< ಯೆರೆಮೀಯನು 36 >

1 ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ನಾಲ್ಕನೆಯ ವರ್ಷದಲ್ಲಿ ಯೆರೆಮೀಯನಿಗೆ ಯೆಹೋವ ದೇವರಿಂದ ಈ ವಾಕ್ಯವು ಬಂದಿತು:
וַֽיְהִי בַּשָּׁנָה הָרְבִיעִת לִיהוֹיָקִים בֶּן־יֹאשִׁיָּהוּ מֶלֶךְ יְהוּדָה הָיָה הַדָּבָר הַזֶּה אֶֽל־יִרְמְיָהוּ מֵאֵת יְהוָה לֵאמֹֽר׃
2 “ಗ್ರಂಥದ ಸುರುಳಿಯನ್ನು ತೆಗೆದುಕೊಂಡು ನಾನು ಇಸ್ರಾಯೇಲ್, ಯೆಹೂದ ಮತ್ತು ಸಕಲ ಜನಾಂಗಗಳ ವಿರೋಧವಾಗಿಯೂ ನಿನ್ನ ಸಂಗಡ ಮಾತನಾಡಿದ ದಿನದಿಂದ, ಯೋಷೀಯನ ದಿವಸಗಳು ಮೊದಲುಗೊಂಡು ಈ ದಿವಸದವರೆಗೂ ನಿನಗೆ ಹೇಳಿದ ವಾಕ್ಯಗಳನ್ನೆಲ್ಲಾ ಅದರಲ್ಲಿ ಬರೆ.
קַח־לְךָ מְגִלַּת־סֵפֶר וְכָתַבְתָּ אֵלֶיהָ אֵת כָּל־הַדְּבָרִים אֲשֶׁר־דִּבַּרְתִּי אֵלֶיךָ עַל־יִשְׂרָאֵל וְעַל־יְהוּדָה וְעַל־כָּל־הַגּוֹיִם מִיּוֹם דִּבַּרְתִּי אֵלֶיךָ מִימֵי יֹאשִׁיָּהוּ וְעַד הַיּוֹם הַזֶּֽה׃
3 ಒಂದು ವೇಳೆ ಯೆಹೂದದ ಮನೆತನದವರು ನಾನು ಅವರಿಗೆ ಮಾಡುವುದಕ್ಕೆ ನೆನಸುವ ಕೇಡನ್ನೆಲ್ಲಾ ಕೇಳಿ ನಾನು ಅವರ ಅಕ್ರಮವನ್ನೂ, ಅವರ ಪಾಪವನ್ನೂ ಮನ್ನಿಸುವ ಹಾಗೆ ತಮ್ಮ ತಮ್ಮ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು,” ಎಂದನು.
אוּלַי יִשְׁמְעוּ בֵּית יְהוּדָה אֵת כָּל־הָרָעָה אֲשֶׁר אָנֹכִי חֹשֵׁב לַעֲשׂוֹת לָהֶם לְמַעַן יָשׁוּבוּ אִישׁ מִדַּרְכּוֹ הָרָעָה וְסָלַחְתִּי לַעֲוֺנָם וּלְחַטָּאתָֽם׃
4 ಆಗ ಯೆರೆಮೀಯನು ನೇರೀಯನ ಮಗ ಬಾರೂಕನನ್ನು ಕರೆದನು. ಬಾರೂಕನು ಯೆರೆಮೀಯನ ಬಾಯಿಂದ ಯೆಹೋವ ದೇವರು ಅವನಿಗೆ ಹೇಳಿದ್ದ ಮಾತುಗಳನ್ನೆಲ್ಲಾ ಕೇಳಿ, ಗ್ರಂಥದ ಸುರುಳಿಯನ್ನು ಬರೆದನು.
וַיִּקְרָא יִרְמְיָהוּ אֶת־בָּרוּךְ בֶּן־נֵֽרִיָּה וַיִּכְתֹּב בָּרוּךְ מִפִּי יִרְמְיָהוּ אֵת כָּל־דִּבְרֵי יְהוָה אֲשֶׁר־דִּבֶּר אֵלָיו עַל־מְגִלַּת־סֵֽפֶר׃
5 ಆಮೇಲೆ ಯೆರೆಮೀಯನು ಬಾರೂಕನಿಗೆ ಆಜ್ಞಾಪಿಸಿದ್ದೇನೆಂದರೆ, “ನಾನು ಇಲ್ಲಿ ಬಂಧಿಸಲಾಗಿದ್ದೇನೆ. ಯೆಹೋವ ದೇವರ ಆಲಯಕ್ಕೆ ಹೋಗಲಾರೆನು.
וַיְצַוֶּה יִרְמְיָהוּ אֶת־בָּרוּךְ לֵאמֹר אֲנִי עָצוּר לֹא אוּכַל לָבוֹא בֵּית יְהוָֽה׃
6 ಆದ್ದರಿಂದ ನೀನು ಹೋಗಿ ನನ್ನ ಬಾಯಿಂದ ಕೇಳಿ, ನೀನು ಬರೆದು ಸುರುಳಿಯಲ್ಲಿ ಯೆಹೋವ ದೇವರ ಆಲಯದೊಳಗೆ ಉಪವಾಸದ ದಿವಸದಲ್ಲಿ ಯೆಹೋವ ದೇವರ ವಾಕ್ಯಗಳನ್ನು ಜನರಿಗೆ ಕೇಳುವಂತೆ ಓದಿ ಹೇಳು ಮತ್ತು ತಮ್ಮ ಪಟ್ಟಣಗಳಿಂದ ಬರುವ ಯೆಹೂದದವರೆಲ್ಲರೂ ಕೇಳುವಂತೆಯೂ ಅವುಗಳನ್ನು ಓದಿ ಹೇಳಬೇಕು.
וּבָאתָ אַתָּה וְקָרָאתָ בַמְּגִלָּה אֲשֶׁר־כָּתַֽבְתָּ־מִפִּי אֶת־דִּבְרֵי יְהוָה בְּאָזְנֵי הָעָם בֵּית יְהוָה בְּיוֹם צוֹם וְגַם בְּאָזְנֵי כָל־יְהוּדָה הַבָּאִים מֵעָרֵיהֶם תִּקְרָאֵֽם׃
7 ಒಂದು ವೇಳೆ ಅವರ ವಿಜ್ಞಾಪನೆ ಯೆಹೋವ ದೇವರ ಮುಂದೆ ಬಂದೀತು. ಅವರು ತಮ್ಮ ತಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು. ಏಕೆಂದರೆ ಯೆಹೋವ ದೇವರು ಈ ಜನರಿಗೆ ವಿರೋಧವಾಗಿ ಪ್ರಕಟಿಸಿರುವ ಕೋಪವೂ, ಉರಿಯೂ ಅಪಾರವಾಗಿದೆ.”
אוּלַי תִּפֹּל תְּחִנָּתָם לִפְנֵי יְהוָה וְיָשֻׁבוּ אִישׁ מִדַּרְכּוֹ הָרָעָה כִּֽי־גָדוֹל הָאַף וְהַחֵמָה אֲשֶׁר־דִּבֶּר יְהוָה אֶל־הָעָם הַזֶּֽה׃
8 ಆಗ ನೇರೀಯನ ಮಗ ಬಾರೂಕನು ಪ್ರವಾದಿಯಾದ ಯೆರೆಮೀಯನು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿ, ಸುರುಳಿಯಲ್ಲಿನ ಯೆಹೋವ ದೇವರ ವಾಕ್ಯಗಳನ್ನು ಯೆಹೋವ ದೇವರ ಆಲಯದಲ್ಲಿ ಓದಿದನು.
וַיַּעַשׂ בָּרוּךְ בֶּן־נֵרִיָּה כְּכֹל אֲשֶׁר־צִוָּהוּ יִרְמְיָהוּ הַנָּבִיא לִקְרֹא בַסֵּפֶר דִּבְרֵי יְהוָה בֵּית יְהֹוָֽה׃
9 ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ಐದನೆಯ ವರ್ಷದ ಒಂಬತ್ತನೆಯ ತಿಂಗಳಲ್ಲಿ ಅವರು ಯೆರೂಸಲೇಮಿನಲ್ಲಿರುವ ಎಲ್ಲಾ ಜನರಿಗೂ, ಯೆಹೂದದ ಪಟ್ಟಣಗಳಿಂದ ಯೆರೂಸಲೇಮಿಗೆ ಬಂದ ಜನರೆಲ್ಲರಿಗೂ ಯೆಹೋವ ದೇವರ ಸನ್ನಿಧಿಯಲ್ಲಿ ಉಪವಾಸವನ್ನು ಸಾರಿದನು.
וַיְהִי בַשָּׁנָה הַחֲמִשִׁית לִיהוֹיָקִים בֶּן־יֹאשִׁיָּהוּ מֶֽלֶךְ־יְהוּדָה בַּחֹדֶשׁ הַתְּשִׁעִי קָרְאוּ צוֹם לִפְנֵי יְהוָה כָּל־הָעָם בִּירֽוּשָׁלָ͏ִם וְכָל־הָעָם הַבָּאִים מֵעָרֵי יְהוּדָה בִּירוּשָׁלָֽ͏ִם׃
10 ಆಗ ಬಾರೂಕನು ಪುಸ್ತಕದಿಂದ ಯೆರೆಮೀಯನ ವಾಕ್ಯಗಳನ್ನು ಯೆಹೋವ ದೇವರ ಆಲಯದಲ್ಲಿ ಲೇಖಕನಾಗಿರುವ ಶಾಫಾನನ ಮಗನಾಗಿರುವ ಗೆಮರೀಯನ ಕೊಠಡಿಯಲ್ಲಿ ಮೇಲಿನ ಅಂಗಳದಲ್ಲಿ, ಯೆಹೋವ ದೇವರ ಆಲಯದ ಹೊಸ ಬಾಗಿಲಿನ ಪ್ರವೇಶದಲ್ಲಿ ಎಲ್ಲಾ ಜನರು ಕೇಳುವಂತೆ ಓದಿ ಹೇಳಿದನು.
וַיִּקְרָא בָרוּךְ בַּסֵּפֶר אֶת־דִּבְרֵי יִרְמְיָהוּ בֵּית יְהוָה בְּלִשְׁכַּת גְּמַרְיָהוּ בֶן־שָׁפָן הַסֹּפֵר בֶּחָצֵר הָעֶלְיוֹן פֶּתַח שַׁעַר בֵּית־יְהוָה הֶֽחָדָשׁ בְּאָזְנֵי כָּל־הָעָֽם׃
11 ಶಾಫಾನನ ಮೊಮ್ಮಗನೂ, ಗೆಮರೀಯನ ಮಗನೂ ಆದ ಮೀಕಾಯನು ಸುರುಳಿಯಿಂದ ಓದಲಾದ ಯೆಹೋವ ದೇವರ ವಾಕ್ಯಗಳನ್ನು ಕೇಳಿದನು. ಅಲ್ಲಿಂದ ಅರಮನೆಯಲ್ಲಿದ್ದ ಲೇಖಕನ ಕೊಠಡಿಗೆ ಇಳಿದು ಹೋದನು.
וַיִּשְׁמַע מִכָיְהוּ בֶן־גְּמַרְיָהוּ בֶן־שָׁפָן אֶת־כָּל־דִּבְרֵי יְהוָה מֵעַל הַסֵּֽפֶר׃
12 ಅಲ್ಲಿ ಲೇಖಕ ಎಲೀಷಾಮನು, ಶೆಮಾಯನ ಮಗ ದೆಲಾಯನು, ಅಕ್ಬೋರನ ಮಗ ಎಲ್ನಾಥಾನನು, ಶಾಫಾನನ ಮಗ ಗೆಮರೀಯನು, ಹನನ್ಯನ ಮಗ ಚಿದ್ಕೀಯನು ಹೀಗೆ ರಾಜ್ಯಾಧಿಕಾರಿಗಳೆಲ್ಲರೂ ಕುಳಿತುಕೊಂಡಿದ್ದರು.
וַיֵּרֶד בֵּית־הַמֶּלֶךְ עַל־לִשְׁכַּת הַסֹּפֵר וְהִנֵּה־שָׁם כָּל־הַשָּׂרִים יֽוֹשְׁבִים אֱלִישָׁמָע הַסֹּפֵר וּדְלָיָהוּ בֶן־שְׁמַעְיָהוּ וְאֶלְנָתָן בֶּן־עַכְבּוֹר וּגְמַרְיָהוּ בֶן־שָׁפָן וְצִדְקִיָּהוּ בֶן־חֲנַנְיָהוּ וְכָל־הַשָּׂרִֽים׃
13 ಆಗ ಮೀಕಾಯನು ಅವರಿಗೆ ಬಾರೂಕನು ಆ ಪುಸ್ತಕವನ್ನು ಜನರಿಗೆ ಓದಿ ಹೇಳಿದಾಗ, ತಾನು ಕೇಳಿದ ವಾಕ್ಯಗಳನ್ನೆಲ್ಲಾ ತಿಳಿಸಿದನು.
וַיַּגֵּד לָהֶם מִכָיְהוּ אֵת כָּל־הַדְּבָרִים אֲשֶׁר שָׁמֵעַ בִּקְרֹא בָרוּךְ בַּסֵּפֶר בְּאָזְנֵי הָעָֽם׃
14 ಅಧಿಕಾರಿಗಳೆಲ್ಲರು ಸೇರಿ ನೆತನ್ಯನ ಮಗನೂ, ಶೆಲೆಮ್ಯನ ಮೊಮ್ಮಗನೂ, ಕೂಷಿಯ ಮರಿಮಗನೂ ಆದ ಯೆಹೂದಿಯನ್ನು ಬಾರೂಕನ ಬಳಿಗೆ ಕಳುಹಿಸಿದನು. “ನೀನು ಜನರ ಮುಂದೆ ಓದಿದ ಸುರುಳಿಯನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಬಾ,” ಎಂದು ಹೇಳಿ ಕಳುಹಿಸಿದರು. ಅಂತೆಯೇ ನೇರೀಯನ ಮಗ ಬಾರೂಕನು ಸುರುಳಿಯನ್ನು ತನ್ನ ಕೈಯಲ್ಲೆ ತೆಗೆದುಕೊಂಡು ಅವರ ಬಳಿಗೆ ಕೂಡಲೇ ಬಂದನು.
וַיִּשְׁלְחוּ כָל־הַשָּׂרִים אֶל־בָּרוּךְ אֶת־יְהוּדִי בֶּן־נְתַנְיָהוּ בֶּן־שֶׁלֶמְיָהוּ בֶן־כּוּשִׁי לֵאמֹר הַמְּגִלָּה אֲשֶׁר קָרָאתָ בָּהּ בְּאָזְנֵי הָעָם קָחֶנָּה בְיָדְךָ וָלֵךְ וַיִּקַּח בָּרוּךְ בֶּן־נֵרִיָּהוּ אֶת־הַמְּגִלָּה בְּיָדוֹ וַיָּבֹא אֲלֵיהֶֽם׃
15 ಆಗ ಅವರು ಅವನಿಗೆ, “ಈಗ ಕುಳಿತುಕೊಂಡು ನಮಗೆ ಓದಿ ಹೇಳು,” ಎಂದರು. ಆಗ ಬಾರೂಕನು ಅವರಿಗೆ ಓದಿ ಹೇಳಿದನು.
וַיֹּאמְרוּ אֵלָיו שֵׁב נָא וּקְרָאֶנָּה בְּאָזְנֵינוּ וַיִּקְרָא בָרוּךְ בְּאָזְנֵיהֶֽם׃
16 ಆಗ ಅವರು ಆ ವಾಕ್ಯಗಳನ್ನೆಲ್ಲಾ ಕೇಳಿದ ಮೇಲೆ ಒಬ್ಬರಿಗೊಬ್ಬರು ಹೆದರಿಕೊಂಡು, “ನಾವು ನಿಶ್ಚಯವಾಗಿ ಈ ವಾಕ್ಯಗಳನ್ನೆಲ್ಲಾ ಅರಸನಿಗೆ ತಿಳಿಸುತ್ತೇವೆ,” ಎಂದು ಬಾರೂಕನಿಗೆ ಹೇಳಿದರು.
וַיְהִי כְּשָׁמְעָם אֶת־כָּל־הַדְּבָרִים פָּחֲדוּ אִישׁ אֶל־רֵעֵהוּ וַיֹּֽאמְרוּ אֶל־בָּרוּךְ הַגֵּיד נַגִּיד לַמֶּלֶךְ אֵת כָּל־הַדְּבָרִים הָאֵֽלֶּה׃
17 ಅವರು ಬಾರೂಕನಿಗೆ, “ನೀನು ಅವನ ಬಾಯಿಂದ ಈ ವಾಕ್ಯಗಳನ್ನೆಲ್ಲಾ ಹೇಗೆ ಬರೆದೆ, ನಮಗೆ ತಿಳಿಸು,” ಎಂದರು.
וְאֶת־בָּרוּךְ שָׁאֲלוּ לֵאמֹר הַגֶּד־נָא לָנוּ אֵיךְ כָּתַבְתָּ אֶת־כָּל־הַדְּבָרִים הָאֵלֶּה מִפִּֽיו׃
18 ಆಗ ಬಾರೂಕನು ಅವರಿಗೆ, “ಅವನು ಈ ವಾಕ್ಯಗಳನ್ನೆಲ್ಲಾ ನನಗೆ ಹೇಳಿಕೊಟ್ಟನು. ನಾನು ಅವುಗಳನ್ನು ಮಸಿಯಿಂದ ಸುರುಳಿಯಲ್ಲಿ ಬರೆದೆನು,” ಎಂದನು.
וַיֹּאמֶר לָהֶם בָּרוּךְ מִפִּיו יִקְרָא אֵלַי אֵת כָּל־הַדְּבָרִים הָאֵלֶּה וַאֲנִי כֹּתֵב עַל־הַסֵּפֶר בַּדְּיֽוֹ׃
19 ಆಗ ಪ್ರಧಾನರು ಬಾರೂಕನಿಗೆ, “ನೀನೂ, ಯೆರೆಮೀಯನೂ ಹೋಗಿ ಅಡಗಿಕೊಳ್ಳಿರಿ; ನೀವು ಎಲ್ಲಿದ್ದೀರೆಂಬುದು ಯಾರಿಗೂ ಗೊತ್ತಾಗಬಾರದು,” ಎಂದರು.
וַיֹּאמְרוּ הַשָּׂרִים אֶל־בָּרוּךְ לֵךְ הִסָּתֵר אַתָּה וְיִרְמְיָהוּ וְאִישׁ אַל־יֵדַע אֵיפֹה אַתֶּֽם׃
20 ಆಮೇಲೆ ಅವರು ಅರಸನ ಬಳಿಗೆ ಅಂಗಳಕ್ಕೆ ಹೋದರು; ಆದರೆ ಆ ಸುರುಳಿಯನ್ನು ಲೇಖಕನಾದ ಎಲೀಷಾಮನ ಕೊಠಡಿಯಲ್ಲಿ ಇಟ್ಟುಬಿಟ್ಟರು ಮತ್ತು ಅರಸನಿಗೆ ಆ ವಾಕ್ಯಗಳನ್ನೆಲ್ಲಾ ಹೇಳಿದರು.
וַיָּבֹאוּ אֶל־הַמֶּלֶךְ חָצֵרָה וְאֶת־הַמְּגִלָּה הִפְקִדוּ בְּלִשְׁכַּת אֱלִישָׁמָע הַסֹּפֵר וַיַּגִּידוּ בְּאָזְנֵי הַמֶּלֶךְ אֵת כָּל־הַדְּבָרִֽים׃
21 ಹೀಗೆ ಅರಸನು ಯೆಹೂದಿಯನ್ನು, ಆ ಸುರುಳಿಯನ್ನು ತೆಗೆದುಕೊಂಡು ಬರುವ ಹಾಗೆ ಕಳುಹಿಸಿದನು; ಅವನು ಅದನ್ನು ಲೇಖಕನಾದ ಎಲೀಷಾಮನ ಕೊಠಡಿಯೊಳಗಿಂದ ತೆಗೆದುಕೊಂಡನು. ಯೆಹೂದಿಯು ಅದನ್ನು ಅರಸನಿಗೂ, ಅರಸನ ಬಳಿಯಲ್ಲಿ ನಿಂತ ಎಲ್ಲಾ ಪ್ರಧಾನರಿಗೂ ಓದಿ ಹೇಳಿದನು.
וַיִּשְׁלַח הַמֶּלֶךְ אֶת־יְהוּדִי לָקַחַת אֶת־הַמְּגִלָּה וַיִּקָּחֶהָ מִלִּשְׁכַּת אֱלִישָׁמָע הַסֹּפֵר וַיִּקְרָאֶהָ יְהוּדִי בְּאָזְנֵי הַמֶּלֶךְ וּבְאָזְנֵי כָּל־הַשָּׂרִים הָעֹמְדִים מֵעַל הַמֶּֽלֶךְ׃
22 ಆಗ ಒಂಬತ್ತನೆಯ ತಿಂಗಳಿನ ಅರಸನು ಚಳಿಗಾಲದ ಮನೆಯಲ್ಲಿ ಕುಳಿತುಕೊಂಡಿದ್ದನು; ಅವನ ಮುಂದೆ ಅಗ್ಗಿಷ್ಟಿಕೆಯಲ್ಲಿ ಬೆಂಕಿ ಉರಿಯುತ್ತಿತ್ತು.
וְהַמֶּלֶךְ יוֹשֵׁב בֵּית הַחֹרֶף בַּחֹדֶשׁ הַתְּשִׁיעִי וְאֶת־הָאָח לְפָנָיו מְבֹעָֽרֶת׃
23 ಆಗ ಯೆಹೂದಿಯು ಬರವಣಿಗೆಯ ಮೂರು ನಾಲ್ಕು ಪುಟಗಳನ್ನು ಓದಿದ ಮೇಲೆ ಅದನ್ನು ಚೂರಿಯಿಂದ ಕೊಯ್ದು, ಅಗ್ಗಿಷ್ಟಿಕೆಯಲ್ಲಿದ್ದ ಬೆಂಕಿಯೊಳಗೆ ಸುರುಳಿಯನ್ನೆಲ್ಲಾ ಅಗ್ಗಿಷ್ಟಿಕೆಯ ಬೆಂಕಿಯಲ್ಲಿ ಸುಟ್ಟುಹೋಗುವವರೆಗೂ ಹಾಕಿಬಿಟ್ಟನು.
וַיְהִי ׀ כִּקְרוֹא יְהוּדִי שָׁלֹשׁ דְּלָתוֹת וְאַרְבָּעָה יִֽקְרָעֶהָ בְּתַעַר הַסֹּפֵר וְהַשְׁלֵךְ אֶל־הָאֵשׁ אֲשֶׁר אֶל־הָאָח עַד־תֹּם כָּל־הַמְּגִלָּה עַל־הָאֵשׁ אֲשֶׁר עַל־הָאָֽח׃
24 ಈ ವಾಕ್ಯಗಳನ್ನೆಲ್ಲಾ ಕೇಳಿದ ಅರಸನಾದರೂ, ಅವರ ಸೇವಕರಾದ ಒಬ್ಬರಾದರೂ ಹೆದರಲಿಲ್ಲ.
וְלֹא פָחֲדוּ וְלֹא קָרְעוּ אֶת־בִּגְדֵיהֶם הַמֶּלֶךְ וְכָל־עֲבָדָיו הַשֹּׁמְעִים אֵת כָּל־הַדְּבָרִים הָאֵֽלֶּה׃
25 ಹೀಗಾದರೂ ಎಲ್ನಾಥಾನನೂ, ದೆಲಾಯನೂ, ಗೆಮರೀಯನೂ ಆ ಸುರುಳಿಯನ್ನು ಸುಡಬಾರದೆಂದು ಅರಸನಿಗೆ ಬಿನ್ನಹ ಮಾಡಿದರು; ಆದರೆ ಅವನು ಅವರಿಗೆ ಕಿವಿಗೊಡಲಿಲ್ಲ.
וְגַם אֶלְנָתָן וּדְלָיָהוּ וּגְמַרְיָהוּ הִפְגִּעוּ בַמֶּלֶךְ לְבִלְתִּי שְׂרֹף אֶת־הַמְּגִלָּה וְלֹא שָׁמַע אֲלֵיהֶֽם׃
26 ಆದರೆ ಅರಸನು ರಾಜಪುತ್ರ ಯೆರಹ್ಮೇಲನಿಗೂ, ಅಜ್ರಿಯೇಲನ ಮಗನಾದ ಸೆರಾಯನಿಗೂ, ಅಬ್ದೆಯೇಲನ ಮಗ ಶೆಲೆಮ್ಯನಿಗೂ, ಲೇಖಕನಾದ ಬಾರೂಕನನ್ನೂ, ಪ್ರವಾದಿಯಾದ ಯೆರೆಮೀಯನನ್ನೂ ಹಿಡಿಯಬೇಕೆಂದು ಆಜ್ಞಾಪಿಸಿದನು. ಆದರೆ ಯೆಹೋವ ದೇವರು ಅವರನ್ನು ಅಡಗಿಸಿದ್ದರು.
וַיְצַוֶּה הַמֶּלֶךְ אֶת־יְרַחְמְאֵל בֶּן־הַמֶּלֶךְ וְאֶת־שְׂרָיָהוּ בֶן־עַזְרִיאֵל וְאֶת־שֶֽׁלֶמְיָהוּ בֶּֽן־עַבְדְּאֵל לָקַחַת אֶת־בָּרוּךְ הַסֹּפֵר וְאֵת יִרְמְיָהוּ הַנָּבִיא וַיַּסְתִּרֵם יְהוָֽה׃
27 ಅರಸನು ಆ ಸುರುಳಿಯನ್ನು ಬಾರೂಕನು ಯೆರೆಮೀಯನ ಬಾಯಿಂದ ಬರೆದಿದ್ದ ವಾಕ್ಯಗಳನ್ನೂ, ಸುಟ್ಟ ಮೇಲೆ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಬಂದಿತು:
וַיְהִי דְבַר־יְהוָה אֶֽל־יִרְמְיָהוּ אַחֲרֵי ׀ שְׂרֹף הַמֶּלֶךְ אֶת־הַמְּגִלָּה וְאֶת־הַדְּבָרִים אֲשֶׁר כָּתַב בָּרוּךְ מִפִּי יִרְמְיָהוּ לֵאמֹֽר׃
28 “ನೀನು ಮತ್ತೊಂದು ಸುರುಳಿಯನ್ನು ತೆಗೆದುಕೊಂಡು ಯೆಹೂದದ ಅರಸನಾದ ಯೆಹೋಯಾಕೀಮನು ಸುಟ್ಟ ಮೊದಲನೆಯ ಸುರುಳಿಯಲ್ಲಿದ್ದ ಮುಂಚಿನ ವಾಕ್ಯಗಳನ್ನೆಲ್ಲಾ ಅದರಲ್ಲಿ ಬರೆ.
שׁוּב קַח־לְךָ מְגִלָּה אַחֶרֶת וּכְתֹב עָלֶיהָ אֵת כָּל־הַדְּבָרִים הָרִאשֹׁנִים אֲשֶׁר הָיוּ עַל־הַמְּגִלָּה הָרִאשֹׁנָה אֲשֶׁר שָׂרַף יְהוֹיָקִים מֶֽלֶךְ־יְהוּדָֽה׃
29 ಯೆಹೂದದ ಅರಸನಾದ ಯೆಹೋಯಾಕೀಮನ ವಿಷಯದಲ್ಲಿ ಹೀಗೆ ಬರೆಯಿಸು, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: “ಬಾಬಿಲೋನಿನ ಅರಸನು ನಿಶ್ಚಯವಾಗಿ ಬಂದು ಈ ದೇಶವನ್ನು ನಾಶಮಾಡಿ, ಮನುಷ್ಯರನ್ನೂ, ಮೃಗಗಳನ್ನೂ ಅದರೊಳಗಿಂದ ಹಾಳು ಮಾಡುವುದು ಖಂಡಿತ, ಎಂದು ಇದರಲ್ಲಿ ಏಕೆ ಬರೆದಿದ್ದೀ?” ಎಂದು ಹೇಳಿ ನೀನು ಈ ಸುರುಳಿಯನ್ನು ಸುಟ್ಟಿದ್ದೀ.
וְעַל־יְהוֹיָקִים מֶֽלֶךְ־יְהוּדָה תֹּאמַר כֹּה אָמַר יְהוָה אַתָּה שָׂרַפְתָּ אֶת־הַמְּגִלָּה הַזֹּאת לֵאמֹר מַדּוּעַ כָּתַבְתָּ עָלֶיהָ לֵאמֹר בֹּֽא־יָבוֹא מֶֽלֶךְ־בָּבֶל וְהִשְׁחִית אֶת־הָאָרֶץ הַזֹּאת וְהִשְׁבִּית מִמֶּנָּה אָדָם וּבְהֵמָֽה׃
30 ಆದ್ದರಿಂದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಯೆಹೋವ ದೇವರು ಹೇಳುವುದೇನೆಂದರೆ: ದಾವೀದನ ಸಿಂಹಾಸನದಲ್ಲಿ ಕುಳಿತುಕೊಳ್ಳುವವನು ಅವನಿಗೆ ಇರುವುದಿಲ್ಲ. ಅವನ ಹೆಣವು ಹಗಲಿನಲ್ಲಿ ಬಿಸಿಲಿಗೂ, ರಾತ್ರಿಯಲ್ಲಿ ಹಿಮಕ್ಕೂ ಬಿಸಾಡಲಾಗುವುದು.
לָכֵן כֹּֽה־אָמַר יְהוָה עַל־יְהֽוֹיָקִים מֶלֶךְ יְהוּדָה לֹא־יִֽהְיֶה־לּוֹ יוֹשֵׁב עַל־כִּסֵּא דָוִד וְנִבְלָתוֹ תִּֽהְיֶה מֻשְׁלֶכֶת לַחֹרֶב בַּיּוֹם וְלַקֶּרַח בַּלָּֽיְלָה׃
31 ಅವನನ್ನೂ, ಅವನ ಸಂತಾನವನ್ನೂ, ಅವನ ಸೇವಕರನ್ನೂ, ಅವರ ಅಕ್ರಮಕ್ಕಾಗಿ ದಂಡಿಸುವೆನು. ಅವರ ಮೇಲೆಯೂ, ಯೆರೂಸಲೇಮಿನ ನಿವಾಸಿಗಳ ಮೇಲೆಯೂ, ಯೆಹೂದದ ಮನುಷ್ಯರ ಮೇಲೆಯೂ ನಾನು ಅವರಿಗೆ ವಿರೋಧವಾಗಿ ಮಾತಾಡಿದಂಥ ಅವರು ಕಿವಿಗೊಡದಂಥ ಕೇಡನ್ನೆಲ್ಲಾ ಬರಮಾಡುವೆನು.’”
וּפָקַדְתִּי עָלָיו וְעַל־זַרְעוֹ וְעַל־עֲבָדָיו אֶת־עֲוֺנָם וְהֵבֵאתִי עֲלֵיהֶם וְעַל־יֹשְׁבֵי יְרוּשָׁלִַם וְאֶל־אִישׁ יְהוּדָה אֵת כָּל־הָרָעָה אֲשֶׁר־דִּבַּרְתִּי אֲלֵיהֶם וְלֹא שָׁמֵֽעוּ׃
32 ಆಗ ಯೆರೆಮೀಯನು ಮತ್ತೊಂದು ಸುರುಳಿಯನ್ನು ತೆಗೆದುಕೊಂಡು ನೇರೀಯನ ಮಗ ಲೇಖಕನಾದ ಬಾರೂಕನಿಗೆ ಕೊಟ್ಟನು. ಇವನು ಯೆಹೂದದ ಅರಸನಾದ ಯೆಹೋಯಾಕೀಮನು ಬೆಂಕಿಯಲ್ಲಿ ಸುಟ್ಟ ಸುರುಳಿಯ ವಾಕ್ಯಗಳನ್ನೆಲ್ಲಾ ಯೆರೆಮೀಯನ ಬಾಯಿಂದ ಬಂದ ಹಾಗೆ ಬರೆದನು. ಅವುಗಳ ಹಾಗಿರುವ ಅನೇಕ ವಾಕ್ಯಗಳು ಅವುಗಳ ಸಂಗಡ ಕೂಡಿಸಲಾದವು.
וְיִרְמְיָהוּ לָקַח ׀ מְגִלָּה אַחֶרֶת וַֽיִּתְּנָהּ אֶל־בָּרוּךְ בֶּן־נֵרִיָּהוּ הַסֹּפֵר וַיִּכְתֹּב עָלֶיהָ מִפִּי יִרְמְיָהוּ אֵת כָּל־דִּבְרֵי הַסֵּפֶר אֲשֶׁר שָׂרַף יְהוֹיָקִים מֶֽלֶךְ־יְהוּדָה בָּאֵשׁ וְעוֹד נוֹסַף עֲלֵיהֶם דְּבָרִים רַבִּים כָּהֵֽמָּה׃

< ಯೆರೆಮೀಯನು 36 >