< ಯೆರೆಮೀಯನು 30 >
1 ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವೇನೆಂದರೆ,
Ty tsara niheo am’Iirmeà boak’ am’ Iehovà, manao ty hoe:
2 “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನಾನು ನಿನಗೆ ಹೇಳಿದ ವಾಕ್ಯಗಳನ್ನೆಲ್ಲಾ ಒಂದು ಪುಸ್ತಕದಲ್ಲಿ ನೀನು ಬರೆದಿಡು.
Inao ty nitsara’ Iehovà, Andrianañahare’ Israele: Sokiro am-boke ao ze hene tsara nitaroñeko ama’o.
3 ಏಕೆಂದರೆ, ದಿನಗಳು ಬರುವವು,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಆಗ ನಾನು ನನ್ನ ಜನರಾದ ಇಸ್ರಾಯೇಲ್ ಹಾಗು ಯೆಹೂದದ ಸೆರೆಯವರನ್ನು ತಿರುಗಿ ಬರಮಾಡುತ್ತೇನೆ. ಆಗ ನಾನು ಅವರ ಪಿತೃಗಳಿಗೆ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡುತ್ತೇನೆ. ಅವರು ಅದನ್ನು ಸ್ವಾಧೀನಮಾಡಿಕೊಳ್ಳುವರು,’ ಎಂದು ಯೆಹೋವ ದೇವರು ಹೇಳುತ್ತಾರೆ.”
Amy te ho tondroke ty andro, hoe t’Iehovà, te hafoteko ty fandrohiza’ ondatiko Israele naho Iehodao, hoe t’Iehovà; le hampoliko mb’amy tane natoloko aman-droae’ iareoy, vaho ho fanaña’ iareo.
4 ಯೆಹೋವ ದೇವರು ಇಸ್ರಾಯೇಲನ್ನೂ, ಯೆಹೂದವನ್ನೂ ಕುರಿತು ಹೇಳಿದ ವಾಕ್ಯಗಳು ಇವೇ,
Le iretoañe o entañe nitsarae’ Iehova am’ Israele naho am’ Iehodao.
5 “ಯೆಹೋವ ದೇವರು ಹೀಗೆ ಹೇಳುತ್ತಾರೆ: “‘ನಾವು ನಡುಗುವಿಕೆಯ ಮತ್ತು ಭಯದ ಧ್ವನಿಯನ್ನು ಕೇಳಿದ್ದೇವೆಯೇ ಹೊರತು, ಸಮಾಧಾನದ್ದಲ್ಲ.
Hoe t’Iehovà: Toe nahajanjiñe feom-pihondrahondrañe, naho fangebahebañan-jahay, fa tsy fanintsiñañe.
6 ಈಗ ವಿಚಾರಿಸಿ ನೋಡಿರಿ. ಪುರುಷನು ಮಗುವನ್ನು ಹೆರಬಲ್ಲನೇ. ನಾನು ಏಕೆ ಪುರುಷರೆಲ್ಲರೂ ಪ್ರಸವವೇದನೆ ಪಡುವ ಸ್ತ್ರೀಯ ಹಾಗೆ ನಡುವಿನ ಮೇಲಕ್ಕೆ ಕೈ ಇಟ್ಟವರ ಹಾಗೆ ನೋಡುತ್ತೇನೆ; ಏಕೆ ಮುಖಗಳೆಲ್ಲಾ ಕಳೆಗುಂದಿದವು?
Añontaneo henaneo, maharendreha hera misamake ty lahilahy; akore arè te treako mitam-pisafoa manahake ty rakemba mitsongo ondaty iabio, ie sindre miha-fosaposatse o laharañeo?
7 ಅಯ್ಯೋ, ಈ ದಿನವು ಘೋರವಾದದ್ದು, ಅದಕ್ಕೆ ಎಣೆ ಇಲ್ಲ; ಅದು ಯಾಕೋಬ್ಯರಿಗೆ ಇಕ್ಕಟ್ಟಿನ ದಿನ; ಆದರೂ ಅವರು ಅದರಿಂದ ಪಾರಾಗುವರು.’
Hoy abey ty hara’elahi’ i àndroy, tsy añirinkiriñañe, ho andron-kankàñe am’Iakobe, f’ie ho rombaheñe ama’e.
8 “ಸೇನಾಧೀಶ್ವರ ಯೆಹೋವ ದೇವರು ಇಂತೆನ್ನುತ್ತಾರೆ, ‘ನಾನು ಆ ದಿನದಲ್ಲಿ ಅವನು ಹೇರಿದ ನೊಗವನ್ನು ಅವರ ಹೆಗಲಿನಿಂದ ಮುರಿದು ಬಿಟ್ಟು, ಬಂಧನಗಳನ್ನು ಕಿತ್ತು ಹಾಕುವೆನು; ಇನ್ನು ವಿದೇಶಿಯರು ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲಾರರು.
Ho tondrok’ amy andro zay, hoe t’Iehovà’ i Màroy, te hampipozaheko am-pititia’o ty joka’e, naho ho rafadrafateko o rohi’oo; vaho tsy hañondevo azo ka ty ambahiny;
9 ಆದರೆ ಅವರು ತಮ್ಮ ದೇವರಾದ ಯೆಹೋವ ದೇವರಿಗೂ, ನಾನು ಅವರಿಗೋಸ್ಕರ ಎಬ್ಬಿಸುವ ಅವರ ಅರಸನಾದ ದಾವೀದನಿಗೂ ಸೇವೆಮಾಡುವರು.
fe songa hitoroñe Iehovà Andrianañahare’e naho i Davide mpanjaka’e, ie hampitroareko ho a iareo.
10 “‘ಆದ್ದರಿಂದ ನನ್ನ ಸೇವಕನಾದ ಯಾಕೋಬನೇ ಭಯಪಡಬೇಡ, ಇಸ್ರಾಯೇಲೇ ಹೆದರಬೇಡ,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಏಕೆಂದರೆ ಇಗೋ, ನಾನು ನಿನ್ನನ್ನು ದೂರದಿಂದಲೇ ನಿನ್ನ ಸಂತಾನವನ್ನು ಸೆರೆ ಒಯ್ದ ದೇಶದಿಂದಲೂ ರಕ್ಷಿಸುತ್ತೇನೆ. ಯಾಕೋಬನು ತಿರುಗಿಬಂದು ವಿಶ್ರಾಂತಿಯಲ್ಲಿರುವನು. ಹೆದರಿಸುವವನಿಲ್ಲದೆ ಸುರಕ್ಷಿತವಾಗಿರುವನು.
Aa le ko hemban-drehe ry Iakobe mpitoroko, hoe t’Iehovà; naho ko lonjetse, ry Israele; fa toe ho rombaheko boake tsietoitane añe, naho ty tiri’o boak’ an-tanem- pandrohizañe añe, le himpoly t’Iakobe naho hianjiñe naho hierañerañe, vaho tsy eo ty hañembañe aze.
11 ಏಕೆಂದರೆ ನಿನ್ನನ್ನು ರಕ್ಷಿಸುವುದಕ್ಕೆ ನಾನು ನಿನ್ನ ಸಂಗಡ ಇದ್ದೇನೆ,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ನಿನ್ನನ್ನು ಎಲ್ಲಿ ಚದರಿಸಿದೆನೋ, ಆ ಎಲ್ಲಾ ಜನಾಂಗಗಳನ್ನು ನಾನು ಸಂಪೂರ್ಣವಾಗಿ ಮುಗಿಸಿಬಿಟ್ಟಾಗ್ಯೂ ನಿನ್ನನ್ನು ಸಂಪೂರ್ಣವಾಗಿ ಮುಗಿಸಿಬಿಡುವುದಿಲ್ಲ. ಮಿತಿಯಲ್ಲಿ ನಿನ್ನನ್ನು ಸರಿಪಡಿಸುವೆನು. ನಾನು ಶಿಕ್ಷಿಸದೆ ಬಿಡುವುದಿಲ್ಲ.’
Amy t’ie indrezako, hoe t’Iehovà, handrombahako; le ho fonga mongoreko o fifeheañe nampiparatsiahako azoo, fa tsy hampigadoñeko ka irehe; te mone ho lafaeko ami’ty hatò, vaho tsy ho rotsaheko ho mongotse.
12 “ಯೆಹೋವ ದೇವರು ಹೀಗೆ ಹೇಳುತ್ತಾರೆ: “‘ನಿನ್ನ ಗಾಯವು ಗುಣವಾಗದಂಥಾದ್ದು. ನಿನ್ನ ಬಾಸುಂಡೆಯು ಅಘೋರವಾದದ್ದು.
Aa hoe t’Iehovà: Toe tsy lefe jangañeñe ty farare’o, vaho mahaferenaiñe o fere’oo.
13 ನಿನಗೋಸ್ಕರ ವಾದಿಸುವವರು ಯಾರೂ ಇರುವುದಿಲ್ಲ. ನಿನ್ನ ಗಾಯವನ್ನು ನಿನಗೆ ಕಟ್ಟುವ ಹಾಗೆ ವಾಸಿಮಾಡುವ ಔಷಧಗಳು ನಿನಗೆ ಇಲ್ಲ.
Tsy eo ty mihalaly ho azo, hampibandiañe o naratseo, tsy amañ’aoly mahamelañ’ azo.
14 ನಿನ್ನ ಮಿತ್ರರೆಲ್ಲರು ನಿನ್ನನ್ನು ಮರೆತುಬಿಟ್ಟಿದ್ದಾರೆ, ನಿನ್ನನ್ನು ಹುಡುಕುವುದಿಲ್ಲ. ನಿನ್ನ ಅಕ್ರಮಗಳು ಬಹಳವೂ, ನಿನ್ನ ಪಾಪಗಳು ಪ್ರಬಲವೂ ಆಗಿರುವುದರಿಂದ ಶತ್ರುವಿನ ಗಾಯದಿಂದಲೂ, ಕ್ರೂರನ ಶಿಕ್ಷೆಯಿಂದಲೂ ನಾನು ನಿನ್ನನ್ನು ಗಾಯಪಡಿಸಿದ್ದೇನೆ;
Songa nañaliño azo o sakeza’oo, tsy ipaia’iareo; fa vinonotroboko hoe zinevo’ ty rafelahy, ami’ty fandafam-pampisoañe; ami’ty hajabajaba’ o hakeo’oo ami’ty fitoabora’ o tahi’oo.
15 ನಿನ್ನ ಗಾಯದ ನೋವಿನ ನಿಮಿತ್ತ ಏಕೆ ಕೂಗುತ್ತೀ? ನಿನ್ನ ದುಃಖವು ಗುಣವಾಗದಂಥಾದ್ದೇ. ನಿನ್ನ ಅಕ್ರಮ ಬಹಳವಾಗಿರುವುದರಿಂದಲೂ, ನಿನ್ನ ಪಾಪಗಳು ಪ್ರಬಲವಾಗಿರುವುದರಿಂದಲೂ ಇವುಗಳನ್ನು ನಿನಗೆ ಮಾಡಿದ್ದೇನೆ.
Ino ty ikoikoiha’o ty hasilofa’o, tsy mete mitotòtse o rare’oo, fa ty haloza’ o hakeo’oo, vaho ty hamaro’ o tahi’oo ty nanoako ama’o o raha rezao.
16 “‘ಆದರೂ ನಿನ್ನನ್ನು ನುಂಗಿಬಿಡುವವರನ್ನು ನುಂಗಿಬಿಡಲಾಗುವುದು. ನಿನ್ನ ವಿರೋಧಿಗಳಲ್ಲಿ ಪ್ರತಿಯೊಬ್ಬನೂ ಸೆರೆಹೋಗುವನು. ನಿನ್ನನ್ನು ಸೂರೆಮಾಡುವವರು ಸೂರೆಯಾಗುವರು. ನಿನಗೆ ಬಲೆ ಬೀಸುವವರೆಲ್ಲರನ್ನು ನಾನು ಬಲೆಗೆ ಒಪ್ಪಿಸುವೆನು.
F’ie songa habotseke o mampibotsek’ azoo, naho o rafelahi’o iabio, sindre hasese am-pandrohizañe añe; naho ho fikopahañe o mikopak’ azoo, vaho fonga hatoloko ho tsindroheñe ze mitsàtsa azo.
17 ಚೀಯೋನು ಬೇಡವಾದದ್ದು, ಅದನ್ನು ನೋಡಿಕೊಳ್ಳುವವರು ಯಾರೂ ಇಲ್ಲ, ಎಂದು ಅವರು ನಿನ್ನ ವಿಷಯ ಹೇಳುವುದನ್ನು ನಾನು ಸಹಿಸಲಾರದೆ, ನಿನಗೆ ಕ್ಷೇಮವನ್ನುಂಟು ಮಾಡಿ, ನಿನ್ನ ಗಾಯಗಳನ್ನು ಸ್ವಸ್ಥ ಮಾಡುವೆನು,’ ಎಂಬುದಾಗಿ ಯೆಹೋವ ದೇವರು ಹೇಳುತ್ತಾರೆ.
Hampijangañeko, vaho ho melañeko o fere’oo, hoe t’Iehovà; amy te natao’ iareo añombe-lahy mavo irehe ami’ty hoe: Ty Tsione, ie tsy paia’ondatio.
18 “ಯೆಹೋವ ದೇವರು ಮತ್ತೆ ಹೀಗೆ ಹೇಳಿದ್ದು, “‘ಇಗೋ, ನಾನು ಯಾಕೋಬನ ಗುಡಾರಗಳ ಸೆರೆಯನ್ನು ತಿರುಗಿ ತರುತ್ತೇನೆ. ಅವನ ನಿವಾಸಗಳನ್ನು ಕರುಣಿಸುತ್ತೇನೆ. ಪಟ್ಟಣವು ಅದರ ದಿನ್ನೆಯ ಮೇಲೆ ಕಟ್ಟಲಾಗುವುದು. ಅರಮನೆಯು ತಕ್ಕ ಸ್ಥಳದಲ್ಲಿ ನೆಲೆಯಾಗಿರುವುದು.
Aa hoe t’Iehovà: Inao! hafoteko ty fandrohizañe o kiboho’ Iakobeo, naho ho ferenaiñeko o kivoho’eo; naho hamboareñe ambone’ i tamboho’ey i rovay, vaho hajadoñe amy toe’ey eo i anjombay.
19 ಅವುಗಳೊಳಗಿಂದ ಕೃತಜ್ಞತಾಸ್ತುತಿಯೂ, ಹರ್ಷಧ್ವನಿಯೂ ಹೊರಡುವುದು. ಅವರನ್ನು ಹೆಚ್ಚು ಮಾಡುವೆನು. ಅವರು ಕೊಂಚವಾಗಿರರು, ಅವರನ್ನು ಘನಪಡಿಸುವೆನು. ಮತ್ತು ಅವರು ತಿರಸ್ಕಾರಕ್ಕೆ ಒಳಗಾಗುವುದಿಲ್ಲ.
Hiboak’am’iereo ty fañandriañañe, naho ty fiarañanaña’ o mifaleo; vaho hampitomboeko fa tsy haketrake, hampiraoraoeko iereo le tsy ho kede.
20 ಅವರ ಮಕ್ಕಳು ಸಹ ಪೂರ್ವಕಾಲದ ಹಾಗೆ ಇರುವರು. ಅವರ ಸಭೆಯು ನನ್ನ ಮುಂದೆ ಸ್ಥಾಪಿತವಾಗುವುದು. ಅವರನ್ನು ಬಾಧಿಸುವವರೆಲ್ಲರನ್ನು ಶಿಕ್ಷಿಸುವೆನು.
Hanahake te taolo o ana’eo, naho hioreñe aoloko eo ty valobohò’ iareo, vaho fonga ho liloveko ze mamorekeke iareo.
21 ಅವರ ಪ್ರಮುಖನು ಅವರೊಳಗೆ ಇರುವರು. ಅವರನ್ನು ಆಳುವವನು ಅವರ ಮಧ್ಯದಲ್ಲಿಂದ ಹೊರಡುವನು. ನಾನು ಅವನನ್ನು ಹತ್ತಿರ ಬರಮಾಡುವೆನು. ಅವನು ನನಗೆ ಸಮೀಪಿಸುವನು. ಆದರೆ ನನಗೆ ಸಮೀಪಿಸುವುದಕ್ಕೆ ತನ್ನ ಹೃದಯ ನಿಶ್ಚಯಮಾಡಿಕೊಂಡ ಇವನ್ಯಾರು,’ ಎಂದು ಯೆಹೋವ ದೇವರು ಹೇಳುತ್ತಾರೆ.
Ho raik’ am’iereo ty mpiaolo’ iareo, naho ho hirik’ am’iereo ao ty mpifehe’ iareo; naho hampañarineko amako re, toe ie ty hañarivo ahy; fa ia ty hahavany hitotok’ amako? hoe t’Iehovà.
22 ‘ನೀವು ನನಗೆ ಪ್ರಜೆಯಾಗಿರುವಿರಿ. ನಾನು ನಿಮಗೆ ದೇವರಾಗಿರುವೆನು.’”
Ho ondatiko nahareo, vaho ho Andrianañahare’ areo iraho.
23 ಇಗೋ, ಯೆಹೋವ ದೇವರ ಬಿರುಗಾಳಿ ರೌದ್ರವಾಗಿ ಹೊರಡುತ್ತದೆ. ಅದು ಬಡಿದುಕೊಂಡು ಹೋಗುವ ಬಿರುಗಾಳಿಯೇ. ಬಾಧೆಯು ದುಷ್ಟರ ತಲೆಯ ಮೇಲೆ ಬೀಳುವುದು.
Heheke ty talio-lahi’ Iehovà, fa mionjoñe mb’eo ty filoroloroa’e, tangololahy mikafoakafoake; miviombio ami’ty loha’ o lo-tserekeo.
24 ಯೆಹೋವ ದೇವರು ತಮ್ಮ ಹೃದಯಾಲೋಚನೆಯನ್ನು ನಡಿಸಿ, ನೆರವೇರಿಸುವ ತನಕ ಆತನ ರೋಷವು ಹಿಂದಿರುಗದು; ಕಟ್ಟಕಡೆಯ ದಿನಗಳಲ್ಲಿ ನೀವು ಇದನ್ನು ಗ್ರಹಿಸುವಿರಿ.
Tsy hibalike ty haviñerañe miforoforo’ Iehovà, ampara’ te nihenefe’e naho sikal’amy te fonitse i nisatrien’ arofo’ey; ho rendre’ areo izay amo andro honka’eo.