿಂದ ಸೈನಿಕರ ಮೇಲಿದ್ದ ಒಬ್ಬ ಅಧಿಕಾರಿಯನ್ನೂ, ಅರಸನ ಏಳುಮಂದಿ ಸಲಹೆಗಾರರನ್ನೂ, ಯುದ್ಧಕ್ಕೆ ಹೋಗತಕ್ಕವರ ಪಟ್ಟಿಮಾಡುವ ಸೇನಾಧಿಪತಿಯ ಲೇಖಕನನ್ನೂ, ಪಟ್ಟಣದ ಮಧ್ಯದಲ್ಲಿ ಸಿಕ್ಕಿದ ದೇಶದ ಜನರಲ್ಲಿ ಅರವತ್ತು ಮಂದಿಯನ್ನೂ ತೆಗೆದುಕೊಂಡನು.
El usla pac liki siti uh leum se su mwet sap lun un mwet mweun, itkosr sin mwet kasru nu sel tokosra sifacna su tuh srakna oasr in siti uh, mwet kasru lal mwet kol fulat su karingin ma simla lun mwet mweun, ac mwet yohk sripa onngoul saya.
26 ಇವರನ್ನೆಲ್ಲಾ ಕಾವಲಿನ ಅಧಿಪತಿಯಾದ ನೆಬೂಜರದಾನನು ಹಿಡಿದುಕೊಂಡುಹೋಗಿ, ರಿಬ್ಲದಲ್ಲಿದ್ದ ಬಾಬಿಲೋನಿನ ಅರಸನಿಗೆ ಒಪ್ಪಿಸಿದನು.
Nebuzaradan el usalosla nu yorol tokosra lun Babylonia, nu in siti Riblah
27 ಬಾಬಿಲೋನಿನ ಅರಸನು ಹಮಾತಿನ ರಿಬ್ಲದಲ್ಲಿ ಅವರನ್ನು ಕೊಂದುಹಾಕಿಸಿದನು. ಈ ಪ್ರಕಾರ ಯೆಹೂದ್ಯರು ಸೆರೆಯಾಳುಗಳಾಗಿ ತಮ್ಮ ದೇಶವನ್ನು ಬಿಟ್ಟುಹೋಗಬೇಕಾಯಿತು.
in acn Hamath. Na tokosra el sap in sringsring elos ac anwuki. Ouinge mwet Judah utukla liki facl selos nu in sruoh.
28 ನೆಬೂಕದ್ನೆಚ್ಚರನು ಸೆರೆಯಾಗಿ ಒಯ್ದ ಜನರ ಪಟ್ಟಿ ಹೀಗಿದೆ: ಅವನು ತನ್ನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಸೆರೆಗೊಯ್ದದ್ದು 3,023 ಮಂದಿ ಯೆಹೂದ್ಯರನ್ನು;
Pa inge ma simla ke mwet ma Nebuchadnezzar el usla nu in sruoh: ke yac akitkosr lal in tokosra, el usla mwet tolu tausin longoul tolu;
29 ನೆಬೂಕದ್ನೆಚ್ಚರನ ಹದಿನೆಂಟನೆಯ ವರ್ಷದಲ್ಲಿ 832 ಮಂದಿಯನ್ನು ಅವನು ಯೆರೂಸಲೇಮಿನಿಂದ ಸೆರೆಗೊಯ್ದನು;
in yac aksingoul oalkosr lal, el usla mwet oalfoko tolngoul luo liki acn Jerusalem;
30 ನೆಬೂಕದ್ನೆಚ್ಚರನು ಇಪ್ಪತ್ತು ಮೂರನೆಯ ವರ್ಷದಲ್ಲಿ ಕಾವಲಿನ ಅಧಿಪತಿಯಾದ ನೆಬೂಜರದಾನನು 745 ಮಂದಿ ಯೆಹೂದ್ಯರನ್ನು ಸೆರೆಗೊಯ್ದನು. ಹೀಗೆ ಸೆರೆಯಾದವರ ಮೊತ್ತ 4,600 ಮಂದಿ.
ac in yac aklongoul tolu lal, Nebuzaradan el usla mwet itfoko angngaul limekosr. Pisen mwet nukewa ma utukla nu in sruoh pa tausin akosr onfoko.
31 ಯೆಹೂದದ ಅರಸನಾದ ಯೆಹೋಯಾಖೀನನ ಸೆರೆಯ ಮೂವತ್ತೇಳನೆಯ ವರ್ಷದ ಹನ್ನೆರಡನೆಯ ತಿಂಗಳಿನ ಇಪ್ಪತ್ತೈದನೆಯ ದಿವಸದಲ್ಲಿ ಆದದ್ದೇನೆಂದರೆ, ಬಾಬಿಲೋನಿನ ಅರಸನಾದ ಎವೀಲ್ಮೆರೋದಕನು ತನ್ನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ, ಅವನು ಯೆಹೂದದ ಅರಸನಾದ ಯೆಹೋಯಾಖೀನನನ್ನು ಸೆರೆಮನೆಯಿಂದ ಬಿಡಿಸಿದನು.
In yac se ma Evilmerodach el tokosrala lun Babylonia, el akkalemye kulang lal nu sel Tokosra Jehoiachin lun Judah ac tulalla liki kapir. Ma se inge sikyak ke len aklongoul limekosr ke malem aksingoul luo in yac aktolngoul itkosr tukun utukla Jehoiachin nu in sruoh.
32 ಇದಲ್ಲದೆ ಅವನ ಸಂಗಡ ಪ್ರೀತಿಯಿಂದ ಮಾತನಾಡಿ, ತನ್ನ ಸಂಗಡ ಬಾಬೆಲಿನಲ್ಲಿದ್ದ ಎಲ್ಲಾ ಅರಸರಿಗಿಂತ ಅವನಿಗೆ ಉನ್ನತಸ್ಥಾನವನ್ನು ಕೊಟ್ಟನು.
Evilmerodach el oru wo nu sel, ac akfulatyal liki tokosra nukewa saya su welul sruoh in Babylonia.
33 ಅವನ ಸೆರೆಯ ವಸ್ತ್ರಗಳನ್ನು ತೆಗೆದು ರಾಜವಸ್ತ್ರ ತೊಡಿಸಿದನು. ಹೀಗೆ ಯೆಹೋಯಾಖೀನನು ಬದುಕಿದ ಸಕಲ ದಿವಸಗಳಲ್ಲಿ ಅರಸನ ಪಂಕ್ತಿಯಲ್ಲಿಯೇ ಊಟಮಾಡುತ್ತಿದ್ದನು.
Ouinge filfilla nu sel Jehoiachin elan ku in ayaolla liki nuknuk in kapir lal, ac welul tokosra mongo ke tepu lal ke lusenna moul lal.
34 ಅವನ ಜೀವಿತ ಕಾಲವೆಲ್ಲಾ ಸಾಯುವ ತನಕ, ಅವನಿಗೆ ಬೇಕಾಗಿದ್ದ ಎಲ್ಲಾ ಪದಾರ್ಥಗಳು ಬಾಬಿಲೋನಿನ ಅರಸನಿಂದಲೇ ಪ್ರತಿನಿತ್ಯವೂ ದೊರಕುತ್ತಿದ್ದವು.
Ke kais sie len, ac itukyang nu sel lupan mwe kasru ma fal nu ke enenu lal, nwe ke na el misa.