< ಯೆರೆಮೀಯನು 33 >

1 ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಅವನು ಇನ್ನು ಸೆರೆಮನೆಯ ಅಂಗಳದಲ್ಲಿ ಸೆರೆಯಾಗಿದ್ದಾಗ ಎರಡನೆಯ ಸಾರಿ ಉಂಟಾಯಿತು.
Ɛberɛ a, Yeremia da so da dua mu wɔ awɛmfoɔ adihɔ hɔ no, Awurade asɛm baa ne nkyɛn ne mprenu so sɛ:
2 “ಭೂಮಿಯನ್ನು ಸೃಷ್ಟಿಮಾಡುವ ಯೆಹೋವ ದೇವರೂ ಅದನ್ನು ಸ್ಥಾಪಿಸುವುದಕ್ಕಾಗಿ ಅದನ್ನು ರೂಪಿಸಿದ ಯೆಹೋವನೆಂಬ ಹೆಸರುಳ್ಳವನೂ ಹೇಳುವುದೇನೆಂದರೆ,
“Yei ne deɛ Awurade seɛ, deɛ ɔbɔɔ asase, Awurade a ɔyɛeɛ ma ɛtimiiɛ, Awurade ne ne din:
3 ‘ನನ್ನನ್ನು ಕರೆ, ಆಗ ನಿನಗೆ ಉತ್ತರಕೊಡುವೆನು. ನಿನಗೆ ತಿಳಿಯದ ಮತ್ತು ಪರಿಶೋಧನೆಗೆ ಮೀರಿದ ಮಹಾಕಾರ್ಯಗಳನ್ನೂ ನಿನಗೆ ಹೇಳಿಕೊಡುವೆನು.’
‘Frɛ me na mɛgye wo so, na maka wo nsɛm akɛseɛ ne nneɛma a ahinta a wonnim.
4 ದಿಬ್ಬಗಳಿಂದಲೂ ಖಡ್ಗದಿಂದಲೂ ಕೆಡವಿರುವ ಈ ಪಟ್ಟಣದ ಮನೆಗಳ ವಿಷಯವಾಗಿವೂ ಯೆಹೂದದ ಅರಸರ ಅರಮನೆಗಳ ವಿಷಯವಾಗಿಯೂ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ.
Na sei na Awurade, Israel Onyankopɔn ka: Moabubu afie a ɛwɔ saa kuropɔn yi mu ne Yuda ahemfie ahodoɔ sɛdeɛ ɛbɛyɛ a mobɛnya mmubuiɛ de agyina afasuo no atia mo atamfoɔ ntuano epie ne akofena.
5 ಅವರು ಕಸ್ದೀಯರ ಸಂಗಡ ಯುದ್ಧ ಮಾಡುವುದಕ್ಕೂ ನಾನು ನನ್ನ ಕೋಪದಲ್ಲಿಯೂ, ‘ನನ್ನ ಉರಿಯಲ್ಲಿಯೂ ಕೊಂದುಹಾಕಿದ ಮನುಷ್ಯರ ಹೆಣಗಳಿಂದ ಅವುಗಳನ್ನು ತುಂಬಿಸುವುದಕ್ಕೂ ಬರುತ್ತಾರೆ. ಏಕೆಂದರೆ ನಾನು ಈ ಪಟ್ಟಣಕ್ಕೆ ವಿರೋಧವಾಗಿ ಅವರ ಸಮಸ್ತ ದುಷ್ಟತನದ ನಿಮಿತ್ತ ನನ್ನ ಮುಖವನ್ನು ಮರೆಮಾಡಿದ್ದೇನೆ.
Moayɛ mo adwen sɛ mo ne Babiloniafoɔ bɛko, nanso mede mʼabufuo ne mʼabufuhyeɛ bɛkunkum mo, na mo afunu bɛyɛ hɔ ma. Mɛyi mʼani afiri saa kuropɔn yi so ɛsiane nʼamumuyɛ nyinaa enti.
6 “‘ಇಗೋ, ನಾನು ಅದಕ್ಕೆ ಕ್ಷೇಮವನ್ನೂ, ಸ್ವಸ್ಥತೆಯನ್ನೂ ಹುಟ್ಟಿಸಿ ಅವರನ್ನು ಗುಣಪಡಿಸಿ ಸಮಾಧಾನದ ಸತ್ಯವನ್ನು ಸಮೃದ್ಧಿಯಾಗಿ ಅವರಿಗೆ ಪ್ರಕಟಮಾಡುವೆನು.
“‘Nanso, mede ahoɔden ne ayaresa bɛbrɛ no; mɛsa me nkurɔfoɔ yadeɛ na mama wɔn anya asomdwoeɛ ne banbɔ a ɛdɔɔso.
7 ಯೆಹೂದದ ಸೆರೆಯನ್ನೂ, ಇಸ್ರಾಯೇಲಿನ ಸೆರೆಯನ್ನೂ ತಿರುಗಿಸಿ, ಅವರನ್ನು ಮುಂಚಿನ ಹಾಗೆ ಕಟ್ಟುವೆನು.
Mɛsane de Yuda ne Israel afiri nnommumfa mu aba na masane agye wɔn asi hɔ sɛ dea na wɔte dada no.
8 ಅವರು ಯಾವುದರಿಂದ ನನಗೆ ವಿರೋಧವಾಗಿ ಪಾಪ ಮಾಡಿದರೋ, ಆ ಅಕ್ರಮದಿಂದೆಲ್ಲಾ ಅವರನ್ನು ಶುದ್ಧಮಾಡುವೆನು. ಅವರು ಯಾವವುಗಳಿಂದ ನನಗೆ ವಿರೋಧವಾಗಿ ಪಾಪಮಾಡಿ ನನ್ನ ವಿಷಯದಲ್ಲಿ ದ್ರೋಹಿಗಳಾಗಿದ್ದಾರೋ, ಆ ಅಕ್ರಮಗಳನ್ನೆಲ್ಲಾ ಮನ್ನಿಸುವೆನು.
Mɛhohoro wɔn bɔne a wɔayɛ atia me no nyinaa, na mede wɔn atuateɛ ho bɔne nso akyɛ wɔn.
9 ನಾನು ಈ ಜನರಿಗೆ ಅನುಗ್ರಹಿಸುವ ಎಲ್ಲಾ ಸೌಭಾಗ್ಯಗಳ ಸುದ್ದಿಯನ್ನು ಸಕಲ ಭೂರಾಜ್ಯಗಳು ಕೇಳುವರು. ಈ ನಗರಕ್ಕೆ ನಾನು ನೀಡುವ ಸುಖ ಸಮಾಧಾನಗಳನ್ನು ಅವರು ನೋಡುವರು ಹಾಗೂ ಹೆದರಿ ನಡುಗುವರು. ಇದರಿಂದಾಗಿ ಆ ಎಲ್ಲಾ ರಾಜ್ಯಗಳ ಮುಂದೆ ನನಗೆ ಅದು ಕೀರ್ತಿಯನ್ನು, ಮಹಿಮೆಯನ್ನು ಹಾಗೂ ಆನಂದವನ್ನು ತರುವುದು.’
Na saa kuropɔn yi bɛma me din ahyeta. Ɛbɛma me anigyeɛ, ayɛyie ne animuonyam wɔ asase so aman nyinaa a wɔte nnepa a meyɛ ma no nyinaa mu; wɔbɛsuro na wɔn ho apopo wɔ yiedie ne asomdwoeɛ bebrebe a mede ma no enti.’
10 “ಯೆಹೋವ ದೇವರು ಹೇಳುವುದೇನೆಂದರೆ: ‘“ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾಯಿತು,” ಎಂದು ನೀವು ಹೇಳುವ ಈ ಸ್ಥಳದಲ್ಲಿಯೂ ಮನುಷ್ಯರೂ ನಿವಾಸಿಗಳೂ ಪಶುಗಳೂ ಇಲ್ಲದೆ ನಾಶವಾದ ಯೆಹೂದದ ಪಟ್ಟಣಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ
“Yei ne deɛ Awurade seɛ: ‘Woka fa saa beaeɛ yi ho sɛ, “Ada mpan, a nnipa anaasɛ mmoa nni so.” Nanso, Yuda nkuro ne Yerusalem mmɔntene a ada mpan na nnipa anaa mmoa nni no, ɛhɔ na wɔbɛsane ate bio
11 ಹರ್ಷಧ್ವನಿ, ಉಲ್ಲಾಸ, ಕೋಲಾಹಲ, ವಧೂವರರ ಸ್ವರ ಮತ್ತು ಹಾಡುತ್ತಾ ಕೃತಜ್ಞತಾ ಬಲಿಯನ್ನು ಯೆಹೋವ ದೇವರ ಆಲಯಕ್ಕೆ ತರುವವರ ಸ್ವರ ಹೀಗೆ ಹೇಳುವವು, “‘“ಸೇನಾಧೀಶ್ವರ ಯೆಹೋವ ದೇವರಿಗೆ ಕೃತಜ್ಞತಾ ಸ್ತೋತ್ರಮಾಡಿರಿ, ಏಕೆಂದರೆ ಯೆಹೋವ ದೇವರು ಒಳ್ಳೆಯವರು. ಆತನ ಪ್ರೀತಿ ಶಾಶ್ವತವಾಗಿರುತ್ತದೆ.” ಏಕೆಂದರೆ ನಾನು ಈ ದೇಶದ ಸಮೃದ್ಧಿಯನ್ನು ಮೊದಲಿನಂತೆ ಪುನಃಸ್ಥಾಪಿಸುವೆನು,’ ಎಂದು ಯೆಹೋವ ದೇವರು ಹೇಳುತ್ತಾರೆ.
ahurisie ne anigyeɛ nnyegyeɛ, ayeforɔ ne ayeforɔkunu nne ne wɔn a wɔde aseda afɔrebɔdeɛ reba Awurade efie nne sɛ, “‘Momfa aseda mma Asafo Awurade, ɛfiri sɛ Awurade yɛ, na ne dɔ wɔ hɔ daa.’” Na mɛsane de asase no so nnepa a ɛwɔ hɔ dada no aba bio, Awurade, na ɔseɛ.
12 “ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ‘ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾದ ಈ ಸ್ಥಳದಲ್ಲಿಯೂ, ಅದರ ಎಲ್ಲಾ ಪಟ್ಟಣಗಳಲ್ಲಿಯೂ, ಅದರ ಎಲ್ಲಾ ಪಟ್ಟಣಗಳಲ್ಲಿ ಕುರುಬರು ತಮ್ಮ ಹಿಂಡುಗಳಿಗೆ ವಿಶ್ರಾಂತಿ ನೀಡಲು ಮತ್ತೆ ಹುಲ್ಲುಗಾವಲುಗಳು ಇರುತ್ತವೆ.
“Yei ne deɛ Asafo Awurade seɛ: ‘Ɛha yi a ada mpan a nnipa ne mmoa nni mu no; ne nkuro nyinaa so no wɔbɛnya adidibea ama nnwanhwɛfoɔ deɛ wɔn nnwankuo bɛhome.
13 ಬೆಟ್ಟದ ಪಟ್ಟಣಗಳಲ್ಲಿಯೂ ತಗ್ಗಿನ ಪಟ್ಟಣಗಳಲ್ಲಿಯೂ, ದಕ್ಷಿಣ ಪಟ್ಟಣಗಳಲ್ಲಿಯೂ, ಬೆನ್ಯಾಮೀನನ ದೇಶದಲ್ಲಿಯೂ, ಯೆರೂಸಲೇಮಿನ ಪ್ರದೇಶಗಳಲ್ಲಿಯೂ, ಯೆಹೂದದ ಪಟ್ಟಣಗಳಲ್ಲಿಯೂ ಇನ್ನು ಮೇಲೆ ಕುರಿಮಂದೆಗಳು ಎಣಿಸುವವನ ಕೈಕೆಳಗೆ ಹಾದುಹೋಗುವುದು,’ ಎಂದು ಯೆಹೋವ ದೇವರು ಹೇಳುತ್ತಾರೆ.
Nkuro a ɛwɔ bepɔ so ɔman mu, atɔeɛ fam mmepɔ ase mu, Negeb, Benyamin mantam mu, nkuraase a atwa Yerusalem ho ahyia ne Yuda nkuro mu, nnwankuo bɛtwam bio wɔ deɛ ɔkane wɔn nsa ase.’ Awurade, na aka.
14 “‘ಇಗೋ, ದಿನಗಳು ಬರಲಿವೆ,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಆಗ ನಾನು ಇಸ್ರಾಯೇಲಿನ ಮತ್ತು ಯೆಹೂದದ ಮನೆಯವರ ಸಂಗಡ ಹೇಳಿದ ಒಳ್ಳೆಯ ವಾಗ್ದಾನವನ್ನು ನೆರವೇರಿಸುವೆನು.
“‘Nna no reba,’ Awurade na ɔseɛ, a mɛma adom bɔhyɛ a mehyɛɛ Israel efie ne Yudafie aba mu.
15 “‘ಆ ದಿನಗಳಲ್ಲಿಯೂ ಆ ಕಾಲದಲ್ಲಿಯೂ ನಾನು ದಾವೀದನಿಗೆ ನೀತಿಯುಳ್ಳ ಕೊಂಬೆಯನ್ನು ಚಿಗುರ ಮಾಡುವೆನು. ಆತನು ದೇಶದಲ್ಲಿ ನ್ಯಾಯವನ್ನೂ, ನೀತಿಯನ್ನೂ ನಡೆಸುವನು.
“‘Nna no mu ne saa ɛberɛ no mɛma tenenee Duban afefɛ afiri Dawid ase; ɔbɛyɛ deɛ ɛtene ne deɛ ɛyɛ wɔ asase no so.
16 ಆಗ ಯೆಹೂದ್ಯರು ಸುರಕ್ಷಿತರಾಗಿರುವರು. ಯೆರೂಸಲೇಮಿನವರು ನೆಮ್ಮದಿಯಿಂದ ವಾಸಿಸುವರು. ಯೆಹೋವ ಚಿದ್ಕೇನು ಅಂದರೆ ಯೆಹೋವ ದೇವರೇ ನಮ್ಮ ಸದ್ಧರ್ಮ ಎಂಬ ಹೆಸರು ಈ ನಗರಕ್ಕೆ ಸಲ್ಲುವುದು.’
Saa nna no mu, wɔbɛgye Yuda nkwa na Yerusalem bɛtena asomdwoeɛ mu. Yei ne din a wɔde bɛfrɛ no Awurade, Yɛn Tenenee.’
17 ಯೆಹೋವ ದೇವರಾದ ನಾನು ಹೇಳುವುದೇನೆಂದರೆ: ‘ದಾವೀದನು ಎಂದಿಗೂ ಇಸ್ರಾಯೇಲ್ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಒಬ್ಬ ವ್ಯಕ್ತಿಯನ್ನು ಹೊಂದಲು ವಿಫಲನಾಗುವುದಿಲ್ಲ
Na yei ne deɛ Awurade seɛ: ‘Ɔbarima a ɔbɛtena Israel efie ahennwa so no remmɔ Dawid da,
18 ಅದಕ್ಕೆ ಆ ಸಂತಾನದವರಲ್ಲಿ ಒಬ್ಬ ಗಂಡಸು ಇಲ್ಲದೆ ಇರನು. ಅಂತೆಯೇ ನನ್ನ ಸನ್ನಿಧಿಯಲ್ಲಿ ನಿರಂತರವಾಗಿ ದಹನಬಲಿಯನ್ನು, ನೈವೇದ್ಯವನ್ನು ಹಾಗು ಕಾಣಿಕೆಯನ್ನು ಒಪ್ಪಿಸತಕ್ಕ ಒಬ್ಬನು ಲೇವಿಯರಾದ ಯಾಜಕರು ಇದ್ದೇ ಇರುವನು.’”
saa ara nso na asɔfoɔ a wɔyɛ Lewifoɔ no, ɔbarima a ɔbɛgyina mʼanim daa abɔ ɔhyeɛ afɔdeɛ ne aduane afɔdeɛ na ɔde afɔdeɛ ahodoɔ abrɛ me, remmɔ wɔn da.’”
19 ಯೆಹೋವ ದೇವರು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದರು:
Awurade asɛm baa Yeremia nkyɛn sɛ:
20 “ಯೆಹೋವ ದೇವರಾದ ನನ್ನ ನುಡಿ ಇದು: ‘ಹಗಲಿರುಳೆಂಬ ನನ್ನ ನಿಬಂಧನೆಗಳನ್ನು ನಿಲ್ಲಿಸಿ, ಹಗಲನ್ನು ಮತ್ತು ಇರುಳನ್ನು ಅದರದರ ಸಮಯದಲ್ಲಿ ಉಂಟಾಗದಂತೆ ಮಾಡಲು ನಿಮ್ಮಿಂದಾದೀತೇ?
“Yei ne deɛ Awurade seɛ: ‘Sɛ wobɛtumi abu me ne adekyeɛ ne adesaeɛ apam so, na adekyeɛ ne adesaeɛ amma wɔn ɛberɛ a wɔahyehyɛ no a,
21 ಆಗುವುದಾದರೆ ಮಾತ್ರ ನನ್ನ ದಾಸ ದಾವೀದನೊಂದಿಗೆ ನನ್ನ ಪರಿಚಾರಕರಾದ ಲೇವಿ ಕುಲದ ಯಾಜಕರೊಂದಿಗೆ ನಾನು ಮಾಡಿದ ಒಡಂಬಡಿಕೆ ನಿಂತುಹೋಗುವುದು ಮತ್ತು ದಾವೀದನ ಸಿಂಹಾಸನವನ್ನು ಏರಿ ಆಳತಕ್ಕ ಅವನ ಸಂತಾನದವನು ಒಬ್ಬನೂ ಇಲ್ಲವಾಗುವನು.
ɛnneɛ na me ne mʼakoa Dawid apam ne Lewifoɔ a wɔyɛ asɔfoɔ a wɔsom wɔ mʼanim no apam no nso, wobɛtumi abu so, na Dawid rennya nʼaseni a ɔbɛtena ahennwa so adi ɔhene bio.
22 ಆದರೆ ನನ್ನ ದಾಸ ದಾವೀದನ ಸಂತಾನವನ್ನೂ ನನ್ನ ಪರಿಚಾರಕರಾದ ಲೇವಿಯರನ್ನೂ ಅಸಂಖ್ಯಾತ ನಕ್ಷತ್ರಗಣದಷ್ಟು ಮತ್ತು ಎಣಿಸಲಾಗದ ಸಮುದ್ರತೀರದ ಮರಳಿನಷ್ಟು ಅಧಿಕಗೊಳಿಸುವೆನು.’”
Mɛma mʼakoa Dawid asefoɔ ne Lewifoɔ a wɔsom wɔ mʼanim no ase adɔre te sɛ ɔsoro nsoromma a wɔntumi nkane ne mpoano anwea a wɔntumi nsusuo.’”
23 ಇದಲ್ಲದೆ ಯೆಹೋವ ದೇವರು ಯೆರೆಮೀಯನಿಗೆ ಈ ವಾಕ್ಯವನ್ನು ಅನುಗ್ರಹಿಸಿದರು:
Awurade asɛm baa Yeremia nkyɛn sɛ,
24 “‘ಯೆಹೋವ ದೇವರಾದ ನಾನು ಆರಿಸಿಕೊಂಡಿದ್ದ ಎರಡು ವಂಶಗಳನ್ನು ನಿರಾಕರಿಸಿಬಿಟ್ಟಿದ್ದೇನೆ, ಎಂದು ಜನರು ಆಡಿಕೊಳ್ಳುತ್ತಿದ್ದಾರೆ.’ ಈ ಮಾತನ್ನು ನೀನು ಗಮನಿಸಿರಬೇಕು. ನನ್ನ ಜನರು ಒಂದು ಜನಾಂಗವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಅಸಡ್ಡೆ ಮಾಡುತ್ತಿದ್ದಾರಲ್ಲವೇ?
“Wontee sɛ nnipa yi reka sɛ, ‘Awurade apo ahennie mmienu a ɔyiiɛ no’ anaa? Enti wɔbu me ɔman animtia na wɔmmfa wɔn sɛ wɔyɛ ɔman bio.
25 ಯೆಹೋವನಾದ ನಾನು ಹೇಳುವುದನ್ನು ಕೇಳು: ‘ಹಗಲಿರುಳೆಂಬ ಸ್ಥಿರವಾದ ನಿಬಂಧನೆಯನ್ನು ನಾನು ಮಾಡದೆ ಹೋಗಿದ್ದರೆ, ಭೂಮ್ಯಾಕಾಶಗಳಿಗೆ ನಿಯಮವನ್ನು ನಾನು ವಿಧಿಸದೆ ಹೋಗಿದ್ದರೆ,
Deɛ Awurade seɛ nie: ‘Sɛ mantintim me ne adekyeɛ ne adesaeɛ apam ne ɔsoro ne asase mmara no a,
26 ಆಗ ಮಾತ್ರ ನಾನು ಯಾಕೋಬನ ಸಂತಾನದವರನ್ನು ತ್ಯಜಿಸುತ್ತಿದ್ದೆ. ಅಬ್ರಹಾಮ, ಇಸಾಕ, ಯಾಕೋಬ ಇವರ ಸಂತತಿಯನ್ನು ಆಳತಕ್ಕ ಒಡೆಯನನ್ನು ದಾಸ ದಾವೀದನ ವಂಶದಿಂದ ಆರಿಸದೆ, ಆ ವಂಶವನ್ನು ನಿರಾಕರಿಸುತ್ತಿದ್ದೆ. ಆದರೆ ಈಗ ಗುಲಾಮಗಿರಿಯಿಂದ ಅವರನ್ನು ಬಿಡುಗಡೆಮಾಡುವೆನು. ಅವರಿಗೆ ಕರುಣೆಯನ್ನು ತೋರಿಸಿಯೇ ತೋರಿಸುವೆನು.’”
ɛnneɛ anka mɛpo Yakob ne mʼakoa Dawid asefoɔ, na merennyi ne mmammarima mu baako sɛ ɔnni Abraham, Isak ne Yakob asefoɔ so. Na mede wɔn ahonyadeɛ bɛsane ama wɔn, na manya ayamhyehyeɛ ama wɔn.’”

< ಯೆರೆಮೀಯನು 33 >